ಕನ್ನಡ ಸುದ್ದಿ  /  ಮನರಂಜನೆ  /  ಆಷಾಢ ಮಾಸದಲ್ಲಿ ನಾನೊಂದು ತೀರ, ನೀನೊಂದು ತೀರ; ಭೂಮಿಕಾಗೆ ಗೌತಮ್‌ನ ಹಗ್‌ ಮಾಡೋ ಆಸೆ, ಅಪ್ಪಿ-ಪಾರ್ಥ ವಿಲವಿಲ- ಅಮೃತಧಾರೆ ಸೀರಿಯಲ್‌

ಆಷಾಢ ಮಾಸದಲ್ಲಿ ನಾನೊಂದು ತೀರ, ನೀನೊಂದು ತೀರ; ಭೂಮಿಕಾಗೆ ಗೌತಮ್‌ನ ಹಗ್‌ ಮಾಡೋ ಆಸೆ, ಅಪ್ಪಿ-ಪಾರ್ಥ ವಿಲವಿಲ- ಅಮೃತಧಾರೆ ಸೀರಿಯಲ್‌

Amruthadhaare serial Today Episode: ಆಷಾಢ ಮಾಸದಲ್ಲಿ ಗೌತಮ್‌ ಭೂಮಿಕಾಳನ್ನು ತವರು ಮನೆಗೆ ಬಿಟ್ಟುಬಂದಿದ್ದಾನೆ. ಸದಾಶಿವ ಮೌನಕ್ಕೆ ಬೆದರಿದ ಪಾರ್ಥ ಮತ್ತು ಅಪ್ಪಿ ನೋವಿನಲ್ಲಿ ಒದ್ದಾಡುತ್ತಿದ್ದಾರೆ. ಶಕುಂತಲಾ ಟೀಮ್‌ಗೆ ಆಷಾಢ ಮಾಸ ಸ್ವಲ್ಪ ನೆಮ್ಮದಿ ತಂದಿದೆ.

ಅಮೃತಧಾರೆ ಸೀರಿಯಲ್‌ story
ಅಮೃತಧಾರೆ ಸೀರಿಯಲ್‌ story

Amruthadhaare serial Today Episode: ಭೂಮಿಕಾಳನ್ನು ಆಷಾಢಕ್ಕೆ ತವರು ಮನೆಗೆ ಗೌತಮ್‌ ಕರೆ ತರುತ್ತಾನೆ. ಆದರೆ, ಭೂಮಿಕಾಳಿಗೆ ಮನಸ್ಸೇ ಇರುವುದಿಲ್ಲ. ಅವರೇ ಕಾಳು ಉಪ್ಪಿಟ್ಟು ಸಿಗುತ್ತೆ ಎಂದು ಅತ್ತೆ ಮನೆಗೆ ಬಂದೆ ಎಂದು ಗೌತಮ್‌ ಹೇಳುತ್ತಾರೆ. ನನ್ನನ್ನು ಬಿಡಲು ಬಂದಿಲ್ಲ, ಉಪ್ಪಿಟ್ಟು ತಿನ್ನಲು ಬಂದಿದ್ದಾರೆ ಎಂದುಕೊಳ್ಳುತ್ತಾಳೆ ಭೂಮಿಕಾ. ಚೆನ್ನಾಗಿ ತಿಂದು ವಾಪಸ್‌ ಹೊರಡುತ್ತಾರೆ. ಭೂಮಿಕಾಳಿಗೆ ಗೌತಮ್‌ನನ್ನು ಹಗ್‌ ಮಾಡಬೇಕು ಎನಿಸುತ್ತದೆ. ಐ ಮಿಸ್‌ ಯು ಎನ್ನುತ್ತಾಳೆ. ಮಿಸ್‌ ಯೂ ಟೂ ಎನ್ನುತ್ತಾರೆ ಗೌತಮ್‌. ಖುಷಿ ಖುಷಿಯಾಗಿ ಕಳುಹಿಸಿ ಕೊಡಿ ಎಂದು ಹೇಳಿ ಗೌತಮ್‌ ಹೊರಡುತ್ತಾರೆ.

