Amruthadhaare: ಜೀವನ್‌ ಸ್ಟಾರ್ಟಪ್‌ ಕುರಿತು ಕೊಂಕು ನುಡಿದ ಶಕುಂತಲಾ; ಚಿಕ್ಕಮಗಳೂರಿಗೆ ಮಧುಚಂದ್ರಕ್ಕೆ ಹೋಗೋ ಖುಷಿಯಲ್ಲಿ ಗೌತಮ್‌ ದಂಪತಿ
ಕನ್ನಡ ಸುದ್ದಿ  /  ಮನರಂಜನೆ  /  Amruthadhaare: ಜೀವನ್‌ ಸ್ಟಾರ್ಟಪ್‌ ಕುರಿತು ಕೊಂಕು ನುಡಿದ ಶಕುಂತಲಾ; ಚಿಕ್ಕಮಗಳೂರಿಗೆ ಮಧುಚಂದ್ರಕ್ಕೆ ಹೋಗೋ ಖುಷಿಯಲ್ಲಿ ಗೌತಮ್‌ ದಂಪತಿ

Amruthadhaare: ಜೀವನ್‌ ಸ್ಟಾರ್ಟಪ್‌ ಕುರಿತು ಕೊಂಕು ನುಡಿದ ಶಕುಂತಲಾ; ಚಿಕ್ಕಮಗಳೂರಿಗೆ ಮಧುಚಂದ್ರಕ್ಕೆ ಹೋಗೋ ಖುಷಿಯಲ್ಲಿ ಗೌತಮ್‌ ದಂಪತಿ

Amruthadhaare Serial Yesterday Episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರವಾಹಿಯ ಮಂಗಳವಾರದ ಸಂಚಿಕೆಯಲ್ಲಿ ಜೀವನ್‌ ಕನಸಿನ ಸ್ಟಾರ್ಟಪ್‌ "ಜೀವನ ಸಂಗಾತಿ" ಶುಭಾರಂಭಗೊಂಡಿದೆ. ಗೌತಮ್‌ ಮತ್ತು ಭೂಮಿಕಾ ಹನಿಮೂನ್‌ ಹೋಗುವ ಖುಷಿಯೂ ಕಂಡಿದೆ.

ಚಿಕ್ಕಮಗಳೂರಿಗೆ ಮಧುಚಂದ್ರಕ್ಕೆ ಹೋಗೋ ಖುಷಿಯಲ್ಲಿ ಗೌತಮ್‌ ದಂಪತಿ
ಚಿಕ್ಕಮಗಳೂರಿಗೆ ಮಧುಚಂದ್ರಕ್ಕೆ ಹೋಗೋ ಖುಷಿಯಲ್ಲಿ ಗೌತಮ್‌ ದಂಪತಿ

ಝೀ ಕನ್ನಡ ಅಮೃತಧಾರೆ ಧಾರಾವಾಹಿ ಕಥೆ: ಜೀವನ್‌ ಆರಂಭಿಸುವ ಸ್ಟಾರ್ಟಪ್‌ನ ಆಮಂತ್ರಣವನ್ನು ಅಮ್ಮನಿಗೆ ನೀಡಲು ಮಹಿಮಾ ಬಂದಿದ್ದಾಳೆ. ನಾಳೆ ಮೀಟಿಂಗ್‌ ಇದೆ ಎಂದು ಶಕುಂತಲಾ ಹೇಳುತ್ತಾರೆ. ಅಳಿಯ ದೊಡ್ಡ ಸಾಧನೆ ಮಾಡಿಲ್ಲ ಅಲ್ವ ಎಂದು ಶಕುಂತಲಾ ಹೇಳುತ್ತಾರೆ. "ಅಂತಹ ಸ್ಟಾರ್ಟಪ್‌ ತುಂಬಾ ಆರಂಭವಾಗುತ್ತವೆ. ಕ್ಲೋಸ್‌ ಆಗುತ್ತವೆ" ಎಂದು ಶಕುಂತಲಾ ಹೇಳುತ್ತಾವೆ. "ನನ್ನ ಬಗ್ಗೆ ಏನಾದರೂ ಹೇಳು. ಜೀವನ್‌ ಬಗ್ಗೆ ಏನೂ ಹೇಳಬೇಡ" ಎಂದು ಕೋಪದಿಂದ ಮಹಿಮಾ ಹೋಗುತ್ತಾಳೆ.

