Amruthadhaare: ಚಿಕ್ಕಮಗಳೂರಲ್ಲಿ ಗೌತಮ್ ಭೂಮಿಕಾ ಸರಸ, ಜೈದೇವ್‌ನಿಂದ ಮಲ್ಲಿಗಿಲ್ಲಿ ಪ್ರಾಣಸಂಕಟ, ಮಹಿಮಾ- ಜೀವ ಮುತ್ತಿನ ಕಥೆ
Amruthadhaare Serial Yesterday Episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಬುಧವಾರದ ಸಂಚಿಕೆಯಲ್ಲಿ ಗೌತಮ್ ಮತ್ತು ಭೂಮಿಕಾ ಚಿಕ್ಕಮಗಳೂರಿಗೆ ಹೋಗಿದ್ದಾರೆ. ಅವರಿಲ್ಲದ ಸಂದರ್ಭದಲ್ಲಿ ಮಲ್ಲಿ ಮುಗಿಸಲು ಜೈದೇವ್ ಪ್ಲ್ಯಾನ್ ಮಾಡಿದ್ದಾನೆ. ಜೀವನ್ ಮತ್ತು ಮಹಿಮಾ ನಡುವೆ ಮುತ್ತಿನ ವಿನಿಮಯವಾಗಿದೆ.
ಅಮೃತಧಾರೆ ಧಾರಾವಾಹಿ ಕಥೆ: ಗೌತಮ್ ದಿವಾನ್ ಮತ್ತು ಭೂಮಿಕಾಳಿಗೆ ಮಹಿಮಾ ಬಿಗ್ ಥ್ಯಾಂಕ್ಸ್ ಹೇಳುತ್ತಾಳೆ. ನನಗೆ ಜೀವನ್ ಕೆಲಸ ಕಳೆದುಕೊಂಡದ್ದು, ಮನೆಯವರಲ್ಲಿ ಸುಳ್ಳು ಹೇಳಿದ್ದು, ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದದ್ದು ಎಲ್ಲವೂ ನನಗೆ ಗೊತ್ತಿತ್ತು ಎಂದು ಹೇಳಿ ಮಹಿಮಾ ಅಚ್ಚರಿ ಹುಟ್ಟಿಸುತ್ತಾಳೆ. ಪ್ರತಿದಿನದ ಆತನ ವರ್ತನೆಯಿಂದ ನನಗೆ ಅನುಮಾನ ಆರಂಭವಾಗಿತ್ತು. ಅವನು ಸ್ವಂತ ಬಿಸ್ನೆಸ್ ಮಾಡೋ ರೀತಿ ಮಾಡಿರುವುದಕ್ಕೆ ಥ್ಯಾಂಕ್ಸ್ ಅಣ್ಣಾ ಎಂದು ಹೇಳುತ್ತಾಳೆ. ನಮ್ಮವರು ಎಂದು ಬಂದರೆ ಇಬ್ಬರು ಕಾಂಪಿಟೇಷನ್‌ನಲ್ಲಿ ಹೆಲ್ಪ್ ಮಾಡ್ತಿರಿ ಎಂದು ಹೇಳುತ್ತಾಳೆ. ಬಳಿಕ ಒಂದಿಷ್ಟು ಆತ್ಮೀಯ ಮಾತುಕತೆ ನಡೆಯುತ್ತದೆ.
