ರೌಡಿಗಳಿಂದ ಪಾರ್ಥನಿಗೆ ಪೆಟ್ಟು, ಜೈದೇವ್‌ ಮೇಲೆ ಶಕುಂತಲಾಗೆ ಸಿಟ್ಟು; ಗೌತಮ್‌-ಭೂಮಿಕಾರಿಗೆ ಚಿಕ್ಕಮಗಳೂರಿನಲ್ಲಿ ಹನಿಮೂನ್‌, ಅಮೃತಧಾರೆ ಸ್ಟೋರಿ
ಕನ್ನಡ ಸುದ್ದಿ  /  ಮನರಂಜನೆ  /  ರೌಡಿಗಳಿಂದ ಪಾರ್ಥನಿಗೆ ಪೆಟ್ಟು, ಜೈದೇವ್‌ ಮೇಲೆ ಶಕುಂತಲಾಗೆ ಸಿಟ್ಟು; ಗೌತಮ್‌-ಭೂಮಿಕಾರಿಗೆ ಚಿಕ್ಕಮಗಳೂರಿನಲ್ಲಿ ಹನಿಮೂನ್‌, ಅಮೃತಧಾರೆ ಸ್ಟೋರಿ

ರೌಡಿಗಳಿಂದ ಪಾರ್ಥನಿಗೆ ಪೆಟ್ಟು, ಜೈದೇವ್‌ ಮೇಲೆ ಶಕುಂತಲಾಗೆ ಸಿಟ್ಟು; ಗೌತಮ್‌-ಭೂಮಿಕಾರಿಗೆ ಚಿಕ್ಕಮಗಳೂರಿನಲ್ಲಿ ಹನಿಮೂನ್‌, ಅಮೃತಧಾರೆ ಸ್ಟೋರಿ

Amruthadhaare Serial Yesterday Episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಸೋಮವಾರದ ಸಂಚಿಕೆಯಲ್ಲಿ ಹಲವು ವಿದ್ಯಮಾನ ನಡೆದಿದೆ. ಪಾರ್ಥನಿಗೆ ರೌಡಿಗಳಿಂದ ಹೊಡೆಸಿದ್ದು ಜೈದೇವ್‌ ಎಂದು ತಿಳಿದು ಶಕುಂತಲಾದೇವಿ ಕೋಪಗೊಂಡಿದ್ದಾರೆ. ಇನ್ನೊಂದೆಡೆ ಗೌತಮ್‌ ಮತ್ತು ಭೂಮಿಕಾರನ್ನು ಹನಿಮೂನ್‌ಗೆ ಕಳುಹಿಸಲು ಸಿದ್ಧತೆ ನಡೆಯುತ್ತಿದೆ.

ಗೌತಮ್‌-ಭೂಮಿಕಾರಿಗೆ ಚಿಕ್ಕಮಗಳೂರಿನಲ್ಲಿ ಹನಿಮೂನ್‌
ಗೌತಮ್‌-ಭೂಮಿಕಾರಿಗೆ ಚಿಕ್ಕಮಗಳೂರಿನಲ್ಲಿ ಹನಿಮೂನ್‌

