ಕನ್ನಡ ಸುದ್ದಿ  /  ಮನರಂಜನೆ  /  ಜೀವನ್‌ ಫುಡ್‌ ಡೆಲಿವರಿ ಮಾಡೋ ದೃಶ್ಯ ಗೌತಮ್‌ ದಿವಾನ್‌ ಕಣ್ಣಿಗೆ ಬಿತ್ತು; ಸೂಪರ್‌ ಎಪಿಸೋಡ್‌ ಅಂದ್ರು ಅಮೃತಧಾರೆ ಸೀರಿಯಲ್‌ ಪ್ರೇಕ್ಷಕರು

ಜೀವನ್‌ ಫುಡ್‌ ಡೆಲಿವರಿ ಮಾಡೋ ದೃಶ್ಯ ಗೌತಮ್‌ ದಿವಾನ್‌ ಕಣ್ಣಿಗೆ ಬಿತ್ತು; ಸೂಪರ್‌ ಎಪಿಸೋಡ್‌ ಅಂದ್ರು ಅಮೃತಧಾರೆ ಸೀರಿಯಲ್‌ ಪ್ರೇಕ್ಷಕರು

Amruthadhaare Serial Today Episode: ಅಮೃತಧಾರೆ ಧಾರಾವಾಹಿಯ ಇಂದಿನ ಪ್ರಮೋ ಬಿಡುಗಡೆಯಾಗಿದೆ. ಭೂಮಿಕಾಳಿಗೆ ಕ್ಲಾಸ್‌ ಬಂಕ್‌ ಮಾಡಿ ಎಂದು ಡುಮ್ಮ ಸರ್‌ ಸಲಹೆ ನೀಡಿದ್ದಾರೆ. ಜೀವನ್‌ ಫುಡ್‌ ಡೆಲಿವರಿ ಮಾಡಿದ್ದನ್ನು ಗೌತಮ್‌ ದಿವಾನ್‌ ನೋಡಿದ್ದಾರೆ. ಇಂದಿನ ಎಪಿಸೋಡ್‌ ಸೂಪರ್‌ ಆಗಿರಲಿದೆ ಎಂದು ಪ್ರೇಕ್ಷಕರು ಹೇಳಿದ್ದಾರೆ.

ಜೀವನ್‌ ಫುಡ್‌ ಡೆಲಿವರಿ ಮಾಡೋ ದೃಶ್ಯ ಗೌತಮ್‌ ದಿವಾನ್‌ ಕಣ್ಣಿಗೆ ಬಿತ್ತು
ಜೀವನ್‌ ಫುಡ್‌ ಡೆಲಿವರಿ ಮಾಡೋ ದೃಶ್ಯ ಗೌತಮ್‌ ದಿವಾನ್‌ ಕಣ್ಣಿಗೆ ಬಿತ್ತು

Amruthadhaare Serial Today Episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರವಾಹಿಯ ಇಂದಿನ ಸಂಚಿಕೆಯಲ್ಲಿ ಜೀವನ್‌ನ ಸಂಕಷ್ಟ ಬದುಕಿನ ಬಗ್ಗೆ ಗೌತಮ್‌ ದಿವಾನ್‌ಗೆ ತಿಳಿಯಲಿದೆ. ಝೀ ಕನ್ನಡ ವಾಹಿನಿಯು ಇಂದಿನ ಸಂಚಿಕೆಯ ಪ್ರಮೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಅಪ್ಲೋಡ್‌ ಮಾಡಿದ್ದು, ಸ್ವತಃ ಗೌತಮ್‌ ದಿವಾನ್‌ಗೆ ಫುಡ್‌ ಡೆಲಿವರಿ ಮಾಡುವಂತಹ ಕಷ್ಟ ಜೀವನ್‌ಗೆ ಎದುರಾಗಿದೆ. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದರೂ ಜೀವನ್‌ನನ್ನು ಗೌತಮ್‌ ಗುರುತಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಡೆಲಿವರಿ ಬಾಯ್‌ ಜೀವನ್‌

