ಅಪೇಕ್ಷಾ ಪಾರ್ಥನ ಮದುವೆಗೆ ಮುಗಿಯದ ವಿಘ್ನ, ಶಕುಂತಲಾ ಯೋಜನೆಗೆ ಕೆಡಿ ಜೈದೇವ್‌ ಅಡ್ಡಿ- ಅಮೃತಧಾರೆ ಸೀರಿಯಲ್‌ ಸ್ಟೋರಿ-televison news amruthadhaare serial yesterday episode apeksha partha marriage jaydev poisons malli mind ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಅಪೇಕ್ಷಾ ಪಾರ್ಥನ ಮದುವೆಗೆ ಮುಗಿಯದ ವಿಘ್ನ, ಶಕುಂತಲಾ ಯೋಜನೆಗೆ ಕೆಡಿ ಜೈದೇವ್‌ ಅಡ್ಡಿ- ಅಮೃತಧಾರೆ ಸೀರಿಯಲ್‌ ಸ್ಟೋರಿ

ಅಪೇಕ್ಷಾ ಪಾರ್ಥನ ಮದುವೆಗೆ ಮುಗಿಯದ ವಿಘ್ನ, ಶಕುಂತಲಾ ಯೋಜನೆಗೆ ಕೆಡಿ ಜೈದೇವ್‌ ಅಡ್ಡಿ- ಅಮೃತಧಾರೆ ಸೀರಿಯಲ್‌ ಸ್ಟೋರಿ

Amruthadhaare serial Yesterday Episode: ಜೀ ಕನ್ನಡ ವಾಹಿನಿ ಅಮೃತಧಾರೆ ಸೀರಿಯಲ್‌ನಲ್ಲಿ ನಿನ್ನೆಯ ಸಂಚಿಕೆಯಲ್ಲೂ ಅಪೇಕ್ಷಾ ಪಾರ್ಥರ ವಿವಾಹ ನಡೆದಿಲ್ಲ. ಜೀವನ್‌ ಮನಸ್ಸು ಭೂಮಿಕಾ ಮಾತಿನಿಂದ ಬದಲಾಗುತ್ತದೆ. ಆದರೆ, ಇವರಿಬ್ಬರ ಮದುವೆಗೆ ಶಕುಂತಲಾ ಮುಂದಾಗ್ತಾರೆ. ಈ ವಿಷಯ ಜೈದೇವ್‌ ಕಿವಿಗೆ ಬೀಳುತ್ತದೆ.

ಅಪೇಕ್ಷಾ ಪಾರ್ಥನ ಮದುವೆಗೆ ಮುಗಿಯದ ವಿಘ್ನ, ಶಕುಂತಲಾ ಯೋಜನೆಗೆ ಜೈದೇವ್‌ ಅಡ್ಡಿ- ಅಮೃತಧಾರೆ
ಅಪೇಕ್ಷಾ ಪಾರ್ಥನ ಮದುವೆಗೆ ಮುಗಿಯದ ವಿಘ್ನ, ಶಕುಂತಲಾ ಯೋಜನೆಗೆ ಜೈದೇವ್‌ ಅಡ್ಡಿ- ಅಮೃತಧಾರೆ

