ಅಪ್ಪಿ ಕಣ್ಣೀರಿಗೆ ಕರಗದ ಭೂಮಿಕಾ, ಪ್ರೀತಿನ ತ್ಯಾಗ ಮಾಡಿ ಬದುಕಿದ್ದು ಸತ್ತಂತೆ ಇರ್ತಾರ ಪ್ರೇಮಿಗಳು; ಅಮೃತಧಾರೆ ಸೀರಿಯಲ್‌ ಸ್ಟೋರಿ
ಕನ್ನಡ ಸುದ್ದಿ  /  ಮನರಂಜನೆ  /  ಅಪ್ಪಿ ಕಣ್ಣೀರಿಗೆ ಕರಗದ ಭೂಮಿಕಾ, ಪ್ರೀತಿನ ತ್ಯಾಗ ಮಾಡಿ ಬದುಕಿದ್ದು ಸತ್ತಂತೆ ಇರ್ತಾರ ಪ್ರೇಮಿಗಳು; ಅಮೃತಧಾರೆ ಸೀರಿಯಲ್‌ ಸ್ಟೋರಿ

ಅಪ್ಪಿ ಕಣ್ಣೀರಿಗೆ ಕರಗದ ಭೂಮಿಕಾ, ಪ್ರೀತಿನ ತ್ಯಾಗ ಮಾಡಿ ಬದುಕಿದ್ದು ಸತ್ತಂತೆ ಇರ್ತಾರ ಪ್ರೇಮಿಗಳು; ಅಮೃತಧಾರೆ ಸೀರಿಯಲ್‌ ಸ್ಟೋರಿ

Amruthadhaare serial Yesterday Episode: ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಪ್ರೇಮಿಗಳಿಬ್ಬರು ಪ್ರೇಮ ವೈಫಲ್ಯದ ನೋವಿನಲ್ಲಿ ಪರಿತಪಿಸಿದ್ದಾರೆ. ಇವರಿಗೆ ನೆರವಾಗಲಾಗದೆ ಭೂಮಿಕಾ ಕಠೋರ ಮುಖವಾಡ ಹಾಕಿಕೊಂಡಿದ್ದಾರೆ.

ಅಪ್ಪಿ ಕಣ್ಣೀರಿಗೆ ಕರಗದ ಭೂಮಿಕಾ, ಪ್ರೀತಿನ ತ್ಯಾಗ ಮಾಡಿ ಬದುಕಿದ್ದು ಸತ್ತಂತೆ ಇರ್ತಾರ
ಅಪ್ಪಿ ಕಣ್ಣೀರಿಗೆ ಕರಗದ ಭೂಮಿಕಾ, ಪ್ರೀತಿನ ತ್ಯಾಗ ಮಾಡಿ ಬದುಕಿದ್ದು ಸತ್ತಂತೆ ಇರ್ತಾರ

Amruthadhaare serial Yesterday Episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಒಂದಿಷ್ಟು ಬೆಳವಣಿಗೆಗಳು ನಡೆದಿವೆ. ಶಕುಂತಲಾದೇವಿ ಮತ್ತು ಆಕೆಯ ಸಹೋದರ ಅಪೇಕ್ಷಾಗೆ ನೋವಾಗುವಂತೆ ಪಾರ್ಥನ ಮದುವೆಯ ವಿಚಾರ ಮಾತನಾಡುತ್ತಾರೆ. ಒಂದಿಷ್ಟು ಸ್ಟೇಟಸ್‌ ವಿಷಯನೂ ಮಾತನಾಡುತ್ತಾರೆ. ಇದೇ ಸಮಯದಲ್ಲಿ ನಿನ್ನ ಮದುವೆ ಯಾವಾಗ ಎಂದೂ ಕೇಳುತ್ತಾರೆ. ಶಕುಂತಲಾದೇವಿ ನಯವಾಗಿ ಒಂದಿಷ್ಟು ಕಟು ಮಾತುಗಳನ್ನು ಆಡುತ್ತಾರೆ. ಇನ್ನು ತಡ ಮಾಡಬಾರದು, ನನ್ನ ಪ್ರೀತಿಯ ವಿಷಯ ಅಕ್ಕನಿಗೆ ಹೇಳಬೇಕು ಎಂದುಕೊಳ್ಳುತ್ತಾಳೆ ಅಪೇಕ್ಷಾ. ಇನ್ನೊಂದೆಡೆ ಪಾರ್ಥ ಮಂಕಾಗಿದ್ದಾನೆ. ಇದನ್ನು ಗಮನಿಸಿದ ಆನಂದ್‌ ಏನಾಯ್ತು ಎಂದು ಕೇಳುತ್ತಾನೆ. ಗೌತಮ್‌ ಕೂಡ "ಯಾಕೆ ಜೋಷ್‌ ಇಲ್ಲ" ಎನ್ನುತ್ತಾನೆ. ಇವರಿಬ್ಬರೂ ಈತನಿಗೆ ನರ್ವಸ್‌ ಆಗಿದೆ ಎಂದುಕೊಳ್ಳುತ್ತಾರೆ.

