ಅಮೃತಧಾರೆಯಲ್ಲಿ ಭಾವನಾತ್ಮಕ ತಿರುವು: ಗೌತಮ್‌ ಅಮ್ಮ-ತಂಗಿ ಕಥೆ ಶುರು; ಭಾಗ್ಯಾಳನ್ನು ಕೊಂದ ಲಕ್ಷ್ಮಿಕಾಂತ್‌ ಗಡಗಡ-televison news amruthadhaare serial today episode goutham mother sister story laxmikant shakuntala discuss bhagya pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಅಮೃತಧಾರೆಯಲ್ಲಿ ಭಾವನಾತ್ಮಕ ತಿರುವು: ಗೌತಮ್‌ ಅಮ್ಮ-ತಂಗಿ ಕಥೆ ಶುರು; ಭಾಗ್ಯಾಳನ್ನು ಕೊಂದ ಲಕ್ಷ್ಮಿಕಾಂತ್‌ ಗಡಗಡ

ಅಮೃತಧಾರೆಯಲ್ಲಿ ಭಾವನಾತ್ಮಕ ತಿರುವು: ಗೌತಮ್‌ ಅಮ್ಮ-ತಂಗಿ ಕಥೆ ಶುರು; ಭಾಗ್ಯಾಳನ್ನು ಕೊಂದ ಲಕ್ಷ್ಮಿಕಾಂತ್‌ ಗಡಗಡ

Amruthadhaare Serial Today Episode: ಅಮೃತಧಾರೆ ಧಾರಾವಾಹಿ ಭಾವನಾತ್ಮಕ ತಿರುವು ಪಡೆದಿದೆ. ಗೌತಮ್‌ ತನ್ನ ಅಮ್ಮ ಮತ್ತು ತಂಗಿಯ ಕಥೆಯನ್ನು ಭೂಮಿಕಾಳಿಗೆ ಹೇಳುತ್ತಾನೆ. ಇದೇ ಸಮಯದಲ್ಲಿ ಶಕುಂತಲಾದೇವಿ ಮತ್ತು ಲಕ್ಷ್ಮಿಕಾಂತ್‌ ಭಾಗ್ಯಾಳ ಸಾವಿನ ಕುರಿತು ಚರ್ಚಿಸುತ್ತಿದ್ದಾರೆ.

ಅಮೃತಧಾರೆಯಲ್ಲಿ ಭಾವನಾತ್ಮಕ ತಿರುವು: ಗೌತಮ್‌ ಅಮ್ಮ-ತಂಗಿ ಕಥೆ ಶುರು
ಅಮೃತಧಾರೆಯಲ್ಲಿ ಭಾವನಾತ್ಮಕ ತಿರುವು: ಗೌತಮ್‌ ಅಮ್ಮ-ತಂಗಿ ಕಥೆ ಶುರು

Amruthadhaare Serial Today Episode: ಗೌತಮ್‌ ಹಳೆ ನೆನಪುಗಳಲ್ಲಿದ್ದಾರೆ. "ನಿಮ್ಮ ತಂಗಿ ಬಗ್ಗೆ ಹೇಳಿ" ಎಂದು ಭೂಮಿಕಾ ಕೇಳುತ್ತಾರೆ. "ನನ್ನ ತಂಗಿ ನನಗೆ ಸಿಕ್ಕಿದ್ದು ಕಡಿಮೆ. ಸಿಕ್ಕಿದ್ದು ಕೆಲವೇ ಕೆಲವೇ ವರ್ಷ. ಮಗುವಾಗಿದ್ದಾಗ ಬಹಳ ಮುದ್ದಾಗಿದ್ದಳು" ಎಂದು ನೆನಪಿಸಿಕೊಳ್ಳುತ್ತಾರೆ ಡುಮ್ಮಸರ್‌. ಹಳೆಯ ದೃಶ್ಯಗಳು ಮೂಡುತ್ತವೆ. "ನನಗಿನ್ನೂ ನೆನಪಿದೆ, ಅಮ್ಮ ಅವಳನ್ನು ನನ್ನ ಮಡಿಲಿಗೆ ಹಾಕಿದಾಗ ಖುಷಿಯಾಗುತ್ತಿತ್ತು" ಎಂದೆಲ್ಲ ನೆನಪಿಸಿಕೊಳ್ಳುತ್ತಾರೆ."ನನಗೆ ತಂಗಿಯೆಂದರೆ ತುಂಬಾ ಪ್ರೀತಿ, ಅವಳನ್ನು ಬಹಳಷ್ಟು ಹಚ್ಚಿಕೊಂಡಿದ್ದೆ." ಎಂದು ಹೇಳುತ್ತಾರೆ. "ಲಾಲಿ ಜೋ ಲಾಲಿ ಜೋ" ಎಂದು ನೆನಪುಗಳು ಥಕಥೈ ಕುಣಿಯುತ್ತವೆ.

ಗೌತಮ್‌ನ ಅಮ್ಮ ಮತ್ತು ತಂಗಿಗೆ ಏನಾಯ್ತು?

