Amruthadhaare: ಬಂಧನದಲ್ಲಿರುವ ಮಾನ್ಯಳಿಗೆ ರೌಡಿ ಕೈಯಿಂದ ತಪ್ಪಿಸಲು ಸಾಧ್ಯವಾಗುತ್ತ? ಭೂಮಿಕಾ ಜತೆ ಗೌತಮ್‌ ಡೇಟಿಂಗ್‌ ಪ್ಲ್ಯಾನ್‌-televison news amruthadhaare serial episode 220 goutham plan to dating with bhumika manya try to escape pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Amruthadhaare: ಬಂಧನದಲ್ಲಿರುವ ಮಾನ್ಯಳಿಗೆ ರೌಡಿ ಕೈಯಿಂದ ತಪ್ಪಿಸಲು ಸಾಧ್ಯವಾಗುತ್ತ? ಭೂಮಿಕಾ ಜತೆ ಗೌತಮ್‌ ಡೇಟಿಂಗ್‌ ಪ್ಲ್ಯಾನ್‌

Amruthadhaare: ಬಂಧನದಲ್ಲಿರುವ ಮಾನ್ಯಳಿಗೆ ರೌಡಿ ಕೈಯಿಂದ ತಪ್ಪಿಸಲು ಸಾಧ್ಯವಾಗುತ್ತ? ಭೂಮಿಕಾ ಜತೆ ಗೌತಮ್‌ ಡೇಟಿಂಗ್‌ ಪ್ಲ್ಯಾನ್‌

Amruthadhaare Serial Yesterday Episode: ಲಾರಿ ಅಪಘಾತದಿಂದ ಶಕುಂತಲಾ ಮತ್ತು ಮಲ್ಲಿ ಪಾರಾಗುತ್ತಾರೆ. ನಮಗೆಲ್ಲ ಅಡ್ಡಿಯಾಗಿರುವುದು ಭೂಮಿಕಾ, ಆಕೆಯನ್ನು ಇದ್ದು ಇಲ್ಲದಂತೆ ಮಾಡಬೇಕು ಅನ್ತಾರೆ ಶಕುಂತಲಾ. ಇನ್ನೊಂದೆಡೆ ಗೌತಮ್‌ ಲವರ್‌ ಆಗಿ ಬಂದಿದ್ದ ಮಾನ್ಯ ಬಂಧನದಲ್ಲಿದ್ದಾಳೆ. ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸ್ತಾ ಇದ್ದಾಳೆ.

ಭೂಮಿಕಾ ಜತೆ ಗೌತಮ್‌ ಡೇಟಿಂಗ್‌ ಪ್ಲ್ಯಾನ್‌
ಭೂಮಿಕಾ ಜತೆ ಗೌತಮ್‌ ಡೇಟಿಂಗ್‌ ಪ್ಲ್ಯಾನ್‌

Amruthadhaare: ಅಮೃತಧಾರೆ ಸೀರಿಯಲ್‌ನಲ್ಲಿ ಸದಾಶಿವ ಉಪವಾಸ ಮಾಡುತ್ತಿದ್ದಾರೆ. ಮಹಿಮಾ ಮತ್ತು ಜೀವನ್‌ಗೆ ಮಗುವಾಗಲಿ ಎಂದು ಸದಾಶಿವ ಉಪವಾಸ ಕುಳಿತ ಸಂಗತಿ ತಿಳಿದು ಮಹಿಮಾಗೆ ಅಚ್ಚರಿಯಾಗುತ್ತದೆ. ಇದೇ ಸಮಯದಲ್ಲಿ ಅತ್ತೆ ಮಂದಾಕಿನಿ ಕೂಡ "ಇವರಿಗೆ ಮಗುವಾದರೆ ಮುಡಿಕೊಡ್ತಿನಿ ಎಂದು ದೇವರಲ್ಲಿ ಹರಕೆ ಹೊತ್ತಿದ್ದಾರೆ" ಎಂಬ ಸಂಗತಿ ಇವಳಿಗೆ ತಿಳಿಯುತ್ತದೆ. ಈ ಎಲ್ಲಾ ಸಂಗತಿಗಳನ್ನು ತಿಳಿದು ಮಹಿಮಾಳಿಗೆ ಕಸಿವಿಸಿ ಆಗುತ್ತದೆ. "ನಾನು ಮಾಡಿರುವ ಮಿಸ್ಟೇಕ್ಸ್‌ ಇವರಿಗೆ ಎಷ್ಟು ಹರ್ಟ್‌ ಆಗುತ್ತಿದೆ. ನನ್ನನ್ನು ಎಷ್ಟೊಂದು ಪ್ರೀತಿಸ್ತಾರೆ" ಎಂದು ಯೋಚನೆ ಮಾಡುತ್ತಾಳೆ ಮಹಿಮಾ.

