Amruthadhaare: ಹೆಂಡ್ತಿಗೆ ಚಿಕ್ಕಮಗಳೂರು ಎಸ್ಟೇಟ್ ಗಿಫ್ಟ್ ನೀಡಲು ಮುಂದಾದ ಗೌತಮ್; ಹನಿಮೂನ್ ಪ್ರಯಾಣದಲ್ಲಿ ಭೂಮಿಕಾಳಿಗೆ ಖುಷಿಯೋ ಖುಷಿ
- Amruthadhaare Serial Today Episode: ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಹಲವು ಸನ್ನಿವೇಶಗಳು ಇವೆ. ಗೌತಮ್ ಮತ್ತು ಭೂಮಿಕಾ ತೆರೆದ ಜೀಪ್‌ನಲ್ಲಿ ಚಿಕ್ಕಮಗಳೂರು ಕಡೆಗೆ ಪ್ರಯಾಣ ಬೆಳೆಸಿರುವುದು ಸದ್ಯ ಝೀ ಕನ್ನಡ ವಾಹಿನಿಯ ಬಿಡುಗಡೆ ಮಾಡಿರುವ ಪ್ರಮೋದಲ್ಲಿ ಕಾಣಿಸಿದೆ.
- Amruthadhaare Serial Today Episode: ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಹಲವು ಸನ್ನಿವೇಶಗಳು ಇವೆ. ಗೌತಮ್ ಮತ್ತು ಭೂಮಿಕಾ ತೆರೆದ ಜೀಪ್‌ನಲ್ಲಿ ಚಿಕ್ಕಮಗಳೂರು ಕಡೆಗೆ ಪ್ರಯಾಣ ಬೆಳೆಸಿರುವುದು ಸದ್ಯ ಝೀ ಕನ್ನಡ ವಾಹಿನಿಯ ಬಿಡುಗಡೆ ಮಾಡಿರುವ ಪ್ರಮೋದಲ್ಲಿ ಕಾಣಿಸಿದೆ.
(1 / 10)
ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಹಲವು ಸನ್ನಿವೇಶಗಳು ಇವೆ. ಗೌತಮ್ ಮತ್ತು ಭೂಮಿಕಾ ತೆರೆದ ಜೀಪ್‌ನಲ್ಲಿ ಚಿಕ್ಕಮಗಳೂರು ಕಡೆಗೆ ಪ್ರಯಾಣ ಬೆಳೆಸಿರುವುದು ಸದ್ಯ ಝೀ ಕನ್ನಡ ವಾಹಿನಿಯ ಬಿಡುಗಡೆ ಮಾಡಿರುವ ಪ್ರಮೋದಲ್ಲಿ ಕಾಣಿಸಿದೆ.
(2 / 10)
ಭೂಮಿಕಾಳಿಗೆ ಮದುವೆಯಾದ ಬಳಿಕ ಏನೂ ಗಿಫ್ಟ್ ನೀಡಿಲ್ಲ. ಅದಕ್ಕೆ ನಮ್ಮ ಚಿಕ್ಕಮಗಳೂರು ಎಸ್ಟೇಟ್ ಅನ್ನೇ ಉಡುಗೊರೆಯಾಗಿ ನೀಡಲು ನಿರ್ಧರಿಸಿದ್ದೇನೆ ಎಂದು ಗೌತಮ್ ಹೇಳುತ್ತಾರೆ.
(3 / 10)
ಈ ವಿಷಯ ಕೇಳಿ ಅಜ್ಜಮ್ಮ ಖುಷಿಯಾಗಿದ್ದಾರೆ. ಓಕೆ ಕೊಡು, ಆದರೆ, ನಮಗೆ ಮೊಮ್ಮಗನ ನೀಡಲು ಮರೆಯಬೇಡ ಎಂದು ಹೇಳಿದ್ದಾರೆ.