ಅಮೃತಧಾರೆ ಸೀರಿಯಲ್‌ ನಿನ್ನೆಯ ಸಂಚಿಕೆ: ಹೊಸ ಆಫೀಸ್‌ನಲ್ಲಿ ಭೂಮಿಕಾ ಸ್ಟೂಲ್‌ ಮೇಲೆ ನಿಂತು ಬಲೂನ್‌ ಕಟ್ಟುವಾಗ ಎಡವುತ್ತಾರೆ. ತಕ್ಷಣ ಗೌತಮ್‌ ಆಕೆಯನ್ನು ಹಿಡಿದುಕೊಳ್ಳುತ್ತಾರೆ. ಆ ಸಮಯದಲ್ಲಿ ಅಲ್ಲಿಗೆ ಬಂದ ಆನಂದ ಬರುತ್ತಾನೆ. "ಅಯ್ಯೋ ಎಂತಹ ಸಮಯದಲ್ಲಿ ಬಂದೆ" ಎಂದುಕೊಳ್ಳುತ್ತಾನೆ. ಏನೋ ಆಯ್ತಲ್ಲ ಇದು ಬರೀ ಟ್ರೇಲರ್‌, ಫಿಕ್ಚರ್‌ ಮನೆಯಲ್ಲಿದೆ ಎಂದು ಆನಂದ್‌ ಹೇಳುತ್ತಾನೆ. ಒಟ್ಟಾರೆ ಗೌತಮ್‌ಗೆ ಏನೂ ಅರ್ಥ ಆಗೋದಿಲ್ಲ. "ಗೆದ್ದು ಬಾ ಗೆಳೆಯ ಆಲ್‌ ದಿ ಬೆಸ್ಟ್‌" ಎನ್ನುತ್ತಾನೆ. ಇವನು ಏನು ಹೇಳುತ್ತಾನೆ ಎಂದು ಅರ್ಥ ಆಗುತ್ತಿಲ್ಲ ಎಂದುಕೊಳ್ಳುತ್ತಾನೆ ಗೌತಮ್‌. ಗೌತಮ್‌-ಭೂಮಿಕಾರಿಗೆ ಹನಿಮೂನ್‌ ನಿಗದಿಪಡಿಸಿದ ಸಂಗತಿ ಇವರಿಗೆ ಗೊತ್ತಿರುವುದಿಲ್ಲ.

ಪಾರ್ಥನ ಸ್ಥಿತಿಗೆ ಬೇಸರಗೊಂಡ ಶಕುಂತಲಾದೇವಿ

ಪಾರ್ಥ ಕದ್ದು ಮುಚ್ಚಿ ಮನೆಯ ಒಳಗೆ ಬಂದಿರುತ್ತಾನೆ. ಶಕುಂತಲಾ ಬಂದು ನೋಡಿದಾಗ ಈತನ ಕೈಯಲ್ಲಿ ಗಾಯವಾಗಿರುತ್ತದೆ. ಯಾರೋ ಹೊಡೆದಂತೆ ಇದೆ ಎಂದು ಅಶ್ವಿನಿ ಹೇಳುತ್ತಾಳೆ. ಯಾರೋ ನಾಲ್ಕೈದು ಜನ ನನ್ನನ್ನು ಅಟ್ಯಾಕ್‌ ಮಾಡಿದ್ರು ಎಂದು ಪಾರ್ಥ ಹೇಳುತ್ತಾನೆ. ಜತೆಗೆ ಯಾರು ಇದ್ರ ಎಂದು ಕೇಳುತ್ತಾರೆ ಶಕುಂತಲಾದೇವಿ. ಫ್ರೆಂಡ್‌ ಇದ್ರು ಅನ್ನುತ್ತಾನೆ. ಒಂದಿಷ್ಟು ಎನ್‌ಕ್ವಯರಿ ನಡೆಯುತ್ತದೆ. ಗಾಯಗಳಿಗೆ ಪ್ರಥಮ ಚಿಕಿತ್ಸೆ ಮಾಡುತ್ತಾರೆ. ಇನ್ನು ಎಲ್ಲಿ ಹೋಗಬೇಕಾದರೂ ನನ್ನಲ್ಲಿ ಹೇಳು, ಗೌತಮ್‌ ಜತೆ ಹೇಳಿ ಬಾಡಿಗಾರ್ಡ್‌ ಕಳುಹಿಸ್ತಿನಿ ಎನ್ನುತ್ತಾರೆ ಶಕುಂತಲಾ. ಜತೆಗೆ ಒಂದಿಷ್ಟು ಕಣ್ನೀರಿನ ನಾಟಕವನ್ನೂ ಮಾಡುತ್ತಾರೆ. ಇದು ಆಕ್ಸಿಡೆಂಟ್‌ ಅನಿಸುತ್ತಾ ಇಲ್ಲ, ಯಾರೋ ಬೇಕಂತಾ ಮಾಡ್ತಾ ಇದ್ದಾರೆ. ಆದರೆ, ನನಗೆ ಇಲ್ಲಿ ಯಾರೂ ಗೊತ್ತಿಲ್ಲ ಎಂದು ಪಾರ್ಥ ಹೇಳುತ್ತಾನೆ.