Amruthadhaare serial: ಜೀ ಕನ್ನಡ ವಾಹಿನಿ ಅಮೃತಧಾರೆ ಸೀರಿಯಲ್‌ನಲ್ಲಿ ನಿನ್ನೆಯ ಸಂಚಿಕೆಯಲ್ಲಿ ಏನೇನಾಯ್ತು ನೋಡೋಣ. ಅಪೇಕ್ಷಾ ಮತ್ತು ಪಾರ್ಥನಿಗೆ ರಿಜಿಸ್ಟ್ರಾರ್‌ ಮದುವೆ ಮಾಡಿಸಲು ಜೀವನ್‌ ಬಂದಿರುತ್ತಾನೆ. ವಿಷಯ ಗೊತ್ತಾಗಿ ಅಲ್ಲಿಗೆ ಭೂಮಿಕಾ ಆಗಮಿಸಿ ಈ ರೀತಿ ಮಾಡಬಾರದು ಎನ್ನುತ್ತಾಳೆ. "ಅಪ್ಪನ ಮಾತಿಗೆ ವಿರುದ್ಧವಾಗಿ ಹೋಗ್ತಾ ಇದ್ದೀಯ. ಅಪ್ಪನ ಮಾತಿಗೆ ಬೆಲೆ ಇಲ್ವ. ಅವರಿಬ್ಬರ ಪ್ರೀತಿ ಮೊನ್ನೆಮೊನ್ನೆ ಶುರುವಾಗಿದೆ. ಆದರೆ, ಅಪ್ಪ ಮಗಳ ಪ್ರೀತಿ ಗರ್ಭದಲ್ಲಿ ಇರುವಾಗಲೇ ಆರಂಭವಾದದ್ದು" ಎಂದು ಭೂಮಿಕಾ ಹೇಳಿ ಜೀವನ್‌ನ ಮನಸ್ಸು ಬದಲಾಯಿಸುತ್ತಾಳೆ. ಭೂಮಿಕಾ ಹೇಳಿದ ಅಪ್ಪನ ತ್ಯಾಗದ ಮಾತುಗಳನ್ನು ಕೇಳಿ ಜೀವನ್‌ಗೆ ಹೌದು ಎನಿಸುತ್ತದೆ. ಇದು ವಯಸ್ಸಲ್ಲಿ ಆಗಿರುವ ಆಕರ್ಷಣೆ ಅಷ್ಟೇ ಎನ್ನುತ್ತಾಳೆ. "ಪ್ರೀತಿ ಅನ್ನೋದಷ್ಟು ಜೀವನ ಅಲ್ಲ. ಅದರಾಚೆಗೂ ತುಂಬಾ ಬದುಕಿದೆ" ಎಂದೆಲ್ಲ ಹೇಳುತ್ತಾಳೆ. "ನಿನಗೆ ಅಪ್ಪಿ ಮಾತ್ರ ಕಾಣಿಸ್ತಾ ಇದ್ದಾಳೆ. ಅಪ್ಪನ ಸಂಕಟ ಅರ್ಥ ಆಗುತ್ತಿಲ್ಲ" ಎನ್ನುತ್ತಾಳೆ. ಹೀಗೆ ಅಪ್ಪಿ ಮತ್ತು ಪಾರ್ಥನಿಗೆ ಜೀವನ್‌ನ ಬೆಂಬಲ ದೊರಕುವುದಿಲ್ಲ.

ಮಲ್ಲಿಯ ಮನಸ್ಸಿಗೆ ವಿಷ ಬೀಜಬಿತ್ತಿದ ಜೈದೇವ್‌

ಇನ್ನೊಂದೆಡೆ ಮಲ್ಲಿ ಆಲೋಚಿಸುತ್ತಿದ್ದಾಳೆ. "ನಿಮ್ಮಲ್ಲಿ ಏನೋ ಹೇಳಬೇಕು" ಎಂದು ಭೂಮಿಕಾಳ ಬಳಿ ಹೇಳಿದಾಗ ಭೂಮಿಕಾ ಅವಸರದಲ್ಲಿ ಹೋಗಿರುತ್ತಾಳೆ. ಅದೇ ಬೇಸರದಲ್ಲಿರುತ್ತಾಳೆ. ಇದೇ ವಿಷಯವನ್ನು ಜೀವನ್‌ನಲ್ಲಿ ಹೇಳುತ್ತಾಳೆ. ಇದೇ ಸಂದರ್ಭವನ್ನು ಜೈದೇವ್‌ ಬಳಸಿಕೊಳ್ಳುತ್ತಾನೆ. ಭೂಮಿಕಾ ವಿರುದ್ಧ ವಿಷಬೀಜ ಬಿತ್ತಲು ಯತ್ನಿಸುತ್ತಾನೆ. "ಅಕ್ಕ ಈ ರೀತಿ ಮಾಡ್ತಾರೆ ಅಂತ ಅಂದುಕೊಂಡಿರಲಿಲ್ಲ" ಎನ್ನುತ್ತಾಳೆ. "ಸಿಹಿ ಇದೆ ಎಂದು ಸ್ವೀಟ್‌ ಜಾಸ್ತಿ ತಿನ್ನಬಾರದು. ಅತ್ತಿಗೆ ಒಳ್ಳೆಯವರು, ಕೆಲವೊಂದು ಸಲ ನೆಗ್ಲೆಕ್ಟ್‌ ಮಾಡ್ತಾರೆ" ಎಂದು ಜೈದೇವ್‌ ಹೇಳುತ್ತಾನೆ. "ಅತ್ತಿಗೆಗೆ ಯಾರಾದರೂ ಇಷ್ಟವಾದರೆ ಅವರನ್ನು ತಲೆಮೇಲೆ ಹೊತ್ತೊಯ್ಯುತ್ತಾರೆ. ಇಷ್ಟ ಆಗದೆ ಇದ್ರೆ ಅವರನ್ನು ಚಪ್ಪಲಿಯಷ್ಟು ಕಡೆ ಮಾಡ್ತಾರೆ. ನನ್ನ ವಿಷಯದಲ್ಲೂ ಹಾಗೆಯೇ ಆಯ್ತು. ಎಲ್ಲರನ್ನೂ ನನ್ನನ್ನು ದ್ವೇಷಿಸುವಂತೆ ಮಾಡಿದೆ" ಎಂದೆಲ್ಲ ಹೇಳುತ್ತಾನೆ.

