ಕನ್ನಡ ಸುದ್ದಿ  /  ಮನರಂಜನೆ  /  ಅಮೃತಧಾರೆ ಸೀರಿಯಲ್‌ ಇಂದಿನ ಕಥೆ: ಕೆಂಚನಿಗೆ ಗನ್‌ ತೋರಿಸಿ ಭೂಮಿಕಾಳನ್ನು ರಕ್ಷಣೆ ಮಾಡಿದ ಗೌತಮ್‌; ಮಲ್ಲಿ ಕಥೆ ಏನಾಗಿರಬಹುದು?

ಅಮೃತಧಾರೆ ಸೀರಿಯಲ್‌ ಇಂದಿನ ಕಥೆ: ಕೆಂಚನಿಗೆ ಗನ್‌ ತೋರಿಸಿ ಭೂಮಿಕಾಳನ್ನು ರಕ್ಷಣೆ ಮಾಡಿದ ಗೌತಮ್‌; ಮಲ್ಲಿ ಕಥೆ ಏನಾಗಿರಬಹುದು?

Amruthadhaare Serial Today Episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ( ಮೇ 24) ಏನು ನಡೆಯಬಹುದು ಎಂಬ ಕುತೂಹಲ ಪ್ರೇಕ್ಷಕರಲ್ಲಿದೆ. ಗೌತಮ್‌ ಗನ್‌ ಹಿಡಿದು ಕೆಂಚನಿಂದ ಭೂಮಿಕಾಳನ್ನು ರಕ್ಷಣೆ ಮಾಡಿದ್ದಾರೆ. ಇದೇ ಸಮಯದಲ್ಲಿ ಮಲ್ಲಿಯ ಕಥೆ ಏನಾಗಿರಬಹುದು ಎಂಬ ಕುತೂಹಲವೂ ಇದೆ.

ಅಮೃತಧಾರೆ ಸೀರಿಯಲ್‌ ಇಂದಿನ ಕಥೆ: ಕೆಂಚನಿಗೆ ಗನ್‌ ತೋರಿಸಿ ಭೂಮಿಕಾಳನ್ನು ರಕ್ಷಣೆ ಮಾಡಿದ ಗೌತಮ್
ಅಮೃತಧಾರೆ ಸೀರಿಯಲ್‌ ಇಂದಿನ ಕಥೆ: ಕೆಂಚನಿಗೆ ಗನ್‌ ತೋರಿಸಿ ಭೂಮಿಕಾಳನ್ನು ರಕ್ಷಣೆ ಮಾಡಿದ ಗೌತಮ್

ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿ ಈಗ ರೋಚಕ ಘಟ್ಟದಲ್ಲಿದೆ. ಗೌತಮ್‌ ಭೂಮಿಕಾಳಿಗೆ ಚಿಕ್ಕಮಗಳೂರಿನ ರಮಣೀಯ ಸ್ಥಳದಲ್ಲಿ ಪ್ರಪೋಸ್‌ ಮಾಡಿದ್ದಾರೆ. ಆದರೆ, ಪ್ರಪೋಸ್‌ ಮಾಡಿದ ಬಳಿಕ ಹಿಂತುರುಗಿ ನೋಡಿದ ಬಳಿಕ ನೋಡಿದಾಗ ಅಲ್ಲಿ ಭೂಮಿಕಾ ಇರಲಿಲ್ಲ. ಜೈದೇವ್‌ ಅಣತಿಯಂತೆ ಭೂಮಿಕಾರನ್ನು ಕೆಂಚಪ್ಪ ಕಿಡ್ನ್ಯಾಪ್‌ ಮಾಡಿರುತ್ತಾನೆ. ಈ ಸಂದರ್ಭದಲ್ಲಿ ಸಾಕಷ್ಟು ಪರಿತಪಿಸಿದ ಗೌತಮ್‌ ಭೂಮಿಕಾಳನ್ನು ಹುಡುಕಾಟ ನಡೆಸುತ್ತಾರೆ. ಈ ಸಮಯದಲ್ಲಿ ಧೈರ್ಯ ಕಳೆದುಕೊಳ್ಳದೆ ಆನಂದ್‌ನನ್ನು ಸ್ಥಳಕ್ಕೆ ಕರೆಸಿಕೊಳ್ಳುತ್ತಾರೆ. ಎಲ್ಲೂ ಹುಡುಕಾಟ ನಡೆಸಿದರೂ ಭೂಮಿಕಾಳ ಸುಳಿವು ದೊರಕುವುದಿಲ್ಲ.

