Amruthadhaare: ಈ ಮನೆ ಎಲ್ಲಾ ಮನೆಯಂತೆ ಅಲ್ಲ ಎಂದು ಮಲ್ಲಿಗೆ ಎಚ್ಚರಿಕೆ ನೀಡಿದ ಮಾನ್ಯ; ಭೂಮಿಕಾಗೆ ಬರೆದ ಪತ್ರದಲ್ಲಿ ಏನಿದೆ ರಹಸ್ಯ
Amruthadhaare Serial Story: ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅಮೃತಧಾರೆ ಧಾರಾವಾಹಿಯ ಭಾನುವಾರದ ಸಂಚಿಕೆಯಲ್ಲಿ ಮಾನ್ಯ ಬರೆದ ಪತ್ರವನ್ನು ಭೂಮಿಕಾ ಓದುತ್ತಾಳೆ. ಇದಕ್ಕೂ ಮೊದಲು ಮಾನ್ಯಳಿಗೆ ಮಲ್ಲಿಯ ಕಷ್ಟ ಕಾಣಿಸುತ್ತದೆ. ಆಕೆ ಮಲ್ಲಿಗೆ ಎಚ್ಚರಿಕೆಯಿಂದ ಇರುವಂತೆ ಹೇಳುತ್ತಾಳೆ.
Amruthadhaare Serial Sunday March 24 Episode: ಮಲ್ಲಿಗೆ ಫುಡ್ ಚೆಕ್ ಮಾಡಿ ಶಕುಂತಲಾದೇವಿ ನೀಡುತ್ತಾರೆ. ಇದನ್ನು ನೋಡಿ ಮಾನ್ಯಳಿಗೆ ಏನೋ ಅನುಮಾನ ಬರುತ್ತದೆ. ಮೋಸ್ಟ್ರಿಲಿ ಈ ಹುಡುಗಿಗೆ ಏನೋ ಪ್ರಾಬ್ಲಂ ಮಾಡಿದ್ದಾರೆ ಎಂದುಕೊಳ್ಳುತ್ತಾಳೆ. ಇದಾದ ಬಳಿಕ ಮಲ್ಲಿಯು ಜೈದೇವ್‌ಗೆ ಊಟ ತಂದುಕೊಡುತ್ತಾಳೆ. ಆ ಸಮಯದಲ್ಲಿ ಜೈದೇವ್ ಬೈತಾನೆ. "ಪ್ರೀತಿ ಇಲ್ಲದ ಬಾಳು ಬರಡುಭೂಮಿಯಂತೆ" ಎಂದು ಮಲ್ಲಿ ಹೇಳಿದಾಗ "ಹೌದು ಇದನ್ನೆಲ್ಲ ಎಲ್ಲಿ ಕಲಿತೆ" ಎಂದು ಜೈದೇವ್ ಕೇಳುತ್ತಾನೆ. "ಯಾರು ಹೇಳಿಕೊಟ್ಟದ್ದು ಆ ಭೂಮಿಕಾನ?" ಎಂದು ಅಬ್ಬರಿಸುತ್ತಾನೆ. ಮಲ್ಲಿಗೆ ಬೈಯುತ್ತ ಇರುವುದನ್ನು ಮಾನ್ಯ ಕೇಳಿಸಿಕೊಳ್ತಾಳೆ. "ಯೆಸ್, ಈ ಹುಡುಗಿಗೆ ಏನೋ ತೊಂದರೆ ಇದೆ" ಎಂದು ಮಾನ್ಯ ಅಂದುಕೊಳ್ಳುತ್ತಾಳೆ.