"ನನ್ನ ಮೇಲಿನ ಕೋಪವನ್ನು ನಿನ್ನ ಮೇಲೆ ಮತ್ತು ನಿನ್ನ ಮಗುವಿನ ಮೇಲೆ ತೀರಿಸ್ತಾ ಇದ್ದಾರೆ" ಎಂದೆಲ್ಲ ಹೇಳಿ ಮಲ್ಲಿಯ ಮನಸ್ಸಲ್ಲಿ ವಿಷದ ಬೀಜ ಬಿತ್ತುತ್ತಾನೆ. "ನೀವು ಅಪರಂಜಿ ಎಂದು ನನಗೆ ಗೊತ್ತು. ನನಗೆ ನಿಮ್ಮ ಮೇಲೆ ಇರುವ ಪ್ರೀತಿ ಕಡಿಮೆಯಾಗೋದಿಲ್ಲ" ಎಂದೆಲ್ಲ ಆತನ ಮಾತು ನಂಬಿ ಹೇಳುತ್ತಾಳೆ. ಒಟ್ಟಾರೆ ಅಮೃತಧಾರೆಯಲ್ಲಿ ಎಲ್ಲವೂ ಭೂಮಿಕಾ ವಿರುದ್ಧವಾಗಿದೆ.

ಇನ್ನೊಂದೆಡೆ ಮನೆಗೆ ಹೋದ ಭೂಮಿಕಾ ವಾಪಸ್‌ ಬರುತ್ತಾಳೆ. ಅಪ್ಪ ತನ್ನ ಮನಸ್ಸು ಬದಲಾಯಿಸಿಲ್ಲ ಅನ್ನುತ್ತಾಳೆ. "ಪಾರ್ಥನ ವಿಷಯದಲ್ಲಿ ಅವಳು ಅಂದುಕೊಂಡಂತೆ ಆಯ್ತು. ನನ್ನ ಪ್ಲ್ಯಾನ್‌ ಎಲ್ಲಾ ಪ್ಲಾಪ್‌ ಆಯ್ತು" ಎಂದು ಭೂಮಿಕಾ ಉರಿದುಕೊಳ್ಳುತ್ತಾಳೆ. "ಸದಾಶಿವ ಈ ಮದುವೆ ಬೇಡ ಎಂದಾಕ್ಷಣ ಅವರ ಮನಸ್ಸು ಬದಲಾಯಿಸಲು ಪ್ರಯತ್ನಿಸು" ಎಂದು ಶಕುಂತಲಾ ಹೇಳುತ್ತಾಳೆ. "ಇದನ್ನು ಜಾಸ್ತಿ ಕೆದಕದೆ ಇಲ್ಲಿಗೆ ಬಿಟ್ಟುಬಿಡುವುದು ಒಳ್ಳೆಯದು" ಎಂದು ಗೌತಮ್‌ ಹೇಳುತ್ತಾರೆ.

