ಹೆಣ್ಣು ಕೇಳಲು ಬಂದ್ರು ಗೌತಮ್‌, ಭೂಮಿಕಾ ಸದಾಶಿವ ಅಯೋಮಯ, ಫಲಿಸಿತೇ ಶಕುಂತಲಾದೇವಿ ಷಡ್ಯಂತ್ರ? ಅಮೃತಧಾರೆ ಸೀರಿಯಲ್‌ ಸ್ಟೋರಿ-televison news amruthadhaare serial yesterday episode bhoomika is shocked by shakuntaladevi move sadashiva will accept ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಹೆಣ್ಣು ಕೇಳಲು ಬಂದ್ರು ಗೌತಮ್‌, ಭೂಮಿಕಾ ಸದಾಶಿವ ಅಯೋಮಯ, ಫಲಿಸಿತೇ ಶಕುಂತಲಾದೇವಿ ಷಡ್ಯಂತ್ರ? ಅಮೃತಧಾರೆ ಸೀರಿಯಲ್‌ ಸ್ಟೋರಿ

ಹೆಣ್ಣು ಕೇಳಲು ಬಂದ್ರು ಗೌತಮ್‌, ಭೂಮಿಕಾ ಸದಾಶಿವ ಅಯೋಮಯ, ಫಲಿಸಿತೇ ಶಕುಂತಲಾದೇವಿ ಷಡ್ಯಂತ್ರ? ಅಮೃತಧಾರೆ ಸೀರಿಯಲ್‌ ಸ್ಟೋರಿ

Amruthadhaare serial Yesterday Episode: ಅಮೃತಧಾರೆ ಸೀರಿಯಲ್‌ ಭಿನ್ನ ತಿರುವು ಪಡೆಯುತ್ತಿದೆ. ಒಳ್ಳೆಯವರಾಗಿದ್ದವರನ್ನು ಕೆಟ್ಟವರಾಗಿಸುವ ಪ್ರಯತ್ನ ನಡೆಯುತ್ತಿದೆ. ಅಪೇಕ್ಷಾ- ಪಾರ್ಥ ಮದುವೆಯ ಮುಂದಾಳತ್ವವನ್ನು ಶಕುಂತಲಾ ವಹಿಸಿದ್ದಾಳೆ. ಭೂಮಿಕಾ, ಸದಾಶಿವ ಅಯೋಮಯ ಸ್ಥಿತಿಯಲ್ಲಿದ್ದಾರೆ.

ಹೆಣ್ಣು ಕೇಳಲು ಬಂದ್ರು ಗೌತಮ್‌, ಭೂಮಿಕಾ ಸದಾಶಿವ ಅಯೋಮಯ, ಫಲಿಸಿತೇ ಶಕುಂತಲಾದೇವಿ ಷಡ್ಯಂತ್ರ?
ಹೆಣ್ಣು ಕೇಳಲು ಬಂದ್ರು ಗೌತಮ್‌, ಭೂಮಿಕಾ ಸದಾಶಿವ ಅಯೋಮಯ, ಫಲಿಸಿತೇ ಶಕುಂತಲಾದೇವಿ ಷಡ್ಯಂತ್ರ?

