ಕನ್ನಡ ಸುದ್ದಿ  /  ಮನರಂಜನೆ  /  ಅಮೃತಧಾರೆ ಸೀರಿಯಲ್‌: ಮನೆಹಾಳ ಮಾವನ ಪ್ಲ್ಯಾನ್‌ ಪ್ಲಾಪ್‌ ಆಯ್ತು; ನನ್ನ ತಂಗಿ ಕೈ ಹಿಡಿಯಬೇಕೆಂದರೆ... ಪಾರ್ಥನಿಗೆ ಕ್ಲಾಸ್‌ ತೆಗೆದುಕೊಂಡ ಭೂಮಿ

ಅಮೃತಧಾರೆ ಸೀರಿಯಲ್‌: ಮನೆಹಾಳ ಮಾವನ ಪ್ಲ್ಯಾನ್‌ ಪ್ಲಾಪ್‌ ಆಯ್ತು; ನನ್ನ ತಂಗಿ ಕೈ ಹಿಡಿಯಬೇಕೆಂದರೆ... ಪಾರ್ಥನಿಗೆ ಕ್ಲಾಸ್‌ ತೆಗೆದುಕೊಂಡ ಭೂಮಿ

Amruthadhaare Serial Yesterday episode: ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅಮೃತಧಾರೆ ಸೀರಿಯಲ್‌ನ ನಿನ್ನೆಯ ಸಂಚಿಕೆಯಲ್ಲಿ ಪಾರ್ಥನಿಗೆ ಭೂಮಿಕಾ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಪ್ರೀತಿ ಎಂದರೆ ಜಸ್ಟ್‌ ಫೀಲಿಂಗ್‌ ಅಲ್ಲ, ಅದು ಜವಾಬ್ದಾರಿ ಎಂದು ಮನದಟ್ಟು ಮಾಡಿಸಿದ್ದಾಳೆ.

ಪಾರ್ಥನಿಗೆ ಕ್ಲಾಸ್‌ ತೆಗೆದುಕೊಂಡ ಭೂಮಿ
ಪಾರ್ಥನಿಗೆ ಕ್ಲಾಸ್‌ ತೆಗೆದುಕೊಂಡ ಭೂಮಿ

Amruthadhaare Serial Story: ಪಾರ್ಥ ಮತ್ತು ಅಪೇಕ್ಷಾರ ಪ್ರೀತಿ ಗೌತಮ್‌ಗೆ ತಿಳಿಯಬೇಕೆಂದು ಮಾವ ಪ್ಲ್ಯಾನ್‌ ಮಾಡುತ್ತಾನೆ. ಅವರಿಬ್ಬರು ಏಕಾಂತದಲ್ಲಿ ಇರುವಾಗ ಮಾವ ಗೌತಮ್‌ನನ್ನು "ನಿಮ್ಮನ್ನು ಪಾರ್ಥ ಹುಡುಕುತ್ತಿದ್ದ" ಎಂದು ಕಳುಹಿಸಿದ್ದ. ಆ ಸಮಯದಲ್ಲಿ ಭೂಮಿಕಾಳು ಅಲ್ಲಿದ್ದಳು. ಗೌತಮ್‌ ಇವರಿಬ್ಬರನ್ನು ನೋಡಬಾರದು ಎಂದು ಯೋಚಿಸುತ್ತಾಳೆ. ಆ ಸಮಯದಲ್ಲಿ ಜಾರಿಬಿದ್ದಂತೆ ಭೂಮಿಕಾ ನಟಿಸುತ್ತಾಳೆ. ಪಾರ್ಥ ಕೆಳಕ್ಕೆ ಹೋದ್ರು ಎಂದು ಭೂಮಿಕಾ ಹೇಳುತ್ತಾಳೆ. ಸರಿ ಎಂದು ಗೌತಮ್‌ ಕೆಳಕ್ಕೆ ಹೋಗುತ್ತಾರೆ. ಈ ಸಮಯದಲ್ಲಿ ಪಾರ್ಥ ಮತ್ತು ಅಪೇಕ್ಷಾ ಮೈಮರೆತಿರುತ್ತಾರೆ.