ಇದೇ ಸಮಯದಲ್ಲಿ ಭೂಮಿಕಾ "ನಿಮ್ಮ ಅಮ್ಮ ಮತ್ತು ತಂಗಿಗೆ ಏನಾಯ್ತು? ಏನಾಯ್ತು ಅವರಿಗೆ?" ಎಂದು ಕೇಳುತ್ತಾಳೆ. ಗೌತಮ್‌ ಮನಸ್ಸಲ್ಲಿ ಬಿರುಗಾಳಿ ಮೂಡುತ್ತದೆ. "ಅಮ್ಮ ಅಪ್ಪನ ಬಿಟ್ಟು ಹೊರಟು ಹೋದ್ರು" ಎಂದು ಹೇಳುತ್ತಾರೆ. "ಬಿಟ್ಟು ಹೋದ್ರ, ಯಾಕೆ?" ಎಂದು ಕೇಳುತ್ತಾಳೆ. "ನನ್ನದು ಚಿಕ್ಕ ವಯಸ್ಸು, ಯಾಕೆ ಎಂದು ಗೊತ್ತಿಲ್ಲ. ಒಬ್ಬರನೊಬ್ಬರನ್ನು ಪ್ರೀತಿ ಮಾಡ್ತಾ ಇದ್ರು. ಬಳಿಕ ಅವರಿಬ್ಬರ ನಡುವೆ ಜಗಳ ಶುರುವಾಯ್ತು. ಮಕ್ಕಳ ಎದುರು ಜಗಳ ಆಡಬಾರದು ಎಂದು ನಮ್ಮನ್ನು ಒಂದು ಕೋಣೆಯಲ್ಲಿ ಕೂಡಿ ಹಾಕಿ ಅವರಿಬ್ಬರು ಜಗಳವಾಡ್ತಾ ಇದ್ರು. ಬಳಿಕ ಅಮ್ಮ ರೂಂಗೆ ಬಂದ್ಲು. ಒಂದೇ ಸಮನೆ ಅಳ್ತಾ ಇದ್ಲು. ಅಳ್ತಾ ಅಳ್ತಾ ನನ್ನ ಬಟ್ಟೆಯನ್ನ, ನನ್ನ ತಂಗಿ ಬಟ್ಟೆಯನ್ನ ಪ್ಯಾಕ್‌ ಮಾಡಿ ಹೊರಟೇ ಬಿಟ್ಲು. ನಾನು ಅಮ್ಮನ ಹಿಂದೆ ಓಡಿ ಹೋದೆ, ನನ್ನ ಬಿಟ್ಟು ಹೋಗಬೇಡ ಎಂದ ಅತ್ತೆ. ಅವಳು ಕೇಳಲೇ ಇಲ್ಲ" ಎಂದು ಆ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.

ಗೌತಮ್‌ಗೆ ಕತ್ತಲೆ ಎಂದರೆ ಭಯ ಏಕೆ?

"ನನ್ನನ್ನು ಒಂದು ಕೋಣೆಯಲ್ಲಿ ಹಾಕಿದ್ದಳು. ನನ್ನನ್ನು ಬಿಟ್ಟು ಹೋಗಬೇಡ ಅಮ್ಮ ಎಂದು ಗೋಗರೆದೆ. ಅವಳ ಮನಸ್ಸು ಕರಗಳೇ ಇಲ್ಲ. ನನ್ನನ್ನು ಕತ್ತಲೆ ಕೋಣೆಯಲ್ಲಿ ಬಿಟ್ಟು ನನ್ನಮ್ಮ ಹೊರಟೇ ಹೋದಳು. ಎಂದು ಭಾವುಕರಾಗಿ ನೆನಪಿಸಿಕೊಳ್ಳುತ್ತಾರೆ. "ಅವತ್ತು ನನ್ನಮ್ಮ ನನ್ನನ್ನು ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿದ್ರಲ್ವ. ಅವತ್ತಿನಿಂದ ಕತ್ತಲೆಂದರೆ ನನಗೆ ಭಯ" ಎಂದು ತನ್ನ ಕತ್ತಲೆ ಭಯದ ಕಾರಣ ತಿಳಿಸುತ್ತಾರೆ ಗೌತಮ್. "ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿದ್ದಕ್ಕ, ಅಮ್ಮ ನನ್ನನ್ನು ಬಿಟ್ಟು ಹೋಗಿರುವುದಕ್ಕ? ನಾನು ಭಯಗೊಂಡಿರುವುದು ಎಂದು ತಿಳಿದಿಲ್ಲ" ಎಂದು ಹೇಳುತ್ತಾರೆ ಗೌತಮ್‌. ಭೂಮಿಕಾ ಕೂಡ ಗೌತಮ್‌ ಕಥೆ ಹೇಳಿ ಭಾವುಕರಾಗುತ್ತಾರೆ. "ಗೌತಮ್‌ ಬೇಜಾರು ಮಾಡಬೇಡಿ. ನಿಮ್ಮ ತಂಗಿ ನಿಮಗೆ ಸಿಕ್ಕೇ ಸಿಗುತ್ತಾಳೆ" ಎಂದು ಭೂಮಿಕಾ ಭರವಸೆಯ ಮಾತುಗಳನ್ನಾಡುತ್ತಾರೆ.

