ಅಪೇಕ್ಷಾ ಈ ಮನೆಗೆ ಸೊಸೆಯಾಗಿ ಬರಬಾರದು ಎಂದು ಜೈದೇವ್, ಭೂಮಿಕಾಳ ವಿರುದ್ಧ ಶಕುಂತಲಾ ಮಾಸ್ಟರ್ ಪ್ಲ್ಯಾನ್- ಅಮೃತಧಾರೆ ಸೀರಿಯಲ್ ಕಥೆ
Amruthadhaare serial Yesterday Episode: ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಪಾರ್ಥ ಮತ್ತು ಅಪೇಕ್ಷಾ ಯಾಕೆ ಮದುವೆಯಾಗಬಾರದು, ಇದರಿಂದ ಭವಿಷ್ಯದಲ್ಲಿ ನಮಗೆ ಮತ್ತು ಅವರಿಗೆ ಏನೆಲ್ಲ ತೊಂದರೆಯಾಗಲಿದೆ ಎಂದು ಸದಾಶಿವ ಹೇಳುತ್ತಾರೆ. ಇನ್ನೊಂದೆಡೆ ಶಕುಂತಲಾ ನಾಟಕ ಮುಂದುವರೆದಿದೆ.
Amruthadhaare serial Yesterday Episode: ಝೀ ಕನ್ನಡದ ಅಮೃತಧಾರೆ ಧಾರಾವಾಹಿಯಲ್ಲಿ ನಿನ್ನೆಯ ಸಂಚಿಕೆಯಲ್ಲಿ ಏನೇನಾಯ್ತು ನೋಡೋಣ. “ಅಪೇಕ್ಷಾಳಿಗೆ ಭೂಮಿಕಾ ತಾಯಿಯಂತೆ. ಅವರಿಬ್ಬರು ಒಬ್ಬರೊಬ್ಬರನ್ನು ಬಿಟ್ಟುಕೊಡೋದಿಲ್ಲ” ಎಂದು ಮಂದಾಕಿನಿ ಹೇಳಿದಾಗ "ಇನ್ನು ಆ ರೀತಿ ಇರುವುದಿಲ್ಲ" ಎಂದು ಶಕುಂತಲಾದೇವಿಯ ಸ್ವಗತ ಇರುತ್ತದೆ. ಈಕೆಯ ಕುತಂತ್ರ ಗೊತ್ತಿಲ್ಲದೆ ಮಂದಾಕಿನಿ "ನನ್ನ ಮಕ್ಕಳೆಲ್ಲ ಒಳ್ಳೆಯ ಕುಟುಂಬಕ್ಕೆ ಹೋಗುತ್ತಿದ್ದಾರೆ" ಎಂದು ಹೇಳುತ್ತಾಳೆ. "ನಿಮ್ಮ ಮಕ್ಕಳನ್ನು ನಮ್ಮ ಮನೆಗೆ ತಂದಿರುವ ನಾವು ಅದೃಷ್ಟವಂತರು" ಎಂದು ಶಕುಂತಲಾ ನಾಟಕೀಯವಾಗಿ ಹೇಳುತ್ತಾಳೆ. ಕಾಫಿ ತೆಗೆದುಕೊಂಡು ಎಲ್ಲರೂ ಹಾಲ್‌ಗೆ ಹೋಗುತ್ತಾರೆ. ಆಗಲೇ ಕಾರಿನಿಂದ ಫಲಪುಷ್ಪಗಳನ್ನು ತಂದಿಡುತ್ತಾರೆ. ಮಧುಮಗಳು ಓಕೆ ಎಂಬಂತೆ ಎಲ್ಲರೂ ರೆಡಿಯಾಗಿದ್ದಾರೆ. ಆದರೆ, ಭೂಮಿಕಾ ಮತ್ತು ಸದಾಶಿವ ಅಯೋಮಯವಾಗಿದ್ದಾರೆ. ಯಾಕೆ ಮಾವ ಒಂಥರ ಇದ್ದೀರಿ ಎಂದು ಗೌತಮ್ ಕೇಳುತ್ತಾರೆ.
