Amruthadhaare: ಆನಂದ್‌ನ ಮನೆಯಿಂದ ಹೊರಹಾಕಿದ ಅಪರ್ಣಾ, ನನಗೆ ಯುಜಮಾನಿಕೆ ಬೇಡ ಎಂದ ಭೂಮಿಕಾ, ಸೌಂದರ್ಯ ಸ್ಪರ್ಧೆಗೆ ಸ್ಪರ್ಧಿಸೋಲ್ಲ ಎಂದ ಅಪ್ಪಿ
ಕನ್ನಡ ಸುದ್ದಿ  /  ಮನರಂಜನೆ  /  Amruthadhaare: ಆನಂದ್‌ನ ಮನೆಯಿಂದ ಹೊರಹಾಕಿದ ಅಪರ್ಣಾ, ನನಗೆ ಯುಜಮಾನಿಕೆ ಬೇಡ ಎಂದ ಭೂಮಿಕಾ, ಸೌಂದರ್ಯ ಸ್ಪರ್ಧೆಗೆ ಸ್ಪರ್ಧಿಸೋಲ್ಲ ಎಂದ ಅಪ್ಪಿ

Amruthadhaare: ಆನಂದ್‌ನ ಮನೆಯಿಂದ ಹೊರಹಾಕಿದ ಅಪರ್ಣಾ, ನನಗೆ ಯುಜಮಾನಿಕೆ ಬೇಡ ಎಂದ ಭೂಮಿಕಾ, ಸೌಂದರ್ಯ ಸ್ಪರ್ಧೆಗೆ ಸ್ಪರ್ಧಿಸೋಲ್ಲ ಎಂದ ಅಪ್ಪಿ

Amruthadhaare serial today Eposode: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಭೂಮಿಕಾ ನನಗೆ ಈ ಮನೆಯ ಯುಜಮಾನಿಕೆ ಬೇಡ ಎಂದಿದ್ದಾಳೆ. ಗೌತಮ್‌ ಮಾಡಿದ ಕಿತಾಪತಿಯಿಂದ ಆನಂದ್‌ನನ್ನು ಅಪರ್ಣಾ ಹೊರಹಾಕಿದ್ದಾಳೆ. ಇನ್ನೊಂದೆಡೆ ಮಹಿಮಾ ನೀಡಿದ ಆಫರ್‌ ಅನ್ನು ಅಪೇಕ್ಷಾ ತಿರಸ್ಕರಿಸಿದ್ದಾಳೆ.

Amruthadhaare: ಆನಂದ್‌ನ ಮನೆಯಿಂದ ಹೊರಗೆ ಹಾಕಿದ ಅಪರ್ಣಾ, ನನಗೆ ಯುಜಮಾನಿಕೆ ಬೇಡ ಎಂದ ಭೂಮಿಕಾ
Amruthadhaare: ಆನಂದ್‌ನ ಮನೆಯಿಂದ ಹೊರಗೆ ಹಾಕಿದ ಅಪರ್ಣಾ, ನನಗೆ ಯುಜಮಾನಿಕೆ ಬೇಡ ಎಂದ ಭೂಮಿಕಾ