ಮನೆಯಲ್ಲಿ ಪಾರ್ಥ ಮಂಕಾಗಿ ಕುಳಿತುಕೊಂಡಿದ್ದಾನೆ. ಅಲ್ಲಿಗೆ ಜೈದೇವ್‌ ಬರುತ್ತಾನೆ. ನಿನ್ನೆಯಿಂದ ಕಂಪ್ಲಿಟ್‌ ಡಲ್‌ ಆಗಿದ್ದೀ ಏನಾಯ್ತು ಎಂದು ಕೇಳುತ್ತಾನೆ. ಎಲ್ಲರೂ ಅದೇ ಕೇಳುತ್ತಾರೆ ನನಗೆ ಹೇಳಿ ಸಾಕಾಯ್ತು ಎಂದು ರೇಗುತ್ತಾನೆ. ಬಾ ಪಬ್‌ಗೆ ಬಾ ಎಂದು ಕರೆಯುತ್ತಾನೆ. "ಈ ಜೈ ಬ್ರೋ ಯಾವಾಗಲೂ ಇರುತ್ತಾನೆ. ಏನೇ ಪ್ರಾಬ್ಲಂ ಇದ್ರೂ ನನ್ನಲ್ಲಿ ಸೊಲ್ಯುಷನ್‌ ಇರುತ್ತೆ" ಎಂದು ಭರವಸೆ ನೀಡುತ್ತಾನೆ. "ಜೈಬ್ರೋ ರಿಯಲಿ ಸಾರಿ" ಎಂದು ಇಬ್ಬರೂ ಹಗ್‌ ಮಾಡುತ್ತಾರೆ. ಮನಸ್ಸಲ್ಲಿ ಐ ಹೇಟ್‌ ಯೂ ಎಂದು ಜೈದೇವ್‌ ಹೇಳುತ್ತಾನೆ.

ಆಷಾಢ ಮಾಸದಲ್ಲಿ ಅವರವರ ನೋವು, ಸಡಗರ

ಆಫೀಸ್‌ನಲ್ಲಿ ಗೌತಮ್‌ ಇದ್ದಾಗ ಆನಂದ್‌ ಬರುತ್ತಾನೆ. "ನಿನ್ನ ಮುಖ ಈ ರೀತಿ ಹೊಳೆಯುತ್ತಿದೆ. ನನ್ನ ಸರ್ವೀಸ್‌ನಲ್ಲೇ ನೋಡಿಲ್ಲ" ಎಂದು ಆನಂದ್‌ ಹೇಳುತ್ತಾನೆ. "ನಿಜಕ್ಕೂ ಸ್ಮಾರ್ಟ್‌ ಆಗಿ ಕಾಣ್ತಾ ಇದ್ದೀಯಾ" ಎಂದು ಹೇಳುತ್ತಾನೆ. ಎಲ್ಲಾ ಅತ್ತಿಗೆ ಪ್ರಭಾವ, ಹುಣ್ಣಿಮೆ ಚಂದ್ರನಂತೆ ಕಾಣಿಸುತ್ತಿ ಎಂದು ಆನಂದ್‌ ಹೊಗಳುತ್ತಾನೆ. ನಿಮ್ಮ ಊರಲ್ಲಿ ಮಳೆ ಬೆಳೆ ಇದೆಯಾ ಎಂದು ಆನಂದ್‌ ಕೇಳುತ್ತಾನೆ. "ಇನ್ನೂ ಒಂದು ತಿಂಗಳು ಈ ರೀತಿಯ ಟಾಪಿಕ್‌ ಮಾತನಾಡೋ ಆಗಿಲ್ಲ. ಆಷಾಢ ಮಾಸಕ್ಕೆ ಒಂದು ತಿಂಗಳು ಅತ್ತೆ ಮನೆಗೆ ಹೋಗಿದ್ದಾರೆ" ಎನ್ನುತ್ತಾನೆ. ಇದೇ ಖುಷಿಗೆ ಒಂದು ಪಾರ್ಟಿ ಮಾಡೋಣ್ವ ಎನ್ನುತ್ತಾನೆ ಆನಂದ್‌. "ನಮ್ಮವಳಿಗೆ ಆಷಾಢನೂ ಇಲ್ಲ ಶ್ರಾವಣನೂ ಇಲ್ಲ. ಬಾ ಪಾರ್ಟಿ ಮಾಡೋಣ" ಎನ್ನುತ್ತಾನೆ. "ಓಕೆ ಎನ್ನುತ್ತಾನೆ" ಆನಂದ್‌.

