ಕನ್ನಡ ಸುದ್ದಿ  /  ಮನರಂಜನೆ  /  ಕಾಣದ ಕೈಯ ಕೈವಾಡದಿಂದ ಜೀವನ್‌ ಕೆಲಸ ಹೋಯ್ತು; ಶಕುಂತಲಾದೇವಿ ನಾಟಕ ತಿಳಿದುಕೊಂಡ್ರು ಭೂಮಿಕಾ- ಅಮೃತಧಾರೆ ಧಾರಾವಾಹಿ ಕಥೆ

ಕಾಣದ ಕೈಯ ಕೈವಾಡದಿಂದ ಜೀವನ್‌ ಕೆಲಸ ಹೋಯ್ತು; ಶಕುಂತಲಾದೇವಿ ನಾಟಕ ತಿಳಿದುಕೊಂಡ್ರು ಭೂಮಿಕಾ- ಅಮೃತಧಾರೆ ಧಾರಾವಾಹಿ ಕಥೆ

Amruthadhaare Serial Episode 243: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಬುಧವಾರದ ಸಂಚಿಕೆಯಲ್ಲಿ ಹಲವು ವಿದ್ಯಮಾನಗಳು ನಡೆದಿವೆ. ಒಂದೆಡೆ ಭೂಮಿಕಾಳಿಗೆ ಮಲ್ಲಿಯು ಶಕುಂತಲಾದೇವಿ ನಾಟಕ ತಿಳಿಸುತ್ತಾಳೆ. ಇನ್ನೊಂದೆಡೆ ಜೀವನ್‌ ಕೆಲಸ ಕಳೆದುಕೊಳ್ಳುತ್ತಾನೆ. ಈತನ ಕೆಲಸ ಹೋಗಲು ದೀಪಾನ್ಶು ಕೈವಾಡ ಇರುವುದೇ ಎನ್ನುವ ಸಂದೇಹ ಪ್ರೇಕ್ಷಕರಿಗೆ ಮೂಡಿದೆ

ಶಕುಂತಲಾದೇವಿ ನಾಟಕ ತಿಳಿದುಕೊಂಡ್ರು ಭೂಮಿಕಾ- ಅಮೃತಧಾರೆ ಧಾರಾವಾಹಿ ಕಥೆ
ಶಕುಂತಲಾದೇವಿ ನಾಟಕ ತಿಳಿದುಕೊಂಡ್ರು ಭೂಮಿಕಾ- ಅಮೃತಧಾರೆ ಧಾರಾವಾಹಿ ಕಥೆ

ಅಮೃತಧಾರೆ ಧಾರಾವಾಹಿಯಲ್ಲಿ ಬುಧವಾರ ಯುಗಾದಿ ಹಬ್ಬದ ಸಂಭ್ರಮ ನಡೆದಿದೆ. ಭೂಮಿಕಾಳಿಗೆ ತಂದೆ ಸದಾಶಿವ ಕಾಲ್‌ ಮಾಡಿ ಯುಗಾದಿ ಹಬ್ಬಕ್ಕೆ ಆಮಂತ್ರಿಸಿದ್ದಾರೆ. ಅತ್ತೆಗೆ ಹುಷಾರಿಲ್ಲ ಎಂದು ಗೌತಮ್‌ ವಿಷಯ ಹೇಳದೆ ಭೂಮಿಕಾ ಮ್ಯಾನೇಜ್‌ ಮಾಡುತ್ತಾಳೆ. ಇನ್ನೊಂದೆಡೆ ಮಲ್ಲಿಗೆ ತನ್ನ ಅತ್ತೆಯ ನಿಜ ಗುಣ ಕಾಣಿಸುತ್ತದೆ. ಅತ್ತೆ ಜಾತಕದ ವಿಷಯ ಸುಳ್ಳು ಹೇಳಿರುವುದಾಗಿ ಕೇಳಿಕೊಂಡ ಮಲ್ಲಿ ಯೋಚಿಸುತ್ತಾ ಇರುತ್ತಾಳೆ. ಅಕ್ಕರಿಗೆ ಬೇಗ ವಿಷಯ ತಿಳಿಸಬೇಕು ಎಂದುಕೊಳ್ಳುತ್ತಾಳೆ. ಇನ್ನೊಂದೆಡೆ ಭೂಮಿಕಾ ಗೌತಮ್‌ ಕಷ್ಟವನ್ನು ನೆನಪಿಸಿಕೊಂಡು ಬೇಸರ ಮಾಡಿಕೊಳ್ಳುತ್ತಾ ಇರುತ್ತಾರೆ. ಸಮಯ ಸಮಯಕ್ಕೆ ಅಲಾರಂ ಇಟ್ಟು ಪತಿಗೆ ಮಾತ್ರೆ ನೀಡುತ್ತಾ ಇರುತ್ತಾರೆ. ಭೂಮಿಕಾಳ ಕಣ್ಣೀರು ನೋಡಿ "ಇದಕ್ಕೆಲ್ಲ ನೀವು ಕಣ್ಣೀರು ಹಾಕಬಾರದು. ಎಲ್ಲರೂ ಚೆನ್ನಾಗಿರಬೇಕು" ಎಂದು ಗೌತಮ್‌ ಹೇಳುತ್ತಾನೆ.

ಟ್ರೆಂಡಿಂಗ್​ ಸುದ್ದಿ

ಇನ್ನೊಂದೆಡೆ ಮಲ್ಲಿ ಶಕುಂತಲಾದೇವಿಗೆ ಮಾತ್ರೆ ನೀಡಲು ಬಂದಿರುತ್ತಾಳೆ. ಈ ಮಾತ್ರೆ ತಿಂದರೆ ನಿಜವೇ ಎಂದು ಗೊತ್ತಾಗುತ್ತದೆ ಎಂದುಕೊಳ್ಳುತ್ತಾಳೆ. ಆ ಸಂದರ್ಭದಲ್ಲಿ ಮಲ್ಲಿ ನೀಡಿದ ಮಾತ್ರೆಯನ್ನು ಎಂದಿನಂತೆ ಪಕ್ಕಕ್ಕೆ ಬಿಸಾಕುತ್ತಾಳೆ. ಈ ಸಂದರ್ಭದಲ್ಲಿ ಮಲ್ಲಿಯಿಂದ ಕಾಲು ಒತ್ತಿಸಿಕೊಳ್ಳುತ್ತಾಳೆ ಶಕುಂತಲಾದೇವಿ. ಮನೆಯವರಿಗೆ ಎಷ್ಟು ಕಷ್ಟಪಡ್ತಾ ಇದ್ದೀರಿ ಎಂದೆಲ್ಲ ಮಲ್ಲಿ ಮಾತನಾಡುತ್ತಾಳೆ. ಆಕೆಯ ಮನಸ್ಸಿನಲ್ಲಿ ಈಕೆಯ ನಾಟಕದ ವಿಚಾರವೇ ಸುತ್ತುತ್ತ ಇರುತ್ತದೆ.

ಇನ್ನೊಂದೆಡೆ ಮಲ್ಲಿ ಭೂಮಿಕಾಳನ್ನು ಕರೆದುಕೊಂಡು ಹೊರಗೆ ಹೋಗುತ್ತಾರೆ. ಆ ಸಮಯದಲ್ಲಿ ಮಲ್ಲಿಯಲ್ಲಿ ನಾನು ಟೆನ್ಷನ್‌ನಲ್ಲಿದ್ದೇನೆ, ಗೌತಮ್‌ಗೆ ಮೈ ಹುಷಾರಿಲ್ಲಾ ಅಂತಾರೆ. ಆಗ ಮಲ್ಲಿ ಹಲವು ಸತ್ಯ ವಿಚಾರಗಳನ್ನು ಹೇಳುತ್ತಾಳೆ. "ಭಾವನವರು ಇದನ್ನೆಲ್ಲ ಮಾಡೋದು ಅತ್ತೆಗಾಗಿ ಅಲ್ಲ, ನಿಮಗಾಗಿ" ಎಂದು ಹೇಳುತ್ತಾಳೆ. "ನೀವು ಹೇಳಿದ ಹಾಗೆ ಅತ್ತೆಗೆ ಏನೂ ಆಗಿಲ್ಲ. ಅತ್ತೆ ಆರಾಮವಾಗಿಯೇ ಇದ್ದಾರೆ. ಇವೆಲ್ಲ ನಾಟಕ ಅಷ್ಟೇ. ಕಂಪನಿ ನಾಟಕಕ್ಕಿಂತ ದೊಡ್ಡ ನಾಟಕನೇ" ಎಂದು ಹೇಳುತ್ತಾಳೆ. ಗೌತಮ್‌ ಮತ್ತು ಭೂಮಿಕಾ ಒಂದಾಗಲು ಸಾಧ್ಯವೇ ಇಲ್ಲ ಎಂದು ಶಕುಂತಲಾದೇವಿ ಮಾತನಾಡಿದ್ದನ್ನು ಕೇಳಿಸಿಕೊಂಡ ವಿಷಯ ತಿಳಿಸುತ್ತಾಳೆ. "ಗುರುಗಳನ್ನು ಮನೆಗೆ ಕರೆಸಿ ಜಾತಕದಲ್ಲಿ ದೋಷ ಇರುವುದಾಗಿ ಸುಳ್ಳು ಹೇಳಿಸಿರುವ" ಸಂಗತಿ ಭೂಮಿಕಾಳಿಗೆ ತಿಳಿಯುತ್ತದೆ.

ನನ್ನ ಬೆನ್ನ ಹಿಂದೆ ಇಷ್ಟೆಲ್ಲ ನಡೆದಿದೆಯಾ? ಎಂದು ಭೂಮಿಕಾ ಅಚ್ಚರಿಗೊಳ್ಳುತ್ತಾಳೆ. "ಈ ಮೋಸಕ್ಕೆ ನೀವು ಒಂದು ಕೊನೆ ಹಾಡಲೇಬೇಕು" ಎಂದು ಮಲ್ಲಿ ಹೇಳುತ್ತಾಳೆ. ಭೂಮಿಕಾಳಿಗೆ ಗೌತಮ್‌ನ ಇತ್ತೀಚಿನ ಕಾಳಜಿಯ ಮಾತುಗಳು ನೆನಪಿಗೆ ಬರುತ್ತವೆ. ನಿಮ್ಮಂತಹ ಪತಿಯನ್ನು ಪಡೆಯಲು ನಾನು ಅದೃಷ್ಟ ಮಾಡಿದ್ದೇನೆ ಎಂದು ಭೂಮಿಕಾ ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತಾಳೆ. ಜ್ವರ ಕಡಿಮೆಯಾಗಿದೆ ಆಫೀಸ್‌ಗೆ ಹೋಗ್ಲಾ ಎಂದು ಗೌತಮ್‌ ಕೇಳಿದರೂ ಭೂಮಿಕಾ ಕೇಳುವುದಿಲ್ಲ.

ಜೀವನ್‌ ಆಫೀಸ್‌ನಲ್ಲಿ ಬಾಸ್‌ ಕರೆಯುತ್ತಾರೆ. ಜೀವನ್‌ಗೆ ಪಿಂಕ್‌ ಸ್ಲಿಪ್‌ ನೀಡುತ್ತಾರೆ. ಎರಡು ತಿಂಗಳ ವೇತನದ ಜತೆ ಕೆಲಸದಿಂದ ತೆಗೆದುಹಾಕಲಾಗಿರುತ್ತದೆ. ಬಹುಶಃ ದೀಪಾನ್ಶುವಿನ ಕೈವಾಡ ಇರಬಹುದು ಎಂದು ಪ್ರೇಕ್ಷಕರಿಗೆ ಅನಿಸುತ್ತದೆ. ಮನೆಯ ಕಷ್ಟಗಳು ನೆನಪಿಗೆ ಬರುತ್ತದೆ.

ಅತ್ತೆಗೆ ಮಾತ್ರೆ ನೀಡಲು ಭೂಮಿಕಾ ಬರುತ್ತಾರೆ. ಮಾತ್ರೆ ತಿನ್ನುವ ಸಂದರ್ಭದಲ್ಲಿ ಅತ್ತೆಯ ಮುಂದೆಯೇ ನಿಲ್ಲುತ್ತಾಳೆ. ಕೈ ಬೆರಳಿನಲ್ಲಿ ಅಡಗಿಸಿಕೊಂಡು ಮಾತ್ರೆ ನುಂಗುವ ನಾಟಕವಾಡುತ್ತಾರೆ. ಇದನ್ನು ಭೂಮಿಕಾ ಗಮನಿಸುತ್ತಾಳೆ. ಅತ್ತೆ ವಾಷ್‌ ರೂಂಗೆ ಹೋದಾಗ ದಿಂಬಿನಡಿ ಮಾತ್ರೆ ನೋಡುತ್ತಾಳೆ. "ತಪ್ಪು ಮಾಡಿಬಿಟ್ರಿ ಅತ್ತೆ, ಗೌತಮ್‌ ಭಾವನೆ ಜತೆ ನೀವು ಆಟವಾಡಿದ್ದೀರಿ" ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾಳೆ ಭೂಮಿಕಾ. ಬುಧವಾರದ ಅಮೃತಧಾರೆ ಸೀರಿಯಲ್‌ ಇಲ್ಲಿಯವರೆಗೆ ಬಂದು ನಿಂತಿದೆ. ಮುಂದೇನಾಗಬಹುದು ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ.

ಅಮೃತಧಾರೆ ಸೀರಿಯಲ್‌ನ ಇಂದಿನ ಸಂಚಿಕೆಯ ಪ್ರಮೋ

ಅಮೃತಧಾರೆ ಸೀರಿಯಲ್‌ನ ಇಂದಿನ ಪ್ರಮೋದಲ್ಲಿ ತನ್ನ ತಾಯಿಯ ಹತ್ತಿರ ತನ್ನ ಮತ್ತು ಗೌತಮ್‌ ಜಾತಕವನ್ನು ಶಾಸ್ತ್ರಿಗಳಿಗೆ ತೋರಿಸುತ್ತಾರೆ. ಇವರಿಬ್ಬರದ್ದು ಅದ್ಭುತ ಜಾತಕ ಎಂದು ಶಾಸ್ತ್ರಿಗಳು ಹೇಳುತ್ತಾರೆ. ಈ ಮೂಲಕ ಶಕುಂತಲಾದೇವಿ ಮಾಡಿದ್ದು ನಾಟಕ ಎಂದು ಮತ್ತೆ ಸಾಬೀತಾಗುತ್ತದೆ.

IPL_Entry_Point