ಕನ್ನಡ ಸುದ್ದಿ  /  ಮನರಂಜನೆ  /  Amruthadhaare: ಮಲ್ಲಿಯನ್ನು ಕೋಮಾಕ್ಕೆ ಕಳುಹಿಸುವ ಶಕುಂತಲಾದೇವಿಯ ಪ್ಲ್ಯಾನ್‌ ಪ್ಲಾಪ್‌ ಮಾಡಿದ್ಲು ಮಹಿಮಾ; ಭೂಮಿಕಾಳಿಗಾಗಿ ಹುಡುಕಾಟ

Amruthadhaare: ಮಲ್ಲಿಯನ್ನು ಕೋಮಾಕ್ಕೆ ಕಳುಹಿಸುವ ಶಕುಂತಲಾದೇವಿಯ ಪ್ಲ್ಯಾನ್‌ ಪ್ಲಾಪ್‌ ಮಾಡಿದ್ಲು ಮಹಿಮಾ; ಭೂಮಿಕಾಳಿಗಾಗಿ ಹುಡುಕಾಟ

Amruthadhaare Serial Yesterday Episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರವಾಹಿಯ ಶುಕ್ರವಾರ ಸಂಚಿಕೆಯಲ್ಲಿ ಮಲ್ಲಿಯನ್ನು ಕೋಮಕ್ಕೆ ಕಳುಹಿಸುವ ಶಕುಂತಲಾದೇವಿಯ ಯೋಜನೆಯನ್ನು ಮಹಿಮಾ ವಿಫಲಗೊಳಿಸಿದ್ದಾಳೆ. ಆದರೆ, ಆಸ್ಪತ್ರೆಗೆ ರೌಡಿಗಳನ್ನು ಕಳುಹಿಸಿ ಮಲ್ಲಿಯನ್ನು ಸಾಯಿಸಲು ಶಕುಂತಲಾ ಯೋಜಿಸಿದ್ದಾಳೆ.

ಮಲ್ಲಿಯನ್ನು ಕೋಮಾಕ್ಕೆ ಕಳುಹಿಸುವ ಶಕುಂತಲಾದೇವಿಯ ಪ್ಲ್ಯಾನ್‌ ಪ್ಲಾಪ್‌ ಮಾಡಿದ್ಲು ಮಹಿಮಾ
ಮಲ್ಲಿಯನ್ನು ಕೋಮಾಕ್ಕೆ ಕಳುಹಿಸುವ ಶಕುಂತಲಾದೇವಿಯ ಪ್ಲ್ಯಾನ್‌ ಪ್ಲಾಪ್‌ ಮಾಡಿದ್ಲು ಮಹಿಮಾ

Amruthadhaare Serial Yesterday Episode: ಗೌತಮ್‌, ಆನಂದ್‌ ಮತ್ತು ಪೊಲೀಸರು ದೇವಾಲಯವೊಂದರ ಸುತ್ತ ಸುತ್ತುತ್ತಿದ್ದಾರೆ. ಅಲ್ಲಿ ಭೂಮಿಕಾ ಕಾಣಿಸುವುದಿಲ್ಲ. ಈ ಸಮಯದಲ್ಲಿ ಕೆಂಚಪ್ಪ ಕಾಲ್‌ ಮಾಡುತ್ತಾನೆ. "ನನ್ನನ್ನು ಹುಡುಕುತ್ತ ಪೊಲೀಸರು ದೇವಸ್ಥಾನ ಹತ್ರ ಹೋದ್ರಂತೆ. ನಾನು ಅಷ್ಟು ಸುಲಭವಾಗಿ ಸಿಗುವ ಮಿಕ ಅಲ್ಲ. ಬೇಟೆ ನಾಯಿ ನಾನು. ನನಗೆ ದುಡ್ಡು ಕಳುಹಿಸಿ. ಇಲ್ಲಾಂದ್ರೆ ಮೇಡಂರನ್ನು ಸಾಯಿಸ್ತಿನಿ" ಅಂತ ಬೆದರಿಸ್ತಾನೆ ಕೆಂಚ. ನಾನು ಈಗಲೇ ದುಡ್ಡು ಹಾಕಿಸ್ತಿನಿ ಎಂದು ಗೌತಮ್‌ ಹೇಳುತ್ತಾನೆ. ಆನಂದ್‌ ಬೇಡವಂದರೂ ಗೌತಮ್‌ ಹಣ ಹಾಕಲು ಹೇಳುತ್ತಾನೆ. ಸ್ವಲ್ಪ ಹೊತ್ತಲ್ಲಿ ಕೆಂಚನ ಅಕೌಂಟ್‌ಗೆ ದುಡ್ಡು ಬರುತ್ತದೆ.

