ಜೀವನ್‌ಗೆ ಮಹಿಮಾಳಿಂದ ಎಣ್ಣೆ ಮಸಾಜ್‌, ಹಳ್ಳಿ ಮನೆಯಲ್ಲಿ ಜೈದೇವ್‌ಗೆ ಮಲ್ಲಿಯಿಂದ ಅಭ್ಯಂಜನ; ಅಮೃತಧಾರೆ ಸೀರಿಯಲ್‌ನಲ್ಲಿ ಮುಗಿಯದ ಹಬ್ಬ
ಕನ್ನಡ ಸುದ್ದಿ  /  ಮನರಂಜನೆ  /  ಜೀವನ್‌ಗೆ ಮಹಿಮಾಳಿಂದ ಎಣ್ಣೆ ಮಸಾಜ್‌, ಹಳ್ಳಿ ಮನೆಯಲ್ಲಿ ಜೈದೇವ್‌ಗೆ ಮಲ್ಲಿಯಿಂದ ಅಭ್ಯಂಜನ; ಅಮೃತಧಾರೆ ಸೀರಿಯಲ್‌ನಲ್ಲಿ ಮುಗಿಯದ ಹಬ್ಬ

ಜೀವನ್‌ಗೆ ಮಹಿಮಾಳಿಂದ ಎಣ್ಣೆ ಮಸಾಜ್‌, ಹಳ್ಳಿ ಮನೆಯಲ್ಲಿ ಜೈದೇವ್‌ಗೆ ಮಲ್ಲಿಯಿಂದ ಅಭ್ಯಂಜನ; ಅಮೃತಧಾರೆ ಸೀರಿಯಲ್‌ನಲ್ಲಿ ಮುಗಿಯದ ಹಬ್ಬ

Amruthadhaare Serial: ಝೀ ಕನ್ನಡ ವಾಹಿನಿಯ ಅಮೃತಧಾರೆ ಸೀರಿಯಲ್‌ನ ಶನಿವಾರದ ಸಂಚಿಕೆಯಲ್ಲಿ ವಿಶೇಷ ಕಥೆಯೇನೂ ನಡೆದಿಲ್ಲ. ಎಲ್ಲರ ಮನೆಯಲ್ಲೂ ಯುಗಾದಿ ಹಬ್ಬದ ಸಂಭ್ರಮ. ಜೀವನ್‌ಗೆ ಮಹಿಮಾ, ಜೈದೇವ್‌ಗೆ ಮಲ್ಲಿ ಎಣ್ಣೆ ಹಚ್ಚುವ ಸಡಗರದಲ್ಲಿಯೇ ಎಪಿಸೋಡ್‌ ಮುಗಿದಿದೆ.

ಅಮೃತಧಾರೆ ಸೀರಿಯಲ್‌ ಶನಿವಾರದ ಕಥೆ
ಅಮೃತಧಾರೆ ಸೀರಿಯಲ್‌ ಶನಿವಾರದ ಕಥೆ

ಅಮೃತಧಾರೆ ಧಾರಾವಾಹಿಯ ಶನಿವಾರದ ಸಂಚಿಕೆಯಲ್ಲಿ ಹಲವು ವಿದ್ಯಮಾನಗಳು ನಡೆದಿವೆ. ಶಕುಂತಲಾದೇವಿಗೆ ಆರೋಗ್ಯ ಸರಿ ಇಲ್ಲದ ಕಾರಣ ಭೂಮಿಕಾಳೇ ಮನೆಯ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಇದೇ ಕಾರಣಕ್ಕಾಗಿ ನಾಳೆ ಪಂಚಾಂಗ ಶ್ರವಣ ಮಾಡುವ ಉದ್ದೇಶವನ್ನು ಹೊಂದಿದ್ದಾಳೆ. ಈ ಮೂಲಕ ಶಕುಂತಲಾದೇವಿ ಮಾಡಿಸಿದ ಸುಳ್ಳು ಜಾತಕ ಷಡ್ಯಂತ್ರಕ್ಕೆ ಅಂತ್ಯ ಹಾಡಲು ಬಯಸಿದ್ದಾಳೆ.