ಅಪ್ಪಿ-ಪಾರ್ಥನಿಗೆ ಬೆಂಬಲ ನೀಡಲಿಲ್ಲ ಜೀವನ್‌

ಮತ್ತೊಂದು ಕಡೆ ರಿಜಿಸ್ಟ್ರೇಷನ್‌ ಕಚೇರಿಗೆ ಪಾರ್ಥ ಮತ್ತು ಅಪೇಕ್ಷಾ ಬಂದಿರುತ್ತಾರೆ. ಆದರೆ, ಜೀವನ್‌ ಬೇಸರದಲ್ಲಿ ದೂರ ಕುಳಿತುಕೊಂಡಿರುತ್ತಾನೆ. "ಭಾವ ಹಾರ ತಂದಿಲ್ಲ ಅಂತ ಬೇಸರ ಮಾಡ್ತಾ ಇದ್ದೀರ" "ನಾವಿಬ್ಬರು ಬಂದಾಯ್ತು ಬನ್ನಿ ಅಣ್ಣಾ" ಎಂದು ಅಪೇಕ್ಷಾ ಕರೆಯುತ್ತಾಳೆ. "ಇಲ್ಲ ಅಪ್ಪಿ ನನ್ನ ನಿರ್ಧಾರನ ಚೇಂಜ್‌ ಮಾಡಿದ್ದೇನೆ. ಈ ಮದುವೆ ಈ ರೀತಿ ನಡೆಯಬಾರದು. ಇದಕ್ಕೆ ನನ್ನ ಮನಸ್ಸು ಒಪ್ಪೋದಿಲ್ಲ" ಎನ್ನುತ್ತಾನೆ. "ನಾನು ಹಿಂದೆ ಸರಿಯುತ್ತಿದ್ದೇನೆ. ಈ ಮದುವೆಯಿಂದ ಹಿಂದೆ ಸರಿಯುತ್ತಿದ್ದೇನೆ. ಈ ಮದುವೆ ನಿಮ್ಮಿಬ್ಬರನ್ನು ಒಂದು ಮಾಡ್ತಾ ಇದ್ದೆ. ಆದರೆ, ಸುತ್ತಮುತ್ತ ಇದ್ದವರೆಲ್ಲ ದೂರಾಗ್ತಾರೆ" ಎಂದು ಹೇಳುತ್ತಾನೆ. "ಕೊನೆಗೂ ನೀನೂ ಹೀಗೆ ಮಾಡಿದ್ದಿ ಅಣ್ಣಾ" ಎಂದು ಅಪ್ಪಿ ಅಳುತ್ತಾಳೆ. ಪಾರ್ಥನೂ ಬೇಜಾರಾಗ್ತಾನೆ. ಸಾಕಷ್ಟು ಮಾತುಕತೆ ನಡೆಯುತ್ತದೆ. ಜೀವನ್‌ ತನ್ನ ಮನಸ್ಸು ಬದಲಾಯಿಸುವುದಿಲ್ಲ.

ಜೀವನ್‌ ಹೋದ ಬಳಿಕ ಇಬ್ಬರು ಮಾತನಾಡುತ್ತಾರೆ. ನೀವು ಹೋಪ್ಸ್‌ ಕಳೆದುಕೊಳ್ಳಬೇಡಿ. ನಾನು ಏನಾದರೂ ಮಾಡ್ತಿನಿ ಎಂದು ಪಾರ್ಥ ಧೈರ್ಯ ಹೇಳುತ್ತಾನೆ. ಮನೆಗೆ ಬಂದ ಜೀವನ್‌ ಬೇಸರದಲ್ಲಿರುತ್ತಾನೆ. ಅಲ್ಲಿಗೆ ಬಂದ ಮಹಿಮಾ ಸಮಧಾನ ಹೇಳುತ್ತಾಳೆ. "ನಾನೇ ಈ ವಿಚಾರ ಭೂಮಿಕಾಗೆ ಹೇಳಿದ್ದು" ಎಂದು ಮಹಿಮಾ ಹೇಳುತ್ತಾಳೆ. "ನೀನು ಹಾಗೇ ಮಾಡಿದ್ದು ಒಳ್ಳೆಯದಾಯ್ತು. ನೀನು ಹಾಗೇ ಮಾಡದೆ ಇದ್ದರೆ ಇಷ್ಟು ಹೊತ್ತಿಗೆ ದೊಡ್ಡ ಸಮಸ್ಯೆ ಆಗ್ತಾ ಇತ್ತು" ಎಂದು ಜೀವನ್‌ ಹೇಳುತ್ತಾನೆ.

