ಅಮೃತಧಾರೆಯಲ್ಲಿ ಕಣ್ಣೀರಧಾರೆ: ಮದುವೆ ನಿಲ್ಲಿಸಿಬಿಡು ಭಾವನತಮ್ಮ ಎಂದು ಬಿಕ್ಕಳಿಸಿದಳು ಅಪೇಕ್ಷಾ; ಕಠಿಣ ನಿರ್ಧಾರಕ್ಕೆ ಬಂದ ಪಾರ್ಥ
ಕನ್ನಡ ಸುದ್ದಿ  /  ಮನರಂಜನೆ  /  ಅಮೃತಧಾರೆಯಲ್ಲಿ ಕಣ್ಣೀರಧಾರೆ: ಮದುವೆ ನಿಲ್ಲಿಸಿಬಿಡು ಭಾವನತಮ್ಮ ಎಂದು ಬಿಕ್ಕಳಿಸಿದಳು ಅಪೇಕ್ಷಾ; ಕಠಿಣ ನಿರ್ಧಾರಕ್ಕೆ ಬಂದ ಪಾರ್ಥ

ಅಮೃತಧಾರೆಯಲ್ಲಿ ಕಣ್ಣೀರಧಾರೆ: ಮದುವೆ ನಿಲ್ಲಿಸಿಬಿಡು ಭಾವನತಮ್ಮ ಎಂದು ಬಿಕ್ಕಳಿಸಿದಳು ಅಪೇಕ್ಷಾ; ಕಠಿಣ ನಿರ್ಧಾರಕ್ಕೆ ಬಂದ ಪಾರ್ಥ

Amruthadhaare Serial Episode: ಇನ್ನೇನೂ ತಾಳಿ ಕಟ್ಟಲು ಕೆಲವು ಸಮಯವಿದೆ ಎಂದಾಗ ಅಪೇಕ್ಷಾ ಪಾರ್ಥನನ್ನು ಭೇಟಿಯಾಗುತ್ತಾಳೆ. ಈ ಮದುವೆ ನಿಲ್ಲಿಸಬಿಡು, ನನ್ನಿಂದ ಆಗುತ್ತಿಲ್ಲ ಎಂದು ಹೇಳುತ್ತಾಳೆ. ನೋವು ಮರೆಯಲು ಆಸ್ಟ್ರೇಲಿಯಾದಲ್ಲಿ ಸೆಟಲ್‌ ಆಗಲು ಪಾರ್ಥ ನಿರ್ಧರಿಸುತ್ತಾನೆ.

ಅಮೃತಧಾರೆಯಲ್ಲಿ ಕಣ್ಣೀರಧಾರೆ: ಮದುವೆ ನಿಲ್ಲಿಸಿಬಿಡು ಭಾವನತಮ್ಮ ಎಂದು ಬಿಕ್ಕಳಿಸಿದಳು ಅಪೇಕ್ಷಾ
ಅಮೃತಧಾರೆಯಲ್ಲಿ ಕಣ್ಣೀರಧಾರೆ: ಮದುವೆ ನಿಲ್ಲಿಸಿಬಿಡು ಭಾವನತಮ್ಮ ಎಂದು ಬಿಕ್ಕಳಿಸಿದಳು ಅಪೇಕ್ಷಾ

Amruthadhaare Kannada Serial: ಯಾರೋ ಒಬ್ಬ ಜೈದೇವ್‌ ಬಗ್ಗೆ ಮಾತನಾಡಿದ್ದಕ್ಕೆ ಗೌತಮ್‌ ಸಹಿಸಿಲ್ಲ. ನೀನು ಹೇಳಲು ಹೊರಟರೆ ನಿನ್ನ ಸಂಬಂಧಕ್ಕೆ ಕುತ್ತಾಗುತ್ತದೆ ಎಂದು ಶಕುಂತಲಾದೇವಿ ಭೂಮಿಕಾಳಿಗೆ ವಾರ್ನಿಂಗ್‌ ನೀಡುತ್ತಾಳೆ. "ಒಂದು ಕಡೆ ಮನೆಗೌರವ ಮತ್ತು ಇನ್ನೊಂದು ಕಡೆ ಅಪ್ಪಿ ಮಲ್ಲಿ ಜೀವನ" ಎಂಬ ಸಂದಿಗ್ಧತೆಯಲ್ಲಿ ಇರುತ್ತಾಳೆ. ಇನ್ನೊಂದೆಡೆ ಶಕುಂತಲಾದೇವಿ ತನ್ನ ಮಗನನ್ನು ವಿಚಾರಿಸುತ್ತಾಳೆ. ನೀನು ಮಲ್ಲಿ ಬಗ್ಗೆ ಹೇಳಿದ್ದನ್ನು ಭೂಮಿಕಾ ಕೇಳಿದ್ದಾಳೆ ಎಂದು ಹೇಳುತ್ತಾಳೆ. "ತಾಳಿ ಕಟ್ಟುವ ತನಕ ನೆಟ್ಟಗಿರು" ಎಂದು ಜೈದೇವ್‌ಗೆ ಎಚ್ಚರಿಕೆ ನೀಡುತ್ತಾಳೆ ತಾಯಿ ಶಕುಂತಲಾದೇವಿ. ಇದೇ ಸಮಯದಲ್ಲಿ ಶಕುಂತಲಾ ದೇವಿಯು ಮಲ್ಲಿಯನ್ನು ಕೂಡಿ ಹಾಕಿದವನಿಗೆ ಕಾಲ್‌ ಮಾಡಿ ಸೇಫ್‌ ಆಗಿ ಇರು ಎಂದು ಹೇಳುತ್ತಾಳೆ.