Amruthadhaare serial Yesterday Episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಸಾಕಷ್ಟು ವಿದ್ಯಮಾನಗಳು ನಡೆದಿವೆ. ಗೌತಮ್‌ ಮತ್ತು ಶಾಕುಂತಲಾದೇವಿ ಮಾತನಾಡುತ್ತಿದ್ದಾರೆ. ಹುಡುಗಿ ಮನೆಯವರು ಕೇಳ್ತಾ ಇದ್ದಾರೆ ಹೇಳ್ಲಾ ಎಂದು ಕೇಳುತ್ತಾನೆ. "ಆ ಹುಡುಗಿ ಬೇಡ ಅಂತ ಹೇಳು" ಎನ್ನುತ್ತಾರೆ. "ನಮ್ಮ ಪಾರ್ಥಗೆ ಬೇರೆ ಹುಡುಗಿ ನೋಡಿದ್ದೀನಿ" ಎನ್ನುತ್ತಾರೆ. ಯಾರೂ ಎಂದಾಗ "ಅಪೇಕ್ಷಾಳನ್ನು ಪಾರ್ಥನಿಗೆ ಮದುವೆ ಮಾಡೋಣ. ಜೈದೇವ್‌ ಮದುವೆಯ ಸಮಯದಲ್ಲಿ ಅಪೇಕ್ಷಾಗೆ ಸಾಕಷ್ಟು ಅನ್ಯಾಯವಾಗಿದೆ. ಆಕೆಗೆ ಆದ ಅನ್ಯಾಯ ಸರಿಪಡಿಸಲು ಇದು ಸರಿಯಾದ ಸಮಯ. ನಮ್ಮ ಪಾರ್ಥನಿಗೆ ಅವಳು ತಕ್ಕ ಜೋಡಿ" ಎಂದೆಲ್ಲ ಶಕುಂತಲಾ ಹೇಳಿದಾಗ ಗೌತಮ್‌ ಯೋಚನೆಗೆ ಬೀಳುತ್ತಾನೆ. "ನಿನ್ನ ಯೋಚನೆ ಸರಿಯಾಗಿದೆ. ಒಂದು ಪ್ರಾಬ್ಲಂ ಇದೆ. ಈಗಾಗಲೇ ಜೈದೇವ್‌ ಮದುವೆಯಾಗಿ ಕ್ಯಾನ್ಸಲ್‌ ಆಗಿತ್ತು. ಮನೆಯಲ್ಲಿ ಎಲ್ಲರಿಗೂ ಎಂಬೆರೆಸ್‌ ಆಗಬಹುದು. ಹೊರಗೆ ನಿಂತು ನೋಡುವವರಿಗೆ ಇದು ವಿಚಿತ್ರ ಅನಿಸ್ಬೋದು. ಬೇರೆ ಏನೂ ಇಲ್ಲ. ನನಗೆ ಓಕೆ" ಎಂದು ಗೌತಮ್‌ ಹೇಳುತ್ತಾರೆ. "ಈ ವಿಷಯ ಈಗಲೇ ಭೂಮಿಕಾಳಿಗೆ ಹೇಳಬೇಡ. ಕೊನೆಕ್ಷಣದಲ್ಲಿ ಸರ್‌ಪ್ರೈಸ್‌ ರೀತಿ ಇರಲಿ. ನಾವು ನಾಳೆ ಅವರ ಮನೆಗೆ ಹೋಗಿ ಎಲ್ಲರ ಮುಂದೆ ರಿವೀಲ್‌ ಮಾಡೋಣ" ಎನ್ನುತ್ತಾಳೆ. "ಸರಿ" ಅನ್ನುತ್ತಾರೆ ಗೌತಮ್‌. ಆದರೆ, ಇವರಿಗೆ ಶಕುಂತಲಾದೇವಿಯ ಪ್ಲ್ಯಾನ್‌ ಗೊತ್ತಿರುವುದಿಲ್ಲ.

"ಅಮ್ಮ ಹುಡುಗಿ ಮನೆಯವರಿಗೆ ನೋ ಎಂದು ಹೇಳಲು ಬಯಸಿದ್ದಾರೆ. ಅಮ್ಮನ ಮನಸ್ಸಲ್ಲಿ ಬೇರೆ ಯಾರೋ ಹುಡುಗಿ ಇದ್ದಾರೆ. ಇದು ಲೇಟೆಸ್ಟ್‌ ಅಪ್‌ಡೇಟ್‌" ಎಂದು ಭೂಮಿಕಾಳ ಬಳಿ ಗೌತಮ್‌ ಹೇಳುತ್ತಾರೆ. "ಯಾರು ಆ ಹುಡುಗಿ" ಎಂದು ಕೇಳುತ್ತಾಳೆ. "ನನಗೂ ಗೊತ್ತಿಲ್ಲ" ಎಂದೂ ಹೇಳುತ್ತಾರೆ. "ನಾಳೆ ನೀವು ನಿಮ್ಮ ಕೆಲಸಕ್ಕೆ ರಜೆ ಹಾಕಬೇಕು. ನಾವು ಹುಡುಗಿ ಮನೆಗೆ ಹೋಗ್ತಾ ಇದ್ದೇವೆ" ಎಂದು ಹೇಳುತ್ತಾರೆ ಡುಮ್ಮ ಸಾರ್‌.