ಶಕುಂತಲಾದೇವಿ ಮತ್ತು ಸಹೋದರ ಮಾತನಾಡುತ್ತ ಇರುತ್ತದೆ. "ಜೀವನ ಷೇರುಮಾರುಕಟ್ಟೆಯಂತೆ. ಮೇಲೆ ಕೆಳಗೆ ಹೋಗುತ್ತ ಇರುತ್ತದೆ. ಒಂದಲ್ಲ ಒಂದು ದಿನ ನಮ್ಮ ಪ್ರಯತ್ನಕ್ಕೆ ಫಲ ದೊರಕಿಯೇ ದೊರಕುತ್ತದೆ" ಎಂದು ಹೇಳುತ್ತಾನೆ. ಈ ಸಮಯದಲ್ಲಿ ಪಾರ್ಥ ಕಾಲ್‌ ಮಾಡುತ್ತಾನೆ. "ಕದ್ದು ಮುಚ್ಚಿ ಮದುವೆಯಾಗಲು ಬಂದ್ವಿ. ಜೀವನ್‌ ಭಾವ ಸಡನ್‌ ಆಗಿ ಪ್ಲ್ಯಾನ್‌ ಚೇಂಜ್‌ ಮಾಡಿದ್ರು" ಎನ್ನುತ್ತಾನೆ. "ನೀವು ನಿಮ್ಮ ಪ್ಲ್ಯಾನ್‌ ಬದಲಾಯಿಸಿ. ರಿಜಿಸ್ಟ್ರಾರ್‌ ಮ್ಯಾರೇಜ್‌ ಬೇಡ. ನೀವು ಈಗಲೇ ಪಕ್ಕದಲ್ಲಿ ಶಿವನ ದೇವಾಲಯ ಇದೆ. ಅಲ್ಲಿಗೆ ಹೋಗಿ" ಎಂದು ಶಕುಂತಲಾ ಹೇಳಿದಾಗ ಆ ಮಾತನ್ನು ಜೈದೇವ್‌ ಕೇಳಿಸಿಕೊಳ್ಳುತ್ತಾನೆ. ಅಲ್ಲಿ ಆರ್ಚಕರಿಗೆ ನಾನು ಹೇಳ್ತಿನಿ. ನಿಮ್ಮ ಮದುವೆ ಇವತ್ತು ನಡೆಯುತ್ತದೆ ಎಂದು ಭರವಸೆ ನೀಡುತ್ತಾಳೆ. ಇದನ್ನು ಕೇಳಿಸಿಕೊಂಡ ಜೈದೇವ್‌ "ಅದ್ದೇಗೆ ಅವರ ಮದುವೆ ನಡೆಯುತ್ತದೆ ಎಂದು ನೋಡ್ತಿನಿ" ಎಂದು ಹೇಳಿಕೊಳ್ಳುತ್ತಾನೆ. ಒಟ್ಟಾರೆ, ಅಪೇಕ್ಷಾ ಮತ್ತು ಪಾರ್ಥನ ಮದುವೆ ಸದ್ಯದಲ್ಲಿ ನಡೆಯುವಂತೆ ಕಾಣಿಸುತ್ತಿಲ್ಲ. ಸೀರಿಯಲ್‌ ಮುಂದುವರೆದಿದೆ.

 

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)

ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)

ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)

ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)

ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)

ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)

ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)

ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)

ರಣವ್‌: ಜೈದೇವ್‌

ಚಂದನ್‌: ಅಶ್ವಿನಿ

ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)

ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)