ಅಪೇಕ್ಷಾ ಪಾರ್ಥನಿಗೆ ಸದ್ದಿಲ್ಲದೆ ರಿಜಿಸ್ಟ್ರಾರ್‌ ಮ್ಯಾರೇಜ್‌ ಮಾಡಿಸಲು ಮುಂದಾದ ಜೀವನ್‌, ಶಕುಂತಲಾ ಷಡ್ಯಂತ್ರ ಠುಸ್‌ ಪಟಾಕಿ- ಅಮೃತಧಾರೆ ಕಥೆ
ಕನ್ನಡ ಸುದ್ದಿ  /  ಮನರಂಜನೆ  /  ಅಪೇಕ್ಷಾ ಪಾರ್ಥನಿಗೆ ಸದ್ದಿಲ್ಲದೆ ರಿಜಿಸ್ಟ್ರಾರ್‌ ಮ್ಯಾರೇಜ್‌ ಮಾಡಿಸಲು ಮುಂದಾದ ಜೀವನ್‌, ಶಕುಂತಲಾ ಷಡ್ಯಂತ್ರ ಠುಸ್‌ ಪಟಾಕಿ- ಅಮೃತಧಾರೆ ಕಥೆ

ಅಪೇಕ್ಷಾ ಪಾರ್ಥನಿಗೆ ಸದ್ದಿಲ್ಲದೆ ರಿಜಿಸ್ಟ್ರಾರ್‌ ಮ್ಯಾರೇಜ್‌ ಮಾಡಿಸಲು ಮುಂದಾದ ಜೀವನ್‌, ಶಕುಂತಲಾ ಷಡ್ಯಂತ್ರ ಠುಸ್‌ ಪಟಾಕಿ- ಅಮೃತಧಾರೆ ಕಥೆ

Amruthadhaare serial Yesterday Episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲೂ ಅಪೇಕ್ಷಾ ಮತ್ತು ಪಾರ್ಥರ ಮದುವೆ ಮುರಿದುಬಿದ್ದ ವಿಚಾರವೇ ಪ್ರಮುಖ ಹೈಲೈಟ್ಸ್‌. ಆದರೆ, ಈ ಸಮಯದಲ್ಲಿ ಪ್ರೇಮಿಗಳು ಮದುವೆಯಾಗಲು ಜೀವನ್‌ ಸಹಕರಿಸಲು ಮುಂದಾದ ಬೆಳವಣಿಗೆಯೊಂದು ನಡೆದಿದೆ.

ಅಪೇಕ್ಷಾ ಪಾರ್ಥನಿಗೆ ಸದ್ದಿಲ್ಲದೆ ರಿಜಿಸ್ಟ್ರಾರ್‌ ಮ್ಯಾರೇಜ್‌ ಮಾಡಿಸಲು ಮುಂದಾದ ಜೀವನ್‌
ಅಪೇಕ್ಷಾ ಪಾರ್ಥನಿಗೆ ಸದ್ದಿಲ್ಲದೆ ರಿಜಿಸ್ಟ್ರಾರ್‌ ಮ್ಯಾರೇಜ್‌ ಮಾಡಿಸಲು ಮುಂದಾದ ಜೀವನ್‌

