ಅಮೃತಧಾರೆ: ಬೇಸಿಗೆ ಬಿಸಿಗೆ ಐಸ್‌ಕ್ರಿಂ ಜತೆಗೆ ಅಪ್ಪಿಗೆ ಕಿಸ್‌ ಕೊಟ್ಟ ಪಾರ್ಥ, ಪ್ರೇಮಿಗಳ ಮದುವೆಗೆ ಭೂಮಿಕಾ ಪ್ಲಾನಿಂಗ್‌-televison news amruthadhaare serial episode 210 bhoomika learns about apeksha and partha love pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಅಮೃತಧಾರೆ: ಬೇಸಿಗೆ ಬಿಸಿಗೆ ಐಸ್‌ಕ್ರಿಂ ಜತೆಗೆ ಅಪ್ಪಿಗೆ ಕಿಸ್‌ ಕೊಟ್ಟ ಪಾರ್ಥ, ಪ್ರೇಮಿಗಳ ಮದುವೆಗೆ ಭೂಮಿಕಾ ಪ್ಲಾನಿಂಗ್‌

ಅಮೃತಧಾರೆ: ಬೇಸಿಗೆ ಬಿಸಿಗೆ ಐಸ್‌ಕ್ರಿಂ ಜತೆಗೆ ಅಪ್ಪಿಗೆ ಕಿಸ್‌ ಕೊಟ್ಟ ಪಾರ್ಥ, ಪ್ರೇಮಿಗಳ ಮದುವೆಗೆ ಭೂಮಿಕಾ ಪ್ಲಾನಿಂಗ್‌

Amruthadhaare serial Yesterday Episode: ಅಪೇಕ್ಷಾ ಮತ್ತು ಪಾರ್ಥ ಐಸ್‌ಕ್ರಿಂ ಪಾರ್ಲರ್‌ನಲ್ಲಿ ಇರುವುದನ್ನು ಭೂಮಿಕಾ ನೋಡುತ್ತಾಳೆ. ಇವರಿಬ್ಬರ ಲವ್‌ ಕುರಿತು ತಿಳಿಯುತ್ತದೆ. ಮನೆಗೆ ಬಂದು ಮೊದಲು ಅಪೇಕ್ಷಾಳ ಬಳಿ ಮದುವೆ ವಿಷಯ ಮಾತನಾಡುತ್ತಾಳೆ.

ಅಮೃತಧಾರೆ ಧಾರಾವಾಹಿ
ಅಮೃತಧಾರೆ ಧಾರಾವಾಹಿ

ಆನಂದ್‌ ಗೌತಮ್‌ ಮತ್ತು ಭೂಮಿಕಾರ ಜತೆ ಮಾತನಾಡುತ್ತ ಇರುತ್ತಾರೆ. ಪಾರ್ಟಿ ವಿಷಯ ಚರ್ಚೆಯಾದಗ ಗೌತಮ್‌ಗೆ ಮುತ್ತಿನ ನೆನಪಾಗುತ್ತದೆ. ಪಾರ್ಟಿಯೂ ಬೇಡ ಏನೂ ಬೇಡ ಎನ್ನುತ್ತಾನೆ ಗೌತಮ್‌. ಇದೇ ಸಮಯದಲ್ಲಿ ಅಮ್ಮನ ಮನೆಗೆ ಹೋಗಿ ಬರ್ತಿನಿ ಎಂದು ಭೂಮಿಕಾ ಹೇಳುತ್ತಾಳೆ. ಇನ್ನೊಂದೆಡೆ ಮಲ್ಲಿ ಹೂವು ಕೊಯ್ಯುತ್ತ ಇರುತ್ತಾಳೆ. ಭೂಮಿಕಾ ಆಕೆಯ ಜತೆ ಮಾತನಾಡುತ್ತಾಳೆ. ಮಲ್ಲಿ ಮತ್ತು ಜೈದೇವ್‌ ಮದುವೆ ರಿಜಿಸ್ಟ್ರೇಷನ್‌ ಕುರಿತು ಮಾತನಾಡುತ್ತಾಳೆ. "ಈ ಕಾನೂನು ನೆಪಕ್ಕೆ ಮಾತ್ರ. ಮನಸ್ಸು ಒಂದಾಗಬೇಕು" ಎಂದೆಲ್ಲ ಸಲಹೆ ನೀಡಿ ಅಮ್ಮನ ಮನೆಗೆ ಹೋಗಿ ಬರ್ತಿನಿ ಎಂದು ಹೋಗುತ್ತಾರೆ ಭೂಮಿಕಾ.

