Amruthadhaare: ನನ್ನ ಶ್ರಮಕ್ಕೆ ಸಾಮರ್ಥ್ಯಕ್ಕೆ ಬೆಲೆಯೇ ಇಲ್ವ? ಭೂಮಿಕಾಳ ಬೇಸರದ ಮಾತಿಗೆ ಕಂಗಲಾದ ಗೌತಮ್‌ ದಿವಾನ್‌
ಕನ್ನಡ ಸುದ್ದಿ  /  ಮನರಂಜನೆ  /  Amruthadhaare: ನನ್ನ ಶ್ರಮಕ್ಕೆ ಸಾಮರ್ಥ್ಯಕ್ಕೆ ಬೆಲೆಯೇ ಇಲ್ವ? ಭೂಮಿಕಾಳ ಬೇಸರದ ಮಾತಿಗೆ ಕಂಗಲಾದ ಗೌತಮ್‌ ದಿವಾನ್‌

Amruthadhaare: ನನ್ನ ಶ್ರಮಕ್ಕೆ ಸಾಮರ್ಥ್ಯಕ್ಕೆ ಬೆಲೆಯೇ ಇಲ್ವ? ಭೂಮಿಕಾಳ ಬೇಸರದ ಮಾತಿಗೆ ಕಂಗಲಾದ ಗೌತಮ್‌ ದಿವಾನ್‌

Amruthadhaare Serial: ಝೀ ಕನ್ನಡ ವಾಹಿನಿಯ ಬುಧವಾರದ ಸಂಚಿಕೆಯಲ್ಲಿ ಭೂಮಿಕಾ ತುಂಬಾ ಅಪ್‌ಸೆಟ್‌ ಆಗಿದ್ದಾರೆ. ಸ್ವಾಭಿಮಾನಿಯಾಗಿರುವ ಆಕೆಗೆ ಟ್ಯೂಷನ್‌ ಇನ್‌ಸ್ಟಿಟ್ಯೂಷನ್‌ನ ಬೋರ್ಡ್‌ ಮೆಂಬರ್‌ ಹುದ್ದೆ ಇರಿಟೇಷನ್‌ ತಂದಿದೆ. ಈ ಕುರಿತು ಬೇಸರದ ಮಾತುಗಳನ್ನು ಗೌತಮ್‌ ಬಳಿ ಆಡಿದ್ದಾರೆ.

