ಕಪಾಳ ಮೋಕ್ಷದ ಬಳಿಕ ಜೈದೇವ್‌ಗೆ ಶಿಕ್ಷೆ ನೀಡಿದ ಗೌತಮ್‌ ದಿವಾನ್‌, ಭೂಮಿಕಾ ನೀಡಿದ ಗಿಫ್ಟ್‌ ನೋಡಿ ಡುಮ್ಮಸಾರ್‌ ಭಾವುಕ- ಅಮೃತಧಾರೆ ಧಾರಾವಾಹಿ-televison news amruthadhaare serial today episode goutham punishes jaydev bhumika douts about this change pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಕಪಾಳ ಮೋಕ್ಷದ ಬಳಿಕ ಜೈದೇವ್‌ಗೆ ಶಿಕ್ಷೆ ನೀಡಿದ ಗೌತಮ್‌ ದಿವಾನ್‌, ಭೂಮಿಕಾ ನೀಡಿದ ಗಿಫ್ಟ್‌ ನೋಡಿ ಡುಮ್ಮಸಾರ್‌ ಭಾವುಕ- ಅಮೃತಧಾರೆ ಧಾರಾವಾಹಿ

ಕಪಾಳ ಮೋಕ್ಷದ ಬಳಿಕ ಜೈದೇವ್‌ಗೆ ಶಿಕ್ಷೆ ನೀಡಿದ ಗೌತಮ್‌ ದಿವಾನ್‌, ಭೂಮಿಕಾ ನೀಡಿದ ಗಿಫ್ಟ್‌ ನೋಡಿ ಡುಮ್ಮಸಾರ್‌ ಭಾವುಕ- ಅಮೃತಧಾರೆ ಧಾರಾವಾಹಿ

ಅಮೃತಧಾರೆ ಧಾರಾವಾಹಿ ಬುಧವಾರದ ಸಂಚಿಕೆ: ಝೀ ಕನ್ನಡ ವಾಹಿನಿಯ ಅಮೃತಧಾರೆಯಲ್ಲಿ ಗೌತಮ್ ಜೈದೇವ್‌ಗೆ ಗೃಹಬಂಧನದ ಶಿಕ್ಷೆ ನೀಡಿದ್ದಾನೆ. ಮನೆಯಿಂದ ಹೊರಕ್ಕೆ ಹೋಗದೆ ಮಲ್ಲಿಯನ್ನು ನೋಡಿಕೊಳ್ಳುವ ಅನಿವಾರ್ಯತೆಗೆ ಸಿಲುಕಿದ್ದಾನೆ. ಇನ್ನೊಂದೆಡೆ ಭೂಮಿಕಾಳಿಗೆ ಗೌತಮ್‌ ನಿರ್ಧಾರದ ಕುರಿತು ಅನುಮಾನ ಹೆಚ್ಚಾಗುತ್ತಿದೆ.

ಜೈದೇವ್‌ಗೆ ಶಿಕ್ಷೆ ನೀಡಿದ ಗೌತಮ್‌ ದಿವಾನ್‌, ಅಮೃತಧಾರೆ ಧಾರಾವಾಹಿ
ಜೈದೇವ್‌ಗೆ ಶಿಕ್ಷೆ ನೀಡಿದ ಗೌತಮ್‌ ದಿವಾನ್‌, ಅಮೃತಧಾರೆ ಧಾರಾವಾಹಿ

ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವ್‌ಗೆ ಗೌತಮ್‌ ಕಪಾಳ ಮೋಕ್ಷ ಮಾಡಿದ್ದಾರೆ. ಇಷ್ಟು ಮಾತ್ರವಲ್ಲ, ಇನ್ನುಮುಂದೆ ಮನೆಯಿಂದ ಎಲ್ಲಿಗೂ ಹೋಗಬಾರದು ಎಂಬ ಶಿಕ್ಷೆಯನ್ನೂ ವಿಧಿಸುತ್ತಾರೆ. "ಯಾಕೆ ಎಲ್ಲಿಗೂ ಹೋಗಬಾರದು" ಎಂದು ಶಕುಂತಲಾದೇವಿ ಕೇಳಿದಾಗ "ಅವನಿಗೆ ಅಲ್ಲಿಗಿಂತ ಇಲ್ಲಿ ಅವಶ್ಯಕತೆ ಹೆಚ್ಚಿದೆ" ಎನ್ನುತ್ತಾರೆ. "ಮನೆ ಕೆಲಸ ಮಾಡೋಕ್ಕೆ ಮನೆ ಕೆಲಸದವರು ಇದ್ದಾರೆ. ಅವನಿಗೆ ಇಲ್ಲಿ ಏನೂ ಕೆಲಸ" ಎನ್ನುತ್ತಾರೆ ಮನೆಹಾಳ ಮಾವ. "ಮನೆಯವರನ್ನು ಕೇರ್‌ ಮಾಡಲು ಮನೆಯವರೇ ಇರಬೇಕು ಅಲ್ವ. ಜೈದೇವ್‌ ಮಲ್ಲಿಯನ್ನು ನೋಡಿಕೊಳ್ಳಬೇಕು" ಎಂದು ಹೇಳುತ್ತಾರೆ. "ಹೆಂಗಸರಿಗೆ ಪ್ರೆಗ್ನೆನ್ಸಿ ಟೈಮ್‌ನಲ್ಲಿ ರಜೆ ನೀಡುವಂತೆ ನಮ್ಮ ಕಂಪನಿಯಲ್ಲಿ ಗಂಡಸರಿಗೆ ರಜೆ ಆರಂಭಿಸಿದ್ದೇವೆ. ಅದೇ ರೀತಿ ಜೈದೇವ್‌ಗೆ ರಜೆ ನೀಡುತ್ತಿದ್ದೇನೆ" ಎನ್ನುತ್ತಾರೆ. "ಮಲ್ಲಿ ಪ್ರೆಗ್ನೆಂಟ್‌ ಇದ್ದಾಳೆ. ಗಂಡ ಆದವನು ಜತೆಗೆ ಇರದೆ ಇದ್ದರೆ ಹೇಗೆ. ಇನ್ಮೆಲೆ ಜೈದೇವ್‌ ಆಫೀಸ್‌ಗೆ ಬರೋದು ಬೇಡ. ಮಲ್ಲಿಯನ್ನು ಚೆನ್ನಾಗಿ ನೋಡಬೇಕು" ಎಂದು ಗೌತಮ್‌ ಹೇಳಿದಾಗ ಜೈದೇವ್‌ಗೆ ಟೆನ್ಷನ್‌ ಆಗುತ್ತದೆ. ಇನ್ಮುಂದೆ ದಿಯಾಳನ್ನು ಭೇಟಿಯಾಗಲು ಆಗೋದಿಲ್ಲ ಎಂದು ಜೈದೇವ್‌ಗೆ ಟೆನ್ಷನ್‌ ಆಗುತ್ತದೆ. "ಈ ಗೌತಮ್‌ ಏನಾದರೂ ಮಾಡ್ತಾನೆ. ಆದರೆ, ಇದರ ಹಿಂದಿನ ಕಾರಣವೇನು" ಎಂದು ಶಕುಂತಲಾದೇವಿ ಯೋಚಿಸುತ್ತಾರೆ. "ನೀನು ನಿನ್ನ ತಾತಾನ ರೀತಿ. ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರ ತೆಗೆದುಕೊಂಡಿದ್ದೀಯ" ಎಂದು ಅಜ್ಜಮ್ಮ ಹೇಳುತ್ತಾರೆ. "ಸಡನ್‌ ಆಗಿ ಈ ನಿರ್ಧಾರ ಯಾಕೆ" ಎಂದು ಭೂಮಿಕಾ ಕೂಡ ಯೋಚಿಸುತ್ತಾರೆ.