ಜೈದೇವ್ ಏನೋ ಯೋಚಿಸುತ್ತ ಇದ್ದಾನೆ. ಮಲ್ಲಿ ಬರುತ್ತಾಳೆ. ಅವರೆಲ್ಲ ಆಫೀಸ್ ಪೂಜೆಗೆ ಹೋದ್ರು, ನಿಮ್ಮನ್ನು ಕರೆದಿಲ್ಲ ಎಂದು ಬೇಜಾರ ಎಂದು ಕೇಳುವುದನ್ನು ಗೌತಮ್ ಮತ್ತು ಭೂಮಿಕಾ ಕೇಳಿಸಿಕೊಳ್ಳುತ್ತಾರೆ. "ಐ ಆಮ್ ಲೂಸರ್, ಎಲ್ಲವನ್ನೂ ಕಳೆದುಕೊಂಡಿದ್ದೇನೆ" ಎಂದೆಲ್ಲ ಹೇಳುತ್ತಾನೆ ಜೈದೇವ್."ನಿನ್ನನ್ನು ಮದುವೆಯಾಗಿರುವುದಕ್ಕೆ ತುಂಬಾ ಖುಷಿ ಇದೆ ಮಲ್ಲಿ" ಎಂದು ಹೇಳುತ್ತಾನೆ. ಈ ಮೂಲಕ ಈತ ಒಳ್ಳೆಯವನಾಗಿದ್ದಾನೆ ಎಂದು ಗೌತಮ್ ಮತ್ತು ಭೂಮಿಕಾ ತಿಳಿದುಕೊಳ್ಳುತ್ತಾರೆ. ಅವರು ಅಲ್ಲಿಂದ ಹೋದ ಬಳಿಕ ಎಂದಿನಂತೆ ಯಾರಿಗೂ ತಿಳಿಯದಂತೆ ಜೈದೇವ್ ಮೆಲ್ಲಗೆ ತನ್ನ ಎಂದಿನ ಮುಖವನ್ನು ತೋರಿಸುತ್ತಾನೆ.
ಜೀವನ್- ಮಹಿಮಾ ಮುತ್ತಿನ ಕಥೆ
ಜೀವನ್ ಕುಳಿತಿರುವಾಗ ಮಹಿಮಾ ಬರುತ್ತಾಳೆ. ಹೆಡ್‌ಫೋನ್ ಹಾಕಿಕೊಂಡು ಸಾಂಗ್ ಕೇಳುತ್ತಾ ಇರುತ್ತಾನೆ. "ಮೊದಲಿನಂತೆ ಇದ್ದರೆ ಆಗದು. ಕರೆಕ್ಟ್ ಟೈಮ್‌ಗೆ ಆಫೀಸ್‌ಗೆ ಹೋಗಬೇಕು. ಕಂಪನಿಯ ಡೆವಲಪ್‌ಮೆಂಟ್‌ಗೆ ಹೆಚ್ಚಿನ ಗಮನ ನೀಡಬೇಕು" ಎಂದೆಲ್ಲ ಮಹಿಮಾ ಸಲಹೆ ನೀಡುತ್ತಾಳೆ. "ಬಿಸ್ನೆಸ್ ಪಿಕಪ್ ಆಗುವ ತನಕ ನನಗೆ ಬಿಸ್ನೆಸ್ ಮೊದಲ ಹೆಂಡತಿ" ಎಂದು ಹೇಳುತ್ತಾನೆ. ನನಗೆ ಪಪ್ಪಿ ಕೊಡಲು ಕೂಡ ಟೈಮ್ ಇಲ್ವಾ ಎಂದು ಕೇಳುತ್ತಾಳೆ. ಮುತ್ತಿನ ವಿನಿಮಯವಾಗುತ್ತದೆ.
