ಕನ್ನಡ ಸುದ್ದಿ  /  ಮನರಂಜನೆ  /  Amrithadhare: ಗೌತಮ್‌ ಹಾಸಿಗೆ ಮೇಲೆ, ಭೂಮಿಕಾ ಚಾಪೆ ಮೇಲೆ ಮಲಗೋ ವಿಷ್ಯ ಅಜ್ಜಮ್ಮಗೆ ಗೊತ್ತಾಯ್ತು, ಅಮೃತಧಾರೆ ಸೀರಿಯಲ್‌ ಸ್ಟೋರಿ

Amrithadhare: ಗೌತಮ್‌ ಹಾಸಿಗೆ ಮೇಲೆ, ಭೂಮಿಕಾ ಚಾಪೆ ಮೇಲೆ ಮಲಗೋ ವಿಷ್ಯ ಅಜ್ಜಮ್ಮಗೆ ಗೊತ್ತಾಯ್ತು, ಅಮೃತಧಾರೆ ಸೀರಿಯಲ್‌ ಸ್ಟೋರಿ

Amruthadhaare Serial Yesterday Episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಕೆಲವು ಬೆಳವಣಿಗೆಗಳು ನಡೆದಿವೆ. ಆನಂದ್‌ ಬಾಯ್ತಪ್ಪಿ ಅಜ್ಜಮ್ಮನ ಬಳಿ ಗೌತಮ್‌ ಮತ್ತು ಭೂಮಿಕಾ ಗಂಡ ಹೆಂಡತಿಯಂತೆ ಇರಲಿಲ್ಲ ಎಂಬ ಸತ್ಯ ಹೇಳುತ್ತಾನೆ. ಇನ್ನೊಂದೆಡೆ ಸುಳ್ಳು ಹೇಳಲು ಹೋಗಿ ಆಸ್ಪತ್ರೆಯಲ್ಲಿ ಶಕುಂತಲಾದೇವಿ ಇದ್ದಾರೆ.

ಗೌತಮ್‌ ಹಾಸಿಗೆ ಮೇಲೆ, ಭೂಮಿಕಾ ಚಾಪೆ ಮೇಲೆ ಮಲಗೋ ವಿಷ್ಯ ಅಜ್ಜಮ್ಮಗೆ ಗೊತ್ತಾಯ್ತು
ಗೌತಮ್‌ ಹಾಸಿಗೆ ಮೇಲೆ, ಭೂಮಿಕಾ ಚಾಪೆ ಮೇಲೆ ಮಲಗೋ ವಿಷ್ಯ ಅಜ್ಜಮ್ಮಗೆ ಗೊತ್ತಾಯ್ತು

Amruthadhaare Serial Yesterday Episode: ಅಮೃತಧಾರೆ ಧಾರಾವಾಹಿಯಲ್ಲಿ ಅನಾರೋಗ್ಯದ ನಾಟಕವಾಡಿದ ಶಕುಂತಲಾದೇವಿಯನ್ನು ಗೌತಮ್‌ ಆಸ್ಪತ್ರೆಗೆ ಕರೆದೊಯ್ಯುತ್ತಾರೆ. ಈ ಸಮಯದಲ್ಲಿ ಆಸ್ಪತ್ರೆ ಬೇಡ ಎಂದು ಶಕುಂತಲಾದೇವಿ ಹೇಳಿದರೂ ಯಾರೂ ಕೇಳುವುದಿಲ್ಲ. ಅಜ್ಜಮ್ಮ ಅಂತೂ ಶಕುಂತಲಾದೇವಿಯನ್ನು ಸಾಕಷ್ಟು ಉರಿಸುತ್ತಾರೆ. ಸುಳ್ಳು ಹೇಳಲು ಹೋಗಿ ಶಕುಂತಲಾದೇವಿ ಆಸ್ಪತ್ರೆಗೆ ಹೋಗಬೇಕಾಯಿತು.

