Amruthadhaare: ಪ್ರಜ್ಞೆ ತಪ್ಪಿರುವ ಮಾನ್ಯಾಳಿಗೆ ಎಚ್ಚರವಾಗುತ್ತ, ಕೋಮಕ್ಕೆ ಹೋಗ್ತಾಳ? ಮೃತ್ಯುಂಜಯ ಹೋಮ ಮಾಡಿಸಿದ ಭೂಮಿಕಾ ಗೌತಮ್‌
ಕನ್ನಡ ಸುದ್ದಿ  /  ಮನರಂಜನೆ  /  Amruthadhaare: ಪ್ರಜ್ಞೆ ತಪ್ಪಿರುವ ಮಾನ್ಯಾಳಿಗೆ ಎಚ್ಚರವಾಗುತ್ತ, ಕೋಮಕ್ಕೆ ಹೋಗ್ತಾಳ? ಮೃತ್ಯುಂಜಯ ಹೋಮ ಮಾಡಿಸಿದ ಭೂಮಿಕಾ ಗೌತಮ್‌

Amruthadhaare: ಪ್ರಜ್ಞೆ ತಪ್ಪಿರುವ ಮಾನ್ಯಾಳಿಗೆ ಎಚ್ಚರವಾಗುತ್ತ, ಕೋಮಕ್ಕೆ ಹೋಗ್ತಾಳ? ಮೃತ್ಯುಂಜಯ ಹೋಮ ಮಾಡಿಸಿದ ಭೂಮಿಕಾ ಗೌತಮ್‌

Amruthadhaare Serial: ಪ್ರಜ್ಞೆ ತಪ್ಪಿರುವ ಮಾನ್ಯ ಆಸ್ಪತ್ರೆಯಲ್ಲಿದ್ದಾಳೆ. ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಪ್ರಜ್ಞೆ ಬರದೆ ಇದ್ದರೆ ಆಕೆ ಕೋಮಕ್ಕೆ ಹೋಗುವ ಸಾಧ್ಯತೆ ಇದೆ ಎಂದು ಡಾಕ್ಟರ್‌ ಹೇಳುತ್ತಾರೆ. ಮಾನ್ಯ ಎಚ್ಚರವಾಗಲೆಂದು ಗೌತಮ್‌ ಮತ್ತು ಭೂಮಿಕಾ ದೇಗುಲದಲ್ಲಿ ಪೂಜೆ ಮಾಡಿಸ್ತಾರೆ.

ಅಮೃತಧಾರೆ ಧಾರಾವಾಹಿ
ಅಮೃತಧಾರೆ ಧಾರಾವಾಹಿ

ಅಮೃತಧಾರೆ ಧಾರಾವಾಹಿಯ ಬುಧವಾರದ ಸಂಚಿಕೆಯಲ್ಲಿ ಮಹಿಮಾಳ ವಿರುದ್ಧ ಜೀವನ್‌ ಕೋಪಗೊಂಡಿದ್ದಾನೆ. ಆ ಮಗು ಜತೆ ಎಲ್ಲರ ಕನಸನ್ನು ಹೊಸಕಿ ಹಾಕಿದ್ದೀಯ ಎಂದು ಜೀವನ್‌ ಹೇಳುತ್ತಾನೆ. ನಿನ್ನೆ ಕೆನ್ನೆಗೆ ಒಂದು ಏಟು ಕೊಟ್ಟಿದ್ದ. ಆದರೆ, ಇಂದಿನ ಸಂಚಿಕೆಯಲ್ಲಿ ಸೀನ್‌ ಚೇಂಜ್‌. ಇದೆಲ್ಲ ಮಹಿಮಾ ಕನಸು ಕಂಡದ್ದು. ಅಂದರೆ, ಈ ಮಗುವಿನ ವಿಷಯ ಜೀವನ್‌ಗೆ ತಿಳಿದರೆ ಹೀಗೆಲ್ಲ ಆಗಬಹುದು ಎಂದು ಮಹಿಮಾಳಿಗೆ ಕನಸು ಬಿದ್ದಿದ್ದೆ. ಹೀಗಾಗಿ, ಮಹಿಮಾ ಅಬಾರ್ಷನ್‌ ವಿಷಯವನ್ನು ಜೀವನ್‌ಗೆ ಹೇಳಿರುವುದಿಲ್ಲ. ಹೀಗಾಗಿ, ಹಿಂದಿನ ಸಂಚಿಕೆಯಲ್ಲಿ ಅಂದುಕೊಂಡಂತೆ ಅಬಾರ್ಷನ್‌ ವಿಷಯ ಜೀವನ್‌ಗೆ ತಿಳಿದಿರುವುದಿಲ್ಲ.

ಮಾನ್ಯಳಿಗೆ ಪ್ರಜ್ಞೆ ಬರುತ್ತ?

