ಕನ್ನಡ ಸುದ್ದಿ  /  ಮನರಂಜನೆ  /  ಗೌತಮ್‌- ಭೂಮಿಕಾರಿಗೆ ಮೊದಲ ರಾತ್ರಿಯ ಆತಂಕ, ಮಹಿಮಾಳಿಗೂ ಟಿಸಿಲೋಡೆಯಿತು ಮಗು ಪಡೆಯುವ ಆಸೆ; ಅಮೃತಧಾರೆ ಸೀರಿಯಲ್‌ ಕಥೆ

ಗೌತಮ್‌- ಭೂಮಿಕಾರಿಗೆ ಮೊದಲ ರಾತ್ರಿಯ ಆತಂಕ, ಮಹಿಮಾಳಿಗೂ ಟಿಸಿಲೋಡೆಯಿತು ಮಗು ಪಡೆಯುವ ಆಸೆ; ಅಮೃತಧಾರೆ ಸೀರಿಯಲ್‌ ಕಥೆ

Amruthadhaare Serial Yesterday Episode: ಅಮೃತಧಾರೆ ಧಾರಾವಾಹಿಯಲ್ಲಿ ಫಸ್ಟ್‌ ನೈಟ್‌ ಸಂಭ್ರಮ. ಭೂಮಿಕಾ ಒಪ್ಪಿದ್ಲು ಎಂದು ಗೌತಮ್‌ಗೆ ಹೇಳಿ, ಗೌತಮ್‌ ಒಪ್ಪಿದ ಎಂದು ಭೂಮಿಕಾಗೆ ಹೇಳಿ ಅಜ್ಜಮ್ಮ ಹೇಗೋ ಫಸ್ಟ್‌ ನೈಟ್‌ಗೆ ಇಬ್ಬರನ್ನೂ ಒಪ್ಪಿಸಿದ್ದಾರೆ. ಇದೇ ಸಮಯದಲ್ಲಿ ಮಗು ಪಡೆಯುವ ಬಯಕೆ ಮಹಿಮಾಳಿಗೂ ಆಗಿದೆ.

ಗೌತಮ್‌- ಭೂಮಿಕಾರಿಗೆ ಮೊದಲ ರಾತ್ರಿಯ ಆತಂಕ, ಮಹಿಮಾಳಿಗೂ ಟಿಸಿಲೋಡೆಯಿತು ಮಗು ಪಡೆಯುವ ಆಸೆ
ಗೌತಮ್‌- ಭೂಮಿಕಾರಿಗೆ ಮೊದಲ ರಾತ್ರಿಯ ಆತಂಕ, ಮಹಿಮಾಳಿಗೂ ಟಿಸಿಲೋಡೆಯಿತು ಮಗು ಪಡೆಯುವ ಆಸೆ

ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಶೋಭನಾ ಸಂಭ್ರಮ. ಭೂಮಿಕಾರ ಬಳಿ ಅಜ್ಜಮ್ಮ "ಇವತ್ತು ನಿಮಗೆ ಶೋಭನಾ. ಈ ವಿಷಯ ಗೌತಮ್‌ಗೂ ಗೊತ್ತು. ಅವರೇ ಜ್ಯೋತಿಷಿಯನ್ನು ಕರೆಸಿದ್ದು" ಎಂದು ಅಜ್ಜಮ್ಮ ಸುಳ್ಳು ಹೇಳಿದಾಗ ಭೂಮಿಕಾಳಿಗೆ ಅಚ್ಚರಿಯಾಗುತ್ತದೆ. "ಓ ಮೈ ಗಾಡ್‌, ಗೌತಮ್‌ ಇದನ್ನು ಮಾಡಿದ್ದ" ಎಂದುಕೊಳ್ಳುತ್ತಾರೆ. ""ಇವತ್ತು ಬಿಟ್ಟರೆ ಇನ್ನು ಎರಡು ತಿಂಗಳು ಒಳ್ಳೆಯ ಮುಹೂರ್ತ ಇಲ್ಲ. ನನಗೆ ಮರಿಮಕ್ಕಳನ್ನು ಆಡಿಸುವ ಆಸೆ. ನನ್ನ ಆಸೆ ಈಡೇರಿಸಬೇಕು. ಇವತ್ತು ಸಂಜೆ ನೀನು ಮದುವೆ ಹೆಣ್ಣಿನ ರೀತಿ ತಯಾರಾಗಬೇಕು" ಎನ್ನುತ್ತಾರೆ ಅಜ್ಜಮ್ಮ. "ಅವರು ಒಪ್ಪಿದ ಮೇಲೆ ಇನ್ನೇನು. ನನಗೆ ಒಪ್ಪಿಗೆ" ಎನ್ನುತ್ತಾರೆ ಭೂಮಿಕಾ.

