ಕನ್ನಡ ಸುದ್ದಿ  /  ಮನರಂಜನೆ  /  ಮಲ್ಲಿಗೆ ಔಷಧ ಬೆರೆಸಿದ ಹಾಲು ಕುಡಿಸಿಯೇ ಬಿಟ್ಲು ಶಕುಂತಲಾದೇವಿ; ಕೆಂಚನಿಂದ ಭೂಮಿಕಾಳ ರಕ್ಷಿಸಲು ಗೌತಮ್‌ ಪರದಾಟ, ಅಮೃತಧಾರೆ ಧಾರಾವಾಹಿ ಕಥೆ

ಮಲ್ಲಿಗೆ ಔಷಧ ಬೆರೆಸಿದ ಹಾಲು ಕುಡಿಸಿಯೇ ಬಿಟ್ಲು ಶಕುಂತಲಾದೇವಿ; ಕೆಂಚನಿಂದ ಭೂಮಿಕಾಳ ರಕ್ಷಿಸಲು ಗೌತಮ್‌ ಪರದಾಟ, ಅಮೃತಧಾರೆ ಧಾರಾವಾಹಿ ಕಥೆ

Amruthadhaare Serial Yesterday Episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಗುರುವಾರದ ಸಂಚಿಕೆಯಲ್ಲಿ ಹಲವು ವಿದ್ಯಮಾನಗಳು ನಡೆದಿವೆ. ಕಾಣೆಯಾದ ಮಹಿಮಾಳನ್ನು ಹುಡುಕುತ್ತ ಗೌತಮ್‌ ಕಂಗಲಾಗಿದ್ದಾರೆ. ಇದೇ ಸಮಯದಲ್ಲಿ ಔಷಧ ಬೆರೆಸಿದ ಹಾಲನ್ನು ಮಲ್ಲಿಗೆ ಶಕುಂತಲಾದೇವಿ ಕುಡಿಸಿದ್ದಾಳೆ. ಇದರಿಂದ ಮಲ್ಲಿಗೆ ಹೊಟ್ಟೆ ನೋವು ಆರಂಭವಾಗಿದೆ.

ಮಲ್ಲಿಗೆ ಔಷಧ ಬೆರೆಸಿದ ಹಾಲು ಕುಡಿಸಿಯೇ ಬಿಟ್ಲು ಶಕುಂತಲಾದೇವಿ; ಕೆಂಚನಿಂದ ಭೂಮಿಕಾಳ ರಕ್ಷಿಸಲು ಗೌತಮ್‌ ಪರದಾಟ
ಮಲ್ಲಿಗೆ ಔಷಧ ಬೆರೆಸಿದ ಹಾಲು ಕುಡಿಸಿಯೇ ಬಿಟ್ಲು ಶಕುಂತಲಾದೇವಿ; ಕೆಂಚನಿಂದ ಭೂಮಿಕಾಳ ರಕ್ಷಿಸಲು ಗೌತಮ್‌ ಪರದಾಟ

