ಜೈದೇವ್‌ ಮೋಸ ಹೊರಬೀಳುವ ಟೈಂ ಬಂತು; ಒಂದೆಡೆ ಭೂಮಿಕಾ ತನಿಖೆ, ಇನ್ನೊಂದೆಡೆ ಜೀವನ್‌ ಗೆಳೆಯನ ಸಹಾಯಹಸ್ತ- ಅಮೃತಧಾರೆ ಇಂದಿನ ಸಂಚಿಕೆ
ಕನ್ನಡ ಸುದ್ದಿ  /  ಮನರಂಜನೆ  /  ಜೈದೇವ್‌ ಮೋಸ ಹೊರಬೀಳುವ ಟೈಂ ಬಂತು; ಒಂದೆಡೆ ಭೂಮಿಕಾ ತನಿಖೆ, ಇನ್ನೊಂದೆಡೆ ಜೀವನ್‌ ಗೆಳೆಯನ ಸಹಾಯಹಸ್ತ- ಅಮೃತಧಾರೆ ಇಂದಿನ ಸಂಚಿಕೆ

ಜೈದೇವ್‌ ಮೋಸ ಹೊರಬೀಳುವ ಟೈಂ ಬಂತು; ಒಂದೆಡೆ ಭೂಮಿಕಾ ತನಿಖೆ, ಇನ್ನೊಂದೆಡೆ ಜೀವನ್‌ ಗೆಳೆಯನ ಸಹಾಯಹಸ್ತ- ಅಮೃತಧಾರೆ ಇಂದಿನ ಸಂಚಿಕೆ

Amruthadhaare serial today episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಸಾಕಷ್ಟು ಹೊಸ ಬೆಳವಣಿಗೆಗಳು ನಡೆಯಲಿವೆ. ಜೀವನ್‌ ಗೆಳೆಯನೊಬ್ಬ ಗೌತಮ್‌ ದಿವಾನ್‌ಗೆ ಟೆಂಡರ್‌ ಕೈತಪ್ಪಿದ ವಿಚಾರದಲ್ಲಿ ಸತ್ಯ ತಿಳಿಯಲು ನೆರವು ನೀಡಲಿದ್ದಾನೆ. ಜೈದೇವ್‌ ಮೋಸ ಹೊರಬೀಳುವ ಸಮಯ ಬಂದಿದೆ.

ಅಮೃತಧಾರೆ ಇಂದಿನ ಸಂಚಿಕೆ
ಅಮೃತಧಾರೆ ಇಂದಿನ ಸಂಚಿಕೆ

Amruthadhaare serial today episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಜೈದೇವ್‌ ಮೋಸ ಕಂಡುಹಿಡಿಯಲು ವೇದಿಕೆ ರೆಡಿಯಾಗಿದೆ. ಝೀ ಕನ್ನಡ ವಾಹಿನಿ ಹಂಚಿಕೊಂಡ ಪ್ರಮೋದಲ್ಲಿ ಸಾಕಷ್ಟು ವಿವರಗಳು ಲಭಿಸಿವೆ. ಬೇರೊಂದು ಕಂಪನಿಗೆ ಗೌತಮ್‌ ದಿವಾನ್‌ ಕಂಪನಿಯ ರಹಸ್ಯ ಸೋರಿಕೆ ಮಾಡಿದ ಜೈದೇವ್‌ಗೆ ಸದ್ಯದಲ್ಲಿಯೇ ಶಾಸ್ತ್ರಿಯಾಗಲಿದೆ. ಜೀವನ್‌ ಗೆಳೆಯನೊಬ್ಬ ಎದುರಾಳಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಆತನ ಮೂಲಕ ಮಾಹಿತಿ ಸೋರಿಕೆ ಮಾಡಿದವರ ವಿವರ ಕಂಡುಹಿಡಿಯವ ಪ್ರಯತ್ನದಲ್ಲಿ ಗೌತಮ್‌ ದಿವಾನ್‌ ಇದ್ದಾರೆ. ಆ ಸ್ನೇಹಿತ ಜೀವನ್‌ಗೆ ಜೀವ ಕೊಡುವಂತಹ ಗೆಳೆಯ. ಹೀಗಾಗಿ, ಈತನ ಮೂಲಕ ಸತ್ಯ ಹೊರಬೀಳುವುದು ಪಕ್ಕಾ ಆಗಿದೆ.