ಭೂಮಿಕಾಳಿಗೆ ಕಾಫಿ ತೋಟ ಉಡುಗೊರೆ
ಹನಿಮೂನ್‌ಗೆ ಹೊರಡುವ ಮೊದಲು ಅಜ್ಜಮ್ಮನ ಬಳಿಗೆ ಗೌತಮ್ ಬರುತ್ತಾನೆ. ಅಜ್ಜಿಯಲ್ಲಿ ಮಾತನಾಡುವಾಗ ಮರೆಯಲ್ಲಿ ಮನೆಹಾಳ ಮಾವ ಕೇಳಿಸಿಕೊಳ್ಳುತ್ತಾನೆ. "ಭೂಮಿಕಾ ಮದುವೆಯಾಗಿ ಬಂದಾಗಿನಿಂದ ಅವರಿಗೆ ಏನೂ ಮಾಡಿಲ್ಲ. ಅದಕ್ಕೆ ಚಿಕ್ಕಮಗಳೂರಿನಲ್ಲಿರುವ ನಮ್ಮ ಎಸ್ಟೇಟ್ ಅವರ ಹೆಸರಿಗೆ ಬರೆಯಬೇಕೆಂದಿದ್ದೇನೆ" ಎನ್ನುತ್ತಾನೆ. ನಿನ್ನ ನಿರ್ಧಾರ ನೂರಕ್ಕೆ ನೂರು ಸರಿ ಇದೆ ಎನ್ನುತ್ತಾರೆ ಅಜ್ಜಮ್ಮ. "ಅಕ್ಕನಿಗೆ ಚೊಂಬೇ ಗತಿ" ಎಂದು ಮನೆಹಾಳ ಮಾವ ಮನಸ್ಸಿನಲ್ಲಿ ಅಂದುಕೊಳ್ಳುತ್ತಾರೆ. ಹೋಗುವ ಮುನ್ನ ನನ್ನ ಒಂದು ಮಾತು ಈಡೇರಿಸಬೇಕು ಎಂದು ಅಜ್ಜಿ ಹೇಳುತ್ತಾರೆ. ನನಗೆ ಮರಿ ಮೊಮ್ಮಗ/ಮೊಮ್ಮಗಳನ್ನು ಗಿಫ್ಟ್ ಕೊಡಬೇಕು ಎಂದಾಗ ಗೌತಮ್ ನಾಚಿಕೊಳ್ಳುತ್ತಾರೆ.
ಮಲ್ಲಿ ಮಗು ಬೆಳೆಯುತ್ತಿರುವ ಹೊಟ್ಟೆ ನೋಡುತ್ತ ಇರುವಾಗ ಭೂಮಿಕಾ ಆಗಮಿಸುತ್ತಾರೆ. "ನಾನು ಬರೋದು ಮೂರು ನಾಲ್ಕು ದಿನ ಆಗುತ್ತದೆ. ಏನಾದರೂ ತೊಂದರೆಯಾದರೆ ಮೊದಲು ನನಗೆ ಹೇಳು" ಎಂದು ಭೂಮಿಕಾ ಹೇಳುತ್ತಾಳೆ. "ಯಾವುದೇ ಕಾರಣಕ್ಕೂ ಯಾರು ಏನೂ ನೀಡಿದರೂ ತೆಗೆದುಕೊಳ್ಳಬೇಡ. ಅತ್ತೆ ತಿಂದು ನೋಡಿದ ಮೇಲೆಯೇ ತಿನ್ನಬೇಕು. ಸಿಗ್ನಲ್ ಇರೋ ಕಡೆಯೇ ಫೋನ್ ಇಡಬೇಕು" ಎಂದು ಭೂಮಿಕಾ ಹೇಳುತ್ತಾಳೆ. ಭೂಮಿಕಾ ಗೌತಮ್ ಹನಿಮೂನ್‌ಗೆ ಹೋಗುವ ಸಂದರ್ಭದಲ್ಲಿ ಜೈದೇವ್ ಕಡೆಯಿಂದ ಏನಾದರೂ ತೊಂದರೆಯಾಗಬಹುದೇ ಎಂಬ ಆತಂಕ ಭೂಮಿಕಾಳಿಗೆ ಇದೆ.
ಎಲ್ಲರ ಆಶೀರ್ವಾದ ಪಡೆದು ಗೌತಮ್ ಮತ್ತು ಭೂಮಿಕಾ ಹನಿಮೂನ್‌ಗೆ ಹೊರಡುತ್ತಾರೆ. "ನಿನ್ನ ಕಾವಲುಗಾರ್ತಿ ಅಕ್ಕ ಹೊರಟಾಯ್ತು. ಇನ್ನು ನಿನ್ನ ಕಳುಹಿಸುವ ಸಮಯ" ಎಂದು ಮಲ್ಲಿ ಕುರಿತು ಶಕುಂತಲಾ ಯೋಚಿಸುತ್ತಾಳೆ. ತನ್ನ ಅಕ್ಕ ಶಕುಂತಲಾ ಬಳಿ ಅಣ್ಣ "ಕಾಫಿ ತೋಟ ಭೂಮಿಕಾಳ ಹೆಸರಿಗೆ ಬರೆಯುವ ವಿಚಾರ" ಹೇಳುತ್ತಾನೆ. ಇಡೀ ಕಾಫಿ ಎಸ್ಟೇಟ್ ಅನ್ನು ಭೂಮಿಕಾಗೆ ಧಾರೆ ಎರೆಯಲು ಹೋಗ್ತಾ ಇದ್ದಾನೆ ಎಂದಾಗ ಶಕುಂತಲಾ ಕೋಪಗೊಳ್ಳುತ್ತಾಳೆ. ಅವಳ ಹೆಸರಿಗೆ ಹೇಗೆ ಬರೆಯುತ್ತಾನೆ ಎಂದು ನೋಡ್ತಿನಿ ಎಂದು ಶಕುಂತಲಾ ಹೇಳುತ್ತಾಳೆ. ಮಲ್ಲಿಗೆ ಏನು ಮಾಡ್ತಿಯಾ ಎಂದು ಅಣ್ಣ ಕೇಳುತ್ತಾನೆ.
ಮಲ್ಲಿಗೆ ಪ್ರಾಣ ಸಂಕಟ
"ಭೂಮಿಕಾ ಗೌತಮ್ ಚಿಕ್ಕಮಗಳೂರಿಗೆ ತಲುಪಿದ ಸುದ್ದಿ ಕೇಳಿದ ತಕ್ಷಣ ಮಲ್ಲಿಗೆ ಏನು ಮಾಡ್ತಿನಿ ನೋಡ್ತಾ ಇರು. ಅದಕ್ಕೆ ಎಲ್ಲಾ ಪ್ಲ್ಯಾನ್ ಮಾಡಿದ್ದೀನಿ" ಎಂದು ಶಕುಂತಲಾ ಹೇಳಿದಾಗ ಅಲ್ಲಿಗೆ ಜೈದೇವ್ ಬರುತ್ತಾನೆ. "ನಿಮ್ಮ ಪ್ಲ್ಯಾನ್ ಸಕ್ಸಸ್ ಆಗಲು ನಾನು ಬಿಡೋಲ್ಲ" ಎನ್ನುತ್ತಾನೆ. "ಈ ನಿನ್ನ ಮಗ ಬದಲಾದೆ ಅಂದ್ಕೊಂಡ್ಯ. ಬದಲಾಗೋ ಜನ್ಮನ ಇದು. ನಿನ್ನ ಮಗ ಹೇಗೆ ಬದಲಾದ ಎಂದು ತಿಳಿದುಕೊಂಡೆ. ಮಲ್ಲಿಗೆ, ಗೌತಮ್, ಭೂಮಿಕಾಗೆ ನನ್ನ ಮೇಲೆ ನಂಬಿಕೆ ಬರಲು ಹೀಗೆ ಮಾಡಿದೆ" ಎನ್ನುತ್ತಾನೆ. ಈ ಮೂಲಕ ತನ್ನ ನಿಜವಾದ ಮುಖ ತೋರಿಸುತ್ತಾನೆ ಜೈದೇವ್. "ಮಲ್ಲಿ ಕಥೆ ಮುಗಿಸಲು ಒಂದು ಸ್ಟೇಜ್ ಕೂಡ ಮಾಡಿದ್ದೇನೆ" ಎನ್ನುತ್ತಾನೆ. ಅಮೃತಧಾರೆ ಸೀರಿಯಲ್ ಮುಂದುವರೆಯುತ್ತದೆ.
ವಿಭಾಗ