ಟ್ರೆಂಡಿಂಗ್​ ಸುದ್ದಿ

ಇಂತಹ ಸಮಯದಲ್ಲಿ ಕೆಂಚ ಗೌತಮ್‌ಗೆ ಕಾಲ್‌ ಮಾಡುತ್ತಾನೆ. ಗೌತಮ್‌ನಿಂದ ಹಣ ಪೀಕುವ ಉದ್ದೇಶ ಆತನದ್ದು. ನನಗೆ ಎರಡು ಗಂಟೆಯೊಳಗೆ ಇಂತಿಷ್ಟು ಮೊತ್ತ ಟ್ರಾನ್ಸ್‌ಫಾರ್‌ ಮಾಡಬೇಕೆಂದು ಹೇಳಿರುತ್ತಾನೆ. ಈ ಸಮಯದಲ್ಲಿ ಫೋನ್‌ನಲ್ಲಿ ದೇವಾಲಯದ ಗಂಟೆಯ ಶಬ್ದ ಕೇಳಿಸಿದ್ದರಿಂದ ಗೌತಮ್‌ಗೆ ಎಲ್ಲೋ ದೇಗುಲದ ಪಕ್ಕ ಈತನಿದ್ದಾನೆ ಎಂಬ ಸುಳಿವು ದೊರಕುತ್ತದೆ. ಆನಂದ್‌ ಮತ್ತು ಗೌತಮ್‌ ಹುಡುಕಾಟ ನಡೆಸುತ್ತ ಹೋಗಿದ್ದಾರೆ. ಇಂದಿನ ಸಂಚಿಕೆಯಲ್ಲಿ ಗೌತಮ್‌ ಹೀಗೆ ಹುಡುಕಾಟ ನಡೆಸಿದಾಗ ಭೂಮಿಕಾಳ ಕಿವಿಯೋಲೆಗಳು, ಬಳೆಗಳು ದೊರಕುತ್ತವೆ. ನನ್ನನ್ನು ಹುಡುಕಾಡಿದಾಗ ದೊರಕಲಿ ಎಂದು ಭೂಮಿಕಾ ಜಾಣತನದಿಂದ ಈ ಕಿವಿಯೋಲೆಗಳನ್ನು, ಬಳೆಗಳನ್ನು ಬಿಸಾಕಿರುತ್ತಾರೆ.

ಭೂಮಿಕಾಳನ್ನು ಕಾಪಾಡಿದ ಗೌತಮ್‌

ಈ ಸುಳಿವು ಆಧರಿಸಿ ಹುಡುಕಾಟ ನಡೆಸಿದಾಗ ಗೌತಮ್‌ಗೆ ಕೆಂಚಪ್ಪ ದೊರಕುತ್ತಾನೆ. ಆತನಿಗೆ ಗನ್‌ ತೋರಿಸಿ ಭೂಮಿಕಾಳನ್ನು ತೋರಿಸು ಎನ್ನುತ್ತಾನೆ. ಮಕ್ಕಳ ಆಟಿಕೆ ಗನ್‌ ಎಂದು ಕೆಂಚ ನಕ್ಕಾಗ ಆತನ ಕಾಲಿನಡಿಗೆ ಶೂಟ್‌ ಮಾಡಿ ಇದು ನಿಜವಾದ ಗನ್‌ ಎಂದು ತೋರಿಸುತ್ತಾನೆ. ಭಯಬಿದ್ದ ಕೆಂಚಪ್ಪ ಅಲ್ಲೇ ಮಣ್ಣನ್ನು ತೋರಿಸುತ್ತಾನೆ. ಮಣ್ಣಿನಲ್ಲಿ ಗುಂಡಿ ತೋಡಿ ಡ್ರಮ್‌ನೊಳಗೆ ಭೂಮಿಕಾಳನ್ನು ಇಡಲಾಗಿರುತ್ತದೆ. ಆಕೆ ಪ್ರಜ್ಞೆ ತಪ್ಪಿರುತ್ತಾಳೆ.