ಅಪೇಕ್ಷಾ ಆತಂಕದಿಂದ ಕುಳಿತಿದ್ದಾಳೆ. ಹೊಡೆದಾಟದ ಘಟನೆ ಕುರಿತು ಯೋಚಿಸುತ್ತ ಇದ್ದಾಳೆ. ಏನೂ ಗಾಬರಿಯಿಂದ ಇದ್ದೀಯ ಎಂದು ಮಂದಾಕಿನಿ ಕೇಳುತ್ತಾಳೆ. ಕೆಲಸದ ಒತ್ತಡ ಎಂದು ಸಬೂಬು ಹೇಳುತ್ತಾಳೆ ಅಪೇಕ್ಷಾ. ಬಳಿಕ ಪಾರ್ಥನಿಗೆ ಕಾಲ್‌ ಮಾಡಿ "ಆರಾಮವಾಗಿದ್ದೀರ" ಎಂದು ಕೇಳುತ್ತಾಳೆ. "ಇನ್ನು ಮುಂದೆ ಯಾರಿಗೂ ಗೊತ್ತಾಗದ ಕಡೆ ಹೋಗಿ ಭೇಟಿಯಾಗೋಣ" ಎಂದು ಹೇಳುತ್ತಾರೆ. ಒಂದಿಷ್ಟು ಪ್ರೀತಿಯ ಮಾತುಕತೆ ನಡೆಯುತ್ತದೆ.

ಜೀವನ್‌ ಹೊಸ ಕಂಪನಿ ಆರಂಭಿಸ್ತಾರೆ ಎಂದು ಮಲ್ಲಿಗೆ ಭೂಮಿಕಾ ಆಹ್ವಾನ ನೀಡುತ್ತಾಳೆ. ಜೈದೇವ್‌ಗೆ ಮಹಿಮಾ ಹೇಳಿರುತ್ತಾಳೆ ಎಂದು ಭೂಮಿಕಾ ಹೇಳುತ್ತಾರೆ. ಆದರೆ, ಮಹಿಮಾ ಕೋಪದಿಂದ ಮನೆಯಿಂದ ಹೋಗಿರುತ್ತಾಳೆ. ಇನ್ನೊಂದೆಡೆ ಗೌತಮ್‌ಗೆ ಆನಂದ್‌ ಕರೆ ಮಾಡಿ ಕಾಲೆಳೆಯುತ್ತಾನೆ. "ನನ್ನ ಜೀವನದಲ್ಲಿ ಮಳೆ ಬರುವ ಲಕ್ಷಣ ಇಲ್ಲ" ಎಂದು ಗೌತಮ್‌ ಭೂಮಿಕಾಳ ಮುಂದೆ ಹೇಳುತ್ತಾನೆ. "ಅಲ್ಲಿ ತುಂಬಾ ಚಳಿ ಇರುತ್ತದೆ. ಹನಿಮೂನ್‌ ಬೇಡ" ಎಂದು ಭೂಮಿಕಾನೂ ಸುಮ್ಮನೆ ಹೇಳುತ್ತಾರೆ. "ಇಲ್ಲಿ ನನಗೆ ನಾಲ್ಕು ದಿನ ಹೋಟೆಲ್‌ ಬುಕ್‌ ಮಾಡು. ಭೂಮಿಕಾ ಅಮ್ಮನ ಮನೆಗೆ ಹೋಗಿ ಬರ್ಲಿ" ಎಂದು ಆನಂದ್‌ಗೆ ಗೌತಮ್‌ ಹೇಳುತ್ತಾನೆ. ಈ ಮೂಲಕ ಗೆಳೆಯನಿಗೆ ಸುಳ್ಳು ಹೇಳಿ ತಮಾಷೆ ಮಾಡುತ್ತಾರೆ. ಮತ್ತೆ ಅಜ್ಜಿಗೆ ಹೇಳ್ತಿನಿ ಎಂದುಕೊಳ್ಳುವಾಗಲೇ ಆನಂದ್‌ಗೆ ಗೌತಮ್‌ ಕಾಲ್‌ ಮಾಡುತ್ತಾನೆ. ಪ್ರೋಗ್ರಾಂ ಕ್ಯಾನ್ಸಲ್‌ ಆಗಿಲ್ಲ ಎಂದು ಆನಂದ್‌ ಖುಷಿಪಡುತ್ತಾನೆ. ತೊಟ್ಟಿಲು ಆರ್ಡರ್‌ ಮಾಡ್ತಿನಿ ಎಂದು ಆನಂದ್‌ ಅಪರ್ಣಾಳಿಗೆ ಹೇಳುತ್ತಾನೆ.