Amruthadhaare Serial Story: ರಿಯಲ್‌ ಐ ಲವ್‌ ಯು ಭೂಮಿಕಾ ಎಂದು ಹೇಳಿ ಗೌತಮ್‌ ಹಿಂತುರುಗಿ ನೋಡಿದಾಗ ಅಲ್ಲಿ ಭೂಮಿಕಾ ಅಲ್ಲಿರಲಿಲ್ಲ. ಆತಂಕಗೊಂಡ ಗೌತಮ್‌ ಜೋರಾಗಿ ಭೂಮಿಕಾ... ಭೂಮಿಕಾ ಎಂದು ಕರೆಯುತ್ತಾನೆ. ಇನ್ನೊಂದೆಡೆ ಶಕುಂತಲಾದೇವಿ ಆತಂಕದಲ್ಲಿದ್ದಾಳೆ. ಆ ಸಮಯದಲ್ಲಿ "ನಿಮ್ಮ ಮುಂದಿನ ಕ್ರಮವೇನು?" ಎಂದು ಮನೆಹಾಳ ಮಾವ ಕೇಳುತ್ತಾನೆ. ಆ ಸಮಯದಲ್ಲಿ ಶಕುಂತಲಾದೇವಿ ಒಂದು ಬಾಕ್ಸ್‌ ತೋರಿಸಿ "ಇದನ್ನು ಮಲ್ಲಿ ಕುಡಿಯುವ ಹಾಲಿಗೆ ಮಿಕ್ಸ್‌ ಮಾಡಬೇಕು" ಎಂದು ಹೇಳುತ್ತಾಳೆ. "ಮಲ್ಲಿ ಹಾಲು ಕುಡಿಯುವ ಮುನ್ನ ನೀನು ಕುಡಿಯಬೇಕು ಅಲ್ವ" ಎಂದು ಅಣ್ಣ ನೆನಪಿಸುತ್ತಾನೆ.

ಟ್ರೆಂಡಿಂಗ್​ ಸುದ್ದಿ

ನಾನು ಸ್ವಲ್ಪ ಕುಡಿದರೆ ಏನಾಗದು ಎನ್ನುತ್ತಾಳೆ. ಈ ಪುಡಿ ಮಿಶ್ರಣ ಮಾಡಿರುವ ಹಾಲು ಕುಡಿದರೆ ವಿಪರೀತ ಹೊಟ್ಟೆ ನೋವು ಅನುಭವಿಸುತ್ತಾಳೆ. ಹೊಟ್ಟೆ ನೋವು ಜೋರಾದಗ ನಾವು ಅವಳನ್ನು ಆಸ್ಪತ್ರೆಗೆ ಸೇರಿಸುತ್ತೇವೆ ಎಂದು ತನ್ನ ಪ್ಲ್ಯಾನ್‌ ವಿವರಿಸುತ್ತಾಳೆ ಶಕುಂತಲಾದೇವಿ. "ಆಸ್ಪತ್ರೆಗೆ ಸೇರಿಸಿದ ಬಳಿಕ ಸ್ಟೋರಿ ಆರಂಭವಾಗುತ್ತದೆ. ಮಲ್ಲಿ ಆಸ್ಪತ್ರೆಗೆ ಹೋದ ಮೇಲೆ ಅಲ್ಲಿ ಅವಳನ್ನು ಚೆಕ್‌ ಮಾಡುವ ಡಾಕ್ಟರ್‌ ನನಗೆ ಗೊತ್ತಿರುವವರು. ಅವರ ಜತೆ ಮ್ಯಾಚ್‌ ಫಿಕ್ಸಿಂಗ್‌ ಆಗಿದೆ. ಆಕೆ ಅಡ್ಮಿಟ್‌ ಆದ ಮೇಲೆ ಏನು ಮಾಡಬೇಕು ಎಂದು ಡಾಕ್ಟರ್‌ಗೆ ಹೇಳಿದ್ದೇನೆ. ಆಕೆ ಬದುಕಿದರೂ ಜೀವಂತ ಶವವಾಗುತ್ತಾಳೆ. ನಾನು ಅವಳನ್ನು ಪರ್ಮೆನೆಂಟ್‌ ಆಗಿ ಕೋಮಾಕ್ಕೆ ಕಳುಹಿಸಲು ಸೂಚನೆ ನೀಡಿದ್ದೇನೆ" ಎಂದು ಶಕುಂತಲಾದೇವಿ ತನ್ನ ಕ್ರಿಮಿನಲ್‌ ಪ್ಲ್ಯಾನ್‌ ಕುರಿತು ತಿಳಿಸುತ್ತಾಳೆ.