ಟ್ರೆಂಡಿಂಗ್​ ಸುದ್ದಿ

ಆನಂದ್‌ ಮನೆಗೆ ಬಂದಾಗ ಮನೆಯಲ್ಲಿ ಯಾರೂ ಇರುವುದಿಲ್ಲ. ಆ ಸಮಯದಲ್ಲಿ ಅಜ್ಜಮ್ಮ ಮಾತ್ರ ಇರುತ್ತಾರೆ. ಆನಂದ್‌ ಮತ್ತು ಅಜ್ಜಮ್ಮ ಮಾತನಾಡುತ್ತಾರೆ. ಗೌತಮ್‌ ಬಗ್ಗೆ ಅಜ್ಜಮ್ಮ ಮತ್ತು ಆನಂದ್‌ ಮಾತನಾಡುತ್ತಾರೆ. "ಅಮ್ಮನಿಗೆ ಈ ರೀತಿ ಆಗಿದೆ ಎಂದು ಓಡೋಡಿ ಬಂದಿದ್ದಾನೆ. ಪಾಪ ಅವನು, ಅವನ ಜೀವನದಲ್ಲಿ ಪ್ರೀತಿ ಅನ್ನೋದು ಈಗ ಆರಂಭವಾಗಿದೆ. ಅತ್ತಿಗೆ ಮತ್ತು ಅವನ ನಡುವೆ ಏನೋ ಆಗುತ್ತಿತ್ತು" ಎಂದು ಬಾಯ್ತಪ್ಪಿ ಆನಂದ್‌ ಹೇಳುತ್ತಾರೆ. "ಏನು ಹೇಳ್ತಾ ಇದ್ದೀ ಆಪ್ತಮಿತ್ರ, ಅವರಿಬ್ಬರ ನಡುವೆ ಏನಾಗಿತ್ತು?" ಎಂದು ಅಜ್ಜಮ್ಮ ಕೇಳುತ್ತಾರೆ. "ನನಗೆ ಉತ್ತರ ಬೇಕು. ಅವರಿಬ್ಬರ ನಡುವೆ ಏನು ನಡೀತಾ ಇದೆ. ನನಗೆ ಎಲ್ಲವೂ ಗೊತ್ತಾಗಬೇಕು" ಎಂದು ಕೇಳುತ್ತಾರೆ. "ಅದು ಕಥೆ ಅಲ್ಲ ಅಜ್ಜಿ, ಅದು ವ್ಯಥೆ. ಅವರಿಬ್ಬರ ನಡುವೆ ಪ್ರೀತಿ ಇರಲಿಲ್ಲ. ಪ್ರೀತಿ ರೀತಿ ನಟಿಸ್ತಾ ಇದ್ರು. ಇವರಿಬ್ಬರ ನಡುವೆ ಒಳ್ಳೆಯ ಫ್ರೆಂಡ್‌ಶಿಪ್‌ ಇತ್ತು. ಈಗ ಈ ಫ್ರೆಂಡ್‌ಶಿಪ್‌ ಈಗ ಲವ್‌ ಆಗಿದೆ. ಈಗಷ್ಟೇ ಕಾಲೇಜು ಹುಡುಗರ ರೀತಿ ಪ್ರಪೋಸ್‌ ಮಾಡಿದ್ದಾರೆ" ಎಂದು ಆನಂದ್‌ ಹೇಳುತ್ತಾನೆ.