ಟ್ರೆಂಡಿಂಗ್​ ಸುದ್ದಿ

ಇನ್ನೊಂದೆಡೆ ಮಲ್ಲಿ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ಬರುತ್ತಾಳೆ. ಅಲ್ಲಿ ಮೊದಲೇ ಶಕುಂತಲಾದ ದೇವಿ ಫಿಕ್ಸ್‌ ಮಾಡಿರುವ ಡಾಕ್ಟರ್‌ ಇರುತ್ತಾರೆ. ಆಕೆಗೆ ಶಕುಂತಲಾದೇವಿ ಕಾಲ್‌ ಮಾಡುತ್ತಾರೆ. ಆಕೆ ಕೋಮಕ್ಕೆ ಹೋಗಬೇಕು ಅಷ್ಟೆ. ಆಸ್ಪತ್ರೆಯಲ್ಲಿ ಅಡ್ಮಿಟ್‌ ಆದವಳು ಮನೆಗೆ ವಾಪಸ್‌ ಬರಬಾರದು ಎಂದು ಸೂಚನೆ ನೀಡುತ್ತಾಳೆ ಶಕುಂತಲಾದೇವಿ. ಪೇಷೆಂಟ್‌ ಜತೆಗೆ ಬಂದವರಿಗೆ ಏನಾದ್ರೂ ಹೇಳಬೇಕಲ್ವ ಎಂದು ಡಾಕ್ಟರ್‌ ಹೇಳುತ್ತಾರೆ.

ಹಣ ಟ್ರಾನ್ಸ್‌ಫಾರ್‌ ಆದ ಬಳಿಕ ಕೆಂಚ ಅಷ್ಟಕ್ಕೆ ಸುಮ್ಮನಾಗುವುದಿಲ್ಲ. ಭೂಮಿಕಾಳನ್ನು ಬಿಡು ಎಂದಾಗ "ನನಗೆ ಇನ್ನೂ ವಸಿ ದುಡ್ಡು ಬೇಕು ಅನಿಸ್ತದೆ" ಎಂದು ಹೇಳುತ್ತಾನೆ. "ನಾಟಕ ಆಡ್ತಾ ಇದ್ದೀಯಾ. ಭೂಮಿಕಾಳಿಗೆ ಏನಾದ್ರೂ ಆದ್ರೆ ಸುಮ್ಮನಿರುವುದಿಲ್ಲ" ಎಂದು ಗೌತಮ್‌ ಅಬ್ಬರಿಸುತ್ತಾನೆ. "ಇನ್ನರ್ಧಗಂಟೆಯಲ್ಲಿ ನಾನು ಕೇಳಿದ ಹಣ ನೀಡಿ, ಇಲ್ಲಾಂದ್ರೆ ಸುಮ್ಮನಿರೋದಿಲ್ಲ" ಎನ್ನುತ್ತಾನೆ. ಈ ಸಮಯದಲ್ಲಿ ಪೊಲೀಸರು ಬಂದು ಲೊಕೆಷನ್‌ ಗೊತ್ತಾಯ್ತು, ಬನ್ನಿ ಎಂದು ಇವರನ್ನು ಕರೆದುಕೊಂಡು ಬರುತ್ತಾರೆ.