ಲಾರಿಯವನು ಅಪಘಾತ ಮಾಡಲು ಕಾರನ್ನು ಹುಡುಕುತ್ತ ಬರುತ್ತಿದ್ದಾನೆ. ಜೈದೇವ್‌ ಮಲ್ಲಿ ಮತ್ತು ಶಕುಂತಲಾದೇವಿಗೆ ಫೋನ್‌ ಮಾಡಲು ಪ್ರಯತ್ನಿಸುತ್ತಾನೆ. ಇಬ್ಬರು ಫೋನ್‌ನಲ್ಲಿ ಬಿಝಿ ಇರುತ್ತಾರೆ. ಶಕುಂತಲಾದೇವಿ ಫೋನ್‌ ಇಟ್ಟಾಗ ಜೈದೇವ್‌ ಕಾಲ್‌ ಮಾಡುತ್ತಾನೆ. ಕಾಲ್‌ ರಿಸೀವ್‌ ಮಾಡಿದಾಗ "ಮಾಮ್‌ ಕಾರು ನಿಲ್ಲಿಸು, ಕಾರು ಆಕ್ಸಿಡೆಂಟ್‌ ಆಗುತ್ತದೆ" ಎಂದು ಹೇಳಿದಾಗ ಎದುರಿನಿಂದ ಲಾರಿ ಬರುತ್ತದೆ. ಸ್ವಲ್ಪದರಲ್ಲಿಯೇ ಲಾರಿಯಿಂದ ಕಾರು ಪಾರಾಗುತ್ತದೆ. ದೊಡ್ಡ ಗಂಡಾಂತರದಿಂದ ಪಾರಾಗುತ್ತಾರೆ. ಶಕುಂತಲಾ ಕಾರಿನಿಂದ ಇಳಿದು ಜೈದೇವ್‌ ಜತೆ ಮಾತನಾಡುತ್ತಾರೆ. ಇವನ ಯೋಜನೆಯ ವಿಷಯ ತಿಳಿಯುತ್ತದೆ. ಒಂದಿಷ್ಟು ಮಾತುಕತೆಯಾಗುತ್ತದೆ. ಬಳಿಕ ಮಲ್ಲಿ ಜತೆ ಶಕುಂತಲಾ ಮಾತನಾಡುತ್ತಾರೆ. "ನೋಡಮ್ಮ ಈ ವಿಚಾರ ಯಾರಿಗೂ ಹೇಳಬೇಡ. ಭೂಮಿಕಾಳಿಗೂ ಹೇಳಬೇಡ. ಎಲ್ಲರೂ ಗಾಬರಿ ಪಡುತ್ತಾರೆ. ಆಕಸ್ಮಾತ್‌ ಆಗಿ ಆದ ಘಟನೆಯೂ ಬೇಕೆಂದು ಮಾಡಿದ್ದಾರೆ ಎನ್ನುತ್ತಾರೆ" ಎಂದೆಲ್ಲ ಹೇಳಿ ಈ ವಿಚಾರ ಯಾರಿಗೂ ಹೇಳಬೇಡ ಎಂದು ಹೇಳುತ್ತಾರೆ.

