ಕನ್ನಡ ಸುದ್ದಿ  /  ಮನರಂಜನೆ  /  ಅಪೇಕ್ಷಾಳಿಗೆ ಮದುವೆ ಮಾಡಲು ಮುಂದಾದ ಮಂದಾಕಿನಿ, ಜೈದೇವ್‌ಗೆ ಹೊಸ ಟೆನ್ಷನ್‌ ತಂದ ಭೂಮಿಕಾ; ಅಮೃತಧಾರೆ ಧಾರಾವಾಹಿ ಕಥೆ

ಅಪೇಕ್ಷಾಳಿಗೆ ಮದುವೆ ಮಾಡಲು ಮುಂದಾದ ಮಂದಾಕಿನಿ, ಜೈದೇವ್‌ಗೆ ಹೊಸ ಟೆನ್ಷನ್‌ ತಂದ ಭೂಮಿಕಾ; ಅಮೃತಧಾರೆ ಧಾರಾವಾಹಿ ಕಥೆ

Amruthadhaare Serial Yesterday Episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಜೈದೇವ್‌ಗೆ ಭೂಮಿಕಾ ಹೊಸ ಭಯ ಹುಟ್ಟಿಸಿದ್ದಾರೆ. ಮಲ್ಲಿ ಮೇಲೆ ದಾಳಿ ಮಾಡಿದವರನ್ನು ಹುಡುಕುವುದಾಗಿ ಹೇಳಿದ್ದಾರೆ. ಇನ್ನೊಂದೆಡೆ ಮಲ್ಲಿಗೆ ಮದುವೆ ಮಾಡಲು ಮಂದಾಕಿನಿ ಮುಂದಾಗಿದ್ದಾರೆ.

ಅಪೇಕ್ಷಾಳಿಗೆ ಮದುವೆ ಮಾಡಲು ಮುಂದಾದ ಮಂದಾಕಿನಿ, ಜೈದೇವ್‌ಗೆ ಹೊಸ ಟೆನ್ಷನ್‌ ತಂದ ಭೂಮಿಕಾ
ಅಪೇಕ್ಷಾಳಿಗೆ ಮದುವೆ ಮಾಡಲು ಮುಂದಾದ ಮಂದಾಕಿನಿ, ಜೈದೇವ್‌ಗೆ ಹೊಸ ಟೆನ್ಷನ್‌ ತಂದ ಭೂಮಿಕಾ

Amruthadhaare Serial Yesterday Episode: ಗೌತಮ್‌ ಮತ್ತು ಭೂಮಿಕಾ ಚಿಕ್ಕಮಗಳೂರಿನಿಂದ ವಾಪಸ್‌ ಬಂದಿದ್ದಾರೆ. ಒಂದಿಷ್ಟು ಪ್ರೀತಿಯ ಮಾತುಗಳು ನಡೆಯುತ್ತಿವೆ. "ನೀವಂದ್ರ ನನಗೆ ತುಂಬಾ ಇಷ್ಟ. ಐ ಲವ್‌ ಯು" "ಐ ಲವ್‌ ಯು ಟು" ಇತ್ಯಾದಿ ಪ್ರೇಮದ ಮಾತುಗಳು ಮತ್ತೆ ನಡೆದಿವೆ. ಇದೇ ಸಮಯದಲ್ಲಿ ಭೂಮಿಕಾ ಮತ್ತು ಮಹಿಮಾ ಫೋನ್‌ನಲ್ಲಿ ಮಾತನಾಡುತ್ತಾರೆ. ಹನಿಮೂನ್‌ ಮುಗೀತ ಎಂದು ಮಹಿಮಾ ಕೇಳಿದ್ದಾಳೆ. ಅತ್ತೆಗೆ ಹುಷಾರಿಲ್ಲ ಎಂದು ಬಂದ್ವಿ ಎಂದು ಹೇಳುತ್ತಾಳೆ. ಇದೇ ಸಮಯದಲ್ಲಿ ಮಲ್ಲಿಯನ್ನು ನೋಡಿಕೊಂಡಿದ್ದಕ್ಕೆ ಥ್ಯಾಂಕ್ಸ್‌ ಎಂದು ಭೂಮಿಕಾ ಹೇಳುತ್ತಾರೆ. ಮಲ್ಲಿ ಜತೆ ಒಳ್ಳೆಯ ಟೈಮ್‌ ಸ್ಪೆಂಡ್‌ ಮಾಡಿದೆ ಎನ್ನುತ್ತಾಳೆ ಮಹಿಮಾ. ಶಕುಂತಲಾದೇವಿ ಬೆಡ್‌ ರೆಸ್ಟ್‌ನಲ್ಲಿದ್ದಾಳೆ. ನಾಟಕ ಮಾಡಲು ಹೋಗಿ ಬೆಡ್‌ನಲ್ಲಿ ಮಲಗುವಂತೆ ಆಗಿದೆ. ಡಾಕ್ಟರ್‌ಗೆ ಫೋನ್‌ ಮಾಡಿದ್ದು ಗೌತಮ್‌ ಅಲ್ಲ ಭೂಮಿಕಾ ಎಂಬ ಮಾಹಿತಿಯನ್ನು ಮನೆಹಾಳ ಮಾವ ತಿಳಿಸುತ್ತಾರೆ. ಎಲ್ಲಿ ನನ್ನನ್ನು ಪರ್ಮನೆಂಟ್‌ ಆಗಿ ಬೆಡ್‌ನಲ್ಲಿ ಮಲಗಿಸುತ್ತಾಳೆ ಎಂಬ ಭಯವಾಗಿದೆ. ನನ್ನನ್ನು ಆಸ್ಪತ್ರೆಗೆ ಸೇರಿಸುತ್ತಾಳೆ ಎಂದು ಶಕುಂತಲಾದೇವಿ ಭಯಪಡುತ್ತಾರೆ.

