Amruthadhaare: ರೌಡಿಗಳ ಕೈಯಿಂದ ಮಲ್ಲಿಯನ್ನು ಬಚಾವ್‌ ಮಾಡಿದ್ಲು ಮಹಿಮಾ; ಡುಮ್ಮ ಸರ್‌ ಟೈಟಾದ್ರು, ಐ ಅಂದ್ರು, ಲವ್‌ ಯು ಹೇಳ್ತಾರ
ಕನ್ನಡ ಸುದ್ದಿ  /  ಮನರಂಜನೆ  /  Amruthadhaare: ರೌಡಿಗಳ ಕೈಯಿಂದ ಮಲ್ಲಿಯನ್ನು ಬಚಾವ್‌ ಮಾಡಿದ್ಲು ಮಹಿಮಾ; ಡುಮ್ಮ ಸರ್‌ ಟೈಟಾದ್ರು, ಐ ಅಂದ್ರು, ಲವ್‌ ಯು ಹೇಳ್ತಾರ

Amruthadhaare: ರೌಡಿಗಳ ಕೈಯಿಂದ ಮಲ್ಲಿಯನ್ನು ಬಚಾವ್‌ ಮಾಡಿದ್ಲು ಮಹಿಮಾ; ಡುಮ್ಮ ಸರ್‌ ಟೈಟಾದ್ರು, ಐ ಅಂದ್ರು, ಲವ್‌ ಯು ಹೇಳ್ತಾರ

Amruthadhaare Serial Yesterday Episode: ಅಮೃತಧಾರೆ ಧಾರಾವಾಹಿಯ ಶನಿವಾರದ ಸಂಚಿಕೆಯಲ್ಲಿ ಮಹಿಮಾಳ ನೆರವಿನಿಂದ ಮಲ್ಲಿ ರೌಡಿಗಳಿಂದ ಪಾರಾಗ್ತಾಳೆ. ಭೂಮಿಕಾಳಿಗೆ ಗೌತಮ್‌ ಸೋಮರಸದ ಅಮಲಿನಲ್ಲಿ ಐ ಲವ್‌ ಯು ಹೇಳುವ ಪ್ರಯತ್ನದಲ್ಲಿದ್ದಾರೆ.

Amruthadhaare: ರೌಡಿಗಳ ಕೈಯಿಂದ ಮಲ್ಲಿಯನ್ನು ಬಚಾವ್‌ ಮಾಡಿದ್ಲು ಮಹಿಮಾ
Amruthadhaare: ರೌಡಿಗಳ ಕೈಯಿಂದ ಮಲ್ಲಿಯನ್ನು ಬಚಾವ್‌ ಮಾಡಿದ್ಲು ಮಹಿಮಾ

ಝೀ ಕನ್ನಡ ವಾಹಿನಿಯ ಅಮೃತಧಾರೆಯ ಶನಿವಾರದ ಸಂಚಿಕೆಯಲ್ಲಿ ಹಲವು ವಿದ್ಯಮಾನಗಳು ನಡೆದಿವೆ. ವಿಶೇಷವಾಗಿ ರೌಡಿಗಳಿಂದ ಮಲ್ಲಿ ಸೇಫ್‌ ಆಗಿದ್ದಾಳೆ. ಸಕಾಲಕ್ಕೆ ಮಹಿಮಾ ಬಂದು ಕಾಪಾಡಿದ್ದಾಳೆ. ಈ ಮೂಲಕ ಶಕುಂತಲಾ, ಜೈದೇವ್‌ ಪ್ರಯತ್ನ ವಿಫಲವಾಗಿದ್ದಾಳೆ. ಬನ್ನಿ ಶನಿವಾರದ ಸಂಚಿಕೆಯ ಕಥೆ ತಿಳಿಯೋಣ. ಭೂಮಿಕಾ ಶಕುಂತಲಾದೇವಿಗೆ ಕರೆ ಮಾಡುತ್ತಾಳೆ. ಮಲ್ಲಿ ಎಲ್ಲಿ ಎಂದು ಕೇಳುತ್ತಾಳೆ. ನನಗೆ ಕಾಲ್‌ ಮಾಡಿದ್ಲು ತೊಂದರೆಯಲ್ಲಿದ್ದಾಳೆ ಎನ್ನುತ್ತಾಳೆ. "ನಾನು ಮನೆಗೆ ಕಾಲ್‌ ಮಾಡಿ ವಿಚಾರಿಸ್ತೇನೆ" ಎಂದು ಶಕುಂತಲಾದೇವಿ ಹೇಳುತ್ತಾರೆ.