ಅಜ್ಜಮ್ಮನಿಗೆ ಗೊತ್ತಾಯ್ತು ಸತ್ಯ

"ಈಗಲೂ ಇವರು ಗಂಡ ಹೆಂಡತಿಯರಂತೆ ಇಲ್ಲ. ಗೌತಮ್‌ ಹಾಸಿಗೆಯ ಮೇಲೆ, ಭೂಮಿಕಾ ಚಾಪೆ ಮೇಲೆ ಮಲಗುತ್ತಾರೆ" ಎಂದು ಆನಂದ್‌ ಸತ್ಯ ಹೇಳುತ್ತಾನೆ. "ನನಗೆ ಈಗ ಗೊತ್ತಾಯಿತು. ಅದಕ್ಕೆ ಮಗು ಆಗಿಲ್ಲ. ಆದಷ್ಟು ಬೇಗ ಗೋಡೆ ಒಡೆದು ಹಾಕಬೇಕು" ಎನ್ನುತ್ತಾರೆ ಅಜ್ಜಮ್ಮ. "ಮನೆಯಲ್ಲಿ ನಿಮ್ಮಂಥ ಹಿರಿಯರು ಇರಬೇಕು. ನೀವೇ ವ್ಯವಸ್ಥೆ ಮಾಡಬೇಕು" ಎಂದು ಆನಂದ್‌ ಹೇಳುತ್ತಾನೆ. "ಅದು ಹೇಗೆ ಗುಡ್‌ ನ್ಯೂಸ್‌ ಕೊಡೊಲ್ವ ನಾನೂ ನೋಡ್ತಿನಿ" ಎನ್ನುತ್ತಾನೆ. ಇವರ ಮಾತುಗಳನ್ನು ಮರೆಯಲ್ಲಿ ಕೆಲಸದಾಕೆ ಕೇಳುತ್ತಾ ಇರುತ್ತಾಳೆ.

 

ಆಸ್ಪತ್ರೆಯಲ್ಲಿ ಶಕುಂತಲಾದೇವಿ ಟೆನ್ಷನ್‌ನಲ್ಲಿದ್ದಾರೆ. ಡ್ರಾಮಾ ಮಾಡಲು ಹೋಗಿ ಆಸ್ಪತ್ರೆಯಲ್ಲಿ ಇರುವಂತೆ ಆಯ್ತು ಎಂದು ಶಕುಂತಲಾದೇವಿ ಹೇಳುತ್ತಾರೆ. ಶಕುಂತಲಾ ಮತ್ತು ಮನೆಹಾಳ ಮಾವ ಇಬ್ಬರಿಗೂ ಆಸ್ಪತ್ರೆ ವಾಸ ಶುರುವಾಗಿದೆ. ಇದೇ ಸಮಯದಲ್ಲಿ ಮಾವ ಒಂದು ವಿಷಯ ಹೇಳುತ್ತಾನೆ. "ಮನೆ ಕೆಲಸದಾಕೆ ಫೋನ್‌ ಮಾಡಿದ್ಲು. ಆನಂದ ಅಜ್ಜಮ್ಮನಿಗೆ ಗೌತಮ್‌ ಮತ್ತು ಭೂಮಿಕಾರ ವಿಷಯ ಹೇಳಿದ್ದಾನೆ" ಎಂದು ಹೇಳುತ್ತಾನೆ. ಶಕುಂತಲಾದೇವಿಗೆ ಮತ್ತೊಂದು ಟೆನ್ಷನ್‌ ಆರಂಭವಾಗಿದೆ. ಇದೇ ಸಮಯದಲ್ಲಿ ಮನೆಯಲ್ಲಿ ಮಲ್ಲಿಯ ಮುಂದೆ ಜೈದೇವ್‌ ಒಳ್ಳೆಯವನಂತೆ ನಾಟಕ ಮುಂದುವರೆಸುತ್ತಾನೆ. ಒಟ್ಟಾರೆ ಭೂಮಿಕಾಳ ಮುಂದೆ ನಾನು ಒಳ್ಳೆಯವನಾಗಿದ್ದೇನೆ ಎಂದು ತೋರಿಸಲು ಈ ರೀತಿ ಮಾಡುತ್ತಾನೆ.

ಭೂಮಿಕಾ ಅಮ್ಮನ ಮನೆಗೆ ಹೋಗಬೇಕೆಂದುಕೊಂಡಾಗ ಅಜ್ಜಮ್ಮ ಕರೆಯುತ್ತಾರೆ. ಗುಂಡುನೂ ನೀನು ಚಿಕ್ಕಮಂಗಳೂರಿಗೆ ಹೋದ್ರಲ್ಲ ಅಲ್ಲಿ ಏನೇನು ಆಯ್ತು ಎಂದು ಕೇಳ್ತಾರೆ ಅಜ್ಜಿ. ಇವಳಲ್ಲಿ ಹೇಗೆ ಕೇಳುವುದು ಎಂಬ ಗೊಂದಲದಲ್ಲಿಯೇ ಅಜ್ಜಿ "ಹನಿಮೂನ್‌ ಆಯ್ತ" ಎನ್ನುತ್ತಾರೆ. "ಗುಂಡು ನೀನು ಗಂಡ ಹೆಂಡತಿ ರೀತಿ ಬದುಕ್ತಾ ಇದ್ದೀರಾ?" ಎಂದು ಅಜ್ಜಮ್ಮ ಕೇಳಿದಾಗ ಭೂಮಿಕಾಳಿಗೆ ಅಚ್ಚರಿಯಾಗುತ್ತದೆ. ಯಾಕೆ ಹೀಗೆ ಕೇಳ್ತೀರಿ ಎಂದಾಗ "ನನಗೆ ಗಂಡಹೆಂಡತಿ ಹೇಗಿರ್ತಾರೆ, ಸ್ನೇಹಿತರು ಹೇಗಿರ್ತಾರೆ ಎಲ್ಲಾ ಗೊತ್ತಾಗುತ್ತದೆ" ಎಂದು ಅಜ್ಜಿ ಹೇಳುತ್ತಾರೆ. ಹೇಗೋ ಅಜ್ಜಿಯಿಂದ ತಪ್ಪಿಸಿಕೊಂಡು ಅಮ್ಮನ ಮನೆಗೆ ಹೋಗುತ್ತಾಳೆ ಭೂಮಿಕಾ. "ನೀನು ಹೇಳಿಲ್ಲ ಅಂದ್ರೆ ಏನಂತೆ, ನಾನೇ ಪತ್ತೆದಾರಿಕೆ ಮಾಡಿ ಎಲ್ಲಾ ತಿಳೀತಿನಿ" ಅಂದುಕೊಳ್ಳುತ್ತಾರೆ ಅಜ್ಜಿ.

ಮನೆಯಿಂದ ಹೊರಟ ಭೂಮಿಕಾಳನ್ನು ಪಾರ್ಥ ಕಾಯುತ್ತ ಇರುತ್ತಾನೆ. ಪಾರ್ಥನ ವಿಷಯಕ್ಕಾಗಿಯೇ ಭೂಮಿಕಾ ತಾಯಿ ಮನೆಗೆ ಹೋಗುತ್ತಾ ಇರುತ್ತಾಳೆ.. ಹೇಗಾದರೂ ಮಾಡಿ ಈ ಮದುವೆ ಕ್ಯಾನ್ಸಲ್‌ ಮಾಡಬೇಕು ಎನ್ನುತ್ತಾನೆ. ಆಫೀಸ್‌ನಲ್ಲಿ ಆನಂದ್‌ ಮತ್ತು ಗೌತಮ್‌ ಮಾತನಾಡುತ್ತಾ ಇರುತ್ತಾರೆ. ಫಸ್ಟ್‌ ನೈಟ್‌ ವಿಷಯವೇ ಚರ್ಚೆ ಮಾಡುತ್ತಾನೆ ಆನಂದ್‌. ಗೆಳೆಯನಿಗೆ ಒಂದಿಷ್ಟು ಒಳ್ಳೆಯ ಸಲಹೆ ನೀಡುತ್ತಾನೆ ಆನಂದ್‌. ಸೀರಿಯಲ್‌ ಮುಂದುವರೆಯುತ್ತದೆ.

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)
ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)
ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)
ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)
ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)
ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)
ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)
ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)
ರಣವ್‌: ಜೈದೇವ್‌
ಚಂದನ್‌: ಅಶ್ವಿನಿ
ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)
ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)

ಟಿ20 ವರ್ಲ್ಡ್‌ಕಪ್ 2024