ಟ್ರೆಂಡಿಂಗ್​ ಸುದ್ದಿ

ಇನ್ನೊಂದೆಡೆ ಜೀವನ್‌ ಮತ್ತು ಮಹಿಮಾ ಮಾತನಾಡುತ್ತ ಇರುತ್ತಾರೆ. "ನನಗೆ ಎಲ್ಲರಿಗೂ ಟೈಮ್‌ ಕೊಡಲು ಆಗುತ್ತಿಲ್ಲ" ಎಂದು ಜೀವನ್‌ ಹೇಳುತ್ತಾನೆ. "ನನ್ನ ಬಗ್ಗೆ ನನ್ನ ಗಂಡನಿಗೆ ಪ್ರೀತಿ ಇರಬೇಕು ಎಂದು ಹೆಂಡತಿ ಬಯಸುತ್ತಾಳೆ. ಹಣ ಸಂಪತ್ತು ಎಲ್ಲಾ ಒಂದು ಲೆವೆಲ್‌ ತನಕ ಖುಷಿ ಕೊಡುತ್ತದೆ" ಎಂದು ಮಹಿಮಾ ಹೇಳುತ್ತಾಳೆ. "ದುಡ್ಡು ಮಾಡೋ ರೇಸ್‌ನಲ್ಲಿ ನನ್ನ ಮರಿಬೇಡ" ಎಂದು ಮಹಿ ಹೇಳುತ್ತಾಳೆ. "ಇನ್ನು ನಿನಗೆ ಹರ್ಟ್‌ ಮಾಡೋಲ್ಲ" ಎಂದು ಹೇಳುತ್ತಾಳೆ. "ನಾವಿಬ್ಬರು ಚೆಕಪ್‌ ಮಾಡಲು ಹೋಗೋಣ್ವ. ನಮಗೆ ಮಗು ಆದ್ರೆ ಲೈಫ್‌ ಇನ್ನಷ್ಟು ಕಂಪ್ಲಿಟ್‌ ಅನಿಸುತ್ತೆ" ಎನ್ನುತ್ತಾಳೆ. ಇದಕ್ಕೆ ಓಕೆ ಅನ್ತಾನೆ ಜೀವನ್‌. ಈ ಮೂಲಕ ಮಹಿಮಾಳ ಮನದಲ್ಲೂ ಮಗುವಿನ ಕನಸು ಮೂಡಿದೆ.

ಅಜ್ಜಮ್ಮ ಈಗ ಗೌತಮ್‌ನ ಮನಸ್ಸು ಬದಲಾಯಿಸುತ್ತಾ ಇದ್ದಾರೆ. "ಭೂಮಿಕಾ ಶೋಭನಾಕ್ಕೆ ಒಂದೇ ಮಾತಲ್ಲಿ ಒಪ್ಪಿದಳು. ನೀನೇ ನಿಧಾನ" ಎನ್ನುತ್ತಾರೆ. "ಭೂಮಿಕಾ ಒಪ್ಪಿದ್ರ. ಅವರಿಗೆ ನಾಚಿಕೆ ಆಗಿಲ್ವ" ಎಂದೆಲ್ಲ ಗೌತಮ್‌ ಕೇಳುತ್ತಾನೆ. ಭೂಮಿಕಾ ಇಷ್ಟೊಂದು ಈಸಿಯಾಗಿ ಒಪ್ಪಿಕೊಂಡ್ರ ಎಂದುಕೊಳ್ಳುತ್ತಾನೆ. ಅಜ್ಜಮ್ಮ ಆನಂದ್‌ನನ್ನು ಕರೆಸಿಕೊಂಡು ಎಲ್ಲದಕ್ಕೂ ರೆಡಿ ಮಾಡಿಸ್ತಾರೆ. "ಅವರು ಹೇಗೆ ಒಪ್ಪಿಕೊಂಡ್ರು" ಎಂದು ಆನಂದ್‌ ಕೇಳುತ್ತಾನೆ. "ನಾನು ರಾಜಕಾರಣ ಮಾಡಿದೆ. ಅವನಲ್ಲಿ ಇವಳು ಒಪ್ಪಿದ್ಲು, ಇವಳಲ್ಲಿ ಅವನು ಒಪ್ಪಿದ್ಲು ಎಂದು ಹೇಳಿ ಒಪ್ಪಿಸಿದೆ" ಎಂದು ಅಜ್ಜಮ್ಮ ಹೇಳುತ್ತಾರೆ. "ಇನ್ನೂ ಗ್ಯಾರಂಟಿ ಗೆಳೆಯನ ಫಸ್ಟ್‌ ನೈಟ್‌, ಗಾಜಿನ ಲೋಟದಲ್ಲಿ ಹಾಲನ್ನು ಹಿಡಿದು.... " ಎಂದು ಆಪ್ತಮಿತ್ರ ಮತ್ತು ಅಜ್ಜಮ್ಮ ಹಾಡುತ್ತಾರೆ.

