Amruthadhaare: ಜೈದೇವ್‌ ಕಿಡ್ನ್ಯಾಪ್‌ ಕಥೆ ಕೇಳಿ ಹೆಸರಘಟ್ಟಕ್ಕೆ ಬಂದಳು ಮಲ್ಲಿ; ಚಿಕ್ಕಮಗಳೂರಿನಲ್ಲಿ ಹನಿಮೂನ್‌ ನಡುವೆಯೇ ಅಲರ್ಟ್‌ ಆದ ಭೂಮಿ
ಕನ್ನಡ ಸುದ್ದಿ  /  ಮನರಂಜನೆ  /  Amruthadhaare: ಜೈದೇವ್‌ ಕಿಡ್ನ್ಯಾಪ್‌ ಕಥೆ ಕೇಳಿ ಹೆಸರಘಟ್ಟಕ್ಕೆ ಬಂದಳು ಮಲ್ಲಿ; ಚಿಕ್ಕಮಗಳೂರಿನಲ್ಲಿ ಹನಿಮೂನ್‌ ನಡುವೆಯೇ ಅಲರ್ಟ್‌ ಆದ ಭೂಮಿ

Amruthadhaare: ಜೈದೇವ್‌ ಕಿಡ್ನ್ಯಾಪ್‌ ಕಥೆ ಕೇಳಿ ಹೆಸರಘಟ್ಟಕ್ಕೆ ಬಂದಳು ಮಲ್ಲಿ; ಚಿಕ್ಕಮಗಳೂರಿನಲ್ಲಿ ಹನಿಮೂನ್‌ ನಡುವೆಯೇ ಅಲರ್ಟ್‌ ಆದ ಭೂಮಿ

Amruthadhaare Serial Yesterday Episode: ಅಮೃತಧಾರೆ ಧಾರಾವಾಹಿಯ ಇತ್ತೀಚಿನ ಸಂಚಿಕೆಯಲ್ಲಿ ಗೌತಮ್‌- ಭೂಮಿಕಾ, ಆನಂದ್‌-ಅಪರ್ಣಾ ಚಿಕ್ಕಮಗಳೂರಿನಲ್ಲಿದ್ದಾರೆ. ಈ ಸಮಯದಲ್ಲಿ ಕಿಡ್ನ್ಯಾಪ್‌ ನಾಟಕ ಮಾಡಿ ಜೈದೇವ್‌ ಮಲ್ಲಿಯನ್ನು ಹೆಸರಘಟ್ಟಕ್ಕೆ ಕರೆಸಿಕೊಂಡಿದ್ದಾನೆ.

Amruthadhaare: ಜೈದೇವ್‌ ಕಿಡ್ನ್ಯಾಪ್‌ ಕಥೆ ಕೇಳಿ ಹೆಸರಘಟ್ಟಕ್ಕೆ ಬಂದಳು ಮಲ್ಲಿ
Amruthadhaare: ಜೈದೇವ್‌ ಕಿಡ್ನ್ಯಾಪ್‌ ಕಥೆ ಕೇಳಿ ಹೆಸರಘಟ್ಟಕ್ಕೆ ಬಂದಳು ಮಲ್ಲಿ

