Amruthadhaare: ಕೆಲಸ ಕಳೆದುಕೊಂಡರೂ ಮನೆಯಲ್ಲಿ ಸುಳ್ಳು ಹೇಳಿದ ಜೀವನ್; ಸತ್ಯಾನ್ವೇಷಣೆಗೆ ತೊಡಗಿದ ಭೂಮಿಕಾಳಿಗೆ ಗೆಲುವು
ಅಮೃತಧಾರೆ ಧಾರಾವಾಹಿಯಲ್ಲಿ ಶಕುಂತಲಾದೇವಿಯ ಷಡ್ಯಂತ್ರದ ವಿವರವನ್ನು ಮಲ್ಲಿಯಿಂದ ತಿಳಿದುಕೊಂಡು ಭೂಮಿಕಾ ಸತ್ಯಾನ್ವೇಷಣೆಗೆ ಮುಂದಾಗುತ್ತಾಳೆ. ಇನ್ನೊಂದೆಡೆ ಕೆಲಸ ಕಳೆದುಕೊಂಡ ಜೀವನ್ ಮನೆಯಲ್ಲಿ ಸುಳ್ಳು ಹೇಳುತ್ತಾನೆ. ಮನೆಯವರ ಸಂತೋಷಕ್ಕಾಗಿ ಪ್ರಮೋಷನ್ ಆಗಿದೆ ಎನ್ನುತ್ತಾನೆ.
ಶಕುಂತಲಾದೇವಿ ಆಚೆ ಹೋಗಿದ್ದಾಗ ಬೆಡ್‌ಶೀಟ್ ಸರಿಸಿ ನೋಡಿದ ಭೂಮಿಕಾಳಿಗೆ ತಿನ್ನದ ಮಾತ್ರೆಗಳನ್ನು ಅಡಗಿಸಿಟ್ಟಿರುವುದು ಕಾಣಿಸುತ್ತದೆ. ಈ ಮೂಲಕ ಶಕುಂತಲಾರದ್ದು ಪಕ್ಕಾ ನಾಟಕ ಎಂದು ತಿಳಿಯುತ್ತದೆ. ಶಕುಂತಲಾ ಹೊರಬಂದ ಬಳಿಕ ಏನೂ ಗೊತ್ತಿಲ್ಲದಂತೆ ಭೂಮಿಕಾ ಇರುತ್ತಾರೆ. "ಅಂದಹಾಗೆ ಗೌತಮ್ ಎಲ್ಲಿ" ಎಂದು ಶಕುಂತಲಾ ಕೇಳಿದಾಗ ಭೂಮಿಕಾ "ಅವರಿಗೆ ಸ್ವಲ್ಪ ಮೈಕೈ ನೋವು. ನೀವು ಬೇಗ ಹುಷಾರಾಗ್ಲಿ ಎಂದು ಹರಕೆ ಹೊತ್ತಿದ್ದರು. ಉರುಳು ಸೇವೆ ಮಾಡಿದ್ರು, ನೆಲದ ಮೇಲೆ ಅನ್ನ ತಿಂದ್ರು. ನಿಮಗೋಸ್ಕರ ಅವರು ಏನೂ ಬೇಕಾದರೂ ಮಾಡ್ತಾರೆ ಅತ್ತೆ" ಎಂದು ಹೇಳುತ್ತಾಳೆ. ಇದನ್ನು ಕೇಳಿ ಶಕುಂತಲಾದೇವಿ ಖುಷಿಪಡುತ್ತಾಳೆ. "ಅವನು ಇದನ್ನೆಲ್ಲ ಮಾಡುತ್ತ ಇರುವುದು ನಿನಗೋಸ್ಕರ" ಎಂದು ಹೇಳುತ್ತಾಳೆ. ಈ ಮೂಲಕ ಶಕುಂತಲಾದೇವಿ ಅವರು ಹುಷಾರಿಲ್ಲದ ನಾಟಕವನ್ನು ತಿಳಿದುಕೊಳ್ಳುತ್ತಾಳೆ. ಇನ್ನು ಜಾತಕದ ವಿಚಾರ ತಿಳಿದುಕೊಳ್ಳಬೇಕು ಎಂದುಕೊಂಡು ಭೂಮಿಕಾ ಹೊರಗೆ ಹೋಗುತ್ತಾರೆ.