ಟ್ರೆಂಡಿಂಗ್​ ಸುದ್ದಿ

ಅಪೇಕ್ಷಾ ದಾರಿಯಲ್ಲಿ ಹೋಗುವಾಗ ಪಾರ್ಥ ಸಿಗುತ್ತಾನೆ. ತಂದೆ ಏನಾದ್ರೂ ಅಂದ್ರ ಎನ್ನುತ್ತಾನೆ. ಅವರು ಇದರ ಬಗ್ಗೆ ಮಾತನಾಡುವುದೇ ಇಲ್ಲ ಎನ್ನುತ್ತಾಳೆ. "ಅವರು ಏನೂ ಯೋಚನೆ ಮಾಡುತ್ತ ಇರಬಹುದು ಎಂದು ಯೋಚಿಸಿಯೇ ಬ್ಲ್ಯಾಂಕ್‌ ಆಗುತ್ತದೆ" ಎನ್ನುತ್ತಾಳೆ. "ನನ್ನಿಂದಾಗಿ ನೀವೆಲ್ಲ ನೋವು ಅನುಭವಿಸುವ ಹಾಗಾಯ್ತು" ಎನ್ನುತ್ತಾನೆ. "ನನ್ನಿಂದಾಗಿ ಇದೆಲ್ಲ ಆಯ್ತು" ಹೀಗೆ ಇಬ್ಬರೂ ಬೇಸರ ತೋಡಿಕೊಳ್ಳುತ್ತಾರೆ. "ನಾನು ಬಂದು ನಿಮ್ಮ ತಂದೆಯಲ್ಲಿ ಮಾತನಾಡ್ತಿನಿ. ನಮ್ಮ ಸ್ಟೋರಿ ಏನು ಎನ್ನುವುದನ್ನು ಅವರಿಗೆ ಕಂಪ್ಲಿಟ್‌ ಹೇಳ್ತಿನಿ. ನನಗೆ ನೀವು ಬೇಕು. ನನ್ನ ಪ್ರೀತಿ ಮುಖ್ಯ. ಅದಕ್ಕೆ ಬೇಕಾದರೂ ಏನೂ ಬೇಕಾದರೂ ಮಾಡ್ತಿನಿ" ಎನ್ನುತ್ತಾನೆ ಪಾರ್ಥ. "ಅಪ್ಪ ನಮ್ಮ ಬಗ್ಗೆ ಕೋಪ ಮಾಡಿಕೊಂಡಿದ್ದಾರೆ. ಅವರಿಗೆ ಹೇಳೋದು ಬೇಡ" ಎನ್ನುತ್ತಾಳೆ. "ನನಗೆ ಸ್ವಲ್ಪ ಸಮಯ ಕೊಡಿ. ಅಪ್ಪನ ಜತೆ ನಾನು ಮಾತನಾಡಲು ಟ್ರೈ ಮಾಡ್ತಿನಿ" ಎನ್ನುತ್ತಾಳೆ. ಹೀಗೆ, ನಾನು ಹೇಳ್ತಿನಿ, ನಾನು ಹೇಳ್ತಿನಿ ಎನ್ನುತ್ತಾರೆ. ಹೀಗೆ ಇಬ್ಬರು ಒಂದಿಷ್ಟು ನೋವು ತೋಡಿಕೊಂಡು ಅಲ್ಲಿಂದ ಹೊರಡುತ್ತಾರೆ.

ಅಪೇಕ್ಷಾ ಮನೆಗೆ ಬಂದಾಗ ಭೂಮಿಕಾ ಅಲ್ಲಿರುತ್ತಾಳೆ. ಭೂಮಿಕಾಳ ಕಣ್ಣು ತಪ್ಪಿಸಿ ಹೋಗಲು ಪ್ರಯತ್ನಿಸುತ್ತಾಳೆ. "ಏನಾಗ್ತಿದೆ. ನೀನು ನಿನ್ನದೇ ಆದ ಲೋಕದಲ್ಲಿ ಕಳೆದು ಹೋಗಿದ್ದಿ" ಎನ್ನುತ್ತಾಳೆ ಭೂಮಿಕಾ. "ಏನು ಪ್ರಾಬ್ಲಂ ಕರೆಕ್ಟಾಗಿ ಹೇಳು" ಎಂದು ಕೇಳುತ್ತಾಳೆ. "ಕೆಲಸದ ಒತ್ತಡ" ಎಂದು ಸುಳ್ಳು ಹೇಳುತ್ತಾಳೆ.

ರಮಾಕಾಂತ ಮನೆಯಲ್ಲಿ ಖುಷಿಯಿಂದ "ನೀಳ ಗಗನದಲ್ಲಿ ನವಿಲು ಕುಣಿಯುತ್ತಿದೆ ನೋಡಾ" ಎಂದು ಖುಷಿಯಿಂದ ಕುಣಿಯುತ್ತ ಇರುತ್ತಾರೆ. ಇನ್ನು ಒಂದು ತಿಂಗಳು ನೆಮ್ಮದಿಯಿಂದ ಇರಬಹುದು. ಭೂಮಿಕಾ ಇರೋದೆ ಇಲ್ಲ. ಮೊದಲು ಹೇಗಿದ್ವಿ ಅದೇ ರೀತಿ ಇರೋಣ ಎಂದು ಶಕುಂತಲಾ ಹೇಳುತ್ತಾರೆ. "ಹೋಗೋದು ಹೋಗಿದ್ದಾಳೆ. ತಿಜೋರಿ ಕೀ ತೆಗೆದುಕೊಂಡಿದ್ದಾಳೆ. ಮಾಸ್ಟರ್‌ ಕೀ ನಮ್ಮಲ್ಲಿ ಇದೆ ತಾನೇ. ಅಂದ್ರೆ ಗೌತಮ್‌ ನಮ್ಮಲ್ಲಿದ್ದಾನೆ. ತಲೆ ಕೆಡಿಸಿಕೊಳ್ಳೋದು ಬೇಡ" ಎನ್ನುತ್ತಾಳೆ ಶಕುಂತಲಾ.

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)

ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)

ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)

ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)

ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)

ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)

ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)

ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)

ರಣವ್‌: ಜೈದೇವ್‌

ಚಂದನ್‌: ಅಶ್ವಿನಿ

ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)

ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)