ಅಮೃತಧಾರೆ ಧಾರಾವಾಹಿ: ಮನೆ ಕೆಲಸದವಳಿಗೆ ನಾನು ಬಡಿಸಬೇಕಂತೆ, ಶಕುಂತಲಾದೇವಿ ಧಗಧಗ; ಪಾರ್ಥನ ಕಾಡಿಸಿ ಖುಷಿ ಪಡುತ್ತಿದ್ದಾಳೆ ಅಪೇಕ್ಷಾ
ಕನ್ನಡ ಸುದ್ದಿ  /  ಮನರಂಜನೆ  /  ಅಮೃತಧಾರೆ ಧಾರಾವಾಹಿ: ಮನೆ ಕೆಲಸದವಳಿಗೆ ನಾನು ಬಡಿಸಬೇಕಂತೆ, ಶಕುಂತಲಾದೇವಿ ಧಗಧಗ; ಪಾರ್ಥನ ಕಾಡಿಸಿ ಖುಷಿ ಪಡುತ್ತಿದ್ದಾಳೆ ಅಪೇಕ್ಷಾ

ಅಮೃತಧಾರೆ ಧಾರಾವಾಹಿ: ಮನೆ ಕೆಲಸದವಳಿಗೆ ನಾನು ಬಡಿಸಬೇಕಂತೆ, ಶಕುಂತಲಾದೇವಿ ಧಗಧಗ; ಪಾರ್ಥನ ಕಾಡಿಸಿ ಖುಷಿ ಪಡುತ್ತಿದ್ದಾಳೆ ಅಪೇಕ್ಷಾ

Amruthadhaare Kannada Serial: ಪಾರ್ಥನ ಒತ್ತಾಯಕ್ಕೆ ಮಣಿದು ಮಲ್ಲಿಗೆ ಜೈದೇವ್‌ ಸಿಹಿ ತಿನ್ನಿಸುತ್ತಾನೆ. ನವ ವಧುವರರಿಗೆ ಭೂಮಿಕಾ ಗೌತಮ್‌ ಉಡುಗೊರೆ ನೀಡುತ್ತಾರೆ. ಪಾರ್ಥ ಅಪೇಕ್ಷಾಳ ಮನೆಗೆ ಹೋಗುತ್ತಾನೆ. ಪಾರ್ಥನಿಗೆ ಖಾರದ ಪುಡಿ ಹಾಕಿರುವ ಕಾಫಿ ಮಾಡಿ ಕೊಡ್ತಾಳೆ ಅಪೇಕ್ಷಾ.

ಅಮೃತಧಾರೆ ಧಾರಾವಾಹಿ: ಮನೆ ಕೆಲಸದವಳಿಗೆ ನಾನು ಬಡಿಸಬೇಕಂತೆ, ಶಕುಂತಲಾದೇವಿ ಧಗಧಗ
ಅಮೃತಧಾರೆ ಧಾರಾವಾಹಿ: ಮನೆ ಕೆಲಸದವಳಿಗೆ ನಾನು ಬಡಿಸಬೇಕಂತೆ, ಶಕುಂತಲಾದೇವಿ ಧಗಧಗ

