Amruthadhaare TV Serial: ಭಾವನತಮ್ಮ- ಅತ್ತಿಗೆ ತಂಗಿ ನಡುವೆ ಫಸ್ಟ್‌ನೈಟ್‌ ಸಮಯದಲ್ಲೇ ಬಿರುಕು; ಪಾರ್ಥನ ಬುದ್ಧಿಮಾತು ಕೇಳ್ತಾಳ ಅಪೇಕ್ಷಾ
ಕನ್ನಡ ಸುದ್ದಿ  /  ಮನರಂಜನೆ  /  Amruthadhaare Tv Serial: ಭಾವನತಮ್ಮ- ಅತ್ತಿಗೆ ತಂಗಿ ನಡುವೆ ಫಸ್ಟ್‌ನೈಟ್‌ ಸಮಯದಲ್ಲೇ ಬಿರುಕು; ಪಾರ್ಥನ ಬುದ್ಧಿಮಾತು ಕೇಳ್ತಾಳ ಅಪೇಕ್ಷಾ

Amruthadhaare TV Serial: ಭಾವನತಮ್ಮ- ಅತ್ತಿಗೆ ತಂಗಿ ನಡುವೆ ಫಸ್ಟ್‌ನೈಟ್‌ ಸಮಯದಲ್ಲೇ ಬಿರುಕು; ಪಾರ್ಥನ ಬುದ್ಧಿಮಾತು ಕೇಳ್ತಾಳ ಅಪೇಕ್ಷಾ

Amruthadhaare serial today episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಸೀರಿಯಲ್‌ನಲ್ಲಿ ಇಂದು ಅಪೇಕ್ಷಾ ಮತ್ತು ಪಾರ್ಥರ ಮೊದಲ ರಾತ್ರಿಯ ಸಂಭ್ರಮ. ಆದರೆ, ಪಾರ್ಥ ಈ ಸಮಯದಲ್ಲಿ ಅಪೇಕ್ಷಾಳಿಗೆ ಬುದ್ಧಿಹೇಳುವ ಪ್ರಯತ್ನ ಮಾಡಿರುವುದು ಅಮೃತಧಾರೆ ಪ್ರಮೋದಿಂದ ಗೊತ್ತಾಗಿದೆ.

Amruthadhaare TV Serial: ಭಾವನತಮ್ಮ- ಅತ್ತಿಗೆ ತಂಗಿ ನಡುವೆ ಫಸ್ಟ್‌ನೈಟ್‌ ಸಮಯದಲ್ಲೇ ಬಿರುಕು ಮೂಡಿದೆ.
Amruthadhaare TV Serial: ಭಾವನತಮ್ಮ- ಅತ್ತಿಗೆ ತಂಗಿ ನಡುವೆ ಫಸ್ಟ್‌ನೈಟ್‌ ಸಮಯದಲ್ಲೇ ಬಿರುಕು ಮೂಡಿದೆ.

Amruthadhaare serial today episode: ಅಮೃತಧಾರೆ ಸೀರಿಯಲ್‌ನ ಇಂದಿನ ಸಂಚಿಕೆಯ ಪ್ರಮೋವನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ಈ ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ಸ್ಪಷ್ಟ ಚಿತ್ರಣ ಈ ಪ್ರಮೋದಿಂದ ದೊರಕಿದೆ. ಕಳೆದ ಕೆಲವು ದಿನಗಳಿಂದ ಅಮೃತಧಾರೆಯಲ್ಲಿ ಅಕ್ಕ ತಂಗಿ ನಡುವೆ ವಿಷಬೀಜ ಮೊಳಕೆಯೊಡೆದಿತ್ತು. ಶಕುಂತಲಾದೇವಿ ಮತ್ತು ಟೀಮ್‌ನ ಕೆಟ್ಟ ಉದ್ದೇಶ ಅರಿಯದ ಅಪೇಕ್ಷಾ ಭೂಮಿಕಾಳ ವಿರುದ್ಧ ಮಾತನಾಡಿದ್ದಳು. ಇಂದಿನ ಸಂಚಿಕೆಯಲ್ಲಿ ಅಪೇಕ್ಷಾಳಿಗೆ ಬುದ್ಧಿ ಹೇಳುವ ಪ್ರಯತ್ನವನ್ನು ಪಾರ್ಥ ಮಾಡಿದ್ದಾನೆ. ಆದರೆ, ಅದಕ್ಕೆ ಅಪೇಕ್ಷಾ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ಕಾದುನೋಡಬೇಕಿದೆ.