ಟ್ರೆಂಡಿಂಗ್​ ಸುದ್ದಿ

ಮಲ್ಲಿ ಮತ್ತು ಭೂಮಿಕಾ ಮಾತನಾಡುತ್ತಾರೆ. ಯಾಕೋ ಆಸ್ಪತ್ರೆಗೆ ಸೇರಿಸಿದ್ರಲ್ವ ಎಂದು ಕೇಳುತ್ತಾಳೆ ಭೂಮಿಕಾ. ಫುಡ್‌ ಪಾಯಿಸನಿಂಗ್‌ ಅಂದ್ರು ಎಂದು ಮಲ್ಲಿ ಹೇಳಿದಾಗ ಭೂಮಿಕಾ ಯೋಚನೆಗೆ ಬೀಳುತ್ತಾಳೆ. ಇನ್ನೇನಾದ್ರೂ ಪ್ರಾಬ್ಲಂ ಆಯ್ತ ಎಂದು ಕೇಳುತ್ತಾಳೆ. "ಅವರ ಮೇಲೆ ರೌಡಿಗಳು ಮುಗಿಬಿದ್ರಲ್ಲ. ಅವತ್ತು ಮಹಿಮಾ ಅಕ್ಕ ಬಾರದೆ ಇದ್ರೆ ಏನಾಗುತ್ತಿತ್ತೋ" ಎಂದು ಮಲ್ಲಿ ಹೇಳುತ್ತಾಳೆ. "ನೀನು ಯಾವುದನ್ನೂ ಯೋಚನೆ ಮಾಡಬೇಡ" ಎನ್ನುತ್ತಾಳೆ. "ನಾನು ಇದನ್ನು ಇಲ್ಲಿಗೆ ಬಿಡೋಲ್ಲ ಮಲ್ಲ. ಇದರ ಹಿಂದೆ ಯಾರಿದ್ದರೂ ಕಂಡುಹಿಡಿತೇನೆ" ಎಂದು ಭೂಮಿಕಾ ಮನದಲ್ಲಿಯೇ ಹೇಳಿಕೊಳ್ಳುತ್ತಾಳೆ.

