ಕನ್ನಡ ಸುದ್ದಿ  /  ಮನರಂಜನೆ  /  Amruthadhaare: ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ನೋಡಿ ಗೌತಮ್‌ ಭಾವುಕ, ಖರ್ಚಿಗೆ ಹಣ ಇಲ್ಲದೆ ಪರಿತಪಿಸ್ತಾ ಇದ್ದಾರೆ ಶಕುಂತಲಾ ಟೀಮ್‌

Amruthadhaare: ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ನೋಡಿ ಗೌತಮ್‌ ಭಾವುಕ, ಖರ್ಚಿಗೆ ಹಣ ಇಲ್ಲದೆ ಪರಿತಪಿಸ್ತಾ ಇದ್ದಾರೆ ಶಕುಂತಲಾ ಟೀಮ್‌

Amruthadhaare serial Yesterday Episode: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ ಮತ್ತು ಭೂಮಿಕಾ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ನೋಡಿ ಭಾವುಕರಾಗುತ್ತಾರೆ. ಇನ್ನೊಂದೆಡೆ ಪಾರ್ಥ ಮತ್ತು ಅಪ್ಪಿ ವಿಷಯನ ಅಪೇಕ್ಷಾಗೆ ತಿಳಿಸುವ ಯೋಚನೆಯಲ್ಲಿದ್ದಾರೆ ಅಶ್ವಿನಿ ಮತ್ತು ಜೈದೇವ್‌.

ಅಮೃತಧಾರೆ ಸೀರಿಯಲ್‌ ಸ್ಟೋರಿ
ಅಮೃತಧಾರೆ ಸೀರಿಯಲ್‌ ಸ್ಟೋರಿ

Amruthadhaare serial Yesterday Episode: ಭೂಮಿಕಾ ಮತ್ತು ಗೌತಮ್‌ ಔಟಿಂಗ್‌ನಲ್ಲಿದ್ದಾರೆ. ಭೂಮಿಕಾ ಕಲಿತ ಶಾಲೆಯಲ್ಲಿ ಹಳೆಯ ನೆನಪುಗಳನ್ನು ಕೆದಕುತ್ತಿದ್ದಾರೆ. ಅಲ್ಲಿ ಮಕ್ಕಳು ಆಟವಾಡುತ್ತಿರುವುದನ್ನು ನೋಡಿ ಗೌತಮ್‌ಗೂ ಕ್ರಿಕೆಟ್‌ ಆಡಬೇಕೆನಿಸುತ್ತದೆ. ನನ್ನನ್ನು ಸೇರಿಸಿಕೊಳ್ರೊ ಎಂದು ಆಡುತ್ತಾರೆ. ಬನ್ನಿ ಅಂಕಲ್‌ ಫೀಲ್ಡಿಂಗ್‌ ಮಾಡಿ ಅಂದಾಗ ಇಲ್ಲ ಬ್ಯಾಟಿಂಗ್‌ ಮಾಡ್ತಿನಿ ಅನ್ತಾರೆ. ಸಿಕ್ಸ್‌ ಹೊಡೆಯುತ್ತಾರೆ. ಮಕ್ಕಳಿಗೆ ಅಚ್ಚರಿಯಾಗುತ್ತದೆ. ಇದಾದ ಬಳಿಕ ಭೂಮಿಕಾ ಬೌಲಿಂಗ್‌ ಮಾಡುತ್ತಾರೆ. ಇವರ ಬೌಲಿಂಗ್‌ಗೆ ಫೋರ್‌ ಸಿಕ್ಸ್‌ ಹೊಡೀತಾ ಇರುತ್ತಾರೆ. ಇವರನ್ನು ಹೀಗೆ ಔಟ್‌ ಮಾಡೋದು ಕಷ್ಟ ಎಂದು ಭೂಮಿಕಾ ಐಡಿಯಾ ಮಾಡುತ್ತಾರೆ. ಬೌಲಿಂಗ್‌ ಮಾಡುವಾಗ ಲೈನ್‌ ಹೊಡೆಯುತ್ತ ಗೌತಮ್‌ನನ್ನು ಔಟ್‌ ಮಾಡುತ್ತಾರೆ. ಮೋಸ ಮೋಸ ಅನ್ನುತ್ತಾರೆ ಗೌತಮ್‌. ಮಕ್ಕಳು ಮತ್ತು ಭೂಮಿಕಾ ಮೋಸನೂ ಅಲ್ಲ ಸಮೋಸಾನೂ ಅಲ್ಲ ಅಂತಾರೆ. ಒಟ್ಟಾರೆ ಮಕ್ಕಳೊಂದಿಗೆ ಮಕ್ಕಳಾಗಿ ಸಮಯ ಕಳೆಯುತ್ತಾರೆ.

