ಜೈದೇವ್‌ ಪಾಪದ ಕೊಡ ತುಂಬ್ತು, ಎಲ್ಲಾ ಸತ್ಯ ಹೊರಬಂತು; ಭೂಮಿಕಾ ಆಂಡ್‌ ಟೀಮ್‌ನಿಂದ ಮುಂದಿನ ಕ್ರಮ ಏನು?- ಅಮೃತಧಾರೆ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಜೈದೇವ್‌ ಪಾಪದ ಕೊಡ ತುಂಬ್ತು, ಎಲ್ಲಾ ಸತ್ಯ ಹೊರಬಂತು; ಭೂಮಿಕಾ ಆಂಡ್‌ ಟೀಮ್‌ನಿಂದ ಮುಂದಿನ ಕ್ರಮ ಏನು?- ಅಮೃತಧಾರೆ ಧಾರಾವಾಹಿ

ಜೈದೇವ್‌ ಪಾಪದ ಕೊಡ ತುಂಬ್ತು, ಎಲ್ಲಾ ಸತ್ಯ ಹೊರಬಂತು; ಭೂಮಿಕಾ ಆಂಡ್‌ ಟೀಮ್‌ನಿಂದ ಮುಂದಿನ ಕ್ರಮ ಏನು?- ಅಮೃತಧಾರೆ ಧಾರಾವಾಹಿ

Amruthadhaare serial today episode: ಅಮೃತಧಾರೆ ಸೀರಿಯಲ್‌ನಲ್ಲಿ ಜೈದೇವ್‌ ಮಾಡಿದ ಎಲ್ಲಾ ಪಾಪದ ಕೆಲಸಗಳ ಕುರಿತು ಭೂಮಿಕಾಗೆ ತಿಳಿಯುತ್ತದೆ. ಪಾರ್ಥ, ಆನಂದ್‌, ಅಪರ್ಣಾ ಜತೆ ಈ ಕುರಿತು ಚರ್ಚಿಸುತ್ತಾರೆ. ಮಲ್ಲಿಗೆ ಮತ್ತಿನ ಔಷಧ ನೀಡಿರುವ ಕುರಿತು ನರ್ಸ್‌ ಕೂಡ ಮಾಹಿತಿ ನೀಡುತ್ತಾರೆ.