ಮಹಿಮಾಳಿಗೆ ಜೈದೇವ್‌ ಕಾಲ್‌ ಮಾಡುತ್ತಾನೆ. ಮಹಿಮಾ ಮತ್ತು ಜೀವನ್‌ಗೆ ಶುಭಾಶಯ ಹೇಳುತ್ತಾನೆ. ಫಂಕ್ಷನ್‌ಗೆ ನಾನೇ ಬರ್ತಿನಿ ಎಂದು ಹೇಳುತ್ತಾನೆ. "ನಿನ್ನ ಅಪೇಕ್ಷಾ ಮದುವೆ ಕ್ಯಾನ್ಸಲ್‌ ಆಗಿರೋದಕ್ಕೆ ಅವರಿಗೆ ಮತ್ತೆ ನೆನಪಾಗುತ್ತದೆ. ತಪ್ಪಾಗಿ ತಿಳಿದುಕೊಳ್ಳಬೇಡ" ಎಂದು ಹೇಳುತ್ತಾಳೆ. ಅಣ್ಣಾ ತುಂಬಾ ಬೇಜಾರಾದ ಎಂದುಕೊಳ್ಳುತ್ತಾಳೆ. "ಸಿಂಪತಿಗಾಗಿ ನಾನು ಮಾಡುತ್ತಿರುವ ಡ್ರಾಮಾ ಇದು" ಎಂದು ಜೈದೇವ್‌ನ ಸ್ವಗತ ಇರುತ್ತದೆ.

ಜೀವನ ಸಂಗಾತಿ ಸ್ಟಾರ್ಟಪ್‌ ಆರಂಭ

ಜೀವನ್‌ನ ಕನಸಿನ ಹೊಸ ಸ್ಟಾರ್ಟಪ್‌ ಉದ್ಘಾಟನೆ ಕಾರ್ಯಕ್ರಮ. ಆನಂದ್‌, ಅಪರ್ಣಾ ಶುಭ ಹಾರೈಸುತ್ತಾರೆ. ಜೀವನ್‌ ಹೆತ್ತವರು ಖುಷಿಯಿಂದ ಇದ್ದಾರೆ. ಗೌತಮ್‌ ಮತ್ತು ಭೂಮಿಕಾ ಕೂಡ ಕಾರ್ಯಕ್ರಮಕ್ಕೆ ಆಗಮಿಸುತ್ತಾರೆ. ಗೌತಮ್‌ನಲ್ಲಿ ಟೇಪ್‌ ಕಟ್‌ ಮಾಡಲು ತಿಳಿಸಿದಾಗ "ಅತ್ತೆ ಮಾವ" ಮಾಡಬೇಕು ಎಂದು ಹೇಳುತ್ತಾರೆ. ಜೀವನ್‌ನ ಕನಸಿನ ಪ್ರಾಜೆಕ್ಟ್‌ ಈ ಮೂಲಕ ಉದ್ಘಾಟನೆಗೊಳ್ಳುತ್ತದೆ. "ಗೆಳೆಯನಿಗೆ ಅತ್ತಿಗೆಗೆ ಡಬಲ್‌ ಸ್ವೀಟ್‌ ನೀಡಿ" ಎಂದು ಆನಂದ್‌ ಹೇಳುತ್ತಾನೆ. ಹನಿಮೂನ್‌ ವಿಷಯ ಹೇಳಿಲ್ವ ಎಂದು ಗೌತಮ್‌ನಲ್ಲಿ ಕೇಳುತ್ತಾನೆ. ಎಲ್ಲರಲ್ಲಿಯೂ ಹೇಳುತ್ತೇನೆ ಎಂದು ಆನಂದ್‌ ಹೇಳಿದಾಗ ಗೌತಮ್‌ ಬೇಡ ಅನ್ನುತ್ತಾನೆ. "ಹನಿಮೂನ್‌ ವಿಷಯ ಹೇಳಲು ಹಿಂಜರಿಯುತ್ತ ಇದ್ದೀಯ" ಎಂದು ಜೋರಾಗಿ ಹೇಳಿದಾಗ ಎಲ್ಲರಿಗೂ ವಿಷಯ ತಿಳಿಯುತ್ತದೆ. ಎಲ್ಲರೂ ಕಂಗ್ರಾಜುಲೇಷನ್‌ ಹೇಳುತ್ತಾರೆ. ಹೀಗೆ, ಮಂಗಳವಾರದ ಅಮೃತಧಾರೆ ಸೀರಿಯಲ್‌ನಲ್ಲಿ ಜೀವನ್‌ ಕಂಪನಿ ಆರಂಭವಾಗಿದೆ. ಇದೇ ಸಮಯದಲ್ಲಿ ಹನಿಮೂನ್‌ ಸಡಗರವೂ ಕಂಡಿದೆ.

Whats_app_banner