ಖರ್ಚಿಗೆ ಹಣ ಇಲ್ಲದೆ ಪರಿತಪಿಸ್ತಾ ಇದ್ದಾರೆ ಶಕುಂತಲಾ ಟೀಮ್‌

ಕೈಯಲ್ಲಿ ಹಣ ಇಲ್ಲದೆ ಜೈದೇವ್‌ ಟೆನ್ಷನ್‌ ಮಾಡುತ್ತಾನೆ. ಅಲ್ಲಿಗೆ ಮಾವ ಬರುತ್ತಾರೆ. "ಅಮೌಂಟ್‌ ಏನಾದರೂ ಇದೆಯಾ ಮಾಮ್‌" ಎಂದು ಕೇಳುತ್ತಾನೆ. ಅಮೆರಿಕ ಬಂದು ಪಾಕಿಸ್ತಾನದಲ್ಲಿ ಹಣ ಕೇಳಿದ ಹಾಗಾಯ್ತು ಎನ್ನುತ್ತಾರೆ. ಜೈದೇವ್‌ಗೆ ಫ್ರೆಂಡ್ಸ್‌ ಕಾಲ್‌ ಮಾಡಿ ಪಾರ್ಟಿ ಮಾಡೋಣ ಅನ್ನುತ್ತಾರೆ. ನಾನೇ ಪಾಪರ್‌ ಆಗಿ ಕೂತಿದ್ದೇನೆ. ಇವರಿಗೆ ಪಾರ್ಟಿ ಅಂತೆ ಎಂದು ಟೆನ್ಷನ್‌ ಮಾಡುತ್ತಾನೆ. ಒಟ್ಟಾರೆ ಎಲ್ಲರೂ ಹಣ ಇಲ್ಲದೆ ಪರಿತಪಿಸುತ್ತಿದ್ದಾರೆ. ಮಲ್ಲಿ ಬಂದು ಯಾಕೆ ರೀ ಬೇಜಾರಲ್ಲಿ ಇದ್ದೀರಿ ಎನ್ನುತ್ತಾರೆ. ಅದಕ್ಕೆ ಫ್ರೆಂಡ್ಸ್‌ ಕರೆದ್ರು, ಅದಕ್ಕೆ ದುಡ್ಡು.... ಅನ್ತಾನೆ. ಇದಾದ ಬಳಿಕ ಯಾಕೆ ದುಡ್ಡು ವೇಸ್ಟ್‌ ಅನ್ನುತ್ತಾನೆ. ಅಯ್ಯೋ ದೇವ್ರೆ ನೀವಾ ಇದನ್ನು ಹೇಳ್ತಾ ಇರೋದು ಎನ್ನುತ್ತಾರೆ ಮಲ್ಲಿ. ನನ್ನಲ್ಲಿ ಸ್ವಲ್ಪ ಹಣ ಇದೆ ಕೊಡ್ಲ ಎನ್ನುತ್ತಾಳೆ ಮಲ್ಲಿ. ಹೆಂಡ್ತಿ ಮುಂದೆ ಕೈ ಚಾಚುವ ಹಾಗಾಯ್ತು ಎಂದುಕೊಳ್ಳುವಾಗ "ಬ್ಯಾಡ ಅಂದ್ರೆ ಬ್ಯಾಡ" ಎಂದು ಮಲ್ಲಿ ಹೋಗುತ್ತಾಳೆ. ಅಯ್ಯೋ ಒಂದೇ ಸಾರಿ ಕೇಳಿಬಿಟ್ಲು, ಎರಡು ಸಾರಿ ಬೇಕಾ ಎಂದ್ರೆ ಬೇಕು ಅನ್ತಾ ಇದ್ದೆ ಅಂದ್ಕೋತ್ತಾರೆ ಜೈದೇವ್‌.