ಇದಾದ ಬಳಿಕ ಭೂಮಿಕಾ ಜೈದೇವ್‌ನನ್ನು ಭೇಟಿಯಾಗುತ್ತಾಳೆ. ಹೇಗೆ ಅಟ್ಯಾಕ್‌ ಆಯ್ತು ಎಂದು ಕೇಳುತ್ತಾಳೆ. "ನಮ್ಮ ಬಿಸಿನೆಸ್‌ ಅದೇ ರೀತಿ" ಎನ್ನುತ್ತಾನೆ ಜೈದೇವ್‌. "ನೀವು ಫೇಸ್‌ ಮಾಡಬೇಕು. ಅಲ್ಲಿಗೆ ಮಲ್ಲಿಯನ್ನು ಏಕೆ ಕರೆಸಿಕೊಂಡ್ರಿ. ರಿಸ್ಕ್‌ ಇದ್ದಾಗ ಯಾಕೆ ಕರೆಸಿಕೊಂಡ್ರಿ?" ಎಂದು ವಿಚಾರಿಸುತ್ತಾಳೆ. ಕಾಲ್‌ ಮಾಡಿ ಕರೆಸಿದ್ದು ಅವರು ಎಂದು ಹೇಳುತ್ತಾನೆ. "ಅಟ್‌ಲಿಸ್ಟ್‌ ಈ ವಿಷಯವನ್ನು ಗೌತಮ್‌ ಗಮನಕ್ಕೆ ತರಬೇಕು ಅಲ್ವಾ" ಎಂದು ಕೇಳುತ್ತಾಳೆ. "ಅವನು ತುಂಬಾ ಎಮೋಷನಲ್‌. ಇಲ್ಲಿನ ಸಮಸ್ಯೆ ಹೇಳಿದ್ರೆ ಒತ್ತಾಡ್ತಾ ಇರ್ತಾನೆ. ಈಗಲೇ ಅವನಿಗೆ ಆ ವಿಷಯ ಹೇಳಬೇಡಿ" ಎಂದು ಹೇಳುತ್ತಾನೆ. "ನಾನು ಈ ವಿಷಯ ಹೇಳಿಯೇ ಹೇಳುತ್ತೇನೆ" ಎಂದು ಭೂಮಿಕಾ ಹೇಳುತ್ತಾಳೆ. "ಹೇಳಬೇಡಿ, ಆ ರೌಡಿಗಳು ಸರಿ ಇಲ್ಲ" ಎಂದೆಲ್ಲ ಹೇಳುತ್ತಾನೆ. "ನಾನಂತೂ ಈ ವಿಷಯ ಇಲ್ಲಿ ಬಿಡೋಲ್ಲ. ಇದರ ಹಿಂದೆ ನೀವಿಲ್ಲ ತಾನೇ" ಎಂದು ಕೇಳುತ್ತಾಳೆ. "ನೀವಿಲ್ಲ ಎಂದುಕೊಂಡರೂ ನನ್ನ ಮನಸ್ಸು ನಂಬೋಲ್ಲ. ನಿಮ್ಮ ಕುರಿತು ನನಗೆ ಇನ್ನೂ ಪೂರ್ತಿ ನಂಬಿಕೆ ಬಂದಿಲ್ಲ. ಮಲ್ಲಿ ನಿಮ್ಮನ್ನು ನಂಬಿದ್ದಾಳೆ. ಅವಳ ನಂಬಿಕೆಯನ್ನು ಸುಳ್ಳು ಮಾಡಬೇಡಿ" ಎಂದು ಹೇಳುತ್ತಾಳೆ. ಈ ಮೂಲಕ ಜೈದೇವ್‌ಗೆ ಹೊಸ ತಲೆನೋವು ಆರಂಭವಾಗಿದೆ. ಈ ವಿಚಾರದಲ್ಲಿ ನನ್ನ ಇನ್‌ವಾಲ್ವ್‌ಮೆಂಟ್‌ ಇರುವುದು ಭೂಮಿಕಾಳಿಗೆ ತಿಳಿಯಬಾರದು ಎಂದುಕೊಳ್ಳುತ್ತಾನೆ. ಟೀಚರ ಇವಳಾ, ಸಿಬಿಐ ರೀತಿ ವರ್ತಿಸ್ತಾಳೆ. ಇವಳನ್ನು ಲೈಟಾಗಿ ತೆಗೆದುಕೊಂಡ್ರೆ ನನಗೆ ಪ್ರಾಬ್ಲಂ. ಹುಷಾರಾಗಿ ಇರಬೇಕು ಎಂದುಕೊಳ್ಳುತ್ತಾನೆ ಜೈದೇವ್‌.