Amruthadhaare serial today Eposode: ಆನಂದ್‌ ಮತ್ತು ಅಪರ್ಣಾರ ನಡುವೆ ಜಗಳ ಆರಂಭವಾಗಿದೆ. ತಡವಾಗಿ ಬಂದ ಆನಂದ್‌ಗೆ ಅಪರ್ಣಾ ಬಾಗಿಲು ತೆಗೆಯುವುದಿಲ್ಲ. ನಿನ್ನ ಬುದ್ದಿ ಅಕ್ಕಪಕ್ಕದ ಮನೆಯವರಿಗೆ ಗೊತ್ತಾಗಲಿ ಎಂದು ಹೊರಕ್ಕೆ ಹಾಕಿದ್ದಾರೆ. ಮಾಡದೆ ಇರುವ ತಪ್ಪಿಗೆ ನನಗೆ ಶಿಕ್ಷೆ ಕೊಡ್ತಾ ಇದ್ದೀಯ ಎಂದೆಲ್ಲ ಬೇಜಾರು ಮಾಡ್ಕೋತಾನೆ. ಹಳೆಯದನ್ನೆಲ್ಲ ಮರೆತುಬಿಟ್ಟ ಎಂದೆಲ್ಲ ಹಳೆ ಲವ್‌ ನೆನಪಿಸ್ತಾನೆ. ಆದ್ರೂ ಅವಳು ಕರಗೋದಿಲ್ಲ. ಜೂಲಿ ಜತೆ ಫೋನ್‌ನಲ್ಲಿ ಮಾತನಾಡಿರುವುದಕ್ಕೆ ಈ ಪನೀಶ್‌ಮೆಂಟ್‌ ಕೊಡ್ತಾ ಇದ್ದಾಳೆ. ಆ ಜೂಲಿ ಯಾರು? ನನಗೆ ಗೊತ್ತಾಗಲೇ ಬೇಕು ಎಂದು ಹಠ ಹಿಡಿದಿದ್ದಾಳೆ ಅಪರ್ಣಾ. ಎಷ್ಟು ಗೋಗರೆದರೂ ಬಾಗಿಲು ತೆರೆಯುವುದಿಲ್ಲ.

ಮಹಿಮಾ ಮತ್ತು ಜೀವನ್‌ ಮಾತನಾಡುತ್ತ ಇದ್ದಾರೆ. ಮಿಸ್‌ ಬ್ಯಾಂಗಲೂರ್‌ ಕಾಂಪಿಟೇಷನ್‌ ಆರ್ಗನೈಜೇಷನ್‌ ಮಾಡೋ ಆಫರ್‌ ನನಗೆ ದೊರಕಿದೆ. ಅಪೇಕ್ಷಾಳನ್ನು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಉದ್ದೇಶಿಸಿದ್ದೇನೆ ಎಂಬ ಸುದ್ದಿ ಹೇಳ್ತಾಳೆ. ಇದನ್ನು ಕೇಳಿ ಜೀವನ್‌ಗೆ ಖುಷಿಯಾಗುತ್ತದೆ.  ಅಪ್ಪಿ ತಲೆನೋವು ಎಂದು ಮಲಗಿದ್ದಾಳೆ, ನಾಳೆ ಹೇಳೋಣ ಅನ್ನುತ್ತಾನೆ.

ಗೌತಮ್‌ ಮತ್ತು ಭೂಮಿಕಾ ಬೆಡ್‌ರೂಂನಲ್ಲಿ ಮಾತನಾಡುತ್ತ ಇದ್ದಾರೆ. ಆಗ ಆನಂದ್‌ ಕಾಲ್‌ ಮಾಡ್ತಾನೆ. ಅಪರ್ಣಾ ಮನೆಯಿಂದ ಹೊರಗೆ ಹಾಕಿದ ಕಥೆ ಹೇಳುತ್ತಾನೆ. ಗೌತಮ್‌ ನಗುತ್ತಾನೆ. ಈ ರೀತಿ ಫಿಟ್ಟಿಂಗ್‌ ಇಟ್ಟದ್ದು ಗೌತಮ್‌ ಎಂಬ ವಿಚಾರ ತಿಳಿಯುತ್ತದೆ. ಈ ವಿಷಯ ಹೇಳಿದ್ರೆ ಅಪರ್ಣಾ ಬಾಗಿಲು ತೆರೆಯುತ್ತಾಳೆ ಅಂದ್ಕೋಂಡ್ರೆ ಆಕೆ ಫೋನ್‌ ಸ್ವಿಚ್‌ ಆಫ್‌ ಮಾಡಿದ್ದಾಳೆ. ಮನೆಯ ಹೊರಗಡೆ ಮಲಗೋದೇ ಗತಿಯಾಗಿದೆ.

