ಕನ್ನಡ ಸುದ್ದಿ  /  Entertainment  /  Televison News Amruthadhaare Serial Episode 219 Jaydev Plan Lands Shakuntala In Danger Malli Lorry Accident Pcp

Amruthadhaare: ಮಲ್ಲಿಗೆ ಆಕ್ಸಿಡೆಂಟ್‌ ಮಾಡೋ ಜೈದೇವ್‌ ಪ್ಲ್ಯಾನ್‌ನಿಂದ ಶಕುಂತಲಾದೇವಿಗೂ ಕಾದಿದೆ ಅಪಾಯ; ಜೈದೇವ್‌ ವಿಲವಿಲ

Amruthadhaare Serial: ಮಲ್ಲಿಯನ್ನು ಸಾಯಿಸಬೇಕೆಂದು ಜೈದೇವ್‌ ಪ್ಲ್ಯಾನ್‌ ಮಾಡಿದ್ದಾನೆ. ಲಾರಿಯವನ್ನು ಆಕ್ಸಿಡೆಂಟ್‌ ಮಾಡಲು ಮುನ್ನುಗುತ್ತಿದ್ದಾನೆ. ಆದರೆ, ಟ್ವಿಸ್ಟ್‌ ಏನೆಂದರೆ ಕಾರಿನಲ್ಲಿ ಮಲ್ಲಿ ಜತೆ ಶಕುಂತಲಾದೇವಿಯೂ ಇದ್ದಾರೆ. ಜೈದೇವ್‌ಗೆ ಈ ವಿಷಯ ಗೊತ್ತಾಗಿ ಏನೂ ಮಾಡಲಾಗದೆ ಪರಿತಪಿಸುತ್ತಿದ್ದಾನೆ.

Amruthadhaare: ಮಲ್ಲಿಗೆ ಆಕ್ಸಿಡೆಂಟ್‌ ಮಾಡೋ ಪ್ಲ್ಯಾನ್‌ನಿಂದ ಶಕುಂತಲಾದೇವಿಗೂ ಅಪಾಯ
Amruthadhaare: ಮಲ್ಲಿಗೆ ಆಕ್ಸಿಡೆಂಟ್‌ ಮಾಡೋ ಪ್ಲ್ಯಾನ್‌ನಿಂದ ಶಕುಂತಲಾದೇವಿಗೂ ಅಪಾಯ

Amruthadhaare: ಇನ್ನು ಮುಂದೆ ಯಾವುದೇ ಕಾರಣಕ್ಕೆ ದೊಡ್ಡಮನೆ ಸಂಬಂಧ ಮಾಡಬಾರದು ಎಂದು ಅಪೇಕ್ಷಾಳ ಅಮ್ಮ ಹೇಳಿದಾಗ ಪಾರ್ಥನಿಗೆ ಟೆನ್ಷನ್‌ ಆಗುತ್ತದೆ. ದೊಡ್ಮನೆ ಸಂಬಂಧ ಮಾಡಿ ವಿಷಯ ಎಲ್ಲೆಡೆ ಹರಡಿ ಬ್ರೇಕಿಂಗ್‌ ನ್ಯೂಸ್‌ ಆಗುತ್ತದೆ. ನಮ್ಮ ಲೆವೆಲ್‌ಗೆ ಸೂಕ್ತವಾದ ಹೆಣ್ಣು ನೋಡಿ ಮದುವೆ ಮಾಡಬೇಕು ಎನ್ನುತ್ತಾರೆ. ಬಳಿಕ ಪಾರ್ಥ ಮತ್ತು ಅಪೇಕ್ಷಾ "ಏನ್ಮಾಡೋದು" ಅಂತ ಮುಖಮುಖ ನೋಡಿಕೊಳ್ಳುತ್ತಾರೆ.

