Amruthadhaare: ಮತ್ತೆ ಮಲ್ಲಿ ಕೆನ್ನೆಗೆ ಛಟೀರ್‌ ಎಂದು ಹೊಡೆದ ಜೈದೇವ್‌; ಮುತ್ತು ನೀಡಿದ ಗೌತಮ್‌ಗೆ ಭಯ; ಖುಷಿಗೆ ಅಕ್ಷರರೂಪ ನೀಡಿದ ಭೂಮಿಕಾ
ಕನ್ನಡ ಸುದ್ದಿ  /  ಮನರಂಜನೆ  /  Amruthadhaare: ಮತ್ತೆ ಮಲ್ಲಿ ಕೆನ್ನೆಗೆ ಛಟೀರ್‌ ಎಂದು ಹೊಡೆದ ಜೈದೇವ್‌; ಮುತ್ತು ನೀಡಿದ ಗೌತಮ್‌ಗೆ ಭಯ; ಖುಷಿಗೆ ಅಕ್ಷರರೂಪ ನೀಡಿದ ಭೂಮಿಕಾ

Amruthadhaare: ಮತ್ತೆ ಮಲ್ಲಿ ಕೆನ್ನೆಗೆ ಛಟೀರ್‌ ಎಂದು ಹೊಡೆದ ಜೈದೇವ್‌; ಮುತ್ತು ನೀಡಿದ ಗೌತಮ್‌ಗೆ ಭಯ; ಖುಷಿಗೆ ಅಕ್ಷರರೂಪ ನೀಡಿದ ಭೂಮಿಕಾ

Amruthadhaare Serial Story: ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅಮೃತಧಾರೆ ಧಾರಾವಾಹಿಯ ಭಾನುವಾರದ ಸಂಚಿಕೆಯಲ್ಲಿ ಮಾನ್ಯ ಬರೆದ ಪತ್ರವನ್ನು ಭೂಮಿಕಾ ಓದುತ್ತಾಳೆ. ಇದಕ್ಕೂ ಮೊದಲು ಮಾನ್ಯಳಿಗೆ ಮಲ್ಲಿಯ ಕಷ್ಟ ಕಾಣಿಸುತ್ತದೆ. ಆಕೆ ಮಲ್ಲಿಗೆ ಎಚ್ಚರಿಕೆಯಿಂದ ಇರುವಂತೆ ಹೇಳುತ್ತಾಳೆ.

ಮುತ್ತು ನೀಡಿದ ಗೌತಮ್‌ಗೆ ಭಯ; ಖುಷಿಗೆ ಅಕ್ಷರರೂಪ ನೀಡಿದ ಭೂಮಿಕಾ
ಮುತ್ತು ನೀಡಿದ ಗೌತಮ್‌ಗೆ ಭಯ; ಖುಷಿಗೆ ಅಕ್ಷರರೂಪ ನೀಡಿದ ಭೂಮಿಕಾ

Amruthadhaare Serial: ಗೌತಮ್‌ ಮತ್ತು ಆನಂದ್‌ ಮಾತುಕತೆ ನಡೆಯುತ್ತ ಇರುತ್ತದೆ. ಗೌತಮ್‌ ಮುಖದಲ್ಲಿ ಏನೋ ಕಾಂತಿ ಕಾಣ್ತಾ ಇದೆ ಎನ್ತಾನೆ ಆನಂದ್‌. "ಹಾಗೆ ನೋಡಬೇಡ, ಭೂಮಿಕಾ ಅವರು ಸ್ಟ್ರಾಂಗ್‌ ಆಗಿ ದೃಷ್ಟಿ ತೆಗೆಯಬೇಕಾಗುತ್ತದೆ" ಅನ್ತಾರೆ ಗೌತಮ್‌. ಜೀವನದ ಕುರಿತು ಒಂದಿಷ್ಟು ಮಾತನಾಡ್ತಾರೆ. ನಿನ್ನ ಖುಷಿಯನ್ನು ಹುಡುಕು, ಅತ್ತಿಗೆಯ ಹತ್ರ ನಿನ್ನ ಮನಸ್ಸಿನಲ್ಲಿ ಇರುವುದನ್ನು ಹಂಚಿಕೊಳ್ಳು ಎನ್ನುತ್ತಾನೆ ಆನಂದ್‌.

