ಕನ್ನಡ ಸುದ್ದಿ  /  Entertainment  /  Televison News Amruthadhaare Serial Today Episode Manya Goutham Tack Bhoomika Brings Manya To House Pcp

Amruthadhaare: ಮಾನ್ಯ ಗೌತಮ್‌ ಮುಖಾಮುಖಿ; ಹಳೆಕಥೆ ಭೂಮಿಕಾಳಿಗೆ ತಿಳಿಯುತ್ತ? ಅಮೃತಧಾರೆ ಧಾರಾವಾಹಿಯ ನಿನ್ನೆಯ ಮತ್ತು ಇಂದಿನ ಸಂಚಿಕೆಯ ಝಲಕ್‌

Amruthadhaare Serial: ಭೂಮಿಕಾ ಆಸ್ಪತ್ರೆಯಿಂದ ಮಾನ್ಯಳನ್ನು ಮನೆಗೆ ಕರೆದುಕೊಂಡು ಬಂದಿದ್ದಾಳೆ. ಶಕುಂತಲಾದೇವಿ ಮತ್ತು ಗೌತಮ್‌ ಈ ವಿಚಾರ ತಿಳಿದು ಆತಂಕಗೊಂಡಿದ್ದಾರೆ. ಇನ್ನೊಂದೆಡೆ ಮಾನ್ಯ ಮತ್ತು ಗೌತಮ್‌ ನಡುವೆ ಮಾತುಕತೆಯೂ ನಡೆಯುತ್ತಿದೆ.

ಅಮೃತಧಾರೆ ಧಾರಾವಾಹಿಯ ನಿನ್ನೆಯ ಮತ್ತು ಇಂದಿನ ಸಂಚಿಕೆಯ ಝಲಕ್‌
ಅಮೃತಧಾರೆ ಧಾರಾವಾಹಿಯ ನಿನ್ನೆಯ ಮತ್ತು ಇಂದಿನ ಸಂಚಿಕೆಯ ಝಲಕ್‌

Amruthadhaare Serial Today Episode: ಗೌತಮ್‌ ಅಪ್‌ಸೆಟ್‌ ಆಗಿರುವುದನ್ನು ಭೂಮಿಕಾಳಿಗೆ ನೋಡಲಾಗುತ್ತಿಲ್ಲ. ಆನಂದ್‌ಗೆ ಕರೆ ಮಾಡಿ ಮನೆಗೆ ಬರಲು ಹೇಳುತ್ತಾಳೆ. ಇನ್ನೊಂದೆಡೆ ಆಸ್ಪತ್ರೆಯಿಂದ ಶಕುಂತಲಾದೇವಿ ಆಸ್ಪತ್ರೆಯಿಂದ ಮನೆಗೆ ಬರುತ್ತಾರೆ. ಮಾನ್ಯ ಕೋಮಕ್ಕೆ ಹೋಗಬಹುದು ಎಂಬ ಧೈರ್ಯದಿಂದ ವಾಪಸ್‌ ಬರುತ್ತಾರೆ. ಇದೇ ಸಮಯದಲ್ಲಿ ಮಾನ್ಯಳಿಗೆ ಎಚ್ಚರ ಬಂದರೆ ಏನಾಗಬಹುದು ಎಂದು ತನ್ನ ಸಹೋದರನ ಬಳಿ ಶಕುಂತಲಾದೇವಿ ಆತಂಕ ತೋರುತ್ತಾರೆ. ಅವಳನ್ನು ಅಲ್ಲಿಂದ ಎತ್ತಾಕ್ಲ ಎಂದು ಮಾವ ಹೇಳುತ್ತಾನೆ. ಆದರೆ, ಗೌತಮ್‌ ಪ್ರಶ್ನೆಗೆ ಉತ್ತರಿಸುವುದು ಕಷ್ಟ, ಬೇಡ ಎಂದು ಶಕುಂತಲಾದೇವಿ ಹೇಳುತ್ತಾರೆ. ಅವಳಿಗೆ ಪ್ರಜ್ಞೆ ಬರಲಿ, ಆಮೇಲೆ ನೋಡೋಣ ಎನ್ನುತ್ತಾರೆ.

ಜೀವನ್‌ ಮತ್ತು ಮಹಿಮಾ ಮನೆಯಲ್ಲಿದ್ದಾರೆ. ಮಾವ ಜಾತಕ ತೋರಿಸುತ್ತಾರೆ ಅಂದಿದ್ದಾರೆ, ಅದರಿಂದ ಎಲ್ಲವೂ ಗೊತ್ತಾಗಿ ಬಿಡುತ್ತಾ? ಎಂದು ಆತಂಕದಿಂದ ಮಹಿಮಾ ಪ್ರಶ್ನಿಸುತ್ತಾಳೆ. "ಏನಾದರೂ ಮಗು ಹೀಗೆ ಆಗಲು ನಾನೇ ಕಾರಣ ಎಂದು ಹೇಳಿಬಿಡಬಹುದು" ಎಂದು ಮನಸ್ಸಲ್ಲಿ ಆತಂಕಗೊಳ್ಳುತ್ತಾಳೆ. "ಕೆಲವೊಂದು ವಿಷಯಗಳು ಗೊತ್ತಾಗುವ ಆಗಿದ್ದರೆ ಪೊಲೀಸ್‌ ಸ್ಟೇಷನ್‌ ಎಲ್ಲಾ ಇರುತ್ತಿರಲಿಲ್ಲ" ಎಂದು ಜೀವನ್‌ ಹೇಳಿದಾಗ ತುಸು ಸಮಾಧಾನವಾಗುತ್ತದೆ.