ಗೌತಮ್ ಟೆನ್ಷನ್‌ನಲ್ಲಿರುತ್ತಾನೆ. ಭೂಮಿಕಾ ಅಲ್ಲಿಗೆ ಬರುತ್ತಾಳೆ. "ಯಾಕೆ ಸರಿಯಾಗಿ ಊಟ ಮಾಡಿಲ್ಲ" ಎಂದು ಭೂಮಿಕಾ ಕೇಳುತ್ತಾಳೆ. "ಯಾವಾಗಲೂ ಎಂಜಾಯ್ ಮಾಡಿಕೊಂಡು ಹೊಟ್ಟೆತುಂಬಾ ಊಟ ಮಾಡ್ತಾ ಇದ್ದೀರಿ" ಎನ್ನುತ್ತಾಳೆ. ಮಾನ್ಯ ಹುಷಾರಿಲ್ಲ ಎಂಬ ಟೆನ್ಷನ್‌ನಲ್ಲಿದ್ದೀರಿ. ಅವಳು ಹುಷಾರಾಗಿ ಬಂದ್ಲು. ಆದರೆ ಈಗಲೂ ತುಂಬಾ ಸೀರಿಯಸ್ ಆಗಿದ್ದೀರಿ. ನೀವು ಈ ರೀತಿ ಇರಬೇಡಿ, ಏನಾಯ್ತು ಏನು ಪ್ರಾಬ್ಲಂ ಎಂದು ಕೇಳುತ್ತಾಳೆ. "ನನ್ನ ಲೈಪ್ ಪ್ರಾಬ್ಲಂ, ಇನ್ನೊಬ್ಬರಷ್ಟು ಹೇಳುವಷ್ಟು ಇಂಪಾರ್ಟೆಂಟ್ ಅಲ್ಲ" ಎಂದು ಹೇಳುತ್ತಾನೆ. "ಇದು ನಿಮ್ಮ ಬಗ್ಗೆ ಅಲ್ಲ. ಆ ತರ ಅಂದುಕೊಳ್ಳಬೇಡಿ" ಎಂದು ಹೇಳುತ್ತಾನೆ. "ಸರಿ ಇನ್ಮುಂದೆ ಏನೂ ಕೇಳೋಲ್ಲ" ಎಂದು ಭೂಮಿಕಾ ಅಲ್ಲಿಂದ ಹೋಗುತ್ತಾಳೆ. "ನಾನು ಕಾರಣ ಅಲ್ಲ, ಹಾಗಾದ್ರೆ ಬೇರೆ ಏನು ಕಾರಣ" ಎಂದು ಯೋಚಿಸುತ್ತಾಳೆ ಭೂಮಿಕಾ.
ಮಾನ್ಯ ಮಲ್ಲಿಯಲ್ಲಿಗೆ ಬರುತ್ತಾಳೆ. ನೀನು ಇನ್ನೂ ಚಿಕ್ಕವಳು. ಸ್ಕೂಲ್‌ಗೆ ಹೋಗೋ ರೀತಿ ಇದ್ದೀಯ. ನಿನ್ನನ್ನು ನೋಡಿದಾಗ ನನ್ನನ್ನು ನೋಡಿದಂತೆ ಆಗುತ್ತದೆ. ಸುತ್ತಮುತ್ತ ಎಲ್ಲರೂ ಇದ್ದರೂ ಒಬ್ಬಂಟಿಯಾಗಿರುವಂತೆ ಇದೆ. "ಎಲ್ಲರ ಮನೆಯಲ್ಲಿಯೂ ಇದ್ದದ್ದೇ" ಎನ್ನುತ್ತಾಳೆ ಮಲ್ಲಿ. "ಎಲ್ಲಾ ಮನೆಯಂತೆ ಅಲ್ಲ ಇದು, ಈ ಮನೆಯಲ್ಲಿ ಎಲ್ಲಾ ಜಾಸ್ತಿ. ಹುಷಾರಾಗಿ ಇರಬೇಕು" ಎಂದು ಮಾನ್ಯ ಹೇಳುತ್ತಾಳೆ. ಈ ಮನೆಯವರು ಹೇಗೆ ಅಂತ ನನಗಿಂತ ಇನ್ಯಾರಿಗೂ ಗೊತ್ತಿರಲು ಸಾಧ್ಯವಿಲ್ಲ ಎನ್ನುತ್ತಾಳೆ. "ಇಲ್ಲಿ ಯಾರೂ ಸರಿಯಿಲ್ಲ. ಯಾವುದೂ ಸರಿಯಿಲ್ಲ. ಅದು ನಿನಗೆ ನೆನಪಿರಲಿ" ಎಂದು ಹೇಳಿ ಮಾನ್ಯ ಹೋಗುತ್ತಾಳೆ. "ಇವಳು ಯಾರು, ಇವಳಿಗೆ ಹೇಗೆ ಗೊತ್ತು?" ಎಂದು ಮಲ್ಲಿ ಯೋಚಿಸುತ್ತಾಳೆ.