ಮಹಿಮಾಳಿಂದ ಜೀವನ್‌ನಿಂದ ಎಣ್ಣೆ ಮಸಾಜ್‌

ಈ ವರ್ಷ ಪಂಚಾಂಗ ಶ್ರವಣ ಮಾಡಿಸೋಣ್ವ ಎಂದಾಗ ಶಕುಂತಲಾ ಬೇಡ ಅನ್ನುತ್ತಾರೆ. ಬಳಿಕ ಒತ್ತಾಯಿಸಿದಾಗ "ಸರಿ ನಮ್ಮ ಶಾಸ್ತ್ರಿಗಳಿಗೆ ಹೇಳೋಣ" ಅಂತಾರೆ. "ನಾನು ಶಾಸ್ತ್ರಿಗಳಿಗೆ ತಿಳಿಸಿದ್ದೇನೆ. ಅವರೇ ಬೇರೆ ಯಾರನ್ನಾದರೂ ಕಳುಹಿಸ್ತಾರೆ" ಎಂದು ಭೂಮಿಕಾ ಸುಳ್ಳು ಹೇಳುತ್ತಾಳೆ. ಇನ್ನೊಂದೆಡೆ ಕಾರಿನಲ್ಲಿ ಜೈದೇವ್‌ ಮತ್ತು ಮಲ್ಲಿ ಹಳ್ಳಿ ಮನೆಗೆ ಬರುತ್ತಾರೆ. ತಾತಾ "ಮಲ್ಲಿ ಮತ್ತು ಜೈದೇವ್‌ಗೆ" ಆರತಿ ಮಾಡುತ್ತಾರೆ. ಯುಗಾದಿ ಹಬ್ಬದ ಪ್ರಯುಕ್ತ ಎಣ್ಣೆ ಸ್ನಾನ ಇರುತ್ತದೆ. ಇದೇ ರೀತಿ ಮಹಿಮಾ ಮನೆಯಲ್ಲೂ ಜೀವನ್‌ಗೆ ಎಣ್ಣೆ ಸ್ನಾನ ಇರುತ್ತದೆ. ಮಹಿಮಾ ಹಚ್ಚಿದ್ದು ಸಾಕಾಗುವುದಿಲ್ಲ ಎಂದು ತಾಯಿ ಚಟಪಟ ಎಂದು ಎಣ್ಣೆ ಹಚ್ಚುತ್ತಾರೆ. ಬಳಿಕ ಮಹಿಮಾ ಕೂಡ ಜೋರಾಗಿ ಎಣ್ಣೆ ಹಚ್ಚುತ್ತಾರೆ.

ಮಲ್ಲಿಯಿಂದ ಜೈದೇವ್‌ಗೆ ಅಭ್ಯಂಜನ

ಒಟ್ಟಾರೆ ಎಲ್ಲಾ ಮನೆಯಲ್ಲೂ ಯುಗಾದಿ ಸಂಭ್ರಮ ಇರುತ್ತದೆ. ಭೂಮಿಕಾ ಕಾಲ್‌ ಮಾಡಿದಾಗ "ಗೌತಮ್‌ಗೆ ಎಣ್ಣೆ ಹಚ್ಚಬೇಕೆಂದು" ತಾಯಿ ಮಂದಾಕಿನಿ ಸಲಹೆ ನೀಡುತ್ತಾಳೆ. ಯುಗಾದಿ ಹಬ್ಬದಂದು ದಿವಾನ್‌ ಮನೆಗೆ ಅಜ್ಜಿಯೂ ಬಂದಿರುತ್ತಾರೆ. ಹಬ್ಬದಂದು ಎಣ್ಣಿ ಸ್ನಾನ ಮಾಡಬೇಕೆಂದು ಗೌತಮ್‌ಗೆ ಅಜ್ಜಿ ಹೇಳುತ್ತಾರೆ. ಅಜ್ಜಿ ಬಂದಿರುವುದು ಶಕುಂತಲಾದೇವಿ ಮತ್ತು ಅಶ್ವಿನಿಗೆ ಅಸಹನೆ ಉಂಟು ಮಾಡುತ್ತದೆ. ಇನ್ನೊಂದೆಡೆ ಜೈದೇವ್‌ಗೆ ಮಲ್ಲಿ ಎಣ್ಣೆ ಹಚ್ಚಿ ತಟ್ಟುತ್ತಾಳೆ. ಮಲ್ಲಿ ಎಣ್ಣೆ ಮಸಾಜ್‌ ಮಾಡುವಾಗ "ಗುಟ್ಟೊಂದ ಹೇಳುವೆ ಹತ್ತಿರ ಹತ್ತಿರ ಬಾ" ಎಂದು ಜೈದೇವ್‌ ಹಾಡುತ್ತಾನೆ. ಆಗ ತಾತ ಬರುತ್ತಾರೆ. ತಾತಾನೇ ಎಣ್ಣೆ ಹಚ್ಚಿ ಸಖತ್‌ ಮಸಾಜ್‌ ಮಾಡುತ್ತಾರೆ. ಬಳಿಕ ಸ್ನಾನ ಮಾಡಲು ಹೊರಕ್ಕೆ ಕರೆದೊಯ್ಯುತ್ತಾರೆ. ಹೀಗೆ ಎಲ್ಲರ ಮನೆಯಲ್ಲೂ ಯುಗಾದಿ ಹಬ್ಬದ ಸಡಗರ ಇರುತ್ತದೆ. ಅಮೃತಧಾರೆ ಸೀರಿಯಲ್‌ನ ಶನಿವಾರದ ಸಂಚಿಕೆಯಲ್ಲಿ ಎಲ್ಲರ ಮನೆಯಲ್ಲೂ ಎಣ್ಣ ಸ್ನಾನದ ಸಡಗರವೇ ತುಂಬಿದೆ.