ಆಫೀಸ್‌ನಲ್ಲಿ ಗೌತಮ್‌ ಕ್ಲಯೆಂಟ್‌ ಜತೆ ಮಾತನಾಡುವಾಗ ಭೂಮಿಕಾಳ ಫೋನ್‌ ಬರುತ್ತದೆ. ಗೌತಮ್‌ ಕಾಲ್‌ ರಿಸಿವ್‌ ಮಾಡಿ ಮಾತನಾಡುತ್ತಾನೆ. ಅಲ್ಲಿರುವ ಕ್ಲಯೆಂಟ್‌ಗಳನ್ನು ಆನಂದ್‌ ಹೊರಕ್ಕೆ ಕಳುಹಿಸುತ್ತಾನೆ. ಮಧ್ಯಾಹ್ನದ ಊಟ ಮನೆಯಿಂದ ಕಳಿಸ್ತಿನಿ ಎಂದು ಭೂಮಿಕಾ ಹೇಳಿದಾಗ ಓಕೆ ಅನ್ತಾನೆ. ಹಿಂತುರುಗಿ ನೋಡಿದಾಗ ಕ್ಲಯೆಂಟ್‌ಗಳು ಇರುವುದಿಲ್ಲ. ಭೂಮಿಕಾಳ ಫೋನ್‌ ಕಟ್‌ ಆಗಿರುವುದಿಲ್ಲ. "ನೀನು ನಮ್ಮ ಮುಂದೆ ಮಾತ್ರ ಹುಲಿಯ ತರಹ, ಮನೆಯಲ್ಲಿ ಮಿಯಾಂವ್‌ ಆಗ್ತಿಯಾ" ಎಂದೆಲ್ಲ ಆನಂದ್‌ ಹೇಳುವ ಮಾತು ಭೂಮಿಕಾಳಿಗೆ ಕೇಳುತ್ತದೆ. ಅವಳಿಗೂ ಖುಷಿಯಾಗುತ್ತದೆ. "ಸಕಲಕಲಾವಲ್ಲಭ, ಬೆರಳು ತೋರಿಸಿದರೆ ಹಸ್ತನೇ ನುಂಗ್ತಿಯಾ" ಎಂದು ಹೇಳುತ್ತಾನೆ. "ಎಲ್ಲಾ ಕರೆಕ್ಟ್‌ ಆಗಿ ಹೋಗುತ್ತಿದೆ. ಸಮಯ ನೋಡಿಕೊಂಡು..." ಎಂದಾಗ ಫೋನ್‌ ಕಟ್‌ ಆಗದೆ ಇರುವ ಸಂಗತಿ ತಿಳಿಯುತ್ತದೆ. ಒಟ್ಟಾರೆ ಭೂಮಿಕಾಳಿಗೆ ಹೆಚ್ಚಿನ ಸಂಗತಿ ತಿಳಿಯುತ್ತದೆ.

ಮನೆಗೆ ಮಲ್ಲಿ ಬಂದಾಗ ಭೂಮಿಕಾ ರಿಪೋರ್ಟ್‌ ನೋಡ್ತಾಳೆ. ನಾನೇ ಸರಿಯಾಗಿ ನಿನಗೆ ಟ್ಯಾಬ್ಲೆಟ್‌ ನೀಡ್ತಿನಿ ಎಂದು ಹೇಳುತ್ತಾಳೆ ಭೂಮಿಕಾ. ಯಾಕೋ ಮಲ್ಲಿಯ ಮುಖ ನೋಡಿದಾಗ ಭೂಮಿಕಾಳಿಗೆ ಅನುಮಾನ ಬರುತ್ತದೆ. "ಏನಾಯ್ತು" ಎಂದು ಕೇಳಿದಾಗ ಮಲ್ಲಿ ಏನೂ ಹೇಳುವುದಿಲ್ಲ.

ಇನ್ನೊಂದೆಡೆ ಆನಂದ್‌ ನಗುತ್ತಾ ಇರುತ್ತಾನೆ. ಹೆಂಡತಿ ಎಂದರೆ ಇಷ್ಟೊಂದು ಭಯನಾ? ಎಂದೆಲ್ಲ ಕೇಳುತ್ತಾನೆ. "ಗೌರವ ಇರುವಲ್ಲಿ ಪ್ರೀತಿ ಇರುತ್ತದೆ" "ಇವತ್ತು ಕಿಸ್‌ ಕೊಟ್ಟುಬಿಡು" ಎಂದು ಆನಂದ್‌ ಹೇಳುತ್ತಾನೆ. "ಮನೆಯಲ್ಲಿ ಕಷ್ಟ ಆದ್ರೆ ಹೆಂಡತಿಯನ್ನು ಡೇಟಿಂಗ್‌ಗೆ ಕರೆದುಕೊಂಡು ಹೋಗು" ಎಂದು ಆನಂದ್‌ ಸಲಹೆ ನೀಡುತ್ತಾನೆ. "ಈ ಬಾರಿ ಮುತ್ತು ನೀಡಲೇಬೇಕು" ಎಂದು ಗೌತಮ್‌ ಕೂಡ ಯೋಚನೆ ಮಾಡ್ತಾ ಇರುತ್ತಾನೆ.