ಜೀವನ್‌ ಗೆಳೆಯನಿಂದ ಸಹಾಯ

ಗೌತಮ್‌ ದಿವಾನ್‌ ಕಂಪನಿಗೆ ಬರಬೇಕಿದ್ದ ಡೀಲ್‌ ತಪ್ಪಿ ಹೋಗಲು ಜೈದೇವ್‌ ಕಾರಣ. ಈ ವಿಷಯ ಗೌತಮ್‌ ದಿವಾನ್‌ಗೆ ತಿಳಿದಿಲ್ಲ. ಇದೇ ಸಂದರ್ಭದಲ್ಲಿ ಆನಂದ್‌ ಜತೆ ಗೌತಮ್‌ ದಿವಾನ್‌ ಚರ್ಚೆ ಮಾಡುತ್ತ ಇದ್ದಾನೆ. ಆಗ ಅಲ್ಲಿಗೆ ಜೀವನ್‌ ಬರುತ್ತಾನೆ. ಅಲ್ಲಿಗೆ ಜೀವನ್‌ ಬಂದಾಗ ಗೌತಮ್‌ಗೆ ಅಚ್ಚರಿಯಾಗುತ್ತದೆ. ಏನಿದು ನೀನಿಲ್ಲಿ ಎಂದು ಗೌತಮ್‌ ಕೇಳಿದಾಗ ಮಾಹಿತಿ ಸೋರಿಕೆ ವಿಚಾರದಲ್ಲಿ ನನ್ನ ಗೆಳೆಯನಿಂದ ಸಹಾಯವಾಗಬಹುದು ಎನ್ನುತ್ತಾನೆ. ಅಕ್ಕ ಟೆಂಡರ್‌ ವಿಷಯ ಹೀಗಾಯ್ತು ಅಂದ್ಲು. ಅದಕ್ಕೆ ನನ್ನಿಂದ ಏನಾದರೂ ಸಹಾಯವಾಗಬಹುದಾ ಅಂತ ಬಂದೆ. ಆ ಕಂಪನಿಯಲ್ಲಿ ನನ್ನ ಗೆಳೆಯನೊಬ್ಬ ಇದ್ದಾನೆ. ಎದುರಾಳಿ ಕಂಪನಿಯ ಅಡ್ಮಿನಿಸ್ಟ್ರೇಷನ್‌ ವಿಭಾಗದಲ್ಲಿ ಜೀವನ್‌ ಗೆಳೆಯ ಕೆಲಸ ಮಾಡುತ್ತ ಇರುತ್ತಾನೆ. ಜೀವನ್‌ ಕರೆದಾಗ ಆತನೂ ಗೌತಮ್‌ ದಿವಾನ್‌ ಆಫೀಸ್‌ಗೆ ಬರುತ್ತಾನೆ.