ಮನೆಯಲ್ಲಿ ಶಕುಂತಲಾದೇವಿ ಮತ್ತು ಮಹಿಮಾ ಮಾತನಾಡುತ್ತಾರೆ. "ಜೈದೇವ್‌ಗೆ ಕಂಪೇರ್‌ ಮಾಡಿದರೆ ನಾನು ಬೆಟರ್‌ ಅಲ್ವ?" ಎನ್ನುತ್ತಾಳೆ ಮಹಿಮಾ. "ನಿನ್ನ ಸಪೋರ್ಟ್‌ನಿಂದ ಅವನು ಈ ರೀತಿ ಆಗಿರೋದು" ಎಂದು ತಾಯಿಗೆ ಹೇಳುತ್ತಾಳೆ. "ಅಪೇಕ್ಷಾ ಬದಲು ಮಲ್ಲಿ ಬಂದಂತೆ, ಹಿಸ್ಟರಿ ರಿಪೀಟ್‌ ಆಗುತ್ತೆ" ಎಂದಾಗ ಶಕುಂತಲಾದೇವಿ ಯೋಚನೆಗೆ ಬೀಳುತ್ತಾಳೆ. "ಪ್ರೀತಿಯಲ್ಲಿ ಆ ಮನೆಗೆ ಕೊರತೆ ಇಲ್ಲ. ಇಲ್ಲಿ ಎಲ್ಲವೂ ವಿರುದ್ಧ. ಇಲ್ಲಿ ನನ್ನವರು ಅನ್ನೋ ಪ್ರೀತಿ ಇಲ್ಲ" ಎಂದು ಹೇಳುತ್ತಾಳೆ ಮಹಿಮಾ. ಜತೆಗೆ ಭೂಮಿಕಾಳನ್ನೂ ಹೊಗಳುತ್ತಾಳೆ.

ಇನ್ನೊಂದೆಡೆ ಮಲ್ಲಿ ಚಿಂತೆ ಮಾಡ್ತಾ ಇದ್ದಾಳೆ. ಪುಸ್ತಕ ಓದುವಾಗ ಇದು ಅರ್ಥ ಆಗ್ತಾ ಇಲ್ಲ, ನನಗೆ ಹೇಳಿಕೊಡ್ರಿ ಎಂದು ಜೈದೇವ್‌ಗೆ ಹೇಳುತ್ತಾಳೆ. ಆತ ಎಂದಿನಂತೆ ಬೈತಾನೆ. ಎದುರು ಮಾತಾಡ್ತಿಯ ಎಂದು ಕೆನ್ನೆಗೆ ಹೊಡೀತಾನೆ. ಮಲ್ಲಿ ಅಳುತ್ತಾ ಇದ್ದಾಗ ಅಲ್ಲಿಗೆ ಶಕುಂತಲಾದೇವಿ ಬರುತ್ತಾರೆ. ನೋಡಿ ಅಲ್ಲಿಂದ ಹೋಗುತ್ತಾರೆ.

