Amruthadhaare: ಮಿಸ್ ಇಂಡಿಯಾಗೆ ಅಪ್ಪಿ ಒಪ್ಪಿದ್ಳು, ಪಾರ್ಥನ ಮದುವೆಗೆ ಶಕುಂತಲಾದೇವಿ ತಯಾರಿ, ಭೂಮಿಕಾಳ ಕಣ್ಣಲ್ಲಿ ಕಣ್ಣೀರಧಾರೆ
Amruthadhaare serial Yesterday Episode: ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಪಾರ್ಥನ ಮದುವೆಯ ಮಾತುಕತೆಗಳು ನಡೆದಿವೆ. ಶಕುಂತಲಾದೇವಿ ತನ್ನ ಯೋಜನೆಯಂತೆ ಮದುವೆಯ ಮಾತುಕತೆ ಆರಂಭಿಸಿದ್ದಾರೆ. ಗೌತಮ್ ಇದಕ್ಕೆ ಒಪ್ಪಿದ್ದಾನೆ. ಮಾತುಕೊಟ್ಟ ಭೂಮಿಕಾಳ ಕಣ್ಣಲ್ಲಿ ಕಣ್ಣೀರಧಾರೆ ಹರಿಯುತ್ತದೆ.

Amruthadhaare serial Story: ಗೌತಮ್ ಮತ್ತು ಭೂಮಿಕಾ ಮಾತನಾಡುತ್ತಿದ್ದಾರೆ. ಪಾರ್ಥ ಎಲ್ಲಿದ್ದಾನೆ ಗೊತ್ತ ಎನ್ನುತ್ತಾರೆ ಗೌತಮ್. ಎಲ್ಲೋ ಸೋಲೋ ಟ್ರಿಪ್ ಹೋಗಿದ್ದಾನೆ ಎನ್ನುತ್ತಾರೆ ಭೂಮಿಕಾ. ನಾನು ಅವನನ್ನು ಇವತ್ತು ನೋಡಿದೆ, ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಅವನನ್ನು ನೋಡಿ ನನಗೆ ರೋಮಾಂಚನ ಆಯ್ತು ಎಂದು ಗೌತಮ್ ಹೇಳಿದಾಗ ಭೂಮಿಕಾಳಿಗೆ ಅಚ್ಚರಿ. "ಅವನು ತನ್ನ ಸ್ಟುಡೆಂಟ್ ತಾಯಿಗೆ ಸಹಾಯ ಮಾಡಲು ರಸ್ತೆಯಲ್ಲಿ ಎಲ್ಲರಲ್ಲಿಯೂ ಹಣ ಕೇಳುತ್ತಿದ್ದ. ಮೊದಲು ನನಗೆ ನೋವಾಯ್ತು. ಅಮೇಲೆ ಖುಷಿಯಾಯ್ತು." ಎಂದು ಗೌತಮ್ ಹೇಳುತ್ತಾನೆ. "ಆದರೆ, ನಾನು ಅತ್ತೆಗೆ ಮಾತು ಕೊಟ್ಟಿದ್ದೇನೆ" ಎಂದು ಭೂಮಿಕಾ ಮನಸ್ಸಲ್ಲಿ ಆಲೋಚಿಸುತ್ತಾಳೆ.