Amruthadhaare Serial Yesterday Episode: ಮಲ್ಲಿಯನ್ನು ಮೊದಲ ರಾತ್ರಿಯಂದು ಭಯಪಡಿಸಿದ್ದ ಜೈದೇವ್‌ ಮರುದಿನ ಬ್ರೇಕ್‌ಫಾಸ್ಟ್‌ ಸಮಯದಲ್ಲಿ ಒಬ್ಬನೇ ಬರುತ್ತಾನೆ. ದುಃಖದಲ್ಲಿದ್ದ ಮಲ್ಲಿಯನ್ನು ಭೂಮಿಕಾ ಸಮಧಾನ ಪಡಿಸುತ್ತಾಳೆ. ನಾನು ಮದುವೆಯಾಗಿ ತಪ್ಪು ಮಾಡಿದೆ ಎಂದೆಲ್ಲ ಮಲ್ಲಿ ಅಳುತ್ತಾಳೆ. "ಸೊಸೆ ಅನ್ನುವ ಜವಾಬ್ದಾರಿಯನ್ನು ಬಿಟ್ಟುಬಿಡಬೇಡ. ಈಗ ನಿನ್ನ ಜೀವನ ನಿನ್ನ ಕೈಯಲ್ಲಿದೆ. ಅದು ಏನೇ ಆಗಿದ್ರೂ ಅದನ್ನೂ ನೀನೇ ಸರಿಪಡಿಸಿಕೊಳ್ಳಬೇಕು. ಅದನ್ನು ಬಿಟ್ಟು ನೀನು ಕೋಣೆ ಸೇರಿಕೊಳ್ಳಬೇಡ. ನಿನ್ನ ಬಗ್ಗೆ ತಾತಾ ಎಷ್ಟು ಕನಸು ಕಂಡಿದ್ದಾರೆ. ಜನರು ಸಾವಿರ ಮಾತುಗಳನ್ನು ಆಡುತ್ತಾರೆ. ಅದಕ್ಕೆಲ್ಲ ತಲೆಕೆಡಿಸಿಕೊಳ್ಳಬೇಡ" ಎಂದೆಲ್ಲ ಭೂಮಿಕಾ ಮಲ್ಲಿಗೆ ಸಾಕಷ್ಟು ಧೈರ್ಯ ತುಂಬುತ್ತಾಳೆ. ಇದಾದ ಬಳಿಕ ಇವರಿಬ್ಬರು ಜತೆಯಾಗಿ ತಿಂಡಿಗೆ ಹೋಗುತ್ತಾರೆ.

ನೆಲದ ಮೇಲೆ ಕುಳಿತ ಮಲ್ಲಿ

ಇನ್ನೊಂದೆಡೆ ಅತ್ತೆ ಶಕುಂತಲಾದೇವಿ ಎಲ್ಲರಿಗೂ ಬಡಿಸ್ತಾ ಇರ್ತಾರೆ. ಆ ಸಮಯದಲ್ಲಿ ಮಲ್ಲಿ ಮತ್ತು ಭೂಮಿಕಾ ಬಂದಾಗ ಶಕುಂತಲಾದೇವಿ, ಜೈದೇವ್‌, ಮನೆಹಾಳ ಮಾವನ ಮುಖ ಒಂದು ರೀತಿ ಆಗುತ್ತದೆ. ಪಾರ್ಥನ ಮುಖದಲ್ಲಿ ನಗು ಮೂಡುತ್ತದೆ. ಬಾ ಕೂತ್ಕೊ ಎಂದು ಭೂಮಿಕಾ ಹೇಳಿದಾಗ ಮಲ್ಲಿ ನೆಲದ ಮೇಲೆ ಕುಳಿತುಕೊಳ್ಳುತ್ತಾಳೆ. "ಅವಳ ಜಾಗವನ್ನು ಅವಳು ಕರೆಕ್ಟ್‌ ಆಗಿ ಸೆಲೆಕ್ಟ್‌ ಮಾಡಿಕೊಂಡಿದ್ದಾಳೆ" ಎಂದು ಮಾವ ಹೇಳುತ್ತಾರೆ. "ಯಾರು ಯಾರನ್ನ ಎಲ್ಲಿ ಇಡಬೇಕೋ ಅಲ್ಲಿಯೇ ಇಡಬೇಕು" ಎಂದು ಜೈದೇವ್‌ ಹೇಳುತ್ತಾನೆ. "ಮಲ್ಲಿ ನಿಂತ್ಕೊ, ಅಲ್ಲಿ ಯಾಕೆ ಕುಳಿತಿದ್ದಿ" ಎಂದು ಭೂಮಿಕಾ ಹೇಳುತ್ತಾಳೆ. "ನಿನ್ನ ಜಾಗ ಜೈದೇವ್‌ ಪಕ್ಕದಲ್ಲಿ" ಎಂದು ಹೇಳಿದ ಭೂಮಿಕಾ ಜೈದೇವ್‌ ಪಕ್ಕದಲ್ಲಿ ಮಲ್ಲಿಯನ್ನು ಕುಳಿತುಕೊಳ್ಳುವಂತೆ ಮಾಡುತ್ತಾಳೆ. "ಗುಂಡು ನೀನೇ ಏನೇ ಹೇಳು, ಹುಡುಗಿ ಮುದ್ದುಮುದ್ದಾಗಿ ಇದ್ದಾಳೆ. ನಮ್ಮ ಜೈದೇವ್‌ಗೆ ಸರಿಯಾದ ಜೋಡಿ" ಎಂದು ಅಜ್ಜಿ ಹೇಳುತ್ತಾರೆ.