Amruthadhaare serial Yesterday Episode: ಮಂದಾಕಿನಿ ತನ್ನ ಮಗಳ ಸಂಕಟ ನೋಡಲಾಗದೆ ಬಯ್ಯುತ್ತಿದ್ದಾಳೆ. ಈ ವಿಷಯವನ್ನು ಈ ಅಮ್ಮನ ಬಳಿ ಹೇಳಬಹುದಿತ್ತಲ್ವ ಎಂದು ಹೇಳುತ್ತಾಳೆ. ಸದಾಶಿವ ಮೌನವಾಗಿದ್ದಾನೆ. ನೀವೂ ಕೂಡ ನನ್ನಲ್ಲಿ ವಿಷಯ ಮುಚ್ಚಿಟ್ಟಿದ್ದೀರಲ್ವ ಎನ್ನುತ್ತಾರೆ ಮಂದಾಕಿನಿ. ನಿನಗೂ ಈ ವಿಷಯ ಗೊತ್ತಿತ್ತಾ ಎಂದು ಮಂದಾಕಿನಿ ಜೀವನ್‌ ಮತ್ತು ಮಹಿಮಾರನ್ನೂ ಕೇಳಿದಾಗ ನಮಗೂ ಗೊತ್ತಿರಲಿಲ್ಲ. "ಅಪ್ಪ ಯಾಕಪ್ಪ ಹೀಗೆ ಮಾಡಿದ್ರಿ. ಆ ಬಾರಿ ನನಗೆ ಇಷ್ಟವಿದೆಯೋ ಇಲ್ವೋ ಎಂದು ಕೇಳದೆ ನೀವು ಒಪ್ಪಿಕೊಂಡಿದ್ರಿ. ಈಗ ನನಗೆ ಈ ಮದುವೆ ಬೇಕು ಎಂದರೂ ಯಾಕೆ ಒಪ್ಪುತ್ತಿಲ್ಲ" ಎಂದು ಬೇಸರದಲ್ಲಿ ಅಪ್ಪಿ ಕೇಳುತ್ತಾಳೆ. ಒಟ್ಟಾರೆ ಮಂದಾಕಿನಿ ಮನೆಯಲ್ಲಿ ಸದಾಶಿವನ ಮನಸ್ಸು ಬದಲಾಯಿಸಲು ಯಾರಿಗೂ ಆಗೋದಿಲ್ಲ. ಸದಾಶಿವ ಮೌನವಾಗಿಯೇ ದುಃಖ ನುಂಗುತ್ತಿದ್ದಾರೆ. ಈಗ್ಲೂ ಕಾಲ ಮಿಂಚಿಲ್ಲ, ಈ ಸಂಬಂಧ ಒಪ್ಪಿಕೊಳ್ಳಿ ಎಂದು ಮಂದಾಕಿನಿ ಕೇಳುತ್ತಾರೆ. ಆದರೂ ಸದಾಶಿವ ಒಪ್ಪಿಕೊಳ್ಳುವುದಿಲ್ಲ. "ನಿನ್ನೆ ಏನೋ ಆಯ್ತು ಎಂದು ನಾಳೆಯನ್ನು ನೀವು ಹೇಗೆ ಡಿಸೈಡ್‌ ಮಾಡ್ತಿರಾ?" ಎಂದೆಲ್ಲ ಕೇಳಿದಾಗ "ನಾನು ತೀರ್ಮಾನ ಮಾಡಿಯಾಗಿದೆ. ನನ್ನ ಮಗಳನ್ನು ಆ ಮನೆಗೆ ಕೊಡುವುದಿಲ್ಲ ಎಂದರೆ ಕೊಡೋದಿಲ್ಲ" ಎನ್ನುತ್ತಾರೆ.

ಗೌತಮ್‌ ವಿನಂತಿಗೆ ಒಪ್ಪದ ಭೂಮಿಕಾ

ಇನ್ನೊಂದೆಡೆ ಗೌತಮ್‌ ಕೂಡ ಚಿಂತೆಯಲ್ಲಿದ್ದಾನೆ. ಅಲ್ಲಿಗೆ ಭೂಮಿಕಾ ಕೂಡ ಬರುತ್ತಾರೆ. ನನ್ನಿಂದ ಬೇಸರವಾಗಿದ್ದರೆ ಕ್ಷಮಿಸಿ ಎನ್ನುತ್ತಾಳೆ. ಪಾರ್ಥ ಮತ್ತು ಅಪೇಕ್ಷಾ ಪ್ರೀತಿಯ ವಿಷಯ ನನಗೆ ಗೊತ್ತಿತ್ತು. ಆದರೆ, ನಿಮ್ಮಲ್ಲಿ ಹೇಳಲು ಆಗಲಿಲ್ಲ. ಪರಿಸ್ಥಿತಿ ಹಾಗಿತ್ತು ಎನ್ನುತ್ತಾಳೆ. "ನನಗೆ ಅದರ ಬಗ್ಗೆ ಯೋಚನೆ ಇಲ್ಲ. ನಿನ್ನ ತಂದೆ ಮದುವೆ ಬೇಡ ಅಂದ್ರಲ್ವ. ಅದೇ ಯೋಚನೆ. ನೀವು ಯಾಕೆ ನಿಮ್ಮ ತಂದೆಯಲ್ಲಿ ಮಾತನಾಡಬಾರದೇಕೆ" ಎಂದು ಗೌತಮ್‌ ಕೇಳುತ್ತಾರೆ. "ನನ್ನ ಮನೆಯಲ್ಲಿ ಅಪ್ಪ ಹೇಳಿದ್ದೇ ಫೈನಲ್‌. ಒಂದ್ಸಲ ಅವರ ಜಾಗದಲ್ಲಿ ನಿಂತು ನೋಡಿ. ಅವರ ಮಗಳ ವಿಷಯದಲ್ಲಿ ಒಂದಿಷ್ಟು ಆಲೋಚನೆ ಮಾಡಿದ್ದಾರೆ. ಅವರ ವಿರುದ್ಧವಾಗಿ ಹೇಗೆ ಮಾತನಾಡಲಿ?" ಎಂದು ಕೇಳುತ್ತಾಳೆ. "ಈ ಮದುವೆ ನಡೆಯಬಾರದು. ಬೇಡ" ಎನ್ನುತ್ತಾಳೆ ಭೂಮಿಕಾ.