ಗೌತಮ್‌-ಭೂಮಿಕಾ ಹನಿಮೂನ್‌ ಬಗ್ಗೆ ಮಾತಕತೆ

ಗೌತಮ್‌ ಮತ್ತು ಭೂಮಿಕಾರನ್ನು ಅಜ್ಜಮ್ಮ ಕರೆಯುತ್ತಾರೆ. "ನಿಮ್ಮಲ್ಲಿ ಸ್ವಲ್ಪ ಮಾತನಾಡಬೇಕಿತ್ತು. ನೀವಿಬ್ಬರು ಚಿಕ್ಕಮಗಳೂರು ಹೋಗ್ತಾ ಇದ್ದೀರಿ ಅಲ್ವಾ ಅದರ ವಿಚಾರ ಮಾತನಾಡಬೇಕಿತ್ತು" ಎಂದು ಅಜ್ಜಮ್ಮ ಹೇಳುತ್ತಾರೆ. "ನಿನ್ನ ಜತೆ ಭೂಮಿಕಾರನ್ನು ಕಳುಹಿಸಬೇಕು ಅಂದುಕೊಂಡಿದ್ದೇನೆ. ನೀವಿಬ್ಬರು ಜೋಡಿಯಾಗಿ ಹೋಗಿಬನ್ನಿ ಚೆನ್ನಾಗಿರುತ್ತದೆ" ಎಂದು ಅಜ್ಜಮ್ಮ ಹೇಳುತ್ತಾರೆ. "ಮದುವೆಯಾದ ಮೇಲೆ ಅವಳನ್ನು ಎಲ್ಲಿ ಕರೆದುಕೊಂಡು ಹೋಗಿಲ್ಲ" ಎಂದು ಹೇಳುತ್ತಾನೆ. "ಅಜ್ಜಿ ನಾನು ಪ್ರಾಬ್ಲಂ ಸಾಲ್ವ್‌ ಮಾಡೋಕ್ಕೆ ಹೋಗೋದು" ಎಂದು ಗೌತಮ್‌ ಹೇಳುತ್ತಾನೆ. "ನಿನ್ನ ತಾತಾನೂ ಹೀಗೆ, ಧೈರ್ಯಕ್ಕೆ ಅಂತ ಜತೆಯಲ್ಲಿ ನನ್ನನ್ನು ಕರೆದುಕೊಂಡು ಹೋಗ್ತಾ ಇದ್ರು. "ನೀವು ಹನಿಮೂನ್‌ ಅಂತ ಎಲ್ಲೂ ಹೋಗಿಲ್ಲ. ಜತೆಗೆ ಕರೆದುಕೊಂಡು ಹೋಗು" ಎಂದು ಅಜ್ಜಮ್ಮ ಹೇಳುತ್ತಾರೆ.