ಟ್ರೆಂಡಿಂಗ್​ ಸುದ್ದಿ

ಇನ್ನೊಂದೆಡೆ ಆನಂದ್‌ "ಏನು ಗಿಫ್ಟ್‌ ನೀಡಿದ್ದಾರೆ ಭೂಮಿಕಾ" ಎಂದು ಕೇಳುತ್ತಾನೆ. "ನನ್ನನ್ನು ತುಂಬಾ ಅರ್ಥ ಮಾಡಿಕೊಂಡು ಟಾಯ್ಸ್‌ ಕೊಟ್ಟಿದ್ದಾರೆ" ಎಂದು ಗೌತಮ್‌ ಹೇಳುತ್ತಾನೆ. ಒಂದಿಷ್ಟು ಹೊಗಳಿಕೆಯ ಮಾತುಗಳು ನಡೆಯುತ್ತವೆ. ಬಳಿಕ ಪ್ರೀತಿಯನ್ನು ಎಕ್ಸ್‌ಪ್ರೆಸ್‌ ಮಾಡು ಎಂದು ಆನಂದ್‌ ಹೇಳುತ್ತಾನೆ. ಆದಷ್ಟು ಬೇಗ ಹೇಳ್ತಿನಿ ಎಂದು ಗೌತಮ್‌ ಹೇಳುತ್ತಾನೆ. ಹುಟ್ಟುಹಬ್ಬಕ್ಕೆ ಬಂದ ಅತಿಥಿಗಳೆಲ್ಲ ಹೊರಡುತ್ತಾರೆ. ಹೊರಟು ನಿಂತ ಮಹಿಮಾಳನ್ನು ಮತ್ತು ಜೀವನನ್ನು ಗೌತಮ್‌ ಹೊಗಳುತ್ತಾನೆ. "ಆ ಮನೆಯಲ್ಲಿರುವ ಎಲ್ಲರೂ ತುಂಬಾ ಒಳ್ಳೆಯವರು" ಎಂದು ಪಾರ್ಥ ಹೊಗಳುತ್ತಾನೆ. ಭಾವ ನನ್ನ ಮೇಲೆ ತುಂಬಾ ಹೋಪ್ಸ್‌ ಇಟ್ಟುಕೊಂಡಿದ್ದಾರೆ. ನನ್ನ ಜಾಬ್‌ ಹೋದ ಕುರಿತು ತಿಳಿದರೆ ತುಂಬಾ ಬೇಜಾರು ಮಾಡಿಕೊಳ್ಳುತ್ತಾರೆ ಎಂದು ಜೀವ ಯೋಚಿಸುತ್ತಾನೆ. ಈ ಸಮಯದಲ್ಲಿ ಅಪೇಕ್ಷಾಳ ಕುರಿತು ಗೌತಮ್‌ ಮಾತನಾಡುತ್ತಾನೆ. "ನಿನ್ನ ತರ ಧೈರ್ಯವಂತ ಹುಡುಗಿ ಪಾರ್ಥನಿಗೂ ಸಿಗಬೇಕು" ಎಂದು ಗೌತಮ್‌ ಹೇಳುತ್ತಾನೆ. ಇದನ್ನು ನೋಡಿ ಭೂಮಿಕಾ "ಇವರಿಬ್ಬರನ್ನು ಸ್ವಲ್ಪ ಕಂಟ್ರೋಲ್‌ಗೆ ತರಬೇಕು" ಎಂದುಕೊಳ್ಳುತ್ತಾಳೆ. ಹೀಗೆ, ಮನೆಗೆ ಬಂದ ಅತಿಥಿಗಳು ಹೋಗುತ್ತಾರೆ.