ಕಾಡಿನ ನಡುವೆ ಗೌತಮ್‌ ಭೂಮಿಕಾಳನ್ನು ಹುಡುಕುತ್ತಾನೆ. ಆ ಸಮಯದಲ್ಲಿ ಕೆಂಚ ಭೂಮಿಕಾಳ ಬಾಯಿ ಮುಚ್ಚಿ ಕೊಂಡೊಯ್ಯುತ್ತ ಇರುತ್ತಾನೆ. ಆಕೆಯ ಗ್ಯಾಂಗ್‌ ಜೀಪ್‌ನಲ್ಲಿ ಬಳಿಕ ಸಾಗುತ್ತಾರೆ. ಕಾಫಿ ತೋಟಗಳ ನಡುವೆ ಆಕೆಯ ಕಿಡ್ನ್ಯಾಪ್‌ ಆಗುತ್ತದೆ. ಗೌತಮ್‌ ಹುಡುಕುತ್ತಾ ಇದ್ದಾನೆ.

ಮಲ್ಲಿಗೆ ಔಷಧ ಬೆರೆಸಿದ ಹಾಲು

ಮನೆಹಾಳ ಮಾವ ಹಾಲು ತರುತ್ತಾನೆ. ಅದಕ್ಕೆ ಶಕುಂತಲಾದೇವಿ ಪುಡಿ ಮಿಶ್ರ ಮಾಡುತ್ತಾಳೆ. ಈ ಸಮಯದಲ್ಲಿ ಅಲ್ಲಿಗೆ ಭೂಮಿಕಾ ಬರುತ್ತಾಳೆ. ಮಲ್ಲಿಯೂ ಅಲ್ಲಿರುತ್ತಾಳೆ. ಮಲ್ಲಿಗೆ ಊಟ ಆದ ಮೇಲೆ ಕೇಸರಿ ಹಾಳು ಕುಡಿದ ಅಭ್ಯಾಸ ಎಂದು ಹಾಲು ಕೊಡುತ್ತಾಳೆ. ಈ ಹಾಳನ್ನು ಮಲ್ಲಿ ಕುಡಿಯುತ್ತಾಳೆ. ಮಲ್ಲಿ ನೀನು ಹೋಗಿ ರೆಸ್ಟ್‌ ತಗೋ ಎಂದು ಆಕೆಯನ್ನು ಶಕುಂತಲಾದೇವಿ ಕಳುಹಿಸುತ್ತಾಳೆ. ಮಹಿಮಾಳಲ್ಲಿ ಮಾತನಾಡುತ್ತಾಳೆ. "ನಿನ್ನ ಅತ್ತೆ ಕಾಲ್‌ ಮಾಡಿದ್ರು, ನೀನು ಆ ಮನೆ ಬಿಟ್ಟು ಇಲ್ಲಿರುವುದು ಸರಿಯಲ್ಲ" ಎನ್ನುತ್ತಾಳೆ. "ನಾನು ಇಲ್ಲಿಗೆ ಬಂದದ್ದು ಅತ್ತೆಗೆ ಇಷ್ಟವಿಲ್ಲದೆ ಇದ್ರೆ ಅವರೇ ಹೇಳ್ತಾ ಇದ್ರು. ನಾನೆಂದ್ರೆ ನಿನಗೆ ಅಲರ್ಜಿ" ಎನ್ನುತ್ತಾಳೆ ಮಹಿಮಾ. "ಮದುವೆಯಾದವಳು ಇಲ್ಲಿರುವುದು ಹೇಗೆ, ನಾಲ್ಕು ಜನ ಏನು ಹೇಳುತ್ತಾರೆ" ಎಂದು ಶಕುಂತಲಾದೇವಿ ಹೇಳುತ್ತಾರೆ. "ಹಾಗಾದರೆ ಅಶ್ವಿನಿಗೆ ಯಾರೂ ಹೇಳೋಲ್ವ. ನಾನಂತೂ ಇಲ್ಲಿಂದ ಹೋಗೋಲ್ಲ. ನಾನು ಈ ಮನೆಯವಳೇ, ನಾನು ಹೋಗೋದೇ ಇಲ್ಲ" ಎಂದು ಹೇಳುತ್ತಾಳೆ ಮಹಿಮಾ. ಆಕೆಯನ್ನು ಮನೆಯಿಂದ ಸಾಗಿಸುವ ಈಕೆಯ ಪ್ರಯತ್ನ ವಿಫಲವಾಗಿದೆ. "ನೋಡಿ ಇನ್ನೊಂದು ಸಲ ನನ್ನ ಮುಂದೆ ಈ ಚೀಫ್‌ ಟ್ರಿಕ್‌ ಮಾಡಬೇಡಿ. ನಾನು ಅಶ್ವಿನಿ ರೀತಿ ಅತ್ತೆಮಾವ ವಿರುದ್ಧವಾಗಿ ಬಂದದ್ದಲ್ಲ" ಎಂದು ಹೇಳುತ್ತಾಳೆ. ಮಹಿಮಾ ಹೋದ ಬಳಿಕ "ನಾನು ಅಂದುಕೊಂಡದ್ದನ್ನು ಮಾಡಿಯೇ ಮಾಡಿ ತೀರುತ್ತೇನೆ" ಎನ್ನುತ್ತಾಳೆ ಶಕುಂತಲಾ.