ಇನ್ನೊಂದೆಡೆ ಗೌತಮ್‌ ಟೆನ್ಷನ್‌ನಲ್ಲಿದ್ದಾಗ ಆನಂದ್‌ ಬರುತ್ತಾನೆ. "ಆಕ್ಸಿಡೆಂಟ್‌ ಆಗಿರೋದು ಮಾನ್ಯಳಿಗೆ" ಎಂದು ಗೌತಮ್‌ ಹೇಳಿದಾಗ ಆನಂದ್‌ ಕೂಡ ಆಶ್ಚರ್ಯಕ್ಕೆ ಒಳಗಾಗುತ್ತಾನೆ. "ಇಷ್ಟು ದಿನ ಎಲ್ಲೋ ಇದ್ದವಳು ಹೇಗೆ ಬಂದ್ಲು" ಎಂದು ಮಾತಾಡಿಕೊಳ್ಳುತ್ತಾರೆ.

ಈ ಸಮಯದಲ್ಲಿ ಮಾನ್ಯಳಿಗೆ ಪ್ರಜ್ಞೆ ಬರುತ್ತದೆ. ವೈದ್ಯರು ಫೋನ್‌ ಮಾಡುತ್ತಾರೆ. ಪುಣ್ಯಕ್ಕೆ ಆ ಕರೆಯನ್ನು ಭೂಮಿಕಾ ಸ್ವೀಕರಿಸುತ್ತಾಳೆ. ತಾನೇ ಬರುವುದಾಗಿ ಹೇಳುತ್ತಾಳೆ. ಈ ವಿಷಯ ಯಾರಿಗೂ ತಿಳಿಸಬೇಡಿ ಎಂದು ಹೇಳಿದರೂ ನರ್ಸ್‌ ಕರೆ ಮಾಡಿ ಶಕುಂತಲಾದೇವಿಗೆ ತಿಳಿಸುತ್ತಾಳೆ. "ಪೇಷೆಂಟ್‌ಗೆ ಪ್ರಜ್ಞೆ ಬಂದಿದೆ" ಎನ್ನುತ್ತಾಳೆ. ನಾನು ಈಗಲೇ ಆಸ್ಪತ್ರೆಗೆ ಹೋಗಿ ಬರುವೆ ಎಂದು ಆಸ್ಪತ್ರೆಗೆ ಹೊರಡುತ್ತಾರೆ. ಈ ವಿಷಯವನ್ನು ಗೌತಮ್‌ ಕೇಳುತ್ತಾನೆ. ನಾನು ಬರುತ್ತೇನೆ ಎನ್ನುತ್ತಾರೆ ಗೌತಮ್‌. ಬೇಡ ನಾವೇ ಹೋಗಿ ಬರ್ತಿವಿ ಎಂದು ಒಪ್ಪಿಸುತ್ತಾರೆ ಶಕುಂತಲಾ.

ಪ್ರಜ್ಞೆ ಬಂದ ಮಾನ್ಯ ಯೋಚನೆ ಮಾಡುತ್ತ ಇರುತ್ತಾಳೆ. ಆಗ ಸಮಯದಲ್ಲಿ ಅಲ್ಲಿಗೆ ಭೂಮಿಕಾ ಬರುತ್ತಾಳೆ. ತಾನು ಭೂಮಿಕಾ ಎಂದಾಗ ಮಾನ್ಯಳಿಗೆ ಟೆನ್ಷನ್‌ ಆಗುತ್ತದೆ. "ಈ ಆಕ್ಸಿಡೆಂಟ್‌ ಆಗಿರೋದು ನಮ್ಮ ಕಾರಿನಿಂದಲೇ" ಎನ್ನುತ್ತಾಳೆ. "ನಾನು ಯಾರನ್ನೂ ಮೀಟ್‌ ಆಗಬೇಕಿತ್ತೋ ಅವರೇ ಸಿಕ್ಕಿದ್ದಾರೆ" ಎಂದು ಮಾನ್ಯ ಅಂದುಕೊಳ್ಳುತ್ತಾಳೆ. ಆಗ ಅಲ್ಲಿಗೆ ಬಂದ ಪೊಲೀಸರು ಮಾನ್ಯಳಿಂದ ಸ್ಟೇಟ್‌ಮೆಂಟ್‌ ತೆಗೆದುಕೊಳ್ಳುತ್ತಾರೆ. "ನಂದೇ ತಪ್ಪು, ನಾನು ನೋಡಿಕೊಳ್ಳದೆ ಅರ್ಜೆಂಟಾಗಿ ಕಾರಿಗೆ ಅಡ್ಡಬಂದೆ" ಎಂದು ಮಾನ್ಯ ಹೇಳಿದಾಗ ಭೂಮಿಕಾಳಿಗೆ ನಿರಾಳವಾಗುತ್ತದೆ. ಮಾನ್ಯಳಿಗೆ ಥ್ಯಾಂಕ್ಸ್‌ ಹೇಳುತ್ತಾರೆ.

