ನಮ್ಮ ಅಕ್ರಮ ಸಂಬಂಧ ಆಕ್ಸಿಡೆಂಟ್ ಆಗಿರುವ ಮಲ್ಲಿಗೆ ತಿಳಿದಿರಬಹುದೇ? ದಿಯಾ ಜೈದೇವ್‌ಗೆ ಶುರುವಾಗಿದೆ ಹೊಸ ಆತಂಕ- ಅಮೃತಧಾರೆ ಧಾರಾವಾಹಿ
Amruthadhaare serial Yesterday Episode: ಆಸ್ಪತ್ರೆಯಲ್ಲಿರುವ ಮಲ್ಲಿಗೆ ಇನ್ನೂ ಎಚ್ಚರವಾಗಿಲ್ಲ. ಆಕೆಯ ಮಗು ಹೊಟ್ಟೆಯಲ್ಲೇ ಮೃತಪಟ್ಟಿದೆ ಎಂಬ ಕೆಟ್ಟ ಸುದ್ದಿ ಕೇಳಿ ಎಲ್ಲರೂ ದುಃಖದಲ್ಲಿದ್ದಾರೆ. ಇದೇ ಸಮಯದಲ್ಲಿ ನಮ್ಮಿಬ್ಬರ ಅಕ್ರಮಸಂಬಂಧ ಮಲ್ಲಿಗೆ ತಿಳಿದಿರಬಹುದೇ ಎಂಬ ಹೊಸ ಸಂದೇಹ ಜೈದೇವ್-ದಿಯಾರಿಗೆ ಆರಂಭವಾಗಿದೆ.
Amruthadhaare serial Yesterday Episode: ಆನಂದ್- ಅಪರ್ಣಾ ಮಾತನಾಡುತ್ತಿದ್ದಾರೆ. ಅವರ ಚರ್ಚೆಯ ವಿಷಯ ಭೂಮಿಕಾ-ಗೌತಮ್‌ಗೆ ಮಕ್ಕಳಾಗುವ ಕುರಿತಾಗಿದೆ. ಖಂಡಿತಾ ಮಕ್ಕಳಾಗುತ್ತದೆ ಎಂಬ ಭರವಸೆಯಲ್ಲಿ ಇಬ್ಬರೂ ಚರ್ಚಿಸುತ್ತಿದ್ದಾರೆ. "ಒಬ್ಬರ ಭಯನೇ, ಇನ್ನೊಬ್ಬರಿಗೆ ಬಂಡವಾಳ" ಎಂದು ಆನಂದ್ ಹೇಳುತ್ತಾನೆ. "ಭೂಮಿ ಟೆಸ್ಟ್ ರಿಸಲ್ಟ್ ಸರಿಯಾಗಿಯೇ ಬರಬಹುದು" ಎಂದು ಅಪರ್ಣಾ ಹೇಳುತ್ತಾರೆ. ಇನ್ನೊಂದೆಡೆ ಮಲ್ಲಿ ಆಸ್ಪತ್ರೆಯಲ್ಲಿದ್ದಾಳೆ. ಗೌತಮ್ ಮತ್ತು ಭೂಮಿಕಾ ಆಸ್ಪತ್ರೆಗೆ ಬಂದಿದ್ದಾರೆ. ಅವರಿಗೆ ಏನು ನಡೆಯಿತು ಎಂದು ದುಃಖದಲ್ಲಿ ಜೈದೇವ್ ವಿವರಿಸುತ್ತಿದ್ದಾನೆ. "ಬಾಯಾರಿಕೆ ಅಂದ್ಲು, ನೀರು ತರಲು ಹೋದೆ. ಕೂತ್ಕೋ ಕಾರಲ್ಲಿ ಎಂದಿದ್ದೆ. ನಾನೂ ಬರ್ತಿನಿ ಎಂದು ನನ್ನ ಹಿಂದೆನೇ ಬಂದ್ಲು. ವಾಪಸ್ ಬರುವಾಗ ಆಕ್ಸಿಡೆಂಟ್ ಆಗಿದೆ. ನನಗೆ ಭಯ ಆಗಿದೆ. ಮಲ್ಲಿಗೆ ಏನೂ ಆಗೋದಿಲ್ಲ" ಎಂದು ಜೈದೇವ್ ಹೇಳುತ್ತಾನೆ. "ಜೀವನದಲ್ಲಿ ಎಲ್ಲವೂ ಒಳ್ಳೆಯದಾಗುತ್ತದೆ ಅಂದುಕೊಂಡಿದ್ದೆ. ಆದರೆ, ಹೀಗೆಲ್ಲ ಆಯ್ತು" ಎಂದು ಜೈದೇವ್‌ನ ಕಣ್ಣೀರ ನಾಟಕ ಮುಂದುವರೆಯುತ್ತದೆ.
