Amruthadhaare: ನಾನು ಇಲ್ಲೇ ಇರಲು ಬಂದವಳು ಅನ್ತಾಳೆ ಮಾನ್ಯ; ಕಿರಾತಕ ಬುದ್ಧಿ ತೋರಿಸಿದ ಶಕುಂತಲಾ, ತುಪ್ಪದ ವಿಷ್ಯದಲ್ಲಿ ಸಿಕ್ಕಿಬಿದ್ರ ಗೌತಮ್
Amruthadhaare Serial Story: ಅಮೃತಧಾರೆ ಧಾರಾವಾಹಿಯ ಶನಿವಾರದ ಸಂಚಿಕೆಯಲ್ಲಿ ಮಾನ್ಯ ಭೂಮಿಕಾಳಿಗೆ ಸತ್ಯ ಹೇಳಲು ಪ್ರಯತ್ನಿಸುತ್ತಾಳೆ. ಮಾನ್ಯಳ ತಾಯಿಯನ್ನು ನೆನಪಿಸಿ ಶಕುಂತಲಾ ಎಚ್ಚರಿಕೆ ನೀಡುತ್ತಾರೆ. ಗೌತಮ್ ಊಟದ ಸಮಯದಲ್ಲಿ ಮಾನ್ಯಳಿಗೆ ತುಪ್ಪ ಇಷ್ಟ ಅನ್ತಾನೆ.

Amruthadhaare Serial: ಶಕುಂತಲಾದೇವಿ, ಜೈದೇವ್, ಮಾವ ಮಾತುಕತೆಯಲ್ಲಿದ್ದಾರೆ. ಎಲ್ಲಾದರೂ ಮಾನ್ಯ ಭೂಮಿಕಾಳ ಬಳಿ ವಿಷಯ ಹೇಳಿದರೆ ಈ ಮನೆಯಲ್ಲಿ ಪ್ರಳಯವೇ ಆಗಬಹುದು ಎಂದು ಮಾತನಾಡುತ್ತಿರುವಾಗ ಮಾನ್ಯ ಅಲ್ಲಿಗೆ ಬಂದು "ಸರಿಯಾಗಿಯೇ ಹೇಳಿದ್ದೀರಿ" ಎನ್ನುತ್ತಾಳೆ. "ನಿಮ್ಮ ಜತೆ ನಾಲ್ಕು ದಿನ ಇದ್ದು ಹೋಗೋಕ್ಕೆ ಬಂದವಳು ನಾನಲ್ಲ. ಇಲ್ಲೇ ಇರಲು ಬಂದವಳು" ಎನ್ನುತ್ತಾಳೆ. ಇಷ್ಟು ದಿನ ನೀವು ನನಗೆ ನೀಡಿದ ಟಾರ್ಚರ್ ಒಂದ ಎರಡ ಎನ್ನುತ್ತಾಳೆ. ಕರ್ಮ ರಿಟರ್ನ್ಸ್ ವಿತ್ ಇಂಟ್ರೆಸ್ಟ್ ಅನ್ನುತ್ತಾಳೆ. "ಇಷ್ಟು ದಿನ ನಾನು ಅನುಭವಿಸಿದ್ದೀನಿ, ಇನ್ನು ನೀವು ಅನುಭವಿಸಿ, ಈ ಮನೆಯಲ್ಲಿ ನನ್ನ ಜಾಗ ಏನಿದೆಯೋ ಅದನ್ನು ಕಿತ್ಕೋತ್ತೀನಿ, ನಾನು ಇಷ್ಟು ದಿನ ಸೋತಿರಲಿಲ್ಲ. ಸೋತವರ ರೀತಿ ಇದ್ದೆ. ಇಷ್ಟು ದಿನ ನೀವು ರೂಲ್ ಮಾಡ್ತಾ ಇದ್ರಿ, ಇನ್ಮುಂದೆ ನಾನು ರೂಲ್ ಮಾಡ್ತಿನಿ" ಎಂದೆಲ್ಲ ಬಾಂಬ್ ಹಾಕಿ ಮಾನ್ಯ ಅಲ್ಲಿಂದ ಹೋಗುತ್ತಾಳೆ. ಶಕುಂತಲಾದೇವಿ, ಮಾವ, ಜೈದೇವ್ ಆತಂಕದಿಂದ ಇದ್ದಾರೆ.