ಭೂಮಿಕಾಳಿಗಾಗಿ ಹುಡುಕಾಟ

ಗೌತಮ್‌ ಭೂಮಿಕಾಳನ್ನು ಹುಡುಕುತ್ತಾ ಇದ್ದಾನೆ. ಜೀಪ್‌ನಲ್ಲಿ ಕೆಂಚ ಮತ್ತು ರೌಡಿಗಳು ಭೂಮಿಕಾಳನ್ನು ಕೊಂಡೊಯ್ಯುತ್ತ ಇದ್ದಾರೆ. ಬೊಬ್ಬೆ ಹೊಡೆದರೆ ಸಾಯಿಸ್ತಿನಿ ಅನ್ನುತ್ತಾರೆ. ಹುಡುಕುವವರಿಗೆ ಸಹಾಯವಾಗಲಿ ಎಂದು ಮಹಿಮಾ ತನ್ನ ಕಿವಿಯೋಲೆ, ಬಲೆಗಳನ್ನು ದಾರಿಯಲ್ಲಿ ಚೆಲ್ಲುತ್ತಾಳೆ. ರಾವಣ ಸೀತೆಯನ್ನು ಅಪಹರಣ ಮಾಡಿದಾಗ ಸೀತೆ ಮಾಡಿದಂತೆ ಹುಡುಕುವವರಿಗೆ ತಿಳಿಯಲಿ ಎಂದು ಹೀಗೆ ಮಾಡಿದ್ದಾಳೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ವೀಕ್ಷಕರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಗೌತಮ್‌ ಕಾಫಿ ತೋಟದ ನಡುವೆ ಎಲ್ಲಾ ಕಡೆಗಳಲ್ಲಿಯೂ ಭೂಮಿಕಾಳನ್ನು ಹುಡುಕುತ್ತಾನೆ.