ಗೌತಮ್‌ ದಿವಾನ್‌ ಆತನಿಗೆ ವಿಷಯ ತಿಳಿಸುತ್ತಾರೆ. ಕಂಪನಿಯ ಟಾಪ್‌ ಕಾನ್ಫಿಡೆನ್ಸಿಯಲ್‌ ವಿಷಯ ಸೋರಿಕೆ ಮಾಡಿದ್ದು ಯಾರು ಎಂದು ತಿಳಿಯುವ ಪ್ರಯತ್ನಕ್ಕೆ ನಿನ್ನನ್ನು ಕರೆಸಿಕೊಂಡಿದ್ದೇನೆ ಎನ್ನುತ್ತಾನೆ. ಆತ ತಪ್ಪು ಮಾಡಿದ್ದಾನೆ. ನಾನು ಸಹಾಯ ಮಾಡುವೆ. ಸದ್ಯ ನನಗೆ ವಿಷಯ ಗೊತ್ತಿಲ್ಲ ಎನ್ನುತ್ತಾನೆ. ಹೇಗಾದರೂ ಮಾಡಿ ಈ ವಿಷಯ ತಿಳಿದುಕೊಳ್ಳುವ ಪ್ರಯತ್ನ ಮಾಡುವೆ ಎಂದು ಭರವಸೆ ನೀಡುತ್ತಾನೆ. ಈ ಸಂದರ್ಭದಲ್ಲಿ ಜೀವನ್‌ಗೂ ಈತನಿಗೂ ಇರುವ ಸಂಬಂಧ ಹೇಳುತ್ತಾನೆ. ಬಾಲ್ಯದಿಂದಲೂ ಜೀವನ್‌ ಮತ್ತು ಈತ ಆತ್ಮೀಯ ಗೆಳೆಯರು ಎನ್ನುತ್ತಾನೆ. ಜೀವನ್‌ ತಂದೆಯೇ ಈತನನ್ನು ಓದಿಸಿದ್ದು. ಇದರಿಂದ ಈಗ ದೊಡ್ಡ ಮಟ್ಟದಲ್ಲಿ ಇರಲು ಸಾಧ್ಯವಾಗಿದೆ ಎಂದು ಹೇಳಿದಾಗ ಗೌತಮ್‌ಗೆ ಖುಷಿಯಾಗುತ್ತದೆ.

ಸೆಕ್ಯುರಿಟಿ ಏಜೆನ್ಸಿಯವರು ಹುಡುಕಿದರೂ ಮಾಹಿತಿ ದೊರಕಿರಲಿಲ್ಲ. ಈ ವಿಷಯ ತಿಳಿದು ಜೈದೇವ್‌ ಖುಷಿ ಪಡುತ್ತಾನೆ. ಈ ಡೀಲ್‌ಗಾಗಿ ಜೈದೇವ್‌ ಎರಡು ಕೋಟಿ ರೂಪಾಯಿ ಪಡೆದಿರುತ್ತಾನೆ. ಗೌತಮ್‌ ದಿವಾನ್‌ಗೆ ಮೋಸ ಮಾಡಿದ ಈತ ಸಿಕ್ಕಿ ಬೀಳುವುದು ಪಕ್ಕಾ ಎಂದು ಸೋಷಿಯಲ್‌ ಮೀಡಿಯಾದಲ್ಲಿ ವೀಕ್ಷಕರು ಹೇಳಿದ್ದಾರೆ. ಇನ್ನೊಂದು ಕಡೆ ಮಾಹಿತಿ ಸೋರಿಕೆ ಮಾಡಿದ್ದು ಜೈದೇವ್‌ ಇರಬಹುದಾ ಎಂಬ ಸಂದೇಹದಲ್ಲಿ ಭೂಮಿಕಾ ಇದ್ದಾರೆ. ಜೈದೇವ್‌ ಮತ್ತು ಮಲ್ಲಿ ವಾಕಿಂಗ್‌ ಹೋದ ಸಂದರ್ಭದಲ್ಲಿ ಜೈದೇವ್‌ ಕೊಠಡಿಯಲ್ಲಿ ಒಂದಿಷ್ಟು ಹುಡುಕಾಟ ನಡೆಸಿದಾಗ ಸುಳಿವು ದೊರಕುತ್ತದೆ. ಒಟ್ಟಾರೆ ಜೈದೇವ್‌ ಮೋಸ ಹೊರಬೀಳುವ ಟೈಮ್‌ ಬಂದಿದೆ. ಇಂದಿನ ಅಮೃತಧಾರೆ ಸಂಚಿಕೆಯಲ್ಲಿ ಹೆಚ್ಚಿನ ವಿವರ ದೊರಕಲಿದೆ.

Whats_app_banner