ಮಲ್ಲಿಗೆ ಸಿಹಿ ತಿನಿಸಿದ ಜೈದೇವ್‌

ಆಗ ಪಾರ್ಥನಿಗೆ ಏನೋ ನೆನಪಾಗುತ್ತದೆ. ಅಪೇಕ್ಷಾಳನ್ನು ಅತ್ತಿಗೆ ಎಂದು ಕರೆಸಿದ ಸಂಗತಿ ನೆನಪಿಗೆ ಬರುತ್ತದೆ. ಇವರನ್ನು ಅತ್ತಿಗೆ ಕರೆಯಲು ನನಗೆ ಸಂಕೋಚ ಇಲ್ಲ. "ನೀವು ವಯಸ್ಸಲ್ಲಿ ಚಿಕ್ಕವರು, ಹೀಗಾಗಿ ನಾನು ನಿಮ್ಮನ್ನು ಚಿಕ್ಕ ಅತ್ತಿಗೆ ಎಂದು ಕರೆಯ್ಲ" ಎಂದು ಪಾರ್ಥ ಮಲ್ಲಿಯಲ್ಲಿ ಕೇಳುತ್ತಾನೆ. ಚಿಕ್ಕ ಅತ್ತಿಗೆ ಎಂದು ಪೂಸಿ ಹೊಡೆದು ಪಾರ್ಥ ಬೇಗ ರೆಡಿ ಮಾಡ್ತಾ ಇದ್ದಾನೆ ಎಂದು ಗೌತಮ್‌ ಹೇಳುತ್ತಾನೆ. "ಜೈ ಬ್ರೋ ಏನು ನೀವು, ಎದುರುಗಡೆ ಸ್ವೀಟ್ಸ್‌ ಇದೆ, ಚಿಕ್ಕ ಅತ್ತಿಗೆಗೆ ಸ್ವೀಟ್‌ ತಿನ್ನಿಸು. ನಾವು ಖುಷಿ ಪಡ್ತಿವಿ, ನಾನು ಒಂದು ಫೋಟೋ ತೆಗೆದುಕೊಳ್ಳುವೆ. ಸೂಪರ್‌ ಆಗಿರುತ್ತದೆ" ಎಂದು ಪಾರ್ಥ ಹೇಳಿದಾಗ ಜೈದೇವ್‌ ಮುಖ ಕೋಪದಿಂದ ಕೆಂಪಗಾಗುತ್ತದೆ. ಉಳಿದವರು ನಗುತ್ತಾರೆ. "ನೀನು ಪ್ರೀತಿಸಿ ಮದುವೆಯಾದದ್ದು ಅಲ್ವ, ಯಾಕೆ ಹೀಗೆ. ತಿನ್ನಿಸು" ಎಂದು ಅಜ್ಜಿಯೂ ಹೇಳುತ್ತಾರೆ.

ಎಲ್ಲರ ಒತ್ತಾಯಕ್ಕೆ ಮಣಿದು ಒಲ್ಲದ ಮನಸ್ಸಿನಿಂದ ಚಮಚದಲ್ಲಿ ಸ್ವೀಟ್‌ ತಿನ್ನಿಸಲು ಜೈದೇವ್‌ ಪ್ರಯತ್ನಿಸಿದಾಗ "ಹಾಗೆಲ್ಲ ಬ್ರೋ, ಹಿಂದಿನಿಂದ ಕೈ ಹಾಕಿ ತಿನ್ನಿಸು" ಎಂದೆಲ್ಲ ಪಾರ್ಥ ಕಾಡುತ್ತಾನೆ. ಕೊನೆಗೆ ಚಮಚದಲ್ಲಿ ಸ್ವೀಟ್‌ ನೀಡಿದ ಫೋಟೋವನ್ನು ಪಾರ್ಥ ಕ್ಲಿಕ್‌ ಮಾಡ್ತಾನೆ. ಮದುವೆಯಲ್ಲೂ ಇಂತಹ ಫೋಟೋ ಸಿಕ್ಕಿಲ್ಲ ಎಂದು ಪಾರ್ಥ ಹೇಳುತ್ತಾನೆ. ಜೈದೇವ್‌ ತಿನ್ನಿಸಿದ ಮೇಲೆ ನೀವೂ ತಿನ್ನಿಸಬೇಕಲ್ವ ಎಂದು ಪಾರ್ಥ ಹೇಳುತ್ತಾನೆ. ಇದಾದ ಬಳಿಕ ಮಲ್ಲಿ ತಿನ್ನಿಸುತ್ತಾಳೆ. ಪಾರ್ಥ ಫೋಟೋ ತೆಗೆಯುತ್ತಾನೆ. ಜೈದೇವ್‌ಗೆ ಏನೂ ಮಾಡಲು ಸಾಧ್ಯವಾಗುವುದಿಲ್ಲ.