ಮಲ್ಲಿ ಜೈದೇವ್‌ಗೆ ಕಾಯುತ್ತ ಇದ್ದಾಳೆ. ತಡವಾಗಿ ಯಾಕೆ ಬಂದ್ರಿ ಎಂದು ಬೇಸರ ವ್ಯಕ್ತಪಡಿಸ್ತಾಳೆ. ಆತನೂ ನಾಟಕೀಯವಾಗಿ ಒಂದಿಷ್ಟು ಪ್ರೀತಿಯ ಮಾತನಾಡುತ್ತಾನೆ. ಅನ್ನ ಕಲಸಿಕೊಂಡು ಬರ್ತಿನಿ ಎಂದು ಕೋಣೆಯಿಂದ ಹೊರಕ್ಕೆ ಬಂದಾಗ ದಿವ್ಯ ಫೋನ್‌ ಮಾಡ್ತಾಳೆ. ಅವಳ ಮನೆಯಿಂದಲೇ ಬಂದಿರುತ್ತಾನೆ. ಬಿಝಿ ಇದ್ದೀನಿ ಅಂತ ಫೋನ್‌ ಕಟ್‌ ಮಾಡ್ತಾನೆ. ಪ್ರಿಯತಮೆ ಕೋಪಗೊಳ್ಳುತ್ತಾಳೆ.

ಗೌತಮ್‌ ಭೂಮಿಕಾಳಿಗೆ ಆನಂದ್‌ನ ಕಥೆ ಹೇಳ್ತಾ ಇದ್ದಾನೆ. "ನನಗೆ ಎರಡು ದಿನ ರಜೆ ಬೇಕು, ಹನಿಮೂನ್‌ಗೆ ಹೋಗ್ತಾ ಇದ್ದೀವಿ ಅಂದ. ನಾನು ಆಗೋಲ್ಲ ಕಣೋ ಕೆಲಸ ಇದೆ ಎಂದೆ. ಹಠಕ್ಕೆ ಬಿದ್ದು ಹೊರಕ್ಕೆ ಹೋದ. ಆಗ ಅವನ ಫೋನ್‌ಗೆ ಅಪರ್ಣಾ ಕಾಲ್‌ ಮಾಡಿದ್ಲು. ಅವನಿಗೆ ಏನಾದರೂ ಕೀಟಲೆ ಮಾಡಬೇಕೆಂದು ಸುಮ್ನೆ ಒಂದು ಹುಡುಗಿ ಹೆಸರು ಹೇಳಿ ಆಕೆಯ ಹೆಣ್ಣಿನ ಧ್ವನಿಯಲ್ಲಿ ಮಾತನಾಡಿದೆ. ಇದೀಗ ಬಂದ ಸುದ್ದಿಯ ಪ್ರಕಾರ ಅವನನ್ನು ಅವನ ಧರ್ಮಪತ್ನಿ ಮನೆಯಿಂದ ಒದ್ದು ಹೊರಗೆ ಹಾಕಿದ್ದಾಳೆ ಎಂದು ಗೌತಮ್‌ ವಿವರಿಸ್ತಾರೆ. ಹೇಗೆ ಹುಡುಗಿ ವಾಯ್ಸ್‌ನಲ್ಲಿ ಮಾತನಾಡಿದೆ ಎಂದು ತೋರಿಸ್ತಾರೆ. ಭೂಮಿಕಾ ಜೋರಾಗಿ ನಗುತ್ತಾಳೆ.

ಮರುದಿನ ಬೆಳಗ್ಗೆ ನಾನು ನಿಮ್ಮಲ್ಲಿ ಒಂದು ಮಾತು ಕೇಳ್ಲಾ ಎನ್ನುತ್ತಾರೆ ಭೂಮಿಕಾ. "ನಾನೇ ಏನೂ ನಿರ್ಧಾರ ತೆಗೆದುಕೊಳ್ತೀರಿ ಅಲ್ವಾ? ನನ್ನ ಬಗ್ಗೆ ಇರುವ ನಂಬಿಕೆ ಬದಲಾಗೋದಿಲ್ಲ ಅಲ್ವ" ಎನ್ನುತ್ತಾಳೆ. "ಇದೆಲ್ಲ ಯಾಕೆ ಕೇಳ್ತಿರಿ" ಎಂದಾಗ ಸುಮ್ಮನೆ ಬೆಟರ್‌ ಅಂಡರ್‌ಸ್ಟ್ಯಾಂಡ್‌ ಎಂದು ಆತನನ್ನು ಹಿಂಬದಿಯಿಂದ ತಬ್ಬಿ ಹಿಡಿಯುತ್ತಾಳೆ.