ಹುಡುಗಿ ಹೇಗೆ ಅನಿಸಿದ್ಲು. ಇಷ್ಟ ಆದ್ಲ? ಯಸ್‌ ಅನ್ಬೋದ ಎಂದು ಗೌತಮ್‌ ಕೇಳಿದಾಗ ಪಾರ್ಥ ಮೌನವಾಗುತ್ತಾನೆ. ಆತನಿಗೆ ಹೇಳಲು ಗ್ಯಾಪೆ ಇರುವುದಿಲ್ಲ. ಇದನ್ನೇ ಸಮ್ಮತಿ ಎಂದುಕೊಂಡು ಅವರು ಅಲ್ಲಿಂದ ಹೋಗುತ್ತಾರೆ.

ಭೂಮಿಕಾ ಬೇಸರದಲ್ಲಿರುವಾಗ ಅಲ್ಲಿಗೆ ಅಪೇಕ್ಷಾ ಬರುತ್ತಾಳೆ. ಈಗಲಾದರೂ ಮಾತನಾಡಬಹುದಾ? ಎಂದು ಕೇಳುತ್ತಾಳೆ ಅಪೇಕ್ಷಾ. ಯಾಕೆ ಅಕ್ಕ ಸುಮ್ಮನಾಗಿ ಬಿಟ್ಟೆ. ಏನು ಅಂತ ಕೇಳೋಲ್ವ ಎಂದು ಕೇಳುತ್ತಾಳೆ. ಈಗ ಅರ್ಥ ಇಲ್ವಾ ಅಕ್ಕ ಎಂದು ಕೇಳುತ್ತಾಳೆ ಅಪೇಕ್ಷಾ. ನೀನು ಕೇಳದೆ ಇದ್ದರೆ ನಾನು ಹೇಳಲೇ ಬೇಕು. ನಾನು ಪಾರ್ಥನ ಲವ್‌ ಮಾಡ್ತಾ ಇದ್ದೀನಿ ಅಕ್ಕಾ. ಪಾರ್ಥ ಅವರೂ ನನ್ನ ಪ್ರೀತಿಸ್ತಾ ಇದ್ದಾರೆ ಎನ್ನುತ್ತಾಳೆ. ಇದೆಲ್ಲ ವಿಷಯ ಗೊತ್ತಿದ್ದರೂ ಏನು ಹೇಳಬೇಕೆಂದು ಗೊತ್ತಾಗದೆ ಭೂಮಿಕಾ ತಬ್ಬಿಬ್ಬಾಗಿದ್ದಾಳೆ. ಹೀಗಿದ್ದರೂ ಕಠೋರವಾಗಿ ಇರ್ತಾಳೆ. "ಏನು ಮಾತನಾಡ್ತಿ. ನನಗೆ ಹೇಳಿದ ಹಾಗೆ ನಾನು ಗೌತಮ್‌ ಮತ್ತು ಶಕುಂತಲಾ ಬಳಿ ಹೇಳಿದ್ರೆ ಒಪ್ತಾರ. ಅವತ್ತೂ ಜೈದೇವ್‌ನ ಮದುವೆಯಾಕಾದವಳು ಈಗ ಪಾರ್ಥನ ಮದುವೆಯಾಗ್ತಾಳೆ ಅಂದ್ರೆ ಹೇಗೆ ಹೇಳಲಿ" ಎಂದು ಭೂಮಿಕಾ ಕೇಳುತ್ತಾಳೆ.