ರೌಡಿಗಳಿಂದ ದೂರ ಓಡಿದ ಮಲ್ಲಿ

ಇನ್ನೊಂದೆಡೆ ಆತಂಕದಲ್ಲಿ ಮಲ್ಲಿ ಜೈದೇವ್‌ ಹೇಳಿದ್ದಲ್ಲಿಗೆ ಹೋಗುತ್ತಾಳೆ. ಜೈದೇವ್‌ ತಲೆಗೆ ಪೆಟ್ಟುಬಿದ್ದಂತೆ ಚೇರ್‌ನಲ್ಲಿ ಕುಳಿತುಕೊಂಡಿರುತ್ತಾನೆ. ನೀವು ಗಂಡ ಹೆಂಡತಿ ನಮ್ಮಲ್ಲಿ ಆಟ ಆಡ್ತಾ ಇದ್ದೀರಾ? ಎಂದು ರೌಡಿಗಳು ಹೇಳುತ್ತಾರೆ. ಈಕೆಯ ಕತ್ತು ಹಿಡಿಯುತ್ತಾರೆ. ಬೇರೆ ಫೈಲ್‌ ತಂದ್ರ ಎಂದು ಹೇಳುತ್ತಾನೆ ರೌಡಿ. ಆಕೆಯ ಹೊಟ್ಟೆಗೆ ಗುದ್ದಲು ಪ್ರಯತ್ನಿಸುತ್ತಾನೆ. ಈ ಮೂಲಕ ಆಕೆಯ ಹೊಟ್ಟೆಯ ಮಗುವಿಗೆ ಹಾನಿ ಮಾಡಲು ಯತ್ನಿಸುತ್ತಾನೆ. ನಾನು ಗರ್ಭಿಣಿ ಅಣ್ಣಾ ಎಂದರೂ ಆತ ಕೇಳುವುದಿಲ್ಲ. ಆಕೆಯ ಹೊಟ್ಟೆಗೆ ಹೊಡೆಯಲು ಯತ್ನಿಸಿದಾಗ ಆತನನ್ನು ದೂರ ತಳ್ಳಿ ಓಡುತ್ತಾಳೆ. ಎಲ್ಲರೂ ಆಕೆಯ ಹಿಂದೆ ಓಡುತ್ತಾರೆ.

ಶಕುಂತಲಾದೇವಿ ಜೈದೇವ್‌ಗೆ ಕಾಲ್‌ ಮಾಡುತ್ತಾಳೆ. ಇಲ್ಲಿಗೆ ಬಂದಿದ್ದಳು, ಈಗ ಓಡಿ ಹೋದ್ಲು, ಸಿಕ್ಕೇ ಸಿಗ್ತಾಳೆ ಎಂದು ಹೇಳುತ್ತಾನೆ. ಭೂಮಿಕಾ ಕಾಲ್‌ ಮಾಡಿದ್ಲು ಬೇಗ ಕೆಲಸ ಮುಗಿಸು ಎನ್ನುತ್ತಾಳೆ. ಮಲ್ಲಿ ರಸ್ತೆಯಲ್ಲಿ ಓಡುತ್ತಾ ಇರುತ್ತಾಳೆ. ರೌಡಿಗಳು ಹುಡುಕುತ್ತಾ ಇದ್ದಾರೆ. ಒಂದು ಕಡೆ ಮಲ್ಲಿ ಅಡಗುತ್ತಾಳೆ.

ಟೈಟಾದ್ರು ಡುಮ್ಮ ಸರ್‌

ಇನ್ನೊಂದೆಡೆ ಗೌತಮ್‌ ಸುರಪಾನದ ಅಮಲಿನಲ್ಲಿ ಐ ಲವ್‌ ಯು ಎಂದು ಹೇಳುವ ಪ್ರಯತ್ನದಲ್ಲಿದ್ದಾನೆ. ಐ ಯು ಎಂದೆಲ್ಲ ಹೇಳುತ್ತಾ ಇರುತ್ತಾರೆ. ಗೌತಮ್‌ಗೆ ಏನೋ ಮಿಕ್ಸ್‌ ಮಾಡಿ ನೀಡಿದ್ದಾನೆ ಎಂದು ಅಪರ್ಣಾ ಹೇಳುತ್ತಾಳೆ. ಸರಿ ಗೌತಮ್‌ ಒಳಗೆ ಹೋಗೋಣ ಎನ್ನುತ್ತಾರೆ ಭೂಮಿಕಾ. ಒಳಗೇ ಇದ್ದೀವಲ್ವ ಎಂದು ಟೈಟಾದ ರೀತಿ ಗೌತಮ್‌ ಇದ್ದಾರೆ. ಆನಂದ್‌ ಕೂಡ ಟೈಟಾಗಿ ಮರವನ್ನು ತಬ್ಬಿಕೊಂಡಿದ್ದಾನೆ.