ಇನ್ನೊಂದೆಡೆ ಅಪೇಕ್ಷಾ ಮತ್ತು ಪಾರ್ಥ ಖುಷಿಯಿಂದ ಫೋನ್‌ನಲ್ಲಿ ಮಾತನಾಡುತ್ತ ಇದ್ದಾರೆ. ಆ ಸಮಯದಲ್ಲಿ ಶಕುಂತಲಾದೇವಿ ಬರುತ್ತಾರೆ. "ನಿನಗೆ ಒಂದು ಗುಡ್‌ ನ್ಯೂಸ್‌ ಇದೆ. ನಾಳೆ ನಾವೆಲ್ಲರು ನಾಳೆ ಅಪೇಕ್ಷಾ ಮನೆಗೆ ಹೋಗ್ತಾ ಇದ್ದೇವೆ" ಎನ್ನುತ್ತಾರೆ. "ಎಲ್ಲಾ ಮುಗಿದು ಹೋದ್ರೆ ಎಂಗೇಜ್‌ಮೆಂಟ್‌ ಮುಗಿಸೋಣ" ಎನ್ನುತ್ತಾನೆ. "ಲಾಸ್ಟ್‌ ಮೊಮೆಂಟ್‌ ತನಕ ಯಾರಲ್ಲೂ ಹೇಳಬೇಡ" ಎನ್ನುತ್ತಾರೆ ಶಕುಂತಲಾದೇವಿ. ಇದಾದ ಬಳಿಕ ಒಂದಿಷ್ಟು ಖುಷಿ, ಭಾವುಕ ಮಾತುಗಳು ನಡೆಯುತ್ತವೆ.

ಭೂಮಿಕಾ ಮನೆಗೆ ಬಂದ ಶಕುಂತಲಾ ಫ್ಯಾಮಿಲಿ

ಹುಡುಗಿ ಮನೆಗೆ ಕರೆದುಕೊಂಡು ಹೋಗ್ತೀವಿ ಅಂತ ನನ್ನ ಮನೆಗೆ ಯಾಕೆ ಕರೆದುಕೊಂಡು ಬಂದ್ರಿ ಎಂದು ಆಶ್ಚರ್ಯದಿಂದ ಭೂಮಿಕಾ ಕೇಳುತ್ತಾಳೆ. ಅವಳಿಗೆ ಏನೂ ಅರಿವಾಗುತ್ತಿಲ್ಲ. ಇಲ್ಲಿ ಏನು ನಡೆಯುತ್ತದೆ ಎಂಬ ಅಚ್ಚರಿ ಇರುತ್ತದೆ. ಮನೆಗೆ ಯಾರು ಬಂದ್ರೂ ಎಂದು ಮಂದಾಕಿನಿ ಅಶ್ಚರ್ಯದಿಂದ ನೋಡುತ್ತಾರೆ. ಎಲ್ಲರೂ ಮನೆಗೆ ಬಂದಿರುವುದನ್ನು ನೋಡಿ ಅಚ್ಚರಿಯಾಗುತ್ತದೆ. "ನಾವು ಬಂದಿರೋದು ನಿಮಗೆಲ್ಲ ಸರ್‌ಪ್ರೈಸ್‌ ನೀಡೋಣ" ಎಂದು ಗೌತಮ್‌ ಹೇಳುತ್ತಾನೆ. ಎಲ್ಲರಿಗೂ ಒಂದಿಷ್ಟು ಕೌತಕ ಕಾಣಿಸುತ್ತದೆ. "ಏನು ಹೇಳ್ತಾ ಇದ್ದೀರಿ ಅರ್ಥ ಆಗ್ತಾ ಇಲ್ಲ" ಎಂದು ಭೂಮಿಕಾ ಹೇಳುತ್ತಾಳೆ. "ನಾವು ಅಪೇಕ್ಷಾನ ಪಾರ್ಥನಿಗೆ ಮದುವೆ ಮಾಡಿಸೋಣ ಅಂದುಕೊಂಡಿದ್ದೇವೆ" ಎಂದು ಗೌತಮ್‌ ಹೇಳುತ್ತಾರೆ. ಸದಾಶಿವ ಮತ್ತು ಭೂಮಿಕಾ ಮುಖಮುಖ ನೋಡಿಕೊಳ್ಳುತ್ತಾರೆ.