ಇದೇ ಸಂದರ್ಭದಲ್ಲಿ "ಮಾಮ್‌ ಕೈ ರುಚಿ ಸೂಪರ್‌ ಆಗಿದೆ" ಎಂದು ಪಾರ್ಥ ಹೇಳುತ್ತಾನೆ. ಗೌತಮ್‌ ಕೂಡ ಸೂಪರ್‌ ಅನ್ನುತ್ತಾನೆ. ಮತ್ತೆ ಇದನ್ನು ಎಕ್ಸ್‌ಪೀರಿಯನ್ಸ್‌ ಆಗಬೇಕಾದರೆ ಮತ್ತೊಂದು ಮದುವೆಯಾಗಬೇಕು ಎಂದು ಪಾರ್ಥ ಹೇಳುತ್ತಾನೆ. "ಇಂಡೈರೆಕ್ಟ್‌ ಆಗಿ ನನಗೆ ಮದುವೆ ಮಾಡಿಸಿ ಅನ್ತಾನೆ" ಎಂದು ಎಲ್ಲರೂ ಕಿಚಾಯಿಸ್ತಾರೆ. ಜೈದೇವ್‌ ಮತ್ತು ಶಕುಂತಲಾದೇವಿ ಕೋಪದಿಂದ ಒಬ್ಬರ ಮುಖ ಒಬ್ಬರು ನೋಡುತ್ತಾರೆ.

ಶಕುಂತಲಾದೇವಿ ರೋಷ

ಶಕುಂತಲಾದೇವಿ ಕೂಪದಿಂದ ಹೊರಕ್ಕೆ ಬರುತ್ತಾರೆ. ಮಗಳು ಸಮಧಾನ ಪಡಿಸಲು ಬರುತ್ತಾರೆ. "ಆ ಕೆಲಸದವಳು ನಮ್ಮ ಮನೆಯ ಸೊಸೆಯಂತೆ. ಅವಳಿಗೆ ನಾನು ಅಡುಗೆ ಮಾಡಿ ಬಡಿಸಬೇಕಂತೆ. ಆ ಕೆಲಸದವಳ ಮೇಲೆ ಭೂಮಿಕಾ ಅಷ್ಟೊಂದು ಕೇರ್‌ ತೆಗೆದುಕೊಳ್ಳುತ್ತಾ ಇದ್ದಾಳೆ" ಎಂದೆಲ್ಲ ಬಯ್ಯುತ್ತಾಳೆ. ಆಗ ಜೈದೇವ್‌ ಬರುತ್ತಾನೆ, ಕೋಪದಿಂದ ಜೈದೇವ್‌ಗೆ ಶಕುಂತಲಾದೇವಿ ಹೊಡೆಯುತ್ತಾಳೆ. "ನಿನಗೆ ಮನೆಯ ಕೆಲಸದವಳೇ ಬೇಕಿತ್ತ?" ಎಂದು ಬಯ್ಯುತ್ತಾಳೆ. ಹೇಗೆ ಇದ್ವಿ ನಾವು, ಯಾವ ಸ್ಥಿತಿಗೆ ತಂದಿದ್ಯ? ಹೆಣ್ಮಕ್ಕಳ ಜತೆ ಹೇಗೆ ನಡೆದುಕೊಳ್ಳಬೇಕೆಂದು ಗೊತ್ತಿಲ್ವ? ಎಂದೆಲ್ಲ ಗದರಿಸುತ್ತಾಳೆ. ಹೇಗಾದರೂ ಮಾಡಿ ಅವಳು ಈ ಮನೆಯಿಂದ ತೊಲಗಿದರೆ ಸಾಕು ಎಂದು ಸೂಚನೆ ನೀಡುತ್ತಾಳೆ ಶಕುಂತಲಾದೇವಿ. "ನನ್ನ ನೆಮ್ಮದಿ ಹಾಳು ಮಾಡಿದ್ದಾಳೆ. ಅವಳನ್ನು ಸುಮ್ಮನೆ ಬಿಡುವುದಿಲ್ಲ" ಎಂದು ಶಪಥ ಹಾಕುತ್ತಾನೆ ಜೈದೇವ್‌.