ಈ ಮಾನ್ಯ ಗೌತಮ್‌ ಕಾರಿಗೆ ಅಡ್ಡ ಬರಬೇಕಿತ್ತ ಎಂದು ಶಕುಂತಲಾದೇವಿ ಯೋಚಿಸುತ್ತಾಳೆ. "ಎಲ್ಲಾ ನಾರ್ಮಲ್‌ ಆಗಿದೆ, ಆದರೆ ಪ್ರಜ್ಞೆ ಬಂದಿಲ್ಲ" ಎಂದು ಡಾಕ್ಟರ್‌ ಹೇಳುತ್ತಾರೆ. "ಕೋಮಕ್ಕೆ ಹೋದರೆ ಮಾತ್ರ ಸಮಸ್ಯೆ" ಎಂದು ಡಾಕ್ಟರ್‌ ಹೇಳುತ್ತಾರೆ. "ಅವಳು ಕೋಮಕ್ಕೆ ಹೋಗ್ಲಪ್ಪ" ಎಂದು ಶಕುಂತಲಾ ಯೋಚಿಸುತ್ತಾರೆ. ಆ ಸಮಯದಲ್ಲಿ ಪೊಲೀಸರು ಬರುತ್ತಾರೆ. ಪೊಲೀಸರಿಗೆ ಗೌತಮ್‌ ವಿವರ ನೀಡುತ್ತಾರೆ. "ಹುಡುಗಿಗೆ ಪ್ರಜ್ಞೆ ಬಂದು ಹೇಳಿಕೆ ನೀಡುವ ತನಕ ಏನು ಹೇಳಲು ಆಗುವುದಿಲ್ಲ" ಎಂದು ಪೊಲೀಸರು ಹೇಳುತ್ತಾರೆ. "ಅವರು ಯಾರು ಎಂದು ಪತ್ತೆಹಚ್ಚಿ ಮನೆಯವರಿಗೆ ವಿಷಯ ತಿಳಿಸಬಹುದಲ್ವ" ಎಂದು ಭೂಮಿಕಾ ಹೇಳಿದಾಗ ಶಕುಂತಲಾ, ಗೌತಮ್‌ ಭಯಗೊಳ್ಳುತ್ತಾರೆ.

"ನಮಗೆ ಮಾನ್ಯ ಮಾತ್ರ ಪ್ರಾಬ್ಲಂ ಅಂದುಕೊಂಡ್ವಿ. ಅವಳ ಜತೆ ಅವಳ ಮನೆಯವರೂ ಬಂದರೆ ಪ್ರಾಬ್ಲಂ ಡಬಲ್‌ ಆಗುತ್ತದೆ" ಎಂದು ಶಕುಂತಲಾದೇವಿ ಹೇಳುತ್ತಾರೆ. ಗೌತಮ್‌ಗೆ ಟೆನ್ಷನ್‌ ಆಗುತ್ತದೆ. "ನೀನೇನೂ ಯೋಚನೆ ಮಾಡಬೇಡ, ನಾನು ನೋಡ್ಕೋತ್ತೀನಿ" ಎಂದು ಶಕುಂತಲಾ ಹೇಳುತ್ತಾರೆ.

ಜೀವನ್‌ ಮನೆಯಲ್ಲಿ ಊಟ ಮಾಡುತ್ತಾ ಮಾತನಾಡುತ್ತಾ ಇರುತ್ತಾರೆ. ಕೈತುತ್ತಿನ ರುಚಿಯ ಕುರಿತು ಎಲ್ಲರೂ ಮಾತನಾಡುತ್ತಾರೆ. ಎಲ್ಲರಿಗೂ ಸಿಹಿಕಹಿ ಚಂದ್ರುವಿನ ಕೈತುತ್ತು ದೊರಕುತ್ತದೆ. "ಶಾಸ್ತ್ರಿಗಳ ಮನೆಗೆ ಹೋಗೋಣ ಎಂದುಕೊಂಡಿದ್ದೇನೆ. ನಮ್ಮ ಮನೆ ಮೊದಲಿನಂತೆ ಇಲ್ಲ. ಮನಸ್ಸಲ್ಲಿ ಒಂಥರ ಕಸಿವಿಸಿ. ಶಾಸ್ತ್ರಿಗಳಿಗೆ ಜಾತಕ ತೋರಿಸಿ ಬರುತ್ತೇನೆ" ಎನ್ನುತ್ತಾರೆ. ಮದುವೆ, ಮಕ್ಕಳು ಎಂದೆಲ್ಲ ಮಾತುಕತೆಯಾಗುತ್ತದೆ.