ಅಪೇಕ್ಷಾ ಅಳುವಿಗೆ ಕರಗದ ಭೂಮಿಕಾ

"ಜೈದೇವ್‌ನ ಮದುವೆಯಾಗುವ ಮುನ್ನವೇ ನನಗೆ ಲವ್‌ ಇತ್ತು. ಮನೆಗೆ ಪ್ರಪೋಸಲ್‌ ತೆಗೆದುಕೊಂಡು ಬಂದಾಗ ನಾನು ಪಾರ್ಥ ಅವರದ್ದು ಅಂದುಕೊಂಡೆ. ಅದು ಜೈದೇವ್‌ನದು ಅಂತ ಕೊನೆಗೆ ಗೊತ್ತಾಯ್ತು" ಎನ್ನುವ ಸತ್ಯವನ್ನು ಅಪೇಕ್ಷಾ ಹೇಳುತ್ತಾಳೆ. "ಕೊನೆಗೆ ಅದು ಮದುವೆ ತನಕ ಹೋಯ್ತು. ಮನೆಯವರ ಖುಷಿಗೆ ನಾನು ಮತ್ತು ಪಾರ್ಥ ಈ ಪ್ರೀತಿನ ತ್ಯಾಗ ಮಾಡೋಕ್ಕೆ ಹೊರಟ್ವಿ" ಎಂದು ಹೇಳುತ್ತಾಳೆ. "ಇದು ನಿಮಗೆ ಗೊತ್ತು. ಆದರೆ, ಹೊರಗಿನ ಪ್ರಪಂಚ ಇದನ್ನು ಹೇಗೆ ನಂಬುತ್ತದೆ. ಹೊರಗಿನ ಪ್ರಪಂಚ ತುಂಬಾ ಅಸಹ್ಯವಾಗಿ ನೋಡುತ್ತದೆ ಅಪ್ಪಿ" ಎಂದು ಭೂಮಿಕಾ ಕೇಳುತ್ತಾಳೆ. "ಶ್ರೀಮಂತಿಕೆಯ ಹುಚ್ಚು ಇವಳಿಗೆ. ಅಣ್ಣನ ಜತೆ ಮದುವೆಯಾಗಿಲ್ಲ ಅಂತ ತಮ್ಮನ ಬುಟ್ಟಿಗೆ ಹಾಕಿಕೊಂಡಿದ್ದಾಳೆ ಅನ್ನುತ್ತೆ. ನಿನ್ನ ಬಗ್ಗೆ ಮಾತ್ರವಲ್ಲ. ಇಡೀ ಫ್ಯಾಮಿಲಿ ಬಗ್ಗೆ ಮಾತನಾಡ್ತಾರೆ" ಎಂದು ಭೂಮಿಕಾ ಹೇಳುತ್ತಾಳೆ.