ಅಮೃತಧಾರೆ ಧಾರಾವಾಹಿ ಕಥೆ
ಅಮೃತಧಾರೆ ಧಾರಾವಾಹಿ ಕಥೆ

ಅಮೃತಧಾರೆ ಧಾರಾವಾಹಿ ಕಥೆ: ಭೂಮಿಕಾ ಟ್ಯೂಷನ್‌ ಸಂಸ್ಥೆಗೆ ಹೊಸದಾಗಿ ಕೆಲಸಕ್ಕೆ ಆಗಮಿಸಿದಾಗ ಎಲ್ಲರೂ ಸ್ವಾಗತಿಸಲು ನಿಂತಿರುತ್ತಾರೆ. ಈ ಸ್ವಾಗತ ಏಕೆ ಎಂದು ಕೇಳಿದಾಗ "ನೀವೇ ವಿಐಪಿ" ಎಂದು ಹೇಳುತ್ತಾರೆ. ಮೊದಲೆಲ್ಲ ಲೇಟಾಗಿ ಬಂದ್ರೆ ಸ್ಯಾಲರಿ ಕಟ್‌ ಮಾಡ್ತಿನಿ ಅನ್ನೋರು ಈಗ ಯಾಕೆ ಹೀಗೆ ಮಾಡ್ತಾ ಇದ್ದಾರೆ ಎಂದು ಭೂಮಿಕಾಳಿಗೆ ಆಶ್ಚರ್ಯವಾಗುತ್ತದೆ. ಸಡನ್‌ ಆಗಿ ಈ ಗೌರವ, ಮರ್ಯಾದೆ ಏಕೆ ಎಂದು ಯೋಚಿಸುತ್ತಾಳೆ. ಭೂಮಿಕಾಗೆ ಟ್ಯೂಷನ್‌ ಕ್ಲಾಸ್‌ನಲ್ಲಿ ಎಲ್ಲಿಲ್ಲದ ಮರ್ಯಾದೆ ದೊರಕುತ್ತದೆ. "ನಿಮಗೊಂದು ಗುಡ್‌ ನ್ಯೂಸ್‌ ಇದೆ. ಇಷ್ಟು ದಿನ ನೀವು ಟ್ಯೂಟರ್‌ ಆಗಿದ್ರಿ. ನೀವು ಈ ಸಂಸ್ಥೆಯ ಬೋರ್ಡ್‌ ಆಫ್‌ ಡೈರೆಕ್ಟರ್‌" ಎಂದು ಹೇಳಿದಾಗ ಭೂಮಿಕಾಳಿಗೆ ಆಶ್ಚರ್ಯವಾಗುತ್ತದೆ. "ನನ್ನನ್ನು ಯಾವ ಬೇಸಿಸ್‌ ಮೇಲೆ ಆಯ್ಕೆ ಮಾಡಿದ್ದೀರಿ" ಎಂದು ಕೇಳುತ್ತಾಳೆ. "ನಿಮ್ಮ ಟ್ಯಾಲೆಂಟ್‌ ಮೇಲೆ, ನಿಮ್ಮಲ್ಲಿ ಆ ಟ್ಯಾಲೆಂಟ್‌ ಇದೆ" ಎಂದು ಟ್ಯೂಷನ್‌ ಇನ್‌ಸ್ಟಿಟ್ಯೂಷನ್‌ನ ಮುಖ್ಯಸ್ಥರು ಹೇಳುತ್ತಾರೆ. ಆಕೆ ಎಷ್ಟು ಕೇಳಿದರೂ ಒಪ್ಪುವುದಿಲ್ಲ. ತುಂಬಾ ಗೊಂದಲದಲ್ಲಿ ಇರುತ್ತಾರೆ ಭೂಮಿಕಾ.

ಗೌತಮ್‌ ಆಫೀಸ್‌ನಲ್ಲಿದ್ದಾಗ ಆನಂದ್‌ "ಕೋಚಿಂಗ್‌ ಸೆಂಟರ್‌ಗೆ ಹೋಗಿ ಹೆಂಡ್ತಿನ ಪಿಕ್‌ ಮಾಡಿಕೊಂಡು ಮನೆಗೆ ಹೋಗು" ಎಂದು ಸಲಹೆ ನೀಡುತ್ತಾನೆ. "ಭೂಮಿಕಾಳಿಗೆ ಇದೆಲ್ಲ ಇಷ್ಟ ಆಗೋಲ್ಲ" ಎಂದು ಗೌತಮ್‌ ಹೇಳುತ್ತಾನೆ. ಆಕೆ ಎಲ್ಲರಂತೆ ಅಲ್ಲ ಎಂದು ಗುಣಗಾನ ಮಾಡುತ್ತಾನೆ. ಹೀಗೆ ಸ್ನೇಹಿತರ ನಡುವೆ ಒಂದಿಷ್ಟು ಮಾತುಕತೆ ನಡೆಯುತ್ತವೆ. ಅತ್ತಿಗೆನ ಪಿಕಪ್‌ ಡ್ರಾಪ್‌ ಮಾಡೋ ಎಂದು ಆನಂದ್‌ ಹೇಳುತ್ತಾನೆ. ಪಿಕಪ್‌ ಡ್ರಾಪ್‌ ಅನ್ನು ಕಾರಿನ ಬದಲು ಬೈಕ್‌ನಲ್ಲಿ ಮಾಡಿದ್ರೆ ಚೆನ್ನಾಗಿ ಇರುತ್ತದೆ, ಟಚ್ಚಿಂಗ್‌ ಟಚ್ಚಿಂಗ್‌ ಎಂದು ಡುಮ್ಮ ಸರ್‌ಗೆ ಸಲಹೆ ನೀಡುತ್ತಾರೆ ಆನಂದ್‌.