ಇನ್ನೊಂದೆಡೆ ಅಪೇಕ್ಷಾ ಮನೆಯಲ್ಲಿ ಎಲ್ಲರೂ ಕಾಯುತ್ತ ಕುಳಿತಿದ್ದಾರೆ. ಜೀವನ್‌ಗೆ ಪ್ರಮೋಷನ್ ದೊರಕಿ ಬರಲಿದ್ದಾನೆ ಎಂದು ಎಲ್ಲರೂ ಕಾಯುತ್ತಿದ್ದಾರೆ. ಆತನಿಗೆ ಗ್ರ್ಯಾಂಡ್ ವೆಲ್‌ಕಂ ಮಾಡಬೇಕೆಂದುಕೊಳ್ಳುತ್ತಾರೆ. ಆತನಿಗೆ ಪಿಂಕ್ ಸ್ಲಿಪ್ ದೊರಕಿದೆ, ಕೆಲಸ ಕಳೆದುಕೊಂಡಿದ್ದಾನೆ ಎಂದು ಅವರಿಗೆ ಗೊತ್ತಿಲ್ಲ. ಇದೇ ಸಮಯದಲ್ಲಿ ಜೀವನ್ ಬರುತ್ತಾನೆ. ನಾನು ಕೆಲಸ ಕಳೆದುಕೊಂಡ ವಿಚಾರ ಹೇಳಬಾರದು ಎಂದುಕೊಳ್ಳುತ್ತಾನೆ. "30 ಪರ್ಸೆಂಟ್ ಹೈಕ್ ಕೊಟ್ರು" ಎಂದು ಸುಳ್ಳು ಹೇಳುತ್ತಾನೆ. ಎಲ್ಲರಿಗೂ ಸ್ವೀಟ್ ತಂದಿರುತ್ತಾನೆ. ಎಲ್ಲರೂ ಕಂಗ್ರಾಜ್ಯುಲೇಷನ್ ಅನ್ತಾ ಇರ್ತಾರೆ. ಪಾರ್ಟಿ ಕೇಳ್ತಾರೆ. ಆದರೆ, ಆತನ ಮನಸ್ಸಲ್ಲಿ ಕೆಲಸ ಕಳೆದುಕೊಂಡ ನೋವು ಇರುತ್ತದೆ.
ಜಾತಕದ ವಿಷಯದಲ್ಲಿ ಗೌತಮ್ ಕಷ್ಟಪಟ್ರು ಎಂದು ಭೂಮಿಕಾ ಯೋಚಿಸುತ್ತಾ ಇರುವಾಗ ಆನಂದ್ ಬರುತ್ತಾನೆ. "ನಿಜ ಹೇಳಿ ಅವರು ಏನಕ್ಕೆ ಹರಕೆ ಹೊತ್ತಿದ್ದಾರೆ?" ಎಂದು ಕೇಳುತ್ತಾಳೆ. ಆತ ತಪ್ಪಿಸಲು ಪ್ರಯತ್ನಿಸುತ್ತಾನೆ. ಆಕೆ ಬಿಡುವುದಿಲ್ಲ. "ಸುಳ್ಳು ಹೇಳಬೇಡಿ, ನನಗೆ ಎಲ್ಲಾ ಗೊತ್ತು" ಎಂದು ಹೇಳುತ್ತಾಳೆ. ಕೊನೆಗೆ ವಿಧಿಯಿಲ್ಲದೆ "ಅವನು ಹರಕೆ ಹೊತ್ತದ್ದು ನಿಮಗೋಸ್ಕರ" ಎಂದು ಹೇಳುತ್ತಾಳೆ. "ಹೀಗೆ ಆಗಲು ಸಾಧ್ಯ ಇಲ್ಲ, ಇದರ ಹಿಂದೆ ಯಾರೋ ಇದ್ದಾರೆ" ಎಂದು ಹೇಳುತ್ತಾಳೆ. "ಯಾರೋ ಗುರುಗಳ ಹತ್ತಿರ ಸುಳ್ಳು ಹೇಳಿಸಿದ್ದಾರೆ. ನಾನು ಅಮ್ಮನ ಭೇಟಿಯಾಗಿ ಬರುವೆ" ಎಂದು ಹೇಳುತ್ತಾಳೆ. ಆನಂದ್ ಗೌತಮ್ ಬಳಿಗೆ ಹೋಗುತ್ತಾನೆ. ಭೂಮಿಕಾ ಮಂದಾಕಿನಿ ಮನೆಯತ್ತ ಹೋಗುತ್ತಾಳೆ.
ಇದನ್ನು ಓದಿ: ಅಮೃತಧಾರೆ ಧಾರಾವಾಹಿಯ ಎಲ್ಲಾ ಸಂಚಿಕೆಗಳು
ಮಲ್ಲಿ ಜೈದೇವ್ ಬಳಿಗೆ ಬರುತ್ತಾಳೆ. ಕಾಲೇಜಿಗೆ ಹೋಗಿ ಹಾಲ್‌ಟಿಕೆಟ್ ತರಬೇಕು, ಬನ್ನಿ ಎನ್ನುತ್ತಾಳೆ. ಆತನೂ ಪ್ರೀತಿ ಇರುವ ರೀತಿ ನಾಟಕ ಆಡುತ್ತಾನೆ. ಜತೆಯಲ್ಲಿ ಹೋಗಿ ಹಾಲ್ ಟಿಕೆಟ್ ತರೋಣ ಎಂದು ಹೇಳುತ್ತ ರೊಮ್ಯಾಂಟಿಕ್ ಮೂಡ್‌ಗೆ ಜಾರುತ್ತಾನೆ. ಆಕೆ ನಾಚಿಕೆಯಿಂದ ಹೊರಕ್ಕೆ ಹೋಗುತ್ತಾಳೆ. "ನಾನು ನಿನ್ನ ಜತೆ ಬರೋಕ್ಕೆ ಒಪ್ಪಿದ್ದು ನಿನಗಾಗಿ ಅಲ್ಲ. ನಿನ್ನನ್ನು ಚೆನ್ನಾಗಿ ಮರಹತ್ತಿಸಿ ಒಂದಿನ ಏನು ಮಾಡ್ತಿನಿ ಅಂತ ನೋಡ್ತಾ ಇರು" ಎಂದು ಜೈದೇವ್‌ನ ಸ್ವಗತ ಇರುತ್ತದೆ.
ಇನ್ನೊಂದೆಡೆ ಮಂದಾಕಿನಿ ಮನೆಯಲ್ಲಿ ಶಾಪಿಂಗ್‌ಗೆ ಹೋಗುವ ಮಾತುಕತೆ ಇರುತ್ತದೆ. ಸದಾಶಿವನ ಹಣದ ಖರ್ಚು, ಶಾಪಿಂಗ್ ಖರ್ಚು ಬಗ್ಗೆ ಮಾತನಾಡುತ್ತಾರೆ. ಒಟ್ಟಾರೆ ಸದಾಶಿವ ಮನೆಯಿಂದ ಶಾಪಿಂಗ್‌ಗೆ ಹೊರಡುವುದಿಲ್ಲ. ಉಳಿದವರು ಹೋಗುತ್ತಾರೆ. ಇನ್ನರ್ಧ ದಿನ ಮನೆಯಲ್ಲಿ ನೆಮ್ಮದಿಯಾಗಿರಬಹುದು ಎಂದುಕೊಳ್ಳುತ್ತಾರೆ.
ಗೌತಮ್ ಜತೆ ಆನಂದ್ ಮಾತನಾಡುತ್ತಾ ಇರುತ್ತಾನೆ. ಆ ಸಮಯದಲ್ಲಿ ಅಪರ್ಣಾ ಬರುತ್ತಾಳೆ. ತಾಯಿಗಾಗಿ ಈ ರೀತಿ ಹರಕೆ ಹೊತ್ತಿರುವುದಕ್ಕೆ ಆನಂದ್‌ಗೆ ಅಪರ್ಣಾನ ಬೆಂಡೆತ್ತುತ್ತಾಳೆ. ಮತ್ತೆ ಗೌತಮ್‌ಗೆ ಬುದ್ಧಿ ಹೇಳುತ್ತಾಳೆ. ಅಪರ್ಣಾ ಅಲ್ಲಿಂದ ಹೋದ ಬಳಿಕ "ಅಪರ್ಣಾ ಹೇಳಿದ್ದು ಸರಿ, ಹೀಗೆ ಏನೇನೂ ಮಾಡಿ ಹೆಚ್ಚುಕಮ್ಮಿಯಾಗಬಹುದು. ಭೂಮಿಕಾ ಏನಂದುಕೊಳ್ಳುತ್ತಾಳೆ" ಎಂದು ಆನಂದ್ ಹೇಳುತ್ತಾನೆ. ಬಳಿಕ ಭೂಮಿಕಾ ಮತ್ತು ಗೌತಮ್ ಬಾಂಡಿಂಗ್ ಕುರಿತು ಹೊಗಳುತ್ತಾನೆ.
ಭೂಮಿಕಾ ದೇವಸ್ಥಾನದಲ್ಲಿ ಇರುತ್ತಾಳೆ. ತನ್ನ ತಾಯಿಗೆ ಕಾಲ್ ಮಾಡಿ ಅರ್ಜೆಂಟಾಗಿ ಬಾ ಅನ್ನುತ್ತಾಳೆ. ತಾಯಿ ಬಂದ ಬಳಿಕ ಗುರುಗಳನ್ನು ಭೇಟಿಯಾಗುತ್ತಾರೆ. ಮಂದಾಕಿನಿಯವರೇ ಏನು ಅರ್ಜೆಂಟಾಗಿ ಬರಲು ಹೇಳಿದ್ರಿ. ಏನು ವಿಚಾರ? ಎಂದು ಕೇಳುತ್ತಾರೆ. ಜಾತಕ ಮತ್ತೆ ನೋಡಬೇಕು ಎಂದಾಗ ಒಪ್ಪಿದ ಗುರುಗಳು ಮತ್ತೆ ನೋಡುತ್ತಾರೆ. "ಎಷ್ಟೇ ಲೆಕ್ಕ ಹಾಕಿದ್ರೂ ಅಷ್ಟೇ, ಇವೆರಡು ಅದ್ಭುತವಾದ ಜಾತಕಗಳು. ಇಂತಹ ಜೋಡಿ ಸಿಗುವುದು ಅಪರೂಪ. ಇದರ ಬಗ್ಗೆ ಚಿಂತಿಸುವ ಅಗತ್ಯನೇ ಇಲ್ಲ" ಎಂದು ಗುರುಗಳು ಹೇಳುತ್ತಾರೆ. ಮಲ್ಲಿ ಹೇಳಿದ್ದು ನಿಜ ಎಂದು ಭೂಮಿಕಾಳಿಗೆ ಸ್ಪಷ್ಟವಾಗುತ್ತದೆ.