ಆನಂದ್‌ ಗೆಸ್ಟ್‌ ಹೌಸ್‌ನಲ್ಲಿದ್ದಾನೆ. ನಮ್ಮ ಡುಮ್ಮ ಸರ್‌ ಈಗ ಪ್ರಪೋಸ್‌ ಮಾಡಿರಬಹುದು ಎಂದು ಅಪರ್ಣಾ ಹೇಳುತ್ತಾಳೆ. ಆಗ ಗೌತಮ್‌ ಕಾಲ್‌ ಮಾಡುತ್ತಾನೆ. "ದೊಡ್ಡ ಪ್ರಾಬ್ಲಂ ಆಗಿದೆ" ಎಂದು ಎಲ್ಲಾ ವಿಷಯ ತಿಳಿಸುತ್ತಾನೆ. ತಕ್ಷಣ ಅಲ್ಲಿಗೆ ಆನಂದ್‌ ಹೋಗುತ್ತಾನೆ. ಕೆಂಚನಿಗೆ ಜೈದೇವ್‌ ಕಾಲ್‌ ಮಾಡುತ್ತಾನೆ. "ನಿಮ್ಮ ಅತ್ತಿಗೆ ಕಥೆ ಮುಗೀತು" ಅನ್ನುತ್ತಾನೆ. "ನಿಮ್ಮ ಅಣ್ಣ ನನ್ನನ್ನೇ ಜೈಲಿಗೆ ಕಳುಹಿಸಿದ್ದಾನೆ. ಅವರನ್ನು ಇಷ್ಟಪಟ್ಟವರನ್ನು ಕಳೆದುಕೊಳ್ಳಬೇಕು. ಒಮ್ಮೊಮ್ಮೆ ನನ್ನ ಮಾತು ಕೇಳುವುದಿಲ್ಲ. ನಿನ್ನ ಮಾತು ಕೇಳ್ತಿನಾ" ಎನ್ನುತ್ತಾನೆ ಕೆಂಚ. ಈ ವಿಷಯ ನನ್ನ ಬುಡಕ್ಕೆ ಬಂದ್ರೆ ಏನ್‌ ಮಾಡ್ಲಿ ಎಂದು ಜೈದೇವ್‌ ಯೋಚಿಸುತ್ತಾನೆ. ಇವಳು ಚಿನ್ನದ ಮೊಟ್ಟೆ, ಸುಮ್ಮನೆ ಭಯಪಡಿಸಬೇಕು. ಜೈದೇವ್‌ನ ಮಾತು ಕೇಳಿದ್ರೆ ನಮಗೆ ಕಡಿಮೆ ಹಣ ಸಿಗುತ್ತದೆ. ಗೌತಮ್‌ ಮೂಲಕವೇ ಹೆಚ್ಚು ಹಣ ಕೇಳೋಣ ಎಂದುಕೊಳ್ಳುತ್ತಾನೆ ಕೆಂಚ.

ಹೊಟ್ಟೆ ನೋವಿನಿಂದ ಪರಿತಪಿಸಿದ ಮಲ್ಲಿ

ಇನ್ನೊಂದೆಡೆ ಮಲ್ಲಿಗೆ ಹೊಟ್ಟೆನೋವು ಆರಂಭವಾಗುತ್ತದೆ. ಶಕುಂತಲಾದೇವಿ ಹಾಕಿರುವ ಮದ್ದು ಕೆಲಸ ಮಾಡಿದೆ. ಮಹಿಮಾ ಎಂದು ಕರೆಯುತ್ತಾಳೆ. ಮಹಿಮಾ ಓಡಿ ಬರುತ್ತಾಳೆ. ಜೋರು ಹೊಟ್ಟೆ ನೋವಾಗುತ್ತಿದೆ ಎನ್ನುತ್ತಾಳೆ. ಜೈದೇವ್‌ ಅಲ್ಲಿಗೆ ಬರುತ್ತಾನೆ. ಆಸ್ಪತ್ರೆಗೆ ಕರೆದುಕೊಂಡು ಹೋಗೋಣ ಎಂದರೂ ಜೈದೇವ್‌ ಹೇಳಿದರೂ ಮಹಿಮಾ ಕೇಳುವುದಿಲ್ಲ. ಕಷಾಯ ಕೊಟ್ಟರೆ ಸರಿಯಾಗಬಹುದು ಎಂದು ಜೈದೇವ್‌ ಹೇಳುತ್ತಾನೆ. ಮಹಿಮಾಳ ಒತ್ತಾಯದ ಮೇರೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಮರೆಯಲ್ಲಿ ನಿಂತು ಶಂಕುತಲಾ ನಗುತ್ತಾಳೆ.