ದುಃಖದಲ್ಲಿರುವ ಪಾರ್ಥನನ್ನು ಗೌತಮ್‌ ಸಮಾಧಾನ ಮಾಡಲು ಯತ್ನಿಸುತ್ತಾರೆ. "ನನಗೆ ಅಪೇಕ್ಷಾ ತುಂಬಾ ಇಷ್ಟ, ಅವಳು ಬೇಕು" ಎಂದೆಲ್ಲ ಪಾರ್ಥ ತನ್ನ ಪ್ರೀತಿಯ ಆಳವನ್ನು ಗೌತಮ್‌ ಮುಂದೆ ತೋರ್ಪಡಿಸಿಕೊಳ್ಳುತ್ತಾನೆ. ಆದರೆ, ಈ ಮದುವೆ ಬೇಡ ಎಂದು ಗೌತಮ್‌ ಹೇಳುತ್ತಾರೆ. ಅಪೇಕ್ಷಾಳ ಜತೆ ಮದುವೆ ನಿಂತು ಹೋಗಿರುವುದು ಜೈದೇವ್‌ಗಂತೂ ಹಾಲು ಕುಡಿದಷ್ಟು ಖುಷಿ ತಂದಿದೆ. ಗೌತಮ್‌ ಕೂಡ ಈ ಮದುವೆ ಬೇಡ ಎಂದಿರುವುದು ಶಕುಂತಲಾಳ ಪ್ಲ್ಯಾನ್‌ಗೆ ದೊಡ್ಡ ಹೊಡೆತ ನೀಡಿದೆ.

 

ರಿಜಿಸ್ಟ್ರಾರ್‌ ಮ್ಯಾರೇಜ್‌ ಮಾಡಿಸಲು ಮುಂದಾದ ಜೀವನ್‌

ಹೀಗೆ ನಿನ್ನೆಯ ಸಂಚಿಕೆಯಲ್ಲಿ ಸದಾಶಿವನ ಮಾತು, ಆತನ ಕಾಳಜಿಯ ಮಾತುಗಳು ಇರುತ್ತವೆ. ಎರಡೂ ಮನೆಯಲ್ಲೂ ಒಂದಿಷ್ಟು ಆತಂಕ, ಬೇಸರ ಮನೆ ಮಾಡಿದೆ. ಆದರೆ, ಈ ಸಮಯದಲ್ಲಿ ಅಮೃತಧಾರೆ ಧಾರಾವಾಹಿ ಇನ್ನೊಂದು ದಿಕ್ಕಿನತ್ತ ಸಾಗುವ ನಿರೀಕ್ಷೆಯಿದೆ. ಅನಿರೀಕ್ಷಿತವಾಗಿ ಈ ಕಥೆಗೆ ಜೀವನ್‌ ಎಂಟ್ರಿ ನೀಡಿದ್ದಾರೆ. ಅಪೇಕ್ಷಾ ಮತ್ತು ಪಾರ್ಥನ ರಿಜಿಸ್ಟ್ರಾರ್‌ ಮದುವೆಯಾಗಲು ಸಹಕರಿಸುವುದಾಗಿ ಭರವಸೆ ನೀಡಿದ್ದಾರೆ. ಅಥವಾ ಇದು ಅಣ್ಣಯ್ಯ ಸೀರಿಯಲ್‌ ಪ್ರಮೋಷನ್‌ಗಾಗಿ ಇಲ್ಲೂ ಅಣ್ಣಯ್ಯನ ಹವಾ ಕ್ರಿಯೆಟ್‌ ಮಾಡುವ ಯೋಜನೆಯಾ? ಗೊತ್ತಿಲ್ಲ. ಎಲ್ಲಾದರೂ ಈ ರೀತಿ ನಡೆದರೆ ಶಕುಂತಲಾ ಷಡ್ಯಂತ್ರವೆಲ್ಲ ಠುಸ್‌ ಪಟಾಕಿಯಾಗಲಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೋ ಇಲ್ಲಿದೆ ನೋಡಿ.

 

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)

ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)

ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)

ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)

ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)

ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)

ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)

ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)

ರಣವ್‌: ಜೈದೇವ್‌

ಚಂದನ್‌: ಅಶ್ವಿನಿ

ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)

ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)