ಇದನ್ನು ಓದಿ: ಅಮೃತಧಾರೆ ಧಾರಾವಾಹಿಯ ಎಲ್ಲಾ ಸಂಚಿಕೆಗಳು
ಎಲ್ಲರೂ ಊಟಕ್ಕೆ ಕುಳಿತುಕೊಂಡಿದ್ದಾರೆ. ಊಟಕ್ಕೆ ಮಾನ್ಯ ಬಂದಿಲ್ವ ಎಂದು ಭೂಮಿಕಾ ಕೇಳುತ್ತಾಳೆ. ಅಡಿಗೆಯವಳು "ಮಾಮ್ ಅವರು ಹೋಗಿದ್ದಾರೆ" ಎಂದು ಹೇಳುತ್ತಾಳೆ. ನಿಮಗೆ ಒಂದು ಲೆಟರ್ ಕೊಟ್ಟಿದ್ದಾರೆ ಎಂದಾಗ ಎಲ್ಲರಿಗೂ ಆತಂಕವಾಗುತ್ತದೆ. ಭೂಮಿಕಾ ಆ ಪತ್ರವನ್ನು ಓದುತ್ತಾಳೆ. "ನಾನು ನಿಮಗೆ ಹೇಳದೆ ಹೋಗಿರಬಹುದು. ಆದರೆ, ನಾನು ವಾಪಸ್ ಬಂದೇ ಬರ್ತಿನಿ. ಥ್ಯಾಂಕ್ ಯು ಭೂಮಿಕಾ" ಎಂದು ಇದೆ ಎಂದು ಓದಿ ಹೇಳ್ತಾಳೆ. "ಭೂಮಿಕಾ ನೀವು ತುಂಬಾ ಒಳ್ಳೆಯವರು.... ಹೀಗೆ ಪತ್ರ ಓದುತ್ತಾಳೆ. ಭೂಮಿಕಾ ನಿಜವಾಗಿಯೂ ಅದರಲ್ಲಿ ಬರೆದಿರುವುದನ್ನೇ ಓದಿದ್ದಾರ? ಎನ್ನುವ ಸಂದೇಹ ಪ್ರೇಕ್ಷಕರಲ್ಲಿ ಮೂಡಿದೆ.
ಮಹಿಮಾ ಮತ್ತು ಭೂಮಿಕಾ ಮಾತನಾಡುತ್ತ ಇರುತ್ತಾರೆ. ಮನೆಗೆ ಹೋಗಿ ಆಕೆಗೆ ಭಯ ಇಲ್ಲ ಎಂದು ಹೇಳುತ್ತಾಳೆ ಭೂಮಿಕಾ. ನಾನು ನಮ್ಮ ಮನೆಯವರಿಗೆ ಹೀಗೆ ಹೊಂದಿಕೊಳ್ಳುತ್ತಿ ಅಂದುಕೊಂಡಿರಲಿಲ್ಲ. ಖುಷಿಯಾಗುತ್ತೆ ಅನ್ತಾರೆ ಭೂಮಿಕಾ. ನೀವು ಮತ್ತು ಅಣ್ಣಾ ಚೆನ್ನಾಗಿರಬೇಕು ಎಂದು ಹೇಳುತ್ತಾಳೆ ಮಹಿಮಾ.