ಜೀವನ್‌ ಮತ್ತು ಮಹಿಮಾ ಮನೆಯಲ್ಲಿ ಇರುತ್ತಾರೆ. ಎಲ್ಲಾದರೂ ಹೊರಕ್ಕೆ ಹೋಗೋಣ ಎಂದು ಮಹಿಮಾ ಕೇಳಿದಾಗ "ತುಂಬಾ ಬಿಝಿ ಇದ್ದೀನಿ" ಎನ್ನುತ್ತಾನೆ. ಆಕೆಗೆ ಈತ ಫುಡ್‌ ಡೆಲಿವರಿ ಮಾಡ್ತಾ ಇರುವ ಸಂಗತಿ ತಿಳಿಯುವುದಿಲ್ಲ. ಮೊದಲಿನಂತೆ ನನಗೆ ಟೈಮ್‌ ನೀಡುತ್ತಿಲ್ಲ ಎಂದು ಮಹಿಮಾ ಬೇಸರ ವ್ಯಕ್ತಪಡಿಸುತ್ತಾಳೆ. "ಕಷ್ಟ ಇರುವುದು ಒಳ್ಳೆಯದು. ಅದು ಮೋಟಿವೇಷನ್‌ ತರಹ, ಎಲ್ಲಾ ಸ್ವಲ್ಪ ದಿನದಲ್ಲಿ ಸರಿಯಾಗುತ್ತದೆ" ಎನ್ನುತ್ತಾನೆ.

ಚಿಂತೆಯಲ್ಲಿ ಪಾರ್ಥ

ಇನ್ನೊಂದೆಡೆ ಪಾರ್ಥ ಚಿಂತೆಯಲ್ಲಿದ್ದಾನೆ. ಭೂಮಿಕಾ ಹೇಳಿದ ಹಿತವಚನ ನೆನಪಾಗುತ್ತದೆ. ಆ ಕ್ಷಣದಲ್ಲಿ ಅಪೇಕ್ಷಾ ಕಾಲ್‌ ಮಾಡುತ್ತಾಳೆ. "ನನ್ನನ್ನು ಮರೆತುಬಿಟ್ರಾ" ಎಂದು ಆಕೆ ಕೇಳಿದಾಗ "ತಮಾಷೆಗೂ ಹಾಗೆ ಹೇಳಬೇಡಿ" ಎಂದು ಹೇಳುತ್ತಾನೆ. ಯಾಕೆ ಹೀಗೆ ಇದ್ದೀರಿ ಎಂದು ಕೇಳಿದಾಗ ಆತ ತಡಬಡಾಯಿಸುತ್ತಾನೆ. "ಯಾವಾಗ ಸಿಗೋಣ ಹೇಳಿ" ಎಂದು ಆಕೆ ಕೇಳಿದಾಗ "ನಾನು ಬಿಝಿ ಇದ್ದೀನಿ. ಫ್ರೀ ಆದಾಗ ಹೇಳ್ತಿನಿ" ಎನ್ನುತ್ತಾನೆ. "ಭಾವನತಮ್ಮನಿಗೆ ಏನಾಗಿದೆ. ಯಾಕೆ ಹೀಗೆ ಇದ್ದಾರೆ" ಎಂದು ಯೋಚಿಸುತ್ತಾಳೆ ಅಪೇಕ್ಷಾ. ಮಲ್ಲಿ ಬೋರ್‌ ಆಗಿ ತೂಕಡಿಸುತ್ತ ಇರುವಾಗ ಜೈದೇವ್‌ ಬರುತ್ತಾನೆ. ಭೂಮಿಕಾ ಮನೆಯಲ್ಲಿ ಇಲ್ಲದೆ ಬೋರ್‌ ಆಗ್ತಾ ಇದೆ ಎನ್ನುತ್ತಾಳೆ. ಅತ್ತಿಗೆ ಕೆಲಸಕ್ಕೆ ಹೋಗುವ ಸಂಗತಿ ಜೈದೇವ್‌ಗೆ ತಿಳಿಯುತ್ತದೆ. "ನಿನ್ನ ಜತೆ ಕೊನೆಯವರೆಗೂ ನಾನು ಇರುತ್ತೇನೆ" ಎಂದು ನಾಟಕೀಯವಾಗಿ ಹೇಳುತ್ತಾನೆ.