(4 / 10)
ಚಿಕ್ಕಮಗಳೂರು ಎಸ್ಟೇಟ್ ಗಿಫ್ಟ್ ನೀಡುವ ಗೌತಮ್ ನಿರ್ಧಾರವನ್ನು ಮನೆಹಾಳ ಮಾವ ಕೇಳಿಸಿಕೊಂಡಿದ್ದಾರೆ. ಈ ವಿಷಯವನ್ನು ಶಕುಂತಲಾದೇವಿ ಕಿವಿಗೆ ಹಾಕೋದು ಪಕ್ಕ. ಬಳಿಕ ಇವರು ಅಸೂಯೆವ್ಯಕ್ತಪಡಿಸುವುದು ಗ್ಯಾರಂಟಿ.
(5 / 10)
ಇಂದಿನ ಸಂಚಿಕೆಯಲ್ಲಿ ಗೌತಮ್ ಮತ್ತು ಭೂಮಿಕಾ ತೆರೆದ ಜೀಪ್‌ನಲ್ಲಿ ಚಿಕ್ಕಮಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿನ ಪ್ರಕೃತಿ ಸೌಂದರ್ಯ ನೋಡಿ ಭೂಮಿಕಾ ಖುಷಿಯಿಂದ ಕುಣಿದು ಕುಪ್ಪಳಿಸಿದ್ದಾರೆ.
(6 / 10)
ಒಟ್ಟಾರೆ ಗೌತಮ್ ಮತ್ತು ಭೂಮಿಕಾರಿಗೆ ತಮ್ಮ ಹೃದಯದ ಮಾತುಗಳನ್ನು ಹೇಳಲು ಪ್ರಸಕ್ತ ಸ್ಥಳ ನಿಗದಿಯಾಗಿದೆ. ಈ ಹನಿಮೂನ್ ಮೂಲಕ ಇಬ್ಬರು ಮೂವರಾಗುವ ಕನಸಿನಲ್ಲಿ ಗೌತಮ್ ಮನೆಯವರಿದ್ದಾರೆ.
(7 / 10)
ಚಿಕ್ಕಮಗಳೂರಿನಲ್ಲಿ ಇನ್ನೂ ಹಲವು ತೊಂದರೆಗಳು ಇವೆ. ಅಲ್ಲಿನ ಜಮೀನನ್ನು ಕಬಳಿಸಲು ಕೆಂಚ ಕಾಯ್ತಾ ಇದ್ದಾನೆ. ಆತನಿಂದ ಇವರಿಗೆ ಏನಾದರೂ ತೊಂದರೆ ಎದುರಾಗಬಹುದೇ ಎಂದು ಕಾದುನೋಡಬೇಕಿದೆ.
(8 / 10)
ಇದೇ ಸಮಯದಲ್ಲಿ ಭೂಮಿಕಾಳ ಹೆಸರಿಗೆ ಚಿಕ್ಕಮಗಳೂರು ಎಸ್ಟೇಟ್ ಬರೆಯಲು ಪ್ರಯತ್ನಿಸುವ ಗೌತಮ್‌ಗೆ ಶಕುಂತಲಾ ಕಡೆಯಿಂದ ಏನಾದರೂ ತೊಂದರೆಯಾಗಬಹುದೇ ಎಂಬ ಆತಂಕವೂ ಇದೆ.
(9 / 10)
ಇಂತಹ ಹಲವು ಆತಂಕಗಳ ನಡುವೆ ಗೌತಮ್ ಮತ್ತು ಭೂಮಿಕಾರ ಹನಿಮೂನ್ ಸುಸೂತ್ರವಾಗಿ ನಡೆದರೆ ಸಾಕು ಎಂದು ನೆಟ್ಟಿಗರು ಅಮೃತಧಾರೆ ಪ್ರಮೋಗೆ ಕಾಮೆಂಟ್ ಮಾಡಿದ್ದಾರೆ.
ಇತರ ಗ್ಯಾಲರಿಗಳು