ಮಲ್ಲಿ ಆಸ್ಪತ್ರೆಯಲ್ಲಿದ್ದಾಳೆ. ಆಸ್ಪತ್ರೆಗೆ ಜೀವನ್‌ನನ್ನೂ ಕರೆಸ್ತಾಳೆ ಮಹಿಮಾ. ಅಲ್ಲಿಗೆ ಬಂದ ಡಾಕ್ಟರ್‌ "ಸ್ವಲ್ಪ ಸಮಸ್ಯೆ ಆದ ಹಾಗೆ ಇದೆ. ಸಣ್ಣ ಆಪರೇಷನ್‌ ಮಾಡಬೇಕಾಗಬಹುದು" ಎನ್ನುತ್ತಾರೆ. ಜೈದೇವ್‌ ಟೆನ್ಷನ್‌ಗೊಂಡವನಂತೆ ನಾಟಕವಾಡುತ್ತಾನೆ. ಇಂಟರ್ನಲ್‌ ಬ್ಲೀಡಿಂಗ್‌ ಆಗಿರುವ ಸಾಧ್ಯತೆ ಇದೆ. ಸ್ಕ್ಯಾನ್‌ ಮಾಡಿ ನೋಡ್ತೀವಿ ಎನ್ನುತ್ತಾರೆ. ಬ್ಲೀಡಿಂಗ್‌ ಆದ್ರೆ ಮಗುವನ್ನು ಉಳಿಸೋದು ಕಷ್ಟವಾಗಬಹುದು ಎಂದು ಡಾಕ್ಟರ್‌ ಹೇಳುತ್ತಾರೆ. ಮಗುವನ್ನು ಉಳಿಸಿ ಎಂದು ನಾಟಕೀಯವಾಗಿ ಜೈದೇವ್‌ ಕೈಮುಗಿಯುತ್ತಾನೆ.

ಪೊಲೀಸರು ಮತ್ತು ಗೌತಮ್‌, ಆನಂದ್‌ ಲೊಕೆಷನ್‌ ಆಧರಿಸಿ ಹೋಗುತ್ತಾರೆ. ಒಂದು ದಾರಿಯಲ್ಲಿ ಪೊಲೀಸರು ಹೋಗುತ್ತಾರೆ. ಅವರು ಯಾವ ದಾರಿಯಲ್ಲಿ ಹೋದ್ರು ಎಂದು ಗೌತಮ್‌ಗೆ ಗೊತ್ತಾಗುವುದಿಲ್ಲ. ಅಲ್ಲಿ ಎರಡು ರಸ್ತೆ ಇರುತ್ತದೆ. ಜೀಪು ನಿಲ್ಲಿಸಿ ನೋಡಿದಾಗ ಒಂದು ದಾರಿಯಲ್ಲಿ ಭೂಮಿಕಾಳ ಕಿವಿಯೋಲೆ ಕಾಣಿಸುತ್ತದೆ. ಭೂಮಿಕಾ ಕಿವಿಯೋಲೆ ಮತ್ತು ಬಲೆಗಳನ್ನು ಉದುರಿಸಿದ್ದು ಸಾರ್ಥಕವಾಗಿರುತ್ತದೆ. ಇದನ್ನೇ ಆಧರಿಸಿ ಆ ದಾರಿಯಲ್ಲಿ ಗೌತಮ್‌ ಮತ್ತು ಆನಂದ್‌ ಹೋಗುತ್ತಾರೆ. ಪೊಲೀಸರು ಜೀಪು ಕೆಂಚಪ್ಪನ ರೌಡಿಗಳು ಇರುವಲ್ಲಿಗೆ ಬರುತ್ತದೆ. ಪೊಲೀಸರು ಎಲ್ಲರನ್ನೂ ಬಂಧಿಸ್ತಾರೆ. ಆದರೆ, ಅಲ್ಲಿ ಕೆಂಚ ಇರುವುದಿಲ್ಲ. ಇನ್ನೊಂದೆಡೆ ಸುಳಿವಿನ ಆಧಾರದಲ್ಲಿ ಗೌತಮ್‌ ಗನ್‌ ಹಿಡಿದುಕೊಂಡು ಆನಂದ್‌ನ ಜತೆ ಕೆಂಚನ ಹುಡುಕಲು ಹೋಗುತ್ತಾರೆ.