ಭೂಮಿಕಾಳಿಗೆ ಟ್ಯೂಷನ್‌ ಸಂಸ್ಥೆಯಲ್ಲಿ ಆಕೆಯ ಸ್ನೇಹಿತೆಯರಿಂದ ಕೊಂಕಿನ ಮಾತುಗಳು ಕೇಳಿಸುತ್ತವೆ. "ಕೆಲವರಿಗೆ ಅದೃಷ್ಟವಿದ್ದರೆ ಯಾವುದೇ ಹುದ್ದೆ ಸಿಗುತ್ತದೆ" ಎಂಬೆಲ್ಲ ಮಾತುಗಳನ್ನು ಉಳಿದವರು ಹೇಳಿದಾಗ ಭೂಮಿಕಾಳಿಗೆ ಬೇಸರವಾಗುತ್ತದೆ. "ನನಗೆ ನನ್ನ ಐಡೆಂಟೆಟಿ ಇಲ್ವ" ಎಂದು ಭೂಮಿಕಾ ಯೋಚಿಸುತ್ತಾಳೆ.

ಶಕುಂತಲಾದೇವಿ ಪ್ಲ್ಯಾನ್‌ ಸಕ್ಸಸ್

ಶಕುಂತಲಾದೇವಿ ಮತ್ತು ಆಕೆಯ ತಮ್ಮ ಮಾತನಾಡುತ್ತ ಇರುತ್ತಾರೆ. ಭೂಮಿಕಾ ಯಾಕೆ ಕೆಲಸಕ್ಕೆ ಹೋಗ್ತಾ ಇದ್ದಾಳೆ ಎಂದು ಯೋಚಿಸುತ್ತಾರೆ. "ನಾನು ನನ್ನ ಫ್ರೆಂಡ್ಸ್‌ ಜತೆ ಮಾತನಾಡಿದ್ದನ್ನು ಕೇಳಿಸಿಕೊಂಡ್ಲ, ಅವಳಿಗೆ ಅವಮಾನ ಆಗಿರಬಹುದಾ" ಎಂದು ಯೋಚಿಸಿರಬಹುದು. "ನನ್ನ ಸೊಸೆಗೆ ಪ್ರಮೋಷನ್‌ ಕೊಡಿ ಎಂದು ಏಕೆ ಹೇಳಿದೆ" ಎಂದು ತಮ್ಮ ಕೇಳಿದಾಗ "ಕಾರಣ ಇದ್ದೇ ನಾನು ಮಾಡಿದ್ದು. ಭೂಮಿಕಾ ತುಂಬಾ ಸ್ವಾಭಿಮಾನಿ. ಆಕೆಗೆ ಯಾರ ಹಂಗಲ್ಲೂ ಬದುಕಲು ಇಷ್ಟವಿಲ್ಲ. ಅವಳಿಗೆ ಪ್ರಮೋಷನ್‌ ಪ್ರಮೋಷನ್‌ ರೀತಿ ಕಾಣಿಸೋಲ್ಲ. ಅದು ಅವಮಾನದಂತೆ ಕಾಣಿಸುತ್ತದೆ. ಮನೆಗೆ ಬಂದು ದೊಡ್ಡ ಸೀನ್‌ ಮಾಡ್ತಾಳೆ. ಗೌತಮ್‌ ಇದಕ್ಕೆ ಕಾರಣ ಎಂದುಕೊಳ್ಳುತ್ತಾಳೆ. ಗೌತಮ್‌ ಮತ್ತು ಭೂಮಿಕಾ ನಡುವೆ ಮಿಸ್‌ ಅಂಡರ್‌ಸ್ಟ್ಯಾಂಡಿಂಗ್‌ ತರ್ಸೋದೇ ನನ್ನ ಉದ್ದೇಶ" ಎನ್ನುತ್ತಾರೆ ಶಕುಂತಲಾದೇವಿ. ಮನೆಗೆ ಬೇಸರದಿಂದಲೇ ಭೂಮಿಕಾ ಆಗಮಿಸುತ್ತಾಳೆ. ಇದನ್ನು ನೋಡಿ ಇವರಿಬ್ಬರು ಖುಷಿಪಡುತ್ತಾರೆ.