ಕಾಡಿನಲ್ಲಿ ಗೌತಮ್‌ ಮತ್ತು ಆನಂದ್‌ ಭೂಮಿಕಾಳನ್ನು ಹುಡುಕುತ್ತಾರೆ. ಈ ಸಮಯದಲ್ಲಿ ಗೌತಮ್‌ ಸಂಖ್ಯೆಗೆ ಕೆಂಚಪ್ಪ ಕಾಲ್‌ ಮಾಡುತ್ತಾನೆ. ಈಗ್ಯಾಕೆ ಕಾಲ್‌ ಮಾಡಿದ್ದೆ ಎಂದು ಕೇಳಿದಾಗ "ನಿಮ್ಮ ಮನೆಯವರು ಕಳೆದು ಹೋಗಿದ್ದಾರ" ಎಂದು ಕೆಂಚ ಕೇಳುತ್ತಾನೆ. ನೀನೇನ ಭೂಮಿಕಾಳನ್ನು ಕರೆದುಕೊಂಡು ಬಂದದ್ದು ಕೇಳುತ್ತಾನೆ. ಭೂಮಿಕಾರಿಗೆ ಏನದ್ರೂ ಆದ್ರೆ ಸುಮ್ಮನೆ ಬಿಡಲಾರೆ ಎನ್ನುತ್ತಾನೆ ಗೌತಮ್‌. ನನ್ನನ್ನು ಎದುರುಹಾಕಿಕೊಂಡರೆ ನಿಮ್ಮ ಹೆಂಡ್ರು ಸಾವಿಗೆ ಹತ್ರವಾಗುತ್ತಾಳೆ. ಇನ್ನೆರಡು ಗಂಟೆಯಲ್ಲಿ ನನ್ನ ಅಕೌಂಟ್‌ಗೆ ನಾನು ಕೇಳಿದ್ದಷ್ಟು ದುಡ್ಡು ಕೊಡಿ ಎನ್ನುತ್ತಾನೆ. ಪೊಲೀಸರಿಗೆ ತಿಳಿಸಬೇಡಿ ಎನ್ನುತ್ತಾನೆ.

ಆತ ಕಾಲ್‌ ಇಟ್ಟ ಬಳಿಕ ಇವನ ಗೊಡ್ಡು ಬೆದರಿಕೆಗೆ ಭಯಪಡಬಾರದು ಎಂದು ಆನಂದ್‌ ಪೊಲೀಸರಿಗೆ ಕಾಲ್‌ ಮಾಡುತ್ತಾನೆ. ಗೌತಮ್‌ಗೆ ಏನೋ ಯೋಚನೆ ಮಾಡುವಾಗ ಆತ ಮಾತನಾಡುವಾಗ ದೇವಾಲಯದ ಗಂಟೆಯ ಧ್ವನಿ ಕೇಳಿಸಿದ್ದು ನೆನಪಾಗುತ್ತದೆ. ಸುತ್ತಮುತ್ತ ದೇಗುಲ ಇದೆಯಾ ಎಂದು ಗೌತಮ್‌ ಕೇಳುತ್ತಾನೆ. ಭೂಮಿಕಾ ಕಾಣೆಯಾಗಿ ಅರ್ಧಗಂಟೆಯಾಗಿದೆ. ಸುಮಾರು 30 ಕಿ.ಮೀ. ದೂರ ಹೋಗಿರಲಾರರು. ದೇಗುಲದ ಸುತ್ತಮುತ್ತ ಹುಡುಕೋಣ ಎಂದು ಹೇಳುತ್ತಾನೆ. ಆನಂದ್‌ಗೂ ಅದು ಹೌದೇನಿಸುತ್ತದೆ. ಸೀರಿಯಲ್‌ ಮುಂದುವರೆಯುತ್ತದೆ.

ಟಿ20 ವರ್ಲ್ಡ್‌ಕಪ್ 2024