ಅಕ್ಕನ ವಿರುದ್ಧವೇ ಮಾತನಾಡಿದ ಅಪೇಕ್ಷಾ

"ತಾನು ಈ ಮನೆಗೆ ಸೊಸೆಯಾಗಿ ಬರುವುದು ಅಕ್ಕನಿಗೆ ಇಷ್ಟವಿಲ್ಲ" ಎಂಬ ವಿಚಾರ ಅಪೇಕ್ಷಾಳ ಮನಸ್ಸಲ್ಲಿ ಭದ್ರವಾಗಿ ಕುಳಿತುಕೊಂಡಿದೆ. ಮನೆಹಾಳ ಮಾವ ಹೇಳಿರುವ ಮಾತುಗಳು, ತೋರಿಸಿರುವ ವಿಡಿಯೋ ಆಕೆಗೆ ಸಾಕ್ಷಿಯಂತೆ ಕಾಣಿಸಿವೆ. ಆದರೆ, ಅವರ ಕೆಟ್ಟ ಉದ್ದೇಶದ ಅರಿವು ಅವಳಿಗಿಲ್ಲ. ಇದೆಲ್ಲ ಶಕುಂತಲಾ ಆಡುತ್ತಿರುವ ನಾಟಕ ಎಂದು ಅಪೇಕ್ಷಾಗೆ ಗೊತ್ತಿಲ್ಲ. ಅಕ್ಕ ತಂಗಿ ನಡುವೆ ಜಗಳ ತಂದು ಖುಷಿ ಪಡ್ತಾ ಇದ್ದಾರೆ ಶಕುಂತಲಾ. ಯಾಕೆ ಇವರಿಬ್ಬರ ಮದುವೆ ಮಾಡಿದ್ರಿ ಎಂದು ಭೂಮಿಕಾ ಕೇಳಿದಾಗ "ಪಾರ್ಥನ ನೋವು ನೋಡಲಾಗಲಿಲ್ಲ" ಎಂದು ಶಕುಂತಲಾ ಹೇಳುತ್ತಾರೆ. ಇದೇ ಸಮಯದಲ್ಲಿ ಈ ಹಿಂದೆ ರೆಕಾರ್ಡ್‌ ಮಾಡಿದ ವಿಡಿಯೋವನ್ನು ಅಪೇಕ್ಷಾ ನೋಡುವಂತೆ ಮಾಡು ಎಂದು ಸಹೋದರನಿಗೆ ಹೇಳುತ್ತಾರೆ. "ನಿಮ್ಮಿಬ್ಬರ ಮದುವೆ ನಡೆದದ್ದು ನಿನ್ನ ಅಕ್ಕನಿಗೆ ಇಷ್ಟವಿಲ್ಲ. ಇದೆಲ್ಲ ಆದದ್ದು ನಿನ್ನ ಅತ್ತೆಯ ಸಪೋರ್ಟ್‌ನಿಂದ ಎಂದು ಹೇಳು" ಎಂದು ಶಕುಂತಲಾದೇವಿ ಲಕ್ಷ್ಮಿಕಾಂತ್‌ಗೆ ಹೇಳುತ್ತಾರೆ. ಇದೇ ರೀತಿ ಅಪೇಕ್ಷಾಳ ಮುಂದೆ ಮನೆಹಾಳ ಮಾವ ತಿಳಿಸುತ್ತಾನೆ. ಅಪೇಕ್ಷಾಳ ಮನಸ್ಸಲ್ಲಿ ವಿಷಬೀಜ ಸಸಿಯಾಗಿದೆ.