ಗೌತಮ್‌ ಯೋಚನೆ ಮಾಡ್ತಾ ಇದ್ದಾನೆ. ಆತನಿಗೆ ಆನಂದ್‌ ಹೇಳುವ ಖುಷಿಯ ಮಾತುಗಳು ನೆನಪಿಗೆ ಬರುತ್ತದೆ. ಅಲ್ಲಿಗೆ ಭೂಮಿಕಾ ಬರುತ್ತಾಳೆ. ಲೈಫ್‌ ಕುರಿತು ಭೂಮಿಕಾಳ ಬಳಿ ಹೇಳುತ್ತಾನೆ. ಇತ್ತೀಚೆಗೆ ಆಫೀಸ್‌ನ ಯುವ ಉದ್ಯೋಗಿ ಕಾರ್ಡಿಯಾಕ್‌ ಅರೆಸ್ಟ್‌ನಿಂದ ಮೃತಪಟ್ಟ ಕುರಿತು ಮಾತನಾಡ್ತಾನೆ. "ಮಾಡಬೇಕಾದ್ದನ್ನು ಮಾಡದೆ, ಹೇಳಬೇಕಾದ್ದನ್ನು ಹೇಳದೆ ಹೋಗ್ತಿವಿ" ಎಂದು ಮಾತನಾಡುತ್ತಾನೆ. "ಭಯ ನಮ್ಮನ್ನು ಕಟ್ಟಿ ಹಾಕುತ್ತದೆ. ಭಯ ನಮ್ಮ ಶತ್ರು" ಎಂದು ಭೂಮಿಕಾ ಹೇಳುತ್ತಾಳೆ. ಒಟ್ಟಾರೆ ಮನಸ್ಸಿನ ಮಾತನ್ನು ಹೇಳಲು ಗೌತಮ್‌ ಹೇಳುತ್ತಾನೆ. ನಾನು ನಿಮಗೆ ಏನೋ ಹೇಳಬೇಕು ಎಂದು ಹೇಳುತ್ತಾನೆ. ಆದರೆ, ಧೈರ್ಯ ಸಾಲುತ್ತಿಲ್ಲ.

"ನಿಮ್ಮ ಬಗ್ಗೆ" ಎಂದು ಹೇಳಿದಾಗ ಅವಳಿಗೂ ಖುಷಿಯಾಗುತ್ತದೆ. "ನನ್ನ ಬಗ್ಗೆ ಇವರ ಮನಸ್ಸಲ್ಲಿ ಏನೋ ಇದೆ. ಹೇಳಲು ಒದ್ದಾಡುತ್ತ ಇದ್ದಾರೆ. ನಾನೇ ನನ್ನ ಮನಸ್ಸಲ್ಲಿ ಇರುವುದನ್ನು ಹೇಳುತ್ತೇನೆ" ಎಂದುಕೊಳ್ಳುತ್ತಾಳೆ. ಅವಳಿಗೂ ಧೈರ್ಯ ಸಾಲುತ್ತಿಲ್ಲ. "ನಿಮಗೆ ಹೇಗೆ ಆಗುತ್ತದೆಯೋ, ನನಗೂ ಹಾಗೇ ಆಗುತ್ತದೆ" ಎನ್ನುತ್ತಾಳೆ. "ಅವರ ಬಗ್ಗೆ ನಾನು ಪ್ರೀತಿ ಮಾತುಗಳನ್ನು ಬರೆದಿದ್ದೆ. ಆ ಡೈರಿಯನ್ನು ತೋರಿಸ್ತಿನಿ" ಎಂದುಕೊಳ್ಳುತ್ತಾಳೆ. ಮುತ್ತು ಕೊಡಲೇಬೇಕು ಎಂಬ ಆನಂದ್‌ ಮಾತು ನೆನಪಿಗೆ ಬರುತ್ತದೆ. ಮನಸ್ಸಲ್ಲಿ ಇರೋದನ್ನು ಹೇಳಲಾಗುತ್ತಿಲ್ಲ. ಮುತ್ತು ಕೊಟ್ಟು ಬಿಡುವೆ ಎಂದು ಗೌತಮ್‌ ಹತ್ತಿರ ಹೋಗುತ್ತಾನೆ. ಭೂಮಿಕಾ ಡೈರಿ ತೋರಿಸಲು ರೆಡಿಯಾಗುತ್ತಾಳೆ. ಆಕೆ ತಿರುಗಿದಾಗ, ಇವನೂ ಆ ಕಡೆಗೆ ತಿರುಗಿ ಕಿಸ್‌ ನೀಡಿ ಬಿಡುತ್ತಾನೆ. ಇಬ್ಬರೂ ಒಂದಿಷ್ಟು ಕ್ಷಣ ಕಾಲವೇ ತಟಸ್ಥಗೊಂಡಂತೆ ಕಣ್ಣು ಮುಚ್ಚಿಕೊಂಡು ಮೈಮರೆಯುತ್ತಾರೆ. ಕೊನೆಗೆ ಕಣ್ಣು ತೆರೆಯುತ್ತಾರೆ.

