ಗೌತಮ್‌ ಪ್ರಪೋಸ್‌ ಮಾಡಿ ಹಿಂತುರುಗಿದಾಗ ಪತ್ನಿ ಕಾಣೆ; ಕೆಂಚನಿಂದ ಕಿಡ್ನ್ಯಾಪ್‌ ಆದ್ರ ಭೂಮಿಕಾ; ಅಮೃತಧಾರೆ ಸೀರಿಯಲ್‌ನಲ್ಲಿ ಸಿನಿಮೀಯ ತಿರುವು
ಕನ್ನಡ ಸುದ್ದಿ  /  ಮನರಂಜನೆ  /  ಗೌತಮ್‌ ಪ್ರಪೋಸ್‌ ಮಾಡಿ ಹಿಂತುರುಗಿದಾಗ ಪತ್ನಿ ಕಾಣೆ; ಕೆಂಚನಿಂದ ಕಿಡ್ನ್ಯಾಪ್‌ ಆದ್ರ ಭೂಮಿಕಾ; ಅಮೃತಧಾರೆ ಸೀರಿಯಲ್‌ನಲ್ಲಿ ಸಿನಿಮೀಯ ತಿರುವು

ಗೌತಮ್‌ ಪ್ರಪೋಸ್‌ ಮಾಡಿ ಹಿಂತುರುಗಿದಾಗ ಪತ್ನಿ ಕಾಣೆ; ಕೆಂಚನಿಂದ ಕಿಡ್ನ್ಯಾಪ್‌ ಆದ್ರ ಭೂಮಿಕಾ; ಅಮೃತಧಾರೆ ಸೀರಿಯಲ್‌ನಲ್ಲಿ ಸಿನಿಮೀಯ ತಿರುವು

Amruthadhaare Serial Yesterday Episode: ಭೂಮಿಕಾಳನ್ನೇ ಕಿಡ್ನ್ಯಾಪ್‌ ಮಾಡುವಂತೆ ಜೈದೇವ್‌ ಕೆಂಚನಿಗೆ ತಿಳಿಸುತ್ತಾನೆ. ಗೌತಮ್‌ ತನ್ನ ಮನದ ಮಾತು ಹೇಳಿ ಐ ಲವ್‌ ಯು ಎಂದು ಪ್ರಪೋಸ್‌ ಮಾಡಿ ಹಿಂತುರುಗಿ ನೋಡಿದಾಗ ಭೂಮಿಕಾ ಅಲ್ಲಿರಲಿಲ್ಲ. ಅಮೃತಧಾರೆ ಸೀರಿಯಲ್‌ನಲ್ಲಿ ಮತ್ತೊಂದು ತಿರುವು ಬಂದಿದೆ.

ಗೌತಮ್‌ ಪ್ರಪೋಸ್‌ ಮಾಡಿ ಹಿಂತುರುಗಿದಾಗ ಪತ್ನಿ ಕಾಣೆ; ಕೆಂಚನಿಂದ ಕಿಡ್ನ್ಯಾಪ್‌ ಆದ್ರ ಭೂಮಿಕಾ
ಗೌತಮ್‌ ಪ್ರಪೋಸ್‌ ಮಾಡಿ ಹಿಂತುರುಗಿದಾಗ ಪತ್ನಿ ಕಾಣೆ; ಕೆಂಚನಿಂದ ಕಿಡ್ನ್ಯಾಪ್‌ ಆದ್ರ ಭೂಮಿಕಾ

ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿಯ ಕಥೆ ಮುಗಿಸುವ ಜೈದೇವ್‌ ಮೊದಲ ಪ್ರಯತ್ನ ವಿಫಲವಾಗಿದೆ. ಇದಕ್ಕಾಗಿ ಎರಡನೇ ಪ್ರಯತ್ನ ಆರಂಭಿಸಿದ್ದಾನೆ. ಮಲ್ಲಿಯ ಊಟಕ್ಕೆ ಮತ್ತಿನ ಔಷಧ ಬೆರೆಸಿದ್ದಾನೆ. ಪ್ರಜ್ಞೆ ತಪ್ಪಿ ಬಿದ್ದಿರುವ ಮಲ್ಲಿಯನ್ನು ಹೊರಗೆ ಸಾಗಿಸಿ ಸಾಯಿಸುವ ಪ್ಲ್ಯಾನ್‌ ಆತನದ್ದು. ಆದರೆ, ಮನೆಗೆ ಮಹಿಮಾ ಬಂದಿರುವಾಗ ಈ ರೀತಿ ಮತ್ತು ಬೆರೆಸಿದ್ದ ಊಟ ತರುತ್ತಾನೆ. ಈ ಊಟವನ್ನು ನನಗೆ ಇಷ್ಟು ಪ್ರೀತಿಯಿಂದ ಊಟ ನೀಡಿಯೇ ಇಲ್ಲ ನಾನು ತಿನ್ತಿನಿ ಎಂದು ತೆಗೆದುಕೊಳ್ಳುತ್ತಾಳೆ. ಇಷ್ಟು ವರ್ಷ ನನಗೆ ಜೈದೇವ್‌ ಅಣ್ಣ ಪ್ರೀತಿಯಿಂದ ಊಟ ಕಲೆಸಿಕೊಟ್ಟಿಲ್ಲ, ಅದಕ್ಕೆ ಇದನ್ನು ನಾನು ತಿನ್ತಿನಿ ಅಂದಾಗ ಶಕುಂತಲಾ ಮತ್ತು ಜೈದೇವ್‌ ತಬ್ಬಿಬ್ಬಾಗುತ್ತಾರೆ. ಹಾಗಾದರೆ ಮಲ್ಲಿಗೆ ಎಂದು ಶಕುಂತಲಾ ಕೇಳುತ್ತಾಳೆ. ಮಲ್ಲಿಗೆ ಅಣ್ಣ ಇನ್ನೊಂದು ಬಾರಿ ಕಲೆಸಿಕೊಂಡು ತಂದುಕೊಡ್ತಾನೆ ಎನ್ನುತ್ತಾಳೆ. ಇಲ್ಲ ಮಲ್ಲಿ ಪ್ರೆಗ್ನೆಂಟ್‌ ಇದನ್ನು ಮಲ್ಲಿ ತಿನ್ಲಿ ಎನ್ನುತ್ತಾನೆ ಜೈದೇವ್‌. ಇನ್ನೊಂದು ಬಾರಿ ಕಲೆಸಿಕೊಂಡು ಬರೋದನ್ನು ಮಲ್ಲಿಗೆ ಕೊಡ್ಲಿ ಎನ್ನುತ್ತಾಳೆ ಮಹಿಮಾ. ನನಗೆ ಬೇರೆ ಕಲೆಸಿ ತನ್ನಿ ಎನ್ನುತ್ತಾಳೆ ಮಲ್ಲಿ. ಮಾತ್ರೆ ಬೆರೆಸಿರುವ ಊಟವನ್ನು ಮಹಿಮಾ ತಿನ್ನುತ್ತಾಳೆ. ನನಗೆ ಊಟ ತುಂಬಾ ತೃಪ್ತಿಯಾಯ್ತು, ಎಷ್ಟು ತೃಪ್ತಿ ಎಂದರೆ ನನಗೆ ನಿದ್ದೆ ಬರ್ತಾ ಇದೆ ಎನ್ನುತ್ತಾಳೆ ಮಹಿಮಾ. ಊಟ ಮಾಡಿ ನಿದ್ದೆ ಮಾಡಲು ಹೋಗುತ್ತಾಳೆ.

ಚಿಕ್ಕಮಗಳೂರಿನಲ್ಲಿ ಗೌತಮ್‌ ಮತ್ತು ಭೂಮಿಕ ಇಬ್ಬರೇ ಸುತ್ತಾಡಲು ಹೋಗುತ್ತಾರೆ. ಗೌತಮ್‌ ಗನ್‌ ಹಿಡಿದುಕೊಂಡು ಬರುತ್ತಾರೆ. ಇದು ಸೆಲ್ಫ್‌ ಡಿಫೆನ್ಸ್‌ಗೆ, ಗಾಳಿಯಲ್ಲಿ ಗುಂಡು ಹೊಡೆಯಲು ಇದು ಇರುವುದು ಎನ್ನುತ್ತಾರೆ. ಪ್ರಪೋಸ್‌ ಮಾಡುವ ಪ್ರೋಗ್ರಾಂಗಾಗಿ ಇಂದು ಮಹೂರ್ತವಾಗಿದೆ.

