ಕನ್ನಡ ಸುದ್ದಿ  /  ಮನರಂಜನೆ  /  ಅಮೃತಧಾರೆ ಧಾರಾವಾಹಿ ಮುಕ್ತಾಯದ ಹಂತದಲ್ಲಿ ಇದೆಯೇ? ಮಲ್ಲಿ ಸೇಫ್‌, ಗೌತಮ್‌-ಭೂಮಿಕಾರ ಫಸ್ಟ್‌ ನೈಟ್‌ಗೆ ವಿಘ್ನ ತರ್ತಾರ ಶಕುಂತಲಾದೇವಿ

ಅಮೃತಧಾರೆ ಧಾರಾವಾಹಿ ಮುಕ್ತಾಯದ ಹಂತದಲ್ಲಿ ಇದೆಯೇ? ಮಲ್ಲಿ ಸೇಫ್‌, ಗೌತಮ್‌-ಭೂಮಿಕಾರ ಫಸ್ಟ್‌ ನೈಟ್‌ಗೆ ವಿಘ್ನ ತರ್ತಾರ ಶಕುಂತಲಾದೇವಿ

Amruthadhaare Serial Yesterday Episode: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ ಮತ್ತು ಭೂಮಿಕಾ ಮನಸ್ಸು ಬಿಚ್ಚಿ ಮಾತನಾಡಿ ಹಗುರವಾಗಿದ್ದಾರೆ. ಇದೀಗ ಇಬ್ಬರು ಫಸ್ಟ್‌ ನೈಟ್‌ ಕನಸಿನಲ್ಲಿದ್ದಾರೆ. ಇದೇ ಸಮಯದಲ್ಲಿ ಶಕುಂತಲಾದೇವಿಯ ಎಲ್ಲಾ ಯೋಜನೆ ವಿಫಲವಾಗಿದೆ. ಸೀರಿಯಲ್‌ ಮುಗಿಯುವ ಹಂತದಲ್ಲಿ ಇದೆಯೇ ಎಂದು ಪ್ರೇಕ್ಷಕರು ಮಾತನಾಡುತ್ತ ಇದ್ದಾರೆ.

ಅಮೃತಧಾರೆ ಧಾರಾವಾಹಿ ಮುಕ್ತಾಯದ  ಹಂತದಲ್ಲಿ ಇದೆಯೇ? ಗೌತಮ್‌-ಭೂಮಿಕಾರ ಫಸ್ಟ್‌ ನೈಟ್‌
ಅಮೃತಧಾರೆ ಧಾರಾವಾಹಿ ಮುಕ್ತಾಯದ ಹಂತದಲ್ಲಿ ಇದೆಯೇ? ಗೌತಮ್‌-ಭೂಮಿಕಾರ ಫಸ್ಟ್‌ ನೈಟ್‌