ಮಂದಾಕಿನಿ ಮತ್ತು ಸದಾಶಿವ ಮನೆಯಲ್ಲಿ ಮಹಿಮಾ ಯೋಚಿಸುತ್ತಾ ಇದ್ದಾರೆ. "ಮನೆಯಲ್ಲಿ ಅತ್ತೆ ಟೆನ್ಷನ್‌ನಲ್ಲಿದ್ದಾರೆ. ಅಪ್ಪ ಹೊರಗೆ ಹೋಗಿದ್ದಾರೆ" ಎಂದು ಮಹಿಮಾ ಹೇಳುತ್ತಾಳೆ. "ಹೀಗೆ ಆಗಿದೆ ಎಂದು ಗೌತಮ್‌ಗೆ ಹೇಳೋಣ್ವ" ಎಂದು ಹೇಳುತ್ತಾಳೆ. "ಗೌತಮ್‌ಗೆ ಹೇಳಿದ್ರೆ ಅಕ್ಕನಿಗೆ ಗೊತ್ತಾಗುತ್ತದೆ. ಸ್ವಲ್ಪ ದಿನ ಕಾಯೋಣ" ಎಂದು ಮಹಿಮಾ ಹೇಳುತ್ತಾಳೆ.

ಜೈದೇವ್‌ಗೆ ಗೃಹಬಂಧನ

ದಿವಾನ್‌ ಮನೆಯಲ್ಲಿ ಜೈದೇವ್‌ ಟೆನ್ಷನ್‌ನಲ್ಲಿದ್ದಾನೆ. ಆಗ ಅಲ್ಲಿಗೆ ಬಂದ ಶಕುಂತಲಾದೇವಿ ಬರುತ್ತಾರೆ. "ಏನು ಯಡವಟ್ಟು ಮಾಡಿಕೊಂಡೆ" ಎಂದು ಶಕುಂತಲಾದೇವಿ ಕೇಳುತ್ತಾರೆ. "ನಾನು ಯಾರನ್ನು ಬೇಕಾದ್ರೂ ನಂಬ್ತಿನಿ. ಆದರೆ ನಿನ್ನನ್ನು ಪೂರ್ತಿ ನಂಬೋದಿಲ್ಲ" ಎಂದು ಹೇಳುತ್ತಾರೆ. "ಇನ್ಮುಂದೆ ನಿನಗೆ ಮನೆಯೂಟವೇ ಗತಿ" ಎಂದು ಮನೆಹಾಳ ಮಾವನೂ ಕಾಮೆಂಟ್‌ ಮಾಡುತ್ತಾರೆ. "ಇನ್ನು ದಿನಪೂರ್ತಿ ಇವಳ ಮುಖ ನೋಡಿಕೊಂಡೆ ಕಳೆಯಬೇಕಲ್ವ" ಎಂದು ಜೈದೇವ್‌ ಯೋಚಿಸಿದಾಗ ಮಲ್ಲಿ ರೀ ಎಂದು ಕರೆಯುತ್ತಾಳೆ.