ಬೆಂಗಳೂರು: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ನಿನ್ನೆಯ ಎಪಿಸೋಡ್‌ನಲ್ಲಿ ಹಲವು ವಿದ್ಯಮಾನ ನಡೆದಿವೆ. ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಆನಂದ್‌ ಮತ್ತು ಅಪರ್ಣಾ ಸೇರಿ ಗೌತಮ್‌ ಮತ್ತು ಭೂಮಿಕಾರ ಫಸ್ಟ್‌ ನೈಟ್‌ಗೆ ಮಂಚ ಅಲಂಕರಿಸಿದ್ದಾರೆ. ಈ ಅಲಂಕಾರ ನೋಡಿ ಗೌತಮ್‌ಗೆ ಟೆನ್ಷನ್‌ ಆಗಿದೆ. ಅತ್ತಿಗೆಗೆ ಪ್ರಪೋಸ್‌ ಮಾಡಲು ಆನಂದ್‌ ಐಡಿಯಾ ನೀಡುತ್ತಾ ಇರುತ್ತಾನೆ. ಹೂವಿನ ಅಲಂಕಾರವನ್ನು ಗೌತಮ್‌ ತೆಗೆಯಲು ಪ್ರಯತ್ನಿಸಿದಾಗ ಭೂಮಿಕಾ ಬರುತ್ತಾರೆ. ಇದನ್ನು ನೋಡಿ ಭೂಮಿಕಾ ನಗುತ್ತಾಳೆ. "ಇದನ್ನು ನಾನು ನೋಡಬಾರದು, ನನಗೆ ಮುಜುಗರ ಆಗಬಾರದು ಎಂದೆಲ್ಲ ನೀವು ಹೀಗೆಲ್ಲ ಮಾಡ್ತಿರಿ" ಎಂದು ಭೂಮಿಕಾಳೇ ಹೂವನ್ನು ಕ್ಲೀನ್‌ ಮಾಡುತ್ತಾಳೆ.

ಮಂದಾಕಿನಿ ಮನೆಯಲ್ಲಿ ಎಲ್ಲರೂ ಮಾತನಾಡುತ್ತಿದ್ದಾರೆ. ಆ ಸಮಯದಲ್ಲಿ ಜೀವನ್‌ ಎಲ್ಲರಿಗೂ ಒಂದು ಸಿಹಿ ಸುದ್ದಿ ಹೇಳುತ್ತಾನೆ. ಹಲವು ಸಣ್ಣಪುಟ್ಟ ವೆಬ್‌ಸೈಟ್‌ಗಳ ಜತೆ ಟೈಅಪ್‌ ಮಾಡುತ್ತಿದ್ದೇನೆ, ನನ್ನ ಕಂಪನಿ ಬೆಳೆಯುತ್ತಿದೆ ಎಂದು ಮಾಹಿತಿ ನೀಡುತ್ತಾನೆ. ಇವನು ಮುಂದೆ ಮಿನಿ ಗೌತಮ್‌ ದಿವಾನ್‌ ಆಗುವ ಸಾಧ್ಯತೆ ಇದೆ ಎಂದು ಹೇಳುತ್ತಾನೆ. ಇದೇ ಖುಷಿಗೆ ಮನೆಯಲ್ಲಿ ಐಸ್‌ಕ್ರೀಮ್‌ ಪಾರ್ಟಿ ಮಾಡೋಣ ಎನ್ನುತ್ತಾನೆ. ಅಪ್ಪ ಮಗ ಇಬ್ಬರೂ ಜಿಪುಣರು ಎಂದು ಮಹಿಮಾ ಹೇಳುತ್ತಾಳೆ.

ಆನಂದ್‌ ಮತ್ತು ಅಪರ್ಣಾ ಹೊರಗೆ ಕ್ಯಾಂಪ್‌ ಫಯರ್‌ ರೆಡಿ ಮಾಡುತ್ತಾರೆ. ಮಿಸ್‌ ಮಾಡದಂತೆ ಪ್ರಪೋಸ್‌ ಮಾಡು ಎಂದು ಆನಂದ್‌ ಸಲಹೆ ನೀಡುತ್ತಾನೆ. ಅಪರ್ಣಾ ಕೂಡ ಭೂಮಿಕಾಗೆ ಪ್ರಪೋಸ್‌ ವಿಷಯವನ್ನೇ ಕೇಳುತ್ತಾ ಇರುತ್ತಾರೆ. "ನೀನೇ ಪ್ರಪೋಸ್‌ ಮಾಡು" ಎಂದು ಸಲಹೆ ನೀಡುತ್ತಾಳೆ. "ಅವರೇ ಹೇಳಿ" ಎಂದು ಭೂಮಿಕಾ ಹೇಳುತ್ತಾಳೆ.