ಬೆಂಗಳೂರು: ಗೌತಮ್‌ ಮತ್ತು ಭೂಮಿಕಾ ಡಿನ್ನರ್‌ಗೆ ಕುಳಿತಿದ್ದಾರೆ. ಆನಂದ್‌ ಮತ್ತು ಅಪರ್ಣಾ ಊಟ ಅರೇಂಜ್‌ ಮಾಡಿರುತ್ತಾರೆ. ಈ ಸಮಯದಲ್ಲಿ ಗೌತಮ್‌ ತನ್ನ ಮನದ ಮಾತುಗಳನ್ನು ಹೇಳುತ್ತಾರೆ. "ಸಾರಿ ಭೂಮಿಕಾ ಈ ರೀತಿ ಎಲ್ಲಾ ಆಗಿರುವುದು ನನ್ನ ಮನಸ್ಸಿಗೆ ತುಂಬಾ ಬೇಜಾರು ಉಂಟು ಮಾಡಿದೆ" ಎನ್ನುತ್ತಾರೆ ಗೌತಮ್‌. ಕುಳಿತಲ್ಲಿಂದ ಎದ್ದ ಗೌತಮ್‌ "ನಾನು ನಿಮ್ಮನ್ನು ತುಂಬಾ ಹಚ್ಚಿಕೊಂಡಿದ್ದೇನೆ ಭೂಮಿಕಾ, ಎಷ್ಟೆಂದರೆ ಅದು ಹೇಳಿಕೊಳ್ಳಲಾಗದಷ್ಟು" ಎಂದು ಕಣ್ಣೀರಿಡುತ್ತಾರೆ ಗೌತಮ್‌. ಈ ಸಮಯದಲ್ಲಿ ಹಿಂತುರುಗಿ ನೋಡಿದಾಗ ಭೂಮಿಕಾ ಕೆಂಪು ಗುಲಾಬಿ ಹಿಡಿದುಕೊಂಡು ಗೌತಮ್‌ಗೆ ಪ್ರಪೋಸ್‌ ಮಾಡಿದ್ದಾರೆ. "ನೀವು ನಿಮ್ಮ ಮನಸ್ಸಿನ ಮಾತುಗಳನ್ನು ಹೇಳಿ ಹಗುರವಾಗಿದ್ದೀರಿ. ಈಗ ನನ್ನ ಸರದಿ" ಎನ್ನುತ್ತಾರೆ ಭೂಮಿಕಾ.

ಟ್ರೆಂಡಿಂಗ್​ ಸುದ್ದಿ

"ನನಗೆ ಒಂದು ಕನಸಿತ್ತು. ಆ ಕನಸಲ್ಲಿ ಒಬ್ಬ ರಾಜಕುಮಾರ ಇದ್ದ. ಆ ಕನಸು ಒಂದು ದಿನ ನನಸಾಗುತ್ತದೆ ಎಂಬ ಸಣ್ಣ ನಿರೀಕ್ಷೆಯೂ ಇರಲಿಲಲ್ಲ. ಈ ಮದುವೆ ನನಗಲ್ಲ. ಮದುವೆ ಅನ್ನೋದು ನನ್ನ ಹಣೆಯಲ್ಲಿ ಬರೆದಿಲ್ಲ. ನಾನು ಒಬ್ಬಂಟಿಯಾಗಿರ್ತಿನಿ ಎಂದುಕೊಂಡಿದ್ದೆ. ಅಂತಹ ಸಮಯದಲ್ಲಿ ತಂಗಾಳಿಯಾಗಿ ನೀವು ಬಂದ್ರಿ. ನನ್ನನ್ನು ನಿಧಾನವಾಗಿ ಆವರಿಸಿಕೊಂಡ್ರಿ. ನಾನೇ ನೀವು ಅನ್ನೋ ತರಹ, ನೀವೇ ನಾನು ಅನ್ನೋ ತರಹ. ಎಲ್ಲೋ ಇದ್ವಿ. ಹೇಗೋ ಒಂದಾದ್ವಿ. ನೀವು ನನ್ನ ಜತೆಗೆ ಇದ್ದಾಗ ನನ್ನ ಮನಸ್ಸಲ್ಲಿ ಕಾಮನಬಿಲ್ಲು ಮೂಡುತ್ತದೆ. ಆ ಕಾಮನ ಬಿಲ್ಲಿಗೆ ಸಾವಿರಾರು ಬಣ್ಣಗಳಿವೆ. ನಿಮ್ಮನ್ನು ಪಡೆಯೋಕ್ಕೆ ಏಳೇಳೂ ಜನ್ಮದ ಪುಣ್ಯ ಮಾಡಿದ್ದೇನೆ. ತುಂಬಾ ಅದೃಷ್ಟವಂತೆ" ಎಂದು ಹೇಳಿದ ಭೂಮಿಕಾ ಕುಳಿತುಕೊಂಡು ಪ್ರಪೋಸ್‌ ಮಾಡುತ್ತಾರೆ. "ಐ ಲವ್‌ ಯು ಗೌತಮ್‌ ಅವರೇ" ಎಂದು ಭೂಮಿಕಾ ಪ್ರಪೋಸ್‌ ಮಾಡಿದ್ದಾರೆ. ಪ್ರೀತಿಯ ಕಣ್ಣೀರಿನೊಂದಿಗೆ ಗೌತಮ್‌ "ಐ ಲವ್‌ ಯು ಟೂ" ಎಂದಿದ್ದಾರೆ. ಈ ಸಮಯದಲ್ಲಿ ಇಬ್ಬರೂ ಕಣ್ಣೀರಾಗಿದ್ದಾರೆ. ಪ್ರೀತಿಯಿಂದ ಅಪ್ಪಿಕೊಂಡಿದ್ದಾರೆ. ಈ ಮೂಲಕ ಬಹುದಿನಗಳ ಪ್ರೀತಿ ಅಮೃತಧಾರೆಯಾಗಿದೆ.