ಅಮೃತಧಾರೆ ಧಾರಾವಾಹಿ
ಅಮೃತಧಾರೆ ಧಾರಾವಾಹಿ

Amruthadhaare serial today episode: ಪಾರ್ಥ ಭೂಮಿಕಾಗೆ ಎಲ್ಲಾ ವಿಷಯ ತಿಳಿಸಿದ್ದಾನೆ. "ಅತ್ತಿಗೆ ನಾವು ತಡ ಮಾಡುವಂತೆ ಇಲ್ಲ. ಇನ್ನು ಲೇಟ್‌ ಮಾಡೋದು ಬೇಡ" ಎಂದು ಪಾರ್ಥ ಹೇಳುತ್ತಾನೆ. "ಈಗಲೇ ಗೌತಮ್‌ಗೆ ಹೇಳೋದು ಬೇಡ, ಎಲ್ಲಾ ವಿಷಯ ಕನ್‌ಫರ್ಮ್‌ ಮಾಡೋ ತನಕ ಸುಮ್ಮನಿರೋಣ" ಎಂದು ಭೂಮಿಕಾ ಹೇಳುತ್ತಾರೆ. ನಾವು ಬಿಗ್‌ಬ್ರೋ ಲ್ಯಾಪ್‌ ಟಾಪ್‌ ಚೆಕ್‌ ಮಾಡೋಣ ಎಂದು ಪಾರ್ಥ ಹೇಳುತ್ತಾನೆ. ಇನ್ನೊಂದೆಡೆ ರೂಂನಲ್ಲಿ ಜೈದೇವ್‌ ಮತ್ತು ಮಲ್ಲಿ ಮಾತನಾಡುತ್ತ ಇದ್ದಾರೆ. ಆಗ ಅಲ್ಲಿ ಪರ್ಸ್‌ ಹೊರಗೆ ಇರೋದನ್ನು ನೋಡುತ್ತಾನೆ. "ಈ ಪರ್ಸ್‌ ಹೇಗೆ ಹೊರಗೆ ಬಂತು" ಎಂದು ಜೈದೇವ್‌ ಕೇಳಿದಾಗ ಪಾರ್ಥ ಬಂದ ವಿಚಾರವನ್ನು ಮಲ್ಲಿ ತಿಳಿಸುತ್ತಾರೆ. ಜೈದೇವ್‌ಗೆ ಏನೋ ಟೆನ್ಷನ್‌ ಆಗುತ್ತದೆ. "ಸದ್ಯ ನನ್ನ ಫೈಲ್‌ ನೋಡಿಲ್ಲ" ಎಂದು ಕನ್‌ಫರ್ಮ್‌ ಮಾಡಿಕೊಳ್ಳುತ್ತಾನೆ. "ಮಲ್ಲಿ ನಾನು ಹೋಗ್ತಿನಿ. ಆಫೀಸ್‌ ಕೆಲಸ ಇದೆ. ನಾಳೆ ಬರ್ತಿನಿ" ಎನ್ನುತ್ತಾನೆ. "ರಾತ್ರೋ ರಾತ್ರಿ ಹೋಗ್ತಿರಲ್ವ. ಅಂತಹ ಕೆಲಸ ಏನಿದೆ. ಅದೇನೇ ಇದ್ರೂ ಅವರನ್ನೇ ಇಲ್ಲಿಗೆ ಕರೆಸಿಕೊಳ್ಳಬಹುದಲ್ವ" ಎಂದು ಕೇಳುತ್ತಾಳೆ ಮಲ್ಲಿ. ಅವಳಿಗೆ ಈತನ ಬುದ್ಧಿ ಈಗಾಗಲೇ ಗೊತ್ತಾಗಿದೆ. "ಎಷ್ಟು ನಾಟಕ ಆಡ್ತೀರಾ, ನನಗೆ ಎಲ್ಲಾ ಗೊತ್ತುರೀ" ಎಂದುಕೊಳ್ಳುತ್ತಾಳೆ.

ಗೌತಮ್‌ನ ಲ್ಯಾಪ್‌ಟಾಪ್‌ ಚೆಕ್‌ ಮಾಡ್ತಾ ಇದ್ದಾರೆ. ಪಾರ್ಥ ವಿವಿಧ ಪಾಸ್‌ವರ್ಡ್‌ ಹಾಕಿ ನೋಡುತ್ತಾನೆ. ಶಕುಂತಲಾ ಎಂಬ ಪಾಸ್‌ವರ್ಡ್‌ ಹಾಕುತ್ತಾನೆ. ವರ್ಕ್‌ ಆಗೋದಿಲ್ಲ. ಭೂಮಿಕಾ ಎಂದು ಹಾಕಿ ನೋಡುತ್ತಾನೆ. ಲ್ಯಾಪ್‌ಟಾಪ್‌ ಓಪನ್‌ ಆಗಿಲ್ಲ. ತಕ್ಷಣ ಭೂಮಿಕಾಳಿಗೆ ಗೌತಮ್‌ ತಾಯಿ ಹೆಸರು ನೆನಪಾಗುತ್ತದೆ. ಭಾಗ್ಯ ಎಂದು ಹಾಕಿ ನೋಡಿ ಎನ್ನುತ್ತಾಳೆ. ಅದು ವರ್ಕ್‌ ಆಗುತ್ತದೆ. "ಜೈದೇವ್‌ರೂಂನಲ್ಲಿ ಸಿಕ್ಕ ಫೈಲ್‌ಗೂ ಬಿಗ್‌ಬ್ರೋ ಲ್ಯಾಪ್‌ಟಾಪ್‌ನಲ್ಲಿರುವ ಕೊಟೇಷನ್‌ ಒಂದೇಯ ಎಂದು ನೋಡಬೇಕು" ಎಂದು ಲ್ಯಾಪ್‌ಟಾಪ್‌ನಲ್ಲಿ ಚೆಕ್‌ ಮಾಡ್ತಾನೆ. ಎರಡೂ ಒಂದೇ ಎಂದು ಹೇಳುತ್ತಾನೆ. ಮುಂದೇನು ಮಾಡೋದು ಎಂದು ಭೂಮಿಕಾ ಯೋಚಿಸುತ್ತಾರೆ. "ನಮ್ಮ ಕಂಪನಿ ಅಂಡರ್‌ನಲ್ಲಿರುವ ಇನ್ನಿತರ ಕಂಪನಿಗಳಿಗೆ ಟೆಂಡರ್‌ನ ರಿವರ್ಕ್‌ ಮಾಡಿ ಅಪ್ಲೈ ಮಾಡಬಾರದು?" ಎಂದು ಕೇಳುತ್ತಾಳೆ ಭೂಮಿಕಾ. "ಹಾಗೇ ಮಾಡೋಣ ಅತ್ತಿಗೆ" ಎನ್ನುತ್ತಾನೆ. ಇದೇ ರೀತಿ ಟೆಂಡರ್‌ ಸಬ್‌ಮಿಟ್‌ ಮಾಡುತ್ತಾನೆ. ಇದೇ ಸಮಯದಲ್ಲಿ ಗೌತಮ್‌ ಕರೆ ಮಾಡುತ್ತಾನೆ. ಲ್ಯಾಪ್‌ಟಾಪ್‌ ಮರೆತುಬಂದಿದ್ದೀನಿ, ಡ್ರೈವರ್‌ ಕೈಯಲ್ಲಿ ಕೊಟ್ಟು ಕಳುಹಿಸಿ ಎನ್ನುತ್ತಾನೆ. ಅದೇ ರೀತಿ ಲ್ಯಾಪ್‌ಟಾಪ್‌ ಕೊಡುತ್ತಾರೆ. "ನಾವು ನಮ್ಮ ಮನೆಯವರ ಬಗ್ಗೆಯೇ ಇನ್ವೆಸ್ಟಿಗೇಷನ್‌ ಮಾಡೋ ಹಾಗೇ ಹಾಗಾಯ್ತಲ್ವ" ಎಂದು ಪಾರ್ಥ ಬೇಸರದಲ್ಲಿ ಹೇಳುತ್ತಾನೆ. "ಸಂಬಂಧಗಳೇ ಹಾಗೇ, ಬಹುತೇಕ ನಮ್ಮ ನೋವಿಗೆ ಸಂಬಂಧಗಳೇ ಕಾರಣವಾಗುತ್ತದೆ" ಎಂದು ಭೂಮಿಕಾ ಹೇಳುತ್ತಾರೆ. ಒಂದಿಷ್ಟು ಭಾವುಕ ಮಾತುಗಳು ನಡೆಯುತ್ತವೆ.