ಮತ್ತೊಂದೆಡೆ ಶಕುಂತಲಾ ಮತ್ತು ಮಾವ ಖುಷಿಯಲ್ಲಿದ್ದಾರೆ. ಜೈದೇವ್‌ ಈಗಾಗಲೇ ಕೆಲಸ ಮುಗಿಸಿರ್ತಾನೆ ಎಂದು ಮಾತನಾಡುತ್ತ ಇರುತ್ತಾರೆ. ಈ ರೀತಿ ಇವರು ಮಾತನಾಡುವಾಗ ಅಲ್ಲಿ ಮಲ್ಲಿ ಕಾಣಿಸುತ್ತಾಳೆ. ಗಾಯಗೊಂಡ ಜೈದೇವ್‌ನ ಕರೆದುಕೊಂಡು ಬರುತ್ತಾಳೆ. ಆತ ಗಾಯಗೊಂಡಿದ್ದಾನೆ. ಈ ಮೂಲಕ ಮಲ್ಲಿಯ ಕಥೆ ಮುಗಿಸುವ ಕಾರ್ಯ ವಿಫಲವಾಗಿದೆ. ಆದರೆ , ಮಲ್ಲಿಯನ್ನು ಕಾಪಾಡಿದ್ದು ಯಾರು ಎಂಬ ಪ್ರಶ್ನೆ ಎಲ್ಲರಲ್ಲಿಯೂ ಮೂಡಿರಬಹುದು.

ಮಲ್ಲಿ ಸೇಫ್‌, ಜೈದೇವ್‌ ಪ್ಲಾನ್‌ ತೋಪು

ಏನಾಯ್ತು ಜೈದೇವ್‌ ಎಂದು ಶಕುಂತಲಾ ನಾಟಕೀಯವಾಗಿ ಕೇಳುತ್ತಾಳೆ. ಮಲ್ಲಿ ಎಲ್ಲಾ ಕಥೆ ಕೇಳುತ್ತಾಳೆ. ಸರಿಯಾದ ಸಮಯಕ್ಕೆ ಅವರು ಬಂದದ್ದು ಒಳ್ಳೆಯದಾಯ್ತು ಎನ್ನುತ್ತಾಳೆ. ಯಾರು ಬಂದಿದ್ದು ಎಂದು ಕೇಳಿದಾಗ ಅಲ್ಲಿಗೆ ಬಂದ ಮಹಿಮಾ "ನಾನೇ ಕರೆದುಕೊಂಡು ಬಂದದ್ದು" ಎಂದು ಹೇಳುತ್ತಾಳೆ. ಇವಳು ಹೇಗೆ ಅಲ್ಲಿಗೆ ಹೋದ್ಲು ಎಂದು ಇವರು ಯೋಚಿಸ್ತಾರೆ. ಮಲ್ಲಿ ರೌಡಿಗಳಿಂದ ತಪ್ಪಿಸಿಕೊಂಡು ಓಡಿ ಬರುತ್ತಿರುವಾಗ ಒಂದು ಪೊಲೀಸ್‌ ಜೀಪು ಸೈರನ್‌ ಮೊಳಗಿಸಿಕೊಂಡು ಬರುತ್ತದೆ. ಅದರಲ್ಲಿ ಪೊಲೀಸರು ಮತ್ತು ಮಹಿಮಾ ಇರುತ್ತಾರೆ. ಪೊಲೀಸರು ರೌಡಿಗಳನ್ನು ಹಿಡಿಯಲು ಓಡುತ್ತಾರೆ. ಅಣ್ಣಾ ಎಲ್ಲಿ ಎಂದು ಮಹಿಮಾ ಕೇಳಿದಾಗ ಅಲ್ಲಿಗೆ ಕರೆದುಕೊಂಡು ಹೋಗುತ್ತಾರೆ. "ರೀ ನಿಮಗೆ ಏನಾದ್ರೂ ಆಗಿದ್ರೆ ನಾನು ಬದುಕ್ತಾ ಇರಲಿಲ್ಲ" ಎಂದು ಮಲ್ಲಿ ಹೇಳುತ್ತಾಳೆ. ಈ ಮೂಲಕ ಇವರ ರಕ್ಷಣೆಯ ಕಥೆ ಶಕುಂತಲಾದೇವಿಗೆ ಗೊತ್ತಾಗುತ್ತದೆ. ಭೂಮಿಕಾ ಕಾಲ್‌ ಮಾಡಿದಾಗ ಮಹಿಮಾ ಎಲ್ಲರೂ ಸೇಫ್‌ ಎಂದು ಹೇಳುತ್ತಾಳೆ. ನೀನು ಯಾಕೆ ಇವಳನ್ನು ಒಬ್ಬಳನ್ನೇ ಆಚೆ ಕಲಿಸಿದೆ ಎಂದು ಶಕುಂತಲಾದೇವಿಗೆ ಮಹಿಮಾ ಕೇಳುತ್ತಾಳೆ. ಇವಳು ಹೊರಗೆ ಹೋದದ್ದು ನನಗೆ ಗೊತ್ತಿಲ್ಲ ಎಂದು ಶಕುಂತಲಾ ದೇವಿ ಹೇಳುತ್ತಾಳೆ. ಈ ಮೂಲಕ ಇವರ ಈ ಯೋಜನೆ ಪ್ಲಾಪ್‌ ಆಗಿದೆ.