ಅಪೇಕ್ಷಾಳಿಗೆ ಅಲಂಕಾರ ಮಾಡುತ್ತಾ ಇರುತ್ತಾರೆ. ದುಬಾರಿ ಆಭರಣ, ಚಂದದ ಉಡುಗೆಯಲ್ಲಿ ಅಪೇಕ್ಷಾ ಮುದ್ದಾಗಿ ಕಾಣಿಸುತ್ತಾಳೆ. ಆದರೆ, ಪಾರ್ಥನ ನೆನಪಲ್ಲಿ ಬೇಸರದಲ್ಲಿ ಇರುತ್ತಾಳೆ. ಅವಳ ಸ್ನೇಹಿತರು ಮದುವೆ ವಿಚಾರದಲ್ಲಿ ಕಿಚಾಯಿಸುತ್ತ ಇರುತ್ತಾರೆ. ಅಪೇಕ್ಷಾಳ ಈ ಸ್ಥಿತಿಯನ್ನು ಮರೆಯಲ್ಲಿ ಭೂಮಿಕಾ ನೋಡುತ್ತಾಳೆ. ಅಪೇಕ್ಷಾಳ ಮದುವೆ ನಿಲ್ಲಿಸುವುದರಿಂದ ಆಗುವ ತೊಂದರೆಗಳ ಕುರಿತು ಕಳವಳ ಹೊಂದುತ್ತಾಳೆ. "ಅಂತು ಇಂತು ನಮ್ಮ ಹುಡುಗಿ ರೆಡಿಯಾದ್ಲು. ತಾಳಿ ಕಟ್ಟಿಸೋದೊಂದೇ ಬಾಕಿ" ಎಂದು ಅಪ್ಪಿ ಸ್ನೇಹಿತೆ ಹೇಳಿದಾಗ ಭೂಮಿಕಾಳಿಗೆ ಟೆನ್ಷನ್‌ ಆಗುತ್ತದೆ.

ಕಠಿಣ ನಿರ್ಧಾರ ತೆಗೆದುಕೊಂಡ ಪಾರ್ಥ

ಇನ್ನೊಂದೆಡೆ ಪಾರ್ಥ ಮತ್ತು ಗೌತಮ್‌ ಮಾತುಕತೆ ನಡೆಸುತ್ತ ಇರುತ್ತಾರೆ. ನೀವು ಇದನ್ನು ಹೇಗೆ ತೆಗೆದುಕೊಳ್ಳುತ್ತೀರೋ ಗೊತ್ತಿಲ್ಲ. ನನಗೆ ಇವತ್ತೇ ಆಸ್ಟ್ರೇಲಿಯಾಕ್ಕೆ ಹೋಗಬೇಕು ಎಂದು ಪಾರ್ಥ ಹೇಳುತ್ತಾನೆ. ಸ್ಟಾರ್ಟಪ್‌ ವಿಷಯಕ್ಕಾಗಿ ಅರ್ಜೆಂಟಾಗಿ ಹೋಗಬೇಕು ಎನ್ನುತ್ತಾನೆ. ಇದು ನನಗೆ ಒಳ್ಳೆಯ ಅವಕಾಶ, ಹೋಗಲೇಬೇಕು ಎಂದು ಹೇಳುತ್ತಾನೆ. ಮಿಡ್‌ನೈಟ್‌ ಫ್ಲೈಟ್‌ಗೆ ಹೋಗು ಎನ್ನುತ್ತಾನೆ ಗೌತಮ್‌.