ಅಕ್ಕ ನಿನಗೆ ಈ ಮನೆಗೆ ನಾನು ಬರುವುದು ಇಷ್ಟವಿರಲಿಲ್ಲ ಎಂದು ಅಪೇಕ್ಷಾ ಭೂಮಿಕಾಳಿಗೆ ತಿಳಿಸುತ್ತಾಳೆ. "ನನಗೆ ಎಲ್ಲಾ ಗೊತ್ತು ಅಕ್ಕ. ಬೆನ್ನ ಹಿಂದೆ ಯಾರು ಏನೆಲ್ಲ ಮಾತನಾಡಿದ್ರು. ಏನೆಲ್ಲ ಮಾಡಿದ್ರು ಎಂದು ನನಗೆ ಗೊತ್ತು ಅಕ್ಕ" ಎಂದು ಅಪೇಕ್ಷಾ ಹೇಳುತ್ತಾಳೆ. "ಅಲ್ಲ ಅಪ್ಪಿ, ನೀನು ಮತ್ತು ಪ್ರೀತಿಸ್ತಾ ಇದ್ದೀರಿ ಎಂದು ಗೊತ್ತಾದಗ ಎಲ್ಲರಿಗಿಂತ ಖುಷಿಪಟ್ಟವಳು ನಾನು" ಎಂದು ಭೂಮಿಕಾ ಹೇಳುತ್ತಾಳೆ. "ನಾಟಕ ಮಾಡೋದನ್ನು ಯಾವತ್ತು ಕಲಿತೆ ಅಕ್ಕಾ" ಎಂದು ಅಪೇಕ್ಷಾ ಹೇಳುತ್ತಾಳೆ. "ನಿನ್ನ ಮೇಲೆ ಇಷ್ಟು ನಂಬಿಕೆ ಇಟ್ಟ ನನಗೆ ನೀನು ಈ ರೀತಿ ಮಾಡಬಾರದಿತ್ತು" ಎಂದು ಹೇಳುತ್ತಾಳೆ. "ಅಪ್ಪಿ ಪ್ಲೀಸ್‌" ಎಂದು ಭೂಮಿಕಾ ಹೇಳಿದಾಗ "ಬೇಡಕ್ಕ, ನೀನು ಎಷ್ಟು ತೇಪೆ ಹಚ್ಚಿದ್ರು ನೋ ಯೂಸ್‌. ಬೈದವೇ ನಾನೀಗ ಅಪೇಕ್ಷಾ ಸದಾಶಿವ ಅಲ್ಲ, ಅಪೇಕ್ಷಾ ಪಾರ್ಥ ದಿವಾನ್‌" ಎಂದು ಧಿಮಾಕಿನಿಂದ ಹೇಳುತ್ತಾಳೆ. ಆದರೆ, ಈ ಮಾತನ್ನು ಪಾರ್ಥ ಕೇಳಿಸಿಕೊಂಡಿದ್ದಾನೆ ಎಂದು ಅಪೇಕ್ಷಾಗೆ ಗೊತ್ತಿಲ್ಲ. ಇಂದಿನ ಫಸ್ಟ್‌ನೈಟ್‌ ಎಪಿಸೋಡ್‌ನಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ.

ಇಂದಿನ ಸಂಚಿಕೆಯಲ್ಲಿ ಏನಿರಲಿದೆ?