ಇನ್ನೊಂದೆಡೆ ಆನಂದ್‌ ಮತ್ತು ಅಪರ್ಣಾ ಮಾತನಾಡುತ್ತಾರೆ. ಈಗಲೇ ಅವನ ವಿರುದ್ಧ ಕಂಪ್ಲೇಂಟ್‌ ಮಾಡೋದು ಬೇಡ. ಗೆಳೆಯನ ಇನ್ನೊಂದು ಮುಖವನ್ನು ಅವನು ನೋಡಿಲ್ಲ ಎಂದು ಆನಂದ್‌ ಹೇಳುತ್ತಾನೆ. ಈ ಸಮಯದಲ್ಲಿ ಭೂಮಿಕಾ ಕಾಲ್‌ ಮಾಡುತ್ತಾರೆ. "ಇದು ತುಂಬಾ ಎಮರ್ಜೆನ್ಸಿ ವಿಷಯ. ಜೈದೇವ್‌ಗೆ ಸಂಬಂಧಪಟ್ಟದ್ದು" ಎಂದು ಭೂಮಿಕಾ ಹೇಳುತ್ತಾಳೆ. "ಫೋನ್‌ನಲ್ಲಿ ಹೇಳಲಾಗದು. ಮನೆಗೆ ಬನ್ನಿ" ಎನ್ನುತ್ತಾಳೆ ಭೂಮಿಕಾ. ಅಪರ್ಣ ಕೂಡ ಆನಂದ್‌ ಜತೆಗೆ ಬರುತ್ತಾನೆ.

ಇನ್ನೊಂದೆಡೆ ಗೌತಮ್‌ ಮತ್ತು ಭೂಮಿಕಾ ಎಂದಿನಂತೆ ಮಾತನಾಡುತ್ತ ಇದ್ದಾರೆ. ಕಂಪನಿ, ಪ್ರೀತಿಯ ಮಾತುಗಳು ಇರುತ್ತವೆ. ಟೆಂಡರ್‌, ಕಾಂಟ್ರ್ಯಾಕ್ಟ್‌ ಇತ್ಯಾದಿ ಆಫೀಸ್‌ ವಿಚಾರಗಳನ್ನು ಮಾತನಾಡುತ್ತಾರೆ ಗೌತಮ್‌.