"ಹಿಂದೆ ನಡೆದ ವಿಚಾರ ನಿಮಗೆ ಗೊತ್ತು. ಇದೆಲ್ಲ ಹೇಗೆ ಸಾಧ್ಯವಾಗುತ್ತದೆ" ಎಂದು ಸದಾಶಿವ ಹೇಳುತ್ತಾರೆ. "ಅಂದು ನಡೆದದ್ದು ಕೆಟ್ಟ ಗಳಿಗೆ ಎಂದು ನಾವು ಮರೆತಿದ್ದೇವೆ. ನೀವೂ ಮರೆತುಬಿಡಿ" ಎಂದು ಶಕುಂತಲಾದೇವಿ ಹೇಳುತ್ತಾರೆ. ಅತ್ತೆಯ ವರಸೆ ನೋಡಿ ಭೂಮಿಕಾ ಅಂತೂ ಆಘಾತಕ್ಕೆ ಒಳಗಾದವರಂತೆ ಇದ್ದಾರೆ. "ಅಪೇಕ್ಷಾ ನಮ್ಮ ಮನೆಗೆ ಬಂದ್ರೆ ಚೆನ್ನಾಗಿರುತ್ತದೆ" ಎಂದೆಲ್ಲ ಶಕುಂತಲಾ ಮಾತನಾಡುತ್ತಾ ಇದ್ದಾರೆ. ಇದು ಒಳ್ಳೆಯ ಸಂಬಂಧ ಎಂದಾಗ ಭೂಮಿಕಾ ಖುಷಿಯಾಗುತ್ತಾಳೆ. ಆದರೆ, ಸದಾಶಿವ ಗಂಭೀರವಾಗಿ ಯೋಚಿಸುತ್ತಾ ಇದ್ದಾರೆ. "ಪಾರ್ಥ ಮತ್ತು ಅಪೇಕ್ಷಾ ಒಂದಾಗಬಾರದು" ಎಂದು ಸದಾಶಿವ ಹೇಳಿದ ಮಾತು ಭೂಮಿಕಾಗೆ ನೆನಪಾಗುತ್ತದೆ. ಅಪೇಕ್ಷಾ ನಾಚಿ ಮನೆಯೊಳಗೆ ಹೋಗುತ್ತಾಳೆ. ಮೊದಲು ಮಾವ ಓಕೆ ಎನ್ನಲಿ ಎಂದು ಗೌತಮ್‌ ಹೇಳುತ್ತಾರೆ. "ಮಾವ ನಿಮ್ಮ ನಿರ್ಧಾರ ಏನು ಎಂದು ಹೇಳಿ" ಎಂದು ಕೇಳುತ್ತಾರೆ. ಸದಾಶಿವ ಯೋಚನೆಗೆ ಬಿದ್ದಿದ್ದಾರೆ.

ಇನ್ನೊಂದೆಡೆ ಜೈದೇವ್‌ ಯೋಚನೆ ಮಾಡುತ್ತ ಇದ್ದಾನೆ. "ಪಾರ್ಥನಿಗೆ ಹುಡುಗಿ ನೋಡ್ತಾರೆ. ಆದ್ರೆ, ನನಗೆ ಯಾರೂ ಎಂದು ಹೇಳಿಲ್ಲ. ನನ್ನನ್ನೂ ಕರೆದುಕೊಂಡು ಹೋಗಿಲ್ಲ" ಎಂದು ಜೈದೇವ್‌ ಯೋಚಿಸುತ್ತಾನೆ. ಮಲ್ಲಿಗೂ ಈ ವಿಷಯ ಗೊತ್ತಿರುವುದಿಲ್ಲ. "ನಮಗೆ ದೊಡ್ಡದಾಗಿ ಸರ್‌ಪ್ರೈಸ್‌ ನೀಡಲು ಉದ್ದೇಶವಿರಬಹುದು" ಎಂದು ಜೈದೇವ್‌ ಹೇಳುತ್ತಾನೆ. "ನಿಮ್ಮನಾದರೂ ಕರೆದುಕೊಂಡು ಹೋಗಬಹುದಿತ್ತು" ಎಂದು ಮಲ್ಲಿ ಹೇಳುತ್ತಾಳೆ. ಒಟ್ಟಾರೆ ಇಬ್ಬರಿಗೂ ಮದುವೆಯಾಗುವ ಹುಡುಗಿ ಅಪೇಕ್ಷಾ ಎಂದು ತಿಳಿದಿರುವುದಿಲ್ಲ.