ಟ್ರೆಂಡಿಂಗ್​ ಸುದ್ದಿ

ಗೌತಮ್‌ ಮತ್ತು ಭೂಮಿಕಾ ಶಾಪಿಂಗ್‌

ಗೌತಮ್‌ ಮತ್ತು ಭೂಮಿಕಾ ಸಾಧಾರಣ ಬಟ್ಟೆ ಅಂಗಡಿಗೆ ಬರುತ್ತಾರೆ. "ಇಲ್ಲಿಗೆ ಯಾಕೆ ಬಂದ್ವಿ. ಆನ್‌ಲೈನ್‌ನಲ್ಲಿ ಬುಕ್‌ ಮಾಡಬಹುದಿತ್ತಲ್ವ" ಎಂದು ಹೇಳುತ್ತಾರೆ ಗೌತಮ್‌. ಎಲ್ಲದಕ್ಕೂ ಆನ್‌ಲೈನ್‌ಗೆ ಹೋಗಬಾರದು. ಶಾಪಿಂಗ್‌ ಅನುಭವ ದೊರಕಬೇಕಾದರೆ ಇಲ್ಲಿಗೂ ಬರಬೇಕು" ಎನ್ನುತ್ತಾರೆ ಭೂಮಿಕಾ. ಬನ್ನಿ ನಿಮಗೆ ಒಂದು ಶರ್ಟ್‌ ಕೊಡಿಸ್ತಿನಿ ಅನ್ನುತ್ತಾಳೆ. ತಂದಿರುವ 3 ಸಾವಿರದಲ್ಲಿ ಉಳಿದ ಖರ್ಚು ಎಲ್ಲಾ ಕಳೆದು ನನಗೆ ಶರ್ಟ್‌ ಕೊಡಿಸಲು ಸಾಧ್ಯನಾ ಎಂದು ಗೌತಮ್‌ ಯೋಚಿಸುತ್ತಾರೆ. "ಇರೋದ್ರಲ್ಲಿ ದೊಡ್ಡ ಸೈಜ್‌ ಕೊಡಿ" ಎನ್ನುತ್ತಾಳೆ. ಡಬಲ್‌ ಎಕ್ಸೆಲ್‌ ಎಂದೆಲ್ಲ ಯಾಕೆ ಹೇಳ್ತಿರಿ ಎಂದು ಗೌತಮ್‌ ಕೇಳುತ್ತಾರೆ. ಹಲವು ಶರ್ಟ್‌ಗಳನ್ನು ನೋಡಿ ಆಮೇಲೆ ಮೊದಲು ತೋರಿಸಿದ ಶರ್ಟ್‌ ಅನ್ನೇ ಓಕೆ ಅಂತಾರೆ. ಎಷ್ಟು ರೂಪಾಯಿ ಎಂದಾಗ ಐನೂರು ರೂಪಾಯಿ ಅಂತಾರೆ ಸೇಲ್ಸ್‌ ಮ್ಯಾನ್‌. ಅಷ್ಟೇನಾ ಎಂದು ಗೌತಮ್‌ ಯೋಚಿಸುವಾಗ "ನಾವು ರೆಗ್ಯುಲರ್‌ ಕಸ್ಟಮರ್‌, ನಮಗೆ ಎಷ್ಟು ಕೊಡ್ತಿರಿ" ಎಂದು ಕೇಳುತ್ತಾಳೆ. ಇದನ್ನೆಲ್ಲ ನೋಡಿ ಗೌತಮ್‌ಗೆ ಆಶ್ಚರ್ಯವಾಗದೆ ಇರುತ್ತಾ?