ಗೌತಮ್‌ ಬಂದಾಗ ಭೂಮಿಕಾ ಬೇಸರದ ಮಾತುಗಳನ್ನು ಆಡುತ್ತಾರೆ. ನೀವು ಆ ಇನ್‌ಸ್ಟಿಟ್ಯೂಷನ್‌ಗೆ ಡೊನೆಷನ್‌ ಕೊಡ್ತಿರಿ ಅಂತ ನನ್ನನ್ನು ಬೋರ್ಡ್‌ ಮೆಂಬರ್‌ ಮಾಡಿದ್ದಾರೆ. ತುಂಬಾನೇ ಗೌರವ ಕೊಡ್ತಾ ಇದ್ದಾರೆ" ಎಂದು ಬೇಸರದಲ್ಲಿ ಹೇಳುತ್ತಾರೆ. "ಹೌದ ಕಂಗ್ರಾಜ್ಯುಲೇಷನ್‌, ಅದಕ್ಕೆ ಖುಷಿ ಪಡೋದು ಬಿಟ್ಟು ಬೇಸರ ಏಕೆ ಮಾಡ್ತಿರಿ" ಎಂದು ಗೌತಮ್‌ ಕೇಳುತ್ತಾನೆ. "ಇದೆಲ್ಲ ನನಗೆ ಇಷ್ಟ ಆಗೋಲ್ಲ ಎಂದು ನಿಮಗೆ ಗೊತ್ತಲ್ವ ಗೌತಮ್‌ ಅವರೇ, ನಾನು ಸ್ವಂತವಾಗಿ ಏನಾದ್ರೂ ಮಾಡಬೇಕೆಂದು ಬಯಸುವವಳು. ಕೆಲಸದ ಜಾಗದಲ್ಲಿ ನಿಮ್ಮ ನೆರಳಲ್ಲಿ ನಿಂತುಕೊಳ್ಳುವುದು ನನಗೆ ತುಂಬಾ ಕಷ್ಟವಾಗುತ್ತದೆ. ಸ್ವಾಭಿಮಾನ ಇರುವವರು ಇದನ್ನು ಇಷ್ಟಪಡುವುದಿಲ್ಲ. ನನ್ನ ಶ್ರಮಕ್ಕೆ, ನನ್ನ ಸಾಮರ್ಥ್ಯಕ್ಕೆ ಬೆಲೆಯೇ ಇಲ್ಲ ಅನಿಸುತ್ತದೆ" ಎಂದು ಭೂಮಿಕಾ ಬೇಸರದಲ್ಲಿ ಹೇಳುತ್ತಾಳೆ. ಒಟ್ಟಾರೆ ಶಕುಂತಲಾದೇವಿ ಮಾಡಿರುವ ಕೆಲಸದಿಂದ ಭೂಮಿಕಾಳಿಗೆ ಬೇಸರವಾಗಿದೆ. ಅಮೃತಧಾರೆ ಧಾರಾವಾಹಿಯ ಮುಂದಿನ ಸಂಚಿಕೆಯಲ್ಲಿ ಏನಾಗಬಹುದು ಎಂದು ಪ್ರೇಕ್ಷಕರಲ್ಲಿ ಕುತೂಹಲ ಮೂಡಿದೆ.

Whats_app_banner