ಮಹಿಮಾಳಿಗೆ ಬಂದಿದೆ ಸಂದೇಹ

ಬೆಳಗ್ಗೆ ಎದ್ದು ಬರುತ್ತಾಳೆ ಮಹಿಮಾ. ಶಕುಂತಲಾದೇವಿಯಲ್ಲಿಗೆ ಬರುತ್ತಾಳೆ. "ನನಗೆ ಹೋಗಿ ಬಂದದ್ದಷ್ಟೇ ನೆನಪು. ನಿದ್ದೆ ಬಂದದ್ದೇ ತಿಳಿದಿಲ್ಲ. ಪ್ರಜ್ಞೆ ತಪ್ಪಿದಂತೆ ಇತ್ತು. ನನ್ನನ್ನು ಯಾರಾದರೂ ಎತ್ತಿಕೊಂಡು ಹೋದರೂ ತಿಳಿಯುತ್ತಿರಲಿಲ್ಲ" ಎನ್ನುತ್ತಾಳೆ. "ನಿನಗೆ ಚೆನ್ನಾಗಿ ಟೈಯರ್ಡ್‌ ಆಗಿರುತ್ತದೆ. ಅದಕ್ಕೆ ನಿದ್ದೆ ಬಂದಿರುತ್ತದೆ" ಎಂದು ಶಕುಂತಲಾದೇವಿ ಹೇಳುತ್ತಾಳೆ. "ನನಗ್ಯಾಕೋ ಡೌಟ್‌ ಬರುತ್ತದೆ" ಎನ್ನುತ್ತಾಳೆ ಮಹಿಮಾ. "ಮಲ್ಲಿಗೆ ಚೆನ್ನಾಗಿ ನಿದ್ದೆ ಬರಲಿ ಎಂದು ನೀವೇ ಏನೋ ಔಷಧಿ ಕೊಡ್ತಾ ಇದ್ರ" ಎಂದು ಅನುಮಾನ ವ್ಯಕ್ತಪಡಿಸುತ್ತಾಳೆ. ಇನ್ನೊಂದೆಡೆ ಜೈದೇವ್‌ ತಲೆಕೆಡಿಸಿಕೊಳ್ಳುತ್ತಾನೆ. ದೊಡ್ಡ ಪ್ಲ್ಯಾನ್‌ ಮಾಡಲೇಬೇಕು. ಈಗಲೇ ಕೆಂಚನಿಗೆ ಫೋನ್‌ ಮಾಡಿ ಭೂಮಿಕಾಳನ್ನು ಕಿಡ್ನ್ಯಾಪ್‌ ಮಾಡು ಎನ್ನುತ್ತೇನೆ ಎಂದು ಯೋಚಿಸುತ್ತಾನೆ ಜೈದೇವ್‌.

ಗೌತಮ್‌ ಮತ್ತು ಭೂಮಿಕಾ ಚಿಕ್ಕಮಗಳೂರಿನ ಸುಂದರವಾದ ಕಾಫಿತೋಟದಲ್ಲಿ ಸುತ್ತುತ್ತಿದ್ದಾರೆ. ಓಪನ್‌ ಜೀಪ್‌ನಲ್ಲಿ ಪ್ರಯಾಣಿಸುತ್ತಿದ್ದಾರೆ. ಇನ್ನೊಂದೆಡೆ ಭೂಮಿಕಾಳನ್ನು ಕಿಡ್ನ್ಯಾಪ್‌ ಮಾಡಲು ಕೆಂಚನಿಗೆ ಜೈದೇವ್‌ ಸೂಚನೆ ನೀಡುತ್ತಾನೆ. ಹೀಗೆ ಜೈದೇವ್‌ ಸೂಚನೆಯ ಮೇರೆಗೆ ಕೆಂಚ ಅವರನ್ನು ಫಾಲೋ ಮಾಡುತ್ತಾನೆ.

ಭೂಮಿಕಾಳನ್ನು ಕಿಡ್ನ್ಯಾಪ್‌ ಮಾಡಿದ್ನ ಕೆಂಚ

 

ಭೂಮಿಕಾಳನ್ನು ಗೌತಮ್‌ ಚಿಕ್ಕಮಗಳೂರಿನ ಎತ್ತರವಾದ ಸ್ಥಳಕ್ಕೆ ಕರೆದುಕೊಂಡು ಬಂದಿದ್ದಾನೆ. ಹೇಳಿದರೆ ಇದೇ ಜಾಗದಲ್ಲಿ ಹೇಳಬೇಕು ಎನ್ನುತ್ತಾನೆ. ಮಾಮೂಲಿ ವಿಷಯದಲ್ಲಿ ಪಟಾಪಟ್‌ ಎನ್ನುತ್ತಿದ್ದೆ. ಹೇಳಿ ಎನ್ನುತ್ತಾಳೆ. ತಡವರಿಸುತ್ತಾರೆ. "ನಾನು ಹೇಳ್ಕೋಬೇಕೋ ಅನುತ್ತೇನೆ, ಅದಕ್ಕೆ ಹೀಗೆ ತಿರುಗಿ ಇರ್ತಿನಿ. ಇದೇ ರೀತಿ ಹೇಳ್ತಿನಿ" ಎನ್ನುತ್ತಾನೆ. "ಭೂಮಿಕಾ ಜೀವನ ಎಷ್ಟು ವಿಚಿತ್ರ ಅಲ್ವಾ? ನಾವು ತುಂಬಾ ವಿಷಯಗಳನ್ನು ಪ್ಲ್ಯಾನ್‌ ಮಾಡುತ್ತೇವೆ. ಕೆಲವು ವಿಷಯ ಅನ್‌ಪ್ಲ್ಯಾನ್‌ ಆಗಿರುತ್ತವೆ" ಎಂದೆಲ್ಲ ಹೇಳುತ್ತಾರೆ ಡುಮ್ಮ ಸರ್‌. "ಆಲ್‌ಮೋಸ್ಟ್‌ ಹತ್ತಿರವಿದ್ದರೆ, ಇನ್ನೇನೂ ಹೇಳಿಬಿಡ್ತಾರೆ" ಎಂದುಕೊಳ್ಳುತ್ತಾಳೆ ಭೂಮಿಕಾ. ... ಹೀಗೆ ಒಂದಿಷ್ಟು ಮಾತುಗಳನ್ನು ಹೇಳಿದ ಗೌತಮ್‌ "ನನ್ನಲ್ಲಿ ತುಂಬಾ ಚೇಂಜಸ್‌ಗೆ ಕಾರಣವಾದ್ರಿ. ನನ್ನ ಜೀವನದ ಮುಖ್ಯ ಭಾಗ ಆದ್ರಿ. ನನ್ನ ಆಟೋಗ್ರಫಿಯಲ್ಲಿ ಎರಡು ಪಾರ್ಟ್‌ ಇರುತ್ತದೆ. ಒಂದು ನೀವು ನನ್ನ ಜೀವನಕ್ಕೆ ಬರುವ ಮೊದಲಿನದ್ದು. ಅದು ಬ್ಲ್ಯಾಕ್‌ ಆಂಡ್‌ ವೇಟ್‌ನಲ್ಲಿರುತ್ತದೆ. ಇನ್ನೊಂದು ನೀವು ಬಂದ ಬಳಿಕದ್ದು. ಅದು ಕಲರ್‌ಫುಲ್‌" ಎನ್ನುತ್ತಾನೆ. "ನಾನು ನಿಮ್ಮನ್ನು ತುಂಬಾ ಪ್ರೀತಿಸ್ತಿನಿ ಭೂಮಿಕಾ" ಎನ್ನುತ್ತಾನೆ. ಭೂಮಿಕಾ ಐ ಲವ್‌ ಯು ಎನ್ನುತ್ತಾನೆ. ಹಿಂತುರುಗಿ ನೋಡಿದಾಗ ಅಲ್ಲಿ ಭೂಮಿಕಾ ಇರುವುದಿಲ್ಲ. ಗೌತಮ್‌ ಆ ಕಡೆ ಮುಖ ಮಾಡಿಕೊಂಡು ಪ್ರಪೋಸ್‌ ಮಾಡುತ್ತಿದ್ದ ಸಂದರ್ಭದಲ್ಲಿ ಬಹುಶಃ ಕೆಂಚ ಕಿಡ್ನ್ಯಾಪ್‌ ಮಾಡಿರುತ್ತಾನೆ.

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)

ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)

ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)

ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)

ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)

ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)

ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)

ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)

ರಣವ್‌: ಜೈದೇವ್‌

ಚಂದನ್‌: ಅಶ್ವಿನಿ

ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)

ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)

Whats_app_banner