ಝೀ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಪ್ರಮೋದಲ್ಲಿ ಇಷ್ಟು ವಿಷಯಗಳು ತಿಳಿದುಬಂದಿವೆ. ಒಟ್ಟಾರೆ ಗೌತಮ್‌ ಭೂಮಿಕಾಳನ್ನು ಕಾಪಾಡುವಲ್ಲಿ ಯಶಸ್ಸು ಪಡೆದಿದ್ದಾನೆ. ಇನ್ನೊಂದೆಡೆ ಮಲ್ಲಿಗೆ ಶಕುಂತಲಾದೇವಿ ಔಷಧ ಬೆರೆಸಿದ ಹಾಲು ನೀಡಿದ್ದಾಳೆ. ಇದರಿಂದ ಮಲ್ಲಿಗೆ ಹೊಟ್ಟೆನೋವು ಆಗಿದೆ. ಮಹಿಮಾ, ಜೈದೇವ್‌ ಮಲ್ಲಿಯನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಶಕುಂತಲಾದೇವಿಯ ಪ್ಲ್ಯಾನ್‌ ಏನಾಗುತ್ತದೆ ಎಂಬ ಕುತೂಹಲವಿದೆ. ಮಹಿಮಾ ಇರುವ ಕಾರಣ ಮಲ್ಲಿ ಬಚಾವ್‌ ಆಗುತ್ತಾಳೆ, ಕೋಮಕ್ಕೆ ಹೋಗಲು ಮಹಿಮಾ ಬಿಡಲಾರರು ಎಂಬ ನಿರೀಕ್ಷೆಯಲ್ಲಿ ಪ್ರೇಕ್ಷಕರು ಇದ್ದಾರೆ.

ಗೌತಮ್‌ ಭೂಮಿಕಾಳನ್ನು ಕಾಪಾಡಿದ ಪ್ರಮೋಗೆ ವೀಕ್ಷಕರು ಖುಷಿ ವ್ಯಕ್ತಪಡಿಸಿದ್ದಾರೆ. "ಗೌತಮ್‌ ಕೆಂಚನ ಕೈಕಾಲು ಮುರಿಯಿರಿ" "ಭೂಮಿ ಮೇಡಂಗೆ ಏನು ಆಗಲ್ಲ.... ಜೈ ದೇವ್ ಮಾಡಿರೋ ಕುತಂತ್ರ ಗೌತಮ್ ಸರ್‌ಗೆ ಗೊತಾಗುತ್ತೆ. ಮುಂದೆ ಇದೆ ಮಾರಿ ಹಬ್ಬ" ಎಂದೆಲ್ಲ ಪ್ರೇಕ್ಷಕರು ಕಾಮೆಂಟ್‌ ಮಾಡಿದ್ದಾರೆ. ಅಮೃತಧಾರೆಯ ಇಂದಿನ ಸಂಚಿಕೆಯ ಪೂರ್ತಿ ಕಥೆ ತಿಳಿಯಲು ಝೀ ಕನ್ನಡ ವಾಹಿನಿಯ ಅಮೃತಧಾರೆ ಇಂದಿನ ಎಪಿಸೋಡ್‌ ನೋಡಬಹುದು.

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)

ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)

ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)

ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)

ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)

ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)

ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)

ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)

ರಣವ್‌: ಜೈದೇವ್‌

ಚಂದನ್‌: ಅಶ್ವಿನಿ

ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)

ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)

ಟಿ20 ವರ್ಲ್ಡ್‌ಕಪ್ 2024