ಆಫೀಸ್‌ನಲ್ಲಿ ಗೌತಮ್‌ ಟೆನ್ಷನ್‌ನಲ್ಲಿದ್ದಾನೆ. ಆಫೀಸ್‌ ಫೈಲ್‌ಗಳನ್ನು ನೋಡಲೂ ಮೂಡ್‌ ಇಲ್ಲ. ಫಸ್ಟ್‌ ನೈಟ್‌ ಕುರಿತು ತುಂಬಾ ತಲೆಕೆಡಿಸಿಕೊಂಡಿದ್ದಾರೆ. ಉದ್ಯೋಗಿಯೊಬ್ಬರು ಫೈಲ್‌ ತಂದಾಗ "ಯಾವುದೂ ಸರಿ ಇಲ್ಲ ಯಾರು ರೆಡಿ ಮಾಡಿದ್ದು" ಎನ್ನುತ್ತಾರೆ. "ನೀವೇ ಮಾಡಿದ್ದು" ಅನ್ನುತ್ತಾನೆ. ಒಟ್ಟಾರೆ ಆಫೀಸ್‌ನಲ್ಲಿ ಗೌತಮ್‌ ತಲೆ ಓಡುತ್ತ ಇಲ್ಲ.

ಆನಂದ್‌ ಎಲ್ಲಾ ಸಿದ್ಧತೆ ಮಾಡಿದ್ದಾನೆ. ಗೌತಮ್‌ ಭೂಮಿಕಾರ ಕೋಣೆಯನ್ನು ರೆಡಿ ಮಾಡಿದ್ದಾನೆ. ಅಜ್ಜಮ್ಮ ಆನಂದ್‌- ಗೌತಮ್‌ರ ಸ್ನೇಹವನ್ನು ಹೊಗಳುತ್ತಾರೆ. ಗುಂಡುವಿನ ಕುರಿತು ಒಂದಿಷ್ಟು ಭಾವುಕರಾಗಿ ಮಾತನಾಡುತ್ತಾರೆ. ಗೌತಮ್‌ ಬಂದಾಗ "ಕೆಳಗಡೆ ಭೂಮಿಕಾ ರೆಡಿ ಆಗುತ್ತಿದ್ದಾಳೆ. ನೀನೂ ರೆಡಿ ಆಗು" ಎಂದು ಗೌತಮ್‌ನನ್ನು ಮದುಮಗನಂತೆ ರೆಡಿ ಮಾಡುತ್ತಾರೆ. ಫಸ್ಟ್‌ ನೈಟ್‌ಗೆ ರೆಡಿಯಾದ ಕೋಣೆಯನ್ನು ನೋಡಿ ಗೌತಮ್‌ಗೆ ಆತಂಕವಾಗುತ್ತದೆ. ಇನ್ನೊಂದೆಡೆ ಭೂಮಿಕಾಳನ್ನು ಮಲ್ಲಿ ಮದುಮಗಳಂತೆ ರೆಡಿ ಮಾಡಿದ್ದಾಳೆ.

ರಾತ್ರಿಯಾಗಿದೆ. ಗೌತಮ್‌ ಡ್ರೆಸ್‌ ತೊಟ್ಟು ಸಿದ್ಧವಾಗಿದ್ದಾನೆ. ಆನಂದ್‌ ಗೌತಮ್‌ ಕೈಗೆ ಮಲ್ಲಿಗೆ ಕಟ್ಟುತ್ತಾನೆ. ಆಲ್‌ ದಿ ಬೆಸ್ಟ್‌, ಗೆದ್ದು ಬಾ ಗೆಳೆಯ ಎಂದು ಆನಂದ್‌ ಹೇಳುತ್ತಾನೆ. ಗೌತಮ್‌ ತನ್ನ ಒಲವಿನ ಪತ್ನಿಗಾಗಿ ಕಾಯುತ್ತಾನೆ. ಫಸ್ಟ್‌ ನೈಟ್‌ ಮುಂದಿನ ಸಂಚಿಕೆಗೆ ಮುಂದುವರೆದಿದೆ.

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)

ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)

ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)

ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)

ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)

ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)

ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)

ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)

ರಣವ್‌: ಜೈದೇವ್‌

ಚಂದನ್‌: ಅಶ್ವಿನಿ

ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)

ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)

ಟಿ20 ವರ್ಲ್ಡ್‌ಕಪ್ 2024