ಇನ್ನೊಂದೆಡೆ ಪಾರ್ಥ ಮತ್ತು ಅಪೇಕ್ಷಾ ಮಾತನಾಡುತ್ತಾ ಇರುತ್ತಾರೆ. "ನೀವು ಬರ್ತಾ ಬರ್ತಾ ತುಂಬಾ ಚೇಂಜ್‌ ಆಗ್ತಾ ಇದ್ದೀರಿ. ನನ್ನ ಮೇಲೆ ಇಂಟ್ರೆಸ್ಟ್‌ ಕಡಿಮೆ ಆಗಿದೆ" ಎಂದು ಅಪೇಕ್ಷಾ ಹೇಳುತ್ತಾಳೆ. "ಈಗ ಫೋನ್‌ ಇಲ್ಲ, ಮೆಸೆಜ್‌ ಇಲ್ಲ" ಎಂದೆಲ್ಲ ಹೇಳುತ್ತಾಳೆ. ರಿಲೇಷನ್‌ ಷಿಪ್‌ ಸಕ್ಸಸ್‌ ಆಗಬೇಕಾದರೆ ಪದೇ ಪದೇ ಆ ವ್ಯಕ್ತಿ ಲವ್‌ನಲ್ಲಿ ಬೀಳ್ತಾ ಇರಬೇಕು ಎಂದೆಲ್ಲ ಅಪ್ಪಿ ಸಲಹೆ ನೀಡುತ್ತಾಳೆ. "ಲವ್‌ ಎಂದ್ರೆ ಹಲ್ಲು ನೋವು ತರಹ, ಅದನ್ನು ಫೀಲ್‌ ಮಾಡಬೇಕು" ಎಂದು ಪಾರ್ಥ ಹೇಳುತ್ತಾನೆ. "ಸಮ್ಮರ್‌ ಹೀಟ್‌ ಜಾಸ್ತಿ. ಐಸ್‌ಕ್ರೀಂ ತಿನ್ನೋಣ್ವ" ಎಂದು ಪಾರ್ಥ ಹೇಳುತ್ತಾನೆ. "ಓಕೆ" ಅಂತಾರೆ ಅಪೇಕ್ಷಾ. ಬೈಕ್‌ನಲ್ಲಿ ಐಸ್‌ಕ್ರಿಂ ತಿನ್ನಲು ಹೋಗುತ್ತಾರೆ.

ದಿವಾನ್‌ ಮನೆಯಲ್ಲಿ ಶಕುಂತಲಾದೇವಿ ತನ್ನ ಅಣ್ಣ ಮತ್ತು ಮಗನ ಜತೆ ಚರ್ಚೆ ಮಾಡುತ್ತಾರೆ. ಭೂಮಿಕಾಳ ಬೆಳವಣಿಗೆ ಕುರಿತು ಚರ್ಚಿಸುತ್ತಾರೆ. "ಕೊನೆಗೂ ಭೂಮಿಕಾ ಅಂದುಕೊಂಡಿರುವುದನ್ನು ಸಾಧಿಸಿಬಿಟ್ಟಳು" ಎಂದು ಶಕುಂತಲಾದೇವಿ ಹೇಳುತ್ತಾರೆ. "ಅತ್ತಿಗೆಯ ಪ್ರಯತ್ನದಿಂದ ಅಧಿಕೃತವಾಗಿ ಮದುವೆಯಾಯಿತು" ಎಂದು ಮಾವ ಹೇಳುತ್ತಾರೆ. "ನೀನು ದೊಡ್ಡ ಮಿಸ್ಟೇಕ್‌ ಮಾಡಿದೆ" ಎಂದು ಶಕುಂತಲಾದೇವಿ ಹೇಳುತ್ತಾರೆ. ಒಟ್ಟಾರೆ ಇಬ್ಬರು ಜೈದೇವ್‌ನ ಟೆನ್ಷನ್‌ ಜಾಸ್ತಿ ಮಾಡುತ್ತಾರೆ. ತಪ್ಪು ಮುಚ್ಚಿ ಹಾಕಲು ನಾನಿದ್ದೆನಲ್ಲ ಎಂದು ಶಕುಂತಲಾದೇವಿ ಹೇಳುತ್ತಾರೆ. ಒಟ್ಟಾರೆ ಭೂಮಿಕಾ ವಿರುದ್ಧ ಕತ್ತಿ ಮಸೆಯುವುದನ್ನು ಮುಂದುವರೆಸುವ ಸೂಚನೆ ನೀಡುತ್ತಾರೆ.