ತಾಂಬೂಲ ಇಟ್ಟು ಹೆಣ್ಣು ಕೇಳಿದ ಗೌತಮ್
ತಂದಿರುವ ತಾಂಬೂಲವನ್ನು ಸದಾಶಿವನ ಮುಂದೆ ಇಡುತ್ತಾರೆ. ಆದರೆ, ಸದಾಶಿವ ಗಂಭೀರವಾಗಿ ಯೋಚಿಸುತ್ತಿದ್ದಾರೆ. ಆ ಸಂದರ್ಭದಲ್ಲಿ ಭೂಮಿಕಾ "ಗೌತಮ್ ಅವರೇ, ಅಪ್ಪನಿಗೆ ಈ ಮದುವೆ ಇಷ್ಟ ಇಲ್ಲ" ಎನ್ನುತ್ತಾಳೆ. ಈ ಮಾತು ಕೇಳಿ ಎಲ್ಲರಿಗೂ ಅಚ್ಚರಿಯಾಗುತ್ತದೆ. "ಮದುವೆ ಬಗ್ಗೆ ಇಷ್ಟು ಮಾತುಕತೆ ನಡೆದ್ರೂ ನಿಮ್ಮತ್ರ ಹೇಗೆ ಹೇಳುವುದು ಎಂದು ಗೊತ್ತಾಗದೆ ಸುಮ್ಮನಿದ್ದಾರೆ" ಎಂದು ಭೂಮಿಕಾ ಹೇಳುತ್ತಾಳೆ. "ಹೌದ ಮಾವ, ಭೂಮಿಕಾ ಹೇಳುತ್ತಿರುವುದು ನಿಜಾನ? ಅಪೇಕ್ಷಾ ಮತ್ತು ಜೈದೇವ್ ಮದುವೆ ನಿಂತು ಹೋಯ್ತು ಅಂತನಾ? ನಿಮ್ಮ ಮನಸ್ಸಿನಲ್ಲಿ ಇನ್ನೂ ಅದು ಕೊರೆಯುತ್ತ ಇದೆಯಾ?" ಎಂದು ಗೌತಮ್ ಕೇಳುತ್ತಾರೆ. ಅದಕ್ಕೆ ಸದಾಶಿವ "ಇಲ್ದೆ ಇರುತ್ತಾ ಅಳಿಯಂದ್ರೆ, ಅದನ್ನು ಅಷ್ಟು ಸುಲಭವಾಗಿ ಕಡೆಗಣಿಸುವುದಕ್ಕೂ ಆಗುವುದಿಲ್ಲ. ನೀವು ನನ್ನ ಮನಸ್ಸಿನ ಖುಷಿಗೆ ನಾಲ್ಕು ಮಾತು ಹೇಳಬಹುದು. ಆದರೆ, ವಾಸ್ತವ ಹಾಗಿಲ್ಲ. ವಾಸ್ತವ ಹೇಗೆ ಇರುತ್ತದೆ ಎನ್ನುವ ಅಂದಾಜು ನನಗಿದೆ" ಎಂದು ಸದಾಶಿವ ಹೇಳುತ್ತಾರೆ. "ಈ ಆದರ್ಶಗಳು, ಒಳ್ಳೆಯ ವಿಚಾರಗಳು ಕೇಳಲು ತುಂಬಾ ಚೆನ್ನಾಗಿರುತ್ತದೆ. ಆದರೆ, ವಾಸ್ತವ ಬೇರೆ ರೀತಿ ಇರುತ್ತದೆ ಅಳಿಯಂದ್ರೆ" ಎನ್ನುತ್ತಾರೆ.
ಸದಾಶಿವನ ಮನಸ್ಸಲ್ಲಿ ಏನಿದೆ?