ಭೂಮಿಕಾಗೆ ಹೇಳಬೇಡ ಎಂದು ವಿನಂತಿಸಿದ ಶಕುಂತಲಾದೇವಿ
ಮತ್ತೆ ಮಾನ್ಯಳಲ್ಲಿ ಶಕುಂತಲಾದೇವಿ ಮಾತನಾಡುತ್ತಾರೆ. ಯಾಕೆ ಇಲ್ಲಿಗೆ ಬಂದೆ, ಹೋಗು ಅನ್ನುತ್ತಾರೆ. ನೀವು ನೀಡಿದ ಟಾರ್ಚರ್‌ನಿಂದ ಓಡಿ ಹೋಗಬೇಕು ಅಂದುಕೊಂಡಿದ್ದೆ, ವಿಧಿ ಇಲ್ಲಿಗೆ ಕರೆದುಕೊಂಡು ಬಂದಿದೆ ಎಂದು ಮಾನ್ಯ ಹೇಳುತ್ತಾಳೆ. "ನಿನಗೆ ಏನು ಬೇಕು ಕೊಡುವೆ, ಹೋಗು" ಅನ್ತಾರೆ ಶಕುಂತಲಾದೇವಿ. "ನಾನು ಗೌತಮ್‌ನಲ್ಲಿ ಎಲ್ಲಾ ಸತ್ಯ ಹೇಳಬೇಕು ಅಂದುಕೊಂಡಿದ್ದೆ. ಆದರೆ, ಗೌತಮ್‌ನಲ್ಲಿ ಹೇಳುವ ವಿಚಾರವನ್ನು ಭೂಮಿಕಾ ಬಳಿ ಹೇಳುವೆ" ಅನ್ನುತ್ತಾಳೆ ಮಾನ್ಯ. "ಹಾಗೆ ಮಾಡಬೇಡ, ಈ ವಿಚಾರ ಭೂಮಿಕಾಳಿಗೆ ಗೊತ್ತಾಗಬಾರದು" ಎಂದು ವಿನಂತಿಸ್ತಾರೆ ಶಕುಂತಲಾ. "ಹೇಳಿಯೇ ಹೇಳ್ತಿನಿ" ಎಂದು ಮಾನ್ಯ ಅಲ್ಲಿಂದ ಹೋಗ್ತಾಳೆ.
ಭೂಮಿಕ ಮಾನ್ಯ ಉಭಯಕುಶಲೋಪರಿ
ಮಾನ್ಯಗಳಿಗೆ ಭೂಮಿಕಾ ಎದುರಾಗುತ್ತಾಳೆ. ಇಬ್ಬರು ಮಾತು ಆರಂಭಿಸುತ್ತಾರೆ. "ನಿಮ್ಮಲ್ಲಿ ಎಲ್ಲವೂ ಇದೆ. ಶ್ರೀಮಂತಿಕೆ ಇದ್ದರೂ ಸಿಂಪಲ್ ಆಗಿದ್ದೀರಿ" ಎಂದು ಮಾನ್ಯ ಹೇಳುತ್ತಾಳೆ. " ಇನ್ಫೋಸಿಸ್‌ನ ಸುಧಾಮೂರ್ತಿ ರೀತಿ ಸರಳವಾಗಿರುವುದು ಇಷ್ಟ" ಎಂದು ಹೇಳುತ್ತಾಳೆ. "ಇಷ್ಟು ಒಳ್ಳೆಯ ಮನಸ್ಸಿನವರು ಈ ಮನೆಗೆ ಬಂದು ಸೇರಿಕೊಂಡಿದ್ದಾರೆ" ಎಂದುಕೊಳ್ಳುತ್ತಾಳೆ ಮಾನ್ಯ. ನಿಮ್ಮದು ರಿಚ್ ಫ್ಯಾಮಿಲಿಯ ಎಂದು ಕೇಳುತ್ತಾಳೆ. ನಾವು ಮಿಡ್‌ಕ್ಲಾಸ್‌ನವರು ಎಂದು ತನ್ನ ಮದುವೆಯ ಕಥೆ ಹೇಳುತ್ತಾಳೆ. "ನಿಮ್ಮಿಬ್ಬರ ನಡುವೆ ಗಂಡ ಹೆಂಡತಿ ಬಾಂಡಿಂಗ್ ಇದೆಯಾ?" ಎಂದು ಕೇಳುತ್ತಾಳೆ. "ನನಗಂತೂ ಅವರ ಬಗ್ಗೆ ಸಿಕ್ಕಾಪಟ್ಟೆ ಫೀಲಿಂಗ್ ಇದೆ" ಎಂದು ಭೂಮಿಕಾ ತನ್ನ ಪ್ರೀತಿಯ ಕುರಿತು ಹೇಳಿಕೊಳ್ಳುತ್ತಾಳೆ. "ನೀವು ಅಷ್ಟು ಪ್ರೀತಿಸ್ತೀರಿ, ಆದರೆ, ಅವರು ರಿಸರ್ವ್ಡ್ ಅನಿಸುತ್ತೆ. ಬಿಸಿನೆಸ್ ಮೆನ್‌ಗಳು ಹಾಗಿರುತ್ತರಲ್ವ" ಎಂದು ಕೇಳುತ್ತಾಳೆ. "ಅವರು ಒಳ್ಳೆಯ ಫ್ಯಾಮಿಲಿಮ್ಯಾನ್" ಎಂದು ಭೂಮಿಕಾ ಹೊಗಳುತ್ತಾಳೆ. "ಸಂಬಂಧದ ಬೆಲೆ ಗೊತ್ತಿಲ್ಲ ಇವನಿಗೆ" ಎಂದೆಲ್ಲ ಮಾನ್ಯ ಯೋಚನೆ ಮಾಡುತ್ತಾಳೆ.
ಇದನ್ನು ಓದಿ: ಅಮೃತಧಾರೆ ಧಾರಾವಾಹಿಯ ಎಲ್ಲಾ ಸಂಚಿಕೆಗಳು
ಕಿರಾತಕ ಬುದ್ಧಿ ತೋರಿಸಿದ ಶಕುಂತಲಾ
"ನಾವು ಅಂದುಕೊಳ್ಳುವುದು ಬೇರೆಯಾದರೆ ಸತ್ಯ ಬೇರೆಯದ್ದೇ ಇರುತ್ತದೆ" ಎಂದು ಏನೋ ಹೇಳಲು ಮುಂದಾದಗ ಅಲ್ಲಿಗೆ ಶಕುಂತಲಾದೇವಿ ಆಗಮಿಸಿ ಮಾತಿಗೆ ಅಡ್ಡಿಯಾಗುತ್ತಾರೆ. ಅಷ್ಟೊತ್ತಿಗೆ ಮಾನ್ಯಗಳಿಗೆ ಕಾಲ್ ಬರುತ್ತದೆ. "ಇಷ್ಟು ಬೇಗ ತಮ್ಮ ಕಿರಾತಕ ಬುದ್ದಿ ತೋರಿಸಿದ್ರು" ಎಂದು ಮಾನ್ಯಳ ಸ್ವಗತ ಇರುತ್ತದೆ. "ಇವಳು ತುಂಬಾ ಮಾತನಾಡಿದ್ಲು, ತಮ್ಮ ತಾಯಿಯ ಬಗ್ಗೆಯೂ ಹೇಳಿಕೊಂಡ್ಲು" ಎನ್ನುತ್ತಾರೆ ಶಕುಂತಲಾ. ಈ ಮೂಲಕ ಮತ್ತೊಂದೆಡೆ ಮಾನ್ಯಳ ತಾಯಿಯನ್ನು ಅಪಾಯದಲ್ಲಿಟ್ಟುಕೊಂಡು ವಿಷಯ ಹೇಳದಂತೆ ಬಾಯಿಮುಚ್ಚಿಸುವ ಯತ್ನ ನಡೆದಿದೆ. ಈ ಸಮಯದಲ್ಲಿ ಶಕುಂತಲಾದೇವಿ ಮಾನ್ಯಳ ತಾಯಿಯನ್ನು ಹೊಗಳುವಂತೆ ಮಾತನಾಡುತ್ತಾರೆ. ಈ ಮೂಲಕ ಇನ್‌ಡೈರೆಕ್ಟ್ ಆಗಿ ಎಚ್ಚರಿಕೆ ನೀಡುತ್ತಾರೆ. "ಇವರ ತಾಯಿ ಹಾರ್ಟ್ ಪೇಷೆಂಟ್, ಅದಕ್ಕೆ ಆಕ್ಸಿಡೆಂಟ್ ಆಗಿರೋ ವಿಷಯ ಹೇಳಿಲ್ಲ" ಎಂದೆಲ್ಲ ಹೇಳುತ್ತಾರೆ. ಹೀಗಾಗಿ ಮಾನ್ಯಳಿಗೆ ಭೂಮಿಕಾಳಲ್ಲಿ ವಿಷಯ ಹೇಳಲು ಸಾಧ್ಯವಾಗುವುದಿಲ್ಲ. ಅಮ್ಮನ ಬಿಟ್ಟು ಬೇರೆ ಯಾರೂ ಇಲ್ಲ, ನನಗೆ ಮದುವೆಯಾಗಿಲ್ಲ. ನಾನು ಸಾಕಷ್ಟು ಕಳೆದುಕೊಂಡಿದ್ದೇನೆ. ಅದನ್ನೆಲ್ಲ ಪಡೆಯಬೇಕು ಎಂದುಕೊಂಡಿದ್ದೇನೆ ಎನ್ನುತ್ತಾಳೆ ಮಾನ್ಯ. ವಿಷಯ ಗೊತ್ತಿಲ್ಲದೆ ಭೂಮಿಕಾ ಆಲ್‌ದಿ ಬೆಸ್ಟ್ ಹೇಳುತ್ತಾರೆ.
ಗೌತಮ್ ತುಪ್ಪದ ವಿಷಯ
ಆ ಸಮಯದಲ್ಲಿ ಮಹಿಮಾ ಬರುತ್ತಾರೆ. ಆಕೆಯ ಜತೆ ಮಾತುಕತೆಯಾಗುತ್ತದೆ. ಆಕ್ಸಿಡೆಂಟ್ ಕಥೆ ಹೇಳಿ ಪರಿಚಯದ ವಿಷಯ ಮಾತನಾಡುತ್ತಾರೆ. ಮಹಿಮಾಳಿಗೆ ಏನೋ ಮಾತನಾಡಲು ಇದೆ ಎಂದು ಅಲ್ಲಿಂದ ಹೋಗುತ್ತಾಳೆ. ಜ್ಯೋತಿಷಿಗಳು ನಿಮಗೆ ಗಂಡಾಂತರ ಇದೆ ಎಂದು ಹೇಳಿದ್ದಾರೆ ಎಂದು ಮಹಿಮಾ ಮಾಹಿತಿ ನೀಡುತ್ತಾಳೆ. "ಏನೇ ಆಗಬೇಕೋ ಅದೇ ಆಗುತ್ತದೆ. ಇವತ್ತಿನ ಖುಷಿ ಕಳೆದುಕೊಳ್ಳಬಾರದು. ಭವಿಷ್ಯ ಕ್ರಿಯೆಟ್ ಮಾಡುವುದು ನಮ್ಮ ಕೈಯಲ್ಲಿದೆ. ನೀನು ಧೈರ್ಯವಾಗಿರು, ಹಾಗೆನಾದರೂ ಆದ್ರೆ ನಾನು ಫೇಸ್ ಮಾಡ್ತಿನಿ" ಎಂದೆಲ್ಲ ಭೂಮಿಕಾ ಧೈರ್ಯವಾಗಿ ಮಾತನಾಡುತ್ತಾಳೆ. ಇದು ಮುಂಬರುವ ಎಪಿಸೋಡ್‌ಗಳ ಮುನ್ಸೂಚನೆಯೂ ಆಗಿರಬಹುದು.
ನಿನ್ನೆಯ ಸಂಚಿಕೆಯಲ್ಲಿ ಒಂದು ಕಾಮಿಡಿಯೂ ನಡೆದಿದೆ. ಎಲ್ಲರೂ ಊಟಕ್ಕೆ ಕುಳಿತಿದ್ದಾರೆ. ಮಾನ್ಯ, ಭೂಮಿಕಾ, ಶಕುಂತಲಾ, ಮಲ್ಲಿ ಗೌತಮ್ ಎಲ್ಲರೂ ಇದ್ದಾರೆ. ಆ ಸಮಯದಲ್ಲಿ ಅಡಿಗೆಯವಳು ಮಾನ್ಯಳಿಗೆ "ಮ್ಯಾಮ್ ತುಪ್ಪ" ಅನ್ತಾಳೆ. ಆ ಸಮಯದಲ್ಲಿ ಹಳೆಯ ನೆನಪಿನಲ್ಲಿ ಗೌತಮ್ "ಹಾಕಿ, ಅವಳಿಗೆ ತುಪ್ಪಾ ಅಂದ್ರೆ ತುಂಬಾ ಇಷ್ಟ" ಅನ್ನುತ್ತಾನೆ. ಎಲ್ಲರಿಗೂ ಆಶ್ಚರ್ಯವಾಗುತ್ತದೆ. "ಮಾನ್ಯಳಿಗೆ ತುಪ್ಪ ಇಷ್ಟ ಅಂತ ಇವರಿಗೆ ಹೇಗೆ ಗೊತ್ತು?" ಎಂದು ಭೂಮಿಕಾ ಯೋಚಿಸುತ್ತಾಳೆ. "ಅಣ್ಣಾ ಅವರಿಗೆ ತುಪ್ಪಾ ಇಷ್ಟ ಅಂತ ನಿನಗೆ ಹೇಗೆ ಗೊತ್ತು?" ಅಂತ ಮಹಿಮಾ ಕೇಳುತ್ತಾಳೆ. "ಕಾಮನ್ ಸೆನ್ಸ್, ತುಪ್ಪಾ ಎಲ್ಲರಿಗೂ ಇಷ್ಟ" ಎಂದು ಗೌತಮ್ ಹೇಳುತ್ತಾನೆ. "ನನಗೆ ತುಪ್ಪಾ ಇಷ್ಟ ಅಂತ ಇವನಿಗೆ ನೆನಪಿದೆ, ಪರವಾಗಿಲ್ಲ, ಎಲ್ಲಾ ಮರೆತಿದ್ದಾನೆ" ಎಂದು ಮಾನ್ಯ ಅಂದುಕೊಳ್ಳುತ್ತಾಳೆ. ಸೀರಿಯಲ್ ಮುಂದುವರೆಯುತ್ತದೆ.

ವಿಭಾಗ