"ನನಗೆ ಅಂತಹ ಭಾವನೆ ಇಲ್ಲ. ನಾವಿಬ್ಬರು ಭಾವನೆಗಳನ್ನು ಹಂಚಿಕೊಂಡಿದ್ದೇವೆ" ಎನ್ನುತ್ತಾಳೆ ಅಪ್ಪಿ. "ಇದು ಮನೆಯವರಿಗೆ ಗೊತ್ತಾದರೆ ಅಪ್ಪ ಅಮ್ಮ ಹೇಗೆ ಇರುತ್ತದೆ" ಎನ್ನುತ್ತಾಳೆ ಭೂಮಿಕಾ. "ನಮ್ಮ ಪ್ರೀತಿನ ಪರೀಕ್ಷೆ ಮಾಡಲು ಚಾಲೆಂಜ್‌ ಮಾಡಿದ್ದಾರೆ ಅಪ್ಪ" ಎಂದು ಅಪೇಕ್ಷಾ ಹೇಳುತ್ತಾಳೆ. "ಸರಿಯಾಗಿಯೇ ಮಾಡಿದ್ದಾರೆ. ನಿನ್ನ ಬಗ್ಗೆ ಕಾಳಜಿಯಿಂದ ಹಾಗೆ ಮಾಡಿದ್ದಾರೆ. ನಾನು ನಿನಗೆ ಸಪೋರ್ಟ್‌ ಮಾಡೋಲ್ಲ" ಎನ್ನುತ್ತಾಳೆ ಭೂಮಿಕಾ. "ಇದೇ ಲಾಸ್ಟ್‌. ಇನ್ಮುಂದೆ ಇದರ ಬಗ್ಗೆ ಯೋಚನೆ ಮಾಡಬೇಡ. ಆಗಿದ್ದೆಲ್ಲ ಕೆಟ್ಟ ಕನಸು ಎಂದು ಎಲ್ಲವನ್ನೂ ಮರೆತುಬಿಡು" ಎಂದು ಭೂಮಿಕಾ ಹೇಳುತ್ತಾಳೆ. "ಮರೆತುಬಿಡೋದ. ಅಕ್ಕ ಅಂತ ಹೇಳಿದ್ರೆ ನೀನು ಹೀಗೆ ಮಾಡೋದ. ಅವರು ಇಲ್ಲದೆ ನನಗೆ ಬದುಕಲು ಆಗೋಲ್ಲ" ಎನ್ನುತ್ತಾಳೆ. "ಬದುಕಲು ಆಗೋದಿಲ್ವ. ನೀನು ಇಷ್ಟು ಸ್ವಾರ್ಥಿಯಾದೆ. ಈಗ ಸಿಕ್ಕಿರುವ ಪ್ರೀತಿಗಾಗಿ ಅಪ್ಪ ಅಮ್ಮನ ಪ್ರೀತಿನ ಮರೆತು ಬಿಡ್ತೀಯ. ನೋಡು ಅಪ್ಪಿ. ಎರಡು ಮನೆತನದ ಗೌರವ ನಿನ್ನ ಕೈಯಲ್ಲಿದೆ. ಎರಡು ಮನೆಯವರ ಗೌರವ ಕಾಪಾಡು. ನೀನು ಇಲ್ಲಿಗೆ ಬಂದಿಲ್ಲ. ನನ್ನಲ್ಲಿ ಏನೂ ಇಲ್ಲ. ನೀನು ಇಲ್ಲಿಂದ ಹೊರಟುಹೋಗು" ಎಂದು ಹೇಳುತ್ತಾಳೆ.

ಒಟ್ಟಾರೆ, ಅಪೇಕ್ಷಾ ಪ್ರೀತಿಗೆ ಅಕ್ಕನ ಬೆಂಬಲ ಸಿಗೋದಿಲ್ಲ. ಏನೂ ಮಾಡಲಾಗದೆ ಮನಸ್ಸನ್ನು ಕಲ್ಲಾಗಿಸಿದ್ದಾಳೆ ಭೂಮಿಕಾ. ಅಪೇಕ್ಷಾ ಅಳುತ್ತಾ ಹೋಗುತ್ತಾಳೆ. ಅವಳು ಹೋದ ಬಳಿಕ ಭೂಮಿಕಾ ಅಳುತ್ತಾಳೆ. ಅತ್ತೆಗೆ ಮಾತು ಕೊಟ್ಟಿದ್ದೇನೆ. ವೆರಿವೆರಿ ಸ್ವಾರಿ ಎಂದು ಭೂಮಿಕಾ ತನ್ನಷ್ಟಕ್ಕೆ ಅಳುತ್ತಾಳೆ. ಅಪ್ಪಿ ಅಳುತ್ತ ಹೋಗುವುದನ್ನು ಶಕುಂತಲಾ ಮತ್ತು ಆಕೆಯ ಸಹೋದರ ನೋಡುತ್ತ ಖುಷಿ ಪಡುತ್ತಾರೆ. ಇನ್ನೊಂದೆಡೆ ಈ ವಿಷಯವನ್ನೂ ನೆನಪಿಸಿಕೊಂಡು ಅಶ್ವಿನಿ ಮತ್ತು ಜೈದೇವ್‌ ಖುಷಿ ಪಡುತ್ತಾರೆ. "ಅವಳು ಬೇಜಾರಲ್ಲಿರುವುದನ್ನು ನೋಡಿ ನನಗೆ ಹಳೆಯ ರಿವೇಂಜ್‌ ತೀರಿಸಿದಂತೆ ಆಯ್ತು" ಎಂದು ಜೈದೇವ್‌ ಹೇಳುತ್ತಾನೆ. "ಇದು ಇಷ್ಟಕ್ಕೆ ನಿಲ್ಲಬಾರದು. ಅವಳ ಮನೆಯಲ್ಲೂ ಡಿಸ್ಕಷನ್‌ ಆಗಬೇಕು. ಇದು ಮಜ ಇರುತ್ತೆ." ಎನ್ನುತ್ತಾನೆ. "ಮಹೀಗೆ ಕಾಲ್‌ ಮಾಡಿ ಉರಿಸೋ ಪ್ಲಾನ್‌ ಮಾಡ್ತಿನಿ" ಎನ್ನುತ್ತಾಳೆ ಅಶ್ವಿನಿ. "ಪಾರ್ಥನಿಗೆ ಹುಡುಗಿ ಓಕೆ ಆದ್ಲು. ಪಾರ್ಥ ಮತ್ತು ಮನೆಯವರೂ ನೋಡಿದ್ರು. ಹುಡುಗಿ ನೋಡುವ ಶಾಸ್ತ್ರ ಮುಗಿದು ಹೋಯ್ತು" ಎನ್ನುತ್ತಾಳೆ. "ಹುಡುಗಿಗೂ ಪಾರ್ಥ ಓಕೆ ಅಂತೆ" ಎಂದೆಲ್ಲ ಹೇಳುತ್ತಾಳೆ.