ಝೀ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಪ್ರಮೋದಲ್ಲಿ ಶಕುಂತಲಾದೇವಿಯೇ ಮುಂದೆ ನಿಂತು ಪಾರ್ಥ ಮತ್ತು ಅಪೇಕ್ಷಾರ ಫಸ್ಟ್‌ನೈಟ್‌ಗೆ ಎಲ್ಲಾ ವ್ಯವಸ್ಥೆ ಮಾಡಿದ್ದಾರೆ. ಭೂಮಿಕಾಳಿಗೆ ಈ ವಿಚಾರ ಕೊನೆಕ್ಷಣದಲ್ಲಿ ತಿಳಿಯುತ್ತದೆ. ಆದರೆ, ಕೊಠಡಿಗೆ ಬಂದ ಅಪೇಕ್ಷಾಳಿಗೆ ಪಾರ್ಥ ಮಂಕಾಗಿರುವುದು ಕಾಣಿಸುತ್ತದೆ. "ಯಾಕೆ ಭಾವನ ತಮ್ಮ, ಯಾಕೆ ಹೀಗಿದ್ದೀರ?" ಎಂದು ಅಪೇಕ್ಷಾ ಕೇಳುತ್ತಾಳೆ. "ನಿನ್ನ ತಂದೆಯನ್ನು ಹೇಗಾದರು ಮಾಡಿ ನಾವು ಸಮಧಾನ ಮಾಡಲೇಬೇಕು" ಎಂದು ಪಾರ್ಥ ಹೇಳುತ್ತಾನೆ. ಅದಕ್ಕೆ ಅಪೇಕ್ಷಾ ತಲೆಕೆಡಿಸಿಕೊಳ್ಳುವುದಿಲ್ಲ. ಈ ಮದುವೆಯಿಂದ ನನ್ನನ್ನು ನಿನ್ನನ್ನು ಬಿಟ್ಟು ಬೇರೆ ಯಾರೂ ಖುಷಿಯಾಗಿಲ್ಲ. ಹೀಗಿದ್ದ ಮೇಲೆ ನಾವು ಖುಷಿಯಾಗಿರಲು ಹೇಗೆ ಸಾಧ್ಯ. ನೀವು ಅತ್ತಿಗೆ ಜತೆ ಮಾತನಾಡಿದ್ದನ್ನು ನಾನು ಕೇಳಿಸಿಕೊಂಡೆ. ತುಂಬಾ ರೂಡ್‌ ಆಗಿ ಮಾತನಾಡ್ತಾ ಇದ್ದೀರಿ. ಅದು ನನಗೆ ಸ್ವಲ್ಪನೂ ಇಷ್ಟವಾಗಿಲ್ಲ. ಅತ್ತಿಗೆ ಬೇರೆಯವರ ತರಹ ಅಲ್ಲ. ಅವರು ತುಂಬಾ ಡಿಫರೆಂಟ್‌" ಎಂದು ಪಾರ್ಥ ಹೇಳಿದಾಗ ಕೋಪದಿಂದ ಅಪೇಕ್ಷಾ ಎದ್ದು ನಿಲ್ಲುತ್ತಾಳೆ. ತಕ್ಷಣ ಅಪೇಕ್ಷಾ ಎಂದು ಪಾರ್ಥ ಆಕೆಯ ಕೈ ಹಿಡಿಯುತ್ತಾನೆ. ಪ್ರಮೋದಲ್ಲಿ ಇಷ್ಟು ವಿಚಾರ ಇದೆ.

ಈ ಪ್ರಮೋಗೆ ಪ್ರೇಕ್ಷಕರು ಪ್ರತಿಕ್ರಿಯೆ ನೀಡಿದ್ದಾರೆ. ಪಾರ್ಥ ನಿಜಕ್ಕೂ ಒಳ್ಳೆಯ ಹುಡುಗ ಎಂದಿದ್ದಾರೆ. ಇದೇ ಸಮಯದಲ್ಲಿ ಕೆಲವರಿಗೆ ಇದು ಕೆಂಡಸಂಪಿಗೆ ಸೀರಿಯಲ್‌ನಂತೆ ಆಗ್ತಿದೆ ಎಂದಿದ್ದಾರೆ. ಒಟ್ಟಾರೆ ಸೀರಿಯಲ್‌ ತುಂಬಾ ಕಾಂಪ್ಲಿಕೇಟೆಡ್‌ ಆಗ್ತಾ ಇದೆ ಎಂದು ಇನ್ನು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)

ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)

ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)

ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)

ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)

ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)

ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)

ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)

ರಣವ್‌: ಜೈದೇವ್‌

ಚಂದನ್‌: ಅಶ್ವಿನಿ

ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)

ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)

Whats_app_banner