ಕನ್ನಡ ಸುದ್ದಿ  /  ಮನರಂಜನೆ  /  ಗೌತಮ್‌ಗೆ ಜೀವನ್‌ ಕಥೆ ಗೊತ್ತಿತ್ತಂತೆ, ಮಲ್ಲಿ ವಿಷಯದಲ್ಲಿ ಒಳ್ಳೆಯವನಾದ ಜೈದೇವ್‌, ಸ್ಟಾರ್ಟಪ್‌ ಆರಂಭಿಸ್ತಾನಂತೆ ಪಾರ್ಥ, ಅಮೃತಧಾರೆ ಕಥೆ

ಗೌತಮ್‌ಗೆ ಜೀವನ್‌ ಕಥೆ ಗೊತ್ತಿತ್ತಂತೆ, ಮಲ್ಲಿ ವಿಷಯದಲ್ಲಿ ಒಳ್ಳೆಯವನಾದ ಜೈದೇವ್‌, ಸ್ಟಾರ್ಟಪ್‌ ಆರಂಭಿಸ್ತಾನಂತೆ ಪಾರ್ಥ, ಅಮೃತಧಾರೆ ಕಥೆ

Amruthadhaare serial episode: ಅಮೃತಧಾರೆ ಧಾರಾವಾಹಿಯ ಗುರುವಾರದ ಎಪಿಸೋಡ್‌ನಲ್ಲಿ ಹಲವು ಘಟನೆಗಳು ನಡೆದಿವೆ. ಒಂದೆಡೆ ಎಲ್ಲಾ ವಿಷಯ ಗೊತ್ತಿದ್ದ ಗೌತಮ್‌ ಭೂಮಿಕಾ ಮತ್ತು ಜೀವನ್‌ರ ಮುಂದೆ ಬೇಸರ ವ್ಯಕ್ತಪಡಿಸಿದ್ದಾನೆ. ಪಾರ್ಥ ಮತ್ತು ಜೈದೇವ್‌ ವಿಚಾರದಲ್ಲೂ ಒಂದಿಷ್ಟು ಬದಲಾವಣೆ ಕಂಡಿದೆ.

ಗೌತಮ್‌ಗೆ ಜೀವನ್‌ ಭೂಮಿಕಾರ ಕಥೆ ಗೊತ್ತಿತ್ತಂತೆ, ಮಲ್ಲಿ ವಿಷಯದಲ್ಲಿ ಒಳ್ಳೆಯವನಾದ ಜೈದೇವ್‌
ಗೌತಮ್‌ಗೆ ಜೀವನ್‌ ಭೂಮಿಕಾರ ಕಥೆ ಗೊತ್ತಿತ್ತಂತೆ, ಮಲ್ಲಿ ವಿಷಯದಲ್ಲಿ ಒಳ್ಳೆಯವನಾದ ಜೈದೇವ್‌

ಝೀ ಕನ್ನಡ ವಾಹಿನಿ ಅಮೃತಧಾರೆ ಧಾರಾವಾಹಿಯ ಗುರುವಾರದ ಕಥೆ: ಜೈದೇವ್‌ ಮಲ್ಲಿಯನ್ನು ಕಾಲೇಜಿಗೆ ಬಿಟ್ಟು ಬರಲು ಹೋಗಿ ಬಂದಿದ್ದಾನೆ. ಎದುರಿಗೆ ಶಕುಂತಲಾ ಸಿಕ್ಕಿದ್ದಾರೆ. "ಎಲ್ಲಿಂದ ಬರ್ತಾ ಇದ್ದೀರಿ. ಕೈಯಲ್ಲಿ ಬುಕ್ಸ್‌ ಎಲ್ಲಾ ಇದೆ" ಎಂದು ಕೇಳುತ್ತಾಳೆ. "ಕಾಲೇಜಿಗೆ ಕರೆದುಕೊಂಡು ಹೋಗಿ ಬರ್ತಾ ಇದ್ದೇನೆ" ಎಂದು ಹೇಳುತ್ತಾನೆ. "ಅವಳಿಗೆ ಬುದ್ದಿ ಇಲ್ಲ. ಹೊರಗೆ ಬಿಸಿಲು ಇದೆ. ತಲೆ ತಿರುಗುತ್ತದೆ" ಎಂದು ಶಕುಂತಲಾದೇವಿ ಹೇಳುತ್ತಾರೆ. ಈ ಮೂಕ ಶಕುಂತಲಾದೇವಿ ಮತ್ತು ಜೈದೇವ್‌ ಇಬ್ಬರೂ ಮಲ್ಲಿಯನ್ನು ಅತೀವ ಕಾಳಜಿ ವಹಿಸುತ್ತಾರೆ. "ಏನಾಗಿದೆ ಇವನಿಗೆ ಸಡನ್‌ ಆಗಿ ಉಲ್ಟಾ ಹೊಡೀತ ಇದ್ದಾನಲ್ವ? ʼಎಂದು ಶಕುಂತಲಾದೇವಿ ಯೋಚಿಸುತ್ತಾರೆ.

ಟ್ರೆಂಡಿಂಗ್​ ಸುದ್ದಿ

ಗೌತಮ್‌ ಮುಂದೆ ಸಿಕ್ಕಿಬಿದ್ದ ಜೀವನ್‌

ಜೀವನ್‌ ಫುಡ್‌ ಡೆಲಿವರಿಗೆ ಬಂದಿರುತ್ತಾನೆ. ಫುಡ್‌ ಡೆಲಿವರಿ ಮಾಡಿ ಹೊರಟವನನ್ನು "ಜೀವ" ಎಂದು ಕರೆಯುತ್ತಾನೆ. "ನಿನ್ನ ಹೆಸರು ಜೀವ ಅಲ್ವ?" ಎಂದು ಕೇಳುತ್ತಾನೆ. "ನನ್ನ ತಂಗಿಯ ಗಂಡನ ಹೆಸರು ಕೂಡ ಜೀವನ್‌" ಎಂದು ಹೇಳುತ್ತಾನೆ. "ನಿಮ್ಮ ಹೆಸರು ಬರೀ ಜೀವ ಮಾತ್ರನಾ? ಜೀವನ್‌ ಅಂತ ಏನಾದ್ರೂ ಇದೆಯಾ. ನಿಮ್ಮ ರೀತಿಯೇ ಇದ್ದಾನೆ. ಹೈಟ್‌ ಎಲ್ಲಾ ಅದೇ ರೀತಿ ಇದೆ" ಅನ್ನುತ್ತಾನೆ. "ನಿಮ್ಮದು ಊಟ ಆಯ್ತಾ? ಬನ್ನಿ ಊಟ ಮಾಡೋಣ" ಎಂದು ಕರೆಯುತ್ತಾರೆ ಗೌತಮ್‌. "ಬೇರೆ ಆರ್ಡರ್‌ ಇದೆ" ಎಂದರೂ ಕೇಳುವುದಿಲ್ಲ.

"ಊರಿಗೆ ಎಲ್ಲಾ ಊಟ ಹಾಕುವವರು. ನೀವು ಹಸಿದಿರಬಾರದು" ಎನ್ನುತ್ತಾನೆ. ಆ ಸಮಯದಲ್ಲಿ ಭೂಮಿಕಾ ಬರುತ್ತಾರೆ. "ಭೂಮಿಕಾ ಇವರ ಹೆಸರು ಜೀವನ್‌ ಅಂತ. ಎಂತ ಕೋ ಇನ್ಸಿಡೆನ್ಸ್‌. ಊಟ ಮಾಡಿಕೊಂಡು ಬಾ ಅಂದ್ರೂ ಕೇಳ್ತಾ ಇಲ್ಲ" ಎಂದು ಗೌತಮ್‌ ಹೇಳುತ್ತಾರೆ. "ಜೀವ ಅಂದ್ರೆ ನನ್ನ ತಮ್ಮ, ಗೌತಮ್‌ ಮುಂದೆ ಬಂದು ನಿಂತುಕೊಂಡಿದ್ದಾನೆ" ಎಂದುಕೊಳ್ಳುತ್ತಾಳೆ. "ಅವರಿಗೆ ಬೇರೆ ಕಡೆ ಡೆಲಿವರಿ ಇರುತ್ತೆ. ನೀವು ಹೋಗಿ" ಎಂದು ಭೂಮಿಕಾ ಹೇಳುತ್ತಾಳೆ.

ಸ್ಟಾರ್ಟಪ್‌ ಶುರು ಮಾಡ್ತಾನಂತೆ ಪಾರ್ಥ

ಇನ್ನೊಂದೆಡೆ ಪಾರ್ಥ ಅಪೇಕ್ಷಾಳನ್ನು ಭೇಟಿಯಾಗಲು ಬಂದಿರುತ್ತಾನೆ. ನಮ್ಮ ಫ್ಯೂಚರ್‌ ಬಗ್ಗೆ ಡಿಸ್ಕಷನ್‌ ಮಾಡೋಣ ಎನ್ನುತ್ತಾನೆ ಪಾರ್ಥ. "ನಿಮ್ಮ ಬಾಯಲ್ಲಿ ಈ ರೀತಿ ಫಿಲಾಸಫಿ ಕೇಳಲು ಬೋರಾಗುತ್ತದೆ" ಎನ್ನುತ್ತಾಳೆ. ಜೀವನ ಎನ್ನುವುದು ಎಂತಹ ಜೋಕರ್‌ ಅನ್ನೂ ಸೀರಿಯಸ್‌ ಮಾಡುತ್ತದೆ. ನಾವು ಈ ರೀತಿ ಇದ್ದರೆ ಆಗೋದಿಲ್ಲ. ಜವಾಬ್ದಾರಿ ತೆಗೆದುಕೊಳ್ಳದೆ ನನ್ನ ಪಾಡಿಗೆ ನಾನಿದ್ದರೆ ಆಗದು. ಲೈಫ್‌ನಲ್ಲಿ ಏನಾದರೂ ಅಚೀವ್‌ ಮಾಡಬೇಕು" ಎಂದು ಹೇಳುತ್ತಾನೆ. "ನಾನು ಜೀವನದಲ್ಲಿ ಏನಾದರೂ ಮಾಡಬೇಕು. ನಾನೇ ಒಂದು ಸ್ಟಾರ್ಟಪ್‌ ಶುರು ಮಾಡಬೇಕು" ಎಂದು ಹೇಳುತ್ತಾನೆ. "ನನಗೆ ನಿಮ್ಮ ಮಾತನ್ನು ನಂಬಲು ಸಾಧ್ಯವಾಗುತ್ತಿಲ್ಲ" ಎನ್ನುತ್ತಾಳೆ. "ನನ್ನದೊಂದು ವಿಸಿಟಿಂಗ್‌ ಕಾರ್ಡ್‌ ಪ್ರಿಂಟ್‌ ಮಾಡಲೇಬೇಕು" ಎನ್ನುತ್ತಾನೆ. ಆಲ್‌ ದಿ ಬೆಸ್ಟ್‌ ಎನ್ನುತ್ತಾಳೆ. ನನ್ನಿಂದಾಗಿ ಬದಲಾದ್ರ ಎನ್ನುತ್ತಾಳೆ. "ನಾನು ಬದಲಾಗಿದ್ದು ಅತ್ತಿಗೆಯಿಂದ. ಬೆಸ್ಟ್‌ ಟೀಚರ್‌ ಅವರು" ಎಂದು ಮನಸ್ಸಲ್ಲಿ ಅಂದುಕೊಳ್ಳುತ್ತಾನೆ.

ಜೈದೇವ್‌ ಶಕುಂತಲಾ ಮುಂದೆ ಮಾತನಾಡುತ್ತಾನೆ. ನನಗೆ ಒಂದು ಮಾತು ಹೇಳದೆ ಅವಳು ಕಾಲೇಜಿಗೆ ಹೋಗುತ್ತಿದ್ದಾಳೆ. ನನ್ನ ಲೆಕ್ಕಕ್ಕೆ ಇಡೋದಿಲ್ವ ಎಂದು ಹೇಳುತ್ತಾಳೆ. "ನೀನಾದ್ರೂ ನನ್ನ ಒಪಿನಿಯನ್‌ ತೆಗೆದುಕೊಳ್ಳಬೇಕಿತ್ತು ಅಲ್ವ?" ಎಂದು ಕೇಳುತ್ತಾಳೆ. "ಜಸ್ಟ್‌ ಕಾಲೇಜಿಗೆ ಹೋಗುತ್ತಿದ್ದಾಳೆ. ಹೋಗಲಿ ಬಿಡು ತಪ್ಪೇನು?" ಎನ್ನುತ್ತಾನೆ. "ನಾನು ಮಾಡ್ತಾ ಇರೋದ್ರಲ್ಲಿ ತಪ್ಪೇನಿದೆ. ನಾನು ನನ್ನ ಹೆಂಡ್ತಿ ಜತೆ ಟೈಂ ಸ್ಪೆಂಡ್‌ ಮಾಡ್ತಾ ಇದ್ದೀನಿ. ಮಾಮ್‌ ಅವಳು ಪ್ರೆಗ್ನೆಂಟ್‌. ಇಂತಹ ಸಮಯದಲ್ಲಿ ಗಂಡನಾಗಿ ನಾನು ಅವಳ ಜತೆ ಇರಬೇಕು" ಎನ್ನುತ್ತಾನೆ. ಮರೆಯಲ್ಲಿ ಇದನ್ನು ಕೇಳಿಸಿಕೊಂಡು ಮಲ್ಲಿ ಖುಷಿಪಡುತ್ತಾಳೆ. "ನಾನು ಈಗ ಚೆನ್ನಾಗಿದ್ದೀನಿ. ನನಗೆ ಈಗ ಈ ರೀತಿ ಇರಲು ಖುಷಿಯಾಗುತ್ತದೆ. ನನ್ನಿಂದ ತುಂಬಾ ತಪ್ಪಾಗಿದೆ. ಅದನ್ನು ಕಂಟಿನ್ಯೂ ಮಾಡಲು ಇಷ್ಟಪಡುವುದಿಲ್ಲ" ಎಂದು ಜೈದೇವ್‌ ಹೇಳಿದಾಗ ಶಕುಂತಲಾ, ಮಾವ, ಅಶ್ವಿನಿಗೆ ಅಚ್ಚರಿಯಾಗುತ್ತದೆ. "ನಾನು ಆಕೆಗೆ ಗಂಡನಾಗಿ ಇರ್ತಿನಿ. ಯಾರೂ ಏನು ಅಂದುಕೊಂಡ್ರೂ ಪರವಾಗಿಲ್ಲ" ಎಂದು ಹೇಳುತ್ತಾನೆ.

ಗೌತಮ್ ದಿವಾನ್‌ ಪ್ಲ್ಯಾನ್‌

ಜೀವನ್‌ ಹೋಗುವ ಸಮಯದಲ್ಲಿ ಆತನ ಹಿಂದೆ ಹೋದ ಭೂಮಿಕಾ "ದೇವರ ದಯೆಯಿಂದ ಪಾರಾದೆ" ಅನ್ತಾರೆ ಭೂಮಿಕಾ. ಆ ಸಮಯದಲ್ಲಿ ನಿಂತ್ಕೊ ಎಂದು ಗೌತಮ್‌ ಕರೆಯುತ್ತಾರೆ. ಬಂದು ಜೀವನ್‌ನ ಮುಖವಾಡ ತೆಗೆಯುತ್ತಾರೆ. ಈತ ಜೀವನ್‌ ಎನ್ನುವುದು ಗೌತಮ್‌ಗೆ ತಿಳಿಯುತ್ತದೆ. "ಜೀವ ನೀನಾ" ಎಂದು ಆನಂದ್‌ ಕೇಳುತ್ತಾನೆ. "ಯಾಕೆ ಈ ಕೆಲಸ ಮಾಡ್ತಾ ಇದ್ದೀಯಾ" ಎಂದು ಗೌತಮ್‌ ಕೇಳುತ್ತಾನೆ. ಜೀವನ್‌ ತನ್ನ ಕಥೆ ಹೇಳುತ್ತಾನೆ. "ಇಷ್ಟೆಲ್ಲ ಆದ್ರೂ ನನಗೆ ಒಂದು ಮಾತು ಹೇಳಿಲ್ಲ. ಗ್ರೇಟ್‌ ನೀನು. ತ್ಯಾಗಮಯಿ. ಇವರು ಕರುಣಾಮಯಿ" ಎಂದು ಗೌತಮ್‌ ಹೇಳುತ್ತಾನೆ. ನಿನ್ನದು ಒಂದು ತರಹ ಕೇಸ್‌, ಇವರದ್ದು ಇನ್ನೊಂದು ರೀತಿಯ ಕೇಸ್‌. ನೀನು ಎಲ್ಲಾ ಮುಚ್ಚಿಟ್ಟು ಮನೆಯವರಿಗೆ ಕೆಲಸ ಮಾಡ್ತಾ ಇದ್ದೀಯ. ಇವರು ಇಲ್ಲಿ ಕೆಲಸ ಮಾಡ್ತಾ ಇದ್ದಾರೆ. ನನ್ನ ಜೀವದ ಗೆಳೆಯ ಆನಂದ್‌ ಏನೂ ಹೇಳಿಲ್ಲ. ಎಲ್ಲರೂ ನನಗೆ ಟೋಪಿ ಹಾಕಿದ್ರಿ. ನನ್ನಿಂದಲೇ ಈ ವಿಚಾರ ಮುಚ್ಚಿಟ್ಟಿದ್ದೀರಿ. ನನಗೆ ತುಂಬಾ ಬೇಸರವಾಗಿದೆ" ಎಂದು ಗೌತಮ್‌ ಹೇಳುತ್ತಾನೆ. "ಹೀಗೆ ಮುಚ್ಚಿಡುವುದರಿಂದ ಪ್ರಾಬ್ಲಂ ಹೆಚ್ಚಾಗುತ್ತದೆ. ನನಗೊಂದು ಮಾತು ಹೇಳಲು ಏನಾಗಿತ್ತು. ಸ್ವಾಭಿಮಾನ ಅಡ್ಡಬಂತ" ಎಂದೆಲ್ಲ ಗೌತಮ್‌ ಬೇಸರದಿಂದ ಹೇಳುತ್ತಾನೆ.

"ಸಾರಿ ಬಾವ" ಎನ್ನುತ್ತಾನೆ ಜೀವನ್‌. ಸಾರಿ ಎನ್ನುತ್ತಾರೆ ಭೂಮಿಕಾ. "ಎಲ್ಲಾ ಗೊತ್ತಾದ ಬಳಿಕ ಸಾರಿ ಕೇಳ್ತಿರಿ" ಎನ್ನುತ್ತಾನೆ ಗೌತಮ್‌. "ಈ ವಿಷಯ ನಿನಗೆ ಹೇಗೆ ಗೊತ್ತಾಯಿತು" ಎಂದು ಆನಂದ್‌ ಕೇಳುತ್ತಾನೆ. "ಎಲ್ಲಾ ನಾನೇ ತಿಳಿದುಕೊಂಡೆ. ನಾನೇ ಈ ಎಲ್ಲಾ ಆರೆಂಜ್‌ ಮಾಡಿದ್ದು. ನಾನು ಇಷ್ಟಪಟ್ಟ ನೆಕ್ಲೆಸ್‌ ಹಾಕದೆ ಇದ್ದದ್ದು. ಕೆಲಸಕ್ಕೆ ಹೋಗಲು ಆರಂಭಿಸಿದ್ದು. ಒಂದಿಷ್ಟು ಪತ್ತೆದಾರಿಕೆ ಮಾಡಿದಾಗ ಇವರ ಎಲ್ಲಾ ಕಥೆ ಗೊತ್ತಾಯ್ತು" ಎಂದು ಗೌತಮ್‌ ಹೇಳುತ್ತಾನೆ. "ಇದೆಲ್ಲವೂ ನನ್ನ ಹಿಂದುಗಡೆ ನಡೆಯುತ್ತಿತ್ತು. ನೀವೆಲ್ಲ ಈ ರಹಸ್ಯ ಮೇಂಟೆನ್‌ ಮಾಡಿದ್ರಿ ಅಲ್ವ? ನನಗೆ ಈಗ ತುಂಬಾ ನೋವಾಗಿದೆ. " ಎಂದು ಬೇಸರದಿಂದ ಹೇಳುತ್ತಾನೆ.

 

ಮಕ್ಕಳನ್ನು ಹೆರುವುದು ಸಮಸ್ಯೆ ಹೆತ್ತಂತೆ ಎಂದು ಶಕುಂತಲಾದೇವಿಗೆ ಸಹೋದರ ಹೇಳುತ್ತಾನೆ. ನಿನ್ನ ವಾರಸುದಾರ ಇನ್ಯಾರಿಗೋ ಚೌಕಿದಾರ, ಕೂಲಿಕಾರ ಆಗಿದ್ದಾನೆ ಸಿಸ್ಟರ್‌ ಅಂತ ಹೇಳುತ್ತಾನೆ. ಮಗನ ವರ್ತನೆ ಕುರಿತು ಶಕುಂತಲಾದೇವಿ ಕೂಡ ಚಿಂತೆ ಮಾಡುತ್ತ ಇರುತ್ತಾರೆ. ನೀನು ಈಗ ಏನಾದ್ರೂ ಮಾಡಬೇಕು ಎಂದು ಅಶ್ವಿನಿಯೂ ಹೇಳುತ್ತಾರೆ. ಶಕುಂತಲಾದೇವಿಯ ಕೋಪದ ಮುಖದೊಂದಿಗೆ ಸೀರಿಯಲ್‌ ಮುಂದುವರೆಯುತ್ತದೆ.

IPL_Entry_Point