ಇನ್ನೊಂದೆಡೆ ಮಲ್ಲಿಯನ್ನು ಆಸ್ಪತ್ರೆ ಕರೆದೊಯ್ಯುವ ಕುರಿತು ಭೂಮಿಕಾಳಿಗೆ ಕೇಳುವಂತೆ ಜೈದೇವ್‌ ಮತ್ತು ಮಾವ ಮಾತನಾಡುತ್ತಾ ಇರುತ್ತಾರೆ. ಆಸ್ಪತ್ರೆಗೆ ಕರೆದೊಯ್ಯವ ಸಂದರ್ಭದಲ್ಲಿ ಆಕ್ಸಿಡೆಂಟ್‌ ಮಾಡುವ ಯೋಜನೆ ಅವನಿಗೆ ಇರುತ್ತದೆ. "ಮಲ್ಲಿಯನ್ನು ಒಮ್ಮೆಯೂ ಆಸ್ಪತ್ರೆಗೆ ಕರೆದುಕೊಂಡು ಹೋಗಿಲ್ಲ" ಎಂದು ಭೂಮಿಕಾ ಕೂಡ ಚಿಂತಿಸುತ್ತಾರೆ. ಮಲ್ಲಿ ಕೊಠಡಿಗೆ ಹೋಗಿ "ಜೈದೇವ್‌ ಮತ್ತು ನಿನ್ನ ಮಧ್ಯೆ ಎಲ್ಲಾ ಓಕೆ ಅಲ್ವ" ಎಂದು ಕೇಳುತ್ತಾರೆ. "ನಿನ್ನನ್ನು ಆಸ್ಪತ್ರೆಗೆ ಚೆಕಪ್‌ಗೆ ಕರೆದುಕೊಂಡು ಹೋಗುವೆ" ಎಂದು ಭೂಮಿಕಾ ಹೇಳುತ್ತಾಳೆ. ಮರೆಯಲ್ಲಿ ಕೇಳಿಸಿಕೊಂಡ ಜೈದೇವ್‌ಗೆ ಖುಷಿಯಾಗುತ್ತದೆ. "ಮಲ್ಲಿಗೆ ಇವತ್ತು ಮುಹೂರ್ತ ಫಿಕ್ಸ್‌" ಎಂದು ಲಾರಿಯವನಿಗೆ ಆಕ್ಸಿಡೆಂಟ್‌ ಮಾಡಲು ಸೂಚನೆ ನೀಡುತ್ತಾನೆ. "ಯಾವುದೇ ಕಾರಣಕ್ಕೂ ಟಾರ್ಗೆಟ್‌ ಮಿಸ್‌ ಆಗಬಾರದು" ಎನ್ನುತ್ತಾನೆ. ಇದಾದ ಬಳಿಕ ಕಾರಿನ ನಂಬರ್‌ ನೀಡುತ್ತಾನೆ. ಇದಾದ ಬಳಿಕ ಸಾಕ್ಷಿ ಉಳಿಸಬಾರದು ಎಂದು ಮೊಬೈಲ್‌ ಅನ್ನು ನೀರಿನಲ್ಲಿ ಬಿಸಾಕುತ್ತಾನೆ.

ಮಹಿಮಾಳಿಗೆ ಮಾವ ಕಾಫಿ ನೀಡುತ್ತಾರೆ. ನಿನ್ನೆ ಅತ್ತೆ ಜತೆ ಮಾತನಾಡಿದ ಕುರಿತು ಬೇಸರ ಮಾಡಬೇಡಿ ಎಂದು ಮಾವನಿಗೆ ತಿಳಿಸುತ್ತಾಳೆ ಮಹಿಮಾ. "ನಿನಗೆ ನಿನ್ನ ವಸ್ತು ಮೇಲೆ ಎಷ್ಟು ಅಟ್ಯಾಚ್‌ಮೆಂಟ್‌ ಇದೆ ಎಂದು ಗೊತ್ತು" ಎಂದು ಮಾವ ಹೇಳುತ್ತಾರೆ. ನನ್ನದೇ ತಪ್ಪು ಎಂದು ಮಹಿಮಾ ಹೇಳುತ್ತಾಳೆ. "ನೀನು ನಮಗೆ ಮಗುವಿನಂತೆ" ಎಂದು ಸದಾಶಿವ ಸಮಧಾನ ಮಾಡುತ್ತಾರೆ.

ಗೌತಮ್‌ ಆಫೀಸ್‌ನಲ್ಲಿದ್ದಾಗ ಆನಂದ್‌ ಬರುತ್ತಾನೆ. ಮುತ್ತಿನ ವಿಷಯ ಮಾತನಾಡುತ್ತಾನೆ. ಸಂಕೋಚ ಬಿಟ್ಟರೆ ಸಂತಾನ ಆಗೋದು ಎಂದು ಆನಂದ್‌ ಹೇಳುತ್ತಾನೆ. "ಹಲ್ಲಿ ತರಹ ಕಾಟ ಕೊಡ್ತಾ ಇರ್ತಿಯಾ" ಎಂದು ಗೌತಮ್‌ ಹೇಳಿದಾಗ ಆನಂದ್‌ಗೆ ಕುತೂಹಲವಾಗುತ್ತದೆ. ನಿನ್ನೆಯ ಹಲ್ಲಿಯ ವಿಷಯ ಹೇಳುತ್ತಾನೆ. "ಗೆಳೆಯ ಸಖತ್‌ ಆಗಿದೆ" ಎಂದು ಆನಂದ್‌ ಕಥೆ ಕೇಳಿ ಖುಷಿ ಪಡುತ್ತಾನೆ.