"ನಮ್ಮ ಮನಸ್ಸಲ್ಲಿ ಆ ರೀತಿ ಏನೂ ಇಲ್ಲ. ನೀವ್ಯಾಕೆ ಹಾಗೇ ಯೋಚಿಸ್ತಾ ಇದ್ದೀರಾ?" ಎನ್ನುತ್ತಾರೆ ಗೌತಮ್. "ನೀವು ಈಗ ಹೇಳುತ್ತೀರಿ. ಆದರೆ, ಅದು ಹಾಗೆ ಆಗುವುದಿಲ್ಲ. ನಮ್ಮನ್ನೆಲ್ಲ ಜನರು ಮುಂಚಿನ ರೀತಿ ಇರಲು ಬಿಡುವುದಿಲ್ಲ. ಸ್ವಲ್ಪ ನೀವೇ ಯೋಚಿಸಿ. ನನ್ನ ಮಗಳು ನಿಮ್ಮ ಮನೆಗೆ ಸೊಸೆಯಾಗಿ ಬಂದ್ರೆ ಪ್ರತಿನಿತ್ಯ ಜೈದೇವ್ ಅವರು ಅವಳನ್ನು ನೋಡಬೇಕಾಗುತ್ತದೆ. ಅವಳೂ ಜೈದೇವ್ ಅವರನ್ನೂ ನೋಡಬೇಕಾಗುತ್ತದೆ. ಇಬ್ಬರ ಮನಸ್ಸಲ್ಲೂ ಹಿಂದಿನ ಕಹಿ ಹಾಗೆಯೇ ಇರುತ್ತದೆ. ಈಗ ನೀವು ಎಷ್ಟೇ ಹೇಳಿದ್ರೂ ಮನಸ್ಸಿನ ಮೂಲೆಯಲ್ಲಿ ಅದು ಇದ್ದೇ ಇರುತ್ತದೆ. ನಾವು ಅಂದುಕೊಂಡಷ್ಟು ಚಿಕ್ಕದ್ದಲ್ಲ ಈ ವಿಷ್ಯ. ನಿಮಗೆ ಯಾರಿಗೂ ಅದರ ಅರಿವು ಇಲ್ಲದೆ ಇರಬಹುದು. ಆದರೆ, ನನಗೆ ಇದೆ. ಮುಂದೆ ಒಂದು ದಿನ ಎಲ್ಲರಿಗೂ ಉಸಿರು ಕಟ್ಟಿದ ಹಾಗೆ ಆಗುತ್ತದೆ" ಎಂದಾಗ ಗೌತಮ್ ಯೋಚನೆಗೆ ಬೀಳುತ್ತಾರೆ. ಅಪೇಕ್ಷಾ, ಪಾರ್ಥ ಮಂಕಾಗುತ್ತಾರೆ.
"ನೀವು ಹೇಳುವುದು ಸರಿ ಇದೆ ಮಾವ. ಅಪೇಕ್ಷಾಗೆ ನಮ್ಮ ಕಡೆಯಿಂದ ಅನ್ಯಾಯ ಆಗಿತ್ತು. ಆದರೆ, ಅದನ್ನು ಸರಿಪಡಿಸಿಕೊಳ್ಳಲು ಹೀಗೊಂದು ಅವಕಾಶ ಸಿಕ್ಕಿದೆ. ದಯವಿಟ್ಟು ಇಲ್ಲ ಅನ್ನಬೇಡಿ ಪ್ಲೀಸ್" ಎಂದು ಗೌತಮ್ ಕೇಳಿಕೊಳ್ಳುತ್ತಾರೆ. "ಇಲ್ಲ ಅಳಿಯಂದ್ರೆ, ನಿಮಗೆ ವಿಷಯ ಗೊತ್ತಿಲ್ಲ ಅನ್ಸುತೆ. ನಾನು ಹೇಳ್ತಿನಿ. ಪಾರ್ಥ ಮತ್ತು ಅಪೇಕ್ಷಾ ಒಬ್ಬರನೊಬ್ಬರು ಮೊದಲಿನಿಂದಲೂ ಪ್ರೀತಿಸ್ತಾ ಇದ್ದಾರೆ. ಈ ವಿಷಯ ಯಾರಲ್ಲೂ ಹೇಳಬೇಡ ಎಂದಿದ್ದೆ. ಆದರೆ, ಅವನು ನನ್ನ ಮಾತು ಮೀರಿ ನಿಮ್ಮಲ್ಲಿ ಹೇಳಿದ್ದಾನೆ. ನೀವೆಲ್ಲರೂ ಸಂಬಂಧ ಕೇಳಿಕೊಂಡು ಇಲ್ಲಿಯವರೆಗೆ ಬರುವ ಹಾಗೇ ಮಾಡಿದ್ದಾನೆ. ನಾನು ಯಾವುದನ್ನು ಆಗಬಾರದು ಅಂದುಕೊಂಡಿದ್ದೇನೋ ಅದೇ ಆಗ್ತಾ ಇದೆ" ಎನ್ನುತ್ತಾರೆ ಸದಾಶಿವ.