ಇನ್ನೊಂದೆಡೆ ಗೌತಮ್‌ ಎಲ್ಲರನ್ನೂ ಕರೆಯುತ್ತಾನೆ. ಹೊಸ ಜೋಡಿಗೆ ಏನಾದರೂ ಗಿಫ್ಟ್‌ ಕೊಡಬೇಕೆಂದು ನಿರ್ಧರಿಸಿದೆವು ಎನ್ನುತ್ತಾನೆ. "ಮದುವೆ ಹೇಗೋ ನಡೆಯಿತು. ಸಂಸಾರ ನೆಟ್ಟಗೆ ಮಾಡು" ಎಂದು ಅಜ್ಜಿ ಹೇಳುತ್ತಾಳೆ. ಇದೇ ಸಂದರ್ಭದಲ್ಲಿ ಗೌತಮ್‌ ಮತ್ತು ಭೂಮಿಕಾ ಇಬ್ಬರಿಗೂ ಗಿಫ್ಟ್‌ ನೀಡುತ್ತಾರೆ. ಇದೇ ಸಂದರ್ಭದಲ್ಲಿ ಪಾರ್ಥ ಕೂಡ ಅವರಿಬ್ಬರಿಗೂ ಗಿಫ್ಟ್‌ ನೀಡುತ್ತಾನೆ.

ಅಪೇಕ್ಷಾ ಮನೆಯಲ್ಲಿ ಪಾರ್ಥ

ಅದಾದ ಬಳಿಕ ಫಾರ್ಥ ಅಪೇಕ್ಷಾಳ ಮನೆಗೆ ಹೋಗುತ್ತಾನೆ. "ಅಪ್ಪಿ ಪಾರ್ಥ ಬಂದಿದ್ದಾರೆ. ಚೂರು ಕಾಪಿ ಮಾಡಿಕೊಡು" ಎಂದು ಅಮ್ಮ ಹೇಳುತ್ತಾಳೆ. ಖುಷಿಯಿಂದ ಓಡಿಬಂದ ಅಪೇಕ್ಷಾ ನೋಡುತ್ತಾಳೆ. ಪಾರ್ಥನನ್ನು ಸುಮ್ಮನೆ ಕೋಪದಿಂದ ನೋಡುತ್ತಾಳೆ. ಆಸ್ಟ್ರೇಲಿಯಾಕ್ಕೆ ಹೋಗಿಲ್ವ ಎಂದು ಕೇಳುತ್ತಾಳೆ. ಮದುವೆಯಲ್ಲಿ ಆ ತರಹ ಎಲ್ಲಾ ಆಯ್ತಲ್ವ, ನಿಮಗೆ ಸಮಧಾನ ಹೇಳೋಣ ಅಂತ ಬಂದೆ ಎಂದು ಪಾರ್ಥ ಹೇಳುತ್ತಾನೆ. "ನಮ್ಮ ಕಥೆ ಬಿಡಿ, ನಮ್ಮ ಅಪ್ಪಿ ತುಂಬಾ ಫೀಲ್‌ ಮಾಡಿಕೊಂಡಿದ್ದಾಳೆ" ಎಂದು ಅಮ್ಮ ಹೇಳುತ್ತಾರೆ. "ಅವಳು ಹೆಣ್ಣು ಹುಡುಗಿ ಅಲ್ವ, ಸ್ವಲ್ಪ ಜಾಸ್ತಿನೇ ಫೀಲ್‌ ಆಗಿರ್ತಾಳೆ" ಎಂದು ಪಾರ್ಥ ಹೇಳುತ್ತಾನೆ. ಇದೇ ಸಮಯದಲ್ಲಿ ಪಾರ್ಥನ ಟೀಗೆ ಖಾರ ಹಾಕಿರ್ತಾಳೆ. ಆ ಕಾಫಿ ಕುಡಿದ ಪಾರ್ಥನ ಸ್ಥಿತಿ ನೋಡಿ ಅಪೇಕ್ಷಾ ಖುಷಿ ಪಡುತ್ತಾಳೆ.