ಹೊರಗೆ ಪಾರ್ಥ ಅಪೇಕ್ಷಾಳನ್ನು ಭೇಟಿಯಾಗುತ್ತಾನೆ. "ನೀವಿಲ್ಲದೆ ನಾನು ಹೇಗಿರಲಿ" ಎನ್ನುತ್ತಾನೆ. "ನನಗೆ ಅಕ್ಕ ಸಪೋರ್ಟ್‌ ಮಾಡ್ತಾಳೆ ಅಂದುಕೊಂಡೆ. ಅವಳೂ ಸಪೋರ್ಟ್‌ ಮಾಡೋಲ್ಲ" ಎನ್ನುತ್ತಾಳೆ ಅಪೇಕ್ಷಾ. "ನನ್ನ ಪಾಲಿಗೆ ಏನೂ ಉಳಿದಿಲ್ಲ. ನನ್ನ ಪಾಲಿಗೆ ಎಲ್ಲಾ ಡೋರ್‌ಗಳು ಕ್ಲೋಸ್‌ ಆಗಿವೆ. ಎಲ್ಲರೂ ಮದುವೆ ತಯಾರಿಯಲ್ಲಿದ್ದಾರೆ" ಎನ್ನುತ್ತಾಳೆ. "ಇದಕ್ಕೆ ಏನೂ ಮಾಡಬೇಕು ಅಂದುಕೊಂಡಿದ್ದೀರಿ" ಎನ್ನುತ್ತಾನೆ. "ಏನೂ ಮಾಡೋಲ್ಲ. ಅವತ್ತಿನ ರೀತಿ ಪ್ರೀತಿಯನ್ನು ತ್ಯಾಗ ಮಾಡಬೇಕು. ಬದುಕಿದ್ದು ಸತ್ತಂತೆ ಇರಬೇಕು" ಎನ್ನುತ್ತಾಳೆ. "ನಾವು ನಮ್ಮ ಪ್ರೀತಿನ ಉಳಿಸಿಕೊಳ್ಳಬೇಕು" ಎನ್ನುತ್ತಾನೆ ಪಾರ್ಥ. "ಎಲ್ಲರಿಗೂ ಅವರವರ ಹಠನೇ ಮುಖ್ಯ. ಅವರವರ ಆಸೆ ಮುಖ್ಯ. ನಮ್ಮ ಭಾವನೆ ಯಾರಿಗೂ ಮುಖ್ಯವಲ್ಲ" ಎನ್ನುತ್ತಾಳೆ. "ಪ್ರೀತಿ ಮಾಡಿಬಿಟ್ಟಿದ್ದೇವೆ. ನಮಗೆ ಅದನ್ನು ಉಳಿಸಿಕೊಳ್ಳಲು ಆಗುತ್ತಿಲ್ಲ" ಎಂದು ಅಳುತ್ತಾಳೆ.

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)

ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)

ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)

ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)

ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)

ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)

ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)

ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)

ರಣವ್‌: ಜೈದೇವ್‌

ಚಂದನ್‌: ಅಶ್ವಿನಿ

ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)

ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)

Whats_app_banner