ಗೌತಮ್ ಯೋಚನೆಯಲ್ಲಿದ್ದಾನೆ. ಶಕುಂತಲಾ ಬರುತ್ತಾರೆ. "ಅವಳು ಯಾಕೆ ಬಂದ್ಲು, ಎಲ್ಲಿಗೆ ಹೋದ್ಲು ಎಂದು ಭಯವಾಗ್ತ ಇದೆ" ಅನ್ತಾರೆ ಗೌತಮ್. ಯಾವಾಗ ಬರ್ತಾಳೋ, ಏನ್ ಮಾಡ್ತಾಳೋ ಎಂದು ಹೇಳುತ್ತಾನೆ. ಅವಳು ಹಾಗೆ ಹೋಗಿಲ್ಲ, ಭಯ ಹುಟ್ಟಿಸಿ ಹೋಗಿದ್ದಾಳೆ ಅನ್ತಾರೆ. "ಭಯಪಟ್ಟುಕೊಂಡು ಕೂತರೆ ಆಗದು. ನಿನಗೆ ನಿನ್ನದೇ ಆದ ಜವಾಬ್ದಾರಿ ಇದೆ. ಇದು ನಿನ್ನ ಪರ್ಸನಲ್ ಲೈಫ್ ಮೇಲೂ ಬೀಳುತ್ತದೆ" ಎಂದೆಲ್ಲ ಶಕುಂತಲಾದೇವಿ ಹೇಳ್ತಾರೆ. "ಮಾನ್ಯ ವಿಷಯ ಇಲ್ಲಿಗೆ ಬಿಡು. ಭೂಮಿಕಾಳಿಗೆ ಗಮನ ನೀಡು. ಮಾನ್ಯಳ ಬಗ್ಗೆ ಯೋಚನೆ ಮಾಡಬೇಡ. ಆಕೆ ಇಲ್ಲಿಗೆ ಬರದಂತೆ ನಾನು ನೋಡಿಕೊಳ್ಳುವೆ" ಎಂದು ಶಕುಂತಲಾ ಹೇಳುತ್ತಾರೆ. "ನನ್ನ ಎಲ್ಲಾ ಮಕ್ಕಳು ದಡ ಸೇರುವ ತನಕ ಗೌತಮ್ ಜತೆಗೆ ಇರಲೇಬೇಕು. ಎಲ್ಲರಿಗೂ ಸಮಾಧಾನ ಮಾಡುವ ಮ್ಯಾನೇಜರ್ ಕೆಲಸ ನನ್ನದಾಗಿದೆ" ಎಂದು ಶಕುಂತಲಾದೇವಿಯ ಸ್ವಗತ ಇರುತ್ತದೆ.
ಇನ್ನೊಂದೆಡೆ ಗೌತಮ್‌ಗೆ ಶಕುಂತಲಾದೇವಿ ಕಾಫಿ ತಂದುಕೊಡುತ್ತಾಳೆ. ಗೌತಮ್ ನಾರ್ಮಲ್ ಆಗಿಯೇ ವರ್ತಿಸುತ್ತಾನೆ. ನಮ್ಮನ್ನು ಅಷ್ಟೊಂದು ಕಂಟ್ರೋಲ್ ಮಾಡಿಕೊಳ್ಳಬಾರದು. ಮನಸ್ಸಲ್ಲಿ ಇರೋದನ್ನು ಹೇಳಲೇ ಬೇಕು" ಎಂದು ಭೂಮಿಕಾ ಹೇಳುತ್ತಾಳೆ. ಗೌತಮ್‌ಗೆ ಮುತ್ತಿನ ವಿಷಯ ನೆನಪಾಗುತ್ತದೆ. ಇದಾದ ಬಳಿಕ "ನಾಯಿ ಕಣ್ಣು ಗೂಬೆ ಕಣ್ಣು" ಗೌತಮ್‌ನ ದೃಷ್ಟಿ ತೆಗೆಯುತ್ತಾಳೆ. ನೀವು ಏನೂ ಮಾಡಿದರೂ ಚಂದ ಎಂದುಕೊಳ್ಳುತ್ತಾಳೆ. ಗೌತಮ್ ಕೂಡ ಪ್ರೇಮದ ಮತ್ತಿನಲ್ಲಿರುವಾಗ ಸೀರಿಯಲ್ ಮುಂದುವರೆಯುತ್ತದೆ.