ಗೌತಮ್‌ ಏನೋ ಯೋಚನೆ ಮಾಡುತ್ತ ಇದ್ದಾರೆ. ಯಾಕೆ ಈ ನಿರ್ಧಾರ ತೆಗೆದುಕೊಂಡಿದ್ದೀರಿ ಎಂದು ಭೂಮಿಕಾ ಕೇಳಿದಾಗ "ಇದು ಈಗಿನ ನಿರ್ಧಾರ ಅಲ್ಲ. ಮೊದಲೇ ಯೋಚಿಸಿದ್ದೆ" ಎಂದು ಗೌತಮ್‌ ಹೇಳುತ್ತಾರೆ. "ಏನೇನೋ ಹೇಳಿ ತೇಪೆ ಹಚ್ಚಬೇಡಿ. ನಿಜವಾದ ಕಾರಣ ಏನಿದೆ. ನಿಜ ಹೇಳಿ" ಎನ್ನುತ್ತಾರೆ ಭೂಮಿಕಾ. "ಜೈದೇವ್‌ನನ್ನು ದಿಯಾಳಿಂದ ದೂರ ಇಡಬೇಕು. ಮಲ್ಲಿಯ ಹತ್ತಿರವಾಗಲು ದಿಯಾಳಿಂದ ದೂರವಾಗಲು ಇದು ಆಗಬೇಕು" ಎಂದು ಗೌತಮ್‌ ಕಾರಣ ಹೇಳುತ್ತಾರೆ. "ಮತ್ತೆ ಕೇಳ್ತಿನಿ, ನಿಜವಾಗಿಯೂ ಅಷ್ಟೇನಾ" ಎಂಬ ಅನುಮಾನದಿಂದ ಭೂಮಿಕಾ ಕೇಳುತ್ತಾಳೆ. "ಅಷ್ಟು ಹೇಳಿದ್ರೂ ಡೌಟ" ಎನ್ನುತ್ತಾನೆ. "ಬೇರೆ ಏನೂ ಇಲ್ಲ. ಇಂತಹ ಸಮಯದಲ್ಲಿ ಮಲ್ಲಿ ಜತೆ ಇರಬೇಕು" ಎಂದು ಅದನ್ನೇ ಹೇಳುತ್ತಾನೆ. "ಇದರ ಹಿಂದೆ ಇನ್ನೇನೋ ಇದೆ. ಹೇಳಿ" ಎಂದು ಕೇಳುತ್ತಾಳೆ. "ಮಲ್ಲಿ ಈಗ ಸೂಕ್ಷ್ಮ. ದಿಯಾಳ ವಿಷಯ ಗೊತ್ತಾದ್ರೆ ತೊಂದರೆ ಆಗುತ್ತದೆ" ಎಂದು ತಪ್ಪಿಸಿಕೊಳ್ಳಲು ಯತ್ನಿಸುತ್ತಾನೆ. "ನಾವೀಗಲೇ ದಿಯಾಳಿಗೆ ವಾರ್ನಿಂಗ್‌ ಕೊಟ್ಟಿದ್ದೇವೆ. ಹೀಗಿದ್ರೂ..." ಎಂದಾಗ ಹೆಚ್ಚು ಹೇಳದೆ ಗೌತಮ್‌ ಅಲ್ಲಿಂದ ಹೋಗುತ್ತಾರೆ.

ಆನಂದ್‌ ಮನೆಯಲ್ಲಿ ಕುಟುಂಬದ ಜತೆ ಕಾಲ ಕಳೆಯುತ್ತಿದ್ದಾನೆ. "ಅಪ್ಪನಿಗೆ ನಾನೇ ಅಮ್ಮ ಆಗ್ತಿನಿ" ಎಂದು ಪುಟ್ಟ ಮಗಳು ಕಾಳಜಿಯಿಂದ ಹೇಳುತ್ತಾಳೆ. ಇನ್ನೊಂದೆಡೆ ಜೈದೇವ್‌ ಅನಿರಾರ್ಯವಾಗಿ ಮಲ್ಲಿಯ ಕೇರ್‌ ಮಾಡುತ್ತಾ ಇದ್ದಾನೆ. "ನಿಮಗೆ ಭಾವನವರು ಹಾಗೇ ಹೇಳಿದ್ದು ಬೇಜಾರಾಗಿಲ್ವ" ಎಂದು ಕೇಳುತ್ತಾಳೆ. "ಸಾಯುವಷ್ಟು ಬೇಜಾರಾಗ್ತಿದೆ. ಆದರೆ, ಬೇರೆ ವಿಧಿ ಇಲ್ಲ" ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾನೆ. "ನನಗೂ ನಿನ್ನ ಜತೆ ಇರಬೇಕು ಅಂತ ಆಸೆ. ಆದರೆ, ಕೆಲಸದ ಒತ್ತಡದಿಂದ ಆಗುತ್ತ ಇರಲಿಲ್ಲ. ಈಗ ಕನಸು ನನಸಾದಂತೆ ನಿನ್ನ ಜತೆಗೆ ಇರುತ್ತೇನೆ" ಎಂದು ಸುಳ್ಳು ಹೇಳುತ್ತಾನೆ. ಎಂದಿನಂತೆ ಮಲ್ಲಿ ನಂಬಿ ಖುಷಿಯಾಗುತ್ತಾಳೆ. ಮಲ್ಲಿ ಮೊಬೈಲ್‌ನಲ್ಲಿ ಓದುತ್ತಾ ಇದ್ದಾಳೆ. ಇವನಿಗೆ ಕೇಳುವ ಅನಿವಾರ್ಯತೆ. "ಮಲ್ಲಿಗೆ ನೀಟಾಗಿ ಬೆಣ್ಣೆ ಹಚ್ಚಿದ್ರೆ ಅಣ್ಣಾ ಸ್ವಲ್ಪ ಕೂಲ್‌ ಆಗ್ತಾನೆ" ಎಂದುಕೊಳ್ಳುತ್ತಾನೆ.