ಅಪೇಕ್ಷಾಳನ್ನು ಮಹಿಮಾ ಕರೆದು ವಿಷಯ ಹೇಳುತ್ತಾಳೆ. ಮಿಸ್‌ ಇಂಡಿಯಾ ಸ್ಪರ್ಧೆ ಬಗ್ಗೆ ಹೇಳುತ್ತಾಳೆ. ಖುಷಿಯ ವಿಚಾರವೇ ಆದರೆ ನನಗೆ ಕೆಲವು ದಿನದಿಂದ ಮೈ ಹುಷಾರಿಲ್ಲ ಎನ್ನುತ್ತಾಳೆ. ನನಗೆ ಅವಗಾವಗ ತಲೆನೋವು ಬರುತ್ತದೆ ಎಂದು ಹೇಳುತ್ತಾಳೆ. "ಇಷ್ಟು ದಿನ ಅವಕಾಶ, ತಲೆನೋವು ಅಂತ ರಿಜೆಕ್ಟ್‌ ಮಾಡ್ತಾ ಇದ್ದೀಯ" ಎಂದು ಮಂದಾಕಿನಿ ಬಯ್ಯುತ್ತಾಳೆ.

ಅಜ್ಜಿಯನ್ನು ಭೂಮಿಕಾ ಭೇಟಿಯಾಗುತ್ತಾರೆ. ಎಲ್ಲರೂ ಅಲ್ಲಿ ಸೇರುತ್ತಾರೆ. "ಅಜ್ಜಿ ನಾನು ಹೀಗೆ ಹೇಳ್ತಿನಿ ಅಂತ ಬೇಸರ ಮಾಡಬೇಡಿ. ನನ್ನನ್ನು ಈ ಮನೆಯ ಯುಜಮಾನಿ ಮಾಡಿದ್ರಿ. ಈ ಮನೆಯನ್ನು ನಡೆಸುವಷ್ಟು ಜಾಣೆ ನಾನಲ್ಲ. ಅಷ್ಟು ಯೋಗ್ಯತೆ ನನಗಿಲ್ಲ ಅನ್ಸುತೆ" ಎಂದು ಹೇಳುತ್ತಾಳೆ. "ಇದಕ್ಕಿದ್ದಂತೆ ಏನಾಯ್ತು" ಅಜ್ಜಿ ಹೇಳುತ್ತಾಳೆ. "ದಿಢೀರ್‌ ಅಂತ ಏನಾಯ್ತು" ಎಂದು ಗೌತಮ್‌ ಕೇಳುತ್ತಾಳೆ. "ಮನೆಯಲ್ಲಿ ದೊಡ್ಡವರು ಇರುವಾಗ ಚಿಕ್ಕವರು ಕೇಳ್ತಾ ಇರಬೇಕು. ಮನೆಯಲ್ಲಿ ಅಜ್ಜಿ ಅತ್ತೆ ಇರುವಾಗ ನಾನು ಯಜಮಾನಿಯಾಗೋದು ಸರಿಯಲ್ಲ.  ಮಿಡಲ್‌ ಕ್ಲಾಸ್‌ನಿಂದ ಬಂದವಳು ನಾನು" ಎನ್ನುತ್ತಾಳೆ. "ನನಗೆ ಒಂಥರ ಹಿಂಜರಿಕೆ ಶುರುವಾಗಿದೆ. ಆನೆ ಭಾರ ಇರುವ ತಲೆ ಮೇಲಿಟ್ಟ ಹಾಗಿದೆ" ಎಂದಾಗ ಅಜ್ಜಿ "ಯಾರು ಏನಂದ್ರು" ಎಂದು ವಾರೆ ಕಣ್ಣಿನಿಂದ ಶಕುಂತಲಾದೇವಿಯನ್ನು ನೋಡುತ್ತಾರೆ.

 

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)

ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)

ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)

ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)

ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)

ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)

ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)

ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)

ರಣವ್‌: ಜೈದೇವ್‌

ಚಂದನ್‌: ಅಶ್ವಿನಿ

ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)

ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)

Whats_app_banner