ಆಟೋದಲ್ಲಿ ಭೂಮಿಕಾ ಹೋಗುವಾಗ ಐಸ್‌ಕ್ರಿಂ ಶಾಪ್‌ನಲ್ಲಿ ಇರುವ ಅಪೇಕ್ಷಾ ಕಾಣಿಸುತ್ತಾಳೆ. ಸ್ವಲ್ಪ ಹೊತ್ತಲ್ಲಿ ಪಾರ್ಥ ಕಾಣಿಸುತ್ತಾನೆ. ಇವರಿಬ್ಬರ ಲವ್‌ ಸ್ಟೋರಿ ಭೂಮಿಕಾ ನೋಡುತ್ತಾರೆ. ಪಾರ್ಥ ಐಸ್‌ಕ್ರೀಂ ತಿನ್ನಿಸುತ್ತಾನೆ. "ಪಾರ್ಥ ಅಪ್ಪಿ ಪ್ರೀತಿ ಮಾಡುತ್ತಾರ?" ಎಂದು ಭೂಮಿಕಾ ಆಲೋಚಿಸುತ್ತಾರೆ. ಈ ಹಿಂದೆ ಮದುವೆ ಸಮಯದಲ್ಲಿ ಇವರಿಬ್ಬರು ಬೇರೆ ರೀತಿ ಇದ್ದದ್ದನ್ನು ನೆನಪಿಸಿಕೊಳ್ಳುತ್ತಾಳೆ. ಅಪೇಕ್ಷಾ ಏಕೆ ಜೈದೇವ್‌ನ ಮದುವೆಯಾಗಲು ಒಪ್ಪಿದಳು ಎಂದು ಭೂಮಿಕಾ ಆಲೋಚಿಸುತ್ತಾಳೆ. ಆ ಸಮಯದಲ್ಲಿ ಐಸ್‌ಕ್ರೀಂ ಕೊಡುವ ನೆಪದಲ್ಲಿ ಪಾರ್ಥ ಅಪ್ಪಿಗೆ ಕಿಸ್‌ ನೀಡುವುದನ್ನು ನೋಡುತ್ತಾಳೆ. ಭೂಮಿಕಾ ಅಲ್ಲಿಂದ ಹೋಗುತ್ತಾರೆ. ಜೈದೇವ್‌ ಎಂಗೇಂಜ್‌ಮೆಂಟ್‌, ಮದುವೆ ಸಮಯದ ಹಲವು ವಿಷಯಗಳನ್ನು ಭೂಮಿಕಾ ನೆನಪಿಸಿಕೊಳ್ಳುತ್ತಾರೆ. ಇವರಿಬ್ಬರ ಪ್ರೀತಿಯ ಕುರಿತು ತಿಳಿಯುತ್ತದೆ.

ಶಕುಂತಲಾದೇವಿ ಮತ್ತು ಅಣ್ಣ ಮಾತನಾಡುತ್ತ ಇರುತ್ತಾರೆ. ಜೈದೇವ್‌ಗೆ ನೀನೇ ಧೈರ್ಯ ನೀಡಬೇಕು. ಅವನಿಗೆ ಬೆಂಬಲ ನೀಡಬೇಕು ಎಂದು ಮನೆಹಾಳ ಮಾವ ಹೇಳುತ್ತಾರೆ. "ಭೂಮಿಕಾ ಈ ಮನೆಗೆ ಬಂದ ಮೇಲೆ ಎಲ್ಲಾ ಆರಂಭವಾಗಿದೆ. ಮಲ್ಲಿನೂ ಭೂಮಿಕಾ ರೀತಿ ಬೆಳೆದರೆ ಏನಾಗಬಹುದು. ಈ ಮನೆಯ ರಾಜಕಾರಣಕ್ಕೆ ನೀನು ಇಳಿಯಲೇಬೇಕು" ಎಂದು ಶಕುಂತಲಾದೇವಿ ಸಲಹೆ ನೀಡುತ್ತಾರೆ.