ಇನ್ನೊಂದೆಡೆ ಮನೆಹಾಳ ಮಾವ ಬರುತ್ತಾನೆ. ನಮ್ಮ ಪ್ಲ್ಯಾನ್‌ ಪ್ಲಾಪ್‌ ಆಯ್ತು ಎನ್ನುತ್ತಾನೆ. ಶಕುಂತಲಾದೇವಿ ಆಸ್ಪತ್ರೆಗೆ ರೌಡಿಗಳನ್ನು ಕಳುಹಿಸಿದ್ದರು. "ಮಹಿಮಾ ಮತ್ತು ಆಕೆಯ ಗಂಡ ರೌಡಿಗಳನ್ನು ಓಡಿಸಿ ಹೀರೋ ಆಗಿದ್ದಾರೆ" ಎಂದು ಅಣ್ಣ ಹೇಳುತ್ತಾನೆ. ಶಕುಂತಲಾದೇವಿಯ ಈ ಯೋಜನೆಯೂ ಪ್ಲಾಪ್‌ ಆಗಿದೆ.

ಆನಂದ್‌ ಮತ್ತು ಗೌತಮ್‌ ಮಾತನಾಡುತ್ತಾರೆ. "ನೀನು ಸಿಚುವೇಷನ್‌ ಚೆನ್ನಾಗಿ ಹ್ಯಾಂಡಲ್‌ ಮಾಡಿದೆ" ಎಂದು ಆನಂದ್‌ ಗೌತಮ್‌ನನ್ನು ಹೊಗಳುತ್ತಾನೆ. ಗೌತಮ್‌ ಕೂಡ ಗೆಳೆಯ ಆನಂದನ ಪ್ರೀತಿಯನ್ನು ಹೊಗಳುತ್ತಾನೆ. ನೀನು ಜತೆಗೆ ಇಲ್ಲದೆ ಇದ್ದರೆ ನಾನೂ ಒದ್ದಾಡುತ್ತೇನೆ ಎಂದು ಗೌತಮ್‌ ಹೇಳುತ್ತಾನೆ. "ಇವತ್ತು ಅಫೀಷಿಯಲ್‌ ಆಗಿ ನಿನ್ನ ಫಸ್ಟ್‌ ನೈಟ್‌" ಎಂದು ಆನಂದ್‌ ಹೇಳುತ್ತಾನೆ. ಆನಂದ್‌ ಮತ್ತು ಅಪರ್ಣಾ ಚಿಕ್ಕಮಗಳೂರಿನಿಂದ ಹೊರಡುತ್ತಾರೆ.

