ಕನ್ನಡ ಸುದ್ದಿ  /  Entertainment  /  Televison News Amruthadhaare Serial Episode Goutham Bhoomika Take Manya To A Hospital Mahima Reveal Abortion Truth Pcp

Amruthadhaare: ಮಾನ್ಯಳಿಗೆ ಗೌತಮ್‌ ಕಾರು ಡಿಕ್ಕಿ, ಆಸ್ಪತ್ರೆಗೆ ಶಕುಂತಲಾ ಎಂಟ್ರಿ; ಅಬಾರ್ಷನ್‌ ಸತ್ಯ ಹೇಳಿದ ಮಹಿಮಾ ವಿರುದ್ಧ ಜೀವನ್‌ ಆಕ್ರೋಶ

Amruthadhaare Serial: ಜೀಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಈಗ ಮತ್ತೊಂದು ತಿರುವು. ಗೌತಮ್‌ ಕಾರು ಮಾನ್ಯಗಳಿಗೆ ಡಿಕ್ಕಿ ಹೊಡೆಯುತ್ತದೆ. ಮಾನ್ಯಳಿಗೆ ಪ್ರಜ್ಞೆ ಬರುವ ಮೊದಲು ಶಕುಂತಲಾದೇವಿ ಆಸ್ಪತ್ರೆಗೆ ಬರುತ್ತಾರೆ. ಇನ್ನೊಂದೆಡೆ ಅಬಾರ್ಷನ್‌ ಮಾಡಿರುವ ಸತ್ಯವನ್ನು ಜೀವನ್‌ಗೆ ಮಹಿಮಾ ಹೇಳುತ್ತಾಳೆ.

Amruthadhaare: ಮಾನ್ಯಳಿಗೆ ಗೌತಮ್‌ ಕಾರು ಡಿಕ್ಕಿ, ಆಸ್ಪತ್ರೆಗೆ ಶಕುಂತಲಾದೇವಿ ಎಂಟ್ರಿ
Amruthadhaare: ಮಾನ್ಯಳಿಗೆ ಗೌತಮ್‌ ಕಾರು ಡಿಕ್ಕಿ, ಆಸ್ಪತ್ರೆಗೆ ಶಕುಂತಲಾದೇವಿ ಎಂಟ್ರಿ

ಅಮೃತಧಾರೆ ಧಾರಾವಾಹಿ ಕಥೆ: ಭೂಮಿಕಾಳನ್ನು ಎಲ್ಲಿಗೆ ಕರೆದುಕೊಂಡು ಹೋಗಬೇಕೆಂದು ಗೌತಮ್‌ ಯೋಚಿಸುತ್ತಾರೆ. ಕೊನೆಗೆ ಪಾರ್ಕ್‌ಗೆ ಕರೆದುಕೊಂಡು ಬರುತ್ತಾರೆ. ಪಾರ್ಕ್‌ನಲ್ಲಿ ಏನು ಮಾತನಾಡಬೇಕೆಂದು ಆರಂಭದಲ್ಲಿ ತೊದಲುತ್ತಾರೆ. ಆನಂದ್‌ ಹೇಳಿರುವ ಕಿಸ್‌ ವಿಷಯ ನೆನಪಿಗೆ ಬರುತ್ತದೆ. "ಇವತ್ತು ಯಾಕೆ ಹೀಗೆ ಆಡ್ತಾ ಇದ್ದಾರೆ" ಎಂದು ಭೂಮಿಕಾ ಯೋಚಿಸುತ್ತಾರೆ. ಕಾರಲ್ಲಿ ಮೊಬೈಲ್‌ ಬಿಟ್ಟಿದ್ದೇನೆ ಎಂದು ಗೌತಮ್‌ ಹೋಗುತ್ತಾನೆ. ಆ ಸಮಯದಲ್ಲಿ ಮಹಿಮಾ ಕಾಲ್‌ ಮಾಡುತ್ತಾಳೆ. ಮನೆಯಲ್ಲಿ ಮಗುವಿಗಾಗಿ ಮಾತನಾಡ್ತಾ ಇದ್ದಾರೆ. ನನಗೆ ಗಿಲ್ಟ್‌ ಆಗ್ತಾ ಇದೆ ಎಂದು ಮಹಿಮಾ ಹೇಳುತ್ತಾಳೆ. "ನಾನು ಕೂಡ ಹರಕೆ ಹೊತ್ಕೊತ್ತೀನಿ, ನಿನಗೆ ಬೇಗ ಮಗು ಆಗ್ಲಿ" ಎಂದು ಭೂಮಿಕಾ ಹೇಳುತ್ತಾಳೆ. "ಒಂದು ಸಲ ಪರ್ಸನಲ್‌ ಆಗಿ ಮಾತನಾಡಬೇಕು, ಮಾತನಾಡಲು ತುಂಬಾ ವಿಷಯ ಇದೆ" ಎಂದು ಮಹಿಮಾ ಹೇಳುತ್ತಾಳೆ. ಭೂಮಿಕಾ ಸಮಧಾನ ಹೇಳುತ್ತಾಳೆ. "ಮನಸ್ಸಿಗೆ ಬೇಜಾರಾದ್ರೆ ಕೌನ್ಸಿಲಿಂಗ್‌ ತೆಗೆದುಕೊಳ್ಳಬೇಕು" ಎಂದು ಹೇಳುತ್ತಾರೆ. ಕಾರಿಗೆ ಹೋದ ಗೌತಮ್‌ ಧೈರ್ಯಕ್ಕಾಗಿ ಆನಂದ್‌ಗೆ ಕಾಲ್‌ ಮಾಡ್ತಾನೆ. ಆನಂದ್‌ ಪ್ರೀತಿ, ಫೀಲಿಂಗ್ಸ್‌ ಕುರಿತು ಒಂದಿಷ್ಟು ಉಪದೇಶ ನೀಡುತ್ತಾನೆ. ಧೈರ್ಯ ಒಗ್ಗೂಡಿಸಿ ಪ್ರೀತಿ ಹೇಳಿಬಿಡು ಎಂದು ಧೈರ್ಯ ಹೇಳುತ್ತಾನೆ.

ಆಗ ಯಾರೋ ಸರ್‌ ಸ್ವಲ್ಪ ಕಾರನ್ನು ಮುಂದಕ್ಕೆ ಹಾಕಿ ಎನ್ನುತ್ತಾರೆ. ಲೈನ್‌ನಲ್ಲಿ ಇರು ಆನಂದ್‌, ಗಾಡಿ ಮುಂದಕ್ಕೆ ಹಾಕ್ತಿನಿ ಎಂದು ಗೌತಮ್‌ ಹೇಳಿ ಕಾರನ್ನು ಚಾಲು ಮಾಡುತ್ತಾನೆ. ಇನ್ನೊಂದು ಕಡೆ ಮಾನ್ಯ ಓಡಿಕೊಂಡು ಬರುತ್ತಾಳೆ. ಈತನ ಕಾರು ಆಕೆಗೆ ಡಿಕ್ಕಿ ಹೊಡೆಯುತ್ತದೆ. ಅಥವಾ ಅವಳೇ ಕಾರಿನ ಮುಂದೆ ಬಂದು ಬೀಳುತ್ತಾಳೆ. ಕಾರಿನಿಂದ ಇಳಿದ ಗೌತಮ್‌ಗೆ ಮಾನ್ಯಳನ್ನು ನೋಡಿ ಭಯ ಆಗುತ್ತದೆ. ಆಗ ಭೂಮಿಕಾಳು ಓಡೋಡಿ ಬರುತ್ತಾಳೆ. ಆಕೆಯನ್ನು ಕಾರಿನಲ್ಲಿ ಕರೆದುಕೊಂಡು ಹೋಗುತ್ತಾರೆ. ಲವ್‌ ಪ್ರಪೋಸ್‌ ಮಾಡಬೇಕಿದ್ದ ಸಂದರ್ಭದಲ್ಲಿ ಸೀರಿಯಲ್‌ನಲ್ಲಿ ಮಾನ್ಯಳ ಎಂಟ್ರಿ ಆಗುತ್ತದೆ. ಗೌತಮ್‌ ಟೆನ್ಷನ್‌ನಲ್ಲಿದ್ದಾನೆ. ಗೌತಮ್‌ ಜೀವನದಲ್ಲಿ ಮಾನ್ಯಳ ಪಾತ್ರ ಏನು ಎಂಬ ಕುತೂಹಲ ಎಲ್ಲರಲ್ಲಿಯೂ ಮೂಡುತ್ತದೆ. ಮಾನ್ಯಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.

"ಮಾನ್ಯ ಏಕೆ ಇಲ್ಲಿಗೆ ಬಂದಳು" ಎಂದು ಗೌತಮ್‌ ಯೋಚಿಸುತ್ತಾನೆ. ವಿಷಯ ಗೊತ್ತಿಲ್ಲದ ಭೂಮಿಕಾ "ಟೆನ್ಷನ್‌ ಮಾಡಬೇಡಿ, ಎಲ್ಲಾ ಸರಿ ಹೋಗುತ್ತೆ" ಎಂದು ಸಮಧಾನ ಮಾಡುತ್ತಾಳೆ. ಇನ್ನೊಂದೆಡೆ ಶಕುಂತಲಾದೇವಿ ಮತ್ತು ಮಾವ "ಮಾನ್ಯ ಗೌತಮ್‌ ಕೈಗೆ ಸಿಗಬಾರದು" ಎಂದು ಹೇಳುತ್ತಾಳೆ. "ಅವಳು ಸಿಕ್ಕರೆ ಏನು ಪ್ರಾಬ್ಲಂ, ಮಾನ್ಯಳನ್ನು ಕಂಡ್ರೆ ಗೌತಮ್‌ಗೆ ದ್ವೇಷ" ಎಂದು ಮಾವ ಹೇಳುತ್ತಾಳೆ. ಆ ಸಮಯದಲ್ಲಿ ಗೌತಮ್‌ ಫೋನ್‌ ಮಾಡುತ್ತಾನೆ. "ಮಾನ್ಯಗಳಿಗೆ ಆಕ್ಸಿಡೆಂಟ್‌ ಆಗಿದೆ" ಎಂಬ ವಿಚಾರ ತಿಳಿಸುತ್ತಾನೆ. ಅವಳಿಗೆ ಪ್ರಜ್ಞೆ ಬರುವ ಮೊದಲು ನಾನು ಅಲ್ಲಿ ಇರಬೇಕು ಎಂದು ಶಕುಂತಲಾ ಆಸ್ಪತ್ರೆಗೆ ಹೋಗುತ್ತಾಳೆ. "ಏನೂ ಗಾಯ ಕಾಣ್ತಾ ಇಲ್ಲ. ಎಲ್ಲಾದರೂ ಇಂಟರ್ನಲ್‌ ಇಂಜ್ಯೂರಿ ಆಗಿದೆಯ ನೋಡಬೇಕು. ಎಂಆರ್‌ಐ ಸ್ಕ್ಯಾನ್‌ ಮಾಡಬೇಕು. ಅವಳಿಗೆ ಪ್ರಜ್ಞೆ ಬರಬೇಕು" ಎಂದು ಡಾಕ್ಟರ್‌ ಹೇಳುತ್ತಾರೆ. ಗೌತಮ್‌ ಮನೆಗೆ ಹೋಗೋಣ ಅನ್ನುತ್ತಾನೆ. "ಅವಳಿಗೆ ಪ್ರಜ್ಞೆ ಬಂದರೆ ನಾವಿಲ್ಲಿ ಇರಬಾರದು" ಎಂದುಕೊಳ್ಳುತ್ತಾನೆ. ಆಗ ಶಕುಂತಲಾದೇವಿ ಬರುತ್ತಾರೆ. ಗೌತಮ್‌ಗೆ ಧೈರ್ಯ ಹೇಳ್ತಾರೆ.

ಜೀವನ್‌ ಸಂಗೀತ ಲೋಕದಲ್ಲಿ ಮುಳುಗಿರ್ತಾನೆ. ಆಗ ಮಹಿಮಾ ಬರುತ್ತಾಳೆ. "ಎಲ್ಲರನ್ನೂ ಅಂದುಕೊಂಡಿರುವಂತೆ ಅಬಾರ್ಷನ್‌ ಆಗಿರೋದು ಆಕ್ಸಿಡೆಂಟ್‌ನಿಂದ ಅಲ್ಲ. ಅದು ನನ್ನಿಂದ. ನಾನೇ ಅಬಾರ್ಷನ್‌ ಮಾಡಿಸಿದ್ದೆ" ಎಂದು ಸತ್ಯ ಹೇಳುತ್ತಾಳೆ. "ಮಗು ಆದ ಮೇಲೆ ಗಂಡ ಕಡಿಮೆ ಪ್ರೀತಿಸ್ತಾರೆ ಎಂದೆಲ್ಲ ಯಾರೆಲ್ಲ ಹೇಳಿದ್ರು. ಆ ಭಯದಲ್ಲಿ ಅಬಾರ್ಷನ್‌ ಮಾಡಿಸಿದೆ" ಎಂದು ಹೇಳುತ್ತಾಳೆ. ಕೋಪದಿಂದ ಜೀವನ್‌ ಒಂದೇಟು ಹೊಡಿತಾನೆ. "ಮಗುವನ್ನು ಕೊಂದ ರಾಕ್ಷಸಿ, ನಿನ್ನನ್ನು ನಾನು ಕ್ಷಮಿಸಬೇಕ" ಎನ್ನುತ್ತಾನೆ. ಸೀರಿಯಲ್‌ ಮುಂದುವರೆಯುತ್ತದೆ.