ಶಕುಂತಲಾದೇವಿ ತನ್ನ ತಮ್ಮನಿಗೆ ಕ್ಲಾಸ್‌ ತೆಗೆದುಕೊಳ್ಳುತ್ತಾಳೆ. ಅವರಿಬ್ಬರನ್ನು ಒಟ್ಟಿಗೆ ನೋಡಿದ್ರೆ ಇಬ್ಬರಿಗೂ ಮದುವೆ ಮಾಡ್ತಾ ಇದ್ದ ಗೌತಮ್‌ ಎಂದು ಶಕುಂತಲಾದೇವಿ ಹೇಳುತ್ತಾಳೆ. ಪಾರ್ಥ ಮತ್ತು ಅಪೇಕ್ಷಾಳ ಕುರಿತು ಶಕುಂತಲಾದೇವಿ ಏನೋ ಪ್ಲಾನ್‌ ಹೊಂದಿದ್ದಾಳೆ.

ಪಾರ್ಥನಿಗೆ ಕ್ಲಾಸ್‌ ತೆಗೆದುಕೊಂಡ ಪಾರ್ಥ

ಇನ್ನೊಂದೆಡೆ ಪಾರ್ಥನನ್ನು ಭೇಟಿಯಾಗಲು ಭೂಮಿಕಾ ತಿಳಿಸಿರುತ್ತಾಳೆ. ಪಾರ್ಥ ಭೂಮಿಕಾ ಇರುವಲ್ಲಿ ಬರುತ್ತಾನೆ. "ಅತ್ತಿಗೆ ಏನು ಬರೋಕ್ಕೆ ಹೇಳಿದ್ದು" ಎಂದು ಪಾರ್ಥ ಕೇಳುತ್ತಾನೆ. "ಏನಾಯ್ತು ಎಂದು ನಿನಗೆ ಗೊತ್ತಿಲ್ವ ಪಾರ್ಥ" ಎಂದು ಕೇಳುತ್ತಾಳೆ. "ತುಂಬಾ ಇನ್ನೋಸೆಂಟ್‌ ಆಗಿ ಬಿಹೇವ್‌ ಮಾಡಬೇಡಿ. ನೀನು ಮತ್ತು ಅಪೇಕ್ಷಾ ರೂಂನಲ್ಲಿ ಇರುವುದನ್ನು ನಾನು ನೋಡಿದೆ. ಈಗ ನೀವು ಏನೂ ಹೇಳಿದ್ರೂ ಅಷ್ಟೇ" ಎಂದು ಹೇಳುತ್ತಾಳೆ. "ನಾನು ಅಪೇಕ್ಷಾ ಮೊದಲಿನಿಂದಲೂ ಲವ್‌ ಮಾಡ್ತಾ ಇದ್ದೇವು. ಜೈದೇವ್‌ ಜತೆ ಮದುವೆ ನಿಶ್ಚಿತಾರ್ಥ ಆದಾಗ ನಾವು ಮಾತನಾಡಿಕೊಂಡು ದೂರಾದೆವು" ಎಂದು ತನ್ನ ಕಥೆಯನ್ನು ಹೇಳುತ್ತಾನೆ. "ಇವತ್ತು ನೀವು ನಡೆದುಕೊಂಡ ರೀತಿ ನನಗೆ ಇಷ್ಟವಾಗಲಿಲ್ಲ. ಮೊದಲೇ ಮನೆಯ ವಾತಾವರಣ ಸರಿ ಇಲ್ಲ. ನಿಮ್ಮಿಬ್ಬರನ್ನು ಈ ರೀತಿ ಯಾರಾದರೂ ನೋಡಿದ್ರೆ ಏನಾಗ್ತ ಇತ್ತು. ನನ್ನ ತಂಗಿ ಕ್ಯಾರೆಕ್ಟರ್‌ ಬಗ್ಗೆ ಎಲ್ಲರೂ ಏನಂದುಕೊಳ್ತಾ ಇದ್ರು. ಪ್ರೀತಿ ಎಂದರೆ ಜಸ್ಟ್‌ ಫೀಲಿಂಗ್ಸ್‌ ಅಲ್ಲ. ಪ್ರೀತಿ ಎನ್ನುವುದು ದೊಡ್ಡ ಜವಾಬ್ದಾರಿ" ಎನ್ನುತ್ತಾಳೆ.