ಜೀವನ್‌ಗೆ ಪ್ರಮೋಷನ್‌ ಸಿಕ್ಕಿದೆ ಎಂದು ಮನೆಯವರೆಲ್ಲ ತಿಳಿದುಕೊಂಡಿದ್ದಾರೆ. ಮಹಿಮಾ ಕೂಡ ಇದೇ ರೀತಿ ತಿಳಿದುಕೊಂಡಿದ್ದಾಳೆ. ಆದರೆ, ಪ್ರಮೋಷನ್‌, ಹೈಕ್‌ ಕೊಡಬೇಕಾದ ಕಂಪನಿಯು ಜೀವನ್‌ಗೆ ಪಿಂಕ್‌ ಸ್ಲಿಪ್‌ ನೀಡಿತ್ತು. ಈ ರೀತಿ ಕೆಲಸ ಕಳೆದುಕೊಂಡ ಜೀವನ್‌ ಹಲವು ಕೆಲಸಗಳಿಗೆ ಟ್ರೈ ಮಾಡಿದ್ದಾನೆ. ಯಾವ ಕೆಲಸವೂ ದೊರಕಿರಲಿಲ್ಲ. ಇದೇ ವೇಳೆ ಮನೆಯಲ್ಲಿ ತಾನು ಕೆಲಸ ಕಳೆದುಕೊಂಡ ಸಂಗತಿಯನ್ನು ಜೀವನ್‌ ಯಾರಿಗೂ ಹೇಳಿರುವುದಿಲ್ಲ. ಇದೇ ಸಮಯದಲ್ಲಿ ಕೆಲಸ ದೊರಕುವ ತನಕ ಸಿಕ್ಕಸಿಕ್ಕ ಕೆಲಸ ಮಾಡು ಎಂದು ಸ್ನೇಹಿತನೊಬ್ಬ ಸಲಹೆ ನೀಡಿರುತ್ತಾನೆ. ಉದ್ಯೋಗ ಕಳೆದುಕೊಂಡೆ ಎಂದು ನಿರಾಶೆಯಾಗುವ ಬದಲು ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತ ಬೇರೆ ಕೆಲಸಕ್ಕೆ ಟ್ರೈ ಮಾಡುತ್ತಾ ಇರುತ್ತಾನೆ.

ಜೀವನ್‌ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುವ ದೃಶ್ಯ ಈಗಾಗಲೇ ಭೂಮಿಕಾಳ ಕಣ್ಣಿಗೆ ಬಿದ್ದಾಗಿದೆ. ತಮ್ಮನ ಕಷ್ಟ ನೋಡಲಾರದೆ ತನ್ನ ಒಡವೆಗಳನ್ನು ಅಡವಿಟ್ಟು ಭೂಮಿಕಾ ಹಣ ಹೊಂದಿಸಿದ್ದಾಳೆ. ಈ ಗಿರವಿಟ್ಟ ಚಿನ್ನದ ವಿಚಾರವೂ ಅಮೃತಧಾರೆ ಸೀರಿಯಲ್‌ನಲ್ಲಿ ಸದ್ದು ಮಾಡುತ್ತಿದೆ. ಚಿನ್ನ ಗಿರವಿಟ್ಟ ಭೂಮಿಕಾಳ ಕುರಿತು ಗೌತಮ್‌ಗೆ ತಿಳಿದುಬಂದಿದೆ. ಇದೀಗ ಜೀವನ್‌ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿರುವ ಸಂಗತಿ ಗೌತಮ್‌ ಕಣ್ಣಿಗೆ ಬಿದ್ದಿದೆ. ಈ ಮೂಲಕ ತನ್ನ ಪತ್ನಿ ಭೂಮಿಕಾ ಜೀವನ್‌ಗಾಗಿ ಇಷ್ಟೆಲ್ಲ ಮಾಡಿದ್ದಾಳೆ ಎಂಬ ಸತ್ಯವನ್ನು ಗೌತಮ್‌ ತಿಳಿದುಕೊಳ್ಳಲಿದ್ದಾರೆ.

ಶಕುಂತಲಾದೇವಿ ಏನೇ ಕೆಟ್ಟದ್ದು ಮಾಡಲು ಹೋದರೂ ಅದು ಗೌತಮ್‌ ಮತ್ತು ಭೂಮಿಕಾರನ್ನು ಇನ್ನಷ್ಟು ಹತ್ತಿರಕ್ಕೆ ಸೇರಿಸುತ್ತದೆ. ಈ ಚಿನ್ನ ಗಿರವಿಗಿಟ್ಟ ಕಥೆಯೂ ಇದೇ ರೀತಿ ಆಗಲಿದೆ ಎಂದು ಪ್ರೇಕ್ಷಕರು ಹೇಳಿದ್ದಾರೆ.

