ಭೂಮಿಕಾ ಇಲ್ಲದೆ ಪರಿತಪಿಸುತ್ತಿರುವ ಡುಮ್ಮಸಾರ್‌, ಕ್ಲಬ್‌ ಮೆಂಬರ್‌ಶಿಪ್‌ಗೆ ದುಡ್ಡಿಲ್ಲ ಶಕುಂತಲಾ ವಿಲವಿಲ, ಅಮೃತಧಾರೆಯಲ್ಲಿ ಗೊರಕೆಧಾರೆ
ಕನ್ನಡ ಸುದ್ದಿ  /  ಮನರಂಜನೆ  /  ಭೂಮಿಕಾ ಇಲ್ಲದೆ ಪರಿತಪಿಸುತ್ತಿರುವ ಡುಮ್ಮಸಾರ್‌, ಕ್ಲಬ್‌ ಮೆಂಬರ್‌ಶಿಪ್‌ಗೆ ದುಡ್ಡಿಲ್ಲ ಶಕುಂತಲಾ ವಿಲವಿಲ, ಅಮೃತಧಾರೆಯಲ್ಲಿ ಗೊರಕೆಧಾರೆ

ಭೂಮಿಕಾ ಇಲ್ಲದೆ ಪರಿತಪಿಸುತ್ತಿರುವ ಡುಮ್ಮಸಾರ್‌, ಕ್ಲಬ್‌ ಮೆಂಬರ್‌ಶಿಪ್‌ಗೆ ದುಡ್ಡಿಲ್ಲ ಶಕುಂತಲಾ ವಿಲವಿಲ, ಅಮೃತಧಾರೆಯಲ್ಲಿ ಗೊರಕೆಧಾರೆ

Amruthadhaare serial Yesterday Episode:ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಕೆಲವೊಂದು ಮಜವಾದ ಘಟನೆಗಳು ನಡೆದಿವೆ. ಭೂಮಿಕಾ ಇಲ್ಲದೆ ಗೌತಮ್‌ಗೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ಇಬ್ಬರೂ ಒಬ್ಬರನೊಬ್ಬರನ್ನು ಮಿಸ್‌ ಮಾಡಿಕೊಳ್ಳುತ್ತಿದ್ದಾರೆ.

ಭೂಮಿಕಾ ಇಲ್ಲದೆ ಪರಿತಪಿಸುತ್ತಿರುವ ಡುಮ್ಮಸಾರ್‌
ಭೂಮಿಕಾ ಇಲ್ಲದೆ ಪರಿತಪಿಸುತ್ತಿರುವ ಡುಮ್ಮಸಾರ್‌

ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಕೆಲವೊಂದು ಮಜವಾದ ಘಟನೆಗಳು ನಡೆದಿವೆ. ತವರು ಮನೆಯಲ್ಲಿರುವ ಭೂಮಿಕಾಳಿಗೆ ನಿದ್ದೆ ಬರುವುದಿಲ್ಲ. ಇನ್ನೊಂದೆಡೆ ಆನಂದ್‌ ಮತ್ತು ಗೌತಮ್‌ ಪಾರ್ಟಿ ಮಾಡುತ್ತ ಇರುತ್ತಾರೆ. ಇದಾದ ಬಳಿಕ ಭೂಮಿಕಾ ಕಾಲ್‌ ಮಾಡುತ್ತಾರೆ. ನನಗೊಂದು ಸಹಾಯ ಮಾಡುವಿರಾ ಎನ್ನುತ್ತಾಳೆ. ಗೌತಮ್‌ ನಿದ್ದೆ ಮಾಡುತ್ತ ಇದ್ದರೆ ಅವರ ಗೊರಕೆ ಸೌಂಡ್‌ ರೆಕಾರ್ಡ್‌ ಮಾಡಿ ಕಳುಹಿಸಿ ಎನ್ನುತ್ತಾಳೆ. ಅವರ ಗೊರಕೆ ಇಲ್ಲದೆ ನಿದ್ದೆ ಬರೋಲ್ಲ ಎನ್ನುತ್ತಾಳೆ. ನನಗೆ ಅವರ ಗೊರಕೆ ಲಾಲಿಹಾಡು ಆಗಿದೆ ಎನ್ನುತ್ತಾಳೆ. ಒಂದಿಷ್ಟು ಕಾಮಿಡಿ ಮಾಡಿದ ಬಳಿಕ ಆನಂದ್‌ ಈ ರೆಕಾರ್ಡಿಂಗ್‌ಗೆ ಒಪ್ಪುತ್ತಾನೆ.