ಅಪ್ಪ ಖಂಡಿತಾ ಒಪ್ಪುತ್ತಾರೆ ಎಂದು ಅಪೇಕ್ಷಾ ಯೋಚನೆ ಮಾಡುತ್ತಾಳೆ. ಅಲ್ಲಿಗೆ ಭೂಮಿಕಾ ಬರುತ್ತಾಳೆ. "ಅಪ್ಪನಿಗೆ ಈ ಮದುವೆ ಇಷ್ಟವಿಲ್ಲ. ಇಷ್ಟ ಆಗೋದು ಇಲ್ಲ" ಎಂದು ಭೂಮಿಕಾ ಹೇಳುತ್ತಾಳೆ. ಇದನ್ನು ಕೇಳಿ ಅಪೇಕ್ಷಾಗೆ ಟೆನ್ಷನ್‌ ಆಗುತ್ತದೆ. "ಅಪ್ಪನ ಪರವಾಗಿ ನಾನು ಕೇಳಿಕೊಳ್ಳುತ್ತೇನೆ. ನನಗೆ ಈ ಮದುವೆ ಇಷ್ಟವಿಲ್ಲ ಎಂದು ಹೇಳು" ಎಂದು ಭೂಮಿಕಾ ಕೇಳಿಕೊಳ್ಳುತ್ತಾಳೆ. "ಏನು ಹೇಳ್ತಾ ಇದ್ದೀಯ ಅಕ್ಕಾ. ಏನು ಸಿಚುವೇಚನ್‌. ಎಲ್ಲರೂ ಅವರಾಗಿಯೇ ಅವರು ಬಂದಿದ್ದಾರೆ. ಅಪ್ಪ ಒಬ್ರು ಒಪ್ಪಿಕೊಂಡ್ರೆ ಎಲ್ಲಾ ಆಗಿ ಹೋಗುತ್ತದೆ. ಯಾಕೆ ಈ ವಿಷಯವನ್ನು ಇಷ್ಟು ಕಾಂಪ್ಲಿಕೇಟ್‌ ಮಾಡ್ತಾ ಇದ್ದೀಯ. ನಾನ್ಯಾಕೆ ಯಾವಾಗಲೂ ರಾಜಿಯಾಗಬೇಕು. ಅಪ್ಪ ಆಗಲಿ" ಎನ್ನುತ್ತಾಳೆ ಅಪೇಕ್ಷಾ. "ಅಪ್ಪನ ಆಸೆಯ ವಿರುದ್ಧವಾಗಿ ಹೋಗಿ ನಾವು ಖುಷಿಪಡಲು ಸಾಧ್ಯವೇ" ಎನ್ನುತ್ತಾಳೆ ಭೂಮಿಕಾ. "ಅಕ್ಕಾ ನೀನು ಹೇಳುವುದು ನನ್ನ ಬುದ್ಧಿಗೆ ಅರ್ಥ ಆಗುತ್ತದೆ. ಆದರೆ, ಮನಸ್ಸಿಗೆ ಅರ್ಥವಾಗುವುದಿಲ್ಲ. ನಾನು ಪಾರ್ಥನ ತುಂಬಾ ಇಷ್ಟಪಡ್ತಿನಿ. ಸಾರಿ ಅಕ್ಕ. ಈ ಒಂದು ವಿಷಯದಲ್ಲಿ ನಾನು ಯಾರ ಮಾತನ್ನೂ ಕೇಳೋದಿಲ್ಲ" ಎಂದು ಹೇಳುತ್ತಾಳೆ. "ಯಾವುದೇ ಕಾರಣಕ್ಕೂ ನನ್ನ ನಿರ್ಧಾರ ಬದಲಾಗುವುದಿಲ್ಲ. ಹೋಗಿ ಅಪ್ಪನ ಮದುವೆಗೆ ಒಪ್ಪಿಸು" ಎನ್ನುತ್ತಾಳೆ.

ಇನ್ನೊಂದೆಡೆ ಟೀ ಕಾಯಿಸುತ್ತಿರುವ ಮಂದಾಕಿನಿ ಬಳಿಗೆ ಶಾಕುಂತಲಾ ಬರುತ್ತಾರೆ. ಮಂದಾಕಿನಿ ಭೂಮಿಕಾ ಮತ್ತು ಅಪೇಕ್ಷಾಳನ್ನು ಹೊಗಳುತ್ತಾರೆ. ಭೂಮಿಕಾ ಅಪೇಕ್ಷಾಳ ತಾಯಿ ಇದ್ದಂತೆ ಎಂದು ಹೇಳುತ್ತಾರೆ. "ಅದೆಲ್ಲ ಮುಗಿದ ಕಥೆ" ಎಂದು ಶಕುಂತಲಾದೇವಿ ಮನಸ್ಸಲ್ಲಿ ಅಂದುಕೊಳ್ಳುತ್ತಾರೆ. ಸೀರಿಯಲ್‌ ಮುಂದುವರೆಯುತ್ತದೆ.

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)

ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)

ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)

ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)

ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)

ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)

ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)

ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)

ರಣವ್‌: ಜೈದೇವ್‌

ಚಂದನ್‌: ಅಶ್ವಿನಿ

ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)

ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)