ನರ್ಸ್‌ ನೀಡಿದ್ರು ಸ್ಪೋಟಕ ಮಾಹಿತಿ

ರಾತ್ರಿ ಭೂಮಿಕಾ ಇದ್ದಾಗ ಆಸ್ಪತ್ರೆಯ ನರ್ಸ್‌ಫೋನ್‌ ಬರುತ್ತದೆ. "ನಾನು ಮಲ್ಲಿಯ ಚೈಲ್ಡ್‌ ವುಡ್‌ ಫ್ರೆಂಡ್‌, ನನ್ನ ಹೆಸರು ಬಿಂದು" ಎಂದು ಆಕೆ ಕಾಲ್‌ ಮಾಡಿ ಹೇಳುತ್ತಾಳೆ. "ಇಷ್ಟು ಹೊತ್ತಲ್ಲಿ ಕಾಲ್‌ ಮಾಡಿದ್ರಿ, ಏನು ವಿಷಯ?" ಎಂದು ಕೇಳುತ್ತಾರೆ ಭೂಮಿಕಾ. "ಇದು ತುಂಬಾ ಇಂಪಾರ್ಟೆಂಟ್‌ ವಿಷಯ. ಮಲ್ಲಿ ಮತ್ತು ಆಕೆಯ ಗಂಡನಿಗೆ ಸಂಬಂಧಪಟ್ಟದ್ದು. ಈಗಲೇ ಮೀಟ್‌ ಮಾಡಿದ್ರೆ ಒಳ್ಳೆಯದು. ನೆಗ್ಲೆಕ್ಟ್‌ ಮಾಡೋಕ್ಕೆ ಆಗೋಲ್ಲ" ಎಂದು ಬಿಂದು ಹೇಳುತ್ತಾರೆ. ಮನೆಯ ಲೊಕೆಷನ್‌ ನೀಡುತ್ತಾಳೆ. ಅಲ್ಲಿಗೆ ಬಿಂದು ಬರುತ್ತಾಳೆ. "ನಾವಿಬ್ಬರು ಚೈಲ್ಡ್‌ವುಡ್‌ ಫ್ರೆಂಡ್‌. ಸ್ಕೂಲ್‌ನಲ್ಲಿ ಬಿಟ್ರೆ ನಾನು ಅವಳನ್ನು ಮತ್ತೆ ನೋಡಿದ್ದೇ ಹಾಸ್ಪಿಟಲ್‌ನಲ್ಲಿ. ಆಕ್ಸಿಡೆಂಟ್‌ ವಿಚಾರ ಕೇಳಿದಾಗ ನನಗೆ ಬೇಸರವಾಯಿತು. ಡಾಕ್ಟರ್‌ಗೆ ಕೇಳಿದಾಗ ಅವಳಿಗೆ ಇನ್ನೂ ಪ್ರಜ್ಞೆ ಬಂದಿಲ್ಲ ಎಂದು ಹೇಳಿದ್ದರು. ಆದರೆ, ಅವಳಿಗೆ ಪ್ರಜ್ಞೆ ಬಂದಿತ್ತು. ಆದರೆ, ಆ ವಿಷಯ ನನಗೆ ಲೇಟಾಗಿ ಗೊತ್ತಾಯ್ತು. ಮಲ್ಲಿಗೆ ಪ್ರಜ್ಞೆ ಬರಬಾರದು ಎಂದು ನಮ್ಮವರನ್ನು ಬುಕ್‌ ಮಾಡಿಕೊಂಡು ಮತ್ತು ಬರೋ ಇಂಜೆಕ್ಷನ್‌ ಕೊಡಲಾಗಿತ್ತು" ಎಂದು ಬಿಂದು ಹೇಳಿದಾಗ ಭೂಮಿಕಾಗೆ ಅಚ್ಚರಿಯಾಗುತ್ತದೆ. "ಅವಳಿಗೆ ಪ್ರಜ್ಞೆ ಬಂದಿಲ್ಲ ಎಂದು ಎಲ್ಲರನ್ನೂ, ನಮ್ಮ ಡಾಕ್ಟರ್‌ ಅನ್ನೂ ಮೋಸ ಮಾಡಿದ್ರು. ಮಲ್ಲಿಗೆ ಪ್ರಜ್ಞೆ ಬಂದ್ರೆ ಆಪರೇಷನ್‌ ಬೇಕಿರಲಿಲ್ಲ. ಆಪರೇಷನ್‌ ಮಾಡಿಸಿ ಜೀವಕ್ಕೆ ಅಪಾಯ ಬರುವಂತೆ ಪ್ಲ್ಯಾನ್‌ ಆಗಿತ್ತು." ಎಂದು ಬಿಂದು ಹೇಳುತ್ತಾಳೆ. "ಯಾರು ಈ ಕೆಲಸ ಮಾಡಿಸಿದ್ದು?" ಎಂದು ಭೂಮಿಕಾ ಕೇಳುತ್ತಾಳೆ. ಬೇರೆ ಯಾರೂ ಅಲ್ಲ ಮೇಡಂ, ಆಕೆಯ ಗಂಡ" ಎಂದು ಹೇಳುತ್ತಾಳೆ. ಭೂಮಿಕಾಗೆ ಶಾಕ್‌ ಮೇಲೆ ಶಾಕ್‌. "ಈ ವಿಚಾರನ ಮಲ್ಲಿಗೆ ಹೇಳೋಣ ಅಂದುಕೊಂಡೆ. ಆದರೆ, ಅವಳು ತನ್ನ ಗಂಡನ ತುಂಬಾ ನಂಬ್ತಾಳೆ ಅಂತ ಗೊತ್ತಾಯ್ತು. ಅದಕ್ಕೆ ನಿಮ್ಮಲ್ಲಿ ಹೇಳಿದೆ" ಎಂದು ಹೇಳುತ್ತಾಳೆ. ಬಿಂದು ಹೋಗುತ್ತಾಳೆ.

ಇದಾದ ಬಳಿಕ ಭೂಮಿಕಾ ಪಾರ್ಥನಿಗೆ ಕಾಲ್‌ ಮಾಡಿ ಕರೆಯುತ್ತಾಳೆ. ಅದೇ ಸಮಯದಲ್ಲಿ ಆನಂದ್‌ ಮತ್ತು ಅಪರ್ಣಾ ಕೂಡ ಬರುತ್ತಾರೆ. ನಾನು ಏನೋ ಹೇಳೋಣ ಎಂದು ಕರೆದೆ. ಆದರೆ, ಸ್ವಲ್ಪ ಹೊತ್ತಿನ ಮುಂಚೆ ನಂಗೆ ನಂಬಲಾಗದ ವಿಷಯ ಗೊತ್ತಾಯ್ತು ಎಂದು ಭೂಮಿಕಾ ಹೇಳುತ್ತಾರೆ. ನರ್ಸ್‌ ಬಂದು ಹೇಳಿದ ವಿಚಾರನ ತಿಳಿಸುತ್ತಾರೆ. ಮಲ್ಲಿಯನ್ನು ಜೈದೇವ್‌ ಕೊಲೆ ಮಾಡಲು ಪ್ರಯತ್ನಿಸಿದ್ರು ಎಂದು ಹೇಳಿದಾಗ ಎಲ್ಲರಿಗೂ ಅಚ್ಚರಿಯಾಗುತ್ತದೆ. "ನನ್ನ ಮದುವೆ ದಿನ ಅಟ್ಯಾಕ್‌ ಮಾಡಿಸಿದ್ದು ಕೂಡ ಜೈದೇವ್‌" ಎಂದು ಪಾರ್ಥ ಹೇಳುತ್ತಾನೆ. "ಈ ವಿಷಯ ಆನಂದ್‌ಗೆ ಗೊತ್ತಿತ್ತು. ಆನಂದ್‌ನಿಂದ ಅಪಾಯ ಎಂದು ಜೈದೇವ್‌ ಇವನಿಗೆ ಆಕ್ಸಿಡೆಂಟ್‌ ಮಾಡಿಸಿದ್ದ" ಎಂದು ಅಪರ್ಣಾ ಹೇಳುತ್ತಾಳೆ.

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)

ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)

ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)

ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)

ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)

ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)

ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)

ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)

ರಣವ್‌: ಜೈದೇವ್‌

ಚಂದನ್‌: ಅಶ್ವಿನಿ

ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)

ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)

Whats_app_banner