ಆನಂದ್‌ ಮೆಲ್ಲಗೆ ಗೌತಮ್‌ ಕೊಠಡಿಗೆ ಬರುತ್ತಾನೆ. ಗೌತಮ್‌ಗೂ ನಿದ್ದೆ ಬಂದಿರುವುದಿಲ್ಲ. "ನೀನು ಮಲಗಿದ್ದೀಯಾ ಇಲ್ವ ಎಂದು ಬಂದೆ" ಎಂದು ಆನಂದ್‌ ಹೇಳುತ್ತಾನೆ. ನಿನ್ನಿಂದ ಒಂದು ಹೆಲ್ಪ್‌ ಆಗಬೇಕು ಎನ್ನುತ್ತಾನೆ ಗೌತಮ್‌. ಇವತ್ತು ರಾತ್ರಿ ಇಲ್ಲೇ ಇದ್ದು ಬಿಡು. ಒಬ್ಬನೇ ಮಲಗಲು ಭಯವಾಗುತ್ತಿದೆ ಎನ್ನುತ್ತಾರೆ ಡುಮ್ಮ ಸಾರ್‌. ಕರೆಂಟ್‌ ಹೋದ್ರೆ ಸಿಕ್ಕಾಪಟ್ಟೆ ಭಯವಾಯ್ತು ಎನ್ನುತ್ತಾನೆ. ಅಷ್ಟು ದೊಡ್ಡ ಮನೆಯಲ್ಲಿ ಇನ್ವರ್ಟರ್‌ ಇಲ್ಲ ಎನ್ನುವುದನ್ನು ಪ್ರೇಕ್ಷಕರು ನಂಬಬೇಕು. ಗೌತಮ್‌ ಬಲವಂತಕ್ಕೆ ಆನಂದ್‌ ಅಲ್ಲೇ ಮಲಗುತ್ತಾನೆ. ಭೂಮಿಕಾ ಅಂದುಕೊಂಡು ನನ್ನ ಮೇಲೆ ಕಾಲು ಹಾಕಬೇಡ ಎನ್ನುತ್ತಾನೆ ಆನಂದ್‌. ಅಪರ್ಣಾ ಅಂದುಕೊಂಡು ನನಗೂ ಹಾಗೆ ಮಾಡಬೇಡ ಎನ್ನುತ್ತಾರೆ ಗೌತಮ್‌. ಇನ್ನೊಂದೆಡೆ ಭೂಮಿಕಾ ಗೊರಕೆಗಾಗಿ ಕಾಯುತ್ತ ಇದ್ದಾಳೆ.

ಸ್ವಲ್ಪ ಹೊತ್ತಲ್ಲಿ ಗೌತಮ್‌ ಗೊರಕೆ ಹೊಡೆಯಲು ಆರಂಭಿಸಿದಾಗ ಆನಂದ್‌ಗೆ ಬಂದ ಕೆಲಸ ನೆನಪಾಗುತ್ತದೆ. ಆ ಗೊರಕೆ ವಿಡಿಯೋ ರೆಕಾರ್ಡ್‌ ಮಾಡಿ ಭೂಮಿಕಾಗೆ ಕಳುಹಿಸುತ್ತಾನೆ. ಅವಳೂ ಅದನ್ನು ನೋಡಿ ಕೇಳಿ ಖುಷಿ ಪಡುತ್ತಾಳೆ. ಅದನ್ನು ಕೇಳುತ್ತ ಮಲಗುತ್ತಾಳೆ. ಒಟ್ಟಾರೆ ಕಿರುತೆರೆ ಪ್ರೇಕ್ಷಕರಿಗೂ ವಿಶೇಷವಾಗಿ ಅಮೃತಧಾರೆ ಸೀರಿಯಲ್‌ ಪ್ರೇಕ್ಷಕರಿಗೂ ಗೊರಕೆಧಾರೆಯ ರಗಳೆ ಉಂಟಾಗಿದೆ.

ಇನ್ನೊಂದೆಡೆ ಮಲ್ಲಿ ಮನೆಯಲ್ಲಿ ಒಬ್ಬಳೇ ಇದ್ದಾಳೆ. ಜೈದೇವ್‌ ಬಂದಿಲ್ಲ ಎಂದು ಆತಂಕದಲ್ಲಿದ್ದಾಗ ಜೈದೇವ್‌ ಆಗಮಿಸುತ್ತಾನೆ. ನೀವು ಬಂದಿಲ್ಲ ಅಂತ ಕಾಯ್ತಾ ಇದ್ದೆ ಎನ್ನುತ್ತಾಳೆ. ಆತ ಒಂದಿಷ್ಟು ಪ್ರೀತಿಯ ಸುಳ್ಳು ಮಾತುಗಳನ್ನು ಹೇಳುತ್ತಾನೆ. ಆ ಸಮಯದಲ್ಲಿ ದಿವ್ಯಳ ಕಾಲ್‌ ಬರುತ್ತದೆ. ಆಫೀಸ್‌ ಕಾಲ್‌ ಎಂದು ಅವಳ ಜತೆ ಮಾತನಾಡುತ್ತಾನೆ. ಮನೆಗೆ ರೀಚ್‌ ಆದ್ರ ಎಂದು ಕೇಳುತ್ತಾಳೆ. ಇಷ್ಟು ಅವಳ ಮನೆಯಲ್ಲಿದ್ದು ಈಗ ಮನೆಗೆ ಬಂದಿರುತ್ತಾನೆ ಜೈದೇವ್‌.