ಇನ್ನೊಂದೆಡೆ ಭೂಮಿಕಾ ಮತ್ತು ಗೌತಮ್‌ ಭೇಟಿಯಾಗುತ್ತಾರೆ. ಗೌತಮ್‌ಗೆ ಭೂಮಿಕಾ ಚಿಂತೆಯಲ್ಲಿ ಇರುವುದು ಗೊತ್ತಾಗುತ್ತದೆ. ಏನು ಬೇಸರ ನನ್ನಲ್ಲಿ ಹೇಳಿ ಎನ್ನುತ್ತಾನೆ. ಆಗ್ಲೇ ನೀವು ಜೈದೇವ್‌ ಬಗ್ಗೆ ಯಾರೋ ಮಾತನಾಡಿದ್ರೆ ಅಷ್ಟು ಕೋಪ ಮಾಡಿಕೊಂಡ್ರು ಅಲ್ವ? ಎಲ್ಲಾದರೂ ನಾನೇ ಹಾಗೇ ಹೇಳಿದ್ರೆ ಅದನ್ನು ಜಡ್ಜ್‌ ಮಾಡ್ತಿರ? ಎಂದು ಭೂಮಿಕಾ ಕೇಳುತ್ತಾಳೆ. ಹೀಗೆ ಮಾತನಾಡುತ್ತ ಇರುವಾಗ ಸತ್ಯ ಸಂಗತಿಯನ್ನು ಗೌತಮ್‌ಗೆ ಹೇಳಲು ಭೂಮಿಕಾಳಿಗೆ ಸಾಧ್ಯವಾಗುವುದಿಲ್ಲ.

ಅಪೇಕ್ಷಾ ಮತ್ತು ಪಾರ್ಥ ಕಣ್ಣೀರಧಾರೆ

ಮದುವೆ ಉಡುಗೆಯಲ್ಲಿ ರೆಡಿಯಾಗಿದ್ದ ಅಪೇಕ್ಷಾಳಿಗೆ ಪಾರ್ಥ ಕಾಣುತ್ತಾನೆ. "ನನ್ನಿಂದ ಆಗ್ತಾ ಇಲ್ಲ ಭಾವನತಮ್ಮ. ನನ್ನಿಂದ ಸಾಧ್ಯವಾಗ್ತ ಇಲ್ಲ. ನಾನು ನಿನ್ನ ಜತೆ ಬದುಕಬೇಕು. ಈ ಮದುವೆ ನಿಲ್ಲಿಸಿಬಿಡು" ಎಂದು ವಿನಂತಿಸುತ್ತಾಳೆ. "ನಮ್ಮನ್ನು ಯಾರಾದರೂ ನೋಡುವ ಮೊದಲು ಇಲ್ಲಿಂದ ಹೋಗಿ" ಎಂದು ಪಾರ್ಥ ಹೇಳುತ್ತಾನೆ. "ನನಗೆ ನೀವು ಬೇಕು. ನಿಮ್ಮ ಜತೆ ಜೀವನ ಮಾಡಬೇಕು" ಎಂದು ಅಳುತ್ತಾಳೆ. "ನಮಗೆ ಏನೂ ಆಯ್ಕೆ ಇಲ್ಲ. ನಮ್ಮ ಜೀವನದಲ್ಲಿ ಮುಂದುವರೆಯಲೇಬೇಕು" ಎಂದು ಪಾರ್ಥ ಹೇಳುತ್ತಾನೆ. "ನಾನು ನಿಮ್ಮಿಂದ ದೂರ ಹೋಗಬೇಕು ಎಂದು ಡಿಸೈಡ್‌ ಮಾಡಿದ್ದೇನೆ. ನಾನು ಆಸ್ಟ್ರೇಲಿಯಾಕ್ಕೆ ವಾಪಸ್‌ ಹೋಗ್ತಿನಿ. ಅವಗಲಾದರೂ ನೀವು ನನ್ನ ಮರೆಯಬಹುದು" ಎಂದು ಪಾರ್ಥ ಹೇಳುತ್ತಾನೆ. "ನೀವು ಚೆನ್ನಾಗಿರಬೇಕು. ನಮ್ಮ ಅಣ್ಣ ಚೆನ್ನಾಗಿರಬೇಕು. ಊಟದ ಮಧ್ಯೆ ಸಿಕ್ಕಿದಂತೆ ನಾನು ಕಲ್ಲಾಗಲಾರೆ. ಹೋಗ್ತಾ ಹೋಗ್ತಾ ನೀವು ಎಲ್ಲವನ್ನೂ ಮರೆಯುವಿರಿ" ಎಂದು ಪಾರ್ಥ ಹೇಳುತ್ತಾನೆ. ಇದೇ ಸಮಯದಲ್ಲಿ ಅಲ್ಲಿಗೆ ಮಹಿಮಾ ಬರುತ್ತಾಳೆ. ಏನ್‌ ಮಾಡ್ತಾ ಇದ್ರಿ ಎಂದಾಗ "ಮದುಮಗಳು ಎಂದರೆ ಸೆಲೆಬ್ರಿಟಿ ಅಲ್ವ, ಫೋಟೋ ತೆಗೆದುಕೊಳ್ಳೋಕ್ಕೆ ಬಂದ್ವಿ" ಅನ್ನುತ್ತಾನೆ. ಅವಳ ನೆರವಿನಿಂದ ಒಂದು ಫೋಟೋ ತೆಗೆಯುತ್ತಾರೆ. ಈ ಮೂಲಕ ಮುಂದಿನ ದಿನಗಳಲ್ಲಿ ವಿರಹ ಕಾಡಿದಾಗ ನೋಡಲು ಒಂದು ಫೋಟೋ ಇರುತ್ತದೆ. "ಇವನು ಇದ್ದ ಕಡೆ ನಗು ಇರುತ್ತದೆ. ನಮ್ಮನ್ನೆಲ್ಲ ಬಿಟ್ಟು ಆಸ್ಟ್ರೇಲಿಯಾಕ್ಕೆ ಹೋಗುತ್ತಾನೆ" ಎನ್ನುತ್ತಾಳೆ. ಇನ್ನೇನೂ ಹೆಚ್ಚು ಮಾತನಾಡಬೇಕೆಂದು ಇದ್ದವರನ್ನು ಮಹಿಮಾ ಕರೆದುಕೊಂಡು ಹೋಗುತ್ತಾಳೆ. "ನೂರು ನೆನಪು ಒಂದೇ ಬಾರಿ... " ಹಾಡು ಹಿನ್ನಲೆಯಲ್ಲಿ ಬರುತ್ತದೆ.