ಇದನ್ನು ಓದಿ: ಅಮೃತಧಾರೆ ಧಾರಾವಾಹಿಯ ಎಲ್ಲಾ ಸಂಚಿಕೆಗಳು
ಇಬ್ಬರೂ ಮೊದಲಿನಿಂದಲೂ ಪ್ರೀತಿಸ್ತಾ ಇದ್ರ ಎಂದು ಗೌತಮ್ ಕೇಳಿದಾಗ ಪಾರ್ಥ ಹೌದು ಎಂದು ತಲೆಯಾಡಿಸುತ್ತಾನೆ. ನಿಮ್ಮ ಮಧ್ಯೆ ಇಷ್ಟೆಲ್ಲ ಆಗಿತ್ತಾ ಎಂದಾಗ ಅಪೇಕ್ಷಾ ಹೌದೆನ್ನುತ್ತಾಳೆ. "ನನಗೆ ಇವರಿಬ್ಬರ ಪ್ರೀತಿ ಇಷ್ಟ ಇರಲಿಲ್ಲ. ಅದಕ್ಕೆ ನಾನು ಪಾರ್ಥನಿಗೆ ಒಂದು ಸ್ಕೂಲ್ ಟಾಸ್ಕ್ ಕೊಟ್ಟೆ. ಆ ಪರೀಕ್ಷೆಯಲ್ಲಿ ಅವನು ಪಾಸ್ ಆಗೋಲ್ಲ. ಸೋತು ಹೋಗ್ತಾನೆ ಅಂದುಕೊಂಡಿದ್ದೆ. ಅವನು ನನ್ನ ನಿರೀಕ್ಷೆ ಮೀರಿ ಪರೀಕ್ಷೆ ಪಾಸಾಗಿಬಿಟ್ಟ. ನಾನು ಮತ್ತೆ ಇಕ್ಕಟ್ಟಿಗೆ ಸಿಲುಕಿದೆ. ಹಾಗೇ ಅವನು ನನ್ನ ಪರೀಕ್ಷೆಯಲ್ಲಿ ಪಾಸಾಗಬಹುದು. ಮುಂದೆ ಜೀವನ ಅವನಿಗೆ ನೀಡುವ ಪರೀಕ್ಷೆಯಲ್ಲಿ ಪಾಸಾಗುವುದು ತುಂಬಾ ಕಷ್ಟ" ಎನ್ನುತ್ತಾರೆ.
ನಮ್ಮ ಬಗ್ಗೆಯೂ ಯೋಚನೆ ಮಾಡಿ ಎಂದು ಕೈಮುಗಿದ ಸದಾಶಿವ
"ನನಗೆ ಭವಿಷ್ಯದ ಚಿಂತೆಯಿದೆ. ದಯವಿಟ್ಟು ನನ್ನ ಆತಂಕವನ್ನು ಅರ್ಥ ಮಾಡಿಕೊಳ್ಳಿ. ಇದರ ಹೊರತಾಗಿ ನನಗೆ ನಿಮ್ಮ ಮೇಲೆ ಆಗಲಿ, ಪಾರ್ಥನ ಮೇಲೆ ಆಗಲಿ ಬೇಜಾರಿಲ್ಲ." ಎಂದು ಸದಾಶಿವ ಭಿನ್ನಹ ಮಾಡುತ್ತಾರೆ. "ನನ್ನ ಮಗಳು ನಿಮ್ಮ ಮನೆಗೆ ಸೊಸೆಯಾಗಿ ಬಂದ್ರೆ ನೀವು ಅವಳನ್ನು ಚೆನ್ನಾಗಿ ನೋಡಿಕೊಳ್ತೀರಿ ಅನ್ನೋದು ನನಗೆ ಗೊತ್ತು. ಆದ್ರೆ, ನನ್ನ ಆತಂಕ ನನ್ನ ತಡೀತ ಇದೆ" ಎಂದು ಹೇಳುತ್ತಾರೆ. "ನಮ್ಮ ಬಗ್ಗೆಯೂ ಯೋಚನೆ ಮಾಡಿ. ಎಲ್ಲವನ್ನೂ ಅಳೆದು ತೂಗಿ ಒಂದು ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಮಗಳನ್ನು ಮದುವೆ ಮಾಡಿಕೊಟ್ರೆ ನಮ್ಮ ಪರಿಸ್ಥಿತಿ ಏನಾಗುತ್ತದೆ. ಸಮಾಜ ಏನು ಹೇಳುತ್ತದೆ. ದುಡ್ಡಿನ ದುರಾಸೆಗೆ, ಹಣದ ವ್ಯಾಮೋಹಕ್ಕೆ ನಾವು ನಮ್ಮ ಎಲ್ಲಾ ಮಕ್ಕಳನ್ನ ಶ್ರೀಮಂತರ ಮನೆಗೆ ಒಂದೇ ಮನೆಗೆ ಕೊಟ್ವಿ ಅಂತ ಮಾತನಾಡುತ್ತಾರೆ. ಈ ಸಮಾಜ ನಮ್ಮನ್ನು ಹೀಯಾಳಿಸುತ್ತದೆ. ನಮ್ಮದು ಒಂದು ಚಿಕ್ಕ ಪ್ರಪಂಚ.. ನನ್ನನ್ನು ಕ್ಷಮಿಸಿಬಿಡಿ" ಹೀಗೆ ಸಾಕಷ್ಟು ವಿಚಾರಗಳನ್ನು ಹೇಳುತ್ತಾರೆ ಭೂಮಿಕಾಳ ಅಪ್ಪ.