ಅಪೇಕ್ಷಾಳಿಗೆ ಮದುವೆ ಮಾಡಲು ಮುಂದಾದ ಮಂದಾಕಿನಿ

ಮಂದಾಕಿನಿ ಮನೆಯಲ್ಲಿ ಎಲ್ಲರಿಗೂ ಸಿಹಿತಿಂಡಿ ನೀಡುತ್ತಾಳೆ. ಇವತ್ತು ನಮ್ಮ ಅಪ್ಪಿ ಜಾತಕ ಮತ್ತು ಹುಡುಗನ ಜಾತಕ ತೋರಿಸಿದೆ ಎನ್ನುತ್ತಾರೆ ಮಂದಾಕಿನಿ. ಅಪ್ಪಿಗೆ ಹೊಸ ಟೆನ್ಷನ್‌ ಆರಂಭವಾಗಿದೆ. ಇದಾದ ಬಳಿಕ ಮಲ್ಲಿ ಭಾವನತಮ್ಮನಿಗೆ ಕರೆ ಮಾಡಿ ವಿಷಯ ಹೇಳುತ್ತಾಳೆ. ಮನೆಯಲ್ಲಿ ಎಲ್ಲರೂ ಮದುವೆ ವಿಚಾರ ಮಾತನಾಡುತ್ತಿದ್ದಾರೆ. ನನಗೆ ತುಂಬಾ ಟೆನ್ಷನ್‌ ಆಗಿದೆ ಎನ್ನುತ್ತಾಳೆ ಅತ್ತಿಗೆ ತಂಗಿ. "ನಾನು ಎಲ್ಲಾ ನೋಡ್ಕೋತಿನಿ. ಟೆನ್ಷನ್‌ ಮಾಡಬೇಡಿ" ಎಂದು ಪಾರ್ಥ ಹೇಳುತ್ತಾನೆ. ಫೋನ್‌ ಕಟ್‌ ಮಾಡಿದ ಬಳಿಕ ಪಾರ್ಥ "ಏನು ಮಾಡ್ಲಿ" ಎಂದು ಯೋಚಿಸುತ್ತಾನೆ. ಇದಕ್ಕೆಲ್ಲ ಅತ್ತಿಗೆನೇ ಸರಿ. ಇಂತಹ ಸಮಯದಲ್ಲಿ ನಮ್ಮನ್ನು ಪಾರು ಮಾಡಲು ಅವರಿಗೆ ಮಾತ್ರ ಸಾಧ್ಯ ಎಂದುಕೊಳ್ಳುತ್ತಾನೆ. ಬಳಿಕ ಅತ್ತಿಗೆಯನ್ನ ಭೇಟಿಯಾಗುತ್ತಾನೆ. "ಸಡನ್‌ ಆಗಿ ಒಂದು ಪ್ರಾಬ್ಲಂ ಬಂದಿದೆ. ಅಪೇಕ್ಷಾಳಿಗೆ ಹೊಸ ಸಂಬಂಧ ಬಂದಿದೆಯಂತೆ. ನಮ್ಮ ಅತ್ತೆ ಜಾತಕ ತೋರಿಸಿದ್ದಾರಂತೆ" ಎಂದು ಹೇಳುತ್ತಾನೆ. "ನನಗೆ ವಿಷಯ ಗೊತ್ತಿಲ್ಲ ಅಲ್ವ" ಎನ್ನುತ್ತಾಳೆ. "ಅಮ್ಮನ ಕನ್ವಿನ್ಸ್‌ ಮಾಡೋದು ತುಂಬಾ ಕಷ್ಟ" ಎನ್ನುತ್ತಾಳೆ ಭೂಮಿಕಾ. "ನಾನು ಏನಾದರೂ ಮಾಡಲು ಪ್ರಯತ್ನಿಸ್ತೀನಿ" ಎನ್ನುತ್ತಾಳೆ ಭೂಮಿಕಾ.

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)

ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)

ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)

ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)

ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)

ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)

ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)

ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)

ರಣವ್‌: ಜೈದೇವ್‌

ಚಂದನ್‌: ಅಶ್ವಿನಿ

ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)

ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)

ಟಿ20 ವರ್ಲ್ಡ್‌ಕಪ್ 2024