ಧಾರಾವಾಹಿಯ ಮುಂದಿನ ಸಂಚಿಕೆಯಲ್ಲಿ ಪಂಚಾಂಗ ಶ್ರವಣ

ಮುಂದಿನ ಸಂಚಿಕೆಯಲ್ಲಿ ಗೌತಮ್‌ ದಿವಾನ್‌ ಮನೆಯಲ್ಲಿ ಪಂಚಾಂಗ ಶ್ರವಣ ನಡೆಯಲಿದೆ. ಈಗಾಗಲೇ ಝೀ ಕನ್ನಡ ಬಿಡುಗಡೆ ಮಾಡಿರುವ ಪ್ರಮೋದಲ್ಲಿ ಈ ಕುರಿತು ಮಾಹಿತಿ ಲಭ್ಯವಿದೆ. ದಿವಾನ್‌ ಮನೆಗೆ ಗುರುಗಳು ಆಗಮಿಸಿ ಪಂಚಾಂಗ ಶ್ರವಣ ಮಾಡುತ್ತಾರೆ. ಯುಗಾದಿ ಹಬ್ಬದ ದಿನ ಪಂಚಾಂಗ ಶ್ರವಣ ಮಾಡುವುದರಿಂದ ಸುಖ ಯಶಸ್ಸು ದೊರಕುತ್ತದೆ ಎಂದು ಗುರುಗಳು ಹೇಳುತ್ತಾರೆ. ಈ ಸಮಯದಲ್ಲಿ ಮೊದಲೇ ಅಂದುಕೊಂಡಂತೆ ಭೂಮಿಕಾ "ಗುರುಗಳೇ ನಮ್ಮ ಮನೆಯಲ್ಲಿ ಎಲ್ಲರ ಜಾತಕ ನೋಡಿ ಹೇಳ್ತಿರಾ" ಎಂದು ಕೇಳುತ್ತಾರೆ.

ಭೂಮಿಕಾ ಮತ್ತು ಗೌತಮ್‌ ಒಂದಾಗಬಾರದು ಎಂಬ ಭವಿಷ್ಯದ ಬಗ್ಗೆ ತಿಳಿದಿರುವ ಗೌತಮ್‌ಗೆ ಇದರಿಂದ ಭಯವಾಗುತ್ತದೆ. "ಭೂಮಿಕಾ ಜಾತಕನ ಯಾಕೆ ತೋರಿಸಬೇಕು, ಎಲ್ಲಾ ಚೆನ್ನಾಗಿದೆ ಎಂದು ಹೇಳಿದ್ದಾರಲ್ವ?" ಎಂದು ಗೌತಮ್‌ ಹೇಳುತ್ತಾನೆ.

ತಕ್ಷಣ ಅಜ್ಜಿ "ಮರಕ್ಕಿಂತ ಮರ ದೊಡ್ಡದಾಗಿರುತ್ತದೆ. ಇನ್ನೊಮ್ಮೆ ಜಾತಕ ತೋರಿಸುವುದರಲ್ಲಿ ತಪ್ಪೇನು" ಎಂದು ಹೇಳುತ್ತಾರೆ. ಈ ಮೂಲಕ ಜಾತಕ ತೋರಿಸದೆ ಇರಲು ಬಯಸುವ ಎಲ್ಲರ ಬಾಯಿ ಮುಚ್ಚಿಸುತ್ತಾರೆ. ಜಾತಕ ತೋರಿಸುವ ಸಂದರ್ಭದಲ್ಲಿ ಸಹಜವಾಗಿಯೇ ಶಕುಂತಲಾದೇವಿ ಮತ್ತು ಅಶ್ವಿನಿ ಭಯಗೊಳ್ಳುತ್ತಾರೆ. ಶಾಸ್ತ್ರಿಗಳ ಮೂಲಕ ಸುಳ್ಳು ಜಾತಕ ಹೇಳಿಸಿದ್ದು ಇವರೇ. ಇದೀಗ ನಿಜವಾದ ಗುರುಗಳ ಮೂಲಕ ಜಾತಕ ಹೇಳಿಸುವ ಸಂದರ್ಭ ಬಂದಿದೆ. ಭೂಮಿಕಾ ಮತ್ತು ಗೌತಮ್‌ ಹೆಸರಿನ ಪ್ರಕಾರವಾಗಿ ಯಾವ ಸಮಸ್ಯೆಯೂ ಇಲ್ಲ ಎಂದು ಗುರುಗಳು ಹೇಳಿದಾಗ ಗೌತಮ್‌ ಮುಖದಲ್ಲಿ ಸಂತೋಷ, ಆನಂದ ತುಂಬಿತುಳುಕುತ್ತದೆ. ಇದು ಹೇಳಿ ಮಾಡಿಸಿದ ಜೋಡಿ ಎಂದು ಹೇಳುತ್ತಾರೆ. ಈ ಕಥೆಯು ಮುಂದಿನ ಸಂಚಿಕೆಯಲ್ಲಿ ಪ್ರಸಾರವಾಗುವ ಸೂಚನೆ ದೊರಕಿದೆ.

Whats_app_banner