ಈ ಸಮಯದಲ್ಲಿ ಶಕುಂತಲಾದೇವಿ ಮಾತನಾಡಲು ಬಂದಾಗ "ಬೀಗರೇ ಈ ವಿಷಯದಲ್ಲಿ ಹೆಚ್ಚು ಚರ್ಚೆ ಬೇಡ" ಎನ್ನುತ್ತಾರೆ. "ನಾನು ಈ ಮದುವೆಗೆ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ನಮ್ಮ ಸಂಬಂಧ ತುಂಬಾ ಚೆನ್ನಾಗಿದೆ. ಅದು ಹೀಗೆಯೇ ಇರಲಿ" ಎನ್ನುತ್ತಾರೆ. "ಅಮ್ಮಾ ಬನ್ನಿ ಹೋಗೋಣ" ಎನ್ನುತ್ತಾರೆ ಗೌತಮ್. ಎಲ್ಲರೂ ಬೇಸರದಲ್ಲಿ ಹೊರಡುತ್ತಾರೆ. "ಭೂಮಿ ನೀನಾದ್ರೂ ಅಪ್ಪನಿಗೆ ಹೇಳು" ಎನ್ನುತ್ತಾಳೆ ಮಂದಾಕಿನಿ. ಆದರೆ, ಭೂಮಿಕಾ ತಾಂಬೂಲ ತೆಗೆದುಕೊಂಡು ಹೋಗುತ್ತಾಳೆ. ಎಲ್ಲರಲ್ಲಿಯೂ ದುಃಖವಿರುತ್ತದೆ.
ಇನ್ನೊಂದೆಡೆ ಜೈದೇವ್ ಕೋಪದಲ್ಲಿದ್ದಾನೆ. ಈ ಮನೆಗೆ ಅಪೇಕ್ಷಾ ಬರಬಾರದು ಎನ್ನುತ್ತಾನೆ. ನನಗೆ ಒಂದು ಮಾತು ಹೇಳದೆ, ಈ ರೀತಿ ಮಾಡಿದ್ರೆ ಏನಾಗುತ್ತದೆ. "ನಾನು ಇರುವಲ್ಲಿ ನಾನಿರಬೇಕು ಅಥವಾ ನನ್ನ ಶತ್ರುಗಳು ಇರಬೇಕು ಎಂದೆಲ್ಲ ಅಬ್ಬರಿಸುತ್ತಾನೆ. ಆದರೆ, ಈತನನ್ನು ಸಮಧಾನ ಮಾಡಲು ಮನೆಹಾಳ ಮಾವ ಪ್ರಯತ್ನಿಸುತ್ತಾರೆ. "ಅಪೇಕ್ಷಾ ಈ ಮನೆಗೆ ಸೊಸೆಯಾಗಿ ಬರಬಾರದು. ನಾನು ಅದಕ್ಕೆ ಅವಕಾಶ ನೀಡೋಲ್ಲ" ಎಂದು ಕಠೋರವಾಗಿ ಹೇಳುತ್ತಾನೆ. ಇನ್ನೊಂದೆಡೆ ಶಕುಂತಲಾ ಕೋಪದಲ್ಲಿದ್ದಾರೆ. ಆಕೆಗೆ ಸಮಧಾನ ಹೇಳಲು ಅಣ್ಣ ಪ್ರಯತ್ನಿಸುತ್ತಾನೆ. ಅಲ್ಲಿಗೆ ಭೂಮಿಕಾ ಆಗಮಿಸುತ್ತಾಳೆ. "ಅತ್ತೆ ಏನಿದೆಲ್ಲ. ಯಾಕೆ ಹೀಗೆ ಮಾಡ್ತಿರಿ. ನನಗಂತೂ ಒಂದೂ ಅರ್ಥ ಆಗ್ತಾ ಇಲ್ಲ" ಎನ್ನುತ್ತಾಳೆ.