ಭೂಮಿಕಾಳನ್ನು ಮಿಸ್‌ ಮಾಡಿಕೊಳ್ತಾ ಇದ್ದಾರೆ ಗೌತಮ್‌

ಗೌತಮ್‌ ಎದ್ದು ಆಫೀಸ್‌ಗೆ ಹೊರಡುತ್ತಾರೆ. ಭೂಮಿಕಾ ಇಲ್ಲದೆ ಒಂದಿಷ್ಟು ತಡವಡಿಸುತ್ತಾರೆ. ಭೂಮಿಕಾ ಕೊಟ್ಟ ಗೊಂಬೆಯನ್ನು ನೋಡುತ್ತ ಖುಷಿ ಪಡುತ್ತಾನೆ. ಇನ್ನೊಂದೆಡೆ ಶಕುಂತಲಾ ದೇವಿಗೆ ಕ್ಲಬ್‌ನಿಂದ ಫೋನ್‌ ಬರುತ್ತದೆ. ಕ್ಲಬ್‌ನ ಹಣ ಟ್ರಾನ್ಸ್‌ಫಾರ್‌ ಮಾಡಿಲ್ಲ ಎಂದು ಕೇಳುತ್ತಾರೆ. ಒಟ್ಟಾರೆ ಕ್ಲಬ್‌ಗೆ ಪಾವತಿಸಲು ಹಣ ಕೂಡ ಅವರಲ್ಲಿ ಇಲ್ಲ. ಇನ್ನೊಂದೆಡೆ ಬೇಗ ಎದ್ದು ಭೂಮಿಕಾ ಅಡುಗೆ ಕೆಲಸ ಮಾಡಲು ಆರಂಭಿಸಿದ್ದಾಳೆ. ಮಂದಾಕಿನಿ ಮಗಳ ಕಣ್ಣು ನೋಡಿ ಏನೂ ನಿದ್ದೆ ಬಂದಿಲ್ಲ ಎಂದು ಕೇಳುತ್ತಾಳೆ. ನನಗೂ ನಿನ್ನ ಅಪ್ಪನ ಬಿಟ್ಟಿರಲು ಆಗ್ತನೇ ಇರಲಿಲ್ಲ ಎನ್ನುತ್ತಾಳೆ. ಈ ಸಮಯದಲ್ಲಿ ಶಕುಂತಲಾದೇವಿ ಕಾಲ್‌ ಮಾಡಿ ಚೆಕ್‌ ಕೇಳುತ್ತಾಳೆ. ಐದು ನಿಮಿಷದಲ್ಲಿ ತಲುಪಿಸ್ತಿನಿ ಎನ್ನುತ್ತಾಳೆ. ಇದಾದ ಬಳಿಕ ಗೌತಮ್‌ ಕಾಲ್‌ ಮಾಡುತ್ತಾನೆ. ಮೈಂಡ್‌ ರೆಡಿಯಾಗಿಲ್ಲ ಎನ್ನುತ್ತಾನೆ. ನೀವಿಲ್ಲದೆ ಮೈಂಡ್‌ ಕೆಲಸ ಮಾಡ್ತಾ ಇಲ್ಲ ಎನ್ನುತ್ತಾನೆ. ಅಂತೂ ನನ್ನ ಮಿಸ್‌ ಮಾಡಿಕೊಳ್ತಾರೆ ಅಂತಾಯ್ತು ಎಂದುಕೊಳ್ಳುತ್ತಾಳೆ. ನಾನೂ ನಿಮ್ಮನ್ನು ತುಂಬಾ ಮಿಸ್‌ ಮಾಡಿಕೊಳ್ತಾ ಇದ್ದೇನೆ ಎನ್ನುತ್ತಾನೆ. ಒಂದಿಷ್ಟು ಪ್ರೀತಿಯ ಮಾತುಗಳು ಮುಂದುವರೆಯುತ್ತದೆ. ಸೀರಿಯಲ್‌ ಕೂಡ ಮುಂದುವರೆಯುತ್ತದೆ.

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)

ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)

ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)

ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)

ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)

ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)

ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)

ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)

ರಣವ್‌: ಜೈದೇವ್‌

ಚಂದನ್‌: ಅಶ್ವಿನಿ

ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)

ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)

Whats_app_banner