ಶಕುಂತಲಾದೇವಿಯ ಪ್ಲ್ಯಾನ್‌ ಪ್ಲಾಪ್‌ ಮಾಡಿದ್ಲು ಮಹಿಮಾ

ಸ್ವಲ್ಪ ಹೊತ್ತಲ್ಲಿ ಡಾಕ್ಟರ್‌ ಶಕುಂತಲಾಗೆ ಫೋನ್‌ ಮಾಡಿ ಸ್ವಲ್ಪ ಹೊತ್ತಲ್ಲಿಯೇ ಆಸ್ಪತ್ರೆಗೆ ಕರೆದೊಯ್ಯುವುದಾಗಿ ತಿಳಿಸುತ್ತಾರೆ. ರಿಪೋರ್ಟ್‌ ಪ್ರಕಾರ ಆಪರೇಷನ್‌ ಮಾಡಬೇಕು ಎಂದು ಜೈದೇವ್‌ಗೆ ಡಾಕ್ಟರ್‌ ಹೇಳುತ್ತಾರೆ. ಇದೇ ಸಮಯದಲ್ಲಿ ಮಹಿಮಾ "ಟೆನ್ಷನ್‌ ಮಾಡಬೇಡ ಅಣ್ಣಾ, ಇಷ್ಟಕ್ಕೆ ಭಯಪಡಬೇಡ. ನಾವು ಸೆಕೆಂಡ್‌ ಒಪಿನಿಯನ್‌ ಪಡೆಯೋಣ. ನಾನು ನಮ್ಮ ಡಾಕ್ಟರ್‌ರನ್ನ ಬರಲು ಹೇಳಿದ್ದೇನೆ" ಎಂದು ಮಹಿಮಾ ಹೇಳಿದಾಗ ಜೈದೇವ್‌ಗೆ ಶಾಕ್‌ ಆಗುತ್ತದೆ. "ನನಗೆ ಪರಿಚಯ ಇರುವ ಡಾಕ್ಟರ್‌. ತುಂಬಾ ಫೇಮಸ್‌ ಅವರು" ಎಂದು ಮಹಿಮಾ ಹೇಳಿದಾಗ ಈ ಆಸ್ಪತ್ರೆಯ ಡಾಕ್ಟರ್‌, ಜೈದೇವ್‌ ಎಲ್ಲರಿಗೂ ಭಯವಾಗುತ್ತದೆ. ಅವರು ಮಾತನಾಡುತ್ತಿರುವಾಗಲೇ ಆ ಡಾಕ್ಟರ್‌ ಆಗಮಿಸುತ್ತಾರೆ. ಪೇಷೆಂಟ್‌ ರಿಪೋರ್ಟ್‌ ತೆಗೆದುಕೊಳ್ಳುತ್ತಾರೆ. "ಸೀರಿಯಸ್‌ ಪ್ರಾಬ್ಲಂ ಅಲ್ಲ. ಆಪರೇಷನ್‌ ಮಾಡುವ ಅಗತ್ಯವಿಲ್ಲ. 24 ಅವರ್ಸ್‌ ಅಬ್ಸರ್ವೇಷನ್‌ನಲ್ಲಿ ಇಡೋಣ. ರಿಕವರ್‌ ಆಗಿಲ್ಲಂದ್ರೆ ಮುಂದೆ ಏನು ಮಾಡಬೇಕು ಎಂದು ಯೋಚಿಸೋಣ" ಎಂದು ಆ ಡಾಕ್ಟರ್‌ ಹೇಳುತ್ತಾರೆ. ಇದಾದ ಬಳಿಕ ಆ ಡಾಕ್ಟರ್‌ ಪೇಷೆಂಟ್‌ ನೋಡಿ ವಾಪಸ್‌ ಹೋಗುತ್ತಾರೆ. ಈ ಮೂಲಕ ಮಲ್ಲಿ ಮುಂದಾಗುವ ಅಪಾಯದಿಂದ ಸದ್ಯ ಪಾರಾಗಿದ್ದಾಳೆ. ಇದಾದ ಬಳಿಕ ಜೈದೇವ್‌ ತಾಯಿಗೆ ಕಾಲ್‌ ಮಾಡುತ್ತಾನೆ. ಎಲ್ಲಾ ಕಥೆ ಹೇಳುತ್ತಾನೆ. ಶಕುಂತಲಾದೇವಿಗೆ ಟೆನ್ಷನ್‌ ಆಗುತ್ತದೆ. ಆಕೆಯನ್ನು ಆಸ್ಪತ್ರೆಯಲ್ಲೇ ಮುಗಿಸುವ ಕುರಿತು ಪ್ಲ್ಯಾನ್‌ ಮಾಡುತ್ತಾಳೆ. ಆಸ್ಪತ್ರೆಗೆ ರೌಡಿಗಳನ್ನು ಕಳುಹಿಸುತ್ತಾಳೆ. ಸೀರಿಯಲ್‌ ಮುಂದುವರೆಯುತ್ತದೆ.

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)

ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)

ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)

ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)

ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)

ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)

ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)

ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)

ರಣವ್‌: ಜೈದೇವ್‌

ಚಂದನ್‌: ಅಶ್ವಿನಿ

ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)

ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)

ಟಿ20 ವರ್ಲ್ಡ್‌ಕಪ್ 2024