ಶಕುಂತಲಾದೇವಿ ಬಳಿಗೆ ಬಂದ ಸಹೋದರ ಆಕೆಗೆ ವಿಷಯ ತಿಳಿಸುತ್ತಾನೆ. "ಮಲ್ಲಿಗೆ ಆಕ್ಸಿಡೆಂಟ್ ಆಗಿದೆ. ಕಂಡಿಷನ್ ಕ್ರಿಟಿಕಲ್, ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ದಾರೆ" ಎಂಬ ವಿಷಯ ತಿಳಿಸುತ್ತಾರೆ. "ಸದ್ಯ ಜೈಗೆ ಏನೂ ಆಗಿಲ್ಲ ತಾನೇ, ಅದೇ ನನಗೆ ದೊಡ್ಡ ಸಮಧಾನ" ಎಂದು ಶಕುಂತಲಾದೇವಿ ಹೇಳುತ್ತಾಳೆ. "ಮಗುಗೇ ಏನೂ ಆಗದೆ ಇದ್ರೆ ಸಾಕು" ಎನ್ನುತ್ತಾರೆ ಶಕುಂತಲಾ. "ಏನ್ ಸಿಸ್ಟರ್, ಮಗುವಿನ ಬಗ್ಗೆ ಇಷ್ಟು ಕಾಳಜಿ" ಎಂದು ಅಣ್ಣ ಕೇಳುತ್ತಾನೆ. "ಅವಳು ನನಗೆ ಇಷ್ಟವಾಗದೆ ಇರಬಹುದು. ಆದರೆ, ಹೊಟ್ಟೆಯಲ್ಲಿರುವ ಮಗುವಿನ ಮೇಲೆ ಏನೂ ಬೇಸರ ಇಲ್ಲ. ಅದು ನಮ್ಮ ವಂಶಕ್ಕೆ ಸೇರಿದ್ದು, ನಮ್ಮ ಮಗನದ್ದು. ಈಗಿನ ಪರಿಸ್ಥಿತಿಯಲ್ಲಿ ಅವಳಿಗೆ ಏನಾಗುತ್ತದೆಯೋ ಗೊತ್ತಿಲ್ಲ, ಮಗುವಾದರೂ ಉಳಿಯಲಿ" ಎಂದೆಲ್ಲ ಹೇಳುತ್ತಾರೆ ಶಕುಂತಲಾದೇವಿ.
ಮಲ್ಲಿ ಮಗುವನ್ನು ಉಳಿಸಿಕೊಳ್ಳಲಾಗಿಲ್ಲ ಎಂದ ಡಾಕ್ಟರ್
ಡಾಕ್ಟರ್ ಬರುತ್ತಾರೆ. ಹೇಗಿದ್ದಾರೆ ಮಲ್ಲಿ ಎಂದು ಕೇಳುತ್ತಾನೆ ಜೈದೇವ್. "ನಿಮ್ಮ ಹೆಂಡತಿ ಜೀವಕ್ಕೆ ಅಪಾಯವಿಲ್ಲ. ಆದರೆ, ನಾವು ಎಷ್ಟೇ ಪ್ರಯತ್ನಪಟ್ಟರೂ ಮಗುವನ್ನು ಉಳಿಸಿಕೊಳ್ಳಲಾಗಿಲ್ಲ" ಎಂದು ಡಾಕ್ಟರ್ ಶಾಕಿಂಗ್ ಸುದ್ದಿ ಹೇಳುತ್ತಾರೆ. ಇದನ್ನು ಕೇಳಿ ಜೈದೇವ್ ಗೋಳಾಡುತ್ತಾನೆ. ಎಲ್ಲರ ದುಃಖ ಮುಗಿಲು ಮುಟ್ಟುತ್ತದೆ. "ನನ್ನ ಮೇಲೆ ಯಾರಿಗೂ ಅನುಮಾನ ಬರಬಾರದು ಎಂದರೆ ಇಷ್ಟೆಲ್ಲ ನಾಟಕ ಮಾಡಬೇಕು" ಎಂದು ಮನಸ್ಸಲ್ಲಿ ಅಂದುಕೊಂಡು ಅಳು