ಪಾರ್ಥ ಹೊರಗೆ ಹೋಗುವಾಗ ಅಲ್ಲಿಗೆ ಅಶ್ವಿನಿ ಬರುತ್ತಾಳೆ. ಎಲ್ಲಿಗೆ ಎಂದೆಲ್ಲ ಕೇಳುತ್ತಾಳೆ. ಪಾರ್ಥನಿಗೆ ಕಿರಿಕಿರಿ ಆಗುತ್ತದೆ. ಏನೋ ಮಾತು ಹೇಳಿ ತಪ್ಪಿಸಿಕೊಂಡು ಅಲ್ಲಿಂದ ಹೋಗುತ್ತಾಳೆ. ಯಾಕೆ ಹೀಗೆ ಅಶ್ವಿನಿ ಹೀಗೆ ಮಾಡ್ತಾ ಇದ್ದಾಳೆ ಎಂದು ಜೈದೇವ್‌ ದೂರದಲ್ಲಿ ನಿಂತು ಯೋಚಿಸ್ತಾನೆ. "ಯಾಕೆ ಒಂಥರ ಇದ್ಯ. ಪಾರ್ಥನ ಜತೆ ಹೀಗೆ ಮಾಡ್ತಿ" ಎಂದು ಅಶ್ವಿನಿಯನ್ನು ಕೇಳುತ್ತಾಳೆ. "ಮಾಮ್‌ ಯಾರಿಗೂ ಹೇಳಬೇಡ ಅಂದ್ರು. ವಿಶೇಷವಾಗಿ ನಿನಗೆ ಹೇಳಬಾರದು ಅಂದ್ರು" ಎಂದು ಹೇಳುತ್ತಾಳೆ. ಬಳಿಕ ಪಾರ್ಥ ಮತ್ತು ಅಪೇಕ್ಷಾನ ವಿಷ್ಯ ಹೇಳುತ್ತಾಳೆ. "ನನಗೇನೂ ಟೆನ್ಷನ್‌ ಇಲ್ಲ. ನಾನು ಮ್ಯಾರಿಡ್‌ ಮ್ಯಾನ್‌" ಎಂದು ಏನೂ ಗೊತ್ತಿಲ್ಲದಂತೆ ಜೈದೇವ್‌ ಹೇಳುತ್ತಾನೆ. "ನೀನು ಮಿಸ್‌ ಆದೆ, ಅದಕ್ಕೆ ಅವನ ಜತೆ ಸುತ್ತಾಡ್ತಾಳೆ" ಎನ್ನುತ್ತಾಳೆ. "ಅಶ್ವಿನಿ ನನಗೆ ಈ ಮ್ಯಾಟರ್‌ ಈ ಮುಂಚೆನೇ ಗೊತ್ತಿತ್ತು" ಅನ್ನುತ್ತಾನೆ. ಅಶ್ವಿನಿಗೆ ಅಚ್ಚರಿಯಾಗುತ್ತದೆ. ಇದನ್ನೆಲ್ಲ ಗೌತಮ್‌ಗೆ ಹೇಳಿದ್ರೆ ಒಳ್ಳೆಯದು ಎನ್ನುತ್ತಾಳೆ. ಅವನಿಗೆ ಹೇಳಿದ್ರೆ ಇವರಿಬ್ಬರಿಗೂ ಮದುವೆ ಮಾಡಿಸ್ತಾನೆ ಎಂದು ಹೇಳುತ್ತಾನೆ ಜೈದೇವ್‌. ಬೇರೆ ಏನಾದ್ರೂ ಮಾಡೋಣ. ಈ ವಿಷಯನ ಅಪೇಕ್ಷಾನ ಅಪ್ಪನ ಕಿವಿಗೆ ಹಾಕಿದ್ರೆ ಹೇಗಿರುತ್ತದೆ. ಹಳೆ ಮೇಸ್ಟ್ರು ಕಿವಿಗೆ ಹಾಕಿದ್ರೆ ಒಳ್ಳೆಯದು. ಹೋಗಿ ಬೆಂಕಿ ಹಚ್ಚಿ ಬಾ ಎನ್ನುತ್ತಾನೆ. ಹಾಗೇ ಮಾಡ್ತಿನಿ ಎನ್ನುತ್ತಾಳೆ. ಅವರಿಬ್ಬರು ಇರುವ ಲೊಕೆಷನ್‌ ನೋಡಿ ಆ ವಿಷಯನ ಆಕೆಯ ಅಪ್ಪನಿಗೆ ತಿಳಿಸು ಎನ್ನುತ್ತಾನೆ. ಇಂದಿನ ಸಂಚಿಕೆಯಲ್ಲಿ ಏನಾಗಲಿದೆ ಎಂಬ ವಿವರ ಮುಂದಿನ ವಿಡಿಯೋದಲ್ಲಿದೆ.

 

ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ನೋಡಿ ಗೌತಮ್‌ ಭಾವುಕ

ಇದಾದ ಬಳಿಕ ಗೌತಮ್‌ ಜತೆ ಭೂಮಿಕಾ ಹೊರಗೆ ಜೋಳ ತಿನ್ನುತ್ತಾರೆ. ಸ್ವಲ್ಪ ಜಾಸ್ತಿನೇ ಖಾರ ಹಾಕಿಸ್ತಾಳೆ. 20 ರೂಪಾಯಿಗೆ ಏನು ಅದ್ಭುತ ಎಂದು ಗೌತಮ್‌ ಖುಷಿಯಿಂದ ತಿನ್ನುತ್ತಾಳೆ. ಇದಾದ ಬಳಿಕ ಏನು ಎನ್ನುತ್ತಾನೆ. ಆನ್‌ಲೈನ್‌ನಲ್ಲಿ ಸಿನಿಮಾ ಟಿಕೆಟ್‌ ಬುಕ್‌ ಮಾಡಿದ್ದೇನೆ ಎನ್ನುತ್ತಾಳೆ. ಇಬ್ಬರೂ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ನೋಡುತ್ತಾರೆ. ಇಬ್ಬರೂ ಪ್ರೀತಿಯ ಅಮೃತಧಾರೆಯಲ್ಲಿ ಮುಳುಗುತ್ತಾರೆ. ಪ್ರೀತಿಯ ಆಳ, ತಾಕತ್ತು ನೋಡಿ ಗೌತಮ್‌ ಭಾವುಕರಾಗುತ್ತಾರೆ.