ಮತ್ತೆ ಮಾನ್ಯ ಕಥೆ ಆರಂಭ

ಇನ್ನೊಂದೆಡೆ ರೌಡಿ ಕುಡೀತಾ ಇರ್ತಾನೆ. ಗೌತಮ್‌ ಲವರ್‌ ಆಗಿ ನಟಿಸಿದವಳ ಕೈ ಕಟ್ಟಿ ಹಾಕಿರ್ತಾನೆ. ಜೈದೇವ್‌ ಮಾವ ಇವಳನ್ನು ಸಾಯಿಸಲು ಹೇಳಿರುತ್ತಾನೆ. ಅವಳು ತನ್ನ ಕೈಗೆ ಕಟ್ಟಿದ ಹಗ್ಗ ಬಿಚ್ಚಿಕೊಳ್ಳುವ ಪ್ರಯತ್ನ ಮೆಲ್ಲಗೆ ಮಾಡುತ್ತ ಇರುತ್ತಾಳೆ. "ನನ್ನನ್ನು ಬಿಟ್ಟುಬಿಡು" ಎಂದು ಅವಳು ಕೇಳುತ್ತಾಳೆ. ಇನ್ನೊಂದೆಡೆ ಶಕುಂತಲಾ ಮತ್ತು ಇತರರು ಮಾತನಾಡುತ್ತಾರೆ. "ಎಲ್ಲಾ ತಪ್ಪು ಭೂಮಿಕಾಳದ್ದೆ. ಇವನು ಏನೇ ಮಾಡಲು ಹೋದರೂ ಭೂಮಿಕಾ ಅಡ್ಡಗಾಲು ಹಾಕ್ತಾಳೆ. ಅವಳೇ ನಮಗೆ ದೊಡ್ಡ ಪ್ರಾಬ್ಲಂ" ಎಂದು ಶಕುಂತಲಾ ಹೇಳುತ್ತಾರೆ. "ಅವಳನ್ನು ನಮ್ಮ ದಾರಿಯಿಂದ ಸೈಡ್‌ಗೆ ಇಟ್ಟರೆ ನಮ್ಮ ದಾರಿ ಸುಲಭವಾಗಿಬಿಡುತ್ತದೆ" ಎಂದು ಹೇಳುತ್ತಾರೆ. "ನಾನೇ ಒಂದು ದಾರಿ ಹುಡುಕ್ತಿನಿ" ಎಂದು ಶಕುಂತಲಾ ಹೇಳುತ್ತಾರೆ. "ಮಾನ್ಯ ಈ ಭೂಮಿಕಾಗಿಂತ ದೊಡ್ಡ ಪ್ರಾಬ್ಲಂ. ಅಂತವಳನ್ನು ನಾನು ನೀಟಾಗಿ ಹ್ಯಾಂಡಲ್‌ ಮಾಡಿದ್ದೇನೆ. ಇವಳು ಯಾವ ಲೆಕ್ಕ" ಎಂದು ಶಕುಂತಲಾ ತನ್ನ ತಮ್ಮನಲ್ಲಿ ಹೇಳುತ್ತಾಳೆ. ಇನ್ನೊಂದೆಡೆ ಮಾನ್ಯ ಕಟ್ಟಿರುವ ಕೈಯನ್ನು ಬಿಚ್ಚಲು ಯತ್ನಿಸುತ್ತಾಳೆ. "ಭೂಮಿಕಾಳನ್ನು ಇದ್ದರೂ ಇಲ್ಲದಂತೆ ಮಾಡಬೇಕು" ಎಂದು ಶಕುಂತಲಾ ಹೇಳುತ್ತಾರೆ. ಸೀರಿಯಲ್‌ ಮುಂದುವರೆಯುತ್ತದೆ.

mysore-dasara_Entry_Point