 

ಡುಮ್ಮ ಸರ್‌ ಟೈಟಾದ್ರು, ಐ ಅಂದ್ರು, ಲವ್‌ ಯು ಹೇಳ್ತಾರ

ಗೌತಮ್‌ ಮತ್ತು ಭೂಮಿಕಾ ಚಿಕ್ಕಮಗಳೂರಿನಲ್ಲಿದ್ದಾರೆ. ಗೌತಮ್‌ ಭೂಮಿಕಾಳಿಗೆ ಐ ಲವ್‌ ಯು ಎಂದು ಹೇಳುವ ಪ್ರಯತ್ನದಲ್ಲಿದ್ದಾನೆ. ಆದರೆ, ಮದಿರೆಯ ಪ್ರಭಾವದಿಂದ ಸರಿಯಾಗಿ ಹೇಳಲಾಗುವುದಿಲ್ಲ. ಕೊಠಡಿಯೊಳಗೆ ಬಂದಾಗ ನೀವು ಎಲ್ಲಿ ಮಲಗ್ತೀರಿ ಎಂದು ಗೌತಮ್‌ ಕೇಳುತ್ತಾನೆ. ನಾನು ಇಲ್ಲಿ ಕೆಳಗೆ ಮಲಗ್ತಿನಿ ಎನ್ನುತ್ತಾಳೆ. ಏನು ನಿಮ್ಮ ಉದ್ದೇಶ ಎಂದು ಅಮಲಿನಲ್ಲಿ ಡುಮ್ಮ ಸರ್‌ ಕೇಳುತ್ತಾರೆ. "ಯಾಕೆ ಕೆಳಗೆ ಮಲಗ್ತೀರಿ. ನನ್ನ ಮುಟ್ಟಬಾರ್ದು ಅಂತನಾ. ಐಸ್‌ ಪೀಸಾ ನೀವು, ಮುಟ್ಟಿದರೆ ಕರಗಿ ಹೋಗ್ತೀರಾ?" ಎಂದೆಲ್ಲ ಕೇಳುತ್ತಾರೆ. ಮುಟ್ಟಬಾರದ ನಾನು ಎಂದು ಗೌತಮ್‌ ಕೇಳಿದಾಗ "ನಾನು ಹಾಗೇ ಹೇಳೇ ಇಲ್ವಲ್ಲ" ಎಂದು ನಾಚಿ ಹೇಳುತ್ತಾರೆ ಭೂಮಿಕಾ. ನಾನು ಇವತ್ತು ಮಾತನಾಡಬೇಕಿದೆ, ಮಾತನಾಡಲು ಬಿಡಿ ನನ್ನ ಎನ್ನುತ್ತಾನೆ. ನಿಮ್ಮ ಕೋಪ ಸೂಪರ್‌, ನಿಮ್ಮ ನಗು ಸೂಪರ್‌, ನಿಮಗೆ ಏನೋ ಹೇಳಬೇಕು ಅಂದುಕೊಂಡೆ.... ಐ... ಐ... ಎಂದು ಹೇಳುವಾಗ ಸೀರಿಯಲ್‌ ಮುಂದುವರೆಯುತ್ತದೆ.

ಮುಂದಿನ ಸಂಚಿಕೆಯಲ್ಲಿ ಡುಮ್ಮ ಸರ್‌ ಐ ಲವ್‌ ಯು ಹೇಳ್ತಾರ ನಿದ್ದೆಗೆ ಜಾರ್ತಾರ ಕಾದು ನೋಡಬೇಕಿದೆ.