ಮನೆಹಾಳ ಮಾವ ಆನಂದ್‌ಗೆ ಕಾಲ್‌ ಮಾಡುತ್ತಾನೆ. ಏನಾದರೂ ಸಮಸ್ಯೆ ಇಲ್ಲ ಅಲ್ವಾ ಎಂದು ಕೇಳುತ್ತಾನೆ. ಮಲ್ಲಿ ವಿಷಯ ಇವರಿಗೆ ತಲುಪಿಲ್ಲ ಎಂದು ಕೊಳ್ಳುತ್ತಾನೆ. "ಅಂಕಲ್‌, ಭೂಮಿಕಾಗೆ ಹುಡುಗರ ರೀತಿ ಗೌತಮ್‌ ಪ್ರಪೋಸ್‌ ಮಾಡಿದ್ದಾನೆ. ಇವತ್ತು ಅವರಿಬ್ಬರ ಫಸ್ಟ್‌ ನೈಟ್‌" ಎಂದು ಹೇಳುತ್ತಾನೆ. ಈ ವಿಷಯ ಇವನಿಗೆ ತಲುಪಿದ್ದರಿಂದ ಫಸ್ಟ್‌ ನೈಟ್‌ಗೆ ಶಕುಂತಲಾದೇವಿ ಮತ್ತು ಈತ ವಿಘ್ನ ತರುತ್ತಾರ ಕಾದು ನೋಡಬೇಕಿದೆ.

ಮಲ್ಲಿ ಮತ್ತು ಜೈದೇವ್‌ ಮಾತನಾಡುತ್ತ ಇರುತ್ತಾರೆ. ಅಲ್ಲಿಗೆ ಜೀವನ್‌ ಮತ್ತು ಮಹಿಮಾ ಬರುತ್ತಾರೆ. "ಜಸ್ಟ್‌ ಫುಡ್‌ ಪಾಯಿಸನ್‌ ಅಂತ ಡಾಕ್ಟರ್‌ ಹೇಳಿದ್ರು. ಡಿಸ್‌ಚಾರ್ಜ್‌ ಮಾಡಬಹುದು" ಎಂದು ಜೀವನ್‌ ಹೇಳುತ್ತಾನೆ. ಇದೇ ಸಮಯದಲ್ಲಿ ಶಕುಂತಲಾದೇವಿಗೆ ಮನೆಹಾಳ ಮಾವನಿಗೆ ಗೌತಮ್‌ನ ಪ್ರಪೋಸ್‌, ಫಸ್ಟ್‌ ನೈಟ್‌ ವಿಚಾರ ಹೇಳುತ್ತಾನೆ. "ನಾನು ಅಂದುಕೊಂಡಿರೋದು ಒಂದು, ಆಗ್ತಾ ಇರೋದೇ ಒಂದು" ಎಂದುಕೊಳ್ಳುತ್ತಾಳೆ. ಇದೇ ಸಮಯದಲ್ಲಿ ಮಲ್ಲಿಯನ್ನು ಕರೆದುಕೊಂಡು ಜೈದೇವ್‌ ಮನೆಗೆ ಬರುತ್ತಾನೆ. ಈ ಮೂಲಕ ಮಲ್ಲಿಯ ಕಥೆ ಮುಗಿಸುವ ಯೋಜನೆ ವಿಫಲವಾಗಿದೆ. ಇವರನ್ನು ನೋಡಿ ಶಕುಂತಲಾದೇವಿ ಮತ್ತು ಮನೆಹಾಳನ ಮುಖ ಕಪ್ಪಗಾಗಿದೆ. ಹೀಗಿದ್ದರೂ ಮಲ್ಲಿಯ ಮುಂದೆ "ಹೇಗಿದ್ದೀಯಾ ಮಲ್ಲಿ" ಎಂದು ನಾಟಕಮಾಡುತ್ತಾರೆ.