ಮಂದಾಕಿನಿ ಮತ್ತು ಮಹಿಮಾ ಮಾತನಾಡುತ್ತಾರೆ. ಆಗ ಅಲ್ಲಿಗೆ ಅಪೇಕ್ಷಾ ಬರುತ್ತಾರೆ. "ನೀವು ಮಿಸ್ ಇಂಡಿಯಾಕ್ಕೆ ಯಾರನ್ನಾದರೂ ಸೆಲೆಕ್ಟ್ ಮಾಡಿದ್ದೀರಾ? ನಾನು ಅದಕ್ಕೆ ಸ್ಪರ್ಧಿಸಲು ರೆಡಿ ಇದ್ದೇನೆ" ಎನ್ನುತ್ತಾಳೆ. ಎಲ್ಲರೂ ಖುಷಿಯಾಗುತ್ತಾರೆ. ಸದಾಶಿವನಿಗೆ ಏನೋ ಅನುಮಾನ ಮೂಡುತ್ತದೆ. ಎಲ್ಲರೂ ಖುಷಿಯ ಮಾತುಗಳನ್ನಾಡುತ್ತಾರೆ. ಇವತ್ತೇ ಹೋಗಿ ಜಿಮ್‌ಗೆ ಹೋಗ್ತಿನಿ. ನೀವು ಹೇಳಿದ್ದನ್ನು ಫಾಲೋ ಮಾಡ್ತಿನಿ ಎಂದು ಮಹಿಮಾಗೆ ಹೇಳುತ್ತಾಳೆ. "ನಾವು ಲೈಫ್‌ನಲ್ಲಿ ಏನಾದರೂ ಅಚೀವ್ ಮಾಡಿದ್ರೆ ಅಲ್ವ ಪ್ರಪಂಚ ನಮ್ಮ ಕಡೆಗೆ ನೋಡೋದು. ಈ ಸ್ಪರ್ಧೆಯಲ್ಲಿ ಗೆದ್ದೆ ಗೆಲ್ತಿನಿ" ಎನ್ನುತ್ತಾಳೆ ಅಪೇಕ್ಷಾ.
ಪಾರ್ಥನ ಮದುವೆ ಮಾತು ಆರಂಭ
ಗೌತಮ್ ಕೆಲಸ ಮಾಡುತ್ತಿರುವಾಗಲೇ ಭೂಮಿಕಾ ಮಲಗಿದ್ದಾರೆ. "ಪಾರ್ಥನಿಗೆ ಒಂದು ಮದುವೆ ಮಾಡೋಣ. ನಿಮ್ಮ ಒಪಿನಿಯನ್ ಏನು?" ಎಂದು ಕೇಳುತ್ತಾರೆ. ಆದರೆ, ಭೂಮಿಕಾಳಿಗೆ ಏನು ಹೇಳಬೇಕೆಂದು ಗೊತ್ತಾಗೋದಿಲ್ಲ. ಅತ್ತೆಗೆ ಮಾತುಕೊಟ್ಟಿರುವುದರಿಂದ ಅವರ ಬಾಯಿ ಕಟ್ಟಿದೆ. "ಪಾರ್ಥ ಲವ್ ಮಾಡಿರೋಲ್ಲ ಅಲ್ವ. ಹಾಗಿದ್ರೆ ನನ್ನಲ್ಲಿ ಹೇಳ್ತಾ ಇದ್ದ" ಎನ್ನುತ್ತಾರೆ ಗೌತಮ್. ಭೂಮಿಕಾಳ ಕಣ್ಣಲ್ಲಿ ಕಣ್ಣೀರಧಾರೆ.