ಜೈದೇವ್‌ ಕಿಡ್ನ್ಯಾಪ್‌ ಕಥೆ ಕೇಳಿ ಹೆಸರಘಟ್ಟಕ್ಕೆ ಬಂದಳು ಮಲ್ಲಿ

ಇನ್ನೊಂದೆಡೆ ಮಲ್ಲಿಗೆ ವಿಡಿಯೋ ಕಾಲ್‌ ಬರುತ್ತದೆ. ಜೈದೇವ್‌ಗೆ ಯಾರೋ ಆಗುಂತಕರು ಹೊಡೆದು ಕತ್ತಿಗೆ ಚಾಕು ಹಿಡಿದಿದ್ದಾರೆ. "ನನ್ನನ್ನು ಕಿಡ್ನ್ಯಾಪ್‌ ಮಾಡಿದ್ದಾರೆ. ನನಗೆ ಹೊಡೆದಿದ್ದಾರೆ" ಎಂದು ಹೇಳುತ್ತಾನೆ. "ಅವರಿಗೆ ಏನು ಬೇಕು" ಎಂದು ಕೇಳುತ್ತಾಳೆ. "ಅಣ್ಣನ ರೂಂನಲ್ಲಿ ಒಂದು ಫೈಲ್‌ ಇದೆ. ಅದನ್ನು ತಾ. ಅದಕ್ಕೆ ನನಗೆ ಹೊಡಿತಾ ಇದ್ದಾರೆ. ಬೇಗ ತಾ ಮಲ್ಲಿ" ಎಂದು ಜೈದೇವ್‌ ನಾಟಕ ಮಾಡುತ್ತಾನೆ. ಫೋನ್‌ ಕಟ್‌ ಆದ ಬಳಿಕ ಜೈದೇವ್‌ "ಚೆನ್ನಾಗಿ ಆಕ್ಟ್‌ ಮಾಡ್ತೀರಿ" ಎಂದು ನಗುತ್ತಾನೆ. ಮಲ್ಲಿ ಅದೇ ರೀತಿ ಫೈಲ್‌ ಹುಡುಕಿ ತೆಗೆದುಕೊಂಡು ಹೋಗುತ್ತಾಳೆ. ಇದೆಲ್ಲವೂ ಜೈದೇವ್‌ ಪ್ಲ್ಯಾನ್‌ ಎಂದು ಅವಳಿಗೆ ತಿಳಿಯುವುದಿಲ್ಲ. ಜೈದೇವ್‌ಗೆ ಕಾಲ್‌ ಮಾಡಿದಾಗ ಬೇಗ ಬಾ ಎನ್ನುತ್ತಾನೆ. ಲೊಕೆಷನ್‌ ಕಳುಹಿಸುತ್ತಾನೆ. ಏನೇ ಇದ್ರೂ ನನಗೆ ಮೊದಲು ಕಾಲ್‌ ಮಾಡು ಎಂದು ಭೂಮಿಕಾ ಹೇಳಿದ್ದು ನೆನಪಿಗೆ ಬರುತ್ತದೆ. ಭೂಮಿಕಾಗೆ ಕಾಲ್‌ ನೆಟ್‌ವರ್ಕ್‌ನಲ್ಲಿ ಇರುವುದಿಲ್ಲ. ಮೊದಲು ಫೈಲ್‌ ಕೊಟ್ಟು ಬರ್ತಿನಿ ಎಂದು ಹೋಗುತ್ತಾಳೆ.