ಅಪೇಕ್ಷಾ ಮನೆಯಲ್ಲಿ ಮನೆಯ ಲೆಕ್ಕಚಾರ ನಡೆಯುತ್ತದೆ. ಹಾಲು, ಮೊಬೈಲ್‌ ಬಿಲ್‌ ಎಂದೆಲ್ಲ ಲೆಕ್ಕಚಾರ ಮಾಡುತ್ತಾರೆ. "ಬೇಡದೆ ಇರುವ ವಿಚಾರಕ್ಕೆ ಖರ್ಚು ಮಾಡುವ ಬದಲು ಆರೋಗ್ಯ ವಿಮೆ ಮಾಡಬೇಕು. ಸಾಲ ಮಾಡಿ ಕಂತು ತೀರಿಸಿಕೊಳ್ಳುತ್ತ ಕಷ್ಟಪಡಬಾರದು" ಎಂದು ಮಹಿಮಾ ಹೇಳುತ್ತಾಳೆ. "ನೀನು ನಮ್ಮ ರೀತಿ ಮಿಡಲ್‌ಕ್ಲಾಸ್‌ ಬಗ್ಗೆ ಯೋಚನೆ ಮಾಡೋಕ್ಕೆ ಆರಂಭ ಮಾಡಿದೆ" ಎಂದು ಜೀವನ್‌ ಹೇಳುತ್ತಾಳೆ. ಆ ಸಮಯದಲ್ಲಿ ಭೂಮಿಕಾ ಮನೆಗೆ ಬರುತ್ತಾಳೆ. ಮನೆಯವರಿಗೆ ಸಮಧಾನ ಮಾಡಲು ಬಂದೆ ಎನ್ನುತ್ತಾಳೆ. ರೇಷನ್‌ ಲಿಸ್ಟ್‌ ನನ್ನ ಫೇವರಿಟ್‌ ಟಾಪಿಕ್‌ ಎಂದು ಮನೆಯ ಖರ್ಚುಗಳನ್ನು ಬರೆಯಲು ಹೆಲ್ಪ್‌ ಮಾಡುತ್ತಾಳೆ. ಆಗ ಅಪೇಕ್ಷಾಳು ಬರುತ್ತಾಳೆ. ಭೂಮಿಕಾ ಅಪ್ಪಿ ಮಾತನಾಡುತ್ತಾಳೆ. "ಈ ಮದುವೆ ವಿಷಯವನ್ನು ಅಪ್ಪಿ ಪಾಸಿಟೀವ್‌ ಆಗಿ ತೆಗೆದುಕೊಂಡಿದ್ದಾಳೆ" ಎಂದು ಅಮ್ಮ ಹೇಳಿದಾಗ ಇವರ ಲವ್‌ಸ್ಟೋರಿ ಭೂಮಿಕಾಳಿಗೆ ನೆನಪಾಗುತ್ತದೆ. "ಹೌದು ಇವಳು ನಮ್ಮೆಲ್ಲರಿಗಿಂತ ಧೈರ್ಯವಂತೆ" ಎಂದು ಭೂಮಿಕಾ ಹೇಳಿದಾಗ ಅಪ್ಪಿಗೆ ಅನುಮಾನವಾಗುತ್ತದೆ. ಯಾಕೆ ಹೀಗೆ ಅತ್ತಿಗೆ ಮಾತನಾಡ್ತಾರೆ ಎಂದುಕೊಳ್ಳುತ್ತಾಳೆ. "ಅಪ್ಪಿ ಐಸ್‌ಕ್ರೀಮ್‌ ತಿಂದ್ಯ" ಎಂದು ಭೂಮಿಕಾ ಕೇಳಿದಾಗ ಅನುಮಾನ ಜಾಸ್ತಿ ಆಗುತ್ತದೆ. ನನಗೆ ಐಸ್‌ಕ್ರಿಂ ಸ್ಮೆಲ್‌ನಲ್ಲಿ ಗೊತ್ತಾಗುತ್ತದೆ. ನನ್ನ ಜತೆ ಎಷ್ಟು ಹುಷಾರಾಗಿದ್ರು ಸಾಲದು ಎಂದು ಭೂಮಿಕಾ ಹೇಳುತ್ತಾಳೆ. "ನಾನು ಐಸ್‌ಕ್ರೀಂ ತಿಂದಿಲ್ಲ" ಎಂದು ಹೇಳಿದಾಗ "ಕಳ್ಳಿ ನನ್ನ ಜತೆ ನಾಟಕ ಮಾಡ್ತಾ ಇದ್ದಾಳೆ. ಮಾಡ್ತಿನಿ ಅವಳಿಗೆ" ಎಂದು ಭೂಮಿಕಾ ಮನಸ್ಸಲ್ಲಿ ಅಂದುಕೊಳ್ಳುತ್ತಾಳೆ.

