ಕನ್ನಡ ಸುದ್ದಿ  /  Entertainment  /  Televison News Amruthadhaare Serial Episode 206 Goutham Anand Frindship Jaidev Malli Relationship Pcp

Amruthadhaare: ಮಲ್ಲಿ ಮುಂದೆ ಜೈದೇವ್‌ ಪೌರುಷ, ಭೂಮಿಕಾ ಹಾಕ್ತಾರ ಅಂಕುಶ? ಗೌತಮ್‌ಗೆ ಫ್ಯಾಮಿಲಿ ಪ್ಲಾನಿಂಗ್‌ ಟಿಪ್ಸ್‌ ನೀಡಿದ ಆನಂದ್‌

Amrithadhare Serial yesterday Episode: ಅಮೃತಧಾರೆ ಧಾರಾವಾಹಿಯಲ್ಲಿ ಪಾರ್ಥನ ಮೇಲೆ ಅಪೇಕ್ಷಾಳ ಕೋಪ ಮುಂದುವರೆಯುತ್ತದೆ. ಇನ್ನೊಂದೆಡೆ ಮಲ್ಲಿ ಮೇಲೆ ಜೈದೇವ್‌ ದೌರ್ಜನ್ಯ ಮಿತಿ ಮೀರುತ್ತಿದೆ. ಇದೇ ಸಮಯದಲ್ಲಿ ಗೌತಮ್‌ಗೆ ಆನಂದ್‌ ಫ್ಯಾಮಿಲಿ ಪ್ಲಾನಿಂಗ್‌ ಟಿಪ್ಸ್‌ ನೀಡುತ್ತಾನೆ.

Amruthadhaare: ಮಲ್ಲಿ ಮುಂದೆ ಜೈದೇವ್‌ ಪೌರುಷ, ಭೂಮಿಕಾ ಹಾಕ್ತಾರ ಅಂಕುಶ?
Amruthadhaare: ಮಲ್ಲಿ ಮುಂದೆ ಜೈದೇವ್‌ ಪೌರುಷ, ಭೂಮಿಕಾ ಹಾಕ್ತಾರ ಅಂಕುಶ?

Amrithadhare Serial: ಗೌತಮ್‌ ಕಂಪ್ಯೂಟರ್‌ನಲ್ಲಿ ಬಿಝಿಯಾಗಿದ್ದಾನೆ. ಆ ಸಮಯದಲ್ಲಿ ಗೆಳೆಯ ಆನಂದ್‌ ಬರುತ್ತಾನೆ. ನಾನು ಅಪ್‌ಸೆಟ್‌ ಆಗಿದ್ದೇನೆ ಎನ್ನುತ್ತಾನೆ. ನಿನ್ನೆ ಮೊನ್ನೆ ಹುಟ್ಟಿದವರಿಗೆಲ್ಲ ಮಗುವಾಗಿದೆ. ಪ್ಲಾನಿಂಗ್‌ ಮಾಡಬೇಕು, ಫ್ಯಾಮಿಲಿ ಪ್ಲಾನಿಂಗ್‌ ಮಾಡಬೇಕು ಎಂದೆಲ್ಲ ಆನಂದ್‌ ಹೇಳಿದಾಗ ಅಲ್ಲಿಗೆ ಭೂಮಿಕಾ ಆಗಮಿಸುತ್ತಾಳೆ. ಆನಂದ್‌ ಏನು ಮಾತನಾಡಿದ್ರೂ ಕರೆಕ್ಟ್‌ ಆಗಿ ಮಾತನಾಡ್ತಾರೆ ಎಂದು ವಿಷಯ ಗೊತ್ತಿಲ್ಲದೆ ಭೂಮಿಕಾ ಹೇಳುತ್ತಾಳೆ.

ಇನ್ನೊಂದೆಡೆ ಖಾರಾದ ಕಾಫಿ ಕುಡಿದು ಪಾರ್ಥ ಕೆಮ್ಮುತ್ತಾನೆ. ಇದೇ ಸಮಯದಲ್ಲಿ ಅತ್ತೆ ಮಗಳ ನೋವಿನ ಕುರಿತು ಮಾತನಾಡುತ್ತಾಳೆ. "ನಿಮ್ಮ ನೋವು ನೋಡಿದ್ರೆ ಅಪೇಕ್ಷಾಳಿಗೆ ಬೇಗ ಒಂದು ಮದುವೆ ಮಾಡಿಬಿಡ್ತಿರಾ" ಎನ್ನುತ್ತಾನೆ. "ನಿಮಗೆ ಒಳ್ಳೆಯ ಹುಡುಗ ಗೊತ್ತಿದ್ದರೆ ಹೇಳಿ" ಎಂದು ಅಪೇಕ್ಷಾ ತಿಳಿಸುತ್ತಾಳೆ. "ಸ್ವಲ್ಪ ತಣ್ಣೀರು ಕೊಡಿ" ಎನ್ನುತ್ತಾನೆ. "ನಿಮಗೆ ತಣ್ಣೀರು ಅಲ್ಲ ಬಿಸಿ ನೀರು ಕೊಡುತ್ತೇನೆ" ಎನ್ನುತ್ತಾಳೆ. ಬಿಸಿ ನೀರು ಕೊಟ್ಟಾಗ ಕೈಯಿಂದ ಚೆಲ್ಲುತ್ತಾಳೆ. ಇವನ ಕೈ ಸುಡುತ್ತದೆ. ಪಾರ್ಥನ ಮೇಲಿನ ಸೇಡು ತುಸು ಅತಿಯಾದಂತೆ ಕಾಣಿಸುತ್ತದೆ. ತಾಯಿ ಅಲ್ಲಿಂದ ಹೋದ ಬಳಿಕ ಅಪೇಕ್ಷಾ ಮತ್ತು ಪಾರ್ಥ ಮಾತನಾಡುತ್ತಾರೆ. "ಅತ್ತಿಗೆ ತಂಗಿ ನಿಮಗೆ ಕೋಪ ಇತ್ತು ಅಂತ ಗೊತ್ತಿತ್ತು. ಆದರೆ ಈ ರೀತಿ ಅಂತ ಗೊತ್ತಿರಲಿಲ್ಲ" ಎಂದು ಹೇಳುತ್ತಾನೆ. "ನಾನು ನಿಮ್ಮ ಅತ್ತಿಗೆ ಅಲ್ವ" ಎಂದು ಅಪೇಕ್ಷಾ ಹೇಳುತ್ತಾಳೆ. ಹೀಗೆ ಒಂದಿಷ್ಟು ಮಾತುಕತೆ ನಡೆಯುತ್ತದೆ. "ನಾನು ನಿಮ್ಮನ್ನು ಕ್ಷಮಿಸೋದಿಲ್ಲ ಕ್ಷಮಿಸೋಲ್ಲ ಕ್ಷಮಿಸೋಲ್ಲ" ಎಂದು ಹೇಳುತ್ತಾಳೆ. ಪಾರ್ಥ ಹೋದ ಬಳಿಕ ಪ್ರೀತಿಯಿಂದ ನೋಡುತ್ತಾಳೆ.

ಮಲ್ಲಿಯ ಅಜ್ಜ ಮನೆಗೆ ಬರುವುದೋ ಬೇಡವೋ ಎಂದು ನೋಡುತ್ತ ಹೊರಗೆ ಇರುತ್ತಾರೆ. ಮೇಲಿನಿಂದ ಭೂಮಿಕಾ ನೋಡುತ್ತಾ ಇರುತ್ತಾಳೆ. ಮೊಮ್ಮಗಳನ್ನು ನೆನಪಿಸಿಕೊಂಡು ಅಜ್ಜ ಅಳುತ್ತಾರೆ. ತಾತಾ ಮಲ್ಲಿಯನ್ನು ನೋಡಲು ಬಂದಿದ್ದಾರೆ ಅನಿಸುತ್ತದೆ. ನಾನು ಮಲ್ಲಿಯನ್ನು ತಾತನ ಬಳಿಗೆ ಕಳುಹಿಸಬೇಕು ಅಂದುಕೊಳ್ಳುತ್ತಾಳೆ ಭೂಮಿಕಾ. "ತಾತನಿಗೆ ಊಟ ಕೊಟ್ಟು ಬಾ" ಎಂದು ಹೇಳುತ್ತಾಳೆ. "ಪ್ರತಿ ಹೆಜ್ಜೆಗೂ ನೆನಪಾಗ್ತಾರೆ. ನಾನು ಇಲ್ಲಿದ್ದರೂ ತಾತಾ ನೆನಪಾಗ್ತರೆ" ಎಂದು ಹೇಳುತ್ತಾಳೆ ಮಲ್ಲಿ. ಊಟ ಕೊಡುವ ನೆಪದಲ್ಲಿ ತಾತನ ಜತೆ ಮಾತನಾಡಿ ಬಾ ಎಂದು ಭೂಮಿಕಾ ಮಲ್ಲಿಯನ್ನು ತಾತನ ಬಳಿಗೆ ಕಳುಹಿಸುತ್ತಾಳೆ. ಅಳುತ್ತ ಇರುವ ತಾತನ ಬಳಿಗೆ ಹೋಗುತ್ತಾಳೆ. ಅಜ್ಜ ಮತ್ತು ಮೊಮ್ಮಗಳ ಪ್ರೀತಿಯ ಮಾತು ನಡೆಯುತ್ತದೆ. ತಾತಾನಿಗೆ ತಾನೇ ಕೈತುತ್ತು ತಿನ್ನಿಸುತ್ತಾಳೆ. "ನಾನು ಆ ಮನೆಯಲ್ಲಿ ಮಹಾರಾಣಿಯಂತೆ ಇದ್ದೇನೆ. ಅತ್ತೆನೂ ಚೆನ್ನಾಗಿ ನೋಡಿಕೊಳ್ಳುತ್ತಾರೆ. ದೊಡ್ಡಮನೆ ಸಿಗೋಕ್ಕೆ ನಾನು ಪುಣ್ಯ ಮಾಡಿದ್ದೆ" ಎಂದು ಮಲ್ಲಿ ಹೇಳಿದಾಗ ತಾತಾ ಖುಷಿಪಡುತ್ತಾನೆ.

ಮತ್ತೊಂದೆಡೆ ಕಾರಿನಲ್ಲಿ ಗೌತಮ್‌ ಮತ್ತು ಆನಂದ್‌ ಪ್ರಯಾಣಿಸುತ್ತ ಇರುತ್ತಾರೆ. ಫೋನ್‌ ಚಾರ್ಜಿಂಗ್‌ ವಿಷಯ ಮಾತನಾಡುತ್ತಾರೆ. ಮೊಬೈಲ್‌ ಚಾರ್ಜ್‌ ಇಲ್ಲ ಎಂದು ಗೌತಮ್‌ ಫೋನ್‌ ತೆಗೆದುಕೊಳ್ಳುತ್ತಾನೆ. ಅತ್ತಿಗೆ ಮೇಲೆ ಲವ್‌ ಜಾಸ್ತಿ ಆಗಿದೆ ಅಲ್ವ? ಎಂದು ಆನಂದ್‌ ಕೇಳುತ್ತಾನೆ. ಭೂಮಿಕಾಳಿಗೆ ಮುತ್ತು ನೀಡಿದ ಫೋಟೋ ನೋಡಬಾರದು ಎಂದು ಫೋನ್‌ ಎಳೆದುಕೊಳ್ಳುತ್ತಾನೆ. ಈ ಸಮಯದಲ್ಲಿ ಆನಂದ್‌ "ಓ ನಲ್ಲ ನೀನಲ್ಲ ಕರಿಮಣಿ ಮಾಲೀಕ ನೀನಲ್ಲ" "ಕರಿಮಣಿ ಮಾಲೀಕ ನೀ ನಲ್ಲ" ಎಂದೆಲ್ಲ ಹಾಡುತ್ತಾನೆ. ಗೌತಮ್‌ ನಗುತ್ತಾನೆ.

ಮಲ್ಲಿ ಮುಂದೆ ಜೈದೇವ್‌ ಪೌರುಷ

ಜೈದೇವ್‌ ಕೋಪದಿಂದ ಕುಳಿತುಕೊಂಡಿರುತ್ತಾನೆ. ಅಲ್ಲಿಗೆ ಮಲ್ಲಿ ಬರುತ್ತಾಳೆ. "ಏನೇ ಬೇಜಾನ್‌ ಖುಷಿಯಲ್ಲಿ ಇರೋ ಆಗಿದ್ಯ. ಯಾರೋ ಕನಸಲ್ಲಿ ಕಾಣದ ಜೀವನ ರಿಯಲ್‌ ಲೈಫ್‌ನಲ್ಲಿ ಸಿಕ್ಕಿದ್ದೆ ಅಲ್ವ? ನನ್ನನ್ನು ಉರಿಸಬೇಕು ಎಂದು ಇಷ್ಟು ಖುಷಿಯಾಗಿದ್ಯಲ್ವ?" ಎಂದು ಜೈದೇವ್‌ ಕೇಳುತ್ತಾನೆ. "ನಿಮ್ಮ ಮುಂದೆ ಅಪ್ಪಿ ತಪ್ಪಿ ಖುಷಿಯಾಗಿರೋಲ್ಲ" ಎಂದು ಮಲ್ಲಿ ಹೇಳುತ್ತಾಳೆ. ಮನೆಯವರ ಭಾಷಣ ಕೇಳಿ ನಿನ್ನನ್ನು ಚೆನ್ನಾಗಿ ನೋಡಿಕೊಳ್ತಿನಿ ಎಂದು ಕನಸಲ್ಲೂ ಅಂದ್ಕೊಬೇಡ ಎಂದು ಜೈದೇವ್‌ ಹೇಳುತ್ತಾನೆ. "ಎಲ್ಲರೂ ಬಲವಂತದಿಂದ ನಿನ್ನ ಕುತ್ತಿಗೆಗೆ ತಾಳಿ ಕಟ್ಟಿಸಿರ್ಬೋದು. ಆದರೆ ಸಂಸಾರ ಯಾರೂ ಮಾಡಿಸಲು ಆಗದು. ನಮ್ಮಿಬ್ಬರ ನಡುವೆ ಏನಿಲ್ಲ. ನಾವಿಬ್ಬರು ಒಂದಾಗೋ ಚಾನ್ಸೆ ಇಲ್ಲ" ಎಂದು ಜೈದೇವ್‌ ಹೇಳುತ್ತಾನೆ. "ಇವತ್ತಿನಿಂದ ರೆಡಿಯಾಗು, ದಿನದ ಇಪತ್ನಾಲ್ಕು ಗಂಟೆ ನಿಂಗೆ ಟಾರ್ಚರ್‌ ಕೊಡೋದೆ ನಿಮ್ಮ ಕೆಲಸ" ಎಂದು ಜೈದೇವ್‌ ಹೇಳುತ್ತಾನೆ. "ನೀವು ಯಾಕೆ ಹೀಗೆ ಮಾತನಾಡ್ತಿರಿ. ನಿಮ್ಮ ಒಳ್ಳೆಯತನಕ್ಕೆ ನಾನು ನಿಮ್ಮನ್ನು ಪ್ರೀತಿಸಿದ್ದು" ಎಂದು ಮಲ್ಲಿ ಹೇಳುತ್ತಾಳೆ. "ನನಗೆ ಬುದ್ದಿವಾದ ಹೇಳ್ತಿಯ" ಎಂದು ಜೈದೇವ್‌ ಕೇಳುತ್ತಾನೆ. "ಎಲ್ಲರೂ ಹೇಳಿದ್ದಾಂಗೆ ಒಟ್ಟಿಗೆ ಬದುಕಬಹುದಲ್ವ" ಎಂದು ಮಲ್ಲಿ ಹೇಳಿದಾಗ ಜೈದೇವ್‌ ಮಲ್ಲಿಯ ಕೆನ್ನೆಗೆ ಹೊಡೆಯುತ್ತಾನೆ. "ಹೇಗೆ ಮರೆಯಲು ಆಗುತ್ತೆ? ನನ್ನ ನೋವನ್ನು ಮರೆಯಲು ಆಗುತ್ತ?" ಎಂದೆಲ್ಲ ಜೈದೇವ್‌ ಹೇಳುತ್ತಾನೆ. "ಇಷ್ಟು ದಿನ ನಾನು ಒಳ್ಳೆಯವನು ಎಂಬ ಮುಖ ಮಾತ್ರ ನೋಡಿದ್ಯ. ನನ್ನ ಕೋಪ ಹೇಗಿದೆ ಎಂದು ಇವತ್ತಿನಿಂದ ತೋರಿಸ್ತಿನಿ. ನರಕ ನೋಡಲು ರೆಡಿಯಾಗು" ಎಂದು ಜೈದೇವ್‌ ಹೇಳುತ್ತಾನೆ.

ಮಲ್ಲಿ ಅಳುತ್ತ ಇರುತ್ತಾಳೆ. ಆಗ ಅಲ್ಲಿಗೆ ಭೂಮಿಕಾ ಬರುತ್ತಾಳೆ. ಯಾಕೆ ಅಳ್ತಾ ಇದ್ದೀಯಾ? ಎಂದು ಕೇಳುತ್ತಾಳೆ. "ಇದೇನು ಕೆನ್ನೆ ಮೇಲೆ ಮಾರ್ಕ್‌. ಜೈದೇವ್‌ ಕೆನ್ನೆ ಮೇಲೆ ಹೊಡೆದ್ರ?" ಎಂದು ಕೇಳುತ್ತಾಳೆ. ಸೀರಿಯಲ್‌ ಮುಂದಿನ ಸಂಚಿಕೆಗೆ ಮುಂದುವರೆಯುತ್ತದೆ.

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)
ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)
ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)
ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)
ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)
ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)
ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)
ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)
ರಣವ್‌: ಜೈದೇವ್‌
ಚಂದನ್‌: ಅಶ್ವಿನಿ
ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)
ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)

IPL_Entry_Point