ಕ್ಯಾಂಪ್‌ ಫಯರ್‌ ಮುಂದೆ ಎಲ್ಲರೂ ಮಾತನಾಡುತ್ತಾರೆ. ನಾಳೆ ಏನು ಪ್ಲ್ಯಾನ್‌ ಎಂದು ಕೇಳಿದಾಗ ನಾಳೆ ಸುತ್ತಾಡುವ ಪ್ಲ್ಯಾನ್‌ ಎಂದು ಹೇಳುತ್ತಾರೆ. ಇವತ್ತಿನ ಪ್ರೋಗ್ರಾಂ ಬಗ್ಗೆ ಯೋಚನೆ ಮಾಡೋಣ ಎಂದು ಆನಂದ್‌ ಹೇಳುತ್ತಾನೆ. ಎಣ್ಣೆ ಬದಲು ಕಾಫಿ ಕುಡಿತೇನೆ ಎನ್ನುತ್ತಾನೆ ಗೌತಮ್‌. ಇವತ್ತು ಸ್ಪೆಷಲ್‌ ಚಿಕ್ಕಮಗಳೂರು ಬಾದಾಮ್‌ ಹಾಲು ಕುಡಿಯೋಣ ಎನ್ನುತ್ತಾನೆ ಆನಂದ್‌. ಸ್ಪೆಷಲ್‌ ಬಾದಮ್‌ ಹಾಲು ತರುತ್ತಾನೆ. ಅದರಲ್ಲಿ ಎರಡು ಸ್ಪೆಷಲ್‌ ಬಾದಮ್‌ ಹಾಲಿನಂತೆ ಇರುವ ರಾಮರಸವೂ ಇರುತ್ತದೆ. ಪಾರ್ಟಿ ಮಾಡುತ್ತ ಇರುವಾಗ "ಆಸೆ ಹೇಳುವಾಸೆ, ಹೇಳಲಾರೆ, ನಾನು ತಾಳಲಾರೆ" ಎಂದು ಆನಂದ್‌ ಹಾಡು ಹಾಡುತ್ತಾನೆ. ಈ ಮೂಲಕ ಅಂತಾಕ್ಷರಿ ಆಟಕ್ಕೆ ಚಾಲನೆ ನೀಡುತ್ತಾನೆ. ಆಟೋ ಮಾಡಿಕೊಂಡು ಜೈದೇವ್‌ ಹೇಳಿದ ಸ್ಥಳಕ್ಕೆ ಮಲ್ಲಿ ಹೋಗುತ್ತಾಳೆ. ಅವರು ಹೇಳಿದಂತೆ ನಡೆದುಕೊಂಡು ಹೋಗುತ್ತಾಳೆ. ನೆಟ್‌ವರ್ಕ್‌ ಸರಿಯಾಗಿ ಇರೋದಿಲ್ಲ. ಸ್ವಲ್ಪ ಹೊತ್ತಲ್ಲಿ ಸಿಗ್ನಲ್‌ ದೊರಕುತ್ತದೆ. ಆಗ ಭೂಮಿಕಾ ಕಾಲ್‌ ಮಾಡುತ್ತಾಳೆ. ಆ ಸಮಯದಲ್ಲಿ ಮಲ್ಲಿ ಎಲ್ಲಾ ವಿಷಯ ಹೇಳುತ್ತಾಳೆ. ಆದರೆ, ನೆಟ್‌ವರ್ಕ್‌ ಸರಿಯಾಗಿ ಇಲ್ಲದೆ ಇರುವ ಕಾರಣ ಮಲ್ಲಿ ಹೇಳಿದ್ದು ಭೂಮಿಕಾಳಿಗೆ ಸರಿಯಾಗಿ ಕೇಳುವುದಿಲ್ಲ. ಭೂಮಿಕಾ ಮುಂದೆ ಏನು ಮಾಡ್ತಾಳೆ, ಮಲ್ಲಿಗೆ ಮುಂದೇನಾಗುತ್ತದೆ ಎಂಬ ಕುತೂಹಲದೊಂದಿಗೆ ಸೀರಿಯಲ್‌ ಮುಂದುವರೆಯುತ್ತದೆ.

ಝೀ ಕನ್ನಡ ವಾಹಿನಿಯು ಅಮೃತಧಾರೆ ಧಾರಾವಾಹಿಯ ಪ್ರಮೋ ಪ್ರಕಟಿಸಿದ್ದು. ಅದರಲ್ಲಿ ಆ ಸ್ಥಳಕ್ಕೆ ಮಹಿಮಾ ಪೊಲೀಸರನ್ನು ಕರೆದುಕೊಂಡು ಬರುವ ದೃಶ್ಯವಿದೆ. ಈ ಮೂಲಕ ಮಲ್ಲಿಯನ್ನು ಪಾರು ಮಾಡಲು ಮಹಿಮಾಳನ್ನು ಭೂಮಿಕಾ ಕಳುಹಿಸಿದ್ದಾಳೆ. ಈ ಕುರಿತು ಇಂದಿನ ಸಂಚಿಕೆಯಲ್ಲಿ ಪೂರ್ತಿ ವಿವರ ದೊರಕಲಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner