Amruthadhaare: ರೌಡಿಗಳ ವಿರುದ್ಧ ಪಾರ್ಥನ ಫೈಟಿಂಗ್‌, ತಮ್ಮನನ್ನೇ ಕೊಲ್ಲಲು ಮುಂದಾದ ಜೈದೇವ್‌- ಅಮೃತಧಾರೆಯಲ್ಲಿ ಸಿನಿಮಿಯ ಘಟನೆಗಳು
ಕನ್ನಡ ಸುದ್ದಿ  /  ಮನರಂಜನೆ  /  Amruthadhaare: ರೌಡಿಗಳ ವಿರುದ್ಧ ಪಾರ್ಥನ ಫೈಟಿಂಗ್‌, ತಮ್ಮನನ್ನೇ ಕೊಲ್ಲಲು ಮುಂದಾದ ಜೈದೇವ್‌- ಅಮೃತಧಾರೆಯಲ್ಲಿ ಸಿನಿಮಿಯ ಘಟನೆಗಳು

Amruthadhaare: ರೌಡಿಗಳ ವಿರುದ್ಧ ಪಾರ್ಥನ ಫೈಟಿಂಗ್‌, ತಮ್ಮನನ್ನೇ ಕೊಲ್ಲಲು ಮುಂದಾದ ಜೈದೇವ್‌- ಅಮೃತಧಾರೆಯಲ್ಲಿ ಸಿನಿಮಿಯ ಘಟನೆಗಳು

Amruthadhaare serial Yesterday Episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಸೀರಿಯಲ್‌ನ ಆಗಸ್ಟ್‌ 13ರ ಸಂಚಿಕೆಯಲ್ಲಿ ಹಲವು ಸಿನಿಮಯ ಘಟನೆಗಳು ನಡೆದಿವೆ. ಅಪೇಕ್ಷಾಳನ್ನು ಮದುವೆಯಾಗಲು ಹೊರಟ ತಮ್ಮನನ್ನೇ ಸಾಯಿಸಲು ಜೈದೇವ್‌ ಮುಂದಾಗಿದ್ದಾನೆ. ಗೌತಮ್‌ಗೆ ವಿಷಯ ಗೊತ್ತಾಗಿದೆ.

Amruthadhaare: ರೌಡಿಗಳ ವಿರುದ್ಧ ಪಾರ್ಥನ ಫೈಟಿಂಗ್‌, ತಮ್ಮನನ್ನೇ ಕೊಲ್ಲಲು ಮುಂದಾದ ಜೈದೇವ್‌
Amruthadhaare: ರೌಡಿಗಳ ವಿರುದ್ಧ ಪಾರ್ಥನ ಫೈಟಿಂಗ್‌, ತಮ್ಮನನ್ನೇ ಕೊಲ್ಲಲು ಮುಂದಾದ ಜೈದೇವ್‌

Amruthadhaare serial Yesterday Episode: ಮಲ್ಲಿ ಬೇಸರದಲ್ಲಿದ್ದಾಳೆ. ಭೂಮಿಕಾ ಸಮಧಾನ ಮಾಡುತ್ತಾಳೆ. ನನಗೆ ಸುಮ್ಮನೆ ಕೋಪ ಬಂದ ಹಾಗೆ ಮಾಡಿದೆ ಎನ್ನುತ್ತಾಳೆ ಮಲ್ಲಿ. "ಮಗು ಕಾಲಲ್ಲಿ ಒದ್ದಿತು" ಎಂದು ಹೇಳುತ್ತಾಳೆ. ರಿಯಲಿ ಸ್ವಾರಿ ಎನ್ನುತ್ತಾಳೆ ಭೂಮಿಕಾ. "ಅಪೇಕ್ಷಾ ಮತ್ತು ಪಾರ್ಥ ಮದುವೆ ಆಗಬೇಕು ಎಂದು ನಿರ್ಧಾರ ಮಾಡಿದ್ದಾರೆ" ಎಂಬ ಕಥೆ ಹೇಳುತ್ತಾಳೆ. ಹೀಗಾಗಿ ನಾನು ಅವಸರದಲ್ಲಿ ಹೋಗಿ ಬಂದೆ ಎನ್ನುತ್ತಾಳೆ. "ನನಗೆ ಪಾರ್ಥ ಮತ್ತು ಅಪೇಕ್ಷಾರನ್ನು ನೋಡಿದ್ರೆ ಹೊಟ್ಟೆ ಚುರ್ರು ಎನ್ನುತ್ತದೆ" ಎಂದು ಮಲ್ಲಿ ಹೇಳುತ್ತಾಳೆ. "ಒಂದು ಕಡೆ ಅಪ್ಪ, ಇನ್ನೊಂದು ಕಡೆ ಇವರಿಬ್ರು. ಅಪ್ಪಿ ಈ ಮನೆಗೆ ಬಂದ್ರೆ ಎಲ್ಲರ ನೆಮ್ಮದಿ ಹಾಳಾಗಿ ಹೋಗುತ್ತದೆ" ಎಂದು ಭೂಮಿಕಾ ಹೇಳುತ್ತಾಳೆ. ಭೂಮಿಕಾ ಅಲ್ಲಿಂದ ಹೋದ ಬಳಿಕ "ಅಕ್ಕ ಈ ರೀತಿ ಮಾಡಬಾರದಿತ್ತು. ಸ್ವಂತ ತಂಗಿ ಮದುವೆ ಬೇಡ ಅನ್ತಾರಲ್ವ" ಎಂದು ಯೋಚಿಸುತ್ತಾಳೆ ಮಲ್ಲಿ. ಈಗಾಗಲೇ ಜೈದೇವ್‌ ಬಿತ್ತಿದ ವಿಷದ ಮಾತುಗಳು ತುಸುತುಸುವೇ ಪರಿಣಾಮ ಬೀರಿದಂತೆ ಇದೆ.

ಅಪೇಕ್ಷಾಳ ಮುಗಿಸಲು ಡೀಲ್‌ ನೀಡಿದ ಜೈದೇವ್‌

ಇನ್ನೊಂದೆಡೆ ಜೈದೇವ್‌ ತನ್ನ ರೌಡಿಗಳಿಗೆ ಹಣ ನೀಡಿ ದೊಡ್ಡ ಡೀಲ್‌ ನೀಡುತ್ತಾನೆ. ತನ್ನ ತಮ್ಮ ಮತ್ತು ಅಪೇಕ್ಷಾರನ್ನು ಮುಗಿಸುವಂತಹ ಡೀಲ್‌ ಅದಾಗಿರುತ್ತದೆ. ಒಂದು ಬ್ಯಾಗ್‌ ಹಣ ನೀಡುತ್ತಾನೆ. ರೌಡಿಗಳು ಖುಷಿಯಿಂದ ಕೆಲಸ ಮಾಡಲು ಹೋಗುತ್ತಾರೆ. ಯಾವುದೇ ಕಾರಣಕ್ಕೆ ಇವಳು ಉಳಿಯಬಾರದು ಎನ್ನುತ್ತಾನೆ. "ಅವಳ ಜತೆ ಇರುವವನು ನನ್ನ ತಮ್ಮ. ಅವನನ್ನು ಬಿಟ್ಟು ಮತ್ತೆ ಎಲ್ಲರನ್ನೂ ಮುಗಿಸಿ" ಎಂದು ಜೈದೇವ್‌ ಡೀಲ್‌ ಕೊಡುತ್ತಾನೆ.

ಇನ್ನೊಂದೆಡೆ ಅಪೇಕ್ಷಾ ಮತ್ತು ಪಾರ್ಥ ದೇವಾಲಯದತ್ತ ಹೋಗುತ್ತಾರೆ. ದೇವಸ್ಥಾನದಲ್ಲಿ ಹೋಗಿ ಮದುವೆಯಾಗೋಣ ಎಂದು ಅಪೇಕ್ಷಾರನ್ನು ಕರೆದುಕೊಂಡು ಹೋಗುತ್ತಾನೆ. "ಅಪ್ಪನೂ ಮದುವೆಗೆ ಒಪ್ಪಿಲ್ಲ. ಜೀವನ್‌ ಕೂಡ ಒಪ್ಪಿಲ್ಲ. ಎಲ್ಲರನ್ನು ಮತ್ತೆ ಹೇಗೆ ಫೇಸ್‌ ಮಾಡೋದು" ಎಂದು ಅಪ್ಪಿ ಆತಂಕದಿಂದ ಕೇಳುತ್ತಾಳೆ. "ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ್ರೆ ನೂರು ವರ್ಷ ಆಯಸ್ಸು. ನಮ್ಮ ಪ್ರೀತಿನ ನಾವು ಉಳಿಸಿಕೊಳ್ಳಬೇಕಾದರೆ ಇದನ್ನು ನಾವು ಮಾಡಲೇಬೇಕು" ಎಂದು ಪಾರ್ಥ ಹೇಳುತ್ತಾನೆ. ಅವನ ಮಾತಿಗೆ ಇಲ್ಲವೆನ್ನದೇ ಅಪೇಕ್ಷಾ ಅನುಸರಿಸುತ್ತಾಳೆ.

ಗೌತಮ್‌ ಯೋಚನೆಯಲ್ಲಿದ್ದಾರೆ. ಅಲ್ಲಿಗೆ ಭೂಮಿಕಾ ಬರುತ್ತಾರೆ. "ಪಾರ್ಥನ ಬಗ್ಗೆಯೇ ಯೋಚನೆ ಮಾಡುತ್ತ ಇದ್ದೆ" ಎನ್ನುತ್ತಾರೆ ಗೌತಮ್‌. "ಏನಾಗಬೇಕೋ ಅದೇ ಆಗುತ್ತದೆ" ಎನ್ನುತ್ತಾಳೆ ಭೂಮಿಕಾ. "ಈ ಮದುವೆ ಅನ್ನೋದು ಅದೃಷ್ಟದ ಆಟ" ಎನ್ನುತ್ತಾರೆ ಗೌತಮ್‌. "ಮದುವೆ ಅನ್ನೋದು ಜೂಜು. ಎಲ್ಲಾ ಹೊಂದಾಣಿಕೆ ರಾಜಕೀಯ. ಒಪ್ಪಿಕೊಂಡವರು ಸಿಗೋದು ಕಷ್ಟ" ಎನ್ನುತ್ತಾರೆ ಇಬ್ರು. "ಈ ಮನೆಯಲ್ಲಿ ಎಲ್ಲರ ಮದುವೆಯೂ ಪ್ರಾಬ್ಲಂ" ಎಂದು ನೆನಪಿಸಿಕೊಳ್ಳುತ್ತಾರೆ ಗೌತಮ್‌.

ರೌಡಿಗಳ ಜತೆ ಪಾರ್ಥನ ಕಾದಾಟ

ಪಾರ್ಥ ಮತ್ತು ಅಪೇಕ್ಷಾ ಬೈಕ್‌ನಲ್ಲಿ ಹೋಗುತ್ತಿರುವಾಗ ರೌಡಿಗಳು ಬೈಕ್‌ನಲ್ಲಿ ಬರುತ್ತಾರೆ. ಅವರೆಲ್ಲ ಇವರನ್ನು ಫಾಲೋ ಮಾಡುತ್ತಾರೆ. ಬೈಕ್‌ ನಿಲ್ಲಿಸಿದಾಗ ಇವರ ಮೇಲೆ ಅಟ್ಯಾಕ್‌ ಮಾಡುತ್ತಾರೆ. ಈ ಸಮಯದಲ್ಲಿ ಪಾರ್ಥ ಹೀರೋನಂತೆ ಅವರ ಜತೆ ಹೋರಾಟ ಮಾಡುತ್ತಾನೆ. ಅಲ್ಲೇ ಇರುವ ದೊಣ್ಣೆಯಿಂದ ಎಲ್ಲರಿಗೂ ಹೊಡೆದು ಅಪೇಕ್ಷಾನ ಕರೆದುಕೊಂಡು ಓಡುತ್ತಾನೆ. ಜೈದೇವ್‌ಗೆ ಕರೆ ಮಾಡಿದ ರೌಡಿಗಳು "ನಿಮ್ಮ ತಮ್ಮ ನಮಗೆಲ್ಲ ಹೊಡೆದಿದ್ದಾನೆ" ಎನ್ನುತ್ತಾರೆ. "ನಾನೂ ಬರ್ತಿನಿ. ಅವಳ ಜತೆ ಅವನನ್ನೂ ಹೊಡೆಯೋಣ" ಎಂದು ಜೈದೇವ್‌ ಹೇಳುತ್ತಾನೆ. ಈ ಮೂಲಕ ತನ್ನ ತಮ್ಮನನ್ನೇ ಕೊಲ್ಲಲು ಮುಂದಾಗುತ್ತಾನೆ. "ಇಂದು ನಿನ್ನ ಲಾಸ್ಟ್‌ ಡೇ" ಎಂದು ಜೈದೇವ್‌ ಹೊರಡುತ್ತಾನೆ.

ಇನ್ನೊಂದೆಡೆ ಶಕುಂತಲಾದೇವಿ ಮಗನ ಮದುವೆ ಕುರಿತು ಕಾಯುತ್ತಿದ್ದಾರೆ. ಈ ಸಮಯದಲ್ಲಿ ಶಕುಂತಲಾದೇವಿಗೆ ಪಾರ್ಥನ ಕಾಲ್‌ ಬರುತ್ತದೆ. ಅಲ್ಲಿನ ಪರಿಸ್ಥಿತಿ ಹೇಳುತ್ತಾನೆ. ಈ ವಿಚಾರವನ್ನು ಶಕುಂತಲಾದೇವಿ ಗೌತಮ್‌ಗೆ ತಿಳಿಸುತ್ತಾರೆ. ಮಾಗಡಿ ರಸ್ತೆಯಲ್ಲಿರುವ ಶಿವನ ದೇಗುಲದತ್ತ ಗೌತಮ್‌ ಕೂಡ ಪ್ರಯಾಣ ಬೆಳೆಸುತ್ತಾರೆ. ಇನ್ನೊಂದೆಡೆ ಪಾರ್ಥ ಮತ್ತು ಅಪೇಕ್ಷಾ ಓಡೋಡುತ್ತ ದೇವಾಲಯದತ್ತ ತಲುಪಿದ್ದಾರೆ. ಸೀರಿಯಲ್‌ ಮುಂದುವರೆದಿದೆ.

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)

ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)

ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)

ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)

ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)

ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)

ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)

ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)

ರಣವ್‌: ಜೈದೇವ್‌

ಚಂದನ್‌: ಅಶ್ವಿನಿ

ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)

ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)

Whats_app_banner