ಭೂಮಿಕಾ ಬೆನ್ನ ಹಿಂದೆ ಏನೋ ಅಡಗಿಸಿಕೊಂಡಿದ್ದಾಳೆ. ಗೌತಮ್‌ಗೆ ಕಣ್ಣು ಮುಚ್ಚಲು ಹೇಳಿ ಸರ್‌ಪ್ರೈಸ್‌ ಗಿಫ್ಟ್‌ ನೀಡುತ್ತಾರೆ. "ನನ್‌ ಖುಷಿಗೆ ಗಿಫ್ಟ್‌ ನೀಡಿದ್ದೇನೆ" ಎಂದು ಹೇಳುತ್ತಾಳೆ. "ತಾಯಿ ಮಗುವಿನ ಶಿಲ್ಪವಿರುವ ಗಿಫ್ಟ್"‌ ನೀಡುತ್ತಾನೆ. ಅದನ್ನು ನೋಡಿ ಗೌತಮ್‌ಗೆ ಅಮ್ಮನ ನೆನಪಾಗುತ್ತದೆ. "ಕೆಲವು ವಿಚಾರಗಳನ್ನು ಎಷ್ಟು ಮರೆತರೂ ಮರೆಯಲಾಗದು. ಅಮ್ಮನ ನೆನಪು ನಮ್ಮ ನೆರಳಾಗಿ ನಮ್ಮ ಜತೆ ಇರುತ್ತದೆ" ಎನ್ನುತ್ತಾನೆ. ಹೀಗೆ ಒಂದಿಷ್ಟು ಭಾವುಕ ಮಾತುಗಳು ಮುಂದುವರೆಯುತ್ತದೆ. ಬಳಿಕ ಒಂದಿಷ್ಟು ಪ್ರೀತಿ ಪ್ರಣಯ ನಡೆಯುತ್ತದೆ. "ಮಲ್ಲಿ ಹೊಟ್ಟೆಯಲ್ಲಿ ಮಗು ಇರುವುದಕ್ಕೆ ಇಷ್ಟು ಕೇರ್‌ ಮಾಡ್ತಾರೆ. ಇನ್ನು ನನಗೆ ಮಗುವಾದಗ ಎಷ್ಟು ಕೇರ್‌ ಮಾಡಬಹುದು" ಎಂದುಕೊಳ್ಳುತ್ತಾರೆ ಭೂಮಿಕಾ. ಸೀರಿಯಲ್‌ ಮುಂದುವರೆಯುತ್ತದೆ.

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)

ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)

ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)

ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)

ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)

ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)

ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)

ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)

ರಣವ್‌: ಜೈದೇವ್‌

ಚಂದನ್‌: ಅಶ್ವಿನಿ

ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)

ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)