ಇನ್ನೊಂದೆಡೆ ಅಜ್ಜಿ ಕುಟುಂಬಕ್ಕೆ ಸಲಹೆ ನೀಡ್ತಾ ಇರುತ್ತಾಳೆ. ಸಂಸಾರ ಎಂದರೆ ಎರಡು ಜೋಡಿ ಚಕ್ರದಲ್ಲಿ ನಡೆಯಬೇಕು. ಒಂದು ಚಕ್ರ ಮುರಿದು ಬಿದ್ದರೂ ಸಂಸಾರ ಹಾಳಾಗುತ್ತದೆ. ಇವಳು ನಿನ್ನನ್ನು ನಂಬಿ ಬಂದಿದ್ದಾಳೆ. ಅವಳ ಕೈ ಬಿಡಬೇಡ. ಯಾವುದೇ ಒಳ್ಳೆಯ ಸಂಬಂಧವನ್ನು ಹುಡುಕಿದರೂ ದೊರಕುವುದಿಲ್ಲ. ಇಬ್ರೂ ಒಬ್ರಿಗೊಬ್ರು ಹೊಂದಿಕೊಂಡು ಹೋಗಿ ಎಂದು ಅಜ್ಜಿ ಹೇಳುತ್ತಾಳೆ. "ನನ್ನ ಮತ್ತು ಭೂಮಿಕಾಳನ್ನು ತೆಗೆದುಕೊಳ್ಳಿ. ನಮ್ಮ ಜೀವನ ಹೇಗಿದೆ ನೋಡಿ" ಎಂದು ಗೌತಮ್‌ ಹೇಳುತ್ತಾನೆ. "ನಾವಿಬ್ಬರು ಇಬ್ಬರನ್ನೂ ಗೌರವಿಸಿಕೊಂಡು ಹೊಂದಿಸಿಕೊಂಡು ಹೋಗುತ್ತೇವೆ" ಎಂದು ಗೌತಮ್‌ ಹೇಳುತ್ತಾನೆ. ಹೀಗೆಲ್ಲ ಗೌತಮ್‌ ಹೇಳಿದಾಗ ಭೂಮಿಕಾ ಖುಷಿ ಪಡುತ್ತಾಳೆ. "ನಿಮ್ಮ ಜೀವನ ಖುಷಿಯಾಗಿರುತ್ತದೆ, ಚೆನ್ನಾಗಿರುತ್ತದೆ" ಎಂದು ಗೌತಮ್‌ ಹೇಳುತ್ತಾನೆ. "ಕೋಪ ಬೇಸರ ಮರೆತು ಮಲ್ಲಿ ಜತೆ ಚೆನ್ನಾಗಿರು" ಎಂದು ಭೂಮಿಕಾಳು ಹೇಳುತ್ತಾಳೆ. ದೂರದಲ್ಲಿ ನಿಂತು ಶಕುಂತಲಾದೇವಿ "ನನ್ನ ಮಗನ ಜೀವನ ಹಾಳು ಮಾಡಿ ಈಗ ಉಪದೇಶ ಮಾಡ್ತಿಯ. ಸಮಯ ನೋಡಿ ಸರಿಯಾಗಿ ಪಾಠ ಕಲಿಸ್ತಿನಿ" ಎಂದು ಶಕುಂತಲಾದೇವಿಯ ಸ್ವಗತದೊಂದಿಗೆ ಸೀರಿಯಲ್‌ ಮುಂದುವರೆಯುತ್ತದೆ.

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)
ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)
ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)
ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)
ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)
ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)
ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)
ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)
ರಣವ್‌: ಜೈದೇವ್‌
ಚಂದನ್‌: ಅಶ್ವಿನಿ
ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)
ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)

Whats_app_banner