ಶಕುಂತಲಾದೇವಿ ಮತ್ತು ಗೌತಮ್‌ ಆಸ್ಪತ್ರೆಗೆ ಬರುತ್ತಾರೆ. ಅಲ್ಲಿ ಮಾನ್ಯ ಇರುವುದಿಲ್ಲ. ಅವಳು ಡಿಸ್‌ಚಾರ್ಜ್‌ ಆದ ವಿಷಯ ಕೇಳಿ ಟೆನ್ಷನ್‌ ಆಗುತ್ತಾಳೆ. ಎಲ್ಲೋ ಹೋಗಿದ್ದಾಳೆ ಎಂದು ಶಕುಂತಲಾದೇವಿ ಖುಷಿಪಡುತ್ತಾರೆ. ಅಲ್ಲಿಂದ ಮನೆಗೆ ವಾಪಸ್‌ ಬರುತ್ತಾರೆ. ಆಗ ಭೂಮಿಕಾ ಅಲ್ಲಿಗೆ ಬರುತ್ತಾಳೆ. ಆಸ್ಪತ್ರೆಯಲ್ಲಿ ಅಡ್ಮಿಟ್‌ ಆಗಿರುವವರಿಗೆ ಪ್ರಜ್ಞೆ ಬಂದಿದೆ ಎನ್ನುತ್ತಾಳೆ. ಅದು ನಮಗೆ ಗೊತ್ತಿತ್ತು ಅನ್ತಾರೆ ಗೌತಮ್‌. "ಅವರು ಎಲ್ಲೂ ಹೋಗಿಲ್ಲ. ಅವಳು ಈ ಮನೆಯಲ್ಲೇ ಇದ್ದಾಳೆ" ಎಂದು ಭೂಮಿಕಾ ಹೇಳಿದಾಗ ಆಶ್ಚರ್ಯಗೊಳ್ಳುತ್ತಾರೆ. ಮಾನ್ಯರವರೇ ಎಂದು ಭೂಮಿಕಾ ಕರೆದಾಗ ಮಾನ್ಯ ಮೇಲಿನಿಂದ ಬರುತ್ತಾಳೆ. ಇಲ್ಲಿಯವರೆಗೆ ಗುರುವಾರದ ಸಂಚಿಕೆಯಲ್ಲಿ ತೋರಿಸಲಾಗಿತ್ತು.

ಇದೀಗ ಜೀ ಕನ್ನಡ ವಾಹಿನಿ ಶುಕ್ರವಾರದ ಪ್ರಮೋ ಬಿಡುಗಡೆ ಮಾಡಿದ್ದು, ಈ ಪ್ರಮೋದಲ್ಲಿ ಮಾನ್ಯ ಮತ್ತು ಗೌತಮ್‌ ಮಾತನಾಡುವ ದೃಶ್ಯವಿದೆ. ಜತೆಗೆ ಶಕುಂತಲಾ ತನ್ನ ಸಹೋದರನ ಜತೆ ಆತಂಕದಿಂದ ಇರುವ ದೃಶ್ಯವೂ ಇದೆ. "ನನ್ನನ್ನು ಯಾರೂ ಏನು ಎಂದು ನೋಡದೆ ಭೂಮಿಕಾ ಟ್ರೀಟ್‌ ಮಾಡಿದ್ದಾರೆ. ನನ್ನ ಆ ಲೆವೆಲ್‌ಗೆ ಟ್ರೀಟ್‌ ಮಾಡಿದವಳು ನಿಮ್ಮನ್ನು ಯಾವ ಲೆವೆಲ್‌ಗೆ ಟ್ರೀಟ್‌ ಮಾಡಿರಬಹುದು" ಎಂದು ಮಾನ್ಯ ಗೌತಮ್‌ಗೆ ಹೇಳುತ್ತಾಳೆ. "ಅಂತಹ ಭೂಮಿಕ ಜತೆ ಯಾವುದನ್ನೂ ಮುಚ್ಚಿಡಬಾರದು ಅಲ್ವಾ? ಎಲ್ಲಾದರೂ ನಿನ್ನ ಎಲ್ಲಾ ವಿಚಾರ ಭೂಮಿಕಾಗೆ ಗೊತ್ತಾದ್ರೆ ಏನಾಗಬಹುದು ಎಂದು ಯೋಚಿಸಿದ್ದೀಯಾ" ಎಂದು ಕೇಳುತ್ತಾಳೆ. ಈ ಮೂಲಕ ಇವರಿಬ್ಬರ ನಡುವೆ ಗಂಭೀರವಾದ ಹಳೆ ವಿಚಾರ ಇರುವ ಸೂಚನೆ ದೊರಕಿದೆ.

IPL_Entry_Point