ಅಮೃತಧಾರೆಯ ಇಂದಿನ ಸಂಚಿಕೆ

ಝೀ ಕನ್ನಡ ವಾಹಿನಿ ಬಿಡುಗಡೆ ಮಾಡಿರು ಅಮೃತಧಾರೆಯ ಇಂದಿನ ಸಂಚಿಕೆಯ ಪ್ರಮೋ ನೋಡಿ ನೆಟ್ಟಿಗರು ಖುಷಿಪಟ್ಟಿದ್ದಾರೆ. ಟ್ಯೂಷನ್‌ ಕ್ಲಾಸ್‌ಗೆ ಗೌತಮ್‌ ತನ್ನ ಕಾರಿನಲ್ಲಿ ಭೂಮಿಕಾಳನ್ನು ಕರೆದುಕೊಂಡು ಬರುತ್ತಾನೆ. ಇವತ್ತು ಕ್ಲಾಸ್‌ಗೆ ಬಂಕ್‌ ಮಾಡಿ ಎಂದು ಗೌತಮ್‌ ಸಲಹೆ ನೀಡುತ್ತಾರೆ. ಕಾನ್ಸೆಪ್ಟ್‌ ಚೆನ್ನಾಗಿದೆ ಟೀಚರೇ ಕ್ಲಾಸ್‌ ಬಂಕ್‌ ಮಾಡೋದು ಎಂದು ಭೂಮಿಕಾ ನಗುತ್ತಾರೆ. ಆ ಸಮಯದಲ್ಲಿ ಗೆಳೆಯ ಆನಂದ್‌ ಕಾಲ್‌ ಮಾಡುತ್ತಾನೆ. ಇಂಪಾರ್ಟೆಂಟ್‌ ಮೀಟಿಂಗ್‌ ಇದೆ. ಮರೆತುಬಿಡಬೇಡ ಎನ್ನುತ್ತಾನೆ. ಅವರೆಲ್ಲರನ್ನೂ ಇಲ್ಲಿಗೆ ಕರೆದುಕೊಂಡು ಬಾ ಇಲ್ಲೇ ಮೀಟಿಂಗ್‌ ಮಾಡೋಣ ಎನ್ನುತ್ತಾನೆ. ಅದೇ ರೀತಿ ಆನಂದ್‌ ಎಲ್ಲರನ್ನೂ ಕರೆದುಕೊಂಡು ಬರುತ್ತಾನೆ. ಟ್ಯೂಷನ್‌ ಕ್ಲಾಸ್‌ ಪಕ್ಕದಲ್ಲಿಯೇ ಹೊರಗಡೆ ಇವರು ಮೀಟಿಂಗ್‌ ಮಾಡುತ್ತಾರೆ.

ಮೀಟಿಂಗ್‌ ಮಾಡುತ್ತ ಮಧ್ಯಾಹ್ನವಾಗುತ್ತದೆ. ಊಟಕ್ಕೆ ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡುತ್ತಾರೆ. ದುರಾದೃಷ್ಟವಶಾತ್‌ ಆರ್ಡರ್‌ ಡೆಲಿವರಿ ಮಾಡಲು ಜೀವನ್‌ ಬರುತ್ತಾನೆ. ಅಲ್ಲಿ ಗೌತಮ್‌ನನ್ನು ನೋಡಿ ಮುಖಕ್ಕೆ ಟವಲ್‌ ಕಟ್ಟಿಕೊಳ್ಳುತ್ತಾನೆ. ಹೀಗಿದ್ದರೂ ಗೌತಮ್‌ ಜೀವನ್‌ನನ್ನು ಗುರುತಿಸುತ್ತಾನೆ. "ಜೀವನ್‌ ಗೌತಮ್‌ ಹತ್ರ ಸಿಕ್ಕಿಹಾಕಿಕೊಂಡ. ಇನ್ನೂ ಜೀವನ್‌ನ ಎಲ್ಲಾ ಸಮಸ್ಯೆಗಳನ್ನು ಗೌತಮ್‌ ಸರಿಮಾಡುತ್ತಾರೆ" "ಟೀಚರ್‌ ಕ್ಲಾಸ್‌ ಬಂಕ್‌ ಮಾಡೋದು, ಜೀವನ್‌ಗೆ ಗೌತಮ್‌ ಹೆಲ್ಪ್‌ ಮಾಡೋದು, ವಾಹ್‌ ಸೂಪರ್‌" ಎಂದು ಸೋಷಿಯಲ್‌ ಮೀಡಿಯಾದಲ್ಲಿ ಪ್ರೇಕ್ಷಕರು ತಮ್ಮ ಅಭಿಪ್ರಾಯ ದಾಖಲಿಸುತ್ತಿದ್ದಾರೆ. ಇವತ್ತಿನ ಎಪಿಸೋಡ್‌ ಸೂಪರ್‌ ಆಗಿರಲಿದೆ, ಕಾಯ್ತಾ ಇದ್ದೀವಿ ಎಂದೆಲ್ಲ ಕಾಮೆಂಟ್‌ ಮಾಡಿದ್ದಾರೆ.

IPL_Entry_Point