ಇದನ್ನು ಓದಿ: ಅಮೃತಧಾರೆ ಧಾರಾವಾಹಿಯ ಎಲ್ಲಾ ಸಂಚಿಕೆಗಳು
ವಿರೋಧ ಪಕ್ಷದವರ ಜತೆ ಸೇರಿಕೊಂಡು ಸರಕಾರ ರಚಿಸಿದಂತೆ ಆಯ್ತು ಎಂದು ಮನೆಹಾಳ ಮಾವ ಹೇಳುತ್ತಾಳೆ. ಅವಳ ಭಾಷೆಯಲ್ಲಿಯೇ ಅವಳಿಂದ ಮಾತು ತೆಗೆದುಕೊಂಡೆ ಎಂದು ಶಕುಂತಲಾ ಹೇಳುತ್ತಾರೆ. ಫೀಲಿಂಗ್ಸ್, ಎಮೋಷನ್ ಮೂಲಕ ಆಕೆಯನ್ನು ಸೋಲಿಸಿಬಿಟ್ಟೆ. ಇನ್ಮುಂದೆ ಅದೇ ಭಾಷೆ ಬಳಸುವುದು ಎಂದು ಹೇಳುತ್ತಾರೆ. ಅವಳು ಕೊಟ್ಟಮಾತು ತಪ್ಪಿದರೆ ಏನು ಮಾಡ್ತಿಯಾ ಎಂದು ಕೇಳುತ್ತಾರೆ ಸಹೋದರ. "ಅವಳು ಮೇಸ್ಟ್ರು ಮಗಳು, ಅವಳು ಎಥಿಕ್ಸ್ ಮೀರೋಲ್ಲ" ಎನ್ನುತ್ತಾರೆ ಶಕುಂತಲಾ. "ಪಾರ್ಥನಿಗೆ ಒಂದು ಹುಡುಗಿ ನೋಡಿ ಮದುವೆ ಮಾಡಿ ಮುಗಿಸೋದು ನನ್ನ ಮುಂದಿನ ಕೆಲಸ" ಎಂದು ಹೇಳುತ್ತಾಳೆ.
ಮಕ್ಕಳು ಆಟವಾಡ್ತಾ ಇದ್ದಾರೆ. ಎಕ್ಸಾಂ ಇದೆ. ಓದೋಣ ಬನ್ನಿ. ಆಟದ ಜತೆಗೆ ಪಾಠನೂ ಇರಬೇಕು ಎಂದು ವಿದ್ಯಾರ್ಥಿಯೊಬ್ಬ ಮನವೋಲಿಸಲು ಬರುತ್ತಾರೆ. ಒಬ್ಬನಿಗೆ ಬುದ್ಧಿ ಬಂದಿದೆ. ನಾಳೆ ಅವರಿಗೆ ಬುದ್ದಿ ಬರಬಹುದು ಎಂದುಕೊಳ್ಳುತ್ತಾನೆ. ಒಂದಿಷ್ಟು ಹೊತ್ತು ಪಾಠ ಮಾಡಿದಾಗ ಇನ್ನೂ ಇಬ್ಬರು ವಿದ್ಯಾರ್ಥಿನಿಯರು ಬರುತ್ತಾರೆ.
ಮಂಗಳ ಕಾರ್ಯದ ಮಾತುಕತೆ
ಶಕುಂತಲಾದೇವಿ ಮನೆಯವರ ಜತೆ ಮೀಟಿಂಗ್ ಮಾಡ್ತಾರೆ. ಮನೆಯಲ್ಲಿ ಮಂಗಳ ಕಾರ್ಯ ನಡೆದು ತುಂಬಾ ದಿನ ಆಯ್ತು ಎನ್ನುತ್ತಾಳೆ. "ನನ್ನ ಮನಸ್ಸಲ್ಲಿ ಒಂದು ಆಸೆ ಇದೆ. ಎಲ್ಲರ ಮದುವೆ ಆಗಿದೆ. ಉಳಿದದ್ದು ಪಾರ್ಥನದ್ದು. ಅವನ ಮದುವೆ ನಡೆದ್ರೆ ನನ್ನ ಜವಾಬ್ದಾರಿ ಕಡಿಮೆಯಾಗುತ್ತದೆ. ನಿಮ್ಮೆಲ್ಲರ ಅಭಿಪ್ರಾಯ ಏನು" ಎಂದು ಕೇಳುತ್ತಾಳೆ. "ನನಗಂತೂ ಬಹಳ ಖುಷಿಯಾಯ್ತು" ಎಂದು ಗೌತಮ್ ಹೇಳುತ್ತಾರೆ. "ಅವನಿಗೆ ಸಿಕ್ಕಾಪಟ್ಟೆ ಜವಾಬ್ದಾರಿ ಇದೆ. ಅವನಿಗೆ ಮದುವೆ ಮಾಡಲು ಇದು ಕರೆಕ್ಟ್ ಟೈಂ. ಭೂಮಿಕಾ ಏನು ಅಭಿಪ್ರಾಯ" ಎಂದು ಕೇಳುತ್ತಾರೆ ಗೌತಮ್. ಆದಷ್ಟು ಬೇಗ ಅವನಿಗೆ ಒಂದು ಹುಡುಗಿ ಹುಡುಕೋಣ ಎಂದು ಹೇಳುತ್ತಾರೆ. ತಂದೆಯ ಸ್ಥಾನದಲ್ಲಿ ನಿಂತು ಈ ಮದುವೆ ಮಾಡಿಸ್ತಿನಿ ಎನ್ನುತ್ತಾರೆ.
ಮಹಿಮಾ ಮತ್ತು ಜೀವನ್ ಮಾತನಾಡುತ್ತಾರೆ. ಇಬ್ಬರೂ ಅಪ್ಪಿ ಒಪ್ಪಿಕೊಂಡಿರುವುದು ಇಬ್ಬರಿಗೂ ಖುಷಿಯಾಗಿದೆ. ಇನ್ನೊಂದೆಡೆ ಜೀವನ್ ಮ್ಯಾಟ್ರಿಮೋನಿಯಲ್ಲಿ ಹುಡುಗಿ ಹುಡುಕೋಣ ಎಂದು ಗೌತಮ್ ಹೇಳುತ್ತಾನೆ. ಮುಂದಿನ ದಿನಗಳಲ್ಲಿ ಏನಾದರೂ ತೊಂದರೆ ಉಂಟಾದರೆ ನಮ್ಮ ಸಂಬಂಧಗಳು ಹಾಳಾಗುವುದು ಬೇಡ ಎಂದು ಭೂಮಿಕಾ ಹೇಳುತ್ತಾಳೆ. ಇದಕ್ಕೆ ಗೌತಮ್ ಒಪ್ಪುತ್ತಾನೆ. ಗೌತಮ್ ಹೊರಕ್ಕೆ ಹೋದ ಬಳಿಕ ಭೂಮಿಕಾಳ ಮನಸ್ಸಲ್ಲಿ ದುಃಖ ಭೋರ್ಗರೆಯುತ್ತದೆ. ಸೀರಿಯಲ್ ಮುಂದುವರೆಯುತ್ತದೆ.
ಅಮೃತಧಾರೆ ಸೀರಿಯಲ್ ಪಾತ್ರವರ್ಗ
ಛಾಯಾ ಸಿಂಗ್: ಭೂಮಿಕಾ (ನಾಯಕಿ)
ರಾಜೇಶ್ ನಟರಂಗ್: ಗೌತಮ್ ದಿವಾನ್ (ನಾಯಕ)
ವನಿತಾ ವಾಸು: ಶಕುಂತಳಾ (ಗೌತಮ್ ಮಲತಾಯಿ)
ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್ ತಂದೆ)
ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)
ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)
ಸಾರಾ ಅಣ್ಣಯ್ಯ : ಮಹಿಮಾ (ಗೌತಮ್ ತಂಗಿ, ಶಂಕುತಳಾ ಮಗಳು, ಜೀವನ್ ಹೆಂಡತಿ)
ಶಶಿ ಹೆಗ್ಗಡೆ: ಜೀವನ್ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)
ರಣವ್: ಜೈದೇವ್
ಚಂದನ್: ಅಶ್ವಿನಿ
ಸ್ವಾತಿ: ಅಪರ್ಣಾ (ಆನಂದ್ ಹೆಂಡತಿ)
ಆನಂದ್: ಆನಂದ್ (ಗೌತಮ್ ಸ್ನೇಹಿತ, ಅಪರ್ಣಾ ಗಂಡ)

ವಿಭಾಗ