"ನಿನ್ನ ಸುತ್ತಮುತ್ತ ಏನು ನಡೆಯುತ್ತ ಇದೆ. ಸಮಯ ಸಂದರ್ಭ ಏನೂ ನೋಡದೆ ಪ್ರೀತಿಯಲ್ಲಿ ಮೈಮರೆಯುತ್ತೀರ. ಅಣ್ಣನ ಮದುವೆ ಮುರಿದು ಬಿದ್ದಾಗ ತಮ್ಮ ಆ ಹುಡುಗಿಯನ್ನು ತಬ್ಬಿಕೊಂಡು ಇರುತ್ತಾನೆ. ಆ ಕುರಿತು ಯೋಚನೆ ಮಾಡಿ" ಎಂದೆಲ್ಲ ಬುದ್ಧಿವಾದ ಹೇಳುತ್ತಾರೆ ಭೂಮಿಕಾ. "ನೀವು ನನಗೆ ಇಷ್ಟ. ಹಾಗಂತ ನೀವು ತಪ್ಪು ಮಾಡಿದ್ರೆ ಒಪ್ಪೋದಿಲ್ಲ. ನೀವು ಎಲ್ಲರಲ್ಲೂ ಸೈ ಎನಿಸಿಕೊಳ್ಳಬೇಕು. ಹಾಗಾದ್ರೆ ಮಾತ್ರ ನನ್ನ ತಂಗಿ ಕೈ ಹಿಡಿಯಲು ಸಾಧ್ಯ" ಎಂದು ಹೇಳುತ್ತಾರೆ.

ಇನ್ನೊಂದೆಡೆ ಮಲ್ಲಿ ದುಃಖದಲ್ಲಿ ಇದ್ದಾಳೆ. "ಏಕೆ ಅಳ್ತಾ ಇದ್ದೀಯಾ" ಎಂದು ಜೈದೇವ್‌ ಕೇಳುತ್ತಾನೆ. ನಾನು ನಿಮಗೆ ಹೆಂಡ್ತಿಯಾಗಿ ಸಿಗಬಾರದಿತ್ತು. ನಿಮ್ಮ ಆಸ್ತಿ ಅಂತಸ್ತಿಗೆ ತಕ್ಕಂತೆ ಹುಡುಗಿ ಸಿಗಬೇಕಿತ್ತು ಎಂದು ಹೇಳುತ್ತಾಳೆ. ಇದು ಸರಿಯಾದ ಮಾತು ಎಂದುಕೊಳ್ಳುತ್ತಾನೆ ಜೈದೇವ್‌. ಆದರೂ, ಹಾಗೆಲ್ಲ ಹೇಳಬೇಡ ಎಂದು ಸುಮ್ಮನೆ ಹೇಳುತ್ತಾನೆ. ಹೀಗೆ ಇಬ್ಬರ ನಡುವೆ ಒಂದಿಷ್ಟು ಪ್ರೀತಿಯ ಮಾತು ನಡೆಯುತ್ತದೆ.

ಇನ್ನೊಂದೆಡೆ ಮಂದಾಕಿನಿ ಮಹಿಮಾಳಿಗೆ ಥ್ಯಾಂಕ್ಸ್‌ ಹೇಳುತ್ತಾಳೆ. "ನಾನು ಯಾರೂ ಮಾಡದ್ದು ಮಾಡಿಲ್ಲ. ಅದರಲ್ಲಿ ಗ್ರೇಟ್‌ ಇಲ್ಲ. ಇದು ನಿಜಕ್ಕೂ ಚಿಕ್ಕ ವಿಷಯ. ನೀವು ಹೇಳಿಲ್ಲ ಅಷ್ಟೇ" ಎಂದು ಮಹಿಮಾ ಹೇಳುತ್ತಾಳೆ. ಅತ್ತೆ ಸೊಸೆ ನಡುವೆ ಒಂದಿಷ್ಟು ಪ್ರೀತಿಯ ಮಾತುಗಳು ನಡೆಯುತ್ತದೆ. ಇದಾದ ಬಳಿಕ ಮಹಿಮಾ ಮತ್ತು ಜೀವನ್‌ ನಡುವೆ ಪ್ರೀತಿಯ ಮಾತುಗಳೊಂದಿಗೆ ಸೀರಿಯಲ್‌ ಮುಂದುವರೆಯುತ್ತದೆ.

IPL_Entry_Point