ಅಂದುಕೊಂಡದ್ದು ಆಗಲೇಬೇಕು ಎಂದ ಭೂಮಿಕಾ

ಮದುಮಗ ಮಂಟಪಕ್ಕೆ ಬರುತ್ತಾನೆ. ಮಂಟಪದಲ್ಲಿ ಸಡಗರ ಕಾಣಿಸಿಕೊಳ್ಳುತ್ತದೆ. ತಾಳಿಕಟ್ಟುವ ಸಮಯ ಹತ್ತಿರದಲ್ಲಿದೆ. ಪೂಜೆ ನಡೆಯುತ್ತ ಇರುತ್ತದೆ. "ನನ್ನ ತಂಗಿ ಲೈಫ್‌ನ ಹಾಳು ಮಾಡುತ್ತ ಇದ್ದಾನೆ" ಎಂದು ಭೂಮಿಕಾ ಮನಸ್ಸಲ್ಲಿ ಅಂದುಕೊಳ್ಳುತ್ತಾಳೆ. ಈ ಸಮಯದಲ್ಲಿ ಭೂಮಿಕಾ ಫೋನ್‌ ಹಿಡಿದುಕೊಂಡು ಹೊರಕ್ಕೆ ಹೋಗುತ್ತಾಳೆ. ಯಾವ ಪ್ರಾಬ್ಲಂ ಆಗದೆ ಮದುವೆ ನಡೆದ್ರೆ ಸಾಕು ಎಂದು ಶಕುಂತಲಾದೇವಿ ಅಂದುಕೊಳ್ಳುತ್ತಾಳೆ. ಅಂದುಕೊಂಡದ್ದು ಆಗಲೇಬೇಕು ಎಂದುಕೊಳ್ಳುತ್ತಾಳೆ ಭೂಮಿಕಾ. ಇನ್ನೊಂದೆಡೆ ಅಪೇಕ್ಷಾ ದುಃಖದಲ್ಲಿ ಇರುತ್ತಾಳೆ. ಹಳೆಯ ಪ್ರೀತಿಯ ನೆನಪುಗಳು ಕಾಡುತ್ತವೆ. ಜೈದೇವ್‌ ತಾಳಿ ಕಟ್ಟುವಾಗ ಮಲ್ಲಿ ತಾತಾ ಕತ್ತಿ ಹಿಡಿಯುವ ದೃಶ್ಯದ ಪ್ರಮೋವನ್ನು ಝೀ ಕನ್ನಡ ಬಿಡುಗಡೆ ಮಾಡಿದೆ. ಆದರೆ, ಶುಕ್ರವಾರದ ಸಂಚಿಕೆಯಲ್ಲಿ ಈ ಸೀನ್‌ ಬಂದಿಲ್ಲ. ಸೋಮವಾರದ ಸಂಚಿಕೆಯಲ್ಲಿ ಮದುವೆ ನಿಲ್ಲಿಸುವ ದೃಶ್ಯವಿರುವ ಸಾಧ್ಯತೆಯಿದೆ.

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)
ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)
ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)
ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)
ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)
ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)
ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)
ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)
ರಣವ್‌: ಜೈದೇವ್‌
ಚಂದನ್‌: ಅಶ್ವಿನಿ
ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)
ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)

Whats_app_banner