"ಇದಾದ ಬಳಿಕ ಅಪ್ಪನೂ ಹೋಗಿಬಿಟ್ರು. ಅಪ್ಪ ನಿಭಾಯಿಸಿದ ಜವಾಬ್ದಾರಿಗಾಗಿ ಇವರೆಲ್ಲರನ್ನೂ ನೋಡಿಕೊಳ್ತಾ ಇದ್ದೇನೆ" ಎಂದು ಗೌತಮ್‌ ವಿವರಿಸುತ್ತಾರೆ. "ನಿಮಗೂ ನಿಮ್ಮ ಅಮ್ಮ ಸಿಗುತ್ತಾರೆ. ನಿಮ್ಮ ತಂಗಿನೂ ಬರುತ್ತಾರೆ. ನಿಮಗೆ ಸಿಕ್ಕೇ ಸಿಗುತ್ತಾರೆ" ಎಂದು ಭೂಮಿಕಾ ಭರವಸೆ ನೀಡುತ್ತಾರೆ. ಅಮ್ಮನ ಹುಡುಕೋ ಪ್ರಯತ್ನ ಏಕೆ ಮಾಡಿಲ್ಲ ಎಂದೂ ಕೇಳುತ್ತಾರೆ.ಅಮ್ಮನ ಹುಡುಕಿಸಲು ಮಾಡದ ಪ್ರಯತ್ನ ಇಲ್ಲ, ಏಜೆನ್ಸಿ, ಜನರ ಮೂಲಕ ಹುಡುಕಿದೆ. ಈಗಲೂ ಜನರು ಹುಡುಕುತ್ತಾ ಇದ್ದಾರೆ ಎಂದು ಗೌತಮ್‌ ಹೇಳುತ್ತಾರೆ.

ಶಕುಂತಲಾದೇವಿಗೂ ಶುರುವಾಯ್ತು ಆತಂಕ

ಇದೇ ಸಮಯದಲ್ಲಿ ಲಕ್ಷ್ಮಿಕಾಂತ್‌ ಭಯದಿಂದ ಶಕುಂತಲಾದೇವಿ ಕೊಠಡಿಗೆ ಬರುತ್ತಾರೆ. ಭಯದಿಂದ ಇರುತ್ತಾರೆ. ನನಗೆ ಕನಸಲ್ಲಿ ಭಾಗ್ಯ ಕಾಣಿಸಿದ್ಲು ಎಂದು ಹೇಳುತ್ತಾನೆ. ಶಕುಂತಲಾದೇವಿಗೂ ಭಯವಾಗುತ್ತದೆ. "ಅವಳನ್ನು ಮರೆತು ಎಷ್ಟೋ ಕಾಲವಾಯ್ತು. ಅವಳು ಕನಸಲ್ಲಿ ಬಂದ್ಲು ಅಂತಿಯಲ್ವ" ಎಂದು ಹೇಳುತ್ತಾಳೆ ಶಕುಂತಲಾ."ಭಾಗ್ಯ ನನ್ನ ಕನಸಲ್ಲಿ ಬಂದ್ಲು. ಅವಳು ಬಾಗಿಲಲ್ಲಿ ಬರ್ತಾ ಇದ್ಲು. ಸೀದಾ ನನ್ನ ಕೊಠಡಿಗೆ ಬಂದ್ಲು. ತಕ್ಷಣ ಎಚ್ಚರವಾಯ್ತು" ಎಂದು ಲಕ್ಷ್ಮಿಕಾಂತ್‌ ಹೇಳುತ್ತಾರೆ. "ಅವಳು ಅವತ್ತೇ ಸತ್ತು ಹೋಗಿದ್ದಾಳೆ. ಅವಳ ಎಲುಬು ಕೂಡ ಸಿಗೋದಿಲ್ಲ" ಎಂದು ಶಕುಂತಲಾದೇವಿ ಹೇಳುತ್ತಾರೆ. "ಅವಳ ಗಾಡಿಗೆ ಆಕ್ಸಿಡೆಂಟ್‌ ಮಾಡಿದ್ದು, ಅವಳು ಸತ್ತಿರುವುದನ್ನು ಖಚಿತಪಡಿಸಿಕೊಂಡು ತಾನೇ ನಾನು ವಾಪಸ್‌ ಬಂದದ್ದು" ಎಂದು ಹೇಳುತ್ತಾನೆ. "ಸತ್ತರೆ ಏನಂತೆ, ದೆವ್ವವಾಗಿ ಬರಬಹುದಲ್ವ?" ಎಂದು ಆತಂಕ ವ್ಯಕ್ತಪಡಿಸುತ್ತಾಳೆ.

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)

ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)

ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)

ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)

ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)

ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)

ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)

ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)

ರಣವ್‌: ಜೈದೇವ್‌

ಚಂದನ್‌: ಅಶ್ವಿನಿ

ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)

ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)

mysore-dasara_Entry_Point