ಗೌತಮ್‌ ಮತ್ತು ಭೂಮಿಕಾ ಪ್ರೀತಿಯ ಮೂಡ್‌ನಲ್ಲಿದ್ದಾರೆ. ಇಬ್ಬರು ಎದುರಬದುರು ಕುಳಿತು ಕಾಫಿ ಹೀರುತ್ತಾ ಮಾತನಾಡುತ್ತ ಇದ್ದಾರೆ. ಒಟ್ಟಿನಲ್ಲಿ ನನ್ನ ಲೈಫ್‌ನಲ್ಲಿ ಇಷ್ಟೆಲ್ಲ ಬದಲಾವಣೆ, ಇಷ್ಟೆಲ್ಲ ಸುಂದರವಾದ ಕ್ಷಣಗಳು ಇರುತ್ತವೆ ಎಂದುಕೊಂಡಿರಲಿಲ್ಲ ಎಂದು ಗೌತಮ್‌ ಹೇಳುತ್ತಾನೆ. "ಹಾವು ಮುಂಗುಸಿ ರೀತಿ ಇದ್ವಿ. ಈಗ ಹೇಗೆ ಇದ್ದೇವೆ" ಎಂದು ಹಳೆಯ ದಿನಗಳನ್ನು ಭೂಮಿಕಾ ನೆನಪಿಸುತ್ತಾಳೆ. ಹಳೆಯ ದಿನಗಳು ನೆನಪಾಗುತ್ತವೆ. ಸೀರಿಯಲ್‌ ಮುಂದುವರೆಯುತ್ತದೆ.

ಒಟ್ಟಾರೆ ಅಮೃತಧಾರೆ ಸೀರಿಯಲ್‌ನಲ್ಲಿ ಎಲ್ಲವೂ ದಡ ಸೇರುತ್ತಿದೆ. ಇನ್ನೂ ಗೌತಮ್‌ಗೆ ಮಲತಾಯಿಯ ಮೋಸ ತಿಳಿಯುವುದೊಂದೇ ಬಾಕಿ. ಅಮೃತಧಾರೆ ಸೀರಿಯಲ್‌ ಮುಗಿಯುವ ಹಂತದಲ್ಲಿ ಇದೆಯೇ ಎಂಬ ಸಂದೇಹ ಪ್ರೇಕ್ಷಕರಲ್ಲಿ ಮೂಡಿದೆ. ಇನ್ನು ಕೆಲವು ಎಪಿಸೋಡ್‌ಗಳಲ್ಲಿ ಅಥವಾ ಕೆಲವು ವಾರಗಳಲ್ಲಿ ಈ ಸೀರಿಯಲ್‌ ಮುಗಿದರೂ ಅಚ್ಚರಿಯಿಲ್ಲ ಎಂದು ಪ್ರೇಕ್ಷಕರು ಸೋಷಿಯಲ್‌ ಮೀಡಿಯಾದಲ್ಲಿ ಮಾತನಾಡುತ್ತಿದ್ದಾರೆ. ಶಕುಂತಲಾದೇವಿ ತನ್ನದೇ ಅನಾರೋಗ್ಯದ ಟ್ರಿಕ್ಸ್‌ನಿಂದ ಗೌತಮ್‌-ಭೂಮಿಕಾರ ಫಸ್ಟ್‌ ನೈಟ್‌ಗೆ ಅಡ್ಡಿ ಮಾಡಬಹುದು, ಇನ್ನು ಕೆಲವು ಉಪಕಥೆಗಳು, ಗೌತಮ್‌ ಹಳೆಯ ಲವರ್‌ ಕಥೆ ಇತ್ಯಾದಿಗಳನ್ನು ಬೆಳೆಸಬಹುದು. ಇನ್ನೂ ಕೆಲವು ವಾರ ಅಥವಾ ತಿಂಗಳುಗಳ ಕಾಲ ಅಮೃತಧಾರೆ ಸೀರಿಯಲ್‌ ಅನ್ನು ಎಳೆಯಬಹುದು. ಹೀಗಾಗಿ ಸೀರಿಯಲ್‌ ಸದ್ಯ ಮುಗಿಯದು ಎಂದು ಇನ್ನು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)

ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)

ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)

ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)

ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)

ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)

ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)

ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)

ರಣವ್‌: ಜೈದೇವ್‌

ಚಂದನ್‌: ಅಶ್ವಿನಿ

ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)

ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)

ಟಿ20 ವರ್ಲ್ಡ್‌ಕಪ್ 2024