ಗೌತಮ್‌ ಏನೂ ಹೇಳಿದ್ರೂ ಅಜ್ಜಮ್ಮ ಕೇಳುವುದಿಲ್ಲ. ನೀವು ಹೇಳಿದ ಹಾಗೆ ಆಗಲಿ, ನಾನು ಭೂಮಿಕಾರನ್ನು ಕರೆದುಕೊಂಡು ಹೋಗುವೆ ಎಂದು ಗೌತಮ್‌ ಹೇಳುತ್ತಾನೆ. "ಸುಮ್ನೆ ಹೋದ ಪುಟ್ಟ ರೀತಿ ಬರಬೇಡ, ಎರಡು ಮೂರು ಆಗಲೇಬೇಕು. ಮಗು ಎಂಬ ಹೊಸ ಚಿಗುರು ಚಿಗುರಲೇಬೇಕು. ಎಲ್ಲರ ತರಹ ನಿಮ್ಮ ಬದುಕಲ್ಲೂ ಚೈತ್ರಾ ಮಾಸ ಬರಬೇಕು" ಎಂದು ಅಜ್ಜಮ್ಮ ಹೇಳಿದಾಗ ದಂಪತಿ ನಾಚ್ಕೋತ್ತಾರೆ. ನಾನು ಗೌತಮ್‌ರ ಜತೆ ಹೋಗ್ತಿನ? ಇದನ್ನು ನಂಬೋಕ್ಕೆ ಆಗೋದಿಲ್ಲ ಎಂದು ಭೂಮಿಕಾ ಅಂದುಕೊಳ್ಳುತ್ತಾರೆ. ಅಜ್ಜಿ ಏನೋ ಹೇಳಿದ್ರು ಅಂತ ನೀವು ತಪ್ಪು ತಿಳಿದುಕೊಳ್ಳಬೇಡಿ. ಅವರಿಗೆ ಏನೋ ಆಸೆ ಇದೆ ಎಂದು ಗೌತಮ್‌ ಹೇಳುತ್ತಾನೆ. "ಆಸೆ ನನಗೂ ಇದೆ" ಎಂದುಕೊಳ್ಳುತ್ತಾರೆ ಭೂಮಿಕಾ. "ಖಂಡಿತಾ ನಾನು ನನ್ನ ಪ್ರೀತಿಯನ್ನು ಭೂಮಿಕಾರಿಗೆ ತಿಳಿಸುವೆ" ಎಂದು ಗೌತಮ್‌ ಮನಸ್ಸಿನಲ್ಲಿ ದೃಢ ನಿರ್ಧಾರ ಮಾಡುತ್ತಾರೆ.

ಜೈದೇವ್‌ಗೆ ಎಚ್ಚರಿಸಿದ ಶಕುಂತಲಾದೇವಿ

ಇನ್ನೊಂದೆಡೆ ಜೈದೇವ್‌ ಮ್ತು ಮನೆಹಾಳ ಮಾವ ಮಾತನಾಡುತ್ತಾ ಇರುತ್ತಾರೆ. ಅಲ್ಲಿಗೆ ಬಂದ ಶಕುಂತಲಾ ಜೈದೇವ್‌ ಕೆನ್ನೆಗೆ ಹೊಡೆಯುತ್ತಾರೆ. ಇವನು ನಮ್ಮ ಪಾರ್ಥನ ಮೇಲೆ ರೌಡಿಗಳನ್ನು ಬಿಟ್ಟು ಹೊಡೆದಿದ್ದಾನೆ ಎಂದು ಶಕುಂತಲಾದೇವಿ ಹೇಳುತ್ತಾರೆ. "ಹೆತ್ತ ಕರುಳ ಸಂಕಟ ಇವನಿಗೆ ಗೊತ್ತ?" ಎಂದು ಹೇಳುತ್ತಾರೆ. "ಇದೇ ಲಾಸ್ಟ್‌ ನೀನು ಮತ್ತೆ ಪಾರ್ಥನ ವಿಷಯಕ್ಕೆ ಹೋದ್ರೆ ಏನು ಮಾಡ್ತಿನಿ ಅಂತ ಗೊತ್ತಿಲ್ಲ. ನಿನ್ನಂತೆ ಅವನೂ ನನ್ನ ಮಗ ಅಂತ ಮರೀಬೇಡ. ಅದು ನಿನಗೆ ನೆನಪಿರಲಿ" ಎಂದು ಶಕುಂತಲಾದೇವಿ ಎಚ್ಚರಿಸುತ್ತಾರೆ. ಈ ಮೂಲಕ ಪಾರ್ಥನ ವಿರುದ್ಧ ರೌಡಿಗಳನ್ನು ಬಿಟ್ಟ ಜೈದೇವ್‌ಗೆ ಬಯ್ಯುತ್ತಾರೆ. ನನ್ನ ಹುಡುಗಿ ನನಗೆ ಮಾತ್ರ ಸಿಗಬೇಕು ಎಂದು ಈ ರೀತಿ ಮಾಡಿದ ಜೈದೇವ್‌ಗೆ ಟೆನ್ಷನ್‌ ಆಗುತ್ತದೆ. ಸೀರಿಯಲ್‌ ಮುಂದುವರೆಯುತ್ತದೆ.

Whats_app_banner