ಮಾನ್ಯ ನನ್ನ ಬದುಕಿನಲ್ಲಿ ಬರೋದಿಲ್ಲ ಎಂದುಕೊಂಡಿದ್ದೆ ಎಂದು ಗೌತಮ್‌ ಹೇಳುತ್ತಾನೆ. "ಮರೆಯಬೇಕಾದವಳ ಕುರಿತು ಯೋಚನೆ ಮಾಡಬಾರದು" ಎಂದು ಶಕುಂತಲಾದೇವಿ ಹೇಳುತ್ತಾಳೆ. "ಯಾವುದನ್ನೂ ಆಚೆಗೆ ತೋರಿಸಿಕೊಳ್ಳಬೇಡ. ಯಾವುದೇ ಕಾರಣಕ್ಕೂ ಭೂಮಿಕಾಳಿಗೆ ವಿಷಯ ತಿಳಿಸಬೇಡ" ಎಂದು ಶಕುಂತಲಾದೇವಿ ಹೇಳುತ್ತಾರೆ. ಇದಾದ ಬಳಿಕ ಭೂಮಿಕಾಳನ್ನು ಮನೆಗೆ ಕಳುಹಿಸಲು ಶಕುಂತಲಾದೇವಿ ಪ್ರಯತ್ನಿಸುತ್ತಾರೆ. "ಇಂತಹ ಸ್ಥಿತಿಯಲ್ಲಿ ಈ ಹುಡುಗಿನ ಹೀಗೆಯೇ ಬಿಟ್ಟುಹೋಗಲು ಮನಸ್ಸು ಬರುತ್ತಿಲ್ಲ" ಎಂದು ಭೂಮಿಕಾ ಹೇಳುತ್ತಾಳೆ. "ಒಂದ್ಸಳ ಗೌತಮ್‌ ಬಗ್ಗೆ ಯೋಚನೆ ಮಾಡು. ಅವನು ಅಪ್‌ಸೆಟ್‌ ಆಗಿದ್ದಾನೆ. ನೀನು ಅವನ ಜತೆ ಮನೆಗೆ ಹೋಗು" ಎಂದೆಲ್ಲ ಕನ್ವಿನ್ಸ್‌ ಮಾಡಲು ಪ್ರಯತ್ನಿಸುತ್ತಾರೆ ಶಕುಂತಲಾ. ಅತ್ತೆ ಒತ್ತಾಯ ತಡೆಯದೆ ಅಲ್ಲಿಂದ ಹೋಗುತ್ತಾರೆ. ಮಾನ್ಯಳ ಮುಂದೆ ಶಕುಂತಲಾದೇವಿ "ನಿನಗೊಂದು ಗತಿ ಕಾಣಿಸ್ತಿನಿ" ಎಂದು ಸ್ವಗತವಾಗಿ ಹೇಳುತ್ತಾರೆ.

ಇನ್ನೊಂದೆಡೆ ಅಪ್ಪಿ ಮತ್ತು ಪಾರ್ಥ ಜ್ಯೂಸ್‌ ಸೆಂಟರ್‌ನಲ್ಲಿ ಕುಳಿತು ಮಾತನಾಡುತ್ತಾರೆ. ಇರೋ ವಿಷಯ ಮನೆಯಲ್ಲಿ ಹೇಳೋಣ ಅನಿಸುತ್ತದೆ, ಹೇಳದೆ ಇರೋಣ ಅಂತನೂ ಅನಿಸುತ್ತದೆ ಎಂದು ಪಾರ್ಥ ಹೇಳುತ್ತಾನೆ. ನೀನು ಮನೆಯಲ್ಲಿ ಹೇಳು ಎಂದು ಅಪೇಕ್ಷಾಳಿಗೆ ಹೇಳುತ್ತಾನೆ. ನಮ್ಮ ಮನೆಯಲ್ಲೂ ಸಿಚುವೇಷನ್‌ ಸರಿ ಇಲ್ಲ, ಸ್ವಲ್ಪ ಕಾಯೋಣ ಎಂದು ಹೇಳುತ್ತಾಳೆ ಅಪ್ಪಿ. ಹೀಗೆ ಒಂದಿಷ್ಟು ಮಾತನಾಡುತ್ತಾರೆ ಲವ್‌ ಬರ್ಡ್ಸ್‌.

ಗೌತಮ್‌ಗೆ ಟೆನ್ಷನ್‌. ದಾರಿಯಲ್ಲಿ ಹೋಗುತ್ತ ದೇವಸ್ಥಾನಕ್ಕೆ ಹೋಗುತ್ತಾರೆ. "ಈ ವಿಷಯದಲ್ಲಿ ನೀವು ಟೆನ್ಷನ್‌ ಮಾಡ್ತಾ ಇದ್ದಿರಿ" ಎಂದು ಭೂಮಿಕಾ ಹೇಳುತ್ತಾಳೆ. ದೇಗುಲದಲ್ಲಿ ಮೃತ್ಯುಂಜಯ ಪೂಜೆ ಮಾಡುತ್ತಾರೆ. ಮಾನ್ಯಳ ಆರೋಗ್ಯಕ್ಕಾಗಿ ಇಬ್ಬರೂ ಪ್ರಾರ್ಥಿಸುತ್ತಾರೆ. ಸೀರಿಯಲ್‌ ಮುಂದುವರೆಯುತ್ತದೆ

Whats_app_banner