ಭೂಮಿಕಾಳ ಮಾತು ರೆಕಾರ್ಡ್ ಮಾಡಿದ ಲಕ್ಷ್ಮಿಕಾಂತ್
"ನಾನು ಭೂಮಿಕಾಳ ಬಳಿ ಮಾತನಾಡಬೇಕು. ಅಣ್ಣ ಹೊರಗಿರು ಹೇಳುತ್ತಾಳೆ" ಸರಿ ಎಂದು ಅಣ್ಣ ಹೊರಗೆ ಹೋಗುವಾಗ ಮೆಲ್ಲಗೆ ಇಲ್ಲಿ ಆಗೋದೆಲ್ಲ ರೆಕಾರ್ಡ್ ಮಾಡ್ಕೋ ಎನ್ನುತ್ತಾಳೆ. ಈ ಮೂಲಕ ಈ ಇಕ್ಕಟ್ಟಿನಲ್ಲಿ ಭೂಮಿಕಾಳನ್ನು ಸಿಕ್ಕಿಹಾಕಿಸಲು ಯತ್ನಿಸುತ್ತಾಳೆ. "ಪಾರ್ಥ ಬಂದು ನನ್ನ ಅಪೇಕ್ಷಾಳನ್ನು ಪ್ರೀತಿಸ್ತೀನಿ ಅಂದ. ಈ ಸಮಯದಲ್ಲಿ ಕರುಳು ಕರಗಿ ಈ ನಿರ್ಧಾರ ಮಾಡಿದೆ" ಎನ್ನುತ್ತಾಳೆ ಶಕುಂತಲಾ. ಆದರೆ, ಈ ಮದುವೆ ನಡೆಯುವುದು ಸರಿಯಾಗೋಲ್ಲ" ಎಂದು ಭೂಮಿಕಾ ಹೇಳುತ್ತಾಳೆ. ಅದಕ್ಕೆ ಕಾರಣವನ್ನೂ ಹೇಳುತ್ತಾಳೆ. ಈ ಮಾತನ್ನೆಲ್ಲ ಲಕ್ಷ್ಮಿಕಾಂತ್ ರೆಕಾರ್ಡ್ ಮಾಡಿಕೊಳ್ಳುತ್ತಾರೆ. ಸೀರಿಯಲ್ ಮುಂದುವರೆಯುತ್ತದೆ.
ಅಮೃತಧಾರೆ ಸೀರಿಯಲ್ ಪಾತ್ರವರ್ಗ
ಛಾಯಾ ಸಿಂಗ್: ಭೂಮಿಕಾ (ನಾಯಕಿ)
ರಾಜೇಶ್ ನಟರಂಗ್: ಗೌತಮ್ ದಿವಾನ್ (ನಾಯಕ)
ವನಿತಾ ವಾಸು: ಶಕುಂತಳಾ (ಗೌತಮ್ ಮಲತಾಯಿ)
ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್ ತಂದೆ)
ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)
ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)
ಸಾರಾ ಅಣ್ಣಯ್ಯ : ಮಹಿಮಾ (ಗೌತಮ್ ತಂಗಿ, ಶಂಕುತಳಾ ಮಗಳು, ಜೀವನ್ ಹೆಂಡತಿ)
ಶಶಿ ಹೆಗ್ಗಡೆ: ಜೀವನ್ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)
ರಣವ್: ಜೈದೇವ್
ಚಂದನ್: ಅಶ್ವಿನಿ
ಸ್ವಾತಿ: ಅಪರ್ಣಾ (ಆನಂದ್ ಹೆಂಡತಿ)
ಆನಂದ್: ಆನಂದ್ (ಗೌತಮ್ ಸ್ನೇಹಿತ, ಅಪರ್ಣಾ ಗಂಡ)
ವಿಭಾಗ