ಶಕುಂತಲಾದೇವಿ ಬಳಿ ಭೂಮಿಕಾ ಬಂದು "ಮಲ್ಲಿಗೆ ಪ್ರೆಗ್ನೆಂಟ್‌ ಚೆಕಪ್‌ ಮಾಡಬೇಕು. ನೀವು ಮಲ್ಲಿ ಜತೆ ಹೋದ್ರೆ ಚೆನ್ನಾಗಿರುತ್ತದೆ" ಎಂದು ಭೂಮಿಕಾ ಹೇಳುತ್ತಾಳೆ. "ನೀವು ಈಗ್ಲೆ ಮಲ್ಲಿ ಜತೆ ಹೋದ್ರೆ ಸಂಜೆ ಮೀಟಿಂಗ್‌ಗೆ ಹೋಗಬಹುದು" ಎಂದು ಭೂಮಿಕಾ ಕೇಳಿಕೊಂಡಾಗ ಶಕುಂತಲಾದೇವಿ ಒಪ್ಪುತ್ತಾಳೆ. "ಒಳ್ಳೆತನದ ಮುಖವಾಡ ಹಾಕಿಕೊಳ್ಳಲು ಇದು ಸೂಕ್ತ ಸಮಯ" ಎಂದುಕೊಂಡು ಶಕುಂತಲಾದೇವಿ ಒಪ್ಪುತ್ತಾರೆ. ಅವರಿಗೆ ಜೈದೇವ್‌ನ ಆಕ್ಸಿಡೆಂಟ್‌ ಪ್ಲ್ಯಾನ್‌ ತಿಳಿದಿರುವುದಿಲ್ಲ.

ಮಲ್ಲಿ ಜತೆ ಕಾರಿನಲ್ಲಿ ಹೊರಡುತ್ತಾರೆ. ಇದನ್ನು ಜೈದೇವ್‌ ಮೇಲಿನಿಂದ ನೋಡಿ ಭಯಗೊಳ್ಳುತ್ತಾನೆ. ಕಾರಿನಲ್ಲಿ ಶಕುಂತಲಾದೇವಿ ಕುಳಿತುಕೊಳ್ಳುತ್ತಾರೆ. ಮೊಬೈಲ್‌ ಬಿಸಾಕಿರುವುದರಿಂದ ಡ್ರೈವರ್‌ ನಂಬರ್‌ ಇರುವುದಿಲ್ಲ. ಕಾರಿನಲ್ಲಿ ಮಲ್ಲಿ ಮಾತನಾಡುತ್ತಾಳೆ. ಮಲ್ಲಿ ಜತೆ ಮಾತನಾಡುವುದನ್ನು ತಪ್ಪಿಸಲು ಶಕುಂತಲಾದೇವಿ ಫೋನ್‌ನಲ್ಲಿ ಮುಳುಗಿರುತ್ತಾರೆ. ಸ್ವಿಮ್ಮಿಂಗ್‌ಫೋನ್‌ನಲ್ಲಿ ಜೈದೇವ್‌ ಫೋನ್‌ ಹುಡುಕುತ್ತ ಇರುತ್ತಾನೆ. ಫೋನ್‌ನ ಸಿಮ್‌ ತೆಗೆಯುತ್ತಾನೆ. ಅಲ್ಲಿಗೆ ಬಂದ ಮಾವನಿಗೆ "ಮಲ್ಲಿ ಜತೆ ಅಮ್ಮನೂ ಹೋಗಿದ್ದಾಳೆ" ಎನ್ನುತ್ತಾನೆ. ಮತ್ತೊಬ್ಬನಿಗೆ ಫೋನ್‌ ಮಾಡಿ ಡ್ರೈವರ್‌ ನಂಬರ್‌ ಪಡೆಯುತ್ತಾನೆ. ಡ್ರೈವರ್‌ಗೆ ಕಾಲ್‌ ಮಾಡಿದಾಗ ಡ್ರೈವರ್‌ ಫೋನ್‌ ನೋಡುವುದಿಲ್ಲ, ಫೋನ್‌ ರಿಸೀವ್‌ ಮಾಡುವುದಿಲ್ಲ. ಜೈದೇವ್‌ ಟೆನ್ಷನ್‌ ಹೆಚ್ಚುತ್ತದೆ. ಸ್ಟಿಯರಿಂಗ್‌ ಹಿಡಿದ್ರೆ ಅವನು ಫೋನ್‌ ತೆಗೆಯೋದೇ ಇಲ್ಲ ಅಂತ ಲಾರಿ ಓನರ್‌ ಹೇಳುತ್ತಾನೆ. ಬಳಿಕ ಜೈದೇವ್‌ ತನ್ನ ಅಮ್ಮನಿಗೆ ಫೋನ್‌ ಮಾಡುತ್ತಾನೆ. ಅಮ್ಮನ ಫೋನ್‌ ಬ್ಯುಸಿ ಬರುತ್ತದೆ. ಮಲ್ಲಿಗೆ ಫೋನ್‌ ಮಾಡುತ್ತಾನೆ. ಆ ಸಮಯದಲ್ಲಿ ಮಲ್ಲಿಗೆ ಭೂಮಿಕಾಳ ಫೋನ್‌ ಬರುತ್ತದೆ. ಹೀಗಾಗಿ ಮಲ್ಲಿಗೂ ಜೈದೇವ್‌ನ ಫೋನ್‌ ಕನೆಕ್ಟ್‌ ಆಗೋದಿಲ್ಲ. ಮುಂದೆನಾಗುತ್ತದೆ ಎಂಬ ಕುತೂಹಲದೊಂದಿಗೆ ಸೀರಿಯಲ್‌ ಮುಂದುವರೆಯುತ್ತದೆ.

IPL_Entry_Point