ಮುಂದುವರೆಸುತ್ತಾನೆ ಜೈದೇವ್. ಭೂಮಿಕಾ ಮತ್ತು ಗೌತಮ್ ದುಃಖದಲ್ಲಿ ಯೋಚಿಸುತ್ತಿದ್ದಾರೆ. ಇದೇ ಸಮಯದಲ್ಲಿ ಜೈದೇವ್‌ಗೆ ಕಾಲ್ ಬರುತ್ತದೆ. "ಮಾಮ್ಸ್ ಕಾಲ್ ಮಾಡುತ್ತಿದ್ದಾರೆ" ಎನ್ನುತ್ತಾನೆ. ಮಾವನ ಬಳಿಯೂ ನಾಟಕ ಮುಂದುವರೆಸುತ್ತಾನೆ. "ಮಗು ನಮ್ಮನ್ನೆಲ್ಲ ಬಿಟ್ಟು ಹೊರಟೋಯ್ತು" ಎನ್ನುತ್ತಾನೆ. "ಎಲ್ಲವೂ ಚೆನ್ನಾಗಿ ಇದೆ ಎಂದಾಗ ದೇವರು ಹೀಗೆ ಮಾಡಿದ. ಮಗು ಬಗ್ಗೆ ಎಷ್ಟು ಆಸೆ ಇಟ್ಟುಕೊಂಡಿದ್ವಿ" ಎಂದು ಗೌತಮ್ ಹೇಳುತ್ತಾರೆ."ಆಗ ಮಹಿಮಾಗೆ, ಈಗ ಮಲ್ಲಿಗೆ..." ಎಂದೆಲ್ಲ ದುಃಖಿಸುತ್ತಾರೆ. "ಆ ದೇವರೇ ಮಲ್ಲಿಯನ್ನು ಕಾಪಾಡಿರೋದು, ಇಷ್ಟಕ್ಕೆ ಮುಗಿಯಿತು ಎಂದು ಸಮಧಾನ ಮಾಡಿಕೊಳ್ಳಬೇಕು" ಎಂದು ಭೂಮಿಕಾ ಹೇಳುತ್ತಾಳೆ. ಒಟ್ಟಾರೆ ಎಲ್ಲರೂ ದುಃಖದಲ್ಲಿದ್ದಾರೆ.
ಪಾರ್ಥ ಕೂಡ ಇದೇ ವಿಚಾರವನ್ನು ಅಪೇಕ್ಷಾಗೆ ಹೇಳುತ್ತಾನೆ. "ಸೀಮಂತ ದಿನವೇ ಹೀಗೆ ಆಯ್ತ, ಮಗು ಕಳೆದುಕೊಂಡಿರುವ ಸುದ್ದಿಯನ್ನು ಹೇಗೆ ಸಹಿಸ್ತಾರೆ" ಎಂದು ಹೇಳುತ್ತಾಳೆ ಅಪೇಕ್ಷಾ.
ವಾರ್ಡ್‌ನಲ್ಲಿ ಮಲ್ಲಿ ಇದ್ದಾಳೆ. ಜೈದೇವ್ "ಮಲ್ಲಿ ಮಲ್ಲಿ" ಎಂದು ಕರೆಯುತ್ತಾನೆ. ಇದೇ ಸಮಯದಲ್ಲಿ ಜೈದೇವ್‌ಗೆ ದಿಯಾಳ ಕಾಲ್ ಬರುತ್ತದೆ. ಮಾಮ್ಸ್ ಕಾಲ್ ಎಂದು ಹೊರಗೆ ಬಂದು ಮಾತನಾಡುತ್ತಾನೆ. ಈ ಸಮಯದಲ್ಲಿ ದಿಯಾ "ಎಲ್ಲಾದರೂ ಮಲ್ಲಿ ನಮ್ಮನ್ನು ಕಾರಿನೊಳಗೆ ನೋಡಿರಬಹುದೇ?" ಎಂಬ ಅನುಮಾನ ವ್ಯಕ್ತಪಡಿಸುತ್ತಾಳೆ. ಇದನ್ನು ಕೇಳಿ ಜೈದೇವ್ ಮನಸ್ಸಲ್ಲೂ ಅದೇ ಸಂಶಯ ಮೂಡುತ್ತದೆ. ಸೀರಿಯಲ್ ಮುಂದುವರೆಯುತ್ತದೆ.