ಭೂಮಿಕಾ ಮುತ್ತಿನ ಶಾಕ್‌ನಲ್ಲಿಯೇ ಇರುತ್ತಾಳೆ. ಗೌತಮ್‌ ಟೆನ್ಷನ್‌ನಲ್ಲಿ ಅಲ್ಲಿಂದ ಹೋಗುತ್ತಾರೆ. ಭೂಮಿಕಾ ಮನದಲ್ಲಿ ಹೇಳಲಾಗದ ಭಾವ, ಖುಷಿ, ನಗುತ್ತಾ, ಭಾವನಾತ್ಮಕವಾಗಿ ಖುಷಿ ಪಡುತ್ತಾಳೆ. ಆನಂದ್‌ ಆಫೀಸ್‌ಗೆ ಬಂದಾಗ ಗೌತಮ್‌ ಏನೋ ಯೋಚನೆಯಲ್ಲಿರುತ್ತಾನೆ. ಪತ್ನಿ ಅಪರ್ಣಾಳಿಗೆ ಫೋನ್‌ ಮಾಡಿ "ಡುಮ್ಮ ಸರ್‌ ಮತ್ತು ಅತ್ತಿಗೆ ನಡುವೆ ಏನೋ ನಡೆದಿದೆ ಸ್ವಲ್ಪ ವಿಚಾರಿಸು" ಎಂದು ಹೇಳುತ್ತಾನೆ. ಬಳಿಕ ಗೌತಮ್‌ ಜತೆ ಮಾತನಾಡುತ್ತಾನೆ. ಆನಂದ್‌ ಬಳಿ ಕಿಸ್‌ ನೀಡಿರುವ ಸಂಗತಿ ಹೇಳುತ್ತಾನೆ. ಗೆಳೆಯ ಸೂಪರ್‌ ಕಣೋ ಅಂತ ಆನಂದ ಪಡುತ್ತಾನೆ ಆನಂದ್‌. ಗೌತಮ್‌ಗೆ ಧೈರ್ಯ ಹೇಳುತ್ತಾನೆ. "ಇದರಿಂದ ಅತ್ತಿಗೆಗೆ ಖುಷಿಯೂ ಆಗಿರಬಹುದು" ಎಂದಾಗ ಗೌತಮ್‌ ಯೋಚನೆ ಮಾಡುತ್ತಾನೆ.

ಮತ್ತೊಂದೆಡೆ ಭೂಮಿಕಾ ಖುಷಿಯಲ್ಲಿ ಇರುತ್ತಾಳೆ. ಹಿನ್ನೆಲೆಯಲ್ಲಿ ಮಧುರವಾದ ಕೊಳಲ ಗಾನ. "ನನಗೆ ಎಷ್ಟು ಖುಷಿಯಾಗ್ತ ಇದೆ. ಈ ಖುಷಿಯನ್ನು ಯಾರಲ್ಲಿ ಹೇಳಿಕೊಳ್ಳಲ್ಲಿ. ನನ್ನ ಭಾವನೆಗಳಿಗೆ ಅಕ್ಷರದ ರೂಪ ಕೊಡೋದೇ ವಾಸಿ" ಎಂದು ಡೈರಿ ತೆಗೆದುಕೊಳ್ಳುತ್ತಾಳೆ. ಡೈರಿಯಲ್ಲಿ ಪ್ರೀತಿಯ ಕುರಿತು ಬರೆಯುತ್ತಾಳೆ. ಸೀರಿಯಲ್‌ ಮುಂದುವರೆಯುತ್ತದೆ.

Whats_app_banner