ಅಪ್ಪಿ ಕೊಠಡಿಗೆ ಭೂಮಿಕಾ ಬರುತ್ತಾಳೆ. ಮದುವೆ ಮುರಿದು ಹೋದ ಕುರಿತು ಬೇಜಾರು ಇಲ್ವ ಎಂದು ಭೂಮಿಕಾ ಕೇಳುತ್ತಾಳೆ. "ಇದೆಲ್ಲವೂ ಆಗಿದ್ದು ಒಳ್ಳೆಯದೇ ಆಯ್ತು ಅಲ್ವ" ಎಂದು ಅಪೇಕ್ಷಾ ಹೇಳುತ್ತಾಳೆ. "ಇನ್ಮುಂದೆ ಶ್ರೀಮಂತರ ಸಂಬಂಧ ಮಾಡಬಾರದು ಎಂದು ಅಪ್ಪ ಅಮ್ಮ ಅಂದುಕೊಳ್ಳುತ್ತಾರೆ" ಎಂದು ಭೂಮಿಕಾ ಹೇಳುತ್ತಾಳೆ. "ಅಯ್ಯೋ ನನ್ನ ಪಾರ್ಥನ ಮದುವೆಗೆ ಒಪ್ತಾರ" ಎಂದು ಅಪೇಕ್ಷಾ ಯೋಚಿಸುತ್ತಾಳೆ. "ನಿನಗೂ ನಿನ್ನ ಭಾವನ ರೀತಿ ಒಳ್ಳೆಯ ಗಂಡು ಹುಡುಕಬೇಕು" ಎಂದು ಭೂಮಿ ಹೇಳಿದಾಗ "ಅಯ್ಯೋ ಈಗ ಏಕೆ, ಸಮಯ ಬಂದಾಗ ನೋಡಿದ್ರಾಯ್ತು" ಎಂದು ಅಪೇಕ್ಷಾ ಹೇಳುತ್ತಾಳೆ. "ಹೀಗೆ ಅಂದುಕೊಂಡೇ ಜೀವನದಲ್ಲಿ ಸಾಕಷ್ಟು ವಿಷಯ ಕಳೆದುಕೊಳ್ತಿವಿ" ಎನ್ನುತ್ತಾಳೆ. ನಿನ್ನ ಮನಸ್ಸಲ್ಲಿ ಏನಾದ್ರು ಇದ್ರೆ ನನ್ನಲ್ಲಿ ಅಥವಾ ಅಪ್ಪಅಮ್ಮನ ಬಳಿ ಹೇಳು ಎಂದು ಭೂಮಿಕಾ ಸಲಹೆ ನೀಡಿ ಹೋಗುತ್ತಾಳೆ. ಅಕ್ಕ ಇದನ್ನೆಲ್ಲ ಏಕೆ ಹೇಳಿದ್ಲು ಎಂದು ಅಪೇಕ್ಷಾ ಯೋಚನೆಗೆ ಬೀಳುತ್ತಾಳೆ. ಪಾರ್ಥನಿಗೆ ಕರೆ ಮಾಡಿ ಮಾತನಾಡುತ್ತಾಳೆ. ಅಪೇಕ್ಷಾ ಜತೆ ಪಾರ್ಥ ಮಾತನಾಡುತ್ತಿರುವಾಗ ಪಾರ್ಥನ ಹತ್ತಿರ ಭೂಮಿಕಾ ಬರುತ್ತಾಳೆ. ಸೀರಿಯಲ್‌ ಮುಂದುವರೆಯುತ್ತದೆ.

mysore-dasara_Entry_Point